Tag: ಕೆಜಿಎಫ್

  • ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್!

    ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ- ಯಶ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ಹಿಂದೆ ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಕೆಜಿಎಫ್ ಡೈಲಾಗ್ ಹೊಡೆದಿದ್ದರು.

    ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಡೈಲಾಗ್ ಮತ್ತೆ ಹವಾ ಕ್ರಿಯೆಟ್ ಮಾಡೋಕೆ ರೆಡಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ `ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ’ ಎಂದು ಯಶ್ ಕೆಜಿಎಫ್ ಸಿನಿಮಾದ ಡೈಲಾಗ್ ಸ್ಯಾಂಪಲ್ ಕೊಟ್ಟಿದ್ದರು.

    ಈ ಡೈಲಾಗ್ ಕೇಳಿದ ರಾಕಿಂಗ್ ಅಭಿಮಾನಿಗಳು ಕೆಜಿಎಫ್ ಬರಿ ರೌಡಿಸಂ ಕಥೆಯಲ್ಲ ಇದರಲ್ಲಿ ಲವ್ ಸ್ಟೋರಿ ಕೂಡ ಇದೇ ಎಂದು ಥ್ರಿಲ್ ಆಗಿದ್ದರು. ಇದರ ಜೊತೆ ರಿವೀಲ್ ಆದ ಕೆಜಿಎಫ್ ಸಿನಿಮಾದ ಮೇಕಿಂಗ್ ವಿಡಿಯೋ, ಟೀಸರ್, ಯಶ್ ಕಿಲ್ಲಿಂಗ್ ಲುಕ್ ಚಿತ್ರದ ಬಗ್ಗೆ ಸಖತ್ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗ ಅಭಿಮಾನಿಗಳ ಒತ್ತಾಯಕ್ಕೆ ಯಶ್ ಕೆಜಿಎಫ್ ಸಿನಿಮಾದ ಮತ್ತೊಂದು ಡೈಲಾಗ್ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ಯಶ್ ಕರಾವಳಿಯ ಕಡಲ ಕಿನಾರೆಗೆ ಭೇಟಿ ಕೊಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಶ್ ನೋಡಿದ ತಕ್ಷಣ ಅಭಿಮಾನಿಗಳು ಒಂದು ಡೈಲಾಗ್ ಹೇಳು ಅಣ್‍ತಮ್ಮ ಎಂದು ಕೂಗಿದ್ದರು. ಎರಡ್ಮೂರು ಡೈಲಾಗ್ ಕೇಳಿದ್ದರೂ ತೃಪ್ತಿ ಪಡದ ಅಭಿಮಾನಿಗಳು ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದರು.

    ಆಗ ಯಶ್ `ರಕ್ತದ ವಾಸನೇ ಕಂಡ್ರೆ ಒಟ್ಟಿಗೆ ಬರ್ತಾವೆ ಪಿರಾನ ಮೀನುಗಳು. ಆದ್ರೆ ಆ ಮೀನುಗಳಿಗೆ ಗೊತ್ತಿಲ್ಲಾ ಆ ರಕ್ತ ನಮ್ಮನ್ನ ಬೇಟೆ ಆಡೋಕೆ ಬಂದಿರೋ ತಿಮಿಂಗಲದ್ದು ಅಂತ’ ಎಂದು ಕೆಜಿಎಫ್ ಡೈಲಾಗ್ ಹೇಳಿದ್ದಾರೆ. ಇನ್ನೂ ಕೆಜಿಎಫ್‍ನ ಎಕ್ಸ್ ಕ್ಲೂಸಿವ್ ಡೈಲಾಗ್ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

  • ತಮಿಳುನಾಡಿನಲ್ಲೂ ಮೋಡಿ ಮಾಡಿತು ಕೆಜಿಎಫ್ ಟೀಸರ್!

    ತಮಿಳುನಾಡಿನಲ್ಲೂ ಮೋಡಿ ಮಾಡಿತು ಕೆಜಿಎಫ್ ಟೀಸರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್‍ನ ಚಿಕ್ಕದೊಂದು ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಬರೀ ಕರ್ನಾಟಕದಲ್ಲದೇ ತಮಿಳುನಾಡಿನಾದ್ಯಂತ ಸುದ್ದಿಯಾಗಿದ್ದು ಅಲ್ಲೂ ಚಿತ್ರಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆಜಿಎಫ್ ಕರ್ನಾಟಕನಲ್ಲಿ ತಲ್ಲಣ ಎಬ್ಬಿಸೋದು ಸಾಮಾನ್ಯ. ಆದರೆ ಹೊರರಾಜ್ಯದಲ್ಲೂ ಸಂಭ್ರಮಿಸುವಂತೆ ಮಾಡುತ್ತೆ ಎಂದರೆ ಅದೆಷ್ಟು ನಿರೀಕ್ಷೆ ಹುಟ್ಟಿಸಿರಬಹುದು. ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ರಾರಾಜಿಸೋದು ನೋಡಿದ್ದೇವೆ. ಆದರೆ ಪಕ್ಕದ ರಾಜ್ಯದಲ್ಲಿ ಅದೂ ಟೀಸರ್ ಒಂದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗೋದನ್ನು ನೋಡುವ ಭಾಗ್ಯ ಕನ್ನಡಿಗರದ್ದಾಗಿದೆ.

    ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದನ್ನು ಇಷ್ಟರ ಮಟ್ಟಿಗೆ ಪ್ರೀತಿಸುತ್ತಿರುವುದು ಉತ್ತಮ ಬೆಳವಣಿಗೆ. ಕೆಜಿಎಫ್ ತಮಿಳಿನಲ್ಲೂ ರಿಲೀಸ್ ಆಗುತ್ತಿರೋದರಿಂದ ಚಿತ್ರದ ಮೇಲೆ ಕಾಲಿವುಡ್ ಚಿತ್ರಪ್ರೇಮಿಗಳು ಆರಾಮಾಗಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಒಂದ್ ಸಿನಿಮಾ ರಿಲೀಸ್ ಆದಮೇಲೆ ಹೊರರಾಜ್ಯದಲ್ಲೂ ಸಂಭ್ರಮಿಸೋದನ್ನು ನೋಡಿದ್ದೀವಿ. ಆದರೆ ಟೀಸರ್‍ಗೆ ಕ್ಲೀನ್ ಬೋಲ್ಡ್ ಆಗಿದ್ದು ಹೊಸದು.

    70, 80 ರ ದಶಕವನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಸುವರ್ಣಯುಗ ಎಂದು ಕರೆಯಲಾಗುತ್ತಿತ್ತು. ಆ ಕಾಲ ಮತ್ತೆ ಮರುಕಳಿಸುತ್ತಾ ಎನ್ನುವ ಸೂಚನೆ ಈ ವರ್ಷ ಸೂಚಿಸುತ್ತಿದೆ. ಕೆಜಿಎಫ್ ಚಿತ್ರವೊಂದೇ ಅಲ್ಲದೆ ಕುರುಕ್ಷೇತ್ರ, ದಿ ವಿಲನ್ ಚಿತ್ರಗಳೂ ಪರಭಾಷಿಗರನ್ನು ಸ್ಯಾಂಡಲ್‍ವುಡ್ ನತ್ತ ಆಕರ್ಷಿಸುತ್ತಿದೆ.

  • 17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ನೆನಪಿನಲ್ಲಿ ಉಳಿಯೋದು ಇಬ್ಬರೇ- ‘ಕೆಜಿಎಫ್’ ಟೀಸರ್‍ನಿಂದ ‘ರಾಮಾಚಾರಿ’ ಮತ್ತೆ ಕಿಂಗ್!

    17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ನೆನಪಿನಲ್ಲಿ ಉಳಿಯೋದು ಇಬ್ಬರೇ- ‘ಕೆಜಿಎಫ್’ ಟೀಸರ್‍ನಿಂದ ‘ರಾಮಾಚಾರಿ’ ಮತ್ತೆ ಕಿಂಗ್!

    ಬೆಂಗಳೂರು: ಕಳೆದ ಒಂದು ವರ್ಷದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಉಡುಗೊರೆ ಭರ್ಜರಿಯಾಗಿ ಸಿಕ್ಕಿದೆ. ಒಂದು ಕಡೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮವಾದರೆ, ಇನ್ನೊಂದು ಕಡೆ ಕೆಜಿಎಫ್ ಟೀಸರ್ ಬಿಡುಗಡೆಯಾಗಿದೆ. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ನೋಡಬಹದು.

    ಯಶ್ ವ್ರತ್ತಿ ಬದುಕಿನಲ್ಲಿ ಕೆಜಿಎಫ್ ಇನ್ನೊಂದು ಮೈಲುಗಲ್ಲಾಗುವುದಲ್ಲಿ ಅನುಮಾನವೇ ಇಲ್ಲ. ಟೀಸರ್‍ನ ಪ್ರತಿ ದೃಶ್ಯ ಇದಕ್ಕೆ ಸಾಕ್ಷಿಯಾಗುತ್ತದೆ. ಸಂಗೀತ, ಕ್ಯಾಮೆರಾ ಕೆಲಸ, ಅದ್ಧೂರಿ ಸೆಟ್, ಲೋಕೇಶನ್ ಹೀಗೆ ಪ್ರತಿಯೊಂದನ್ನು ಅಳೆದು ತೂಗಿ ಎಲ್ಲಾ ಪಕ್ಕಾ ಮಾಡಿಕೊಂಡೇ ನಿರ್ದೇಶಕ ಪ್ರಶಾಂತ್ ನೀಲ್ ಅಖಾಡಕ್ಕೆ ಇಳಿದಿದ್ದಾರೆ. ಇಲ್ಲಿವೆರೆಗೆ ಯಶ್ ಮಾಡದ ಪಾತ್ರವನ್ನು ಕೊಟ್ಟು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಬರೀ ಯಶ್ ಸಿನಿ ಜರ್ನಿಗೆ ಮಾತ್ರ ಅಲ್ಲ, ಕನ್ನಡ ಚಿತ್ರರಂಗದಲ್ಲಿಯೇ ಇದು ನಯಾ ಯುಗ ಆರಂಭಿಸಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

    ಯಶ್ ಇಂದು 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆರಾಧ್ಯದೈವದ ಹುಟ್ಟುಹಬ್ಬವನ್ನು ಆಚರಿಸಲು ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಮುಂದೆ ಜಮಾಯಿಸಿದ್ದರು. ದಾರಿ ಉದ್ದಕ್ಕೂ ಯಶ್‍ಗೆ ಶುಭಾಶಯ ಕೋರುವ ಕಟೌಟ್‍ಗಳು ರಾರಾಜಿಸುತ್ತಿವೆ. ಯಶ್ ಮನೆ ಸಂಪೂರ್ಣವಾಗಿ ಕಲರ್ ಕಲರ್ ಲೈಟ್‍ಗಳಿಂದ ಜಗಮಗಿಸುತ್ತಿದೆ. ಪೊಲೀಸ್ ಬಂದೋಬಸ್ತ್‍ನಲ್ಲಿ ಅಭಿಮಾನಿಗಳು ಯಶ್ ಕೈ ಕುಲುಕಿ ಸಂಭ್ರಮಪಟ್ಟಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ.

    ಇದೇ ಸಮಯದಲ್ಲಿ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಕೆಜಿಎಫ್ ಟೀಸರ್ ರಿಲೀಸ್ ಮಾಡಲಾಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈ ಸಿನಿಮಾದ ಎರಡು ಭಾಗ ಮೂರು ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ದೊಡ್ಡ ಕ್ಯಾನ್ವಾಸ್‍ನ ಕಥೆ ಬೇರೆ ಇದೆ. ಈ ಸಿನಿಮಾಕ್ಕೆ ಚಿನ್ನದ ಗಣಿ ಸೆಟ್ ಕೂಡ ಹಾಕಲಾಗಿದೆ. ಇದೆಲ್ಲಾ ಸೇರಿಕೊಂಡು ಇಷ್ಟು ತಡವಾಗಿದೆ. ಇನ್ನೇನು ಕೆಲವು ತಿಂಗಳಲ್ಲಿ ಕೆಜಿಎಫ್ ನಿಮ್ಮ ಮುಂದೆ ಹಾಜರಾಗಲಿದೆ.

    ರಾಕಿಂಗ್ ಸ್ಟಾರ್ ಯಶ್ ಇಂದು ಕೇವಲ ನಟನಾಗಿ ಮಾತ್ರ ಹೆಸರು ಮಾಡಿಲ್ಲ. ಯಶೋಮಾರ್ಗದ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಅದರಿಂದ ಸಾವಿರಾರು ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದರಲ್ಲೂ ರೈತರಿಗೆ ನೀರು ಕೊಡಿಸುವ ಪ್ರಯತ್ನಕ್ಕೆ ಹೊರಟಿದ್ದಾರೆ. ಇಂತಹ ಕನ್ನಡದ ಹುಡುಗ ಸದಾ ಇದೇ ರೀತಿ ಸಿನಿಮಾಗಳನ್ನು ಮಾಡುತ್ತಾ, ಜನರನ್ನು ರಂಜಿಸಲಿ ಎಂಬದು ಪಬ್ಲಿಕ್ ಟಿವಿಯ ಆಶಯವಾಗಿದೆ.

  • ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್‍ಗೆ ಬರ್ತ್ ಡೇ ಸಂಭ್ರಮ- ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ KGF ಟೀಸರ್ ರಿಲೀಸ್

    ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್‍ಗೆ ಬರ್ತ್ ಡೇ ಸಂಭ್ರಮ- ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ KGF ಟೀಸರ್ ರಿಲೀಸ್

    ಬೆಂಗಳೂರು: ಅಭಿಮಾನಿಗಳ ಮೊಗ್ಗಿನ ಮನಸ್ಸಿನ ಪ್ರೀತಿಯ ನಾಯಕ. ಉತ್ತಮ ಕೆಲಸ ಮಾಡುವ ಸಮಾಜ ಸೇವಕ. ಕಷ್ಟಪಟ್ಟು ಇಂಡಸ್ಟ್ರೀಯಲ್ಲಿ ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಸಿನಿ ಪ್ರೇಕ್ಷಕರ ಆರಾಧಕ, ರಾಕಿಂಗ್ ಸ್ಟಾರ್ ಯಶ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    ಗಾಂಧಿನಗರದ ಪಾಲಿನ ಲಕ್ಕಿ ಸ್ಟಾರ್. ಅಭಿಮಾನಿಗಳ ಪಾಲಿನ ಪ್ರೀತಿಯ ರಾಕಿಂಗ್ ಸ್ಟಾರ್. ಯಶೋಮಾರ್ಗದ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ಯಶಸ್ಸನ್ನುಗಳಿಸಿಕೊಂಡ ಜನಸೇವಕ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    ಯಶ್ ಹುಟ್ಟುಹಬ್ಬಕ್ಕೆ ನೆಚ್ಚಿನ ನಟನ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳು ಏನು ಕಮ್ಮಿ ಇರಲಿಲ್ಲ. ಈ ದಿನಕ್ಕೋಸ್ಕರ ಕಾದು ಕುಳಿತಿದ್ದ ಯಶ್ ಫ್ಯಾನ್ಸ್. ಭಾನುವಾರ ಸಂಜೆಯಿಂದಲ್ಲೇ ಕತ್ರಿಗುಪ್ಪೆ ನಿವಾಸದ ಬಳಿ ಜಮಾಯಿಸಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ಯಶ್‍ರನ್ನು ನೋಡಿ ಪ್ರೀತಿಯಿಂದ ವಿಶ್ ಮಾಡಿ, ಕೇಕ್ ಕತ್ತರಿಸಿ ಖುಷಿಪಟ್ಟರು.

    ಅಭಿಮಾನಿಗಳ ಅಭಿಮಾನದ ಜಾತ್ರೆ ನಡುವೆ, ಪ್ರೀತಿಯಿಂದ ಅಭಿಮಾನಿಗಳು ತಂದಿದ್ದ ಕೇಕ್‍ನ್ನು ಯಶ್ ಕಟ್ ಮಾಡಿದ್ದರು. ಅಷ್ಟೇ ಅಲ್ಲ ಸೆಲ್ಫಿಗೂ ಫೋಸ್ ಕೊಟ್ಟರು. ಸದ್ಯ ಪೋಸ್ಟರ್ ಮತ್ತು ಫೋಟೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಕೆ.ಜಿ.ಎಫ್ ಸಿನಿಮಾ ಬಿಡುಗಡೆಯನ್ನ ಯಶ್ ಎದುರು ನೋಡುತ್ತಿದ್ದಾರೆ.

    ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಯಶ್ ಗೆ ಬರ್ತ್ ಡೇ ಗಿಫ್ಟ್ ಆಗಿ ಕೆಜಿಎಫ್ ಟೀಂ ಟೀಸರ್ ರೀಲಿಸ್ ಮಾಡಿದೆ. ಗಡ್ಡ ಬಿಟ್ಟು ಖೈದಿಯ ಲುಕ್ ನಲ್ಲಿ ಯಶ್ ಕಮಾಲ್ ಮಾಡುತ್ತಿದ್ದಾರೆ. ಅದೇನೆ ಇದ್ದರೂ ಹುಟ್ಟುಹಬ್ಬದ ಖುಷಿಯಲ್ಲಿರುವ ಯಶ್ ಮತ್ತು ಯಶ್ ಫ್ಯಾನ್ಸ್ ಮುಖದಲ್ಲಿನ ಮಂದಹಾಸ, ಸದಾ ಕಾಲ ಹೀಗೆ ಇರಲಿ ಎನ್ನುವುದು ಎಲ್ಲರ ಆಶಯ.

  • ಬೆಳಕು ಇಂಪ್ಯಾಕ್ಟ್: ಬಯಲು ಶೌಚಾಲಯ ಪದ್ಧತಿಗೆ ಬಿತ್ತು ಬ್ರೇಕ್

    ಬೆಳಕು ಇಂಪ್ಯಾಕ್ಟ್: ಬಯಲು ಶೌಚಾಲಯ ಪದ್ಧತಿಗೆ ಬಿತ್ತು ಬ್ರೇಕ್

    ಕೋಲಾರ: ಜಿಲ್ಲೆಯ ಕೆಜಿಎಫ್ ನಗರ ಸಭೆ ವ್ಯಾಪ್ತಿಗೆ ಬರುವ ಬಿಜಿಎಂಎಲ್ ಕಾರ್ಮಿಕ ಕುಟುಂಬಗಳು ಬೆಳಗಾಗುವ ಮುನ್ನ ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿಕೊಳ್ಳಬೇಕಾದ್ರೆ ಮುಜುಗರದಿಂದಲೇ ತಂಬಿಗೆ ಹಿಡಿದುಕೊಂಡು ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ಪೊದೆ ಹಾಗೂ ಗುಡ್ಡಗಳನ್ನ ಅವಲಂಬಿಸಿ ಕತ್ತಲು ಕವಿಯುವವರೆಗೂ ಕಾದು ನಿತ್ಯ ಕರ್ಮಗಳನ್ನು ಮಾಡುತ್ತಿದ್ದರು. ಆದರೆ ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ನಗರಸಭೆಯಾಗಲಿ ಯಾರು ತಲೆಕೆಡಿಸಿಕೊಂಡಿರಲಿಲ್ಲ.

    ಇಲ್ಲಿನ ಸ್ಥಳೀಯರು ‘ನಮ್ಮನ್ನು ಬಯಲು ಬಹಿರ್ದೆಸೆ ಮುಕ್ತರನ್ನಾಗಿಸಿ’ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳಕು ಕಾರ್ಯಕ್ರಮದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಈಗ ಸಾವಿರಾರು ಶೌಚಾಲಯಗಳನ್ನ ನಗರದಲ್ಲಿ ನಿರ್ಮಾಣ ಮಾಡಿ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಅಷ್ಟೇ ಅಲ್ಲ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಹಾಳಾಗಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ಎಚ್ಚೆತ್ತ ಜಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಗರಸಭೆ ಸಾರ್ವಜನಿಕ ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಸದ್ಯ ಕೋಲಾರ ಜಿಲ್ಲೆ ಶೇ.100 ರಷ್ಟು ಬಯಲು ಶೌಚಾಲಯ ಮುಕ್ತವಾಗಿದೆ. ಅದಕ್ಕೆ ಸ್ಥಳೀಯರು ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

    ಒಟ್ಟಿನಲ್ಲಿ ಕೆಜಿಎಫ್ ನಗರದ ಅರ್ಧದಷ್ಟು ಜನರು ನಿತ್ಯ ಕರ್ಮಕ್ಕಾಗಿ ವಿಧಿ ಇಲ್ಲದೆ ಬಯಲು ಶೌಚಾಲಯವನ್ನೆ ಅವಲಂಭಿಸಿದ್ದ ಪದ್ದತಿಗೆ ಬ್ರೇಕ್ ಬಿದ್ದಿದೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿರೋದು ಇಲ್ಲಿನ ನಿವಾಸಿಗಳಿಗೆ ಸಂತಸ ತಂದಿದೆ.

  • ಮೊದಲ ಬಾರಿಗೆ ಡಬಲ್ ರೋಲ್ ನಲ್ಲಿ ಮಿಂಚಲಿದ್ದಾರಾ ರಾಕಿಂಗ್ ಸ್ಟಾರ್?

    ಮೊದಲ ಬಾರಿಗೆ ಡಬಲ್ ರೋಲ್ ನಲ್ಲಿ ಮಿಂಚಲಿದ್ದಾರಾ ರಾಕಿಂಗ್ ಸ್ಟಾರ್?

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಕೆಜಿಎಫ್ ಚಿತ್ರ ಭಾರಿ ಕೂತುಹಲ ಮೂಡಿಸಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದರೆ ಈಗ ಈ ಚಿತ್ರದಲ್ಲಿ ಯಶ್ ಡಬಲ್ ರೋಲ್‍ ನಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.

    ಇದು ಕೋಲಾರದ ಗಣಿ ಮಾಫಿಯಾದ ಸುತ್ತ ಹೆಣೆದ ಕಥೆ. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ನಡೆದ ಸತ್ಯ ಘಟನೆಗಳನ್ನು ಇಟ್ಟುಕೊಂಡು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದಕ್ಕಾಗಿ ಯಶ್ ಮುಖದ ತುಂಬಾ ದಟ್ಟವಾದ ದಾಡಿ ಬಿಟ್ಟು, ಉದ್ದುದ್ದ ಕೂದಲನ್ನು ಜೋಪಾನ ಮಾಡಿದ ಸ್ಟಿಲ್ ಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಕಥೆಯಾಗಲಿ ಅಥವಾ ಯಶ್ ಪಾತ್ರದ ಡಿಟೇಲ್ಸ್ ಆಗಲಿ ಹೊರಬಿದ್ದಿಲ್ಲ.

    ಈ ಚಿತ್ರದಲ್ಲಿ ಯಶ್ ಎರಡು ವಿಭಿನ್ನ ಶೇಡ್ ಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಕೂಡ ಅವರವರೇ ಅಂದುಕೊಂಡಿದ್ದು, ಕಲ್ಪನೆ ಮಾಡಿಕೊಂಡಿದ್ದು. ಆದರೆ ಇಲ್ಲೊಂದು ಅನುಮಾನ ಏಳುವುದು ಸಹಜ. ಎಪ್ಪತ್ತರ ದಶಕದ ಯಶ್ ಮತ್ತು ಅಪ್‍ ಡೇಟ್ ವರ್ಶನ್ ಯಶ್ ಇಬ್ಬರೂ ಇರುತ್ತಾರಂತೆ. ಹಾಗಾದರೆ ಕೇವಲ ಒಬ್ಬ ವ್ಯಕ್ತಿಯೇ ಈ ರೀತಿ ಬದಲಾಗಲು ಸಾಧ್ಯ ಇಲ್ಲ.

    ಡಬಲ್ ರೋಲ್ ನಲ್ಲಿ ಕಾಣಿಸಿದರೆ ಮಾತ್ರ ಇಪ್ಪತ್ತು ಮೂವತ್ತು ವರ್ಷಗಳ ಅಂತರದ ಕತೆ ಹೆಣೆಯಲು ಸಾಧ್ಯ. ಅದಲ್ಲದೆ ಕೆಜಿಎಫ್ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಏಪ್ರಿಲ್ ಅಥವಾ ಮಾರ್ಚ್ ನಲ್ಲಿ ಮೊದಲ ಭಾಗ, ಅದಾದ ಮೂರು ತಿಂಗಳ ನಂತರ ಎರಡನೇ ಭಾಗ. ಅದೇ ಡಬಲ್ ರೋಲ್ ಪಾತ್ರದ ಬಗ್ಗೆ ಕುತೂಹಲ ಮತ್ತು ಅನುಮಾನ ಮೂಡಿಸಿದೆ.

    ಈಗಾಗಲೇ ಈ ಸಿನಿಮಾದ ಎರಡು ಸ್ಟಿಲ್‍ ಗಳು ಮಾತ್ರ ಹೊರಬಿದ್ದಿವೆ. ಇದೇ ಜನವರಿಯಲ್ಲಿ ಟೀಸರ್ ಬರಲಿದೆ. ಅದರಿಂದಾದರೂ ಯಶ್ ಡಬಲ್ ರೋಲ್ ಬಗ್ಗೆ ಮಾಹಿತಿ ಸಿಗಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ ಕನ್ನಡ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಬಜೆಟ್‍ನ ಸಿನಿಮಾ ಎನ್ನುವ ಕ್ರೆಡಿಟ್ ಹೊಂದಿರುವ ಈ ತಂಡ ಅಷ್ಟು ಸುಲಭವಾಗಿ ಗುಟ್ಟನ್ನು ಬಿಟ್ಟುಕೊಡಲು ಸಾಧ್ಯ ಇಲ್ಲ. ಬಹುಶಃ ಸಿನಿಮಾ ತೆರೆ ಕಂಡ ಮೇಲೆಯೇ ಅಸಲಿ ಸತ್ಯ ಹೊರಬೀಳುತ್ತದೆ. ಆದರೆ ವಿಶ್ಲೇಷಣೆ ಪ್ರಕಾರ ಯಶ್ ಡಬಲ್ ರೋಲ್‍ ನಲ್ಲಿ ಕಾಣಿಸುವುದು ನಿಜ ಎನಿಸುತ್ತದೆ.

    https://www.youtube.com/watch?v=a2I0k579eMk

  • ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಸಂತೋಷದ ಸುದ್ದಿ- ಕೆಜಿಎಫ್ ಸಿನ್ಮಾದಿಂದ ಬಂತು ಸ್ವೀಟ್ ನ್ಯೂಸ್

    ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಸಂತೋಷದ ಸುದ್ದಿ- ಕೆಜಿಎಫ್ ಸಿನ್ಮಾದಿಂದ ಬಂತು ಸ್ವೀಟ್ ನ್ಯೂಸ್

    ಬೆಂಗಳೂರು: `ಕೆಜಿಎಫ್’ ರಾಕಿಂಗ್ ಸ್ಟಾರ್ ಯಶ್ ನಟನೆಯ ಅದ್ದೂರಿ ಸಿನಿಮಾ. ಈ ಚಿತ್ರ ನಾಲ್ಕು ಭಾಷೆಯಲ್ಲಿ ಮನೋರಂಜನೆಯ ಹಂಗಾಮ ಮಾಡಲಿದೆ. ಯಶ್ ಅವರ ಹೊಸ ಪೋಸ್ಟರ್ ಗಳಿಂದ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.

    ಕೆಜಿಎಫ್ ಸಿನಿಮಾ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಪರಿಕಲ್ಪನೆಯ ಸಿನಿಮಾ. ಸದ್ದಿಲ್ಲದೆ ಸೆಟ್ಟೇರಿ ಸಖತ್ ಸುದ್ದಿ ಮಾಡಿರುವ ಈ ಸಿನಿಮಾ ಇದೇ ವರ್ಷ ತೆರೆಕಾಣುತ್ತೆ ಎಂದು ರಾಕಿಂಗ್ ಸ್ಟಾರ್ಸ್ ಫ್ಯಾನ್ಸ್ ಗಳು ನಿರೀಕ್ಷಿಸಿದ್ದರು. ಆದರೆ ಈ ವರ್ಷ `ಕೆಜಿಎಫ್’ ತೆರೆ ಕಾಣೋದಿಲ್ಲ ಎಂದು ಗೊತ್ತಾದಾಗ ಸಖತ್ ಬೇಸರವಾಗಿದ್ದರು. ಆದರೆ ರಾಕಿಂಗ್ ಫ್ಯಾನ್ಸ್ ಗೆ ಕೆಜಿಎಫ್ ಬಗ್ಗೆ ಒಂದು ಇಂಟ್ರಸ್ಟಿಂಗ್ ಮ್ಯಾಟರ್ ಬಂದಿದೆ.

    ಹೌದು. ಹೊಂಬಾಳೆ ಫಿಲ್ಮ್ಂ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ `ಕೆಜಿಎಫ್’ ಚಿತ್ರದ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ಯಾಮೆರಾಗೆ ಪೂಜೆ ಮಾಡಿ, ಕುಂಬಳಕಾಯಿ ಒಡೆಯುವ ಕಾಲ ಸನಿಹವಾಗಲಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಮಾಹಿತಿ ಬಂದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಶುರುವಾಗಲಿದೆ.

    ಕೆಜಿಎಫ್ ಸಿನಿಮಾದಿಂದ ಬಂದಿರುವ ಹೊಸ ಪೋಸ್ಟರ್ ಗಳು ಹೊಸ ಕಥೆಯನ್ನು ಹೇಳುತ್ತಿವೆ. ಮೊದಲು ರಿವೀಲ್ ಆದ ರಾಕಿಂಗ್ ಸ್ಟಾರ್ ಯಶ್ ಕೋಲಾರ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ರೀತಿ ಕಾಣಿಸಿಕೊಂಡಿದ್ದರು. ಆದರೆ ಈಗ ಯಶ್ ಲುಕ್ ಬದಲಾಗಿದೆ. ಈ ಫೋಟೋ ನೋಡಿದರೆ ಅಭಿಮಾನಿಗಳ ನಿರೀಕ್ಷೆಯ ಕೌತುಕ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ವೈಟ್ ಆಂಡ್ ವೈಟ್ ಡ್ರೆಸ್ ಹಾಕಿಕೊಂಡು ಒಳ್ಳೆ ಶಿಪ್ ಕ್ಯಾಪ್ಟನ್ ರೀತಿ ಕಾಣಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಯಶ್ ನಟನೆಯ ಕೆಜಿಎಫ್ ಹೊಸ ಹೊಸ ವಿಚಾರವಾಗಿ ಸುದ್ದಿ ಮಾಡುತ್ತಿದ್ದು, ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡುತ್ತಿದೆ. ಯಾವುದಪ್ಪ ಕೆಜಿಎಫ್ ಇದು? ಯಾವಾಗ ಬರುತ್ತಪ್ಪ ಈ ಸಿನಿಮಾ? ಎಂದು ಆಕಾಶ ನೋಡುವಂತೆ ಮಾಡುತ್ತಿದೆ.

    https://www.youtube.com/watch?v=a2I0k579eMk

     

     

     

  • ಇಲ್ಲಿದೆ `ಕೆಜಿಎಫ್’ ಚಿತ್ರದ ರಾಕಿಂಗ್ ಸಮಾಚಾರ!

    ಇಲ್ಲಿದೆ `ಕೆಜಿಎಫ್’ ಚಿತ್ರದ ರಾಕಿಂಗ್ ಸಮಾಚಾರ!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಿ ತುಂಬಾ ದಿನ ಆಯ್ತು ಅಂತಾ ಅಭಿಮಾನಿಗಳೆಲ್ಲಾ ಬೇಜಾರಾಗಿದ್ದಾರೆ. ಇಂದು ನಾವು ಯಶ್ ಅಭಿಮಾನಿಗಳಿಗಾಗಿ ಕೆಜಿಎಫ್ ಚಿತ್ರದ ನ್ಯೂಸ್ ತಂದಿದ್ದೇವೆ. ಈ ವಿಷಯ ಕೇಳಿದರೆ ಬಹುಶಃ ಕೆಜಿಎಫ್ ಬಗೆಗಿನ ಕುತೂಹಲ ಮತ್ತಷ್ಟು ಜಾಸ್ತಿಯಾಗುತ್ತದೆ.

    ಕೆಜಿಎಫ್ ಚಿತ್ರದ ಮೇಲೆ ಭರವಸೆ ಮೂಡೋಕೆ ಕಾರಣ ಒಂದು ರಾಕಿಂಗ್ ಸ್ಟಾರ್ ಯಶ್. ಇನ್ನೊಂದು ನಿರ್ದೇಶಕರ ಮೇಲಿನ ಭರವಸೆ, ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲೇ ಪ್ರಾಮಿಸಿಂಗ್ ನಿರ್ದೇಶಕ ಅನ್ನೋದನ್ನ ಪ್ರೂವ್ ಮಾಡಿದವರು. ಇದೀಗ ಎರಡನೇ ಚಿತ್ರ ಕೆಜಿಎಫ್ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸೋಕೆ ಹೊರಟಿದ್ದಾರೆ. ಇದೀಗ ಪ್ರಶಾಂತ್ ನೀಲ್ ತಮ್ಮ ಸಿನಿಮಾದ ಸೀಕ್ರೆಟ್ ನ್ನು ಫಸ್ಟ್ ಟೈಂ ರಿವೀಲ್ ಮಾಡಿದ್ದಾರೆ.

    ಒಂದು ಉತ್ತಮ ಟೀಮ್ ಸೇರಿದರೆ ಒಂದು ಒಳ್ಳೆಯ ಸಿನಿಮಾ ಮೂಡಿ ಬರೋಕೆ ಸಾಧ್ಯ. ನಿರ್ದೇಶಕರನ್ನ ಕ್ಯಾಪ್ಟನ್ ಆಫ್ ದ ಶಿಪ್ ಎಂದು ಕರೆಯುತ್ತಾರೆ. ಒಂದು ಉತ್ತಮ ಸಿನಿಮಾ ಮೂಡಿ ಬರಬೇಕು ಅಂದ್ರೆ ಅದಕ್ಕೆ ಮುಖ್ಯ ಕಾರಣ ನಿರ್ದೇಶಕನ ಕೆಲಸ. ಆದ್ರೆ ಕೆಜಿಎಫ್ ಚಿತ್ರ ಉತ್ತಮವಾಗಿ ಬಂದಿರೋದ್ರ ಹಿಂದೆ ನಿರ್ದೇಶಕರ ಹೊರತಾಗಿ ಮೂವರು ವ್ಯಕ್ತಿಗಳಿದ್ದಾರೆ. ಅವರೇ ಸಿನಿಮೊಟೋಗ್ರಫರ್ ಭುವನ್ ಗೌಡ, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಹಾಗೂ ಆರ್ಟ್ ಡೈರೆಕ್ಟರ್ ಶಿವಕುಮಾರ್.

    ಶೇಕಡಾ 80ರಷ್ಟು ಭಾಗ ಚಿತ್ರೀಕರಣ ಮುಗಿಸಿರುವ ಕೆಜಿಎಫ್ ನಲ್ಲಿ ಭಾರೀ ಅನುಭವಿ ತಂತ್ರಜ್ಞರಿಲ್ಲ, ಆದ್ರೆ ಅಪೂರ್ವ ತಂತ್ರಜ್ಞರಿಂದ ಕೂಡಿದೆ ಅನ್ನೋದು ಪ್ರಶಾಂತ್ ನೀಲ್ ಅವರ ಅನಿಸಿಕೆ. ಈ ಮೂವರು ಭಾರೀ ಹಳಬರೇನಲ್ಲ ಆದ್ರೆ ಅವರೆಲ್ಲರ ಶ್ರಮ ಕೆಜಿಎಫ್ ಉತ್ತಮವಾಗಿ ಮೂಡಿಬರೋಕೆ ಕಾರಣ. ಕೆಜಿಎಫ್ ಟ್ರೇಲರ್ ರಿಲೀಸ್ ನಂತರ ಜನಗಳೇ ನೋಡ್ತಾರೆ ಅವ್ರ ಕೆಲಸವನ್ನ ಎಂದು ತಮ್ಮ ತಂತ್ರಜ್ಞರನ್ನು ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದಾರೆ.

    ಒಟ್ಟಿನಲ್ಲಿ ತಂಡದ ಪರಿಶ್ರಮದಿಂದ ಕೆಜಿಎಫ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಮುಂದಿನ ವರ್ಷಾರಂಭದಲ್ಲಿ ಕೆಜಿಎಫ್ ಎಂಟ್ರಿ ಕೊಟ್ಟು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುವದು ಖಂಡಿತ.

  • ರಾಕಿಂಗ್ ಸ್ಟಾರ್ ಯಶ್ ಎಷ್ಟು ಸಿಂಪಲ್ ಎಂಬುದಕ್ಕೆ ಈ ಸ್ಟೋರಿ ಓದಿ

    ರಾಕಿಂಗ್ ಸ್ಟಾರ್ ಯಶ್ ಎಷ್ಟು ಸಿಂಪಲ್ ಎಂಬುದಕ್ಕೆ ಈ ಸ್ಟೋರಿ ಓದಿ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಿಟ್ಟು ಖಾಸಗಿ ಜೀವನದಲ್ಲಿ ತುಂಬಾನೇ ಸಿಂಪಲ್ ಆಗಿರುತ್ತಾರೆ. ಯಶೋ ಮಾರ್ಗದ ಮೂಲಕ ಸಮಾಜಸೇವೆ ಮಾಡುತ್ತಾ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ.

    ಇತ್ತೀಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಔಟಿಂಗ್ ಗಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಹೋಗಿದ್ದರು. ಈ ಹೋಟೆಲ್ ಗೆ ಬರೀ ಬೆಂಗಳೂರು ಅಲ್ಲದೇ ದೇಶ ವಿದೇಶಗಳಿಂದಲೂ ಜನರು ಬಂದಿರುತ್ತಾರೆ. ಅದೇ ರೀತಿ ಬಹುಶಃ ಪಕ್ಕದ ರಾಜ್ಯದ ಕುಟುಂಬವೂ ಬಂದಿದೆ. ಆ ಕುಟುಂಬದ ಎರಡು ಎಳೆ ಕುಡಿಗಳು ಬೆಂಚ್ ಮೇಲೆ ಕುಳಿತುಕೊಂಡಿವೆ. ತಮ್ಮ ಫೋಟೋ ತೆಗೆಯುವಂತೆ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ಕೇಳಿಕೊಂಡಿದ್ದಾರೆ.

    ಕನ್ನಡ ಸಿನಿಮಾಗಳನ್ನು ನೋಡದ ಆ ಬಾಲಕಿಯರಿಗೆ ಯಶ್ ಇಲ್ಲಿ ಸೂಪರ್ ಸ್ಟಾರ್ ಅನ್ನೋದು ಹೇಗೆ ಗೊತ್ತಾಗಬೇಕು. ಸಹಜವಾಗಿ ಒಂದು ಫೋಟೋ ಕ್ಲಿಕ್ ಮಾಡಿ ಎಂದು ತೊದಲು ಭಾಷೆಯಲ್ಲಿ ಹೇಳಿದ್ದಾರೆ. ಬೇರೆ ಯಾರಾದರೂ ಸ್ಟಾರ್ ಆಗಿದ್ದರೆ ಏನು ಮಾಡುತ್ತಿದ್ದರೊ ಗೊತ್ತಿಲ್ಲ. ಆದರೆ ಒಬ್ಬ ಯಶ್ ಮಾತ್ರ ಯಾವುದೇ ಮುಜುಗರ ಇಲ್ಲದೆ ಆ ಬಾಲಕಿಯರ ಫೋಟೋ ತೆಗೆದುಕೊಟ್ಟಿದ್ದಾರೆ.

    ಈ ವೇಳೆ ಯಶ್ ಮಕ್ಕಳ ಫೋಟೋ ತೆಗೆಯುವುದನ್ನು ಪತ್ನಿ ರಾಧಿಕಾ ಪಂಡಿತ್ ತಮ್ಮ ಮೊಬೈಲ್ ನಲ್ಲಿ ಕ್ಲಿಕಿಸಿಕೊಂಡಿದ್ದಾರೆ. ಆ ಫೋಟೋವನ್ನು ರಾಧಿಕಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಆ ಮಕ್ಕಳಿಗೆ ತಮ್ಮ ಫೋಟೋ ತೆಗೆಯುತ್ತಿರುವ ವ್ಯಕ್ತಿ ಯಾರೆಂದು ಗೊತ್ತಾದರೆ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಬರೆದುಕೊಂಡಿದ್ದಾರೆ.

    ಯಶ್ ಸದ್ಯ ಕೆಜಿಎಫ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ನಿಂದಲೇ ಸಿನಿಮಾ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಯಶ್ 80ರ ದಶಕದ ಡಾನ್ ಪಾತ್ರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಾಗಿ ಅದ್ಧೂರಿ ವೆಚ್ಚದಲ್ಲಿ ಕೋಲಾರ ಕೆಜಿಎಫ್ ನಲ್ಲಿ 70ರ ದಶಕದ ಸೆಟ್ ಹಾಕಿ ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ.

    ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಕನ್ನಡ ಅಲ್ಲದೇ ಹಿಂದಿ, ತೆಲಗು, ತಮಿಳು ಭಾಷೆಗಳಿಗೆ ಡಬ್ ಆಗಲಿದೆ.

  • ಯಶ್ ಅಭಿನಯದ ಕೆಜಿಎಫ್ ಪಾರ್ಟ್ 2 ಬರುತ್ತಾ?

    ಯಶ್ ಅಭಿನಯದ ಕೆಜಿಎಫ್ ಪಾರ್ಟ್ 2 ಬರುತ್ತಾ?

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಗಾಂಧಿ ನಗರದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಅಭಿಮಾನಿಗಳೆಲ್ಲಾ ಸಿನಿಮಾ ಯಾವಾಗ ತೆರೆಕಾಣುತ್ತೆ ಅಂತಾ ಕಾತುರದಿಂದ ಕಾಯುತ್ತಿದ್ದಾರೆ.

    ಕೆಜಿಎಫ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರೆ, ಇತ್ತ ಸಿನಿಮಾ ಇನ್ನೊಂದು ಭಾಗ ಬರಲಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಸಿನಿಮಾದ ಪೂರ್ಣ ಕಥೆಯನ್ನು ಒಂದೇ ಭಾಗದಲ್ಲಿ ಹೇಳಲು ಸಾಧ್ಯವಾಗದ ಕಾರಣ, ಕೆಜಿಎಫ್-2 ನಿರ್ಮಾಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಫಸ್ಟ್ ಲುಕ್ ನಿಂದಲೇ ಸಿನಿಮಾ ಬಗ್ಗೆ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಯಶ್ 80ರ ದಶಕದ ಡಾನ್ ಪಾತ್ರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಾಗಿ ಅದ್ಧೂರಿ ವೆಚ್ಚದಲ್ಲಿ ಕೋಲಾರ ಕೆಜಿಎಫ್ ನಲ್ಲಿ 70ರ ದಶಕದ ಸೆಟ್ ಹಾಕಿ ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ. ಸಿನಿಮಾಗಾಗಿ ಯಶ್ ತಮ್ಮ ಲುಕ್ ನ್ನು ಸಹ ಬದಲಿಸಿಕೊಂಡಿದ್ದಾರೆ.

    ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಕೆಜಿಎಫ್ ಸಿನಿಮಾ ಕನ್ನಡ ಅಲ್ಲದೇ ಹಿಂದಿ, ತೆಲಗು, ತಮಿಳು ಭಾಷೆಗಳಿಗೆ ಡಬ್ ಆಗಲಿದೆ. ಬಹು ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ಕೆಜೆಎಫ್ ತೆರೆಯ ಮೇಲೆ 80ರ ದಶಕದ ನೈಜ ಚಿತ್ರಣವನ್ನು ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದೆ. ಸಿನಿಮಾಗಾಗಿ ತಮ್ಮ ಲುಕ್ ಬದಲಿಸಿರುವ ಯಶ್ 80ರ ದಶಕದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಅವರಿಗಾಗಿ ವಿಶೇಷ ವಸ್ತ್ರ ವಿನ್ಯಾಸವನ್ನು ಮಾಡಲಾಗಿದೆ.