Tag: ಕೆಜಿಎಫ್

  • ಭುವನ್ ಗೌಡ ಚಿತ್ರದಿಂದ ಹೊರ ಹೋಗಿಲ್ಲ: ಭರಾಟೆ ಚಿತ್ರ ತಂಡದ ಸ್ಪಷ್ಟೀಕರಣ!

    ಭುವನ್ ಗೌಡ ಚಿತ್ರದಿಂದ ಹೊರ ಹೋಗಿಲ್ಲ: ಭರಾಟೆ ಚಿತ್ರ ತಂಡದ ಸ್ಪಷ್ಟೀಕರಣ!

    ಬೆಂಗಳೂರು: ಭರಾಟೆಯಿಂದ ಛಾಯಾಗ್ರಾಹಕ ಭುವನ್ ಗೌಡ ಹೊರ ಬಂದಿದ್ದಾರೆಂಬ ಸುದ್ದಿ ಮೊನ್ನೆಯಿಂದ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸುದ್ದಿಗಳು ಸದ್ದಾಗುತ್ತಲೇ ಚಿತ್ರ ತಂಡ ಈ ಬಗ್ಗೆ ಸ್ಪಷ್ಟೀಕರಣವನ್ನೂ ಕೊಟ್ಟಿದೆ.

    ಚಿತ್ರತಂಡವೇ ಖಚಿತ ಪಡಿಸಿರೋ ಮಾಹಿತಿಯ ಪ್ರಕಾರ ಭುವನ್ ಗೌಡ ಭರಾಟೆ ಚಿತ್ರದಿಂದ ಭುವನ್ ಗೌಡ ಹೊರ ಬಿದ್ದಿಲ್ಲ. ಈಗ ರೂಮರುಗಳು ಹುಟ್ಟಿಕೊಂಡಿರುವಂತೆ ಏನೂ ಸಂಭವಿಸಿಲ್ಲ. ಹಾಗಾದರೆ ಈ ಸುದ್ದಿ ಹುಟ್ಟಿಕೊಂಡಿದ್ದೇಕೆ ಎಂಬ ಅನುಮಾನವೂ ಸಹಜವೇ. ಇದಕ್ಕೂ ಕೂಡಾ ಯಾವ ಅನುಮಾನಗಳಿಗೂ ಎಡೆಯಿಲ್ಲದಂತೆ ಚಿತ್ರತಂಡ ಸ್ಪಷ್ಟೀಕರಣ ನೀಡಿದೆ!

    ಭುವನ್ ಗೌಡ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರಲ್ಲಾ? ಇನ್ನೇನು ಬಿಡುಗಡೆಗೆ ಸಜ್ಜಾಗಿರೋ ಆ ಚಿತ್ರದ ಕೆಲ ಪ್ಯಾಚಪ್ ಕೆಲಸಗಳು ಬಾಕಿ ಇದ್ದವಂತೆ. ಅದನ್ನು ಪೂರ್ತಿಗೊಳಿಸಲು ಮನವಿಯ ಮೇರೆಗೆ ಭುವನ್ ಗೌಡ ತೆರಳಿದ್ದಾರಂತೆ. ಇನ್ನೇನು ಅವರು ಭರಾಟೆ ಚಿತ್ರದ ಚಿತ್ರೀಕರಣಕ್ಕೆ ವಾಪಾಸಾಗಲಿದ್ದಾರಂತೆ.

    ಚಿತ್ರತಂಡವೇ ಕೊಟ್ಟಿರೋ ಈ ಮಾಹಿತಿಯ ಮೂಲಕ ಭರಾಟೆ ಚಿತ್ರದಿಂದ ಭುವನ್ ಗೌಡ ಹೊರ ಬಿದ್ದಿದ್ದಾರೆಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಬಗ್ಗೆ ಕುತೂಹಲ ಕುದಿಯಲಾರಂಭಿಸಿದೆ. ಆದರಿದು ಕನ್ನಡಕ್ಕೆ ಮಾತ್ರವೇ ಸೀಮಿತವಾಗದೆ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿದೆ. ತಮಿಳುನಾಡಿನಲ್ಲಿಯೂ ಈ ಚಿತ್ರಕ್ಕಾಗಿ ಯಶ್ ಅಭಿಮಾನಿಗಳು ಕಾತರರಾಗಿರೋ ವಿಚಾರ ಈ ಹಿಂದೆ ಜಾಹೀರಾಗಿತ್ತು. ಈಗ ಹೊರ ಬಿದ್ದಿರೋದು ಕನ್ನಡದ ಅಣ್ತಮ್ಮನ ಚಿತ್ರದ ಬಗ್ಗೆ ತೆಲುಗು ನಾಡಲ್ಲಿ ಎದ್ದಿರೋ ಸಂಚಲನದ ಸುದ್ದಿ!

    ತೆಲುಗಿನಲ್ಲಿಯೂ ಯಶ್ ಅಭಿನಯದ ಕೆಜಿಎಫ್ ಬಗ್ಗೆ ವಿಪರೀತ ಕ್ರೇಜ್ ಆರಂಭವಾಗಿದೆ. ಇದಕ್ಕೆ ಕಾರಣವಾಗಿರೋದು ರಾಮ್‍ಚರಣ್ ಅಭಿಮಾನಿಗಳು. ರಾಮ್ ಚರಣ್ ಅಭಿಮಾನಿಗಳು ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾರಂಭಿಸಿದ್ದಾರೆ. ಇದಲ್ಲದೇ ರಾಮ್ ಚರಣ್ ಅವರು ರಂಗಸ್ಥಳಂ ಚಿತ್ರದಲ್ಲಿ ಗೆದ್ದಂತೆಯೇ, ಯಶ್ ಕೂಡಾ ಕೆಜಿಎಫ್ ಮೂಲಕ ಗೆಲ್ಲಲಿದ್ದಾರೆಂಬ ಭವಿಷ್ಯವನ್ನೂ ಹೇಳಿದ್ದಾರೆ.

    ರಾಮ್ ಚರಣ್ ರಂಗಸ್ಥಳಂ ಚಿತ್ರದ ಮೂಲಕ ಹಳೇ ಕಥೆಯ ಪಾತ್ರವೊಂದಕ್ಕೆ ಜೀವ ತುಂಬಿದ್ದದರು. ಯಶ್ ಅಭಿನಯದ ಕೆಜಿಎಫ್ ಕೂಡಾ ಅಂಥಾದ್ದೇ ಕಥಾನಕ ಹೊಂದಿದೆ. ರಾಮ್ ಚರಣ್ ಅವರಂತೆಯೇ ಯಶ್ ಭಿನ್ನ ಗೆಟಪ್ಪುಗಳು ಮಿಂಚುತ್ತಿವೆ. ಆದ್ದರಿಂದ ಈ ಚಿತ್ರಕ್ಕೆ ರಂಗಸ್ಥಳಂನಂಥಾದ್ದೇ ಗೆಲುವು ಸಿಗಲಿದೆ ಎಂಬುದು ರಾಮ್ ಚರಣ್ ಅಭಿಮಾನಿಗಳ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆಯೇ ಕೆಜಿಎಫ್ ನಗರ ಸಭೆ ಕಾಂಗ್ರೆಸ್ ಸದಸ್ಯರೊಬ್ಬರು ಮಾರಣಾತಿಂಕವಾಗಿ ಹಲ್ಲೆ ಮಾಡಿ ಗುಂಡಾ ವರ್ತನೆ ಮೆರೆದಿದ್ದಾರೆ.

    ಕೆಜಿಎಫ್‍ನ 33ನೇ ವಾರ್ಡ್ ನಿವಾಸಿ ಭಾಸ್ಕರ್ ಹಲ್ಲೆಗೆ ಒಳಗಾದ ದೂರುದಾರ. ಸ್ಟಾನ್ಲಿ ಹಲ್ಲೆ ನಡೆಸಿದ ನಗರಸಭೆ ಸದಸ್ಯ. ನಗರಸಭೆ ಆಯುಕ್ತ ಶ್ರೀಕಾಂತ್ ಎದುರಲ್ಲೇ ಘಟನೆ ನಡೆದಿದ್ದು, ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

    ನಡೆದದ್ದು ಏನು?
    ಕೆಜಿಎಫ್‍ನ 33ನೇ ವಾರ್ಡ್ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ ಅಂತಾ ದೂರು ನೀಡಲು ಭಾಸ್ಕರ್ ಆಯುಕ್ತರ ಕಚೇರಿಗೆ ಬಂದಿದ್ದರು. ಆಗ ಅಲ್ಲಿಯೇ ಇದ್ದ ಸ್ಟಾನ್ಲಿ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಥಳಿಸಿದ್ದಾರೆ. ಅಷ್ಟಕ್ಕೆ ಬಿಡದೇ ಸ್ಟಾನ್ಲಿ ಸಹಚರರು ಆಯುಕ್ತರ ಎದುರಲ್ಲಿಯೇ ಭಾಸ್ಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಈ ಕುರಿತು ಬುಧವಾರ ಮಧ್ಯಾಹ್ನ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಭಾಸ್ಕರ್ ಮೇಲೆ, ಕೆಲ ಪೊಲೀಸ್ ಅಧಿಕಾರಿಗಳು ರೇಗಾಡಿದ್ದಾರೆ. ನಿನ್ನದೆ ತಪ್ಪು ಇದೆ, ಸುಮ್ಮನೆ ಇಲ್ಲಿಂದ ಹೋಗು ಅಂತಾ ಗದರಿಸಿದ್ದರಂತೆ. ಸಂಜೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಎಫ್‍ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

    ಭಾಸ್ಕರ್ ಮಾನವ ಹಕ್ಕುಗಳ ಜಾಗೃತಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಸದಸ್ಯರ ಅಕ್ರಮಗಳನ್ನು ಹೊರ ಹಾಕುತ್ತಿದ್ದರು. ಹಳೇ ವೈಷಮ್ಯದಿಂದ ಭಾಸ್ಕರ್ ಮೇಲೆ ಸ್ಟಾನ್ಲಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಕಿಂಗ್ ಸ್ಟಾರ್ ಯಶ್‍ಗೆ ತಮಿಳು ನಟ ವಿಶಾಲ್ ಸಾಥ್!

    ರಾಕಿಂಗ್ ಸ್ಟಾರ್ ಯಶ್‍ಗೆ ತಮಿಳು ನಟ ವಿಶಾಲ್ ಸಾಥ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೆಜಿಎಫ್. ಈಗಾಗಲೇ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಯಶ್ ಅವರಿಗೆ ಅಭಿಮಾನಿ ಸಮೂಹವೊಂದು ಹುಟ್ಟಿಕೊಂಡಿದೆ. ಅವರಿಗಾಗಿಯೇ ಕೆಜಿಎಫ್ ಚಿತ್ರ ತಮಿಳು, ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಇದೀಗ ತಮಿಳು ವರ್ಷನ್ನಿನ ಕೆಜಿಎಫ್ ಟ್ರೈಲರ್ ಬಿಡುಗಡೆ ಮಾಡಿ ಅದೇ ಸಂದರ್ಭದಲ್ಲಿ ರಿಲೀಸಿಂಗ್ ಡೇಟ್ ಅನೌನ್ಸ್ ಮಾಡಲು ತಮಿಳು ಸ್ಟಾರ್ ವಿಶಾಲ್ ರೆಡಿಯಾಗಿದ್ದಾರೆ.

    ಇಂದು ಸಂಜೆ 6 ಘಂಟೆಗೆ ವಿಶಾಲ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಜಿಎಫ್ ಟ್ರೈಲರನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮಿಳು ಕೆಜಿಎಫ್ ಬಿಡುಗಡೆಯಾಗೋ ದಿನಾಂಕವನ್ನೂ ಘೋಷಿಸಲಿದ್ದಾರೆ.

    ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಕೆಜಿಎಫ್ ಚಿತ್ರದ ಬಗೆಗೊಂದು ಕುತೂಹಲ ನೆಲೆಗೊಂಡಿದೆ. ಸುದೀರ್ಘವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿಕೊಂಡಿರೋ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಇದೆ. ಈ ಚಿತ್ರ ಜಪಾನ್ ಹಾಗೂ ಚೈನೀಸ್ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಕೆಜಿಎಫ್ ರಿಲೀಸ್‍ಗೆ ಮುಹೂರ್ತ ಫಿಕ್ಸ್

    ಕೊನೆಗೂ ಕೆಜಿಎಫ್ ರಿಲೀಸ್‍ಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಷ್ ಆಗಿದ್ದು, ನವಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

    ಇತ್ತೀಚೆಗೆ ಯಶ್ ಯಾವುದೇ ಕಾರ್ಯಕ್ರದಲ್ಲಿ ಸಿಕ್ಕರು ಅಭಿಮಾನಿಗಳು ಕೆಜಿಎಫ್ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಮೂಲಕ ಯಶ್ ಮತ್ತು ರಾಧಿಕಾ ಇಬ್ಬರಿಗೂ ‘ಕೆಜಿಎಫ್’ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಮೆಂಟ್ ಮೂಲಕ ಕೇಳುತ್ತಿದ್ದರು. ಈಗ ಅವರೆಲ್ಲರಿಗೂ ಯಶ್ ‘ಕೆಜಿಎಫ್’ ಸಿನಿಮಾ ಬಿಡುಗಡೆಯ ದಿನಾಂಕದ ಮೂಲಕ ಖುಷಿ ಸುದ್ದಿಯನ್ನು ನೀಡಿದ್ದಾರೆ.

    ಈ ಹಿಂದೆ ಅಭಿಮಾನಿಯೊಬ್ಬರು ‘ಕೆಜಿಎಫ್’ ಸಿನಿಮಾದ ಟ್ರೈಲರ್ ಯಾವಾಗ ಎಂದು ಕೇಳಿದ್ದರು. ಅಭಿಮಾನಿಗೆ ಉತ್ತರಿಸಿದ್ದ ಯಶ್ ಅವರು ಅಕ್ಟೋಬರ್ ಗೆ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತದೆ ಎಂದು ಹೇಳಿದ್ದರು. ಈಗ ನವೆಂಬರ್ 16 ಕ್ಕೆ ‘ಕೆಜಿಎಫ್’ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ.

    ಇಂದು ಸಂಜೆ 6 ಘಂಟೆಗೆ ತಮಿಳು ಸ್ಟಾರ್ ವಿಶಾಲ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಜಿಎಫ್ ಟ್ರೈಲರನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮಿಳು ಕೆಜಿಎಫ್ ಬಿಡುಗಡೆಯಾಗೋ ದಿನಾಂಕವನ್ನೂ ಘೋಷಿಸಲಿದ್ದಾರೆ.

    ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಕೆಜಿಎಫ್ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಸುದೀರ್ಘವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿಕೊಂಡಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಇದೆ.

    ಸದ್ಯ ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೇಸ್‍ಬುಕ್ ಕಮೆಂಟ್‍ನಲ್ಲಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್!

    ಫೇಸ್‍ಬುಕ್ ಕಮೆಂಟ್‍ನಲ್ಲಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್!

    ಬೆಂಗಳೂರು: ಇತ್ತೀಚೆಗಷ್ಟೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡವನ್ನು ತೆಗೆದು ಸುದ್ದಿಯಾಗಿದ್ದರು. ಈಗ ಫೇಸ್ ಬುಕ್ ಕಮೆಂಟ್ ಮೂಲಕ ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ನಟ ಯಶ್ ಅವರು ಅಭಿಮಾನಿಯೊಬ್ಬರು `ಕೆಜಿಎಫ್’ ಸಿನಿಮಾದ ಟ್ರೇಲರ್ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಯಶ್ ಅವರು ಟ್ರೇಲರ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ನಟರಾಜ್ ಗೌಡ ಎಂಬವರು ಫೇಸ್‍ಬುಕ್ ನಲ್ಲಿ “ಬಾಸ್ ಕೆಜಿಎಫ್ ಟ್ರೇಲರ್ ಯಾವಾಗ ಬರುತ್ತದೆ ಹೇಳಿ, ನಾನು ಕಾಯುತ್ತಿದ್ದೇನೆ” ಎಂದು ಕಮೆಂಟ್ ಮಾಡಿದ್ದಾರೆ. ನಟರಾಜ್ ಮಾಡಿದ ಕಮೆಂಟ್ ಗೆ ಯಶ್ “ಅಕ್ಟೋಬರ್ ನಲ್ಲಿ ಟ್ರೇಲರ್ ಬಿಡುಗಡೆಯಾಗುತ್ತದೆ” ಎಂದು ರೀ ಕಮೆಂಟ್ ಮಾಡಿದ್ದಾರೆ.

    ಈ ಹಿಂದೆ `ಕೆಜಿಎಫ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಭಾರೀ ಸದ್ದು ಮಾಡಿತ್ತು. ಕೆಜಿಎಫ್ ಸಿನಿಮಾವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

    ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಇದೇ ಮೊದಲ ಬಾರಿಗೆ ಸ್ಯಾಂಡಲ್‍ವುಡ್ ನಲ್ಲಿ ನಾಯಕಿಯಾಗಿ ಯಶ್ ಜೊತೆ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಹಳೆಯ ಐಟಂ ಹಾಡಿಗೆ ಬಾಲಿವುಡ್ ಬೆಡಗಿ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಯಶ್ ಜೊತೆ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ ನಟ ಯಶ್ ಗ್ಯಾಪ್ ಕೊಡದೆ `ಮೈ ನೇಮ್ ಇಸ್ ಕಿರಾತಕ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ಯಾಪು ಕೊಡದೆ ಮತ್ತೆ ಕಿರಾತಕನಾಗಲು ಯಶ್ ರೆಡಿ!

    ಗ್ಯಾಪು ಕೊಡದೆ ಮತ್ತೆ ಕಿರಾತಕನಾಗಲು ಯಶ್ ರೆಡಿ!

    ಬೆಂಗಳೂರು: ಎರಡು ವರ್ಷಗಳಿಗೂ ಹೆಚ್ಚು ಕಾಲ ತಮ್ಮನ್ನು ತಾವು ಕೆಜಿಎಫ್ ಚಿತ್ರಕ್ಕೆ ಸಮರ್ಪಿಸಿಕೊಂಡಿದ್ದವರು ರಾಕಿಂಗ್ ಸ್ಟಾರ್ ಯಶ್. ಅದಕ್ಕೆಂದೇ ಬೆಳೆಸಿಕೊಂಡಿದ್ದ ನೀಳವಾದ ಕೇಶರಾಶಿಯನ್ನು ಟ್ರಿಮ್ಮು ಮಾಡಿಕೊಂಡು ಹಳೇ ಲುಕ್ಕಿಗೆ ಮರಳಿರೋ ಯಶ್ ತಕ್ಷಣವೇ ಮೈ ನೇಮ್ ಈಸ್ ಕಿರಾತಕ ಚಿತ್ರದ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ.

    ಕೆಜಿಎಫ್ ಚಿತ್ರ ಆರಂಭವಾಗಿ ಅಖಂಡ ಎರಡು ವರ್ಷಗಳವರೆಗೂ ಯಶ್ ಬೇರ್ಯಾವುದರತ್ತಲೂ ಹೊರಳಿಯೂ ನೋಡಿರಲಿಲ್ಲ. ದಿನೇ ದಿನೇ ಕುತೂಹಲ ಹುಟ್ಟಿಸುತ್ತಾ ಅದೇ ಬಿಸಿಯನ್ನು ಈ ಕ್ಷಣದವರೆಗೂ ಕಾಯ್ದಿಟ್ಟುಕೊಂಡಿರುವ ಕೆಜಿಎಫ್ ಬಿಡುಗಡೆಗೆ ಸಜ್ಜಾಗಿದೆ. ಯಶ್ ಈ ಎರಡು ವರ್ಷಗಳಲ್ಲಿ ಕೆಜಿಎಫ್‍ಗಾಗಿ ಪಟ್ಟ ಪರಿಶ್ರಮ ನೋಡಿದವರೆಲ್ಲ ಚಿತ್ರೀಕರಣ ಮುಗಿಸಿಕೊಂಡ ನಂತರ ಅವರು ಸುದೀರ್ಘವಾಗಿ ರೆಸ್ಟು ತೆಗೆದುಕೊಳ್ಳ ಬಹುದೆಂದೇ ಭಾವಿಸಿದ್ದರು.

    ಆದರೆ ಯಶ್ ಭಾರೀ ಹುರುಪಿನೊಂದಿಗೆ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕಾಗಿ ತಯಾರಾಗಿದ್ದಾರೆ. ಆದ್ದರಿಂದಲೇ ಸೆಪ್ಟೆಂಬರ್ ಮೂರನೇ ತಾರೀಕಿನಿಂದ ಈ ಚಿತ್ರದ ಚಿತ್ರೀಕರಣವೂ ಶುರುವಾಗಲಿದೆ. ಈ ಚಿತ್ರವನ್ನು ಬಹು ಬೇಗನೆ ಮುಗಿಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ಅತ್ತ ಮಗುವಾಗೋ ಖುಷಿ, ಇತ್ತ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ತೆರೆ ಕಾಣಲಿರೋ ಸಡಗರ… ಇಂಥಾದ್ದರ ಮಧ್ಯೆಯೇ ಯಶ್ ಬಿಡುವು ಕೊಡದೆ ಹೊಸಾ ಚಿತ್ರದತ್ತ ಮುಖ ಮಾಡಿರೋದನ್ನ ಕಂಡು ಅಭಿಮಾನಿಗಳು ಖುಷಿಗೊಂಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ 4 ನಿಮಿಷದ ಐಟಂ ಹಾಡಿಗೆ ಲಕ್ಷಗಟ್ಟಲೇ ಸಂಭಾವನೆ ಪಡೆದ ತಮನ್ನಾ!

    ಕೆಜಿಎಫ್ 4 ನಿಮಿಷದ ಐಟಂ ಹಾಡಿಗೆ ಲಕ್ಷಗಟ್ಟಲೇ ಸಂಭಾವನೆ ಪಡೆದ ತಮನ್ನಾ!

    ಬೆಂಗಳೂರು: ‘ಕೆಜಿಎಫ್’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ 4 ನಿಮಿಷ ಹೆಜ್ಜೆ ಹಾಕಲು ಮಿಲ್ಕಿ ಬ್ಯೂಟಿ ತಮನ್ನಾ 40 ಲಕ್ಷ ಸಂಭಾವನೆ ಪಡೆದಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ತಮನ್ನಾ ರಾಕಿಂಗ್ ಸ್ಟಾರ್ ಜೊತೆ ಹಳೆಯ ಹಾಡು `ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಚಿತ್ರದಲ್ಲಿ ಈ ಹಾಡು ನಾಲ್ಕು ನಿಮಿಷಗಳಿದೆ. ಈ ನಾಲ್ಕು ನಿಮಿಷದ ಹಾಡಿಗೆ ತಮನ್ನಾ ಬರೋಬ್ಬರಿ 40 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಡಾ. ರಾಜ್‍ಕುಮಾರ್ ಅಭಿನಯಿಸಿದ 1970ರಲ್ಲಿ ಬಿಡುಗಡೆಯಾದ `ಪರೋಪಕಾರಿ’ ಸಿನಿಮಾದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು ಇದೆ. ಈ ಹಾಡು ಇಂದಿಗೂ ಟ್ರೆಂಡ್ ಆಗಿದ್ದು, ಕೆಜಿಎಫ್ ಸಿನಿಮಾದಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಇದನ್ನೂ ಓದಿ: ಯಶ್ ಜೊತೆ ಡ್ಯಾನ್ಸ್ ಮಾಡಿ ರಾಕಿಂಗ್ ಸ್ಟಾರ್ ಬಗ್ಗೆ ತಮನ್ನಾ ಟ್ವೀಟ್!

    ತಮನ್ನಾ ಈ ಹಿಂದೆ ನಟ ನಿಖಿಲ್ ಕುಮಾರ್ ಅಭಿನಯದ `ಜಾಗ್ವಾರ್’ ಸಿನಿಮಾದ ಹಾಡಿನಲ್ಲಿ ಅಭಿನಯಿಸಿದ್ದರು. ಈಗ ಯಶ್ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಮಿಂಚಲಿದ್ದಾರೆ.

    ಸದ್ಯ ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಕೆಜಿಎಫ್’ ಸಿನಿಮಾ ಒಪ್ಪಿಕೊಂಡಿದ್ದು ನನ್ನ ಜೀವನದ ಉತ್ತಮ ನಿರ್ಧಾರ: ಶ್ರೀನಿಧಿ ಶೆಟ್ಟಿ

    `ಕೆಜಿಎಫ್’ ಸಿನಿಮಾ ಒಪ್ಪಿಕೊಂಡಿದ್ದು ನನ್ನ ಜೀವನದ ಉತ್ತಮ ನಿರ್ಧಾರ: ಶ್ರೀನಿಧಿ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್ ವುಡ್‍ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದ ಬಗ್ಗೆ ನಾಯಕಿ ಶ್ರೀನಿಧಿ ಶೆಟ್ಟಿ ತನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

    ಯಶ್ ಅಭಿನಯದ `ಕೆಜಿಎಫ್’ ಸಿನಿಮಾದ ಶೂಟಿಂಗ್ ಇತ್ತೀಚಿಗಷ್ಟೆ ಮುಗಿದಿದೆ. ಎರಡು ವರ್ಷಗಳ ಸತತ ಚಿತ್ರೀಕರಣದ ಬಳಿಕ ಶೂಟಿಂಗ್ ಸಂಪೂರ್ಣಗೊಂಡಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅವರು ಅಭಿನಯಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿರುವ ಶ್ರೀನಿಧಿ ಶೆಟ್ಟಿ ಈ ಸಿನಿಮಾದ ಬಗ್ಗೆ ತಮ್ಮ ಅನುಭವವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    “ನಾನು ಎರಡು ವರ್ಷಗಳ ಹಿಂದೆ `ಕೆಜಿಎಫ್’ ಚಿತ್ರತಂಡವನ್ನು ಭೇಟಿ ಮಾಡಿದೆ. ಆಗ ನನಗೆ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಅವಕಾಶ ಬಂದಿತ್ತು. ಇಂತಹ ಅದ್ಭುತ ಸಿನಿಮಾದಲ್ಲಿ ನಾನು ಅಭಿನಯಿಸಿರುವುದು ನನ್ನ ಅದೃಷ್ಟವಾಗಿದೆ. ಈ ಸಿನಿಮಾದ ಮೂಲಕ ನನ್ನ ಚಿತ್ರರಂಗದ ಪಯಣ ಶುರು ಆಗಿದೆ. ಇದರಿಂದ ಕೆಜಿಎಫ್ ಸಿನಿಮಾಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.

    ನನಗೆ `ಕೆಜಿಎಫ್’ ಸಿನಿಮಾ ಪಯಣ ಅನಿರೀಕ್ಷಿತ ಮತ್ತು ನಂಬಲು ಅಸಾಧ್ಯವಾದ ವಿಷಯವಾಗಿದೆ. ನಾವು ಚಿತ್ರೀಕರಣವನ್ನು ಮುಗಿಸಿದ್ದೇವೆ. ನಾನು ಈಗ ಹೇಳುವುದೇನೆಂದರೆ `ಕೆಜಿಎಫ್’ ಸಿನಿಮಾ ಒಪ್ಪಿಕೊಂಡಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಭಾವಿಸುತ್ತೇನೆ. ಈ ಸಿನಿಮಾದ ಜರ್ನಿಯಲ್ಲಿ ಕೆಲವು ವ್ಯಕ್ತಿಗಳು ನನ್ನ ಜೊತೆಗೆ ಇದ್ದಾರೆ. ಅವರು ಇಲ್ಲದಿದ್ದರೆ ಈ ಸಿನಿಮಾ ಪಯಣ ಪೂರ್ಣ ಆಗುತ್ತಿಲಿಲ್ಲ. `ಕೆಜಿಎಫ್’ ಸಿನಿಮಾಕ್ಕೆ ಬೆಂಬಲ ನೀಡಿದ ಎಲ್ಲರಿಗೆ ಧನ್ಯವಾದಗಳು.” ಎಂದು ಶ್ರೀನಿಧಿ ಶೆಟ್ಟಿ ಬರೆದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ಶ್ರೀನಿಧಿ ಶೆಟ್ಟಿ ಕೊನೆಯಲ್ಲಿ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. `ಕೆಜಿಎಫ್’ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾದ ಒಂದು ವಿಶೇಷ ಹಾಡಿನಲ್ಲಿ ನಟಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BmstaimADFv/?hl=en&taken-by=srinidhi_shetty

  • ದುರಾಸೆ ಏನಿಲ್ಲ, ಸ್ವಲ್ಪ ಆಸೆ ಎಂದ ಒಳ್ಳೆ ಹುಡ್ಗ ಪ್ರಥಮ್

    ದುರಾಸೆ ಏನಿಲ್ಲ, ಸ್ವಲ್ಪ ಆಸೆ ಎಂದ ಒಳ್ಳೆ ಹುಡ್ಗ ಪ್ರಥಮ್

    ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋ ವಿನ್ನರ್ ಒಳ್ಳೆಯ ಹುಡಗ ಪ್ರಥಮ್ ಯಾವಾಗಲೂ ತಮ್ಮದೇ ಶೈಲಿಯಲ್ಲಿ ಫೇಸ್‍ಬುಕ್ ಪೋಸ್ಟ್ ಹಾಕುತ್ತಿರುತ್ತಾರೆ. ತಾವು ಮಾತನಾಡುವ ಶೈಲಿಯಲ್ಲಿ ಪೋಸ್ಟ್ ಹಾಕಿಕೊಳ್ಳೊದರಿಂದ ಜನರ ಪ್ರೀತಿಗೂ ಪಾತ್ರರಾಗುತ್ತಾರೆ. ಬುಧವಾರ ಯಶ್ ಫೋಟೋ ಹಾಕಿ ‘ನನಗೇನೂ ದುರಾಸೆ ಏನಿಲ್ಲ, ಸ್ವಲ್ಪ ಆಸೆ’ ಅಂತಾ ಬರೆದುಕೊಂಡಿದ್ದಾರೆ.

    ಯಶ್ ಸದ್ಯ ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿರೋದು ಇಡೀ ಕರುನಾಡಿಗೆ ಗೊತ್ತಿರುವ ವಿಷಯ. ಇದೇ ಚಿತ್ರದ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಟಿಯಾ ಹೆಜ್ಜೆ ಹಾಕರೋದು ಸದ್ಯದ ವಿಷಯ. ಗುರುವಾರ ಕೆಜೆಎಫ್ ಚಿತ್ರತಂಡ ಯಶ್ ಮತ್ತು ತಮನ್ನಾ ಜೊತೆಗಿರುವ ಫೋಟೋವನ್ನು ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ಫೋಟೋವನ್ನ ಪ್ರಥಮ್ ಸಹ ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು, ಕೆಲವು ಕ್ಯಾಚಿ ಲೈನ್ ಗಳನ್ನು ಬರೆದಿದ್ದಾರೆ.

    ಪ್ರಥಮ್ ಬರೆದಿದ್ದೇನು?
    ಈ ವ್ಯಕ್ತಿ ಕನ್ನಡ ಉದ್ಯಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಾಮಥ್ರ್ಯ ಹೊಂದಿದ್ದಾರೆ. ನನಗೆ ಈಯಪ್ಪನ ಆ್ಯಟಿಟ್ಯೂಡ್ ಸಖತ್ ಇಷ್ಟ. ಹೋದ ವರ್ಷ ಇವರ ಯಾವ ಸಿನಿಮಾ ಸಹ ರಿಲೀಸ್ ಆಗಿಲ್ಲ. ಆದ್ರೆ ಈ ವರ್ಷ ಯಶ್ ಅವರು ಕೆಜಿಎಫ್ ರಿಲೀಸ್ ಮಾಡಿದ್ರೆ, ನಮ್ಮ ರಾಧಿಕಾ ಪಂಡಿತ್ ಅವರು ಡಿಸೆಂಬರ್‍ಗೆ ವೈಜಿಎಫ್ ರಿಲೀಸ್ ಮಾಡುತ್ತಿದ್ದಾರೆ. ನನಗೆ ದುರಾಸೆ ಏನಿಲ್ಲ ಗುರು.. ಸಣ್ಣ ಆಸೆ ಅಷ್ಟೆ… ಕೆಜಿಎಫ್ ಭಾಗ 1 ಮತ್ತು 2 ಬರಲಿ.. ವೈಜಿಎಫ್ ಅವಳಿ-ಜವಳಿ ಹುಟ್ಟಲಿ. ಅಷ್ಟೇ.. ಇನ್ನೇನೂ ಆಸೆ ಇಲ್ಲ..!

    ಬಿಗ್‍ಬಾಸ್ ನಿಂದಾಗಿ ನಿರ್ದೇಶಕನಾಗಿದ್ದ ಪ್ರಥಮ್ ಇಂದು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಯಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿಯೂ ಪ್ರಥಮ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಭರ್ಜರಿ ಸೆಟ್‍ನಲ್ಲಿ ಬಳ್ಳಿಯ ಮಿಂಚು:
    ಬರೋಬ್ಬರಿ 60 ಜನರ ಶ್ರಮದಿಂದ 15 ದಿನದಲ್ಲಿ ತಯಾರಾದ ಬಾರ್ ಸೆಟಪ್ ಸೆಟ್ ನಲ್ಲಿ ಬಳುಕೋ ಬಳ್ಳಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ದಕ್ಷಿಣ ಭಾರತದ ಫೇಮಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಹೆಜ್ಜೆಯ ಡೈರೆಕ್ಷನ್‍ನಲ್ಲಿ ಮಿಲ್ಕಿಬ್ಯೂಟಿ `ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಮಿಂಚು ಹರಿಸಿದ್ದಾರೆ. 60-70 ದಶಕದ ಗೆಟಪ್‍ನಲ್ಲಿ ಒಟ್ಟೂ 80 ಜನ ಡ್ಯಾನ್ಸರ್ಸ್ ಇದ್ದಾರೆ. ಕಂಪ್ಲೀಟ್ ರೆಡ್ ಥೀಮ್ ಕಲರ್‍ನಲ್ಲಿ ಪಿಕ್ಟರೈಸೇಷನ್ ಮಾಡಲಾಗಿದ್ದು ಒಟ್ಟೂ 6 ಸಾವಿರಕ್ಕಿಂತ ಹೆಚ್ಚು ರೆಡ್ ಬಲ್ಬ್‍ಗಳು ಸೆಟ್ ನಲ್ಲಿ ಹಾಕಲಾಗಿತ್ತು. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ತಂಡದ 60 ಜನರ ಕೈಚಳಕವನ್ನು ಈ ಹಾಡಿನಲ್ಲಿ ಕಾಣಬಹುದಾಗಿದೆ.

    ಹೊಂಬಾಳೆ ಪ್ರೊಡೆಕ್ಷನ್ ನಲ್ಲಿ ಕೆಜಿಎಫ್ ಸಿನಿಮಾ ನಿರ್ಮಾಣವಾಗುತ್ತಿದ್ದು,’ಜೋಕೆ, ನಾನು ಬಳ್ಳಿಯ ಮಿಂಚು’ ಹಾಡಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು, ಯಶ್ ಜೊತೆಗಿರುವ ಫೋಟೋ ವೈರಲ್ ಆಗಿದೆ. ಸದ್ಯ ತಮನ್ನಾ ಯಶ್ ಜೊತೆ ಡ್ಯಾನ್ಸ್ ಮಾಡಿದ ಫಸ್ಟ್ ಲುಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    “ಯಶ್ ಜೊತೆ ಜೋಕೆ ಹಾಡಿಗೆ ಚಿತ್ರೀಕರಣ ಮಾಡುವಾಗ ಒಳ್ಳೆಯ ಸಮಯ ಕಳೆದಿದ್ದೇನೆ. ಇಡೀ ಚಿತ್ರತಂಡ ನನಗೆ ಮನೆಯ ಅನುಭವವನ್ನು ನೀಡಿತು. ಎಲ್ಲರಿಗೂ ಧನ್ಯವಾದ. ಸದ್ಯ ಎಲ್ಲರೂ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನೋಡಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews