Tag: ಕೆಜಿಎಫ್

  • ವಿಡಿಯೋ ಮೂಲಕ ಅಭಿಮಾನಿಗಳಿಗೆ `ರಾಕಿ’ ಧನ್ಯವಾದ

    ವಿಡಿಯೋ ಮೂಲಕ ಅಭಿಮಾನಿಗಳಿಗೆ `ರಾಕಿ’ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

    ನಟ ಯಶ್ ಟ್ವಿಟ್ಟರ್ ನಲ್ಲಿ ಲೈವ್ ಬಂದು ಎಲ್ಲ ಕನ್ನಡ ಕಲಾಭಿಮಾನಿಗಳಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. “ನನ್ನ ಕೆಜಿಎಫ್ ಟ್ರೇಲರ್ ನ ನೀವು ರಿಸೀವ್ ಮಾಡಿಕೊಂಡಿರುವುದಕ್ಕೆ ತುಂಬಾ ತುಂಬಾ ಖುಷಿಯಾಗಿದೆ. ಹೇಗೆ ನಮ್ಮ ಖುಷಿಯನ್ನು ವ್ಯಕ್ತಪಡಿಸಬೇಕು ಗೊತ್ತಾಗುತ್ತಿಲ್ಲ. ಎರಡು ವರ್ಷದಿಂದ ಕಷ್ಟಪಟ್ಟು ನಾವು ಏನು ಕೆಲಸ ಮಾಡಿದ್ದೇವೆ ಎಂದು ನಿಮಗೆ ತೋರಿಸಬೇಕು ಎಂದು ಕಾಯುತ್ತಿದ್ದೆವು. ಈಗ ಅದನ್ನು ಟ್ರೇಲರ್ ಮೂಲಕ ನಿಮಗೆ ತೋರಿಸಿದ್ದೇವೆ” ಎಂದು ಹೇಳಿದ್ದಾರೆ.

    “ನೀವು ಟ್ರೇಲರ್ ಮೆಚ್ಚಿರುವ ರೀತಿ ನಮಗೆ ಸಾರ್ಥಕತೆಯ ಭಾವನೆಯಾಗುತ್ತಿದೆ. ಇನ್ನು ಹೆಚ್ಚು ಕೆಲಸ ಮಾಡುವ ಸ್ಫೂರ್ತಿ ಸಿಕ್ಕಿದೆ. ಅಭಿಮಾನಿಗಳು ತುಂಬಾ ಚೆನ್ನಾಗಿ ಟ್ರೇಲರ್ ಬಿಡುಗಡೆಯನ್ನು ಆಚರಿಸಿದ್ದೀರಿ. ಅವರಿಗೆಲ್ಲಾ ಧನ್ಯವಾದಗಳು. ಎಲ್ಲ ಕಲಾವಿದರು ಮತ್ತು ನಿರ್ಮಾಪಕರು ಸಿನಿಮಾ ನೋಡಿ ಸಪೋರ್ಟ್ ಮಾಡಿ ಬೆನ್ನು ತಟ್ಟಿದ್ದೀರಿ. ನೀವು ಕೊಡುವ ಶಕ್ತಿ, ಭರವಸೆಯಿಂದ ನಾವು ಇನ್ನೂ ಚೆನ್ನಾಗಿ ಕೆಲಸ ಮಾಡುತ್ತೇವೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಸಿನಿಮಾ ಸೆಟ್ಟೇರಿದಾಗಿನಿಂದಲೂ ಕಳೆದ ಎರಡೂವರೆ ವರ್ಷಗಳಿಂದ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಕನ್ನಡದ ವಿಭಿನ್ನ ಸಿನಿಮಾ ಎಂದು ಕೆಜಿಎಫ್ ಗುರುತಿಸಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆ ಮುನ್ನವೇ ಇಡೀ ದೇಶವೇ ಕನ್ನಡ ಸಿನಿಮಾಗಳತ್ತ ನೋಡುವಂತೆ ಮಾಡಿದೆ ಕೆಜಿಎಫ್. ಟ್ರೇಲರ್ ರಿಲೀಸ್ ಆಗಿ ಒಂದು ದಿನದ ಬಳಿಕವೂ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೇಂಡಿಂಗ್ ನಲ್ಲಿದೆ.

    ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲಂ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೆಜಿಎಫ್‍ನದ್ದು ಲಾವಾರಸ ಉಕ್ಕಿದಂಥಾ ಖದರಿನ ಟ್ರೈಲರ್ ಅಂದ್ರು ಕಿಚ್ಚ!

    ಕೆಜಿಎಫ್‍ನದ್ದು ಲಾವಾರಸ ಉಕ್ಕಿದಂಥಾ ಖದರಿನ ಟ್ರೈಲರ್ ಅಂದ್ರು ಕಿಚ್ಚ!

    ಬೆಂಗಳೂರು: ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರ ಕಂಡು ಬಾಲಿವುಡ್ ಮಂದಿಯೂ ಬೆರಗಾಗುವಂತಾಗಿದೆ. ಈ ಟ್ರೈಲರ್ ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗೆ ಮಾಡಿರೋ ದಾಖಲೆ, ಹುಟ್ಟಿಕೊಂಡಿರೋ ಕ್ರೇಜ್ ದೊಡ್ಡ ಮಟ್ಟದ ಗೆಲುವನ್ನು ಖಾತರಿಯಾಗಿಸಿದೆ. ಈ ಮೂಲಕ ಕನ್ನಡ ಚಿತ್ರವೊಂದು ದಕ್ಷಿಣ ಭಾರತೀಯ ಚಿತ್ರರಂಗದ ಗರಿಮೆಯನ್ನು ಬಾಲಿವುಡ್ಡನ್ನೂ ಮೀರಿಸಿ ಮಿರುಗಿಸಿದೆ. ಇದೇ ಅಲೆಯಲ್ಲಿ ಕೆಜಿಎಫ್ ಬಗ್ಗೆ ಸ್ಯಾಂಡಲ್‍ವುಡ್ ನಲ್ಲಿ ಸಂಚಲನ ಸೃಷ್ಟಿಯಾಗದಿರುತ್ತದಾ?

    ಕೆಜಿಎಫ್ ಚಿತ್ರದ ಜಬರ್ದಸ್ತ್ ಟ್ರೈಲರ್ ಕಂಡು ಕಿಚ್ಚ ಸುದೀಪ್ ಕೂಡಾ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಮನಸಾರೆ ಹೊಗಳಿಕೆಯ ಮಾತಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಈ ಟ್ರೈಲರ್ ಲಾವಾರಸ ಉಕ್ಕಿ ಬಂದಂತಿಂದೆ ಎಂದಿರೋ ಕಿಚ್ಚ ಸುದೀಪ್, ನಿರ್ದೇಶಕ ಪ್ರಶಾಂತ್ ರಾಜ್ ಈ ಚಿತ್ರವನ್ನು ಬೇರೆಯದ್ದೇ ಹಂತಕ್ಕೆ ಕೊಂಡೊಯ್ದಿದ್ದಾರೆ ಅಂದಿದ್ದಾರೆ. ಒಟ್ಟಾರೆಯಾಗಿ ಯಶ್ ಲುಕ್ಕಿಗೆ ಫಿದಾ ಆಗಿರೋದಾಗಿಯೂ ಟ್ವಿಟ್ಟರ್ ಮೂಲಕ ಬರೆದುಕೊಂಡಿದ್ದಾರೆ.

    ಎಲ್ಲ ಸ್ಟಾರ್ ವಾರ್ ಮುಂತಾದವುಗಳಾಚೆಗೆ ಕೆಜಿಎಫ್ ಚಿತ್ರದ ಟ್ರೈಲರ್ ಬಗ್ಗೆ ವ್ಯಾಪಕ ಮೆಚ್ಚುಗೆಯೇ ಕೇಳಿ ಬರುತ್ತಿದೆ. ಇದನ್ನು ಕನ್ನಡದ ಹಿರಿಮೆ ಎಂದೇ ಪ್ರೇಕ್ಷಕರು ಭಾವಿಸಿದ್ದಾರೆ. ಆ ಮನೋಭಾವವೇ ಕೆಜಿಎಫ್ ಟ್ರೈಲರ್ ವೀಕ್ಷಕರ ಸಂಖ್ಯೆ ಜ್ವರದಂತೆ ಏರಿಕೊಳ್ಳಲು ಪ್ರೇರೇಪಣೆ ನೀಡಿದಂತಿದೆ. ಸದ್ಯ ಕೆಜಿಎಫ್ ಚಿತ್ರ 9 ಗಂಟೆಯಲ್ಲಿ 38 ಲಕ್ಷ ವೀವ್ಸ್ ಕನ್ನಡದಲ್ಲೇ ಬಂದಿದೆ. ಎಲ್ಲಾ ಭಾಷೆಗಳ ಟ್ರೈಲರ್ ಲೆಕ್ಕ ಹಾಕಿದರೆ ರಾತ್ರಿ 12 ಗಂಟೆ ವೇಳೆಗೆ 65 ಲಕ್ಷ ವೀವ್ಸ್ ದಾಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಧಿಯ ಕೈವಾಡ ಕೆಂಪು ರಕ್ತದೋಕುಳಿಯ ನರ್ತನದಲ್ಲಿ ರಾಕಿ ಆರ್ಭಟ

    ವಿಧಿಯ ಕೈವಾಡ ಕೆಂಪು ರಕ್ತದೋಕುಳಿಯ ನರ್ತನದಲ್ಲಿ ರಾಕಿ ಆರ್ಭಟ

    – ಬಹುನಿರೀಕ್ಷಿತ ಕೆಜಿಎಫ್ ಟ್ರೇಲರ್ ಬಿಡುಗಡೆ
    – ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಭಾರತದಲ್ಲೇ ಟ್ರೆಂಡ್

    ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕಳೆದ ಎರಡೂವರೆ ವರ್ಷಗಳಿಂದ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಕನ್ನಡದ ವಿಭಿನ್ನ ಸಿನಿಮಾ ಎಂದು ಕೆಜಿಎಫ್ ಗುರುತಿಸಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆ ಮುನ್ನವೇ ಇಡೀ ದೇಶವೇ ಕನ್ನಡ ಸಿನಿಮಾಗಳತ್ತ ನೋಡುವಂತೆ ಮಾಡಿದೆ ಕೆಜಿಎಫ್.

    ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.

    1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತೇವೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

    ಹಲವು ವಿಶೇಷತೆಗಳಿಂದ ಕೂಡಿರುವ ಸಿನಿಮಾ ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿ ಕಾರ್ಮಿಕ ವರ್ಗದ ಜೀವನಾಧರಿತ ಕಥೆಯನ್ನು ಒಳಗೊಂಡಿದೆ. ಬೇರೆ ಭಾಷೆಯ ಸಿನಿಮಾಗಳ ಟ್ರೇಲರ್ ರಿಲೀಸ್ ದಿನ ಬೇರೆ ರಾಜ್ಯಗಳಿಗೆ ತೆರಳಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಬೇಕಿತ್ತು. ಇದೇ ಮೊದಲ ಬಾರಿಗೆ ಬೇರೆ ಭಾಷೆಯವರು ಕನ್ನಡದ ಕೆಜಿಎಫ್ ಸಿನಿಮಾ ಟ್ರೇಲರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಜನವರಿ 8, 2018ರಂದು ಚಿತ್ರ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಟೀಸರ್ ಬಿಡುಗಡೆ ಮಾಡುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದರು. ಅಖಂಡ ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿರೋ ಕೆಜಿಎಫ್ ಚಿತ್ರ ಬಿಡುಗಡೆಯ ಹಂತ ತಲುಪಿಕೊಂಡಿದೆ. ಎರಡು ವರ್ಷದ ಸುದೀರ್ಘಾವಧಿಯ ತುಂಬಾ ಈ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸಣ್ಣದೇನಲ್ಲ. ಯಶ್ ಅಭಿನಯದ ಈ ಚಿತ್ರವೀಗ ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಟ್ರೆಂಡ್ ಸೆಟ್ ಮಾಡಿದೆ.

    ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ಕೆಜಿಎಫ್ ಕಥೆ ಯೂನಿವರ್ಸಲ್ ಕಾನ್ಸೆಪ್ಟ್ ಆಗಿದ್ದು, ತಾಯಿ-ಮಗನ ಸೆಂಟಿಮೆಂಟ್ ಇಲ್ಲಿದೆ. ಸಿನಿಮಾದಲ್ಲಿ ಬಹುತೇಕ ಕಲಾವಿದರೆಲ್ಲರೂ ಹೊಸಬರೇ ಆಗಿದ್ದು, ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಇಲ್ಲಿ ನಾನು ಮಾತ್ರ ಹೈಲೆಟ್ ಆಗಿಲ್ಲ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಎಂಬುವುದು ಯಶ್‍ಗೆ ಚಿತ್ರದ ಬಗೆಗಿರುವ ಅಭಿಪ್ರಾಯ.

    ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ‘ಕೆಜಿಎಫ್ ಫ್ಲಾಪ್ ಆಗುತ್ತೆ’ ಅಂದವರಿಗೆ ಮಾತಿನಲ್ಲೇ ಚಾಟಿ ಬೀಸಿದ ಜಗ್ಗೇಶ್

    ‘ಕೆಜಿಎಫ್ ಫ್ಲಾಪ್ ಆಗುತ್ತೆ’ ಅಂದವರಿಗೆ ಮಾತಿನಲ್ಲೇ ಚಾಟಿ ಬೀಸಿದ ಜಗ್ಗೇಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದು, ರಾಜ್ಯಾದ್ಯಂತ ಅವರ ಅಭಿಮಾನಿಗಳು ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಚಿತ್ರ ಡಿಸೆಂಬರ್21ಕ್ಕೆ ಬಿಡುಗಡೆಯಾಗಲಿದೆ. ಆದರೆ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ `ಝಿರೋ’ ಚಿತ್ರವು ಅಂದೇ ರಿಲೀಸ್ ಆಗಲಿದ್ದು, ಕೆಜಿಎಫ್ ಚಿತ್ರ ಝೀರೋ ಸಿನೆಮಾದ ಮುಂದೆ ಫ್ಲಾಪ್ ಆಗುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಅಭಿಮಾನಿಯೊಬ್ಬರು ನಟ ಜಗ್ಗೇಶ್‍ಗೆ ಟ್ಯಾಗ್ ಮಾಡಿದ್ದರು.

    ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದರ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವವರೆಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

    ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ, ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಅವರ ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ. ಈ ಬಗ್ಗೆ ಹೆಮ್ಮೆ ಪಡಿ, ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಎನ್ನಿ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಜಯ ದೇವರಕೊಂಡ ಟ್ಯಾಕ್ಸಿವಾಲ ಹಿಂದಿಕ್ಕಿದ ಕೆಜಿಎಫ್

    ವಿಜಯ ದೇವರಕೊಂಡ ಟ್ಯಾಕ್ಸಿವಾಲ ಹಿಂದಿಕ್ಕಿದ ಕೆಜಿಎಫ್

    – ದೇಶದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಐದನೇ ಸ್ಥಾನದಲ್ಲಿ ಕೆಜಿಎಫ್

    ಬೆಂಗಳೂರು: ಈ ವರ್ಷದ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ, ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಐದನೇ ಸ್ಥಾನದಲ್ಲಿದೆ. ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಪಟ್ಟಿಯಲ್ಲಿ ತೆಲುಗಿನ ವಿಜಯ ದೇವರಕೊಂಡ ಅಭಿನಯದ ‘ಟ್ಯಾಕ್ಸಿವಾಲಾ’ ಆರನೇ ಸ್ಥಾನದಲ್ಲಿದೆ. ಈ ಪಟ್ಟಿಯ ಮೂಲಕ ಕನ್ನಡ ಸಿನಿಮಾಗಳಿಗೆ ದೇಶದಾದ್ಯಂತ ಮಾರುಕಟ್ಟೆ ಲಭ್ಯವಾಗಿತ್ತಿರೋದು ಖುಷಿಯ ವಿಚಾರವಾಗಿದೆ.

    ಐಎಂಡಿಬಿ ಪಟ್ಟಿಯ ಮೊದಲ ಸ್ಥಾನದಲ್ಲಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ಮೊದಲ ಸ್ಥಾನದಲ್ಲಿದೆ. ನಂತರ ತಮಿಳಿನ ಸರ್ಕಾರ್, ಹಿಂದಿಯ ಜೀರೋ, ಥಗ್ಸ್ ಆಫ್ ಹಿಂದೋಸ್ತಾನ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿವೆ. 5ನೇ ಸ್ಥಾನದಲ್ಲಿ ಕೆಜಿಎಫ್ ಇದೆ. ಉಳಿದಂತೆ ತೆಲುಗಿನ ಟ್ಯಾಕ್ಸಿವಾಲಾ, ಹಿಂದಿಯ ಮಿರ್ಜಾಪುರ, ಮೊಹಲ್ಲಾ ಐಸಿ, ಕೇದರನಾಥ್ ಮತ್ತು ಮೈರ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

    ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ.

    ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ. ಸಿನಿಮಾ ಡಿಸೆಂಬರ್ 21ರಂದು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಪ್ರಭೆಯಲ್ಲಿ ಹೊಂಬಾಳೆ ದಾಖಲೆ!

    ಕೆಜಿಎಫ್ ಪ್ರಭೆಯಲ್ಲಿ ಹೊಂಬಾಳೆ ದಾಖಲೆ!

    ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರವೀಗ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಅಬ್ಬರದ ಅಲೆ ಶುರುವಿಟ್ಟಿದೆ. ಕನ್ನಡ ಚಿತ್ರವೊಂದು ಬಾಲಿವುಡ್ ಚಿತ್ರಗಳನ್ನೇ ಮೀರಿಸಿ ಟಾಕ್ ಕ್ರಿಯೇಟ್ ಮಾಡೋದೇನೂ ಕಡಿಮೆ ವಿಚಾರವಲ್ಲ. ಅದರ ರೂವಾರಿಯಾಗಿರೋ ಕೆಜಿಎಫ್ ಚಿತ್ರದ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕನಸಿದೆ. ಈ ಸಂಸ್ಥೆಯೀಗ ಕನ್ನಡ ಚಿತ್ರರಂಗಕ್ಕೇ ಕಿರೀಟದಂಥಾದ್ದೊಂದು ಕೆಲಸ ಮಾಡಲೂ ಮುಂದಾಗಿದೆ.

    ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ!

    ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ.

    ಇದುವರೆಗೂ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ, ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡೋ ಮೂಲಕ ಚಿತ್ರರಂಗದ ಭಾಗವಾಗಿರುವ ಸಂಸ್ಥೆ ಹೊಂಬಾಳೆ. ಈಗ ಬೃಹದಾಕಾರವಾಗಿ ಬೆಳೆದು ನಿಂತಿರೋ ಈ ಸಂಸ್ಥೆ ಕೆಜಿಎಫ್ ಚಿತ್ರವನ್ನು ಬಹು ಕೋಟಿ ವ್ಯಯಿಸಿ ರೂಪಿಸಿದೆ. ಜೊತೆಗೆ ಇಂಥಾದ್ದೊಂದು ದಾಖಲೆಗೂ ರೂವಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಿವುಡ್ ಚಿತ್ರಗಳನ್ನೂ ಮೀರಿಸಿದ ಕೆಜಿಎಫ್ ಕ್ರೇಜ್!

    ಬಾಲಿವುಡ್ ಚಿತ್ರಗಳನ್ನೂ ಮೀರಿಸಿದ ಕೆಜಿಎಫ್ ಕ್ರೇಜ್!

    ಅಖಂಡ ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿರೋ ಕೆಜಿಎಫ್ ಚಿತ್ರ ಬಿಡುಗಡೆಯ ಹಂತ ತಲುಪಿಕೊಂಡಿದೆ. ಎರಡು ವರ್ಷದ ಸುದೀರ್ಘಾವಧಿಯ ತುಂಬಾ ಈ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸಣ್ಣದೇನಲ್ಲ. ಯಶ್ ಅಭಿನಯದ ಈ ಚಿತ್ರವೀಗ ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಟ್ರೆಂಡ್ ಸೆಟ್ ಮಾಡಿದೆ!

    ಮೋಸ್ಟ್ ಆಂಟಿಸಿಪೇಟೆಡ್ ಗ್ಲೋಬಲ್ ಮೂವೀಸ್ ಮತ್ತು ಟಿವಿ ಟ್ರೆಂಡಿಂಗ್ ಪಟ್ಟಿಯಲ್ಲಿ ಕೆಜಿಎಫ್ ಚಿತ್ರ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಈ ಪಟ್ಟಿಯಲ್ಲಿ ಶಾರೂಖ್ ಖಾನ್ ಅಭಿನಯದ ಝೀರೋ, ರಜನಿಕಾಂತ್ ಚಿತ್ರವೂ ಇದೆ. ಆದರೆ ಅದೆಲ್ಲದಕ್ಕಿಂತ ಯಶ್ ಅಭಿನಯದ ಕೆಜಿಎಫ್ ಚಿತ್ರವೇ ಮುಂಚೂಣಿಯಲ್ಲಿದೆ.

    ಈ ಟ್ರೆಂಡಿಂಗ್ ಇಡೀ ದೇಶದಲ್ಲಿರೋ ಕ್ರೇಜ್ ಅನ್ನು ಅವಲಂಬಿಸಿದೆ ಎಂಬುದು ವಿಶೇಷ. ಅದನ್ನು ಕನ್ನಡ ಚಿತ್ರವೊಂದು ಸರಿಗಟ್ಟಿದೆ ಎಂಬುದೇ ಖುಷಿಯ ವಿಚಾರ. ಈ ಮೂಲಕ ಎಲ್ಲ ಭಾಷೆಗಳ ಚಿತ್ರರಂಗವೂ ಕನ್ನಡದತ್ತ ಹೊರಳಿ ನೋಡುವಂತಾಗಿರೋದಂತೂ ಸತ್ಯ. ಈ ಮೂಲಕ ಕೆಜಿಎಫ್ ದೊಡ್ಡ ಮಟ್ಟದಲ್ಲಿಯೇ ಕಮಾಲ್ ಮಾಡೋ ಸೂಚನೆಗಳೂ ಸ್ಪಷ್ಟವಾಗಿವೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಚಿತ್ರದ ಮತ್ತೋರ್ವ ನಟನ ಫಸ್ಟ್ ಲುಕ್ ರಿವೀಲ್!

    ಕೆಜಿಎಫ್ ಚಿತ್ರದ ಮತ್ತೋರ್ವ ನಟನ ಫಸ್ಟ್ ಲುಕ್ ರಿವೀಲ್!

    ಬೆಂಗಳೂರು: ಕೆಜಿಎಫ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಮೈಲೇಜ್ ಪಡೆದುಕೊಂಡ ಚಿತ್ರವಾಗಿದ್ದು ಇದೀಗ ಚಿತ್ರತಂಡ ಮತ್ತೊಂದು ನಟನ ಲುಕ್ ರಿವೀಲ್ ಮಾಡಿದೆ. ಈ ಮೊದಲು ಕೆಜಿಎಫ್ ಸಿನಿಮಾದ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

    ಕೆಜಿಎಫ್ ಸಿನಿಮಾ ಈಗಾಗಲೇ ದೇಶಾದ್ಯಂತ ತೆರೆ ಕಾಣಲು ಸಜ್ಜಾಗುತ್ತಿದೆ. ಹೀಗಿರುವ ಕೆಜಿಎಫ್ ಚಿತ್ರತಂಡ ಮತ್ತೊಂದು ಲುಕ್ ಅನ್ನು ರಿವೀಲ್ ಮಾಡಿದ್ದು, ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ. ಸುರೇಶ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರ ಲುಕ್ ಅನ್ನು ರಿವೀಲ್ ಮಾಡಿದೆ.

    ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ ಸುರೇಶ್ ಅವರು ರಾಂಕಿಂಗ್ ಸ್ಟಾರ್ ಯಶ್ ಅವರಂತೆ ಕೂಲಿ ಕಾರ್ಮಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರದಲ್ಲಿ ಅವರ ಹೆಸರೇನು? ಹಾಗೂ ಅವರು ಯಾವ ಸೀನ್ ನಲ್ಲಿ ಪ್ರವೇಶಿಸುತ್ತಾರೆ ಎಂಬ ಮಾಹಿತಿಗಳನ್ನು ಚಿತ್ರತಂಡ ತಿಳಿಸಿಲ್ಲ. ಬಿ. ಸುರೇಶ್ ಅವರ ಈ ಲುಕ್ ನಲ್ಲಿ ಅವರು ಕೈಯಲ್ಲಿ ಕೊಡಲಿ ಹಿಡಿದುಕೊಂಡಿರುವ ದೃಶ್ಯ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.

    ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಒಂದು ತಿಂಗಳು ಮುಂದಕ್ಕೆ ಹೋಗಿದ್ದು, ನವೆಂಬರ್ 16 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್ 21 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ಪ್ರಶಾಂತ್ ನೀಲ್, ಡಿಸೆಂಬರ್ ತಿಂಗಳು ಯಶ್ ಅವರಿಗೆ ಲಕ್ಕಿ ತಿಂಗಳಾದ್ದರಿಂದ ಕೆಜಿಎಫ್ ಆ ತಿಂಗಳಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾತ್ರವಲ್ಲದೇ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು.

    ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಡಿಸೆಂಬರ್ 21ಕ್ಕೆ ರಿಲೀಸ್: ಬಿಡುಗಡೆ ತಡವಾಗೋದಕ್ಕೆ ಕಾರಣ ಕೊಟ್ಟ ಚಿತ್ರತಂಡ

    ಕೆಜಿಎಫ್ ಡಿಸೆಂಬರ್ 21ಕ್ಕೆ ರಿಲೀಸ್: ಬಿಡುಗಡೆ ತಡವಾಗೋದಕ್ಕೆ ಕಾರಣ ಕೊಟ್ಟ ಚಿತ್ರತಂಡ

    ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಒಂದು ತಿಂಗಳು ಮುಂದಕ್ಕೆ ಹೋಗಿದ್ದು, ನವೆಂಬರ್ 16 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.

    ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ಪ್ರಶಾಂತ್ ನೀಲ್, ಡಿಸೆಂಬರ್ ತಿಂಗಳು ಯಶ್ ಅವರಿಗೆ ಲಕ್ಕಿ ತಿಂಗಳಾದ್ದರಿಂದ ಕೆಜಿಎಫ್ ಆ ತಿಂಗಳಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾತ್ರವಲ್ಲದೇ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದರು.

    ಪಂಚ ಭಾಷೆಯಲ್ಲಿ ತೆರೆಕಾಣುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸಿದ್ದು, ನಾವು ಅಂದುಕೊಂಡದಕ್ಕಿಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ ಎಂದರು. ಕನ್ನಡ, ತೆಲುಗು, ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮುಗಿದಿದ್ದು, ಸದ್ಯ ಹಿಂದಿ ಡಬ್ಬಿಂಗ್ ನಡೆಯುತ್ತಿದೆ ಎಂದು ತಿಳಿಸಿದರು.

    ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದರು.

    ಚಿತ್ರದ ಕಥೆಯ ಬಗ್ಗೆ ವಿವರಿಸಿದ ನಟ ಯಶ್ ಅವರು, ಕೆಜಿಎಫ್ ಕಥೆ ಯೂನಿವರ್ಸಲ್ ಕಾನ್ಸೆಪ್ಟ್ ಆಗಿದ್ದು, ತಾಯಿ-ಮಗನ ಸೆಂಟಿಮೆಂಟ್ ಇಲ್ಲಿದೆ. ಸಿನಿಮಾದಲ್ಲಿ ಬಹುತೇಕ ಕಲಾವಿದರೆಲ್ಲರೂ ಹೊಸಬರೇ ಆಗಿದ್ದು, ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಇಲ್ಲಿ ನಾನು ಮಾತ್ರ ಹೈಲೆಟ್ ಆಗಿಲ್ಲ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಎಂದು ಹೇಳಿದರು.

    ಅಮಿತಾಬ್ ಬಚ್ಚನ್ ಸಿನಿಮಾ ನೋಡಿಕೊಂಡು ಬೆಳೆದ ನನಗೆ, 80 ರ ದಶಕದ ಸ್ಟೈಲ್‍ನಲ್ಲಿ ಸಿನಿಮಾಗಳನ್ನ ಮಾಡಬೇಕು ಅನ್ನೋ ಆಸೆ ಇತ್ತು. ಆ ಮಹಾಬಯಕೆ ಕೆಜಿಎಫ್ ಮೂಲಕ ನೆರವೇರಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಅಖಾಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್!

    ಕೆಜಿಎಫ್ ಅಖಾಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್!

    -ಡಿಸೆಂಬರ್ ನಲ್ಲಿ ಯಶ್‍ಗೆ ಡಬಲ್ ಧಮಾಕಾ!

    ಬೆಂಗಳೂರು: ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಿಯದ ‘ಕೆಜಿಎಫ್’ ಸಿನಿಮಾ ಅಡ್ಡದಿಂದ ಒಂದು ಬಿಗ್ ಬ್ರೇಕಿಂಗ್ ಬಂದಿದ್ದು, ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೆ ನವೆಂಬರ್  ನಲ್ಲಿ ಕೆಜಿಎಫ್ ತೆರೆಕಾಣುತ್ತಿಲ್ಲ.

    ಒಂದು ತಿಂಗಳ ಹಿಂದೆಯೇ ಕೆಜಿಎಫ್ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿತ್ತು. ಆ ಪ್ರಕಾರ ನವೆಂಬರ್ 16ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ಚಿತ್ರ ತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಒಂದು ತಿಂಗಳ ಮುಂಚೆ ಟ್ರೇಲರ್ ರಿಲೀಸ್ ಮಾಡಿದ ನಂತರದಲ್ಲಿ ಸಿನಿಮಾ ರಿಲೀಸ್ ಮಾಡುವುದು ತಂಡದ ಪ್ಲಾನ್ ಆಗಿತ್ತು. ಆದರೆ ಕೆಜಿಎಫ್ ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ.

    ಏಕಕಾಲದಲ್ಲಿ ಕೆಜಿಎಫ್ ಚಿತ್ರವನ್ನ ಸುಮಾರು ಸಾವಿರಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕಿತ್ತು. ಹಿಂದಿಯಲ್ಲಿ ಈಗಾಗಲೇ ಫರಾನ್ ಅಖ್ತರ್ ರಿಲೀಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಟಿಟೌನ್, ಕೆಟೌನ್‍ನಲ್ಲೂ ಹಂಚಿಕೆ ಹಕ್ಕು ಸೇಲ್ ಆಗಿದೆ. ಹೀಗಿರುವಾಗ ಎಲ್ಲಾ ಕಡೆಯಲ್ಲೂ ಸರಿಯಾದ ಸಮಯ ನೋಡಿಕೊಂಡು ರಿಲೀಸ್ ಮಾಡುವುದು ಚಿತ್ರತಂಡಕ್ಕೆ ಅನಿವಾರ್ಯವಾಗಿತ್ತು.

    ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡುವುದಾಗಿದ್ದರೆ ಮುಂಚೆಯೇ ಹೇಳಿದ್ದ ದಿನಾಂಕಕ್ಕೆ ರಿಲೀಸ್ ಮಾಡಲಾಗುತ್ತಿತ್ತು. ಆದರೆ ಈಗ ಡಿಸೆಂಬರ್ ಮೂರನೇ ವಾರಕ್ಕೆ ಸಿನಿಮಾ ಬಿಡುಗಡೆಯನ್ನು ಪೋಸ್ಟ್ ಪೋನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿಂದೆ ಯಶ್ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಮಾತನಾಡಿಲ್ಲ. ಆದರೆ ಡಿಸೆಂಬರ್ ನಲ್ಲಿ ತಾವು ಅಪ್ಪ ಆಗುತ್ತಿರುವ ಖುಷಿ ವ್ಯಕ್ತಪಡಿಸಿದ್ದರು. ಹೀಗಾಗಿ ಯಶ್ ಜೀವನದ ಅತ್ಯಮೂಲ್ಯ ಘಳಿಗೆ ಅಪ್ಪ ಆಗುತ್ತಿರುವುದು. ಈಗ ಡಿಸೆಂಬರ್ ನಲ್ಲಿಯೇ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಇವೆರಡೂ ಯಶ್ ಸಂಭ್ರಮಕ್ಕೆ ಕಾರಣವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಯಶ್ ಗೆ ಡಬಲ್ ಸಂಭ್ರಮ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv