Tag: ಕೆಜಿಎಫ್

  • ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರದ ಮೂಲಕವೇ ನಿರ್ದೇಶಕರಾಗಿ ಸದ್ದು ಮಾಡಿದವರು ಪ್ರಶಾಂತ್ ನೀಲ್. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿ ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ್ದೀಗ ಇತಿಹಾಸ. ಇಂಥಾ ನೀಲ್ ಇಂದು ಕೆಜಿಎಫ್ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಈ ಹೊತ್ತಿನಲ್ಲಿಯೇ ಕೆಜಿಎಫ್ ನಂತರ ಅವರು ಯಾವ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರದಂಥಾ ಸುದ್ದಿಯೊಂದು ಇದೀಗ ಹರಿದಾಡಲಾರಂಭಿಸಿದೆ!

    ಒಂದು ಮೂಲದ ಪ್ರಕಾರ ಈಗಾಗಲೇ ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಆ ಚಿತ್ರಕ್ಕೆ ಉಗ್ರಂ ವೀರಂ ಎಂಬ ಟೈಟಲ್ಲೂ ಫಿಕ್ಸಾಗಿದೆ ಮತ್ತು ಇದರಲ್ಲಿ ಶ್ರೀಮುರಳಿ ಅವರೇ ನಾಯಕನಾಗಿಯೂ ನಟಿಸಲಿದ್ದಾರೆ!

    ಕೆಜಿಎಫ್ ಚಿತ್ರ ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಿಸಿಕೊಂಡಿತ್ತಲ್ಲಾ? ಆ ಬ್ಯುಸಿಯ ನಡುವೆಯೂ ಪ್ರಶಾಂತ್ ನೀಲ್ ಉಗ್ರಂ ವೀರಂ ಸ್ಕ್ರಿಪ್ಟ್ ವರ್ಕ್ ಮುಗಿಸಿಕೊಂಡಿದ್ದಾರಂತೆ. ಕೆಜಿಎಫ್ ಚಿತ್ರ ತೆರೆ ಕಾಣುತ್ತಲೇ ಈ ಚಿತ್ರದ ಉಳಿದ ಕೆಲಸ ಕಾರ್ಯಗಳಿಗೂ ಚಾಲನೆ ಕೊಡಲಿದ್ದಾರೆ. ಮುಂದಿನ ವರ್ಷದ ಆರಂಭದ ಹೊತ್ತಿಗೆಲ್ಲಾ ಈ ಚಿತ್ರ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಚಿತ್ರದ ‘ಗಲಿ ಗಲಿ’ ಸಾಂಗ್ ರಿಲೀಸ್- ಯಶ್, ಮೌನಿ ಡ್ಯಾನ್ಸ್ ಗೆ ಎಲ್ಲರೂ ಫಿದಾ

    ಕೆಜಿಎಫ್ ಚಿತ್ರದ ‘ಗಲಿ ಗಲಿ’ ಸಾಂಗ್ ರಿಲೀಸ್- ಯಶ್, ಮೌನಿ ಡ್ಯಾನ್ಸ್ ಗೆ ಎಲ್ಲರೂ ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ‘ಕೆಜಿಎಫ್’ ಚಿತ್ರ 5 ಭಾಷೆಯಲ್ಲಿ ರಿಲೀಸ್ ಆಗಲಿದೆ. ಗುರುವಾರ ಹಿಂದಿಯಲ್ಲಿ ಗಲಿ ಗಲಿ ಹಾಡು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಯಶ್, ಮೌನಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ಮೌನಿ ರಾಯ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಬಾರ್ ಸೆಟ್ ನಿರ್ಮಿಸಲಾಗಿದ್ದು, 1989ರಲ್ಲಿ ಬಿಡುಗಡೆಯಾಗಿದ್ದ ‘ತ್ರಿದೇವ್’ ಚಿತ್ರದ ‘ಗಲಿ ಗಲಿ ಮೈ’ ರಿಮಿಕ್ಸ್ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಸಿಡಿಲ ಭರವ ಸುಲ್ತಾನ ಹಾಡು ರಿಲೀಸ್

    1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಹಿಂದಿ ಚಿತ್ರವನ್ನು ನಟ, ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ಹಾಗೂ ರಿತೀಶ್ ಸಿದ್ಧವಾನಿ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ.

    ಕೆಜಿಎಫ್ ಚಿತ್ರ ಡಿ. 21ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಇದೇ ದಿನ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟನೆಯ ‘ಝೀರೋ’ ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ಯಾಸಿಯಾಗೋದಕ್ಕೆ ಮನಸ್ಸು ಮಾಡಿದ್ದರು ರಾಕಿಂಗ್ ಸ್ಟಾರ್..!

    ಸನ್ಯಾಸಿಯಾಗೋದಕ್ಕೆ ಮನಸ್ಸು ಮಾಡಿದ್ದರು ರಾಕಿಂಗ್ ಸ್ಟಾರ್..!

    ಬೆಂಗಳೂರು: ಸ್ಯಾಂಡಲ್‍ವುಡ್ ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಟ ಯಶ್ ಅವರು ಒಂದು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

    ನಟ ಯಶ್, ತಾವು ಸಿನಿಮಾ ಸ್ಟಾರ್ ಆಗದಿದ್ದರೆ ಸನ್ಯಾಸಿಯಾಗುತ್ತಿದ್ದೆ ಎಂದು ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಪ್ರಮೋಶನ್‍ಗಾಗಿ ಯಶ್ ನಾಲ್ಕು ಭಾಷೆಯ ಮಾಧ್ಯಮಗಲ್ಲಿ ಸಂದರ್ಶನ ಕೊಡುತ್ತಿದ್ದಾರೆ. ಆದರೆ ಮಾಧ್ಯಮವೊಂದರಲ್ಲಿ ಜನರು ಪ್ರಶ್ನೆಗಳನ್ನು ಯಶ್ ಮುಂದೆ ಇಟ್ಟಿದ್ದರು.

    ಒಂದು ಪ್ರಶ್ನೆಗೆ ಒಂದೇ ಸಾಲಿನ ಉತ್ತರ ಕೊಡುವುದು ಪದ್ಧತಿಯಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯಶ್ ಅವರಿಗೆ, ನೀವು `ನಟನಾಗದಿದ್ದರೆ ಇನ್ಯಾವ ವೃತ್ತಿ ಮಾಡುತ್ತಿದ್ರಿ’ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟ ಯಶ್ ‘ನಾನು ನಟನಾಗದಿದ್ದರೆ ಸ್ವಾಮೀಜಿಯಾಗುತ್ತಿದ್ದೆ’ ಎಂದು ಉತ್ತರ ಕೊಟ್ಟಿದ್ದಾರೆ. ನಟ ಯಶ್ ಉತ್ತರ ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದು, ಆ ಬಳಿಕ ನಕ್ಕಿದ್ದಾರೆ.

    ಸದ್ಯಕ್ಕೆ ಯಶ್ ಯಾಕೆ ಆ ಉತ್ತರ ಹೇಳಿದ್ರು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ‘ಕೆಜಿಎಫ್’ ಸಿನಿಮಾ ಡಿ.21 ರಂದು ಬಿಡುಗಡೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಜಿಎಫ್ ಸಿಡಿಲ ಭರವ ಸುಲ್ತಾನ ಹಾಡು ರಿಲೀಸ್

    ಕೆಜಿಎಫ್ ಸಿಡಿಲ ಭರವ ಸುಲ್ತಾನ ಹಾಡು ರಿಲೀಸ್

    ಬೆಂಗಳೂರು: ಕೆಜಿಎಫ್ ಚಿತ್ರದ ದರ್ಶನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಇದೇ ಹೊತ್ತಲ್ಲಿ ಸಿನಿರಸಿಕರು ಕಣ್ಣು ಅರಳಿಸಿ ನೋಡುವಂತಹ ರೋಚಕ ಫೋಟೋಗಳಿರುವ ಚಿತ್ರದ `ಸಿಡಿಲ ಭರವ’ ಸುಲ್ತಾನ ಹಾಡು ಬಿಡುಗಡೆಯಾಗಿದೆ.

    ಸಲಾಂ ರಾಕಿ ಭಾಯ್, ಗರ್ಭದಿ ನನ್ನಿರಿಸಿ ಹಾಡುಗಳು ಮೆರವಣಿಗೆ ಹೊರಟಿರುವ ವೇಳೆ ಕೆಜಿಎಫ್ ಚಿತ್ರದ `ಸಿಡಿಲ ಭರವ’ ಹಾಡು ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಮತ್ತೊಂದು ಕೊಡುಗೆ ಸಿಕ್ಕಿದೆ.

    ಕುಸಿದ ಜೀವದ ಉಸಿರ ನೀ ಕಾಯೋ ಸುಲ್ತಾನ ಸಾಲು ಕೇಳುಗರಿಗೆ ಕೆಜಿಎಫ್‍ಗೆ ಚಿತ್ರದ ಹೊಸ ಭಾವನೆ ಮೂಡವಂತೆ ಮಾಡುತ್ತದೆ. ಜನರ ಕಣ್ಣೀರ ದೂರ ಮಾಡುವ ನಾಯಕನಾಗಿ ಯಶ್‍ಗೆ ಸುಲ್ತಾನ ಸ್ಥಾನ ನೀಡಲಾಗಿದೆ.

    ಮೌನ ಕಾಡಿದೆ ಈ ಕ್ಷಣ ಎಂದೆನ್ನುವ ನಾಯಕಿಯ ಚಿತ್ರಗಳಲ್ಲಿ ಪ್ರೀತಿಯ ಹಂಬಲ, ಕ್ಷಣ ಮಾತ್ರದಲ್ಲಿ ಮತ್ತೊಮ್ಮೆ ಬದಲಾಗುವ ಲುಕ್ ಚಿತ್ರದ ಒಳಾರ್ಥ ಬಗ್ಗೆ ಕುತೂಹಲ ಮೂಡಿಸುತ್ತದೆ. ಅನನ್ಯ ಭಟ್, ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಪುನೀತ್, ಶ್ರೀನಿವಾಸ್ ಮೂರ್ತಿ, ವಿಜಯ್ ಅರುಸ್ ಈ ಹಾಡನ್ನು ಹಾಡಿದ್ದಾರೆ. ರವಿ ಬಸ್ರೂರ್ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ.

    ಕೆಜಿಎಫ್ ಅಖಾಡದಿಂದ ತೂರಿಬರುತ್ತಿರುವ ಒಂದೊಂದು ದೃಶ್ಯಕ್ಕೂ ಸಿನಿಪ್ರಿಯರು ಬಂಪರ್ ರೆಸ್ಪಾನ್ಸ್ ನೀಡುತ್ತಿದ್ದು, 3ನೇ ಲಿರಿಕಲ್ ಹಾಡು ಬಿಡುಗಡೆಯಾದ 1 ಗಂಟೆಯಲ್ಲಿ 1.50 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

    ಕೆಜಿಎಫ್ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಮೆರವಣಿಗೆಗೆ ಚಿತ್ರದ `ಸಿಡಿಲ ಭರವ’ ಮತ್ತಷ್ಟು ಮೆರಗು ನೀಡಿದ್ದು, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಇದೇ ತಿಂಗಳ 21 ರಂದು ಸಿನಿಮಾ ಚಿತ್ರ ಮಂದಿರಗಳಿಗೆ ಬರುತ್ತಿದ್ದು, ನಾಳೆ ಮತ್ತೊಂದು ಬಹು ನಿರೀಕ್ಷಿತ ಹಾಡು ‘ಗಲಿ ಗಲಿಮೇ..’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಹಾಡಿಗೆ ಯಶ್ ಜೊತೆ ಬಾಲಿವುಡ್ ನಟಿ ಮೌನಿ ರಾಯ್ ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್ ಮಾಡಿದ್ದ ಸಹಾಯಕ್ಕೆ ಕೆಜಿಎಫ್ ಬೆನ್ನಿಗೆ ನಿಂತ ನಟ ವಿಶಾಲ್!

    ಯಶ್ ಮಾಡಿದ್ದ ಸಹಾಯಕ್ಕೆ ಕೆಜಿಎಫ್ ಬೆನ್ನಿಗೆ ನಿಂತ ನಟ ವಿಶಾಲ್!

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಂಕಿಂಗ್ ಸ್ಟಾರ್ ಯಶ್ ಸಹಾಯದ ಋಣವನ್ನು ಕಾಲಿವುಡ್ ನಟ ವಿಶಾಲ್ ‘ಕೆಜಿಎಫ್’ ಚಿತ್ರದ ಮೂಲಕ ತೀರಿಸುತ್ತಿದ್ದಾರೆ.

    2015ರಲ್ಲಿ ಜಲಪ್ರಳಯ ಸಂಭವಿಸಿದ ಪರಿಣಾಮ ಮಹಾನಗರಿ ಚೆನ್ನೈ ನೀರಿನಲ್ಲಿ ಮುಳುಗಿಹೋಗಿತ್ತು. ಆಗ ಜನರಿಗೆ ತಿನ್ನಲು ಆಹಾರವಿಲ್ಲದೇ, ಧರಿಸಲು ಬಟ್ಟೆಯಿಲ್ಲದೇ ಬೀದಿಗೆ ಬಂದಿದ್ದರು. ಇಂತಹ ಸಂದರ್ಭದಲ್ಲಿ ಯಶ್ ಚೆನ್ನೈ ಜನತೆಯ ಸಹಾಯಕ್ಕೆ ನಿಂತಿದ್ದರು. ಚೆನ್ನೈನಲ್ಲಿ ಪ್ರಳಯವಾದಾಗ ಜನರಿಗೆ ಸಹಾಯ ಬೇಕು ಎಂದು ಕೇಳಿದ್ದೆ. ಆಗ ನಟ ಯಶ್ ಒಂದು ಟ್ರಕ್ ಕಳುಹಿಸಿದ್ದರು. ಅದು ಕರ್ನಾಟಕದಿಂದ ಬಂದ ಮೊದಲ ಟ್ರಕ್ ಆಗಿತ್ತು. ನಾನು ಫೋನ್ ಮಾಡಿದ 12 ಗಂಟೆಗಳಲ್ಲಿ ಅಲ್ಲಿಂದ ಟ್ರಕ್ ಬಂದಿದ್ದು, ಅದನ್ನ ನಾವು ಚೆನ್ನೈನ ಹಲವು ಭಾಗಗಳಲ್ಲಿ ಹಂಚಿದೆವು ಎಂದು ವಿಶಾಲ್ ಹೇಳಿದ್ದಾರೆ.

    ಯಶ್ ಅವರು ಅಂದು ಮಾಡಿದ ಸಹಾಯವನ್ನು ನಾನು ಇವತ್ತಿಗೂ ಮರೆತಿಲ್ಲ. ಆದ್ದರಿಂದ ಅವರ ಋಣವನ್ನು ತೀರಿಸಬೇಕು ಎಂದುಕೊಂಡಿದ್ದೆ. ಆ ಅವಕಾಶ ಈಗ ಬಂದಿದ್ದು, ‘ಕೆಜಿಎಫ್’ ಸಿನಿಮಾವನ್ನು ನಾವು ಬಿಡುಗಡೆ ಮಾಡಿ ಯಶಸ್ಸು ನೀಡಬೇಕು ಅಂತ ತೀರ್ಮಾನಿಸಿದೆ ಎಂದು ನಟ ವಿಶಾಲ್ ಅವರು ಯಶ್ ಮಾಡಿದ್ದ ಸಹಾಯವನ್ನು ಹಂಚಿಕೊಂಡಿದ್ದಾರೆ.

    ನಟ ಯಶ್ ಮತ್ತು ವಿಶಾಲ್ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದು, ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ ಹೊರಗಡೆಯೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ನಾನು ಹಣಕ್ಕಾಗಿ ‘ಕೆಜಿಎಫ್’ ಸಿನಿಮಾವನ್ನು ತಮಿಳಿನಲ್ಲಿ ವಿತರಣೆ ಮಾಡುತ್ತಿಲ್ಲ. ನನ್ನ ಸ್ನೇಹಿತ ಹಾಗೂ ಅವರು ನಮಗಾಗಿ ಮಾಡಿದ್ದ ಸಹಾಯಕ್ಕಾಗಿ ಮಾಡುತ್ತಿದ್ದೇನೆ ಎಂದು ವಿಶಾಲ್ ಸಂತಸದಿಂದ ಯಶ್ ಅವರ ‘ಯಶೋಮಾರ್ಗ’ದ ಬಗ್ಗೆಯೂ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

    ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

    -ತೆಲುಗಿನಲ್ಲಿ ಮಾತಾಡಿದ್ದು ಯಾಕೆ? ವೇದಿಕೆಯಲ್ಲೇ ರಾಕಿ ಸ್ಪಷ್ಟನೆ

    ಹೈದರಾಬಾದ್: ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರದ ಕಾರ್ಯಕ್ರಮದಲ್ಲಿ ನಟ ಯಶ್ ಅಲ್ಲಿಯ ಅಭಿಮಾನಿಗಳಿಗಾಗಿ ತೆಲುಗು ಭಾಷೆಯಲ್ಲಿ ಮಾತನಾಡುವ ಮೂಲಕ ಖುಷಿ ನೀಡಿದರು. ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ಯಶ್, ನನಗೆ ಅಷ್ಟಾಗಿ ತೆಲುಗು ಭಾಷೆಯ ಮೇಲೆ ಹಿಡಿತವಿಲ್ಲ. ಆದ್ರೂ ನಿಮಗೆಲ್ಲರಿಗಾಗಿ ನಿಧಾನವಾದ್ರೂ ನಿಮ್ಮ ಮಾತೃ ಭಾಷೆಯಲ್ಲಿ ಮಾತನಾಡುತ್ತೇನೆ. ಪದಗಳ ಬಳಕೆಯಲ್ಲಿ ಮಿಸ್ಟೇಕ್ ಆದ್ರೆ ಕ್ಷಮಿಸಿ ಅಂತಾ ಹೇಳಿದ್ರು.

    ನೀನು ಎಲ್ಲಿ ಹೋಗ್ತಿಯಾ? ಅಲ್ಲಿಯ ಭಾಷೆಗೆ, ಸಂಸ್ಕೃತಿಗೆ ಗೌರವ ನೀಡಬೇಕು. ಯಾಕೆಂದರೆ ಅಲ್ಲಿಯ ಜನರು ನಮ್ಮಲ್ಲಿ ತಮ್ಮತನವನ್ನು ನೋಡುತ್ತಾರೆ. ಕರ್ನಾಟಕದಲ್ಲಿಯೂ ನಮ್ಮ ಕಲಾವಿದರು ಕನ್ನಡ ಮಾತನಾಡಲಿ ಎಂದು ಕರುನಾಡ ಜನರು ಆಸೆ ಪಡುತ್ತಾರೆ. ಹಾಗೆಯೇ ನಿಮಗೂ ಹೊಸ ನಟ ನಮ್ಮ ಮಾತೃ ಭಾಷೆ ಬಳಸಲಿ ಎಂಬ ಭಾವನೆ ಇರುತ್ತೆ. ಹಾಗಾಗಿ ನಾನಿಂದು ನಿಮಗಾಗಿ ನಿಮ್ಮ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಯಶ್ ತಿಳಿಸಿದರು.

    ಕೆಜಿಎಫ್ ಚಿತ್ರ ನನ್ನಿಂದ ಮಾತ್ರ ಆಗಲ್ಲ. ತೆರೆಯ ಹಿಂದೆ ಹಲವರು ಕೆಲಸ ಮಾಡಿದ್ದು, ಇಡೀ ತಂತ್ರಜ್ಞರ ಶ್ರಮ ಕೆಜಿಎಫ್ ಚಿತ್ರದಲ್ಲಿದೆ. 12 ವರ್ಷಗಳ ಹಿಂದೆ ಶೋಭು ಸರ್ ಧಾರಾವಾಹಿಯಲ್ಲಿ ನಟಿಸಿದ್ದೇನೆ. ನಮ್ಮ ಚಿತ್ರದ ಬಿಡುಗಡೆಗೆ ಶೋಭು ಸರ್, ಸಾಯಿ ಸರ್ ಮತ್ತು ರಾಜಮೌಳಿ ಸರ್ ತುಂಬಾನೇ ಸಹಾಯ ಮಾಡಿದ್ದಾರೆ. ತೆಲುಗು, ತಮಿಳು, ಮಲೆಯಾಳ, ಕನ್ನಡ, ಹಿಂದಿ ಇಂಡಸ್ಟ್ರಿ ಅಂತಾ ಯಾವುದು ಬೇರೆ ಅಲ್ಲ. ಎಲ್ಲವೂ ಭಾರತದ ಸಿನಿಮಾಗಳು. ನಮ್ಮಲ್ಲಿ ಅವರ ಚಿತ್ರಗಳಿಗೆ ನಾವು ಸಹಾಯ ಮಾಡೋದು, ನಮ್ಮ ಸಿನಿಮಾಗಳಿಗೆ ನಾವು ಸಹಾಯ ಮಾಡುತ್ತೇವೆ. ಹೀಗೆ ಎಲ್ಲರಲ್ಲಿ ಹೊಂದಾಣಿಕೆ ಬಂದಾಗ ಎಲ್ಲ ಸಿನಿಮಾಗಳಿಗೆ ಮಾರುಕಟ್ಟೆ ಲಭ್ಯವಾಗುತ್ತದೆ ಎಂದು ಯಶ್ ಆಶಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್‍ಗಿಂತ ದೊಡ್ಡ ಹೀರೋ ಅವರ ತಂದೆ: ರಾಜಮೌಳಿ

    ಯಶ್‍ಗಿಂತ ದೊಡ್ಡ ಹೀರೋ ಅವರ ತಂದೆ: ರಾಜಮೌಳಿ

    -ಕೆಜಿಎಫ್ ಚಿತ್ರದ ವಿಡಿಯೋ ನೋಡಿದ ಅನುಭವ ಹಂಚಿಕೊಂಡ ಬಾಹುಬಲಿಗಾರು

    ಹೈದರಾಬಾದ್: ನಾಲ್ಕೈದು ವರ್ಷಗಳ ಹಿಂದೆ ಸಾಯಿಗಾರು ಅವರ ಹತ್ತಿರ ಮಾತನಾಡುತ್ತಿರುವಾಗ ಕನ್ನಡದಲ್ಲಿ ಪ್ರಚಲಿತನಾಗಿರುವ ನಟ ಯಾರು ಅಂತಾ ಕೇಳಿದಾಗ ಯಶ್ ಅಂದ್ರು. ಆ ವೇಳೆ ನನಗೆ ಯಶ್ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಯಾರು ಯಶ್, ಬ್ಯಾಗ್ರೌಂಡ್ ಏನು ಅಂತಾ ಮರುಪ್ರಶ್ನೆ ಮಾಡಿದೆ. ಯಶ್ ಓರ್ವ ಬಿಎಂಟಿಸಿ ಚಾಲಕನ ಪುತ್ರನಾಗಿದ್ದು, ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ಮಗ ಸೂಪರ್ ಸ್ಟಾರ್ ಆದ್ರು ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಕೇಳಿದಾಗ ಯಶ್ ಗಿಂತ ಅವರ ತಂದೆಯೇ ದೊಡ್ಡ ಹೀರೋ ಎಂದು ನನಗೆ ಅನ್ನಿಸುತ್ತದೆ ಅಂತ ರಾಜಮೌಳಿ ಹೇಳಿದರು.

    ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದ ಏಪ್ರಿಲ್ ನಲ್ಲಿ ನನ್ನ ಸಿನಿಮಾದ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದೆ. ಈ ವೇಳೆ ತಾಜ್ ವೆಸ್ಟ್ ಹೋಟೆಲ್ ನಲ್ಲಿ ಉಳಿದುಕೊಂಡಾಗ ಯಶ್ ಸಹ ಅಲ್ಲಿದ್ದರು. ನನ್ನನ್ನು ಭೇಟಿಯಾದ ಯಶ್ ಮತ್ತು ಚಿತ್ರತಂಡ, ಕೆಜಿಎಫ್ ಚಿತ್ರದ ಟೀಸರ್ ಸೇರಿದಂತೆ ಕೆಲವು ದೃಶ್ಯಗಳನ್ನು ತೋರಿಸಿದರು. ಚಿತ್ರದ ದೃಶ್ಯ ನೋಡಿದಾಗ ನನಗೆ ನಿಜವಾಗಲು ಶಾಕ್ ಆಗಿತ್ತು. ದೃಶ್ಯಗಳ ಗುಣಮಟ್ಟ, ಎಫೆಕ್ಸ್ ಎಲ್ಲವು ಪರಿಪೂರ್ಣತೆಯಿಂದ ಕೂಡಿತ್ತು. ಮುಖ್ಯವಾಗಿ ಚಿತ್ರದ ದೃಶ್ಯಗಳ ಒರಿಜಿನಾಲಿಟಿ ನನಗೆ ಇಷ್ಟವಾಯಿತು. ದೊಡ್ಡ ಸಿನಿಮಾ ಅಂತಾ ಹೇಳಿಕೊಳ್ಳುವವರು, ಬೇರೆ ಸಿನಿಮಾಗಳಿಂದ ದೃಶ್ಯಗಳಂತೆ ನಮ್ಮಲ್ಲಿ ತೋರಿಸ್ತಾರೆ. ಕೆಜಿಎಫ್ ಚಿತ್ರದ ಪ್ರತಿಯೊಂದು ದೃಶ್ಯಗಳಲ್ಲಿ ಹೊಸತನವಿದೆ. ಇದು ಮೂರು ವರ್ಷದ ಪರಿಶ್ರಮ, ಹಾಗಾಗಿ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ ಅಂತಾ ಅಂದ್ರು.

    ನಾನು ಕೂಡಲೇ ಮುಂಬೈನಲ್ಲಿರುವ ಅನಿಲ್ ತಡಾನಿ ಫೋನ್ ಮಾಡಿ ಕನ್ನಡದಲ್ಲೊಂದು ಹೊಸತನದ ವಿಭಿನ್ನ ಸಿನಿಮಾ ಸಿದ್ಧವಾಗುತ್ತಿದೆ. ಯಶ್ ಎಂಬವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದು, ನನಗೆ ತುಂಬಾನೇ ಇಷ್ಟವಾಗಿದೆ. ನೀವು ಒಂದು ಸಾರಿ ಸಿನಿಮಾದ ಕ್ಲಿಪ್ಸ್ ನೋಡಿ ಏನಾದ್ರು ಮಾಡುವುದಕ್ಕೆ ಸಾಧ್ಯವಾಗುತ್ತಾ ಅಂತ ಕೇಳಿದೆ. ಚಿತ್ರದ ದೃಶ್ಯ ನೋಡಿದ ಖುಷಿಗೆ ಅಂದು ನನ್ನ ಆಪ್ತರೆಲ್ಲರಿಗೂ ಕನ್ನಡದಲ್ಲೊಂದು ಸೂಪರ್ ಸಿನಿಮಾ ಬರುತ್ತಿದೆ ಅಂತಾ ಹೇಳಿದೆ.

    ದೃಶ್ಯಗಳಲ್ಲಿ ಕೇವಲ ಯಶ್ ಮಾತ್ರ ಕಾಣಲ್ಲ. ಚಿತ್ರದ ಹಿಂದೆ ಕೆಲಸ ಮಾಡಿದ ಪ್ರತಿ ತಂತ್ರಜ್ಞರ ಕ್ಷಮತೆ ನನಗೆ ಕಾಣುತ್ತಿತ್ತು. ಚಿತ್ರತಂಡದಲ್ಲಿ ಕೆಲಸ ಮಾಡಿದ ತಂತ್ರಜ್ಞರ ಪರಿಚಯ ನನಗಿಲ್ಲ. ಆದ್ರೆ ಸಿನಿಮಾದಲ್ಲಿ ಅವರ ಅಚ್ಚುಕಟ್ಟಿನ ಕೆಲಸದಲ್ಲಿ ಕಾಣುತ್ತಾರೆ. ಕೆಜಿಎಫ್ ಎಂಬ ಉತ್ಪನ್ನ ಹೊರಬರಲು ಪ್ರತಿಯೊಬ್ಬರ ಕಠಿಣ ಪರಿಶ್ರಮ ಅಡಕವಾಗಿದೆ. ತೆಲುಗು ಜನರು ಸಿನಿಮಾ ಮಾಡಿದ್ದು ಯಾರು? ಯಾವ ಭಾಷೆ? ಅಂತಾ ನೋಡಲ್ಲ. ಚಿತ್ರದ ಗುಣಮಟ್ಟ ಕಥೆಯನ್ನು ನೋಡುತ್ತಾರೆ. ತೆಲುಗು ಮಾತ್ರವಲ್ಲದೇ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಅಂತೆಯೇ ಕೆಜಿಎಫ್ ಸಿನಿಮಾ ನೋಡಿ ಅಂತ ರಾಜಮೌಳಿ ಜನರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

    ‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ.

    ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು ಮತ್ತೊಮ್ಮೆ ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಕಿನ್ನಾಳ್ ರಾಜ್, ಬಸ್ರೂರ್ ಬರೆದಿರುವ ಹಾಡಿನ ಸಾಹಿತ್ಯ ಕ್ಷಣ ಮಾತ್ರದಲ್ಲಿ ಕೇಳುಗರ ಹೃದಯ ತಲುಪುತ್ತದೆ. ಹಡೆದ್ವನನ್ನ ನೆನೆದು ಕ್ಷಣ ಮಾತ್ರದಲ್ಲಿ ನೆನೆದು ಕಣ್ಣಂಚು ಒದ್ದೆಯಾಗುತ್ತದೆ.

    ಹಾಡಿಗೆ ಆನನ್ಯ ಭಟ್ ಅವರ ಕಂಠ ಸಿರಿ ಮತ್ತೊಂದು ಮೆರಗು ನೀಡಿದ್ದು, ಹಾಡಿನ ಸಂಗೀತ ಪ್ರತಿಯೊಬ್ಬರನ್ನು ಭಾವುಕರನ್ನಾಗಿಸುತ್ತದೆ. `ಕಾಣದ ದೇವರನ್ನು ನಿನ್ನಲಿ ಕಾಣಿರುವೆ, ನಿನ್ನಲಿ ಕಂಡಿರುವೆ ನೀನೇ ಭರವಸೆಯೂ ನಾಳೆಗೆ’ ಎಂಬ ಸಾಲು ಅಮ್ಮನ ಬಗ್ಗೆ ಮಗನ ಪ್ರೀತಿಯನ್ನು ತೆರೆದಿಡುತ್ತದೆ. ಅಪ್ಪಟ ಕನ್ನಡ ಪದಗಳು ಕೇಳುಗರ ಮನಸ್ಸಿಗೆ ಮುದ ನೀಡಿವೆ. ಹಾಡು ಕೇಳಿದ ಸಿನಿರಸಿಕರು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಸಲಾಂ ಹೇಳುತ್ತಿದ್ದು, ಚಿತ್ರದಲ್ಲಿ ತಾಯಿಗೆ ಸಾಂಗ್ ನೀಡಿರುವುದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಇದು ಬರೀ ಹಾಡಲ್ಲ ಎಲ್ಲಾ ಮಕ್ಕಳ ತಾಯಿ ಮಕ್ಕಳ ಸಂಬಂಧವನ್ನು ಹೇಳುವ ವಾತ್ಸಲ್ಯದ ಹಾಡು. ವರ್ಷಾಂತ್ಯದಲ್ಲಿ ಹಾಡು ಬಿಡುಗಡೆಯಾದರೂ ಈ ವರ್ಷ ತಾಯಿಯ ಪ್ರೀತಿಗೆ ಸಂಬಂಧಿಸಿದ ನಂಬರ್ ಒನ್ ಹಾಡು ಎಂದು ಅಭಿಮಾನಿಗಳು ಈಗ ಹೇಳುತ್ತಿದ್ದಾರೆ.

    ಸಿನಿಮಾ ಹೈಲೆಟ್ ಏನು?
    ಕೆಜಿಎಫ್ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗುತ್ತಿದಂತೆ ಚಿತ್ರತಂಡ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. ಕೆಜಿಎಫ್ ಸಿನಿಮಾ ಬಿಡುಗಡೆ ಗಳಿಗೆಯಲ್ಲೇ ಇದೊಂದು ಮೈನಿಂಗ್ ಸುತ್ತ ಇರುವ ಕಥೆ ಎಂದು ಊಹಿಸಿದ್ದ ಮಂದಿಗೆ ಚಿತ್ರದ ಟೀಸರ್ ಇದು ಬರಿ ಮೈನಿಂಗ್ ಕಥೆಯಲ್ಲ, ಬದಲಾಗಿ ತಾಯಿ-ಮಗನ ಸೆಂಟಿಮೆಂಟ್ ಇದೆ ಎಂದು ತಿಳಿಸಿದೆ. ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ಬಗೆದಷ್ಟು ಚಿನ್ನ ಸಿಕ್ಕಂತೆ ಕೆಜಿಎಫ್ ಚಿತ್ರದ ತಂಡ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ಚಿತ್ರ ಕನ್ನಡಿಗರ ಹೆಮ್ಮೆಯಾಗಿದ್ದು, ಚಿತ್ರತಂಡ ಎಷ್ಟು ಪರಿಶ್ರಮ ಪಟ್ಟಿದೆ ಎನ್ನುವುದು ತಿಳಿಯುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಕೆಜಿಎಫ್ ಅಖಾಡದಿಂದ ತೂರಿಬರುತ್ತಿರುವ ಒಂದೊಂದು ದೃಶ್ಯಕ್ಕೂ ಸಿನಿಪ್ರಿಯರು ಬಂಪರ್ ರೆಸ್ಪಾನ್ಸ್ ನೀಡುತ್ತಿದ್ದು, ಲಿರಿಕಲ್ ಹಾಡು ಬಿಡುಗಡೆಯಾದ 1 ಗಂಟೆಯಲ್ಲಿ 2 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿಗಾಗಿ ಪವರ್ ಹುಡುಕಿ ಹೊರಟ ರಾಕಿಗೆ ಇವರೆಲ್ಲಾ ಸಾಥ್ ನೀಡಿದ್ರು

    ತಾಯಿಗಾಗಿ ಪವರ್ ಹುಡುಕಿ ಹೊರಟ ರಾಕಿಗೆ ಇವರೆಲ್ಲಾ ಸಾಥ್ ನೀಡಿದ್ರು

    – ಇದು ಕೆಜಿಎಫ್ ಟು ಬಾಂಬೆ ಜರ್ನಿ

    ಬೆಂಗಳೂರು: ಒಂದು ಸಿನಿಮಾ ಹಿಟ್ ಆಗಬೇಕೆಂದ್ರೆ ಅದಕ್ಕೆ ತೆರೆಯ ಮೇಲೆ ಮತ್ತು ಹಿಂದಿನ ಕೈಗಳ ಪರಿಶ್ರಮ ಇರುತ್ತದೆ. ಅಂತೆಯೇ ಒಂದು ಸಿನಿಮಾ ಜನಮನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿರಲು ಅದು ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತೆ. ಕನ್ನಡದ ಎವರ್ ಗ್ರೀನ್ ಸಿನಿಮಾಗಳಾದ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳನ್ನು ಜನ ಇಂದಿಗೂ ನೋಡುತ್ತ ಕುಳಿತವರು ಅತ್ತಿತ್ತ ಕದಡಲ್ಲ. ಕಾರಣ ಕಥೆಯ ಹಿಡಿತ, ಕಲಾವಿದರ ನಟನೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲ ಅಂಶಗಳು ಅಲ್ಲಿ ಮುಖ್ಯವಾಗಿರುತ್ತವೆ.

    ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಬಿಡುಗಡೆ ಮುನ್ನವೇ ಕೆಜಿಎಫ್ ಎಂಬ ಮಿಂಚಿನ ಬೆಳಕು ಕನ್ನಡದ ಗಡಿದಾಟಿ ಎಲ್ಲಡೆ ಪಸರಿಸುತ್ತಿದೆ. ಕೋಲಾರದ ಚಿನ್ನದ ಗಣಿಯಲ್ಲಿ ಆರಂಭವಾಗುವ ಕಥೆ ಅಲ್ಲಿಯೇ ಅಂತ್ಯವಾಗಲಿದೆ. ಈ ಆದಿ ಮತ್ತು ಅಂತ್ಯಗಳ ನಡುವಿನ ಕಥೆಯೇ ಕೆಜಿಎಫ್. ಕೆಜಿಎಫ್ ಸಿನಿಮಾ ಸೆಟ್ಟೇರಿದಾಗ ಯಶ್ ನಟನೆ ಉಳಿದ ಚಿತ್ರಗಳಂತೆ ಇದು ಇರಬಹುದು ಎಂದು ಹಲವರು ಲೆಕ್ಕಾಚಾರ ಹಾಕಿದ್ದುಂಟು. ಈ ಹಿಂದೆ ಯಶ್ ಹೆಚ್ಚಾಗಿ ಲವರ್ ಬಾಯ್ ಪಾತ್ರ ಮತ್ತು ಮಂಡ್ಯದ ಪಡ್ಡೆ ಹುಡುಗನ ಗೆಟಪ್ ನಲ್ಲಿ ಅಭಿಮಾನಿಗಳನ್ನು ಅಕರ್ಷಿಸಿದ್ದುಂಟು. ಮೊಗ್ಗಿನ ಮನಸ್ಸಿನಿಂದ ಅರಂಭವಾದ ಯಶ್ ಪಯಣ ಕೆಜಿಎಫ್ ನಿಲ್ದಾಣದಲ್ಲಿದೆ.

    ಮೊಗ್ಗಿನ ಮನಸ್ಸಿನ ಚೆಲುವನಾಗಿ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಯಶ್, ಇಂದು ರಣ ರಣ ಲುಕ್ ನಲ್ಲಿ ಜನರ ಮುಂದಿದ್ದಾರೆ. ಅಂದಿಗೂ-ಇಂದಿಗೂ ಹಲವು ಏಳು ಬೀಳುಗಳನ್ನು ಕಂಡಿರುವ ಯಶ್ ಹೊಸ ದಾಖಲೆಯ ಬರೆಯುವ ಹುಮ್ಮಸ್ಸಿನಲ್ಲಿರೋದಂತು ಸತ್ಯ. ಚಿತ್ರತಂಡ ಆರಂಭದಿಂದಲೂ ಇದೊಂದು ಭಿನ್ನ ಸಿನಿಮಾ ಅಂತಾನೇ ಹೇಳುತ್ತಾ ಬರುತ್ತಿತ್ತು. ಅಂದು ಚಿತ್ರತಂಡ ಹೇಳಿದ ಮಾತು ಸತ್ಯ ಎಂಬುವುದು ಹಲವರಿಗೆ ಇಂದು ಮನವರಿಕೆ ಆಗಿದ್ದಂತು ನಿಜ. ಈ ಹಿಂದೆ ಬೇರೆ ಭಾಷೆಯ ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡುವಾಗ ಕನ್ನಡದ ಪತ್ರಕರ್ತರು ಆಯಾ ಸ್ಥಳಕ್ಕೆ ಅಂದ್ರೆ ಚೆನ್ನೈ, ಹೈದರಾಬಾದ್, ಮುಂಬೈ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬೇರೆ ಭಾಷೆಯ ಪತ್ರಕರ್ತರು ಬಂದಿರೋದು ಈ ಚಿತ್ರದ ಮತ್ತೊಂದು ವಿಶೇಷ.

    ಮೊದಲ ಗೆಲುವು:
    ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಮೊದಲ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನ ಅಭಿಮಾನಿಗಳ ಹರ್ಷ ಇಮ್ಮಡಿಗೊಂಡ ದಿನ. ಒಂದು ವರ್ಷದಿಂದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಯಶ್ ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತೆ ಹೊರತು ಒಂದೇ ಒಂದು ವಿಡಿಯೋ ಹೊರ ಬಂದಿರಲಿಲ್ಲ. 2018 ಜನವರಿ 8ರಂದು ಯಶ್ ಅವರಿಗೆ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಕೆಜಿಎಫ್ ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್ ನಲ್ಲಿಯೂ ಚಿತ್ರತಂಡ ತನ್ನ ವಿಶೇಷತೆಯನ್ನು ತೋರಿಸಿತ್ತು. ಸಿನಿಮಾದ ದೃಶ್ಯಗಳ ಜೊತೆಗೆ ಮೇಕಿಂಗ್ ನ ಕೆಲ ತುಣುಕುಗಳನ್ನು ಸೇರಿಸಿ ಟೀಸರ್ ರೂಪದಲ್ಲಿ ಹೊರತರಲಾಗಿತ್ತು. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿ ಬಂದಿತ್ತು.

    ಕನ್ನಡದ ನಟನ ಸಿನಿಮಾದ ಟೀಸರ್ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. ಕೆಜಿಎಫ್ ಟೀಸರ್ ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ತನ್ನ ಮೊದಲ ಹೆಜ್ಜೆಯ ಗುರುತು ಮೂಡಿಸಿತ್ತು. ಆ ಟೀಸರ್ ಕಾಲಿವುಡ್ ಅಣ್ತಾಮ್ಮದಿಂರನ್ನು ಆಕರ್ಷಿಸಿತ್ತು. ತಮಿಳುನಾಡಿನ ಅಭಿಮಾನಿಗಳು ಯಶ್ ಕಟೌಟ್ ಹಾಕಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅದುವೇ ಕೆಜಿಎಫ್ ಚಿತ್ರದ ಮೊದಲ ಗೆಲುವು.

    ಟೀಸರ್ ಬಿಡುಗಡೆ ಬಳಿಕ ಸುಮಾರು 6ರಿಂದ 7 ತಿಂಗಳು ಕೆಜಿಎಫ್ ಸದ್ದಿಲ್ಲದೇ ಯಶಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಈ ಮಧ್ಯೆ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎಂಬ ವಿಷಯ ಹೊರ ಬಂತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಚಿತ್ರ ನವೆಂಬರ್ ತಿಂಗಳಲ್ಲಿ ಹೊರ ತರಲು ಸಿದ್ಧತೆ ನಡೆಸಲಾಗುತ್ತಿದೆ ಅಂತಾ ಹೇಳುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅದ್ರೆ ಪೋಸ್ಟ್ ಪ್ರೊಡೆಕ್ಷನ್ ಕೆಲಸ ತಡವಾದ್ದರಿಂದ ಚಿತ್ರತಂಡ ಅಧಿಕೃತವಾಗಿ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿತು.

    ರಾಕಿಂಗ್ ಸಾಥ್:
    ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದಾಗ ಕೆಜಿಎಫ್ ಗೆ ಸಾಥ್ ನೀಡಿದ್ದು, ತಮಿಳು ನಟ ವಿಶಾಲ್, ಬಾಲಿವುಡ್ ನಟ ಫರ್ಹಾನ್ ಅಖ್ತರ್, ಹೊಂಬಾಳೆ ಫಿಲ್ಮ್ಸ್, ಲಹರಿ ಮ್ಯೂಸಿಕ್ ಸಂಸ್ಥೆ ಮತ್ತು ಎಕ್ಸೆಲ್ ಮೂವೀಸ್ ಸೇರಿದಂತೆ ಎಲ್ಲ ಭಾಷೆಯ ನಿರ್ಮಾಪಕರು ಕೆಜಿಎಫ್ ಖರೀದಿಗೆ ಮುಂದಾದರು. ಹೀಗೆ ಎಲ್ಲ ಭಾಷೆಯಲ್ಲಿ ಬಲಾಡ್ಯ ಸಂಸ್ಥೆಗಳೇ ಕೆಜಿಎಫ್ ಬೆನ್ನಿಗೆ ನಿಂತಿವೆ.

    ನವೆಂಬರ್ 11ರಂದು ಬಿಡುಗಡೆಯಾದ ಟ್ರೇಲರ್ ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಸಾರಿ ಹೇಳಿತ್ತು. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಂಡಿತ್ತು. ಇನ್ನು ಟ್ರೇಲರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿತ್ತು.

    1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತದೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.

    ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ನಿರ್ದೇಶಕ ಪ್ರಶಾಂತ್ ನೀಲ್ ಮನದಾಳದ ಮಾತು:
    ತಾಯಿ ಮತ್ತು ಒಂದು ಮಗುವಿನ ಬಾಂಧವ್ಯವನ್ನ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ಮತ್ತು ಟೀಸರ್ ನೋಡಿದವರು 70ರ ದಶಕದ ಅಂತಾನೇ ತಿಳಿದಿರ್ತಾರೆ. ಆದ್ರೆ ತಾಯಿ ಮತ್ತು ಮಗನ ಸೆಂಟೆಮೆಂಟ್ ನಮ್ಮ ಚಿತ್ರದ ಮೂಲ ಕಥೆ. 1970ರ ದಶಕವನ್ನ ಚಿತ್ರಕ್ಕಾಗಿ ಪುನರ್ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಅಂದಿನ ಉಡುಪು, ಮಾತಿನ ಶೈಲಿ, ಜೀವನ ಕ್ರಮ, ಸ್ಥಳ ಆಯ್ಕೆಯ ಬಗ್ಗೆ ರಿಸರ್ಚ್ ಮಾಡಲು ನಮ್ಮ ತಂಡ ಎರಡು ವರ್ಷ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಅಂಶವನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲಾಯಿತು. ಫೋಟೋ ಶೂಟ್, ಸ್ಕೆಚ್ ಮಾಡಿ ಎಲ್ಲವನ್ನು 1970ರ ಕಾಲದಂತೆ ನಿರ್ಮಿಸಿಲು ಮಾಡಲು ಚಿತ್ರತಂಡ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಚಿತ್ರದ ಅನುಭವವನ್ನು ಪ್ರಶಾಂತ್ ನೀಲ್ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದರು.

    ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ಚಿತ್ರತಂಡ ಐದು ಭಾಷೆಗಳಲ್ಲಿಯೂ ‘ಸಲಾಂ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿತು. ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆದ ಮರುದಿನವೇ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಯ್ತು. ಮತ್ತೊಂದು ಟ್ರೇಲರ್ ರಿವೀಲ್ ಬಿಡುಗಡೆಯಾದ ಕಥೆಯ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಸಾಮಥ್ರ್ಯವುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿತ್ತು.

    ಹೀಗೆ ಚಿತ್ರ ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟಿಸುತ್ತಿದ್ದು, ಭಾನುವಾರ ಸೆಂಟಿಮೆಂಟ್ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಯಶ್ ‘ರಾಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿಧಿ ರಾಕಿಂಗ್ ಸ್ಟಾರ್ ಗೆ ಜೊತೆಯಾಗಿದ್ದಾರೆ. ರವಿಶಂಕರ್ ಸೋದರ ಅಯ್ಯಪ್ಪ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಅನಂತ್ ನಾಗ್ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ವಿಶೇಷ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ ಗೋಲ್ಡ್ ಚೆಲುವೆ ಮೌನಿ ರಾಯ್ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಅಭಿಮಾನಿಗಳಿಗೆ ಧಮಾಕೆದಾರ್ ಸುದ್ದಿ

    ಕೆಜಿಎಫ್ ಅಭಿಮಾನಿಗಳಿಗೆ ಧಮಾಕೆದಾರ್ ಸುದ್ದಿ

    ಬೆಂಗಳೂರು: ಇಡೀ ಭಾರತೀಯ ಸಿನಿ ಅಂಗಳದಲ್ಲಿ ಕೆಜಿಎಫ್ ಧ್ಯಾನ ಆರಂಭವಾಗಿದೆ. ಚಿತ್ರ ತೆರೆಮೇಲೆ ಬರೋದನ್ನು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದ ಒಂದು ಟೀಸರ್, ಎರಡು ಟ್ರೇಲರ್ ಮತ್ತು ಒಂದು ಲಿರಿಕಲ್ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಈ ಎಲ್ಲ ವಿಡಿಯೋ ನೋಡಿದವ್ರು ಸಿನಿಮಾ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆ ಚಿತ್ರದ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

    ಈ ಸಂಬಂದ ಲಹರಿ ಮ್ಯೂಸಿಕ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ. ಈ ಮೊದಲು ಪವರ್ ಹುಡುಕಿ ಹೊರಟ ಕೋಲಾರದ ಹುಡುಗ ಹೇಗೆ ಮುಂಬೈ ಭೂಗತ ಲೋಕದ ನಾಯಕನಾಗಿ ‘ಎಲ್ಲರಿಂದಲೂ ರಾಕಿ ಭಾಯ್’ ಅಂತಾ ಕರೆಸಿಕೊಳ್ಳುತ್ತಾನೆ ಎಂಬುದನ್ನು ತೋರಿಸಲಾಗಿತ್ತು. ಈ ಹಾಡಿನ ಸಾಲುಗಳು ಮಾಸ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಸೆಂಟಿಮೆಂಟ್ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಚಿತ್ರತಂಡ ಪ್ರಯತ್ನ ಮಾಡುತ್ತಿದೆ.

    ತಾಯಿ ಮತ್ತು ಮಗನ ಸಂಬಂಧವನ್ನು ಹೇಳುವ ‘ಗರ್ಭದಿ’ ಹಾಡು ರಿಲೀಸ್ ಆಗಲಿದೆ. ಹಾಡಿನ ಸಾಹಿತ್ಯ ಸಂಪೂರ್ಣ ಮಗನಿಗಾಗಿ ಕಾಯುತ್ತಿರುವ ತಾಯಿ, ಅಮ್ಮನ ಪ್ರೀತಿ ಹುಡುಕುವ ಮಗನ ಬಗ್ಗೆ ಹೇಳುವ ಪದಪುಂಜವನ್ನು ಒಳಗೊಂಡಿದೆಯಂತೆ. ಅಮ್ಮನ ಪ್ರೀತಿಗಾಗಿ ಹಾತೊರೆಯುತ್ತಿರುವ ಮಗ, ಪುತ್ರನ ಬರುವಿಕೆಗಾಗಿ ಶಬರಿಯಂತೆ ಕಾಯುವ ತಾಯಿ ಎಲ್ಲವನ್ನು ಈ ಹಾಡು ವರ್ಣನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

    ಇವತ್ತು ಹೈದರಾಬಾದ್ ನಲ್ಲಿ ಕೆಜಿಎಫ್ ಚಿತ್ರದ ವಿಶೇಷ ಅದ್ಧೂರಿ ಕಾರ್ಯಕ್ರಮ ಸಂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರತಂಡ ಸೇರಿದಂತೆ ಬಾಹುಬಲಿ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ. ಟಾಲಿವುಡ್ ನ ಇತರೆ ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಈ ವೇಳೆ ಕೆಜಿಎಫ್ ಚಿತ್ರೀಕರಣದ ಹೊಸ ಮಾಹಿತಿಗಳನ್ನು ಚಿತ್ರತಂಡ ಹೊರಹಾಕಲಿದೆಯಂತೆ.

    ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಎರಡನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪತ್ನಿ ರಾಧಿಕಾರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎರಡು ವರ್ಷದ ಹಿಂದೆ ಸಂಪ್ರದಾಯಬದ್ಧವಾಗಿ ಸಂಗಾತಿಯಾಗಿ ರಾಧಿಕಾ ಅವರು ಯಶ್ ಗೃಹ ಪ್ರವೇಶ ಮಾಡಿದ್ದರು. ಇಂದು ಅದೇ ಶುಭ ಗಳಿಗೆಯಲ್ಲಿ ಪುತ್ರಿ ಗೃಹ ಪ್ರವೇಶ ಮಾಡುತ್ತಿರೋದು ಮತ್ತೊಂದು ವಿಶೇಷತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv