Tag: ಕೆಜಿಎಫ್

  • ಯುನಿಕ್ ಆಗಿರೋ ಸಿನ್ಮಾವನ್ನ ಯುನಿಕ್ ರೀತಿಯಲ್ಲಿ ನೋಡಿ: ಅಭಿಮಾನಿಗಳಿಗೆ ಯಶ್ ಸಲಹೆ

    ಯುನಿಕ್ ಆಗಿರೋ ಸಿನ್ಮಾವನ್ನ ಯುನಿಕ್ ರೀತಿಯಲ್ಲಿ ನೋಡಿ: ಅಭಿಮಾನಿಗಳಿಗೆ ಯಶ್ ಸಲಹೆ

    -ಯಶ್ ಮೊದಲ ಶೋ ಎಲ್ಲಿ ನೋಡ್ತಾರೆ?

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಂಗಳವಾರ ಸಂಜೆ ಪಬ್ಲಿಕ್ ಟಿವಿ ಫೇಸ್‍ಬುಕ್ ಲೈವ್ ನಲ್ಲಿ ಬಂದು ಅಭಿಮಾನಿಗಳ ಜೊತೆ ಕೆಜಿಎಫ್ ಚಿತ್ರದ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಯುನಿಕ್ ರೀತಿಯಲ್ಲಿ ಮೂಡಿಬಂದಿರುವ ಸಿನಿಮಾ ಕೆಜಿಎಫ್. ಹಾಗಾಗಿ ವೀಕ್ಷಕರು ಚಿತ್ರಮಂದಿರಗಳಿಗೆ ಫ್ರೆಶ್ ಮೈಂಡ್ ನಲ್ಲಿ ಬಂದು ಯುನಿಕ್ ಆಗಿಯೇ ನೋಡಬೇಕೆಂದು ಮನವಿ ಮಾಡಿಕೊಂಡರು.

    ಚಿತ್ರ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಮತ್ತು ಎರಡನೇ ಭಾಗದ ಪಾತ್ರಗಳ ಪರಿಚಯ ಒಂದಕ್ಕೊಂದು ಲಿಂಕ್ ಹೊಂದಿರುತ್ತವೆ. ಸಿನಿಮಾ ನೋಡುವಾಗ ಎರಡನೇ ಭಾಗದ ಪಾತ್ರವೊಂದು ಒಂದು ಕ್ಷಣದಲ್ಲಿ ಬಂದು ಮಾಯವಾಗುತ್ತದೆ. ಮುಂದೆ ಆ ಪಾತ್ರದ ಹೆಸರು ಚಿತ್ರದ ಉದ್ದಕ್ಕೂ ಬಳಕೆ ಆಗಿರುತ್ತದೆ. ಸಿನಿಮಾ ನೋಡುವಾಗ ಐದು ನಿಮಿಷ ಅಂತಾ ಮೊಬೈಲ್ ನೀಡಿದ್ರೆ, ಸಿನಿಮಾದ ಮೂಲ ಪಾತ್ರ ಕ್ಷಣಾರ್ಧದಲ್ಲಿ ಬಂದು ಮರೆಯಾಗುತ್ತದೆ. ಮುಂದೆ ಪಾತ್ರದ ಹೆಸರು ಬಂದಾಗ ಗೊಂದಲ ಉಂಟಾಗಬಹುದು. ಹಾಗಾಗಿ ಸಿನಿಮಾವನ್ನು ಯುನಿಕ್ ರೀತಿಯಲ್ಲಿ ನೋಡಿ ಎಂದು ಯಶ್ ಹೇಳಿದರು.

    ಸಿನಿಮಾದ ಮೊದಲ ಶೋ ಅಭಿಮಾನಿಗಳ ಜೊತೆಯಲ್ಲಿಯೇ ನೋಡಬೇಕೆಂದು ಆಸೆ ಇದೆ. ಆದರೆ ಚಿತ್ರತಂಡದ ಪ್ಲಾನ್ ಬೇರೆ ಇದೆ. ಹಾಗಾಗಿ ಮೊದಲ ಶೋ ಎಲ್ಲಿ ನೋಡ್ತಿನಿ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಕುಟುಂಬ ಅಥವಾ ಚಿತ್ರತಂಡ ಅಥವಾ ಅಭಿಮಾನಿಗಳಾ? ಯಾರ ಜೊತೆ ಎನ್ನುವುದನ್ನು ಇನ್ನು ನಿರ್ಧರಿಸಿಲ್ಲ. ಈಗಾಗಲೇ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಓಪನಿಂಗ್ ಆಗಿದೆ. ಮೊದಲ ದಿನ ಟಿಕೆಟ್ ಸಿಕ್ಕಲ್ಲಿ ಅಂದ್ರೆ ಎರಡನೇ ದಿನ ನೋಡಬಹುದು. ಮುಂಬೈನಲ್ಲಿ ಬುಧವಾರ ಅಥವಾ ಗುರುವಾರ ಟಿಕೆಟ್ ಕೌಂಟರ್ ತೆರೆಯಲಿದೆ ಎಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು.

    ಸತತ ಎರಡು ವರ್ಷಗಳ ಪರಿಶ್ರಮದಿಂದ ಕೆಜಿಎಫ್ ಎಂಬ ಅದ್ಭುತ ಸಿನಿಮಾ ತಯಾರಾಗಿದೆ. ಹಾಗಾಗಿ ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಿನಿಮಾವನ್ನು ರೆಕಾರ್ಡ್ ಮಾಡಿಕೊಳ್ಳುವುದು ಅಥವಾ ಫೇಸ್‍ಬುಕ್ ಲೈವ್ ಮಾಡಬೇಡಿ. ಪೈರಸಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಚಿತ್ರತಂಡ ಸಿದ್ಧಗೊಂಡಿದೆ. ಇಂದು ಕನ್ನಡದ ಕೆಜಿಎಫ್ ಚಿತ್ರವನ್ನ ಇಡೀ ಭಾರತವೇ ನೋಡುತ್ತಿದೆ. ಹಾಗಾಗಿ ಸಿನಿಮಾವನ್ನ ರೆಕಾರ್ಡ್ ಮಾಡಿಕೊಳ್ಳಬೇಡಿ ಎಂದು ಯಶ್ ಮನವಿ ಮಾಡಿಕೊಂಡರು.

    https://www.facebook.com/publictv/videos/2279238428971842/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂಬೈನಲ್ಲಿ ಕೆಜಿಎಫ್ ಹವಾ

    ಮುಂಬೈನಲ್ಲಿ ಕೆಜಿಎಫ್ ಹವಾ

    ಮುಂಬೈ: ಕರ್ನಾಟಕದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ.

    ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್ ಮಾಡಲಾಗಿತ್ತು. ಹಿಂದಿ ಅವತರಣಿಕೆ ಸಿನಿಮಾಗಾಗಿ 1989ರಲ್ಲಿ ಬಿಡುಗಡೆಯಾಗಿದ್ದ `ತ್ರಿದೇವ್’ ಚಿತ್ರದ `ಗಲಿ ಗಲಿ’ ಹಾಡನ್ನು ಬಳಸಲಾಗಿದೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

    ಹಿಂದಿ ಅವತರಣಿಕೆಯನ್ನು ಎಕ್ಸೆಲ್ ಮೀಡಿಯಾ, ಎಎ ಮೂವೀಸ್ ನಲ್ಲಿ ಫರ್ಹಾನ್ ಅಖ್ತರ್, ರಿತೇಶ್ ಸಿದ್ವಾನಿ ರಿಲೀಸ್ ಮಾಡ್ತಿದ್ದು, ಈಗಾಗಲೇ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಲಿ ಗಲಿ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್

    ಗಲಿ ಗಲಿ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್

    – ಮೌನಿ ಜೊತೆ ಹೆಜ್ಜೆ ಹಾಕಿ ಯಶ್ ಹೇಳಿದ್ದು ಹೀಗೆ

    ಬೆಂಗಳೂರು: ಕೆಜಿಎಫ್ ಹಿಂದಿ ಡಬ್ ಚಿತ್ರದ ‘ಗಲಿ ಗಲಿ’ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹಾಡು ರಿಲೀಸ್ ಆದ ಬಳಿಕ ಬಾಲಿವುಡ್ ಅಂಗಳದಲ್ಲಿಯೇ ಸಖತ್ ಸದ್ದು ಮಾಡಿತ್ತು. ಇದೀಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಯಶ್ ತಮ್ಮ ಜೊತೆ ಹೆಜ್ಜೆ ಹಾಕಿದ ಮೌನಿ ರಾಯ್ ಬಗ್ಗೆ ಮಾತನಾಡಿದ್ದಾರೆ.

    ಮೌನಿ ರಾಯ್ ಅದ್ಭುತ ಡ್ಯಾನ್ಸರ್. ಹಾಡಿನಲ್ಲಿ ಹಲವು ಹೊಸ ಸ್ಟೆಪ್ಸ್ ಗಳನ್ನು ಪರಿಚಯಿಸಿದ್ದಾರೆ. ಎಲ್ಲವನ್ನು ಕಲಿತುಕೊಂಡ ಮೌನಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. 10 ಸಾವಿರಕ್ಕೂ ಅಧಿಕ ಹಾಡುಗಳಿಗೆ ಕೊರಿಯೊಗ್ರಾಫಿ ಮಾಡಿರೋ ಗಣೇಶ್ ಅಚಾರ್ಯ ನಮ್ಮ ಹಾಡನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ನನಗಾಗಿ ಸರಳ ಸ್ಟೆಪ್ಸ್ ಮಾಡಿಕೊಟ್ಟಿದ್ದು, ಚಿತ್ರದಲ್ಲಿ ನನ್ನ ಪಾತ್ರದ ವ್ಯಕ್ತಿತ್ವ ಹಾಡಿನಲ್ಲಿಯೇ ತೋರಿಸಿದ್ದಾರೆ ಎಂದು ಯಶ್ ಹೇಳಿದ್ದಾರೆ.

    ತ್ರೀದೇವ್ ಚಿತ್ರದಲ್ಲಿ ನಾನು ಗ್ರೂಪ್ ಡ್ಯಾನ್ಸರ್ ಆಗಿದ್ದೆ. ಇಂದು ಅದೇ ಹಾಡನ್ನು ನಾನು ರಿಕ್ರಿಯೇಟ್ ಮಾಡುತ್ತಿರೋದು ಖುಷಿ ತಂದಿದೆ. ಇಂದು ನನ್ನೊಂದಿಗೆ ಯಶ್, ಮೌನಿ ರಾಯ್ ಒಳಗೊಂಡಂತೆ ಅತ್ಯಂತ ಒಳ್ಳೆಯ ಕಲಾವಿದರ ತಂಡ ಹೊಂದಿದ್ದೇನೆ ಎಂದು ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ಸಂತೋಷವನ್ನು ಹಂಚಿಕೊಂಡಿದ್ದಾರೆ.

    1989ರಲ್ಲಿ ಬಿಡುಗಡೆಯಾಗಿದ್ದ `ತ್ರಿದೇವ್’ ಚಿತ್ರದ `ಗಲಿ ಗಲಿ’ ರಿಮಿಕ್ಸ್ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದಾರೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

    ಗಲಿ ಗಲಿ ಮೇ ಹಾಡು ಬಿಡುಗಡೆಯಾದ ಮೊದಲ ದಿನವೇ 1.3 ಕೋಟಿ ವ್ಯೂ ಪಡೆದುಕೊಳ್ಳುವ ಮೂಲಕ ದಾಖಲೆಯನ್ನು ಬರೆದಿತ್ತು. ಇದೂವರೆಗೂ 2.6 ಕೋಟಿಗೂ ಅಧಿಕ ವೀಕ್ಷಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಕೂಲಿ ಕಾರ್ಮಿಕ ಬಿ.ಸುರೇಶ್!

    ಕೆಜಿಎಫ್ ಕೂಲಿ ಕಾರ್ಮಿಕ ಬಿ.ಸುರೇಶ್!

    ಬೆಂಗಳೂರು: ಈಗಾಗಲೇ ನಿರ್ದೇಶಕರಾಗಿ ಹೆಸರು ಮಾಡಿರುವ ಬಿ. ಸುರೇಶ್ ನಟರಾಗಿಯೂ ಪರಿಚಿತರು. ಸದ್ಯ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ಮಾಪಕರೂ ಆಗಿರೋ ಸುರೇಶ್ ಕೆಜಿಎಫ್ ಮೂಲಕ ಸದ್ದು ಮಾಡುತ್ತಿದ್ದಾರೆ. ಯಾಕಂದ್ರೆ ಅವರು ಕೆಜಿಎಫ್ ಚಿತ್ರದಲ್ಲಿ ನಟನಾಗಿ ಯಶ್ ಅವರಿಗೆ ಸಾಥ್ ನೀಡಿದ್ದಾರೆ!

    ಸುರೇಶ್ ಅವರು ಕೆಜಿಎಫ್ ನಲ್ಲಿ ನಟಿಸಿರೋ ಫೋಟೋವೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುರೇಶ್ ಇಲ್ಲಿ ಗಣಿ ಕಾರ್ಮಿಕನಾಗಿ ನಟಿಸಿದ್ದಾರಂತೆ. ಈ ಪಾತ್ರದ ಮೂಲಕವೇ ಚಿತ್ರದುದ್ದಕ್ಕೂ ಯಶ್ ಜೊತೆಗೂ ಅವರೇ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರಂತೆ.

    ಈವರೆಗೂ ಸಾಕಷ್ಟು ಸದಭಿರುಚಿಯ ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶನದ ಮೂಲಕವೇ ಮನೆ ಮಾತಾಗಿರುವವರು ಬಿ ಸುರೇಶ್. ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಕೆಜಿಎಫ್ ಚಿತ್ರದ ಈ ಪಾತ್ರ ನಟನಾಗಿ ಅವರಿಗೆ ಬೇರೆಯದ್ದೇ ಆವೇಗ ತಂದುಕೊಡಲಿದೆ ಎಂಬ ಮಾತುಗಳೀಗ ವ್ಯಾಪಕವಾಗಿ ಕೇಳಿ ಬರಲಾರಂಭಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೀರ ಧೀರ ರಾಕಿ ಸುಲ್ತಾನನ ಹಾಡು ಕೇಳಿದ್ರಾ!

    ವೀರ ಧೀರ ರಾಕಿ ಸುಲ್ತಾನನ ಹಾಡು ಕೇಳಿದ್ರಾ!

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್. ಮಾಸ್ ಮತ್ತು ಸೆಂಟಿಮೆಂಟ್ ಪ್ರೇಕ್ಷಕರನ್ನು ಹಾಡುಗಳ ಮೂಲಕ ಆಕರ್ಷಿಸಿರುವ ಕೆಜಿಎಫ್ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಮೊದಲಿಗೆ ‘ಸಲಾಂ ರಾಕಿ ಭಾಯ್’ ಮತ್ತು ಗರ್ಭಧಿ ಎಂಬ ವಿಭಿನ್ನ ಶೈಲಿಯ ಹಾಡುಗಳ ಮೂಲಕ ಎರಡು ವಿಧದ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಇದಾದ ಬಳಿಕ ರಿಲೀಸ್ ಆಗಿದ್ದು ಹಿಂದಿಯ ‘ಗಲಿ ಗಲಿ ಮೇ’ ಹಾಡು. ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚುವಂತೆ ಗೋಲ್ಡ್ ಕ್ವೀನ್ ಮೌನಿ ರಾಯ್ ಹೆಜ್ಜೆ ಹಾಕಿದ್ದ ಹಾಡಿನ ಪ್ರೋಮೋ ದಾಖಲೆಯನ್ನು ಬರೆದಿದೆ.

    ಗಲಿ ಗಲಿ ಮೇ ಹಾಡನ್ನು ಹಿಂದಿ ಡಬ್ ಸಿನಿಮಾದಲ್ಲಿ ಬಳಸಿದ್ರೆ, ಕನ್ನಡ ಚಿತ್ರದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ರಿಮೇಕ್ ಮಾಡಲಾಗಿದೆ. ಇಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ ಭಟಿಯಾ ಸೊಂಟ ಬಳುಕಿಸಿದ್ದು, ಲಿರಿಕಲ್ ವಿಡಿಯೋ ಸಖತ್ ಹವಾ ಕ್ರಿಯೇಟ್ ಮಾಡಿದೆ. ಇದೀಗ ಧೀರ ಧೀರ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸಾಹಿತ್ಯ ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

    ರವಿ ಬಸ್ರೂರ್ ಅವರ ಸಾಹಿತ್ಯದಲ್ಲಿ ಅನನ್ಯ ಭಟ್, ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಪುನೀತ್ ರುದ್ರಂಗ, ಮೋಹನ್ ಕೃಷ್ಣ, ಹೆಚ್.ಶ್ರೀನಿವಾಸ್ ಮೂರ್ತಿ ಮತ್ತು ವಿಜಯ್ ಅರಸ್ ಕಂಠದಲ್ಲಿ ಹಾಡು ಮೂಡಿ ಬಂದಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲಿಯೇ ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿಯಲ್ಲಿ ರಾಕಿಂಗ್ ಸ್ಪೀಕಿಂಗ್

    ಪಬ್ಲಿಕ್ ಟಿವಿಯಲ್ಲಿ ರಾಕಿಂಗ್ ಸ್ಪೀಕಿಂಗ್

    -ಮಿಸ್ ಮಾಡ್ದೆ ನೋಡಿ ರಾಕಿಯ ಸ್ಪೆಷಲ್ ಸಂದರ್ಶನ

    ಬೆಂಗಳೂರು: ಚಂದನವನದ ಗಲ್ಲಿ ಗಲ್ಲಿಯೂ ಕೆಜಿಎಫ್ ಮಾತು. ಇತ್ತ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಜಿಎಫ್ ಸಿನಿಮಾ ಕುರಿತಾಗಿ ರಾಕಿಂಗ್ ಸ್ಟಾರ್ ಯಶ್ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದು, ಇಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಇದೇ ಶುಕ್ರವಾರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಕೆಜಿಎಫ್, ಹಿಂದಿಯ ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮಾಗೆ ಪೈಪೋಟಿ ನೀಡಲಿದೆ. ಕೆಜಿಎಫ್ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಯಶ್ ಗೆ ನಾಯಕಿಯಾಗಿ ಸುಂದರಿ ಶ್ರೀನಿಧಿ ಶೆಟ್ಟಿ ಜೊತೆಯಾಗಿದ್ದಾರೆ.

    ಟೀಸರ್ ಜೊತೆಯಲ್ಲಿಯೇ ಮೇಕಿಂಗ್ ದೃಶ್ಯದ ಕೆಲ ತುಣುಕುಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೆಲ್ಲದರ ನಡುವೆ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದೀಗ ಚಿತ್ರತಂಡವೇ ಸಿನಿಮಾ ಸೆಟ್ ನಿರ್ಮಾಣದ ದೃಶ್ಯಗಳನ್ನು ಬಿಡುಗಡೆಗೊಳಿಸಿದೆ. ಮೇಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಇದು ಬಾಹುಬಲಿಯ ಮೇಕಿಂಗ್ ನ್ನು ಮೀರಿಸುವಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಇಂದು ಸಂಜೆ ಚಿತ್ರದ ‘ಧೀರ ಧೀರ’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

    ಯಶ್ ಸಂದರ್ಶನ ನೋಡಲು ಪಬ್ಲಿಕ್ ಟಿವಿ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ… https://publictv.in/live

     

  • ಕೆಜಿಎಫ್ ಅಂದ್ರೆ ಯಶ್ ಅಲ್ಲ: ರಾಕಿಂಗ್ ಸ್ಟಾರ್ ಖಡಕ್ ಮಾತು

    ಕೆಜಿಎಫ್ ಅಂದ್ರೆ ಯಶ್ ಅಲ್ಲ: ರಾಕಿಂಗ್ ಸ್ಟಾರ್ ಖಡಕ್ ಮಾತು

    – ಬಾಹುಬಲಿಯನ್ನ ಮೀರಿಸುತ್ತಿದೆಯಂತೆ ಕೆಜಿಎಫ್ ಮೇಕಿಂಗ್!
    – ಚಿತ್ರ ಮೂಡಿಬಂದ ಮೇಕಿಂಗ್ ವಿಡಿಯೋ ನೋಡಿದ್ರೆ ರೋಮಾಂಚನ ಆಗೋದು ಖಚಿತ

    ಬೆಂಗಳೂರು: ಇದೂವರೆಗೂ ಕೆಜಿಎಫ್ ಸಿನಿಮಾದ ಹಾಡುಗಳು, ಟೀಸರ್ ಮತ್ತು ಟ್ರೇಲರ್ ವಿಡಿಯೋ ನೋಡಿದ ರಾಕಿಂಗ್ ಅಭಿಮಾನಿಳು ಫುಲ್ ಜೋಶ್ ನಲ್ಲಿದ್ದಾರೆ. ಈ ಮೊದಲು ಟೀಸರ್ ಜೊತೆಯಲ್ಲಿಯೇ ಮೇಕಿಂಗ್ ದೃಶ್ಯದ ಕೆಲ ತುಣುಕುಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೆಲ್ಲದರ ನಡುವೆ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದೀಗ ಚಿತ್ರತಂಡವೇ ಸಿನಿಮಾ ಸೆಟ್ ನಿರ್ಮಾಣದ ದೃಶ್ಯಗಳನ್ನು ಬಿಡುಗಡೆಗೊಳಿಸಿದೆ.

    ವಿಡಿಯೋ ಆರಂಭದಲ್ಲಿ ಯಶ್ ಚಿತ್ರದ ಬಗ್ಗೆ ಮಾತನಾಡಿದ್ದು, ಕೆಜಿಎಫ್ ಕೇವಲ ಯಶ್ ಸಿನಿಮಾ ಅಲ್ಲ ಅನ್ನುತ್ತಲೇ ತಮ್ಮ ಮಾತುಗಳನ್ನು ಅರಂಭಿಸಿದ್ದಾರೆ. ಯಶ್ ಚಿತ್ರೀಕರಣ ಹೇಗೆ ನಡೆಯಿತು? ಯಾವ ಕಲಾವಿದರು ಮತ್ತು ತಂತ್ರಜ್ಞರು ಮಾಡಿದ ಪರಿಶ್ರಮವನ್ನು ಎಲ್ಲವನ್ನು ಬಹಿರಂಗಗೊಳಿಸಿದ್ದಾರೆ. ತೆರೆಯ ಮೇಲೆ ನಾನೊಬ್ಬ ಸಿನಿಮಾವನ್ನು ಪ್ರತಿನಿಧಿಸಬಹುದು. ಆದ್ರೆ ತೆರೆಯ ಹಿಂದೆ ಹಲವರ ಶ್ರಮ ಅಡಗಿದೆ ಎಂಬುದನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಮತ್ತೊಂದು ದಾಖಲೆ ಬರೆದ ಕೆಜಿಎಫ್

    ಮೇಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಇದು ಬಾಹುಬಲಿಯ ಮೇಕಿಂಗ್ ನ್ನು ಮೀರಿಸುವಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಿ ಬಾಹುಬಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನೂ ಓದಿ: ದಾಖಲೆ ನಿರ್ಮಿಸಿದ ಕೆಜಿಎಫ್ ಗಲಿ ಗಲಿ ಹಾಡು- ಈಗ ಕನ್ನಡದ ಜೋಕೆ ಹಾಡು ರಿಲೀಸ್

    ಬಾಹುಬಲಿಯ ಗುಣಮಟ್ಟದ ತಂತ್ರಜ್ಞಾನ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕೆಜಿಎಫ್ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ವಿಭಿನ್ನವಾದ ಚಿತ್ರ. ಚಿತ್ರಕ್ಕಾಗಿ ಕೋಲಾರದ ಕೆಜಿಎಫ್ ಹೊರವಲಯದಲ್ಲಿ ಗಣಿ ನಿಕ್ಷೇಪವನ್ನು ಮರು ಸೃಷ್ಟಿ ಮಾಡಲಾಗಿದೆ. 1970ರ ಕಾಲಘಟ್ಟದ ಕಥೆಯುಳ್ಳ ಸಿನಿಮಾ ಅಗಿದ್ದರಿಂದ ಚಿತ್ರತಂಡ ಪ್ರತಿಯೊಂದು ವಸ್ತುಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಳವಡಿಸಿಕೊಂಡಿರೋದನ್ನು ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಯಶ್ ಮಾಡಿದ್ದ ಸಹಾಯಕ್ಕೆ ಕೆಜಿಎಫ್ ಬೆನ್ನಿಗೆ ನಿಂತ ನಟ ವಿಶಾಲ್!

    ಕೆಜಿಎಫ್ ನಲ್ಲಿ ನಿರ್ಮಿಸಿದ್ದ ಸೆಟ್ ನಲ್ಲಿ ಮಳೆಗಾಲದಲ್ಲಿಯೇ ಚಿತ್ರೀಕರಣ ನಡೆದಿತ್ತು. ಅಲ್ಲಿಯ ಭೌಗೋಳಿಕ ಸನ್ನಿವೇಶಕ್ಕನುಗುಣವಾಗಿ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ಮಧ್ಯೆ ಮಳೆ ಗಾಳಿ ಕೆಜಿಎಫ್ ಸೆಟ್ ಹಾನಿಗೆ ಒಳಗಾಗಿತ್ತು. ಎಲ್ಲ ಅಡೆತಡೆಗಳ ನಡುವೆಯ ಕೆಜಿಎಫ್ ಸಿನಿಮಾದ ಮೊದಲ ಭಾಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಶುಕ್ರವಾರ (ಡಿಸೆಂಬರ್ 21) ದೇಶಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರದ ಹಾಡುಗಳು, ಟ್ರೇಲರ್ ಮತ್ತು ಟೀಸರ್ ಲಹರಿ ಮ್ಯೂಸಿಕ್ ಯು ಟ್ಯೂಬ್ ಖಾತೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಲ್ಲೂರು ದೇವಸ್ಥಾನಕ್ಕೆ ನಟ ಯಶ್ ಭೇಟಿ

    ಕೊಲ್ಲೂರು ದೇವಸ್ಥಾನಕ್ಕೆ ನಟ ಯಶ್ ಭೇಟಿ

    ಉಡುಪಿ: ಈ ವಾರ ಬಹುನಿರೀಕ್ಷಿತ `ಕೆಜಿಎಫ್’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಚಿತ್ರತಂಡದ ಜೊತೆ ಸೇರಿ ಟೆಂಪಲ್ ವಿಸಿಟ್ ಮಾಡುತ್ತಿದ್ದಾರೆ.

    ನಟ ಯಶ್ ಮತ್ತು ಚಿತ್ರತಂಡ ಬೆಂಗಳೂರಿನಿಂದ ಹೊರಟು ಮೊದಲು ಕೊಲ್ಲೂರು ದೇವಸ್ಥಾನ, ನಂತರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ನಟ ಯಶ್ ಹೆಲಿಕಾಫ್ಟರ್ ನಿಂದ ಕೊಲ್ಲೂರಿಗೆ ಬಂದಿಳಿದು. ನೇರವಾಗಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮೂಕಾಂಬಿಕೆಗೆ ಯಶ್ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.

    ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದು, ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವಾರ 21ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರದ ಒಳಿತಿಗಾಗಿ ಕೆಜಿಎಫ್ ಟೀಮ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

    ‘ಕೆಜಿಎಫ್’ ಸಿನಿಮಾದ ಹಿಂದಿಯ ಸ್ಪೆಷಲ್ ಹಾಡೊಂದು ಈಗಾಗಲೇ ರಿಲೀಸ್ ಆಗಿದ್ದು, ಮೌನಿ ರಾಯ್ ಹಾಗೂ ಯಶ್ ‘ಗಲಿ ಗಲಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು.

    ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ಸ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಾಖಲೆ ನಿರ್ಮಿಸಿದ ಕೆಜಿಎಫ್ ಗಲಿ ಗಲಿ ಹಾಡು- ಈಗ ಕನ್ನಡದ ಜೋಕೆ ಹಾಡು ರಿಲೀಸ್

    ದಾಖಲೆ ನಿರ್ಮಿಸಿದ ಕೆಜಿಎಫ್ ಗಲಿ ಗಲಿ ಹಾಡು- ಈಗ ಕನ್ನಡದ ಜೋಕೆ ಹಾಡು ರಿಲೀಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ರಿಲೀಸ್ ಆಗಿದೆ.

    ನಟಿ ತಮನ್ನಾ ಭಾಟಿಯಾ ಈ ಚಿತ್ರದ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಮಧ್ಯೆ ಯಶ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. `ಪರೋಪಕಾರಿ’ ಕನ್ನಡ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು’ ಐಟಂ ಸಾಂಗನ್ನು ರಿಮಿಕ್ಸ್ ಮಾಡಲಾಗಿರುವ ಹಾಡು ಇದಾಗಿದ್ದು ಇದೀಗ `ಕೆಜಿಎಫ್’ ಚಿತ್ರಕ್ಕಾಗಿ ರವಿ ಬಸ್ರೂರ್ ರೀ-ಕ್ರಿಯೇಟ್ ಮಾಡಿದ್ದಾರೆ.

    ಹಿಂದಿನ ಹಾಡಿಗೆ ಎಲ್.ಆರ್ ಈಶ್ವರಿ ಧ್ವನಿಯಾಗಿದ್ದರು. ಇದೀಗ ಐರಾ ಉಡುಪಿ ಹಿನ್ನೆಲೆ ಗಾಯನದಲ್ಲಿ ಹೊಸ ಜೋಕೆ ರಿಮಿಕ್ಸ್ ಹಾಡು ಮೂಡಿ ಬಂದಿದೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಹಾಡನ್ನು ರಿಲೀಸ್ ಮಾಡಿದೆ. ಕೆಜಿಎಫ್ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಕೆಜಿಎಫ್ ಚಿತ್ರದ ‘ಗಲಿ ಗಲಿ’ ಸಾಂಗ್ ರಿಲೀಸ್- ಯಶ್, ಮೌನಿ ಡ್ಯಾನ್ಸ್ ಗೆ ಎಲ್ಲರೂ ಫಿದಾ

    ಇತ್ತೀಚೆಗೆ ಹಿಂದಿ ಕೆಜಿಎಫ್ ಚಿತ್ರದ ಸ್ಪೆಷಲ್ ಹಾಡೊಂದನ್ನು ರಿಲೀಸ್ ಮಾಡಿತ್ತು. ಮೌನಿ ರಾಯ್ ಹಾಗೂ ಯಶ್ ಹೆಜ್ಜೆ ಹಾಕಿದ ‘ಗಲಿ ಗಲಿ’ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಈಗ ಈ ಹಾಡು ಹೊಸ ದಾಖಲೆಯನ್ನು ಮಾಡಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.

    ಕೆಜಿಎಫ್ ಚಿತ್ರದಲ್ಲಿ ಮೌನಿ ರಾಯ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಬಾರ್ ಸೆಟ್ ನಿರ್ಮಿಸಲಾಗಿದ್ದು, 1989ರಲ್ಲಿ ಬಿಡುಗಡೆಯಾಗಿದ್ದ `ತ್ರಿದೇವ್’ ಚಿತ್ರದ `ಗಲಿ ಗಲಿ ಮೈ’ ರಿಮಿಕ್ಸ್ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದಾರೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರ ಡಿ. 21ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಇದೇ ದಿನ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟನೆಯ `ಝೀರೋ’ ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv