Tag: ಕೆಜಿಎಫ್

  • ಪ್ರಶಾಂತ್‌ ನೀಲ್‌ ಬರ್ತ್‌ಡೇಗೆ ಪ್ರಭಾಸ್‌ ಲವ್ಲಿ ವಿಶ್

    ಪ್ರಶಾಂತ್‌ ನೀಲ್‌ ಬರ್ತ್‌ಡೇಗೆ ಪ್ರಭಾಸ್‌ ಲವ್ಲಿ ವಿಶ್

    ‘ಕೆಜಿಎಫ್’, ‘ಸಲಾರ್’ ನಿರ್ದೇಶಕ ಪ್ರಶಾಂತ್ ನೀಲ್‌ಗೆ (Prashanth Neel) ಇಂದು (ಜೂನ್.4) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಡಾರ್ಲಿಂಗ್ ಪ್ರಭಾಸ್ (Prabhas) ವಿಶೇಷವಾಗಿ ಶುಭಕೋರಿದ್ದಾರೆ. ಪ್ರಭಾಸ್‌ ಬಳಿಕ ಅನೇಕ ಸ್ಟಾರ್‌ ನಟ- ನಟಿಯರು ಪ್ರಶಾಂತ್‌ ನೀಲ್‌ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್ ಪತ್ನಿ ನತಾಶಾ

    43ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಶಾಂತ್ ನೀಲ್ ‘ಲವ್ ಯೂ ಸರ್’ ಎಂದು ಸ್ವೀಟ್ ಆಗಿ ಪ್ರಭಾಸ್ ವಿಶ್ ಮಡಿದ್ದಾರೆ. ಸುಂದರವಾದ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ. ಪ್ರಶಾಂತ್ ನೀಲ್‌ಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ಹೊಂಬಾಳೆ ಸಂಸ್ಥೆ ಸೇರಿದಂತೆ ಅನೇಕರು ಬರ್ತ್‌ಡೇಗೆ ವಿಶ್ ಮಾಡಿದ್ದಾರೆ.

    ಅಂದಹಾಗೆ, ಸಲಾರ್ (Salaar) ಸಿನಿಮಾದ ನಂತರ ಇತ್ತೀಚೆಗೆ  ‘ಸಲಾರ್ 2’ ಸಿನಿಮಾ ನಿಂತು ಹೋಗಿದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿಲ್ಲ ಎಂದು ಎಂದೆಲ್ಲಾ ಸುದ್ದಿ ಹಬ್ಬಿತ್ತು. ಇದೀಗ ಪ್ರಭಾಸ್ ವಿಶ್ ಮಾಡಿರುವ ರೀತಿ ನೋಡಿ ಹಬ್ಬಿರುವ ವದಂತಿಗಳಿಗೆ ತೆರೆ ಬಿದ್ದಿದೆ.

    ಪ್ರಶಾಂತ್ ನೀಲ್ ಸದ್ಯ ‘ದೇವರ’ (Devara Film) ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಳಿಕ ‘ಸಲಾರ್ 2’ ಸಿನಿಮಾದತ್ತ ಗಮನ ಕೊಡಲಿದ್ದಾರೆ.

  • ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ವಿಶ್ವಕ್ ಸೇನ್ ಎಂಟ್ರಿ

    ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ವಿಶ್ವಕ್ ಸೇನ್ ಎಂಟ್ರಿ

    ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ‘ಸಲಾರ್’ ಬಳಿಕ ಜ್ಯೂ.ಎನ್‌ಟಿಆರ್ ಜೊತೆ ಕೈಜೋಡಿಸಿದ್ದಾರೆ. ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯ ತಾರಕ್ ಸಿನಿಮಾಗೆ ಯುವ ನಟ ವಿಶ್ವಕ್ ಸೇನ್ (Vishwak Sen) ಸಾಥ್ ನೀಡಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಮೂಲಕ ಗಮನ ಸೆಳೆದಿರುವ ನಟ ಈಗ ಜ್ಯೂ.ಎನ್‌ಟಿಆರ್ (Jr. Ntr) ತಂಡದ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಕುತೂಹಲ ಕೆರಳಿಸಿದ ವಿಜಯ್‌ ಸೇತುಪತಿ ನಟನೆಯ 50ನೇ ಚಿತ್ರದ ‌’ಮಹಾರಾಜ’ ಟ್ರೈಲರ್

    ಕೆಲವು ಉತ್ತಮ ಸಿನಿಮಾಗಳನ್ನು ನೀಡಿ ಬೇಡಿಕೆಯ ಯುವ ನಟ ಎನಿಸಿಕೊಂಡಿರುವ ವಿಶ್ವಕ್ ಸೇನ್ ಅವರು ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾದಲ್ಲಿ ನಾಯಕ ನಟನಷ್ಟೆ ಗಟ್ಟಿಯಾದ ಇನ್ನೊಂದು ಪಾತ್ರವಿದ್ದು, ಆ ಪಾತ್ರವನ್ನು ವಿಶ್ವಕ್ ನಿರ್ವಹಿಸಲಿದ್ದಾರೆ. ಹಲವು ವರ್ಷಗಳಿಂದ ಜ್ಯೂ.ಎನ್‌ಟಿಆರ್ ಮತ್ತು ವಿಶ್ವಕ್ ಸ್ನೇಹಿತರು. ಹಾಗಾಗಿ ವಿಶ್ವಕ್ ಹೆಸರನ್ನು ಸ್ವತಃ ತಾರಕ್ ಸೂಚಿಸಿದ್ದು, ಆ ಪಾತ್ರವನ್ನು ನಟ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    ಜ್ಯೂ.ಎನ್‌ಟಿಆರ್ ಜೊತೆಗಿನ ಸಿನಿಮಾದ ನಂತರ ‘ಸಲಾರ್ 2’ ಸಿನಿಮಾವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಹಾಗಾಗಿ ಸದ್ಯ ಡ್ರ್ಯಾಗನ್ ಸಿನಿಮಾದ ಕೆಲಸದಲ್ಲಿ ‘ಕೆಜಿಎಫ್’ ನಿರ್ದೇಶಕ ತೊಡಗಿಸಿಕೊಂಡಿದ್ದಾರೆ. ಜ್ಯೂ.ಎನ್‌ಟಿಆರ್‌ಗಾಗಿ ಉತ್ತಮ ಕಥೆಯನ್ನೇ ಪ್ರಶಾಂತ್ ನೀಲ್ ಬರೆದಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

  • ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

    ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

    ‘ಕೆಜಿಎಫ್’ (KGF) ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು (Daiva Kola) ನೆರವೇರಿಸಿದ್ದಾರೆ. ಈ ವೇಳೆ, ಮತ್ತಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವ ಶ್ರೀನಿಧಿ ಶೆಟ್ಟಿಗೆ ಅಭಯ ನೀಡಿದೆ.

    ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಯಿತು. ಈ ಹಿಂದೆ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಂತೆ ಕಿನ್ನಿಗೋಳಿ ಸಮೀಪ ತಾಳಿಪಾಡಿ ಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದನ್ನೂ ಓದಿ:ಬಾಲಿವುಡ್ ನಲ್ಲಿ ಅಮಿತಾಭ್ ಬಿಟ್ಟರೆ ನನಗೆ ಹೆಚ್ಚು ಗೌರವ : ನಟಿ ಕಂಗನಾ

    ಈ ವೇಳೆ, ಶ್ರೀನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡಿದ್ದಾರೆ. ತನ್ನ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು, ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿಕೊಂಡಿದ್ದರು. ಅದರಂತೆ ಇದೀಗ ಹರಕೆಯನ್ನು ಶ್ರೀನಿಧಿ ಶೆಟ್ಟಿ ಸಲ್ಲಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವಗಳು ‘ಕೆಜಿಎಫ್’ ನಟಿಗೆ ಅಭಯ ನೀಡಿದೆ.

    ಕನ್ನಡದ ಕೆಜಿಎಫ್ 1, ಕೆಜಿಎಫ್ 2 (KGF 2) ಸಿನಿಮಾಗಳಲ್ಲಿ ಯಶ್‌ಗೆ (Yash) ನಾಯಕಿಯಾಗಿ ಮಿಂಚಿದ್ದರು. ಬಳಿಕ ಸೌತ್ ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಇದೀಗ ಕಿಚ್ಚ ಸುದೀಪ್ (Kiccha Sudeep) ಅವರ 47ನೇ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಆರಂಭ ಆಗಲಿದೆ.

  • ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು: ಯಶ್‌ ಕರೆ

    ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು: ಯಶ್‌ ಕರೆ

    ನ್ಯಾಷನಲ್ ಸ್ಟಾರ್ ಯಶ್ (Actor Yash) ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಹೊಸಕೆರೆಹಳ್ಳಿಯಲ್ಲಿ ಯಶ್ ಮತ ಚಲಾಯಿಸಿದ್ದಾರೆ. ದೇಶಕ್ಕಾಗಿ ಮತದಾನ ಮಾಡಿ ಎಂದು ಯೂತ್ಸ್‌ಗೆ ನಟ ಕರೆ ನೀಡಿದ್ದಾರೆ. ಇದನ್ನೂ ಓದಿ:ವೋಟ್ ಮಾಡದೇ ಬ್ಲೇಮ್ ಮಾಡಬೇಡಿ: ನಟಿ ರಚಿತಾ ರಾಮ್

    ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವೋಟ್ ಮಾಡುವುದು ನಮ್ಮ ಕರ್ತವ್ಯ. ನಾವು ವೋಟ್ ಮಾಡಲೇಬೇಕು. ಯಾವಾಗಿನಿಂದ ವೋಟ್ ಮಾಡುವುದಕ್ಕೆ ಅವಕಾಶ ಸಿಗುತ್ತೋ ಆಗಿಂದಲೇ ಮತದಾನ ಮಾಡುವುದನ್ನು ಅಭ್ಯಾಸ ಮಾಡಕೊಳ್ಳಬೇಕು ಎಂದು ಯಶ್ ಮಾತನಾಡಿದ್ದಾರೆ.

    ಪ್ರತಿ ಹಂತದಲ್ಲೂ ನಿರ್ಧಾರ ತೆಗೆದುಕೊಂಡು ಮತದಾನಕ್ಕೆ ಮುಂದಾಗಬೇಕು. ಕಳೆದ ಬಾರಿಗಿಂತ ಈ ಬಾರಿ ವೋಟ್ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು ಎಂದು ಯಶ್‌ ಮಾತನಾಡಿದ್ದಾರೆ.

    ಇಂದು ಭಾರತ ಒಳ್ಳೆಯ ಸ್ಥಾನದಲ್ಲಿದೆ. ಇದನ್ನು ಉಪಯೋಗಿಸಿಕೊಂಡು ನಾವು ಮುಂದಕ್ಕೆ ಸಾಗಬೇಕು ಎಂದು ಯಶ್ ಮಾತನಾಡಿದ್ದಾರೆ.

  • ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

    ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

    ಸ್ಯಾಂಡಲ್‌ವುಡ್ ಬ್ಯೂಟಿ ರೂಪಾ ರಾಯಪ್ಪ (Roopa Rayappa) ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ನಟಿಯ ಹಾಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಲಿಪ್‌ಲಾಕ್ ಫೋಟೋ ಹಂಚಿಕೊಂಡ ಕೌಸ್ತುಭ ಮಣಿ

    ‘ಕೆಜಿಎಫ್’ (KGF) ಸಿನಿಮಾದಲ್ಲಿ ಶಾಂತಿ ಎಂಬ ಪುಟ್ಟ ಪಾತ್ರದ ಮೂಲಕ ಗಮನ ಸೆಳೆದಿರೋ ನಟಿ ಟಾಪ್ ಧರಿಸದೇ ಫೋಟೋಶೂಟ್ ಮಾಡಿಸಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಟಿ ಕೆಂಪು ಬಣ್ಣ ಬಾಟಮ್ ಧರಿಸಿದ್ದಾರೆ. ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಎದೆಗೆ ಕೈ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಮಾಡುತ್ತಿದ್ದಂತೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಕೆಲವರು ನಟಿಯ ಲುಕ್‌ಗೆ ಕನ್ನಡದ ಉರ್ಫಿ ಜಾವೇದ್ (Urfi Javed) ಎಂದು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಈ ರೀತಿ ಫೋಟೋಶೂಟ್ ನಿಮಗೆ ಬೇಕಿತ್ತಾ? ಎಂದು ನಟಿಯ ಕಾಲೆಳೆದಿದ್ದಾರೆ.

    ಸಿನಿಮಾಗಳಲ್ಲಿ ಹೊಸ ಬಗೆಯ ಪಾತ್ರಗಳ ಮೂಲಕ ಪ್ರಯೋಗ ಮಾಡುವ ಹಾಗೆಯೇ ನಟಿ ಫೋಟೋಶೂಟ್‌ನಲ್ಲಿ ಹೊಸ ಪ್ರಯೋಗ ಮಾಡಿ ನಯಾ ಭಂಗಿಗಳಲ್ಲಿ ಪೋಸ್ ನೀಡುವ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.

    ಕೆಲ ದಿನಗಳ ಹಿಂದೆ ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ನಟಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ನಾಯಕಿ ಅಂದ್ಮೇಲೆ ಇದೆಲ್ಲಾ ಕಾಮನ್ ಎಂದು ನಟಿಯ ಬೆನ್ನು ತಟ್ಟಿದ್ದರು. ಇನ್ನೂ ಕೆಲವರು ನಟಿಯ ವಿಭಿನ್ನ ಪ್ರಯತ್ನಕ್ಕೆ ಭೇಷ್ ಎಂದಿದ್ದರು.

    ಇತ್ತೀಚೆಗೆ ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ ಮಾಡೋರಿಗೆ ಮನವಿ ಕೂಡ ಮಾಡಿದ್ದರು. ನನ್ನ ಹಾಲಿವುಡ್ ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದು ಬರೆದುಕೊಂಡಿದ್ದರು. ನಾನು ಅಪ್ಲೋಡ್ ಮಾಡಿರುವ ಫೋಟೋಸ್ ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ ಎಂದಿದ್ದರು.

    ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ (Roopa Rayappa)  ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮನವಿ ಮಾಡಿದ್ದರು.

    ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದ ಜಡ್ಜ್‌ಮೆಂಟ್‌’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    artist_3120_roopa-rayappa-photos-images-2023071066690200

    ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ಗಳಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ ಗುಡ್ ಬೈ

    ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ ಗುಡ್ ಬೈ

    ನಪ್ರಿಯ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ (Tarak Ponnappa) ವಿದಾಯ ಹೇಳಿದ್ದಾರೆ. ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಗುಡ್ ಬೈ ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಧಾರಾವಾಹಿ ಶುರುವಾದಾಗಿನಿಂದಲೂ ತಾರಕ್ ಪೊನ್ನಪ್ಪ ಅವರು ರೇಣು ಮಹಾರಾಜನ ಪಾತ್ರವನ್ನು ನಿರ್ವಹಿಸಿದ್ದರು. ಅವರ ಘನತೆ ಗಾಂಭೀರ್ಯ ಅದ್ಭುತ ನಟನೆಗೆ ಜನರು ಖುಷಿಪಟ್ಟಿದ್ದರು. ಆದರೆ ಈಗ ಬೇರೆ ಕೆಲಸಗಳ, ಕಮಿಟ್‌ಮೆಂಟ್‌ನಿಂದ ತಾರಕ್ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದನ್ನೂ ಓದಿ:Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    ಅಜರಾಮರ, ಬೃಹಸ್ಪತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಜಿಎಫ್ (KGF) ಸಿನಿಮಾದಲ್ಲಿ ಯಶ್ ಮುಂದೆ ಗ್ಯಾಂಗ್‌ಸ್ಟರ್ ಆಗಿ ತಾರಕ್ ನಟಿಸಿದ್ದರು. ‘ರಾಜ ರಾಣಿ’ ಸೀರಿಯಲ್ ಮೂಲಕ ಕಿರುತೆರೆಗೆ ನಟ ಪಾದಾರ್ಪಣೆ ಮಾಡಿದ್ದರು.

  • ಟಾಪ್‌ಲೆಸ್ ಆದ ‘ಕೆಜಿಎಫ್’ ನಟಿ- ಉರ್ಫಿ ಜಾವೇದ್ ಕನ್ನಡ ವರ್ಷನ್ ಎಂದ ನೆಟ್ಟಿಗರು

    ಟಾಪ್‌ಲೆಸ್ ಆದ ‘ಕೆಜಿಎಫ್’ ನಟಿ- ಉರ್ಫಿ ಜಾವೇದ್ ಕನ್ನಡ ವರ್ಷನ್ ಎಂದ ನೆಟ್ಟಿಗರು

    ‘ಕೆಜಿಎಫ್’ (KGF) ಚಿತ್ರದಲ್ಲಿ ಪುಟ್ಟ ಪಾತ್ರದ ಮೂಲಕ ಗಮನ ಸೆಳೆದ ನಟಿ ರೂಪಾ ರಾಯಪ್ಪ (Roopa Rayappa) ಇದೀಗ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ಟಾಪ್‌ಲೆಸ್ ಆಗಿ ರೂಪಾ ಕಾಣಿಸಿಕೊಂಡಿದ್ದಾರೆ. ರೂಪಾ ಲುಕ್‌ ಅನ್ನು ಬಾಲಿವುಡ್‌ ಬೆಡಗಿ ಉರ್ಫಿಗೆ ಹೋಲಿಸಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ನಟಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಸಿನಿಮಾಗಳಲ್ಲಿ ಹೊಸ ಬಗೆಯ ಪಾತ್ರಗಳ ಮೂಲಕ ಪ್ರಯೋಗ ಮಾಡುವ ಹಾಗೆಯೇ ನಟಿ ಫೋಟೋಶೂಟ್‌ನಲ್ಲಿ ಹೊಸ ಪ್ರಯೋಗ ಮಾಡಿ ನಯಾ ಭಂಗಿಗಳಲ್ಲಿ ಪೋಸ್ ನೀಡುವ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

    ಇದೀಗ ‘ಕೆಜಿಎಫ್’ ಬ್ಯೂಟಿ ರೂಪಾ ರಾಯಪ್ಪ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ನಟಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರೂಪಾ ನಯಾ ಲುಕ್ ನೋಡಿ ಪಡ್ಡೆಹುಡುಗರು ಇದೇನಿದು ಉರ್ಫಿ ಜಾವೇದ್ 2.0 ಕನ್ನಡ ವರ್ಷನ್ ಎಂದು ನಟಿಯ ಕಾಲೆಳೆದಿದ್ದಾರೆ. ನಾಯಕಿ ಅಂದ್ಮೇಲೆ ಇದೆಲ್ಲಾ ಕಾಮನ್‌ ಎಂದು ನಟಿಯ ಬೆನ್ನು ತಟ್ಟಿದ್ದಾರೆ. ಇನ್ನೂ ಕೆಲವರು ನಟಿಯ ವಿಭಿನ್ನ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ.

    ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸಿರುವ ರೂಪಾ, ಇತ್ತೀಚೆಗೆ ವಿವಿಧ ಭಂಗಿಗಳ ಬಿಕಿನಿ ಫೋಟೋ ಹಂಚಿಕೊಂಡು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ ಮಾಡೋರಿಗೆ ಮನವಿ ಕೂಡ ಮಾಡಿದ್ದರು.

    ನನ್ನ ಹಾಲಿವುಡ್ ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದು ಬರೆದುಕೊಂಡಿದ್ದರು. ನಾನು ಅಪ್ಲೋಡ್ ಮಾಡಿರುವ ಫೋಟೋಸ್ ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ.

    ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮನವಿ ಮಾಡಿದ್ದರು.

    ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್‌’ (The Judgement) ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ ವೆಬ್ ಸಿರೀಸ್‌ವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೂ ಪರಿಚಯವಾಗಲಿದ್ದಾರೆ.

  • ‘ಕೆಜಿಎಫ್’ ಚಿತ್ರವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿದ್ದ ಯೂಟ್ಯೂಬರ್ ನಿಧನ

    ‘ಕೆಜಿಎಫ್’ ಚಿತ್ರವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿದ್ದ ಯೂಟ್ಯೂಬರ್ ನಿಧನ

    ಖ್ಯಾತ ಯೂಟ್ಯೂಬರ್ ಆ್ಯಂಗ್ರಿ ರ‍್ಯಾಂಟ್‌ಮ್ಯಾನ್ (Angry Rantman) ಅಲಿಯಾಸ್ ಅಭ್ರದೀಪ್ ಸಾಹಾ (Abhradeep Saha) ತಮ್ಮ 27ನೇ ವಯಸ್ಸಿಗೆ ನಿಧನರಾಗಿದ್ದಾರೆ. ‘ಕೆಜಿಎಫ್’ (KGF) ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿದ್ದರು. ಅವರ ನಿಧನದ ಸುದ್ದಿ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾದಲ್ಲಿ ಸಿದ್ಧಾರ್ಥ್

    ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಅಬ್ರದೀಪ್ ಸಾಹಾ, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೂ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವೆಂಟಿಲೇಟರ್ ಸಹಾಯದಲ್ಲಿದ್ದರು. ಆದರೆ ಏಪ್ರಿಲ್ 16ರ ರಾತ್ರಿ ಅಧಿಕೃತವಾಗಿ ಅವರ ಸಾವಿನ ಸುದ್ದಿ ಹೊರಬಿದ್ದಿದೆ.

    ಅಬ್ರದೀಪ್ ಬಹು ಅಂಗಾಂಗಳ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸರ್ಜರಿ ಕೂಡ ಮಾಡಲಾಗಿತ್ತು. ಸರ್ಜರಿ ಬಳಿಕ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಏ.16ರ ರಾತ್ರಿ ನಿಧನರಾಗಿದ್ದಾರೆ.

    ರಾಜಕೀಯ, ಕ್ರಿಕೆಟ್, ಸಿನಿಮಾ, ತಿನಿಸುಗಳ ಬಗ್ಗೆ ರಿವ್ಯೂ ಹೇಳುವ ಮೂಲಕ ಅಭ್ರದೀಪ್ ಗಮನ ಸೆಳೆದಿದ್ದರು. ಅದರಕ್ಕೂ ಕೆಜಿಎಫ್ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಹೇಳಿದ್ದರು. ಯಶ್ ನಟನೆಯನ್ನು ಹಾಡಿಹೊಗಳಿದ್ದರು. ಆ ವಿಡಿಯೋ 17 ಲಕ್ಷ ವಿವ್ಸ್ ಪಡೆದಿತ್ತು. ಯೂಟ್ಯೂಬ್‌ನಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದರು.

  • ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ‘ಯುಐ’ (UI) ಸಿನಿಮಾದ ಟ್ರೋಲ್ ಸಾಂಗ್‌ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ‘ಕೆಜಿಎಫ್’ ಡೈರೆಕ್ಟರ್ ಪ್ರಶಾಂತ್ ನೀಲ್ ಬಗ್ಗೆ ಉಪೇಂದ್ರಗೆ ಕೇಳಲಾಗಿದೆ. ಪ್ರಶಾಂತ್ ನೀಲ್ ಹೆಸರು ಹೇಳ್ತಿದ್ದಂತೆ ಉಪೇಂದ್ರ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

    ಕೆಲದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕ ಎಂದು ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದರು. ಇದರ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ಇದರ ಬಗ್ಗೆಯೇ ಉಪೇಂದ್ರ ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಇದಕ್ಕೆ ಉಪೇಂದ್ರ ಪ್ರತಿಕ್ರಿಯಿಸಿ, ಪ್ರಶಾಂತ್ ನೀಲ್ (Prashanth Neel) ಗ್ರೇಟ್ ಡೈರೆಕ್ಟರ್. ಅವರನ್ನು ಇಡೀ ದೇಶವೇ ಗುರುತು ಹಿಡಿಯುತ್ತಿದೆ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರೆ ಖುಷಿ ಆಗುತ್ತದೆ. ಅವರ ಶಬ್ದಗಳು ನನ್ನನ್ನು ಸ್ಪರ್ಶಿಸಿದವು ಎಂದು ಹೇಳುತ್ತಲೇ ಕನ್ನಡದ ಕೆಜಿಎಫ್ (KGF) ನಿರ್ದೇಶಕನಿಗೆ ಥ್ಯಾಂಕ್ಯೂ ಎಂದಿದ್ದಾರೆ ಉಪೇಂದ್ರ.

    ‘ಉಗ್ರಂ’ ಅಬ್ಬರಿಸಿ ಆಗಿ 10 ವರ್ಷಗಳು ಕಳೆದಿವೆ. ಈ ವೇಳೆ, ಸಂದರ್ಶನದಲ್ಲಿ ನಿಮ್ಮ ಫೇವರಿಟ್ ಡೈರೆಕ್ಟರ್ ಯಾರು ಎಂದು ಅನುಶ್ರೀ ಕೇಳಿದ್ರೆ? ಉಪೇಂದ್ರ ಅಂತ ಪ್ರಶಾಂತ್ ನೀಲ್ ಹೇಳಿದ್ದರು.

    ಉಪೇಂದ್ರ (Upendra) ಅವರು ನನ್ನ ಆಲ್ ಟೈಮ್ ಫೇವರಿಟ್ ನಿರ್ದೇಶಕರು. ಕನ್ನಡ ಕಾರ್ಯಕ್ರಮದಲ್ಲಿ ಕೂತಿದ್ದೀನಿ ಎಂದು ಈ ಮಾತನ್ನು ಹೇಳುತ್ತಿದ್ದೀನಿ ಅಂದುಕೊಳ್ಳಬೇಡಿ. ವಿಶ್ವದ ಯಾರೊಬ್ಬರೂ ಶ್.!, ತರ್ಲೆ ನನ್ಮಗ, ಓಂ ಸಿನಿಮಾ ಮಾಡಲು ಸಾಧ್ಯವಿಲ್ಲ. ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ‘ಎ’ ಚಿತ್ರವಂತೂ ಯಾರೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದರು ಪ್ರಶಾಂತ್ ನೀಲ್. ಈ ವಿಚಾರ ಉಪೇಂದ್ರ ಗಮನಕ್ಕೂ ಬಂದಿದೆ. ಹಾಗಾಗಿ ಸಂದರ್ಶನದ ಮೂಲಕ ಧನ್ಯವಾದ ತಿಳಿಸಿದ್ದಾರೆ.

  • ‘ಕಾಂತಾರ’, ‘ಕೆಜಿಎಫ್‌’ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ- ಶಿವಣ್ಣ

    ‘ಕಾಂತಾರ’, ‘ಕೆಜಿಎಫ್‌’ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ- ಶಿವಣ್ಣ

    15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಸಿನಿಮೋತ್ಸವಕ್ಕೆ ಡಾಲಿ ರಾಯಭಾರಿಯಾಗಿದ್ದು, ಕಾರ್ಯಕ್ರಮಕ್ಕೆ ನಟ ಶಿವಣ್ಣ (Shivarajkumar) ಭಾಗಿಯಾಗುವ ಮೂಲಕ ಸಾಥ್ ನೀಡಿದ್ದಾರೆ. ಕಾಂತಾರ(Kantara), ಕೆಜಿಎಫ್‌ನಿಂದ (KGF) ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇದನ್ನೂ ಓದಿ:ಇಂದಿನಿಂದ ಬೆಂಗಳೂರು ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

    ಇಂದು 15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ ಮಾರ್ಚ್ 7ರವರೆಗೂ ಸಿನಿಮಾ ಹಬ್ಬ ನಡೆಯಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಫಿಲ್ಮ್ ಫೆಸ್ಟಿವಲ್‌ಗೆ 200 ಸಿನಿಮಾಗಳು ಬಂದಿವೆ. ಅದರಲ್ಲಿ ಕನ್ನಡ ಸಿನಿಮಾಗಳು ಕೂಡ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ.

    ಕಾಂತಾರ, ಕೆಜಿಎಫ್‌ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಅಂದರೆ ನಾವೆಲ್ಲಾ ಹೆಮ್ಮೆ ಪಡುವ ವಿಚಾರ. ಕನ್ನಡ ಭಾಷೆ ಬಂದು 90 ವರ್ಷ ಆಯ್ತು ಇಂಡಸ್ಟ್ರಿಗೆ ಬಂದು. ಇದರಲ್ಲಿ ನನ್ನದು ಕೂಡ 38 ವರ್ಷ ಸೇವೆ ಇದೆ ಅನ್ನೋದು ಖುಷಿಯಿದೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿರೋದು ಖುಷಿಯಿದೆ ಎಂದು ಶಿವಣ್ಣ ಬೆಂಗಳೂರು ಚಿತ್ರೋತ್ಸವದಲ್ಲಿ ಮಾತನಾಡಿದ್ದಾರೆ.