Tag: ಕೆಜಿಎಫ್

  • ಸಿನಿಮಾಗೆ ಕೋರ್ಟ್ ತಡೆಯಾಜ್ಞೆ: ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ

    ಸಿನಿಮಾಗೆ ಕೋರ್ಟ್ ತಡೆಯಾಜ್ಞೆ: ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ

    ಬೆಂಗಳೂರು: ಶುಕ್ರವಾರ ಸಿನಿಮಾ ನಿಗದಿಯಂತೆ ಬಿಡುಗಡೆಯಾಗಲಿದೆ. ನಮಗೆ ಮಾಧ್ಯಮಗಳ ಮೂಲಕವೇ ನ್ಯಾಯಾಲಯ ನೀಡಿದ ತಡೆಯಾಜ್ಞೆ ಬಗ್ಗೆ ಮಾಹಿತಿ ಬಂದಿದೆ. ಇದೂವರೆಗೂ ನಮ್ಮ ಕೈಗೆ ನ್ಯಾಯಾಲಯದ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.

    ಸಿನಿಮಾವನ್ನು ಎಲ್ಲ ವಿತರಕರಿಗೆ ವಿತರಣೆ ಮಾಡಲಾಗಿದೆ. ಶುಕ್ರವಾರ ಬೆಳಗಿನ ಜಾವವೇ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ. ಅರ್ಜಿದಾರರಾದ ವೆಂಕಟೇಶ್ ಮತ್ತು ಆನಂದ್ ಎಂಬವರ ಪರಿಚಯವೇ ನನಗಿಲ್ಲ. ಸಿನಿಮಾ ನೋಡದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರೋದು ತಪ್ಪು. ಈ ವಿಷಯದ ಬಗ್ಗೆ ಕೆಜಿಎಫ್ ಚಿತ್ರತಂಡಕ್ಕೆ ಗೊತ್ತಿಲ್ಲ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ನ್ಯಾಯಾಲಯಕ್ಕೆ ನಾವು ಗೌರವವನ್ನು ನೀಡುತ್ತೇವೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ ರೌಡಿ ತಂಗಂ ಜೀವನಾಧರಿತ ಕಥೆ ಅಂತಾ ಹೇಳಿಲ್ಲ. ಈ ಬಗ್ಗೆ ಚಿತ್ರ ತಂಡದಲ್ಲಿ ಚರ್ಚೆಯೂ ನಡೆದಿಲ್ಲ. ಈ ಮೊದಲು ಅರ್ಜಿದಾರರು ಅಂತ ಹೇಳಿಕೊಳ್ಳುವ ವೆಂಕಟೇಶ್ ಮತ್ತು ಆನಂದ್ ನಮ್ಮನ್ನ ಸಂಪರ್ಕ ಮಾಡಿಲ್ಲ ಅಂತಾ ಅಂದ್ರು.

  • ಕೆಜಿಎಫ್ ಚಿತ್ರಕ್ಕೆ ತಡಯಾಜ್ಞೆ: ಅರ್ಜಿದಾರರ ಪರ ವಕೀಲರು ಹೇಳೋದೇನು?

    ಕೆಜಿಎಫ್ ಚಿತ್ರಕ್ಕೆ ತಡಯಾಜ್ಞೆ: ಅರ್ಜಿದಾರರ ಪರ ವಕೀಲರು ಹೇಳೋದೇನು?

    ಬೆಂಗಳೂರು: ಶುಕ್ರವಾರ ತೆರೆಕಾಣಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ.

    ಕೋರ್ಟ್ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲ ರಘುನಾಥ್ , ನನ್ನ ಕ್ಷಕಿದಾರರಾದ ವೆಂಕಟೇಶ್ ಹಾಗೂ ಆನಂದ್ ರವರು ಸಲ್ಲಿಸಿದ್ದ ಹಕ್ಕುಚ್ಯುತಿ ವಿವಾದಕ್ಕೆ ಸಂಬಂಧಿಸಿದಂತೆ, 10ನೇ ಸಿಟಿ ಸಿವಿಲ್ ಕೋರ್ಟ್ ಜನವರಿ 7ರ ವರೆಗೆ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ.

    ದೃಶ್ಯ ಮಾಧ್ಯಮ ತುಂಬಾ ಪರಿಣಾಮ ಬೀರುತ್ತದೆ. ಹೀಗಾಗಿ ನಿರ್ದೇಶಕರು ಉತ್ತಮವಾದ ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಜಿಎಫ್ ಸಿನೆಮಾದ ಟ್ರೇಲರ್ ಹಾಗೂ ಸನ್ನಿವೇಶಗಳನ್ನು ಗಮನಿಸಿದರೇ, ಇದು ರೌಡಿ ತಂಗಂಗೆ ಸಂಬಂಧಪಟ್ಟ ಚಿತ್ರವಾಗಿದೆ. ಈ ಚಿತ್ರದ ಮೂಲಹಕ್ಕು ವೆಂಕಟೇಶ್ ರವರ ಬಳಿ ಇದೆ. ಇದನ್ನು ಕೆಜಿಎಫ್ ಚಿತ್ರ ದುರುಪಯೋಗ ಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ತಡೆಯಾಜ್ಞೆಯನ್ನು ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ನಾವು ನ್ಯಾಯಾಲಯಕ್ಕೆ ಕಾಪಿರೈಟ್ ಹೊಂದಿದ್ದರೆ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದೇವೆ. ಕೆಜಿಎಫ್ ಚಿತ್ರ ಕನ್ನಡ ಭಾಷೆ ಸೇರಿದಂತೆ ಇತರೆ ಯಾವುದೇ ಭಾಷೆಗಳಲ್ಲಿಯೂ ಬಿಡುಗಡೆ ಆಗುವಂತಿಲ್ಲವೆಂದು ಆದೇಶ ನೀಡಿದೆ. ಇದು ಸಂಪೂರ್ಣವಾಗಿ ರೌಡಿ ತಂಗಂ ಗೆ ಸಂಬಂಧಪಟ್ಟ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾ ರಿಲೀಸ್ ಮಾಡ್ತೀವಿ: ಚಿತ್ರತಂಡ

    ಸಿನಿಮಾ ರಿಲೀಸ್ ಮಾಡ್ತೀವಿ: ಚಿತ್ರತಂಡ

    ಬೆಂಗಳೂರು: ನಮಗೆ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ. ಹಾಗಾಗಿ ನಾಳೆ ಸಿನಿಮಾ ರಿಲೀಸ್ ಮಾಡಲಿದ್ದೇವೆ. ಕೆಜಿಎಫ್ ಚಿತ್ರದ ಕಥೆ ಮತ್ತು ತಂಗಂ ಜೀವನಾಧರಿತ ಕಥೆಯೇ ಬೇರೆಯಾಗಿದ್ದು, ನಿಗದಿಯಂತೆ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪಬ್ಲಿಕ್ ಟಿವಿಗೆ ತಿಳಿಸಿದೆ.

    ಈಗಾಗಲೇ ಸಿನಿಮಾದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಸಿನಿಮಾ ರಿಲೀಸ್ ಆಗುತ್ತಾ ಅಥವಾ ಇಲ್ಲವಾ ಎಂಬ ಗೊಂದಲ ಉಂಟಾಗಿದೆ. ತಂಗಂ ಜೀವನಾಧರಿತ ಕಥೆಯಲ್ಲ ಎಂಬುವುದು ಚಿತ್ರತಂಡದ ವಾದವಾಗಿದೆ. ಇಂದು ರಾತ್ರಿಯೇ ಚಿತ್ರತಂಡದ ಬಾಗಿಲು ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಕೆಜಿಎಫ್ ಮಾಡಿದೆ. ಇತ್ತ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಝೀರೋ ಸಿನಿಮಾಗೆ ಸೆಡ್ಡು ಹೊಡೆದು ಭಾರತದ ನಿರೀಕ್ಷೆ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್ ಇದೆ. ಒಟ್ಟಿನಲ್ಲಿ ನ್ಯಾಯಾಲಯದ ಮಧ್ಯಂತರ ತಡೆ ನೀಡಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

    ವಿಶ್ವದಾದ್ಯಂತ ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ನಟ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾಗೆ ಬಿಡುಗಡೆಗೆ ನಗರದ 10 ನೇ ಸಿಟಿ ಸಿವಿಲ್ ಕೋರ್ಟ್‍ನಿಂದ ಮಧ್ಯಂತರ ತಡೆ ನೀಡಿದೆ.

    ಕೋರ್ಟ್ ಮಧ್ಯಂತರ ಆದೇಶದ ಅನ್ವಯ 2019 ಜನವರಿ 7 ನೇ ದಿನಾಂಕದವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ. ವೆಂಕಟೇಶ್ ಎಂಬವರು ಕೆಜಿಎಫ್ ಸಿನಿಮಾ ವಿರುದ್ಧ ದಾವೆ ಹೂಡಿದ್ದು, ಕೆಜಿಎಫ್ ಸಿನಿಮಾ ರೌಡಿ ತಂಗಂ ಜೀವನಾಧರಿತ ಚಿತ್ರ ಎಂದು ಆರೋಪ ಮಾಡಿದ್ದಾರೆ. ತಾವು ತಂಗಂ ಜೀವನಾಧರಿತ ಸಿನಿಮಾ ಮಾಡಲು ಹಕ್ಕು ಪಡೆದಿದ್ದು, ಅದ್ದರಿಂದ ಸಿನಿಮಾಗೆ ಬಿಡುಗಡೆಗೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಗೆ ಶಾಕ್- ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆ

    ಕೆಜಿಎಫ್ ಗೆ ಶಾಕ್- ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆ

    ಬೆಂಗಳೂರು: ವಿಶ್ವದಾದ್ಯಂತ ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ನಟ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾಗೆ ಸಂಕಷ್ಟ ಎದುರಾಗಿದ್ದು, ಚಿತ್ರ ಬಿಡುಗಡೆಗೆ ನಗರದ 10 ನೇ ಸಿಟಿ ಸಿವಿಲ್ ಕೋರ್ಟ್‍ನಿಂದ ಮಧ್ಯಂತರ ತಡೆ ನೀಡಿದೆ.

    ಕೋರ್ಟ್ ಮಧ್ಯಂತರ ಆದೇಶದ ಅನ್ವಯ 2019 ಜನವರಿ 7 ನೇ ದಿನಾಂಕದವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ. ವೆಂಕಟೇಶ್ ಎಂಬವರು ಕೆಜಿಎಫ್ ಸಿನಿಮಾ ವಿರುದ್ಧ ದಾವೆ ಹೂಡಿದ್ದು, ಕೆಜಿಎಫ್ ಸಿನಿಮಾ ರೌಡಿ ತಂಗಂ ಜೀವನಾಧರಿತ ಚಿತ್ರ ಎಂದು ಆರೋಪ ಮಾಡಿದ್ದಾರೆ. ತಾವು ತಂಗಂ ಜೀವನಾಧರಿತ ಸಿನಿಮಾ ಮಾಡಲು ಹಕ್ಕು ಪಡೆದಿದ್ದು, ಅದ್ದರಿಂದ ಸಿನಿಮಾಗೆ ಬಿಡುಗಡೆಗೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಮತ್ತೊಂದೆಡೆ ಸಿನಿಮಾ ಟೈಟಲ್ ಬದಲಿಸುವಂತೆ ರತನ್ ಹಾಗೂ ಯೋಗಿಶ್ ಎಂಬವರು ಸೆಷನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಕೆಜಿಎಪ್ ಚಿನ್ನದ ಗಣಿ, ಅದನ್ನು ರಕ್ತಪಾತದ ಮೂಲಕ ತೋರಿಸಲು ಹೊರಟ್ಟಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ಕೆ.ಜಿ.ಎಫ್ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತೆ. ಸಿನಿಮಾ ಬಿಡುಗಡೆಯಾಗ ಬೇಕಾದರೆ ಕೆಜಿಎಫ್ ಟೈಟಲ್ ಬದಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ ಟೈಟಲ್ ಬದಲಾವಣೆ ಮಾಡುವ ವರೆಗೂ ಬಿಡುಗಡೆಗೆ ಅವಕಾಶ ನೀಡಬಾರದು ಎಂಬುದು ಅರ್ಜಿದಾರರ ಮನವಿಯಾಗಿದೆ. ವಕೀಲ ಲೋಹಿತ್ ಅವರ ಮೂಲಕ ನಾಯಾಲಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಸಿನಿಮಾ ಟಿಕೆಟ್‍ಗಾಗಿ ಥಿಯೇಟರ್ ಸಿಬ್ಬಂದಿಯ ಕೈ ಬೆರಳನ್ನೇ ಕಟ್ ಮಾಡ್ದ!

    ಕೆಜಿಎಫ್ ಸಿನಿಮಾ ಟಿಕೆಟ್‍ಗಾಗಿ ಥಿಯೇಟರ್ ಸಿಬ್ಬಂದಿಯ ಕೈ ಬೆರಳನ್ನೇ ಕಟ್ ಮಾಡ್ದ!

    ಬೆಂಗಳೂರು: ಕೆಜಿಎಫ್ ಸಿನಿಮಾ ಟಿಕೆಟ್‍ಗಾಗಿ ವ್ಯಕ್ತಿಯೊಬ್ಬ ಥಿಯೇಟರ್ ಸಿಬ್ಬಂದಿಯ ಕೈ ಬೆರಳನ್ನೇ ಕಟ್ ಮಾಡಿರುವ ಶಾಕಿಂಗ್ ಘಟನೆ ನಗರದ ವೀರೇಶ್ ಚಿತ್ರಮಂದಿರದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದ ಸಿಬ್ಬಂದಿ ಅರವಿಂದ್ ಎಂಬವರ ಬಳಿ ಬ್ಲ್ಯಾಕ್ ಟಿಕೆಟ್ ಮಾರಾಟಗಾರ ರಮೇಶ್ (35) ಎಂಬಾತ ಟಿಕೆಟ್ ಕೊಡಿಸುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಆತನಿಗೆ ಟಿಕೆಟ್ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆತ, ಸಿಬ್ಬಂದಿ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಿಬ್ಬಂದಿ ಅರವಿಂದ್ ಅವರ ಎಡಗೈ ಬೆರಳು ಕಟ್ ಆಗಿದೆ. ಹಾಗೇ ಅವರ ಬಲಗೈಗೆ ಗಂಭೀರ ಗಾಯಗಳಾಗಿದೆ.

    ಅರವಿಂದ್‍ಗೆ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅರವಿಂದ್ ಗುಣಮುಖರಾಗಿದ್ದಾರೆ. ಘಟನೆ ಕುರಿತು ಅರವಿಂದ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಗಾಯಗೊಂಡಿದ್ದಾಗಿ ಮಾಹಿತಿ ನೀಡಿದ್ದು, ವಿಜಯನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಡಿಸೆಂಬರ್ 17ರಂದು ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ಓದಿ

    ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ಓದಿ

    ಕೋಲಾರ: ದೇಶಾದ್ಯಂತ ಈಗ ಕೆಜಿಎಫ್ ಹೆಸರು ಕೇಳಿದರೆ ಜನರು ರೋಮಾಂಚನಗೊಳ್ಳುತ್ತಿದ್ದಾರೆ. ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ದೇಶದ ಕೀರ್ತಿ. ಅಂದು ಇದೆ ಜಾಗ ದೇಶವನ್ನು ಉಳಿಸಿದರೆ, ಇಂದು ಹವಾ ಎಬ್ಬಿಸಿ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುತ್ತಿದೆ.

    ಕೆಜಿಎಫ್ ಸಿನಿಮಾಕ್ಕಾಗಿ ಇಡೀ ದೇಶ ಹಾಗೂ ವಿಶ್ವಾದ್ಯಂತ ಜನರು ಕುತೂಹಲ ಹಿಡಿದಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಸಿನಿಮಾದ ಕಥೆ ಏನೇ ಇದ್ರು ಕೆಜಿಎಫ್ ಎನ್ನುವ ಪ್ರದೇಶ ಚಿನ್ನವನ್ನು ಬೆಳೆಯುತ್ತಿದ್ದ ಮಣ್ಣು, ಶತ ಶತಮಾನಗಳ ಇತಿಹಾಸದ ಕಥೆ ಹೇಳುವ ಈ ಪ್ರದೇಶ ಇರೋದು ಕೋಲಾರ ಜಿಲ್ಲೆಯ ಚಿನ್ನದ ನಾಡು ಕೆಜಿಎಫ್ ನಲ್ಲಿ. ಇಂದು ಸಿನಿಮಾ ರೋಚಕ ಕಥೆಯನ್ನಡಗಿಸಿಟ್ಟುಕೊಂಡು ಕುತೂಹಲ ಮೂಡಿಸಿದ್ರೆ, ಈ ಕೆಜಿಎಫ್ ಪ್ರದೇಶವೂ ಅದಕ್ಕಿಂತ ರೋಚಕ ಕಥೆ ಹೊಂದಿದೆ.

    ಬರೋಬ್ಬರಿ 150 ವರ್ಷಗಳ ಕಾಲ ಈ ನೆಲದಲ್ಲಿ ಚಿನ್ನವನ್ನು ಬಗೆದು ಇಡೀ ವಿಶ್ವಕ್ಕೆ ಕೊಟ್ಟಂತ ಕೀರ್ತಿ ಈ ನೆಲಕ್ಕಿದೆ. ಆದರೆ ಕಳೆದ 2001ರ ಮಾರ್ಚ್-1ರಂದು ಈ ಅದ್ಭುತವಾದ ಸುವರ್ಣ ಇತಿಹಾಸ ಹೊಂದಿದ್ದ ಕೆಜಿಎಫ್ ಚಿನ್ನದ ಗಣಿ ನಷ್ಟದ ನೆಪವೊಡ್ಡಿ ಬೀಗ ಹಾಕಲಾಯಿತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾದ್ರು, ಸರ್ಕಾರದಿಂದ ಸಿಗಬೇಕಾದ ಪರಿಹಾರ ಸಿಗದೆ 18 ವರ್ಷಗಳೇ ಕಳೆದ್ರು, ಇಲ್ಲಿನ ಕಾರ್ಮಿಕರು ಮಾತ್ರ ಇಂದಲ್ಲ ನಾಳೆ ನಮ್ಮ ಬದುಕಲ್ಲೂ ಒಳ್ಳೆಯ ದಿನ ಬಂದೇ ಬರುತ್ತದೆ ಅನ್ನೋ ನಿರೀಕ್ಷೆಯ ಕಣ್ಣುಗಳಲ್ಲಿ ಕಾಯುತ್ತಿದ್ದಾರೆ. ಚಿನ್ನದ ಗಣಿಯನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿ ಹೋಯ್ತು, ಪರಿಣಾಮ ತುತ್ತು ಅನ್ನಕ್ಕಾಗಿ ಕಾರ್ಮಿಕರು ದೂರ ಊರುಗಳಿಗೆ ನಿತ್ಯ ಅಲೆಯುವ ಪರಿಸ್ಥಿತಿ ಬಂದಿದೆ. ಕೆಜಿಎಫ್ ಎನ್ನುವ ಸಿನಿಮಾದ ಜೊತೆಗೆ ಗಣಿ ಪುನಾರಂಭವಾಗುತ್ತಾ ಎನ್ನುವ ನಿರೀಕ್ಷೆ ಕಾರ್ಮಿಕರದ್ದಾಗಿದೆ.

    ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಹಾಗೂ ಈ ಸೈನೈಡ್ ಗುಡ್ಡದ ಮೇಲೆ ಕನ್ನಡ, ತೆಲುಗು, ತಮಿಳು ಭಾಷೆಯ ನೂರಾರು ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಚಿತ್ರೀಕರಣ ಮಾಡಿರುವ ಯಶಸ್ವಿ ನಟರ ಹತ್ತಾರು ಸಿನಿಮಾಗಳು ಹಿಟ್ ಆಗಿವೆ. ಆದ್ರೆ ಕೆಜಿಎಫ್ ಸಿನಿಮಾ ವಿಶೇಷ ಅಂದ್ರೆ ಇಲ್ಲಿನ ಚಿನ್ನದ ಗಣಿ ಸೈನೈಡ್ ಗುಡ್ಡದ ಮೇಲೆ ಬೃಹತ್ತಾದ ಸೆಟ್ ಹಾಕಿ ಸುಮಾರು ಎರಡು ತಿಂಗಳ ಕಾಲ ಇಲ್ಲೇ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಚಿತ್ರದಲ್ಲೂ ಚಿನ್ನದ ಗಣಿ ಕಾರ್ಮಿಕರ ಕಷ್ಟದ ಬದುಕನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ.

    ಕೆಜಿಎಫ್ ಚಿತ್ರದ ಮೂಲಕ ಸ್ಥಳೀಯ ಅಂದ್ರೆ 70- 80ರ ದಶಕದ ಪರಿಸ್ಥಿತಿಯನ್ನು ಮನದಟ್ಟು ಮಾಡುವ ಪ್ರಯತ್ನ ನಡೆದಿದೆ. ಇದರ ಮೂಲಕವಾದರೂ ಚಿನ್ನದ ಗಣಿ ಕಾರ್ಮಿಕರ ನಿಜ ಬದುಕು, ಇಲ್ಲಿನ ಜನರ ಗೋಳು ಆಡಳಿತ ವರ್ಗದ ಅಧಿಕಾರಿಗಳ ಮನ ಮುಟ್ಟಲಿ. ಆ ಮೂಲಕ 18 ವರ್ಷಗಳ ಸಂಕಷ್ಟದ ಬಳಿಕ ನಮ್ಮ ಬದುಕು ಸುಧಾರಿಸುತ್ತದಾ ಎನ್ನುವ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿರಾಸೆಯಲ್ಲಿದ್ದ `ಕೆಜಿಎಫ್’ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಸಿಕ್ಕಿದ್ದು ಹೇಗೆ?

    ನಿರಾಸೆಯಲ್ಲಿದ್ದ `ಕೆಜಿಎಫ್’ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಸಿಕ್ಕಿದ್ದು ಹೇಗೆ?

    ಕೋಲಾರ: ಭಾರತದ ನಿರೀಕ್ಷಿತ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ದೇಶಾದ್ಯಂತ 5 ಭಾಷೆಯಲ್ಲಿ ನಾಳೆ ಬಿಡುಗಡೆಯಾಗಲಿದೆ. ಆದರೆ ಚಿತ್ರೀಕರಣ ಸೇರಿದಂತೆ ಕಥಾಹಂದರ ಹೊಂದಿರುವ ಕೆಜಿಎಫ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲ್ಲ ಎಂಬ ಸುದ್ದಿ ಬಂದಿತ್ತು. ಆದರೆ ಈಗ ಈ ಸಿನಿಮಾ ಕೆಜಿಎಫ್‍ನಲ್ಲಿ ಬಿಡುಗಡೆಯಾಗುತ್ತಿದೆ.

    ಕೆಜಿಎಫ್‍ನಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಥಿಯೇಟರ್ ಮಾಲೀಕರ ಜೊತೆ ಮಾತನಾಡಿದ್ದೇನೆ. ಯಾವುದೇ ಗೊಂದಲ ಇಲ್ಲ. ಕೆಜಿಎಫ್‍ನ 2 ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗುತ್ತೆ ಎಂದು ಹೊಂಬಾಳೆ ಫಿಲ್ಮ್ ನಿರ್ಮಾಪಕ ವಿಜಯ್ ತಿಳಿಸಿದ್ದಾರೆ. ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಕೆಜಿಎಫ್ ನಗರದಲ್ಲೂ ಕೆಜಿಎಫ್ ಸಿನಿಮಾ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಕೆಜಿಎಫ್ ನಲ್ಲಿ ರಿಲೀಸ್ ಆಗ್ತಿಲ್ಲ ಯಶ್ ಬಹುನಿರೀಕ್ಷಿತ ಚಿತ್ರ

    ಕೆಜಿಎಫ್‍ನಲ್ಲಿ ಸಿನಿಮಾ ಚಿತ್ರೀಕರಣಗೊಂಡರೂ ಚಿತ್ರಮಂದಿರದ ಮಾಲೀಕರು ಚಿತ್ರದ ಬಾಕ್ಸ್ ಬಜೆಟ್ ನಿಂದ ದೂರ ಸರಿದಿದ್ದರು. ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲು ಮಾಲೀಕರು 25 ಲಕ್ಷ ರೂ. ಕೇಳಿದ್ದರಂತೆ. ಈ ವಿಚಾರದ ಬಗ್ಗೆ ಎದ್ದಿದ್ದ ಗೊಂದಲ ಈಗ ಇತ್ಯರ್ಥವಾದ ಕಾರಣ ಸಿನಿಮಾ ಬಿಡುಗಡೆಯಾಗಲಿದೆ.

    ಕೆಜಿಎಫ್ ತಾಲೂಕಿನ ಬೇತಮಂಗಲ ವಿನಾಯಕ ಚಿತ್ರಮಂದಿರ ಹಾಗೂ ನಗರದ ಮೀನಾಕ್ಷಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮೂಲಕ ನಿರಾಸೆಯಲ್ಲಿದ್ದ ಯಶ್ ಹಾಗೂ ಕೆಜಿಎಫ್ ಚಿತ್ರದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 10ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ನಲ್ಲಿ ರಿಲೀಸ್ ಆಗ್ತಿಲ್ಲ ಯಶ್ ಬಹುನಿರೀಕ್ಷಿತ ಚಿತ್ರ

    ಕೆಜಿಎಫ್ ನಲ್ಲಿ ರಿಲೀಸ್ ಆಗ್ತಿಲ್ಲ ಯಶ್ ಬಹುನಿರೀಕ್ಷಿತ ಚಿತ್ರ

    ಕೋಲಾರ: ಭಾರತದ ಬಹು ನಿರೀಕ್ಷಿತ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ದೇಶಾದ್ಯಂತ 5 ಭಾಷೆಯಲ್ಲಿ ನಾಳೆ ಬಿಡುಗಡೆಯಾಗಲಿದೆ. ಆದರೆ ಚಿತ್ರೀಕರಣ ಸೇರಿದಂತೆ ಕಥಾಹಂದರ ಹೊಂದಿರುವ ಕೆಜಿಎಫ್ ನಲ್ಲಿ ಈ ಚಿತ್ರ ಬಿಡುಗಡೆ ಭಾಗ್ಯವಿಲ್ಲ.

    ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸೇರಿದಂತೆ 5 ಭಾಷೆಗಳಲ್ಲಿ ಕೆಜಿಎಫ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ಸೈನೆಡ್ ಗುಡ್ಡದ ಮೇಲೆ ಚಿತ್ರತಂಡ ಎರಡು ತಿಂಗಳ ಕಾಲ ಸತತವಾಗಿ ಚಿತ್ರೀಕರಣ ಮಾಡಿದ್ದಾರೆ.

    ಕೆಜಿಎಫ್‍ನಲ್ಲಿ ಸಿನಿಮಾ ಚಿತ್ರೀಕರಣಗೊಂಡರೂ ಚಿತ್ರಮಂದಿರದ ಮಾಲೀಕರು ಚಿತ್ರದ ಬಾಕ್ಸ್ ಬಜೆಟ್ ನಿಂದ ದೂರ ಸರಿದಿದ್ದಾರೆ. ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲು ಮಾಲೀಕ 25 ಲಕ್ಷ ರೂ. ಕೇಳಿದ್ದಾರೆ. ಹಾಗಾಗಿ ಕೆಜಿಎಫ್‍ನ ಲಕ್ಷ್ಮೀ ಮತ್ತು ಒಲಿಂಪಿಯಾ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆಯಾಗುತ್ತಿಲ್ಲ. ಈ ಸುದ್ದಿ ಕೇಳಿ ಯಶ್ ಹಾಗೂ ಕೆಜಿಎಫ್ ಅಭಿಮಾನಿಗಳು ನಿರಾಶೆಯಲ್ಲಿದ್ದಾರೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ. ಕೆಎಫ್ ಚಿತ್ರ ನಾಳೆ ದೇಶಾದ್ಯಂತ ಬಿಡುಗಡೆ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಮೊದಲ ಸ್ಥಾನ ಪಡೆದ ಕೆಜಿಎಫ್

    ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಮೊದಲ ಸ್ಥಾನ ಪಡೆದ ಕೆಜಿಎಫ್

    ಬೆಂಗಳೂರು: ದೇಶದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಇಂಟರ್ ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಪ್ರಕಟಿಸಿದೆ.

    ಕೆಜಿಎಫ್: ಚಾಪ್ಟರ್ 1 ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆ ಆಗಲು ಸಿದ್ಧಗೊಂಡಿದೆ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದಲ್ಲ ಸಿನಿಮಾ ಮೂಡಿ ಬಂದಿದ್ದು, ಚಿತ್ರ ನೋಡಲು ಅಭಿಮಾನಿಗಳು ಟಿಕೆಟ್ ಕೌಂಟರ್ ನಲ್ಲಿ ಕಾಯುತ್ತಿದ್ದಾರೆ. ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಆರಂಭದ ಶೋಗಳ ಟಿಕೆಟ್ ಖರೀದಿಯಾಗಿದ್ದು, ಬಹುತೇಕ ಕಡೆ ಹೌಸ್ ಫುಲ್ ಎಂಬ ಬೋರ್ಡ್ ಕಾಣಿಸುತ್ತಿದೆ.

    ಬಾಲಿವುಡ್ ಡಾನ್ ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮಾ ಸಹ ಇದೇ ಶುಕ್ರವಾರ ತೆರೆಕಾಣಲಿದೆ. ಬಹುತಾರಾಗಣವುಳ್ಳ ಸಿನಿಮಾ ಆಗಿದ್ದರೂ, ಎರಡನೇ ಸ್ಥಾನದಲ್ಲಿದೆ. ಕೆಜಿಎಫ್ ಸಿನಿಮಾ ನೋಡಲು ಶೇ. 81ರಷ್ಟು ಜನರು ಕಾಯುತ್ತಿದ್ದಾರೆ. ಶೇ.11.7ರಷ್ಟು ಜನರು ಝೀರೋ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದಾರೆ.

    ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ದಿನ ಶೂಟಿಂಗ್ ಸ್ಪಾಟ್‍ಗೆ ತೆರಳಿದ್ದ ಚಿತ್ರತಂಡಕ್ಕೆ ಕಾದಿತ್ತು ಶಾಕ್!

    ಮೊದಲ ದಿನ ಶೂಟಿಂಗ್ ಸ್ಪಾಟ್‍ಗೆ ತೆರಳಿದ್ದ ಚಿತ್ರತಂಡಕ್ಕೆ ಕಾದಿತ್ತು ಶಾಕ್!

    ಬೆಂಗಳೂರು: ಮೊದಲ ದಿನ ಶೂಟಿಂಗ್ ಸ್ಪಾಟ್ ಗೆ ತೆರಳಿದ್ದ ಕೆಜಿಎಫ್ ಚಿತ್ರತಂಡಕ್ಕೆ ಶಾಕ್ ಕಾದಿತ್ತು. ಕೆಜಿಎಫ್ ನಗರದ ಹೊರವಲಯದಲ್ಲಿ ಚಿತ್ರೀಕರಣ ನಡೆಸಲು ನಿಗದಿತ ಸ್ಥಳ ತಲುಪಿದ ಚಿತ್ರತಂಡ ಅಲ್ಲಿಯ ಧೂಳು ನೋಡಿ ಒಂದು ಕ್ಷಣ ಗಾಬರಿಯಾಗಿತ್ತು ಎಂದು ಆರ್ಟ್ ಡೈರೆಕ್ಟರ್ ಶಿವು ಕುಮಾರ್ ತಮ್ಮ ಅನುಭವವನ್ನು The Journey – Golden Stories of KGF  ಎಂಬ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

    ಮರುದಿನ ಎಲ್ಲರಿಗೂ ಗ್ಲಾಸ್, ಸುರಕ್ಷಾ ಕವಚಗಳನ್ನು ನೀಡಿ ಕೆಲಸ ಆರಂಭಿಸಲಾಯ್ತು. ಪ್ರತಿ ದಿನ ಹೊಸ ಹೊಸ ಸವಾಲುಗಳನ್ನು ನಮಗೆ ಎದುರಾದವು. ಅಲ್ಲಿಯ ಮಣ್ಣು ಸಡಿಲವಾಗಿದ್ದರಿಂದ ಸೆಟ್ ನಿರ್ಮಾಣ ಕಷ್ಟವಾಗಿತ್ತು. ಕೊನೆಗೆ ಪ್ರಯತ್ನ ಮಾಡಿ ಚಿತ್ರಕ್ಕೆ ಪೂರಕವಾಗುವಂತ ಸೆಟ್ ಹಾಕಲಾಯಿತು. ಸೆಟ್ ನಿರ್ಮಾಣವಾದ ಕೂಡಲೇ ಗಾಳಿ-ಮಳೆ ಶುರುವಾಗಿ ಸಿನಿಮಾದ ಪ್ರಮುಖ ಸೆಟ್ ಬಿದ್ದಿತ್ತು. ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್ ಗಳ ಸೀಟ್ ಗಾಳಿಗೆ ಹಾರಿ ಹೋಗಿತ್ತು. ಕಷ್ಟಪಟ್ಟು ಹಾಕಲಾಗಿದ್ದ ಸೆಟ್ ಬಹುತೇಕ ಹಾಳಾಗಿತ್ತು. ಮಳೆ ನಿಂತ ಮೇಲೆ ಅಲ್ಲಿಯ ಸ್ಥಳ ನೋಡಿ ಎಲ್ಲರಿಗೂ ಸೇರಿದಂತೆ ತುಂಬಾನೇ ಬೇಜಾರಾಯ್ತು. ಆದರೂ ಎಲ್ಲರೂ ಸೇರಿಕೊಂಡು ಮತ್ತೆ ಸೆಟ್ ಹಾಕಲಾಯ್ತು.ಮಳೆ ಬಂದ್ರೆ ಸಾಕು ಯಾವ ಸೆಟ್ ಬೀಳುತ್ತೆ ಎಂಬ ಭಯ ಎಲ್ಲರಲ್ಲೂ ಕಾಡುತ್ತಿತ್ತು ಎಂದು ಶಿವುಕುಮಾರ್ ಹೇಳಿದ್ರು.

    ಚಿತ್ರದಲ್ಲಿ ಮಾರಿ ಜಾತ್ರೆ ಎಂಬ ಸೀನ್ ಬರುತ್ತೆ. ಆ ಒಂದು ದೃಶ್ಯಕ್ಕಾಗಿಯೇ ಸುಮಾರು 60 ಅಡಿಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿತ್ತು. ದೇವಿಯ ಮುಂದೆ ಸಹ ಒಂದು ಕೊಳವನ್ನು ನಿರ್ಮಾಣ ಮಾಡಿ, ನೈಸರ್ಗಿಕ ಎಂಬಂತೆ ತೋರಿಸಲಾಗಿದೆ. 1980ರಲ್ಲಿಯೇ ಬಳಸಲಾದ ವಸ್ತುಗಳನ್ನ ಚಿತ್ರದಲ್ಲಿ ಬಳಸಲಾಗಿದೆ. ಕೆಲವೊಂದನ್ನು ಕಲರ್ ನಿಂದ ಬದಲಾಯಿಸಿ ಬಳಕೆ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv