Tag: ಕೆಜಿಎಫ್

  • ರಂಗೋಲಿಯಲ್ಲಿ ಅರಳಿದ ಕೆಜಿಎಫ್ ಯಶ್

    ರಂಗೋಲಿಯಲ್ಲಿ ಅರಳಿದ ಕೆಜಿಎಫ್ ಯಶ್

    ಬೀದರ್: ಕೆಜಿಎಫ್ ಚಿತ್ರ ಬಿಡುಗಡೆ ಆಗಿರುವ ಖುಷಿಯಲ್ಲಿ ಯಶ್ ಅಭಿಮಾನಿ ಬಳಗದವರು ರಾಕಿಂಗ್ ಸ್ಟಾರ್ ಯಶ್ ಅವರ ರಗಡ್ ಲುಕ್‍ನಲ್ಲಿರುವ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಅವರ ಸಿನಿಮಾಕ್ಕೆ ಶುಭ ಕೋರಿದ್ದಾರೆ.

    ಇಂದು ದೇಶಾದ್ಯಂತ ಅದ್ಧೂರಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆ ಆಗಿದೆ. ಆದ್ದರಿಂದ ಯಶ್ ಅಭಿಮಾನಿಗಳ ಬಳಗದವರು ಸ್ವಪ್ನಾ ಮಲ್ಟಿಪ್ಲೆಕ್ಸ್ ಥಿಯೇಟರ್‌ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಅವರ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಮಹೇಶ್ವರಿ ಪಾಂಚಾಲ ಎಂಬವರು ರಂಗೋಲಿಯಲ್ಲಿ ಯಶ್ ಅವರ ಈ ಚಿತ್ರ ಬಿಡಿಸಿದ್ದು ಜಿಲ್ಲೆಯ ಅಭಿಮಾನಿಗಳ ಗಮನ ಸೆಳೆಯತ್ತಿದ್ದಾರೆ.

    ಪಂಚ ಭಾಷೆಗಳಲ್ಲಿ ತೆರೆ ಕಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಎಲ್ಲೆಡೆ ಸಕ್ಕತ್ ಸೌಂಡ್ ಮಾಡುತ್ತಿದೆ. ಗಡಿ ಜಿಲ್ಲೆ ಬೀದರ್ನಲ್ಲಿ ಮೊದಲ ಶೋ ಪ್ರಾರಂಭವಾಗಿದ್ದು, ಸಿನಿಪ್ರಿಯರಲ್ಲಿ ಕೆಜಿಎಫ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.

    ಈಗಾಗಲೇ ದೇಶಾದ್ಯಂತ ಕೆಜಿಎಫ್ ಮೊದಲ ಶೋ ಪ್ರಾರಂಭವಾಗಿದ್ದು ಯಶ್ ಅಭಿಮಾನಿಗಳು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸದ್ಯ ಯಶ್ ಅವರ ಕೆಜಿಎಫ್ ಸಿನಿಮಾಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಚಿತ್ರ ಸೂಪರ್ ಆಗಿದೆ ಎಂದು ಸಿನಿಮಾ ನೋಡಿದವರು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ ಕೆಜಿಎಫ್ ಚಿತ್ರದ ಅಬ್ಬರಕ್ಕೆ ಕನ್ನಡ ಸಿನಿಪ್ರಿಯರು ಮನಸೋತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕಿಂಗ್ ಸ್ಟಾರ್‌ಗೆ ಪವರ್ ಸ್ಟಾರ್ ವಿಶ್

    ರಾಕಿಂಗ್ ಸ್ಟಾರ್‌ಗೆ ಪವರ್ ಸ್ಟಾರ್ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ದೇಶ ಮಾತ್ರವಲ್ಲದೇ ಹೊರದೇಶದಲ್ಲಿಯೂ ಅದ್ಧೂರಿ ತೆರೆಕಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಯಶ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ವಿಶ್ ಮಾಡಿದ್ದಾರೆ.

    ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಲೈವ್ ವಿಡಿಯೋ ಮಾಡಿರುವ ಪುನೀತ್, ಕೆಜಿಎಫ್ ಚಿತ್ರ ತಂಡಕ್ಕೆ ಶುಭಾಶಯ. ಅಲ್ಲದೇ ನನ್ನ ಗೆಳೆಯ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ವಿಜಯ್ ಸರ್ ಗೂ ಶುಭಕೋರಿದ ಅವರು ಕೆಜಿಎಫ್ ಗೆ ಒಳ್ಳೆದಾಗಲಿ ಅಂತ ಹೇಳಿದ್ದಾರೆ.

    ದೇಶ-ಹೊರದೇಶದಲ್ಲಿ ಹವಾ ಎಬ್ಬಿಸುತ್ತಿರುವ ಕೆಜಿಎಫ್ ಚಿತ್ರ ಹಾಗೂ ಯಶ್ ಗೆ ಅಭಿಮಾನಿಗಳು, ನಟ-ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಅಮೆರಿಕಾದಲ್ಲಿ 55 ಸ್ಕ್ರೀನ್ ಗಳಲ್ಲಿ ಬಿಗಡೆಯಾಗಿರುವ ಕೆಜಿಎಫ್, ಇಲ್ಲಿವರೆಗೂ ಕೆಜಿಎಫ್ 29 ಲಕ್ಷ ರೂಪಾಯಿ ಕಲೆಕ್ಟ್ ಮಾಡಿದೆ. ಐಎಂಡಿಬಿ ರಾಕಿಂಗ್ ಸ್ಟಾರ್ ಯಶ್ ಅಭಿಯನಯದ `ಕೆಜಿಎಫ್’ ಸಿನಿಮಾ ಸೂಪರ್ ಡೂಪರ್ ಎಂದು ವಿಶ್ಲೇಷಿಸಿದ್ದು, 10ರಲ್ಲಿ 9.6 ಮಾಕ್ರ್ಸ್ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಆನ್‍ಲೈನ್ ರೇಟಿಂಗ್ಸ್ ಕೊಡುವ ವೆಬ್‍ಸೈಟ್‍ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ.

    70 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕೆಜಿಎಫ್’ ಸಿನಿಮಾ ನಿರ್ಮಾಣಗೊಂಡಿದ್ದು, ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಮಾಸ್ಟರ್ ಪೀಸ್‍ಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಚಿತ್ರಕ್ಕೆ ಬ್ಯಾನರ್ ಹಾಕಿ ದರ್ಶನ್ ಫಾನ್ಸ್ ಬೆಂಬಲ- ಒಂದಾದ ಅಣ್ತಾಮ್ಮಾಸ್

    ಕೆಜಿಎಫ್ ಚಿತ್ರಕ್ಕೆ ಬ್ಯಾನರ್ ಹಾಕಿ ದರ್ಶನ್ ಫಾನ್ಸ್ ಬೆಂಬಲ- ಒಂದಾದ ಅಣ್ತಾಮ್ಮಾಸ್

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

    ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ ಹೆಸರು ಮಾಡಬೇಕು ಎಂಬ ಕಾರಣದಿಂದ ಸಮಸ್ತ ಕನ್ನಡ ಚಿತ್ರ ರಸಿಕರೂ ಒಗ್ಗಟ್ಟಾಗಿ ಕೆಜಿಎಫ್ ಗೆ ಬೆಂಬಲ ಸೂಚಿಸುತ್ತಿದ್ದಾರೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದ್ಲ ದಿನವೇ ಅಮೆರಿಕಾದಲ್ಲಿ ಕೆಜಿಎಫ್ ಹವಾ

    ಮೊದ್ಲ ದಿನವೇ ಅಮೆರಿಕಾದಲ್ಲಿ ಕೆಜಿಎಫ್ ಹವಾ

    ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ಹವಾ ಎಬ್ಬಿಸಿದ್ದಲ್ಲದೇ ಹೊರ ದೇಶ ಅಮೆರಿಕಾದಲ್ಲಿಯೂ ಮೊದಲ ದಿನವೇ ಹವಾ ಎಬ್ಬಿಸಿದೆ.

    ಅಮೆರಿಕಾದಲ್ಲಿ 55 ಸ್ಕ್ರೀನ್ ಗಳಲ್ಲಿ ‘ಕೆಜಿಎಫ್’ ಬಿಡುಗಡೆಯಾಗಿತ್ತು. ಈಗ ಇಲ್ಲಿವರೆಗೂ ಕೆಜಿಎಫ್ 29 ಲಕ್ಷ ರೂಪಾಯಿ ಕಲೆಕ್ಟ್ ಮಾಡಿದೆ. ಐಎಂಡಿಬಿ ರಾಕಿಂಗ್ ಸ್ಟಾರ್ ಯಶ್ ಅಭಿಯನಯದ `ಕೆಜಿಎಫ್’ ಸಿನಿಮಾ ಸೂಪರ್ ಡೂಪರ್ ಎಂದು ವಿಶ್ಲೇಷಿಸಿದ್ದು, 10ರಲ್ಲಿ 9.6 ಮಾರ್ಕ್ಸ್‌ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಆನ್‍ಲೈನ್ ರೇಟಿಂಗ್ಸ್ ಕೊಡುವ ವೆಬ್‍ಸೈಟ್‍ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ.

    70 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕೆಜಿಎಫ್’ ಸಿನಿಮಾ ನಿರ್ಮಾಣಗೊಂಡಿದ್ದು, ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಸಿನಿಮಾದಲ್ಲಿ ಮಾಸ್ಟರ್ ಪೀಸ್‍ಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಸಿನಿಮಾಗೆ ಐಎಂಡಿಬಿನಿಂದ 9.6 ಮಾರ್ಕ್ಸ್‌

    ಕೆಜಿಎಫ್ ಸಿನಿಮಾಗೆ ಐಎಂಡಿಬಿನಿಂದ 9.6 ಮಾರ್ಕ್ಸ್‌

    ಬೆಂಗಳೂರು: ಕನ್ನಡ ಸಿನಿಮಾಲೋಕದಲ್ಲೇ ಹೊಸ ಇತಿಹಾಸ ಸೃಷ್ಟಿಸಿರುವ ‘ಕೆಜಿಎಫ್’ ಸಿನಿಮಾಗೆ ಖ್ಯಾತ ಸಿನಿಮಾ ಡೇಟಾಬೇಸ್ ಬೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಡಾ ಬೇಸ್(ಐಎಂಡಿಬಿ) ರೇಟಿಂಗ್ಸ್ ಕೊಟ್ಟಿದೆ.

    ಐಎಂಡಿಬಿ ರಾಕಿಂಗ್ ಸ್ಟಾರ್ ಯಶ್ ಅಭಿಯನಯದ `ಕೆಜಿಎಫ್’ ಸಿನಿಮಾ ಸೂಪರ್ ಡೂಪರ್ ಎಂದು ವಿಶ್ಲೇಷಿಸಿದ್ದು, 10ರಲ್ಲಿ 9.6 ಮಾರ್ಕ್ಸ್‌ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಆನ್‍ಲೈನ್ ರೇಟಿಂಗ್ಸ್ ಕೊಡುವ ವೆಬ್‍ಸೈಟ್‍ ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ.

    ಈ ಹಿಂದೆ ಕೂಡ ಐಎಂಡಿಬಿ ಪಟ್ಟಿಯಲ್ಲಿ ಕೆಜಿಎಫ್ ಮೊದಲನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅಭಿನಯದ ಸಿನಿಮಾವನ್ನು ಹಿಂದಿಕ್ಕಿತ್ತು. ಕರ್ನಾಟಕದ 400 ಸ್ಕ್ರೀನ್‍ಗಳು ಸೇರಿದಂತೆ ವಿಶ್ವದ 2 ಸಾವಿರದಷ್ಟು ಸ್ಕ್ರೀನ್‍ಗಳಲ್ಲಿ ರಾಕಿಂಗ್ ಸ್ಟಾರ್ ಯಶ್‍ಗೆ ಅಭಿಮಾನಿಗಳು ಸಲಾಂ ರಾಕಿಭಾಯ್ ಅಂತಿದ್ದಾರೆ.

    ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಿರುವ 70 ಕೋಟಿ ರೂಪಾಯಿ ವೆಚ್ಚದ ಕೆಜಿಎಫ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಸಿನಿಮಾದಲ್ಲಿ ಮಾಸ್ಟರ್ ಪೀಸ್‍ಗೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್‍ಗೆ ಶುಭಕೋರಿದ ಮಾಜಿ ಸಚಿವ ಜನಾರ್ದನ ರೆಡ್ಡಿ

    ಯಶ್‍ಗೆ ಶುಭಕೋರಿದ ಮಾಜಿ ಸಚಿವ ಜನಾರ್ದನ ರೆಡ್ಡಿ

    ಬಳ್ಳಾರಿ: ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ಚಿತ್ರತಂಡಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಾಶಯ ತಿಳಿಸಿದ್ದು, ಯಶ್ ಅವರು ವಿಶ್ವದ ಹೆಮ್ಮೆಯ ನಾಯಕ ನಟರಾಗಿ ಹೊರಹೊಮ್ಮಲಿ ಅಂತ ಆಶೀರ್ವದಿಸಿದ್ದಾರೆ.

    ಪೋಸ್ಟ್ ನಲ್ಲೇನಿದೆ..?
    “ಕನ್ನಡ ಚಿತ್ರರಂಗ ಸದ್ಯ ವಿಶ್ವದ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ನಾಳೆ(ಅಂದರೆ ಶುಕ್ರವಾರ) ತೆರೆ ಕಾಣತ್ತಿರುವ ಕೆಜಿಎಫ್ ಚಿತ್ರವಾಗಿದೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಯಶ್ ಈ ಚಿತ್ರದ ನಾಯಕರಾಗಿರುವುದು ಸಂತಸ ತಂದಿದೆ. ಸಹೋದರ ಯಶ್ ಅವರಿಗೆ ಶುಭವಾಗಲಿ. ಈ ಚಿತ್ರ ದೇಶಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.

    ಕೆಜಿಎಫ್ ಕನ್ನಡಿಗರ ಮನ ಗೆಲ್ಲಲಿ. ಚಿತ್ರ ತಂಡಕ್ಕೆ ಶುಭವಾಗಲಿ. ಕೆಜಿಎಫ್ ಚಿತ್ರದ ಮೇಲೆ ಸಮಸ್ತ ಕನ್ನಡಿಗರ ಶುಭ ಹಾರೈಕೆ ಇರಲಿ. ಈ ಚಿತ್ರ ಅದ್ಧೂರಿಯಾಗಿ ತೆರೆ ಕಂಡು ಯಶ್ ಅವರು ವಿಶ್ವದ ಹೆಮ್ಮೆಯ ನಾಯಕ ನಟರಾಗಿ ಹೊರಹೊಮ್ಮಲಿ ಎಂದು ಈ ಶುಭ ಸಂದರ್ಭದಲ್ಲಿ ಹೃದಯ ತುಂಬಿ ಹಾರೈಸುವೆ” ಎಂದು ಬರೆದುಕೊಂಡಿದ್ದಾರೆ.

    ‘ಕೆಜಿಎಫ್’ ಸಿನಿಮಾ ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ಇಂದು ತೆರೆ ಕಂಡಿದೆ. ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸಿನಿಮಾ ‘ಝೀರೋ’ ಸಿನಿಮಾವನ್ನು ಕೆಜಿಎಫ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಲೈಕ್ಸ್ ಬಂದಿದೆ. ಬುಕ್ ಮೈ ಶೋದಲ್ಲಿ ‘ಕೆಜಿಎಫ್’ ಸಿನಿಮಾ 3 ಲಕ್ಷದ 57 ಸಾವಿರ ಲೈಕ್ಸ್ ಪಡೆದಿದೆ. ಇನ್ನು ಶಾರೂಕ್ ಖಾನ್ ನಟನೆಯ ‘ಝೀರೋ’ ಸಿನಿಮಾ 2 ಲಕ್ಷದ 59 ಸಾವಿರ ಲೈಕ್ಸ್ ಪಡೆದಿದೆ.

    ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ 4 ಗಂಟೆಗೆ ಕೆಜಿಎಫ್ ರಿಲೀಸ್- ಚಳಿಯಲ್ಲೂ ರಾತ್ರಿಯಿಡೀ ಕಾದುಕುಳಿತ ಅಭಿಮಾನಿಗಳು

    ಬೆಂಗ್ಳೂರಲ್ಲಿ 4 ಗಂಟೆಗೆ ಕೆಜಿಎಫ್ ರಿಲೀಸ್- ಚಳಿಯಲ್ಲೂ ರಾತ್ರಿಯಿಡೀ ಕಾದುಕುಳಿತ ಅಭಿಮಾನಿಗಳು

    – ಥಿಯೇಟರ್ ಮುಂದೆ ಯಶ್ ಕಟೌಟ್‍ಗಳ ಅಬ್ಬರ

    ಬೆಂಗಳೂರು: ಗೊಂದಲದ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಈಗಾಗಲೇ ತೆರೆಕಂಡಿದ್ದು, ಇಡೀ ಭಾರತೀಯ ಚಿತ್ರ ರಂಗವೇ ತಿರುಗಿ ನೋಡುವಂತೆ ಸೌಂಡ್ ಮಾಡುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಚಿತ್ರ ಮಂದಿರಗಳಿಗೆ ಅಲಂಕಾರ ಮಾಡಿರುವ ಅಭಿಮಾನಿಗಳು ಅದ್ಧೂರಿಯಾಗಿ ಕೆಜಿಎಫ್‍ನ್ನು ಸ್ವಾಗತಿಸಿದ್ದಾರೆ. ಕೆಜಿಎಫ್ ಚಿತ್ರ ವಿಶ್ವದಾದ್ಯಂತ 2,000 ಸ್ಕ್ರೀನ್ ಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

    ನಗರದ ಊರ್ವಶಿ ಥಿಯೇಟರ್‍ನಲ್ಲಿ 4 ಗಂಟೆಗೆ ಶೋ ಶುರುವಾಯ್ತು. ಆದ್ರೆ ಅಭಿಮಾನಿಗಳು ಮಾತ್ರ ಮಧ್ಯರಾತ್ರಿಯಿಂದಲೇ ಕಾಯುತ್ತಲೇ ಇದ್ರು. ಅಲ್ಲದೇ ಪಟಾಕಿ ಸಿಡಿಸಿ ರಾಕಿಭಾಯ್‍ಗೆ ಅದ್ಧೂರಿ ಸ್ವಾಗತ ಕೋರಿದ್ರು. ಗೌಡನಪಾಳ್ಯದ ಶ್ರೀನಿವಾಸ್ ಥಿಯೇಟರ್‍ನಲ್ಲೂ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ರು. ಕುಣಿದು ಕುಪ್ಪಳಿಸಿ, ಕಟೌಟ್ ಮುಂದೆ ತೆಂಗಿನ ಕಾಯಿ ಒಡೆದು ತಮ್ಮ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಿದ್ರು.

    ನಗರದ ವೀರೇಶ್ ಥಿಯೇಟರ್ ನಲ್ಲಿ ಬೆಳಗ್ಗೆ 6.15 ರಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಇದಕ್ಕೂ ಮುನ್ನ ಯಶ್ ಬೃಹತ್ ಕಟೌಟ್ ಮುಂದೆ ಪಟಾಕಿ ಸಿಡಿಸಿ ಗ್ರ್ಯಾಂಡ್ ವೆಲ್‍ಕಮ್ ಕೊಟ್ರು. ಮೈನ್ ಥಿಯೇಟರ್‍ನಲ್ಲಿ ಫಿಲಂ ನೋಡಬೇಕು ಅಂತಾ ಅಭಿಮಾನಿಗಳು ರಾತ್ರಿ ಇಡೀ ಕಾದಿದ್ದರು.

    ಮಂಡ್ಯ, ಮೈಸೂರಿನಿಂಂದ ರಾತ್ರಿಯೇ ಬಂದು ಮೆಜೆಸ್ಟಿಕ್ ನ ನರ್ತಕಿ ಮುಂದೆಯೂ ಅಭಿಮಾನಿಗಳು ಚಳಿಯನ್ನೂ ಲೆಕ್ಕಿಸದೇ ಚಿತ್ರ ವೀಕ್ಷಣೆಗೆ ಕಾದು ಕುಳಿತಿದ್ದರು. ಅಲ್ಲದೇ ಸಲಾಂ ರಾಕಿ ಭಾಯ್ ಅಂತಾ ಘೋಷಣೆ ಕೂಗಿದ್ದಾರೆ. ಈ ದಿನದ ಪ್ರತೀ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇಲ್ಲಿ ಯಶ್ ಬೃಹತ್ ಕಟೌಟ್ ರಾರಾಜಿಸುತ್ತಿದೆ.

    ನವರಂಗ್ ಚಿತ್ರಮಂದಿರದಲ್ಲಿ 6 ಗಂಟೆಗೆ ಕೆಜಿಎಫ್ ಸಿನಿಮಾ ನೋಡಲು ಥಿಯೇಟರ್ ಎದುರು ಅಭಿಮಾನಿಗಳ ದಂಡು ಆಗಮಿಸಿದೆ. ಯಶ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಭೂಮಿಕಾ ಚಿತ್ರಮಂದಿರದಲ್ಲಿ 7 ಗಂಟೆಗೆ ಶೋ ಆರಂಭವಾಗಿದ್ದು, ಸದ್ಯಕ್ಕೆ ಅಭಿಮಾನಿಗಳಿಲ್ಲದೇ ಭೂಮಿಕಾ ಚಿತ್ರಮಂದಿರ ಖಾಲಿ ಖಾಲಿಯಾಗಿದೆ. ಭೂಮಿಕಾ ಚಿತ್ರಮಂದಿರದಲ್ಲಿ ಕೆಜಿಎಫ್ 3 ಶೋ ತೆಲುಗು ಹಾಗೂ 3 ಶೋ ಹಿಂದಿ ವರ್ಷನ್ ಪ್ರದರ್ಶನ ಮಾಡಲಾಗಿದೆ.

    ಕೆಜಿಎಫ್ ಸಿನಿಮಾವನ್ನು ಥಿಯೇಟರ್‍ಗೇ ಹೋಗಿ ನೋಡುವಂತೆ ರಾಕಿಂಗ್ ಸ್ಟಾರ್ ಯಶ್ ಮನವಿ ಮಾಡಿದ್ದಾರೆ. ಗುರುವಾರ ಇನ್‍ಸ್ಟಾಗ್ರಾಂಗೆ ವಿಡಿಯೋ ಹಾಕಿರುವ ಯಶ್, ನಮ್ಮ ಇಷ್ಟು ದಿನದ ಪರಿಶ್ರಮ ತೆರೆ ಮೇಲೆ ಬರ್ತಿದೆ. ಎಲ್ರೂ ನೋಡಿ ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 200 ರಷ್ಟು ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ರಿಲೀಸ್ ಮಾಡಲಾಗಿದೆ.

    https://www.instagram.com/p/Brnq2pjFIYA/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೊಂದಲದ ನಡುವೆಯೂ ಅದ್ಧೂರಿಯಾಗಿ ತೆರೆಕಂಡಿತು ಕೆಜಿಎಫ್

    ಗೊಂದಲದ ನಡುವೆಯೂ ಅದ್ಧೂರಿಯಾಗಿ ತೆರೆಕಂಡಿತು ಕೆಜಿಎಫ್

    ಬೆಂಗಳೂರು: ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದೆ. ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರಿ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಚಿಕ್ಕಬಳ್ಳಾಪುರ ನಗರದ ವಾಣಿ ಚಿತ್ರಮಂದಿರದಲ್ಲಿ ಮುಂಜಾನೆಯೇ ಮೊದಲ ಪ್ರದರ್ಶನ ಆರಂಭವಾಗಿದ್ದು, ಬಹಳಷ್ಟು ಕೂತೂಹಲ ಹುಟ್ಟಿಸಿದ್ದ ‘ಕೆಜಿಎಫ್’ ಸಿನಿಮಾ ಕಣ್ತುಂಬಿಕೊಳ್ಳಲು ಯಶ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಮೊದಲ ಶೋ ಆರಂಭಕ್ಕೂ ಮುನ್ನ ಯಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನಡೆಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇನ್ನೂ ಅಭಿಮಾನಿಯೋರ್ವ ತನ್ನ ಎದೆ ಮೇಲೆ ಯಶ್ ಭಾವಚಿತ್ರ ಹಚ್ಚೆ ಹಾಕಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿತ್ತು.

    ಮಂಡ್ಯದಲ್ಲಿ ಕೆಜಿಎಫ್ ಸಿನಿಮಾ ನೋಡಲು ಥಿಯೇಟರ್ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಇಂದು 7 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಮೊದಲ ಎರಡು ಶೋಗಳ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಆದರೂ ಮೊದಲ ಎರಡು ಶೋಗಳಿಗೆ ಟಿಕೆಟ್ ಸಿಗಲ್ಲ ಅಂತ ಗೊತ್ತಿದ್ದರೂ ಚಳಿಯನ್ನು ಲೆಕ್ಕಿಸದೆ ಗೇಟ್ ಮುಂಭಾಗ ಯಶ್‍ಗೆ ಜೈಕಾರ ಕೂಗುತ್ತ ಟಿಕೆಟ್‍ಗಾಗಿ ಅಭಿಮಾನಿಗಳು ಜಮಾಯಿಸಿದ್ದಾರೆ.

    ಇನ್ನೂ ಗೊಂದಲದ ನಡುವೆಯೂ ಕೋಲಾರದಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಮುಂಜಾನೆ 5 ಗಂಟೆಗೆ ಥಿಯೇಟರ್ ಬಳಿ ಯಶ್ ಅಭಿಮಾನಿಗಳು ಜಮಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಬೆಳಗ್ಗೆ 6 ಗಂಟೆಯ ಶೋಗೆ ಹೌಸ್ ಫುಲ್ ಆಗಿದ್ದು, ಯಶ್ ಬ್ಯಾನರ್ ಗೆ ನಿಂಬೆ ಹಣ್ಣಿನ ಮಾಲೆ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕುಂಬಳಕಾಯಿ ಒಡೆದು ಸಿನಿಮಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    ಕೊಪ್ಪಳದಲ್ಲೂ ಯಶ್ ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡಿದ್ದು, ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಯಶ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ನಸುಕಿನ ಜಾವವೇ ಕೋರ್ಟ್ ತಡೆಯಾಜ್ಞೆ ಮಧ್ಯೆಯೂ ಬಳ್ಳಾರಿಯ ರಾಘವೇಂದ್ರ ಮತ್ತು ರಾಧಿಕ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಶುರುವಾಗಿದೆ. ಟಿಕೆಟ್ ಆಗಿ ಅಭಿಮಾನಿಗಳ ಮಧ್ಯೆ ನೂಕುನುಗ್ಗಲು ಶುರುವಾಗಿದ್ದು, ಪೊಲೀಸರಿಂದ ಲಘುಲಾಠಿ ಪ್ರಹಾರ ಕೂಡ ನಡೆದಿದೆ.

    ದಾವಣಗೆರೆಯಲ್ಲಿ ಎಸ್‍ಎಸ್ ಮಾಲ್ ಸೇರಿದಂತೆ ಗೀತಾಂಜಲಿ ಹಾಗೂ ವಸಂತ ಚಿತ್ರಮಂದಿರದ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬೆಳಗ್ಗಿನ ಜಾವ 5 ಗಂಟೆಗೆ ಕೆಜಿಎಫ್ ಸಿನಿಮಾ ಶುರುವಾಗಿದ್ದು, ಕ್ಯೂ ನಲ್ಲಿ ನಿಂತು ಅಭಿಮಾನಿಗಳು ಟಿಕೇಟ್ ಪಡೆಯುತ್ತಿದ್ದಾರೆ. ದಿನಕ್ಕೆ ಆರು ಶೋ ಗಳಲ್ಲಿ ಕೆಜಿಎಫ್ ಪ್ರದರ್ಶನಗೊಳ್ಳಲಿದ್ದು, ಗೀತಾಂಜಲಿ ಚಿತ್ರಮಂದಿರದಲ್ಲಿ ಸೋಮವಾರದ ವರೆಗೂ ಬಾಲ್ಕನಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. 20 ಅಡಿ ಎತ್ತರದ ಯಶ್ ಕಟೌಟ್‍ಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದ್ದಾರೆ.

    ತುಮಕೂರಿನಲ್ಲಿ ಮಾರುತಿ, ಮೈಲಾರಿ ಮತ್ತು ಕೃಷ್ಣ ಮೂರು ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗಿದೆ. 21 ಕಾಯಿ ಒಡೆದು ಚಿತ್ರ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ- ಕೋರ್ಟ್ ಆದೇಶದಲ್ಲೇನಿದೆ?

    ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ- ಕೋರ್ಟ್ ಆದೇಶದಲ್ಲೇನಿದೆ?

    ಬೆಂಗಳೂರು: ಕೆಜಿಎಫ್ ಚಿತ್ರ ಬಿಡುಗಡೆ ಬಗ್ಗೆ 10 ನೇ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಪ್ರತಿ ಲಭ್ಯವಾಗಿದೆ.

    ಕೋರ್ಟ್ ಆದೇಶದಲ್ಲಿ, ಹಕ್ಕುಚ್ಯುತಿ ಸಂಬಂಧಪಟ್ಟಂತೆ ವೆಂಕಟೇಶ್ ಹಾಗೂ ಆನಂದ್ ಎಂಬವರು ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಚಲನಚಿತ್ರಕ್ಕೆ ಸಂಬಂದಪಟ್ಟ ಆರ್. ಲಕ್ಷ್ಮೀನಾರಾಯಣ್ ಹಾಗೂ ವಿಜಯ್ ಕಿರಗಂದೂರು ಇದೂವರೆಗೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಮುಂದಿನ ವಿಚಾರಣೆವರೆಗೂ ಚಲನಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿದೆ.

    ಅರ್ಜಿದಾರರ ಹೆಸರು:
    1. ವೆಂಕಟೇಶ್ ಜಿ.
    ವಕೀಲರು ಕೆ. ರಘುನಾಥ್
    2. ಆನಂದ್ ಎಸ್
    ಮಾಲೀಕರು, ಅಶ್ವಿನಿ ಫಿಲಂಸ್ , ನಂ 29/1, 1ನೇ ಮುಖ್ಯ ರಸ್ತೆ, 1ನೇ ಕ್ರಾಸ್, ಅಜಾದ್ ನಗರ, ಬೆಂಗಳೂರು.

    ಪ್ರತಿವಾದಿಗಳು:
    1. ಲಕ್ಷ್ಮೀನಾರಾಯಣ ಆರ್ ಅಲಿಯಾಸ್ ಲಕ್ಷ್ಮೀ ನಾರಾಯಣ ಗೌಡ
    2. ವಿಜಯ್ ಕಿರಗಂದೂರ್
    ಮಾಲೀಕರು, ಹೊಂಬಾಳೆ ಫಿಲಂಸ್, ನಂ 1312, 2ನೇ ಮಹಡಿ, 11ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು.
    ನಂ 45/11 3ನೇ ಮಹಡಿ, ಕುಮಾರಕೃಪ, ಉತ್ತರ ಉದ್ಯಾನವನ ರಸ್ತೆ, ಗಾಂಧಿಭವನ, ಬೆಂಗಳೂರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv