Tag: ಕೆಜಿಎಫ್

  • ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ವಾಷಿಂಗ್ಟನ್: ದೇಶಾದ್ಯಂತ ಧೂಳೆಬ್ಬಿಸಿರುವ ಕನ್ನಡದ ಕಾಂತಾರ (Kantara) ಸಿನಿಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಕಾಂತಾರ ದೈವದ ಗಗ್ಗರ ಶಬ್ಧ ದೇಶ-ವಿದೇಶದಲ್ಲಿ ಮಾರ್ದನಿಸುತ್ತಿದ್ದು, ಅಮೆರಿಕಾದಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ.

    ಅಮೆರಿಕಾ (America)ದ ಬಾಕ್ಸಾಫೀಸ್‍ನಲ್ಲಿ ಕಾಂತಾರ ಸಿನಿಮಾವೂ 1 ಮಿಲಿಯನ್ ಡಾಲರ್ ಅಂದ್ರೆ ಸುಮಾರು ಎಂಟೂವರೆ ಕೋಟಿ ಗಳಿಸಿದೆ. ಈ ಮೂಲಕ ಅಮೆರಿಕಾದ ನೆಲದಲ್ಲಿ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ. ಇನ್ನೆರಡು ದಿನಗಳಲ್ಲಿ ಮತ್ತೊಂದು ಮಿಲಿಯನ್ ಡಾಲರ್ ಗಳಿಸಲಿರುವ ಕಾಂತಾರ ಅಮೆರಿಕ ನೆಲದಲ್ಲಿ ಇತಿಹಾಸ ಸೃಷ್ಟಿಸಲಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಇದರ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಕೆಜಿಎಫ್ (KGF) ಬರೆದಿರುವ ದಾಖಲೆಯನ್ನೂ ಮುರಿಯಲಿದೆ ಕಾಂತಾರ. ಪ್ರಸ್ತುತ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರಗಳ ಸಾಲಿನಲ್ಲಿ ಮೊದಲೆರಡು ಸ್ಥಾನದಲ್ಲಿ ಕೆಜಿಎಫ್ ಪಾರ್ಟ್-2 ಮತ್ತು ಪಾರ್ಟ್-1 ಇದೆ. ಕಾಂತಾರ ಸಿನಿಮಾವು ಇನ್ನು ಎರಡ್ಮೂರು ದಿನಗಳಲ್ಲಿ ಕೆಜಿಎಫ್‍ನ ಐತಿಹಾಸಿಕ ದಾಖಲೆಯನ್ನೂ ಮುರಿಯಲಿದ್ದು, ಕರ್ನಾಟಕದ ಬಾಕ್ಸಾಫೀಸ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಏರಲಿದೆ.

    Live Tv
    [brid partner=56869869 player=32851 video=960834 autoplay=true]

  • `ಗಂಧದ ಗುಡಿ’ KGF ರೆಕಾರ್ಡ್ಸ್ ಕೂಡ ಬ್ರೇಕ್ ಮಾಡ್ಬೇಕು – ಯಶ್

    `ಗಂಧದ ಗುಡಿ’ KGF ರೆಕಾರ್ಡ್ಸ್ ಕೂಡ ಬ್ರೇಕ್ ಮಾಡ್ಬೇಕು – ಯಶ್

    ಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ `ಪುನೀತ ಪರ್ವ’ (Puneetha Parva) ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ (SandalWood) ಜೊತೆಗೆ ಬಹುಭಾಷಾ ತಾರೆಯರು ಕೂಡ ಸಾಥ್ ನೀಡಿದ್ದಾರೆ. ಹಾಡಿ ಕುಣಿದು ಸಂಭ್ರಮಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash), ಗಂಧದ ಗುಡಿ ಸಿನಿಮಾ ಎಲ್ಲಾ ಸಿನಿಮಾ (Cinema) ರೆಕಾರ್ಡ್ಸ್‌ಗಳನ್ನ ಧೂಳ್ ಮಾಡ್ಬೇಕು ಎಂದಿದ್ದಾರೆ.

    ಇಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, `ಗಂಧದ ಗುಡಿ (GandhadaGudi) ಸಿನಿಮಾ ಎಲ್ಲಾ ರೆಕಾರ್ಡ್ಸ್ಗಳನ್ನ ಧೂಳ್ ಮಾಡಬೇಕು. ಕೆಜಿಎಫ್ (KGF Cinema) ರೆಕಾರ್ಡ್ಸ್ ಕೂಡ ಇರಬಾರದು. ಅರ್ಥ ಆಯ್ತಾ? ಮನೆ ಮನೆಯಲ್ಲಿ ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ ಇದು. ಇಂಥ ಒಳ್ಳೆ ಜೀವದೊಂದಿಗೆ ಸಿನಿಮಾ ಸಂಭ್ರಮಿಸೋಣ ಅಂತಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

    ನಮ್ಮದೆಲ್ಲಾ ಏನೋ ಸಾಧನೆ ಅನ್ನುವಾಗ, ಸಾಧನೆ ಅಂದ್ರೆ ಇದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಆ ಉದ್ದೇಶಕ್ಕಾದರೂ ಸಿನಿಮಾ ಗೆಲ್ಲಿಸಬೇಕು ಎಂದು ಪ್ರತಿಯೊಬ್ಬರು ಸಿನಿಮಾ ನೋಡಿ ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಕೆಜಿಎಫ್ (KGF) ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ತನ್ನತ್ತ ಸೆಳೆದುಕೊಂಡಿರುವ ನಟ ಯಶ್, ಮುಂದಿನ ಹೆಜ್ಜೆಯನ್ನು ಜಾಣ್ಮೆಯಿಂದ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಜಿಎಫ್ ಸಿನಿಮಾಗಿಂತಲೂ ಒಂದು ಹೆಜ್ಜೆ ಮುಂದಿಡುವ ಜಾಣ್ಮೆ ನಡೆಯದು ಎಂದು ಅವರ ಆಪ್ತರು ಮಾತನಾಡಿಕೊಳ್ಳುತ್ತಿದ್ದರು. ಈ ಮಾತುಗಳಿಗೆ ಪುಷ್ಠಿ ಅನ್ನುವಂತೆ ಯಶ್ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಾಲಿವುಡ್ (Hollywood)ನ ಖ್ಯಾತ ಸಾಹಸ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ ಜೆ.ಜೆ. ಪೆರ್ರಿಯನ್ನು (J.J. Perry) ಭೇಟಿ ಮಾಡಿದ್ದಾರೆ.

    ಹಾಲಿವುಡ್ ಸಿನಿಮಾ ರಂಗದಲ್ಲಿ ಜೆಜೆ ಪೆರ್ರಿ ಅವರದ್ದು ಬಹುದೊಡ್ಡ ಹೆಸರು. ಸಾವಿರಾರು ಕೋಟಿ ಬಜೆಟ್ ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಹಾಗೂ ಇತ್ತೀಚಿನ ದಿನಗಳಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗೆ ಹೇಳಿ ಮಾಡಿಸಿದ ನಿರ್ದೇಶಕ ಜೆಜೆ. ಸದ್ದಿಲ್ಲದೇ ಯಶ್ (Yash) ಅವರು ಜೆಜೆ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಅಮೆರಿಕಾದಲ್ಲಿ ನಡೆದದ್ದು, ಕೆಲ ದಿನಗಳ ಹಿಂದೆಯಷ್ಟೇ ಈ ಭೇಟಿ ನಡೆದಿದೆ. ಅವರನ್ನು ಖುದ್ದಾಗಿ ಭೇಟಿ ಆಗಲೆಂದು ಯಶ್ ಅಮೆರಿಕಾಗೆ ತೆರಳಿದ್ದರು. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಅಂದುಕೊಂಡಂತೆ ಆಗಿದ್ದರೆ ನರ್ತನ್ (Narthan) ನಿರ್ದೇಶನದಲ್ಲಿ ಯಶ್ ನಟಿಸಬೇಕಿತ್ತು. ಇನ್ನೇನು ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ಹೊತ್ತಿನಲ್ಲಿ ಯಶ್ ಮನಸು ಬದಲಾಯಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಈ ಕಾಂಬಿನೇಷನ್ ನಲ್ಲಿ ಸಿನಿಮಾ ಅನುಮಾನ. ಈ ನಡುವೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಹೆಸರೂ ಕೇಳಿ ಬಂತು. ಶಂಕರ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಹಾಗಾದರೆ, ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

    ಅಮೆರಿಕಾಗೆ (America) ಹೋಗಿ ಜೆಜೆ ಅವರನ್ನು ಯಶ್ ಭೇಟಿ ಮಾಡಿ ಬಂದಿದ್ದಾರೆ. ಜೆಜೆ ಎದುರು ಗನ್ ಶೂಟ್ ಮಾಡಿ, ತಾನೆಷ್ಟು ಶಾರ್ಪ್ ಎನ್ನುವುದನ್ನು ತೋರಿಸಿದ್ದಾರೆ. ಜೆಜೆ ಭೇಟಿಯ ಹಿಂದೆ ಹೊಸ ಸಿನಿಮಾದ ಮಾತುಕತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಯಶ್ ಹಾಲಿವುಡ್ ಗೆ ಹೋಗುತ್ತಾರಾ ಅಥವಾ ಭಾರತೀಯ ಸಿನಿಮಾ ರಂಗಕ್ಕೆ ಅವರನ್ನೇ ಕರೆತರುತ್ತಾರಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ವರೆಗೂ ಭಾರತದ ಟಾಪ್ ನಟರ ಸ್ಥಾನದಲ್ಲಿ ಕನ್ನಡದ (Sandalwood) ನಟರಿಗೆ ಯಾವ ಸ್ಥಾನಗಳು ದೊರೆಯುತ್ತಿರಲಿಲ್ಲ. ಕೇವಲ ಬಾಲಿವುಡ್ ನಟರು ಮಾತ್ರ ಆ ಸ್ಥಾನಗಳಲ್ಲಿ ಮೆರೆಯುತ್ತಿದ್ದರು, ಹೆಚ್ಚೆಂದರೆ ತಮಿಳು ಮತ್ತು ತೆಲುಗು ನಟರು ಇರುತ್ತಿದ್ದರು. ಇದೀಗ ಕನ್ನಡದ ನಟರಿಗೂ ಅಲ್ಲಿ ಸ್ಥಾನ ಸಿಗುತ್ತಿದೆ. ಕೆಜಿಎಫ್ ಸಿನಿಮಾವೊಂದು ಇಂತಹ ಸ್ಥಾನ ದೊರೆಕಿಸಿ ಕೊಡಲು ಯಶ್ (Yash) ಗೆ ನೆರವಾಗಿದೆ. ಹಾಗಾಗಿ ಯಶ್ ಭಾರತೀಯ ಟಾಪ್ ನಟರ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರತಿ ವರ್ಷವೂ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ದಳಪತಿ ವಿಜಯ್ (Dalpati Vijay) ಟಾಪ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಯಶ್ ಗೆ ಟಾಪ್ 5 ಸ್ಥಾನ ಸಿಕ್ಕಿದೆ. ಪ್ರಭಾಸ್ (Prabhas) ಎರಡನೇ ಸ್ಥಾನ, ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಟಾಪ್ 5 ಪಟ್ಟಿಯಲ್ಲಿ ದಕ್ಷಿಣದವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಮತ್ತೊಂದು ಅಚ್ಚರಿಯ ಸಂಗತಿಯಂದರೆ, ಬಾಲಿವುಡ್ ನಟರಲ್ಲಿ ಕೇವಲ ಅಕ್ಷಯ್ ಕುಮಾರ್ (Akshay Kumar) ಗೆ ಮಾತ್ರ ಸ್ಥಾನ ದೊರೆತಿದ್ದು ಆರನೇ ಸ್ಥಾನದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲಿವುಡ್ ನ ಖ್ಯಾತ ನಟರು ದೂರವೇ ಉಳಿಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿಗೆ ದಕ್ಷಿಣದವರೇ ಪ್ರಾಬಲ್ಯ ಮೆರೆದಿದ್ದಾರೆ. ಖಾನ್ ಪಡೆಯ ಒಬ್ಬನೇ ಒಬ್ಬ ನಟನೂ ಕೂಡ ಈ ಯಾದಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

    ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿಮಾ  ರಂಗದ ಗತಿಯನ್ನೇ ಬದಲಿಸಿರುವ ಯಶ್, ಯಾವುದೇ ಸಂಸ್ಥೆಗಳು ಟಾಪ್ (Top) ಪಟ್ಟಿಯನ್ನು ಬಿಡುಗಡೆ ಮಾಡಿದರೂ, ಅದರಲ್ಲಿ ಒಂದು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಜಿಎಫ್ (KGF)ಸಿನಿಮಾದ ನಂತರ ಬೇರೆ ಯಾವ ಸಿನಿಮಾವನ್ನೂ ಯಶ್ ಒಪ್ಪಿಕೊಳ್ಳದೇ ಇದ್ದರೆ, ಟಾಪ್ ನಲ್ಲಿ ಮಾತ್ರ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಮೂರು ವರ್ಷದಿಂದ ಕಾಯ್ತಿದ್ದ ಉಪ್ಪಿ  ಅಭಿಮಾನಿಗಳಿಗೆ ಈ ವರ್ಷ ಡಬಲ್ ಧಮಾಕಾ

    ಮೂರು ವರ್ಷದಿಂದ ಕಾಯ್ತಿದ್ದ ಉಪ್ಪಿ ಅಭಿಮಾನಿಗಳಿಗೆ ಈ ವರ್ಷ ಡಬಲ್ ಧಮಾಕಾ

    ನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ಕೂಡ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಉಪ್ಪಿ ನಟನೆಯ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ಮೂರು ವರ್ಷದಿಂದ ಉಪ್ಪಿ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದರು. ಅದು ಕೂಡ ಈ ವರ್ಷ ಈಡೇರಿದೆ. ಹೀಗಾಗಿ ಉಪ್ಪಿ ಮತ್ತು ಅಭಿಮಾನಿಗಳಿಗೆ ಈ ವರ್ಷ ಡಬಲ್ ಸಂಭ್ರಮ ತಂದಿದೆ. ಬೆಂಗಳೂರಿನ ಉಪ್ಪಿ ಮನೆಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದು, ನೆಚ್ಚಿನ ನಟನ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

    ಹುಟ್ಟು ಹಬ್ಬಕ್ಕೆ (Birthday) ಬರುವಾಗ ಹಾರ, ತುರಾಯಿ, ಕೇಕ್ ಏನೂ ತರಬಾರದು ಎಂದು ಈ ಹಿಂದೆಯೇ ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದರು. ಉಡುಗೊರೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದರು. ಎಲ್ಲರೊಂದಿಗೆ ಫೋಟೋ ತಗೆಸಿಕೊಳ್ಳುವ ಕುರಿತು ಮಾತನಾಡಿದ್ದರು. ಅಲ್ಲದೇ, ಸಮಾಜದ ಬಗ್ಗೆ 18 ಪದ ಮೀರದಂತೆ ಬರೆದುಕೊಂಡು ಬನ್ನಿ ಎಂದು ತಿಳಿಸಿದ್ದರು. ಉಪ್ಪಿ ಹೇಳಿದಂತೆ ಅಭಿಮಾನಿಗಳು ಈ ಕೆಲಸವನ್ನು ಮಾಡಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಈ ಕುರಿತು ಮಾತನಾಡಿರುವ ಉಪೇಂದ್ರ, ಮೂರು ವರ್ಷದಿಂದ ನಾನೂ ಕೂಡ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಈ ಬಾರಿ ಅವರ ಜೊತೆ ಸೆಲೆಬ್ರೇಟ್ ಮಾಡುತ್ತಿರುವೆ. ಕಬ್ಜ ಸಿನಿಮಾದ ಟೀಸರ್, ಯುಐ ಚಿತ್ರ ಕ್ಯಾಮೆರಾದೊಳಗೆ ಕ್ಯಾಮೆರಾ ಇರೋ ಗ್ಲಿಂಪ್ಸ್ ರಿಲೀಸ್ ಮಾಡಿದ್ದೇವೆ. ಅಭಿಮಾನಿಗಳು ಮತ್ತು ಪ್ರಜಾಕೀಯ ಫಾಲೋ ಮಾಡುತ್ತಿರುವವರು ಸೇರಿದ್ದಾರೆ. ಎಲ್ಲರನ್ನೂ ನೋಡಿ ಖುಷಿ ಆಗುತ್ತಿದೆ’ ಎಂದಿದ್ದಾರೆ ಉಪ್ಪಿ.

    ಕಬ್ಜ (Kabzaa) ಸಿನಿಮಾವನ್ನು ಕೆಜಿಎಫ್  ಚಿತ್ರಕ್ಕೆ ಹೋಲಿಸುತ್ತಿರುದು ಖುಷಿ ಆಗುತ್ತಿದೆ ಎಂದಿರುವ ಉಪೇಂದ್ರ, ಕೆಜಿಎಫ್ ತರಹ ಇನ್ನೊಂದು ಸಿನಿಮಾ ಬರ್ತಿದೆ ಅಂದರೆ, ಅದು ಹೆಮ್ಮೆ ಅಲ್ಲವೆ? ಆದರೂ, ಈ ಸಿನಿಮಾ ಬೇರೆ ರೀತಿ ಇದೆ. ಕಬ್ಜ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯ್ತಾ ಇರಬೇಕು ಎನ್ನುತ್ತಾರೆ ಉಪೇಂದ್ರ.

    Live Tv
    [brid partner=56869869 player=32851 video=960834 autoplay=true]

  • KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ

    KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ

    ಭೋಪಾಲ್: ಕೆಜಿಎಫ್ ಸಿನಿಮಾ ಹಾಗೂ ಜಾಲತಾಣದಲ್ಲಿ ಹಲವಾರು ಹತ್ಯೆಯ ವೀಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ಯುವಕನೊಬ್ಬ ದಿಢೀರ್ ಫೇಮಸ್ ಆಗಬೇಕು ಅಂತಾ ನಾಲ್ವರು ಭದ್ರತಾ ಸಿಬ್ಬಂದಿಯನ್ನು ವಿವಿಧ ಸುತ್ತಿಗೆ, ರಾಡ್, ಕಲ್ಲಿನಿಂದ ಚಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

    KGF 2 Yash (4)
    ಸಾಂದರ್ಭಿಕ ಚಿತ್ರ

    ಘಟನೆಗೆ ಸಂಬಂಧಿಸಿದಂತೆ ಶಿವಪ್ರಸಾದ್ (19) ನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್ ದುರ್ವೆ ಎಂದು ಗುರುತಿಸಲಾಗಿದ್ದು, ಕೆಜಿಎಫ್ ಸಿನಿಮಾ ನಟನ ಮಾದರಿಯಲ್ಲಿ ಹೆಸರುವಾಸಿಯಾಗಲು ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

    ಸೆಕ್ಯುರಿಟಿ ಗಾರ್ಡ್ಗಳು ಮಲಗಿದ್ದ ಸಂದರ್ಭ ಶಿವಪ್ರಸಾದ್ ಹತ್ಯೆ ಮಾಡಿದ್ದಾನೆ. ಸಾಗರ ಜಿಲ್ಲೆಯಲ್ಲಿ ಮೂವರು ಮತ್ತು ಭೋಪಾಲ್‌ನಲ್ಲಿ ಒಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಚಚ್ಚಿ ಭೀಕರವಾಗಿ ಕೊಂದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

    ಆರೋಪಿ ನಾಲ್ಕನೇ ಹತ್ಯೆಯನ್ನು ಭೋಪಾಲ್‌ನಲ್ಲಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಲಾಗಿದೆ. ಹತ್ಯೆಯಾದ ಸೆಕ್ಯುರಿಟಿಯೊಬ್ಬರ ಮೊಬೈಲ್ ಕಸಿದಿದ್ದ ಆರೋಪಿ ಅದರ ಟವರ್ ಲೊಕೇಶನ್ ಮೂಲಕವೇ ಸಿಕ್ಕಿಬಿದ್ದಿದ್ದಾನೆ. ತನಿಖೆ ವೇಳೆ ನಾಲ್ಕೂ ಹತ್ಯೆಗಳನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ಆರೋಪಿ ಶಿವಪ್ರಸಾದ್ ಸೆಕ್ಯೂರಿಟಿ ಗಾರ್ಡ್ಗಳನ್ನೇ ಹುಡುಕಿ ಕೊಲ್ಲುವ ಪ್ರೌವೃತ್ತಿ ಬೆಳೆಸಿಕೊಂಡಿದ್ದ, ಅಲ್ಲದೇ ಪೊಲೀಸ್ ಠಾಣೆ ಸಿಬ್ಬಂದಿಯನ್ನೂ ಕೊಲ್ಲೋದಕ್ಕೆ ಯೋಜಿಸಿದ್ದ ಎಂದು ಹೇಳಲಾಗಿದೆ.

    ಶಿವಪ್ರಸಾದ್ ನಿನ್ನೆ ತಡರಾತ್ರಿ ಭದ್ರತಾ ಸಿಬ್ಬಂದಿಯಾಗಿದ್ದ ಸೋನು ವರ್ಮಾ (23) ಎಂಬ ಯುವಕನನ್ನು ಭೋಪಾಲ್‌ನಲ್ಲಿ ಮಾರ್ಬಲ್ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಇದಕ್ಕೂ ಮುನ್ನ ಸಾಗರ್‌ನಲ್ಲಿ ಕಾರ್ಖಾನೆಯೊಂದರ ಭದ್ರತಾ ಸಿಬ್ಬಂದಿ ಕಲ್ಯಾಣ್ ಲೋಧಿ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಮರುದಿನ ರಾತ್ರಿಯೇ 60 ವರ್ಷದ ಕಾಲೇಜು ಭದ್ರತಾ ಸಿಬ್ಬಂದಿ ಶಂಬು ನಾರಾಯಣ ದುಬೆ ಅವರನ್ನ ಕಲ್ಲಿನಿಂದ ಚಚ್ಚಿ ಕೊಂದಿದ್ದಾನೆ. ಈ ಹತ್ಯೆಗಳು ಮಧ್ಯಪ್ರದೇಶದಲ್ಲಿ ಭಯೋತ್ಪಾದನೆಯ ಭೀತಿ ಹೆಚ್ಚಿಸಿದ್ದು, ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳಿನಲ್ಲಿ ಶುರುವಾಯಿತು ‘ಕೆಜಿಎಫ್’ ಸಿನಿಮಾದ ಶೂಟಿಂಗ್: ಹೀರೋ ಯಶ್ ಅಲ್ಲ, ಬೇರೆ

    ತಮಿಳಿನಲ್ಲಿ ಶುರುವಾಯಿತು ‘ಕೆಜಿಎಫ್’ ಸಿನಿಮಾದ ಶೂಟಿಂಗ್: ಹೀರೋ ಯಶ್ ಅಲ್ಲ, ಬೇರೆ

    ಭಾರತೀಯ ಸಿನಿಮಾ ರಂಗದಲ್ಲೇ ದಾಖಲೆ ಸೃಷ್ಟಿ ಮಾಡಿರುವ ಕನ್ನಡದ ಕೆಜಿಎಫ್ ಸಿನಿಮಾ, ಮುಂದುವರೆದ ಭಾಗ ಬರತ್ತಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಸದ್ಯಕ್ಕಂತೂ ಕೆಜಿಎಫ್ 3 ಸಿನಿಮಾ ಇಲ್ಲವೆಂದು, ಮುಂದೆ ತಾವು ಮಾಡಬೇಕಾದ ಸಿನಿಮಾಗಳ ಕಾರಣದಿಂದಾಗಿ ಕೆಜಿಎಫ್ 3 ಚಿತ್ರವನ್ನು ಮಾಡುತ್ತಿಲ್ಲವೆಂದು ಘೋಷಿಸಿಯಾಗಿದೆ. ಆದರೂ, ತಮಿಳಿನಲ್ಲೊಂದು ಕೆಜಿಎಫ್ ಸಿನಿಮಾ ಮೂಡಿ ಬರಲಿದೆ.

    ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವ ಕೆಜಿಎಫ್ ಸಿನಿಮಾದಲ್ಲಿ ಕಾಲ್ಪನಿಕ ಕಥೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೆಜಿಎಫ್ ಕಥೆಯನ್ನು ಅದು ಒಳಗೊಂಡಿರಲಿಲ್ಲ. ಹಾಗಾಗಿ ಕೆಜಿಎಫ್ ನಲ್ಲಿ ನಡೆದ ರಿಯಲ್ ಘಟನೆಯನ್ನು ಕೆಜಿಎಫ್ ಹೆಸರಿನ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರಂತೆ ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್. ಅಲ್ಲಿ ರಿಯಲ್ ಆಗಿ ನಡೆದ ಸಂಘರ್ಷಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ಹಾಗಾಗಿ ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಆಗಿ ಬರುತ್ತಿರುವ ಸಿನಿಮಾ ಇದಾಗಲಿದೆಯಂತೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಕೆಜಿಎಫ್ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂದಿದ್ದಾರೆ ವಿಕ್ರಮ್. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಇದಾಗಲಿದೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಪಾ.ರಂಜಿತ್ ದೇಸಿಯ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕ. ಶೋಷಿತರ ನೋವುಗಳನ್ನು ದೃಶ್ಯಕ್ಕೆ ತಂದ ಹೆಗ್ಗಳಿಕೆ ಇವರದ್ದು. ಹಾಗಾಗಿ ಕೆಜಿಎಫ್ ಸಿನಿಮಾ ಹೊಸ ರೀತಿಯೊಂದಿಗೆ ಬರುವುದು ಗ್ಯಾರಂಟಿ.

    Live Tv
    [brid partner=56869869 player=32851 video=960834 autoplay=true]

  • ಕೆ.ಆರ್.ಜಿ ಸ್ಟುಡಿಯೋದಲ್ಲಿ ರಮ್ಯಾ:  ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್?

    ಕೆ.ಆರ್.ಜಿ ಸ್ಟುಡಿಯೋದಲ್ಲಿ ರಮ್ಯಾ: ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್?

    ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ಇಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಭೇಟಿ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆಯೂ ಕೂಡ ಇದೇ ಕೆ.ಆರ್.ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಪಾಟ್ ಗೂ ರಮ್ಯಾ ಭೇಟಿ ಮಾಡಿದ್ದರು. ಹಾಗಾಗಿ ಕೆ.ಆರ್.ಜಿ ಸ್ಟುಡಿಯೋ ಅಥವಾ ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.

    ಪದೇ ಪದೇ ಕೆ.ಆರ್.ಜಿ ಸ್ಟುಡಿಯೋ ಮಾಲೀಕರನ್ನು ರಮ್ಯಾ ಭೇಟಿ ಆಗುತ್ತಿರುವುದರಿಂದ ಈ ಟೀಮ್ ಮೂಲಕವೇ ರಮ್ಯಾ ಸಿನಿಮಾ ಮಾಡಬಹುದು ಎನ್ನುವ ಸುದ್ದಿ ದಟ್ಟವಾಗಿದ್ದು, ಇದು ಪುನೀತ್ ಅವರ ಆಸೆಯೂ ಆಗಿತ್ತು ಎನ್ನಲಾಗಿದೆ. ಪುನೀತ್ ನಟಿಸಬೇಕಿದ್ದ, ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಬೇಕಿದ್ದ ಚಿತ್ರವೊಂದಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸ್ವತಃ ಪುನೀತ್ ರಾಜ್ ಕುಮಾರ್ ಅವರ ಆಸೆಯಾಗಿತ್ತಂತೆ. ಅದನ್ನು ಹೊಂಬಾಳೆ ಈಡೇರಿಸಲಿದೆ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    RAMYA

    ಇಂದು ಕೂಡ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಕಚೇರಿಗೆ ಭೇಟಿ  ನೀಡಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ಜಯಣ್ಣ, ನಿರ್ದೇಶಕ ಯೋಗಿ ಜಿ ರಾಜ್, ಪುನೀತ್ ಅವರ ಕುಟುಂಬದ ಸದಸ್ಯರೇ ಆಗಿರುವ ಚೆನ್ನ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದಾರೆ. ಈಗಾಗಲೇ ರಮ್ಯಾ ಅವರಿಗಾಗಿಯೇ ಕಥೆಯನ್ನು ಸಿದ್ಧ ಪಡಿಸುತ್ತಿದ್ದು, ಅತೀ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಈ ಕುರಿತು ಕೆ.ಆರ್.ಜಿ ಸ್ಟುಡಿಯೋ ಯಾವುದೇ ಅಧಿಕೃತ ಮಾಹಿತಿಯನ್ನಂತೂ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    ಲಂಡನ್‌: ಪ್ರತಿಷ್ಠಿತ ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕನ್ನಡದ ಕೆಜಿಎಫ್‌ ಸದ್ದು ಮಾಡಿದೆ.

    ಫೈನಲ್ ಪಂದ್ಯದಲ್ಲಿ ನೋವಾಕ್ ಜೋಕೋವಿಚ್, ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್ ವಿರುದ್ಧ 4-6 6-3 6-4 7-6(3) ಅಂತರದಲ್ಲಿ ಗೆಲುವು ಸಾಧಿಸಿ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.

    ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಂಬಲ್ಡನ್‌ ಫೇಸ್‌ಬುಕ್‌ ಖಾತೆಯಲ್ಲಿ ಕೆಜಿಎಫ್‌ ಸಿನಿಮಾದ ಪ್ರಸಿದ್ಧ ಡೈಲಾಗ್‌ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. “Trophies, trophies, trophies….I like trophies and trophies like me…I can’t avoid” ಎಂದು ಬರೆದು ಜೋಕೋವಿಚ್ ಅವರನ್ನು ಅಭಿನಂದಿಸಲಾಗಿದೆ. ಇದನ್ನೂ ಓದಿ: ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದಲ್ಲಿ ಯಶ್‌ ಅವರ ಡೈಲಾಗ್‌ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. “Violence, violence, violence. I don’t like it. I avoid. But, violence likes me, I can’t avoid” ಈ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ವಿಂಬಲ್ಡನ್‌ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನೋವಾಕ್ ಜೋಕೋವಿಚ್ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಲಸಿಕೆ ಕಾರಣ ಅಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆದ ಅವಮಾವನ್ನು ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ತೀರಿಸಿಕೊಂಡಿದ್ದಾರೆ.

    ನೋವಾಕ್ ಜೋಕೋವಿಚ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ನೋವಾಕ್ ಗೆದ್ದ ಸತತ 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಇಷ್ಟೇ ಅಲ್ಲ ವಿಂಬಲ್ಡನ್‌ನ 8 ಫೈನಲ್ ಪಂದ್ಯದಲ್ಲಿ 7 ಪಂದ್ಯ ಗೆದ್ದ ಮತ್ತೊಂದು ದಾಖಲೆ ಸರಿಗಟ್ಟಿದ್ದಾರೆ. ಈ ಹಿಂದೆ ಅಮೆರಿಕದ ಪೀಟ್‌ ಸ್ಯಾಂಪ್ರಸ್‌ 7 ಬಾರಿ ವಿಂಬಲ್ಡನ್‌  ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]

  • ಯಶ್ ನನ್ನ ಹುಡುಗ ಅಲ್ಲ ಎಂದ ಹಾಟ್ ತಾರೆ ಸನ್ನಿ ಲಿಯೋನ್

    ಯಶ್ ನನ್ನ ಹುಡುಗ ಅಲ್ಲ ಎಂದ ಹಾಟ್ ತಾರೆ ಸನ್ನಿ ಲಿಯೋನ್

    ಕೆಜಿಎಫ್ ಸಿನಿಮಾದ ನಂತರ ಯಶ್ ಭಾರತೀಯ ಸಿನಿಮಾ ರಂಗವನ್ನು ಆವರಿಸಿಕೊಂಡು ಬಿಟ್ಟಿದ್ದಾರೆ. ಅದರಲ್ಲೂ ಬಾಲಿವುಡ್ ನಟ ನಟಿಯರ ಫೆವರೇಟ್ ಹೀರೋ ಆಗಿಯೂ ಗುರುತಿಸಿಕೊಂಡಿದ್ದಾರೆ. ಇಂತಹ ಯಶ್ ಬಗ್ಗೆ ಹಾಟ್ ತಾರೆ ಸನ್ನಿ ಲಿಯೋನ್ ಮಾತನಾಡಿದ್ದಾರೆ. ಚಾಂಪಿಯನ್ ಸಿನಿಮಾದ ಸಂದರ್ಶನದಲ್ಲಿ ಅವರು ಯಶ್ ಅವರನ್ನು ಹೊಗಳಿದ್ದಾರೆ.

    ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡದ ಜೊತೆ ಮಾತನಾಡಿರುವ ನಿರೂಪಕಿ ಅನುಶ್ರೀ, ಯಶ್ ಅವರ ಫೋಟೋವನ್ನು ತೋರಿಸಿ, ಇವರ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ಯಶ್ ಅವರ ಫೋಟೋ ನೋಡುತ್ತಿದ್ದಂತೆಯೇ ಎಕ್ಸೈಟ್ ಆಗುವ ಸನ್ನಿ ಲಿಯೋನ್ ‘ರಾಕಿ ಭಾಯ್’ ಎಂದು ಕರೆಯುತ್ತಾರೆ. ಅಲ್ಲದೇ, ಇವರು ನನ್ನ ಹುಡುಗ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸುತ್ತಾರೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್‌ ಆಗುತ್ತೀರಾ

    ರಾಕಿ ಭಾಯ್ ನನ್ನ ಹುಡುಗ ಅಲ್ಲ ಅನ್ನುವುದರ ಹಿಂದಿನ ಪ್ರೀತಿಯನ್ನೂ ಅವರು ಹೇಳಿಕೊಳ್ಳುತ್ತಾರೆ. ಕೆಜಿಎಫ್ ಸಿನಿಮಾದ ಬಗ್ಗೆಯೂ ಅವರು ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಸನ್ನಿ ಲಿಯೋನ್ ಚಾಂಪಿಯನ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಮೊನ್ನೆಯಷ್ಟೇ ಅವರು ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೂ ಬಂದಿದ್ದರು. ಈ ಸಿನಿಮಾದಲ್ಲಿ ಅವರೊಂದು ಹಾಡಿನಲ್ಲಿ ಕಾಣಿಸಿಕೊಂಡಿರುವ ಕುರಿತಾಗಿಯೂ ಅವರು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]