Tag: ಕೆಜಿಎಫ್-2 ಟೀಸರ್

  • ಅಭಿಮಾನಿಗಳ ಅಭಿಮಾನಕ್ಕೆ ರಾಕಿ ಭಾಯ್ ಸಲಾಂ

    ಅಭಿಮಾನಿಗಳ ಅಭಿಮಾನಕ್ಕೆ ರಾಕಿ ಭಾಯ್ ಸಲಾಂ

    ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನೋಡಿ ಯಶ್‍ಗೆ ಅಭಿಮಾನಿಗಳೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಟೀಸರ್ ನಿಂದಲೇ ದಾಖಲೆ ನಿರ್ಮಿಸಲು ಹೊರಡುತ್ತಿದ್ದಂತೆ ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

    ಕೆಜಿಎಫ್-2 ಚಿತ್ರದ ಟೀಸರ್ ಗುರುವಾರ ರಾತ್ರಿ ಬಿಡುಗಡೆ ಗೊಳಿಸಿದ್ದರು. ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ವ್ಯೂವ್, ಲೈಕ್ ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಕನ್ನಡ ಚಿತ್ರವೊಂದು ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗಟ್ಟಿದೆ. ಈ ಸಂಭ್ರಮವನ್ನು ಇದೀಗ್ ಯಶ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ನೀವೂ ಪ್ರತಿಭಾರಿ ನನಗೆ ಜೊತೆಯಾಗಿದ್ದೀರಿ. ಹಾಗೆ ನೀವೂ ಕೊಟ್ಟಿರುವ ಅಪಾರವಾದ ಪ್ರೀತಿಯಲ್ಲಿ ನಾನೂ ಮುಳುಗೀದ್ದೇನೆ. ನಾನೂ ಯಾವತ್ತು ನಿಮ್ಮನ್ನು ರಂಜಿಸುತ್ತಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ಕೆಜಿಎಫ್-2 ಸಿನಿಮಾದ ಟೀಸರ್ ರೀಲಿಸ್ ಮಾಡಲು ಸಿದ್ಧತೆ ಮಾಡಿತ್ತು. ಆದರೆ ಜನವರಿ 7ರ ಸಂಜೆಯೇ ಟೀಸರ್ ನ ಕೆಲ ಕ್ಲಿಪ್ ಗಳು ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ ಚಿತ್ರತಂಡ ಟೀಸರ್ ರೀಲಿಸ್ ಮಾಡಿತ್ತು. ಕೆಜಿಎಫ್-2ರ ಟೀಸರ್ 10 ಕೋಟಿಗೂ ಅಧಿಕ ವೀಕ್ಷಣೆಯಾಗಿ ಸಾಗುತ್ತಿದ್ದು ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ.

  • ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್-2

    ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್-2

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಧೂಳ್ ಎಬ್ಬಿಸಿದ ಸಿನಿಮಾ ಕೆಜಿಎಫ್. ಭಾರತೀಯ ಸಿನಿ ಇಂಡಸ್ಟ್ರಿ ಒಮ್ಮೆ ಸ್ಯಾಂಡಲ್‍ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಡುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ ಕನ್ನಡದ ಕೆಜಿಎಫ್-2 ಚಿತ್ರದ ಬಹು ನಿರೀಕ್ಷಿತ ಟೀಸರ್ ನಿನ್ನೆ ರಾತ್ರಿ ಬಿಡುಗಡೆಯಾಗಿದೆ.

    ಟೀಸರ್ ನೋಡಿದ ಅಭಿಮಾನಿಗಳಲ್ಲಿ ಕೆಜಿಎಫ್-2 ಮತ್ತಷ್ಟು ಕೂತೂಹಲ ಕೆರಳಿಸಿದೆ. ಟೀಸರ್ ರಿಲೀಸ್ ಆದ ಒಂದು ಗಂಟೆಯಲ್ಲೇ ಸುಮಾರು  10 ಲಕ್ಷ  ವ್ಯೂವ್ಸ್ ಪಡೆದಿದ್ದ ಕೆಜಿಎಫ್ -2, ಯೂಟ್ಯೂಬ್‍ನಲ್ಲಿ ಶರ ವೇಗದಲ್ಲಿ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಟೀಸರ್ ಫಿದಾ ಆಗಿರುವ ಪ್ರೇಕ್ಷಕರು ಸಿನಿಮಾ ನೋಡಲು ಬಹಳ ಉತ್ಸುಕರಾಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದ ಸಲುವಾಗಿ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಯೋಜಿಸಿದ್ದ ಚಿತ್ರತಂಡ ನಿನ್ನೆ ಕಿಡಿಗೇಡಿಗಳು ಟೀಸರ್ ಲೀಕ್ ಮಾಡಿದ ಕಾರಣ ನಿನ್ನೆ ರಾತ್ರಿ 9.29 ಕ್ಕೆ ಟೀಸರ್ ರಿಲೀಸ್ ಮಾಡಲಾಯಿತು.

    ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್- 2 ಟೀಸರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಅತಿ ವೇಗದಲ್ಲಿ 2 ಮಿಲಿಯನ್‍ಗಿಂತ ಹೆಚ್ಚು ಲೈಕ್ಸ್ ಪಡೆದ ಮೊದಲ ಸಿನಿಮಾ ಆಗಿದೆ. ಎಂದು ಭಾರತೀಯ ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಕೆಜಿಎಫ್- 2 ಸಿನಿಮಾದ ಟೀಸರ್‍ನಲ್ಲಿನ ಸ್ಕ್ರೀನ್ ಪ್ಲೇ ಪ್ರೇಕ್ಷಕರ ಮನ ಗೆದ್ದಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಧೀರ ಪಾತ್ರಧಾರಿ ಸಂಜಯ್ ದತ್ ಟೀಸರ್‍ನಲ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಬಂದೂಕಿನ ಮೇಲಿರುವ ಕೆಂಪು ಕೆಂಡದಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಸೀನ್ ಹಲ್‍ಚುಲ್ ಎಬ್ಬಿಸಿದೆ.