ನ್ಯಾಷನಲ್ ಸ್ಟಾರ್ ಯಶ್ (Yash) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿದ ‘ಕೆಜಿಎಫ್ 1’ (KGF Chapter 1) ಚಿತ್ರ ರೀ ರಿಲೀಸ್ ಆಗಿದೆ. ಮತ್ತೊಮ್ಮೆ ರಾಕಿ ಭಾಯ್ ಆಗಿ ಯಶ್ (Yash) ಅಬ್ಬರಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಲ್ಲ, ಬದಲಿದೆ ತೆಲುಗು ರಾಜ್ಯಗಳಲ್ಲಿ ಸಿನಿಮಾ ತೆರೆ ಕಂಡಿದೆ. ಇದನ್ನೂ ಓದಿ:ರಶ್ಮಿಕಾ ಫ್ಯಾನ್ಸ್‌ಗೆ ಸಿಹಿಸುದ್ದಿ- ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್
ಜೂನ್ 21ರಂದು ಯಶ್ ನಟನೆಯ ಬ್ಲಾಕ್ ಬಸ್ಟರ್ ಕೆಜಿಎಫ್ 1 ಸಿನಿಮಾ ಮಗದೊಮ್ಮೆ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ ‘ಕೆಜಿಎಫ್ 1’ ತೆಲುಗು ವರ್ಷನ್ ಎರಡು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇನ್ನೂ ಬೇರೆ ನಗರಗಳಲ್ಲಿಯೂ ಸಿನಿಮಾ ರಿಲೀಸ್ ಆಗಿದೆ.
‘ಕೆಜಿಎಫ್’ ರೀ ರಿಲೀಸ್‌ಗೂ ತೆಲುಗು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತಮ್ಮದೇ ನೆಲದ ಸ್ಟಾರ್ ನಟನ ಸಿನಿಮಾ ಎಂಬಂತೆಯೇ ಮತ್ತೊಮ್ಮೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಉತ್ತಮ ಗಳಿಕೆ ಕಾಣ್ತಿದೆ.
2018ರಲ್ಲಿ ತೆರೆಕಂಡ ‘ಕೆಜಿಎಫ್’ (KGF) ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ (Srinidhi Shetty) ನಟಿಸಿದ್ದರು. ಯಶ್ ತಾಯಿಯ ಪಾತ್ರದಲ್ಲಿ ಅರ್ಚನಾ ಜೀವತುಂಬಿದ್ದರು. ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು.
ಕನ್ನಡದ ‘ಕೆಜಿಎಫ್’ (KGF) ನಟಿ ರೂಪಾ ರಾಯಪ್ಪ (Roopa Rayappa) ಸದಾ ಒಂದಲ್ಲಾ ಒಂದು ಹಾಟ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ. ಈಗ ಬ್ಲ್ಯಾಕ್ & ವೈಟ್ ಫೋಟೋಶೂಟ್‌ನಲ್ಲಿ ಒಳ ಉಡುಪಿನ ಫೋಟೋ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ವಿವಿಧ ಭಂಗಿಗಳ ಫೋಟೋ ಹಂಚಿಕೊಂಡು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಅವತಾರ ನೋಡಿದೋರು ಸಖತ್ ಹಾಟ್ ಮಗಾ ಅಂತಿದ್ದಾರೆ.
ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ (Troll) ಮಾಡೋರಿಗೆ ಮನವಿವೊಂದನ್ನ ಮಾಡಿದ್ದಾರೆ. ನನ್ನ ಹಾಲಿವುಡ್ (Hollywood) ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದಿದ್ದಾರೆ. ನಾನು ಅಪ್ಲೋಡ್ ಮಾಡಿರುವ ಫೋಟೋಸ್‌ಗಳನ್ನು ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ. ಇದನ್ನೂ ಓದಿ:ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಮದುವೆ ಕ್ಯಾನ್ಸಲ್ ಆಗಿದ್ಯಾಕೆ- ಅಷ್ಟಕ್ಕೂ ಆಗಿದ್ದೇನು?
ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮನವಿ ಮಾಡಿದ್ದಾರೆ. ಒಟ್ನಲ್ಲಿ ಅವರ ಹಾಟ್ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.
ರೂಪಾ ರಾಯಪ್ಪ (Roopa Rayappa) ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್’ (The Judgement) ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಯಶ್ (Yash) ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿದೆ.
ಕೆಜಿಎಫ್ ಪಾರ್ಟ್ 1ನಲ್ಲಿ (KGF) ಡಿ ಗ್ಲ್ಯಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಹಾಟ್ ಅವತಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಇನ್ನೂ ಈ ವರ್ಷ ಬಿಗ್ ಬಾಸ್ ಸೀಸನ್ 10ರ(Bigg Boss Kannada 10) ಪಟ್ಟಿಯಲ್ಲಿ ರೂಪಾ ರಾಯಪ್ಪ ಹೆಸರು ಕೇಳಿ ಬರುತ್ತಿದೆ.
ನಮ್ರತಾ ಗೌಡ(Namratha Gowda), ವರ್ಷ ಕಾವೇರಿ(Varsha Kaveri), ಮೇಘಾ ಶೆಟ್ಟಿ, ರಕ್ಷಕ್ ಬುಲೆಟ್, ಸುನೀಲ್ ರಾವ್ ಸೇರಿದಂತೆ ಹಲವರ ಹೆಸರು ದೊಡ್ಮನೆ ಆಟಕ್ಕೆ ಬರುವ ಬಗ್ಗೆ ವೈರಲ್ ಆಗುತ್ತಿದೆ. ರೂಪಾ ರಾಯಪ್ಪ ಕೂಡ ದೊಡ್ಮನೆ ಆಟಕ್ಕೆ ಎಂಟ್ರಿ ಕೊಡುತ್ತಾರಾ? ಕಾಯಬೇಕಿದೆ.
`ಕೆಜಿಎಫ್ 2′ (KGF 2) ಬ್ಯೂಟಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Srinidhi Shetty), ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚಿದ ಮೇಲೆ ಕರಾವಳಿ ನಟಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೂ ಬಿಡುವಿದ್ದಾಗ ಆಗಾಗ ಚೆಂದದ ಫೋಟೋಗಳನ್ನ ನಟಿ ಶೇರ್ ಮಾಡ್ತಾರೆ. ಈ ಬಾರಿ ಕೂಡ ಕ್ಯೂಟ್ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಪೋಸ್ಟ್ ಮಾಡಿದ್ದರು. ಶೆಟ್ರ ಲುಕ್‌ಗೆ ರಕ್ಷಿತ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಐಟಂ ಡ್ಯಾನ್ಸ್ ಮಾಡಬೇಡ ಎಂದಿದ್ರು: ನಟಿ ಸಮಂತಾ
ಸಿನಿಮಾ ಜಗತ್ತಿನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸಿನಿಮಾ ಕೆಜಿಎಫ್ 1, ಕೆಜಿಎಫ್2 ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಆಗಾಗ ಹೊಸ ಫೋಟೋಶೂಟ್‌ನಿಂದ ನಟಿ ಮಿಂಚ್ತಿರುತ್ತಾರೆ. ಮಾರ್ಚ್ 28ರಂದು ಶ್ರೀನಿಧಿ, ನೇರಳೆ ಬಣ್ಣದ ಡ್ರೆಸ್ ಧರಿಸಿರುವ ಸೆಲ್ಫಿ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಬಳಿಕ `ಹಾಗೆ ಸುಮ್ಮನೆ’ ಎಂದು ಅಡಿಬರಹ ನೀಡಿದ್ದಾರೆ. ಈ ಪೋಸ್ಟ್ ನೋಡಿ ನಟ ರಕ್ಷಿತ್ ಶೆಟ್ಟಿ, ನಟಿಯ ಕಾಲೆಳೆದಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ಪೋಸ್ಟ್ ನೋಡಿ ರಕ್ಷಿತ್ ಶೆಟ್ಟಿ (Rakshit Shetty), `ಆಯ್ತು ಶೆಟ್ರೆ ಗೊತ್ತಾಯ್ತು’ ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಿಕ ಹೌದಾ.. ಗೊತ್ತಾಯ್ತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು ರಕ್ಷಿತ್‌ಗೆ ಶ್ರೀನಿಧಿ ರಿಪ್ಲೈ ಕೊಟ್ಟಿದ್ದಾರೆ. ಇಬ್ಬರ ತುಳು ಸಂಭಾಷನಣೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜೊತೆಗೆ ಏನ್ ಶೆಟ್ರೆ ಸಮಾಚಾರ ಎಂದು ಫ್ಯಾನ್ಸ್ ಕಾಲೆಳೆದಿದ್ದಾರೆ.
ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಆರ್.ಚಂದ್ರು ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಾಂತಾರ ಮತ್ತು ಕೆಜಿಎಫ್ 1 ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ (Collection) ಬರೋಬ್ಬರಿ 50 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಿಂದಲೂ ಹಣ ಹರಿದು ಬಂದಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿನ್ನೆ ಬಿಡುಗಡೆಯಾದಾಗ ಕೆಲವು ಕಡೆ ಫಸ್ಟ್ ಶೋಗೆ ಪ್ರತಿಕ್ರಿಯೆ ಭಾರೀ ಪ್ರಮಾಣದಲ್ಲಿ ಇಲ್ಲವೆಂದು ಹೇಳಲಾಗಿತ್ತು. ಆದರೆ, ಸಂಜೆ ಅಷ್ಟೊತ್ತಿಗೆ ಅಷ್ಟೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಮಧ್ಯಾಹ್ನದಿಂದ ಥಿಯೇಟರ್ ಸಂಖ್ಯೆ ಹಾಗೂ ಶೋಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ
ಸಿನಿಮಾ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ವಿಮರ್ಶಕರು ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿಹೊಗಳಿದ್ದಾರೆ. ಚಂದ್ರು ಹೀಗೂ ಸಿನಿಮಾ ಮಾಡುವುದಕ್ಕೆ ಸಾಧ್ಯವಾ? ಎಂದು ಬಣ್ಣಿಸಿದ್ದಾರೆ. ಅದರಲ್ಲೂ ಸಿನಿಮಾದ ಸೆಕೆಂಡ್ ಆಫ್ ಬಗ್ಗೆ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಮಾಡಿದ ಪಾತ್ರಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಬರೆದಿದ್ದಾರೆ.
ಉಪೇಂದ್ರ (Upendra) ಸ್ವತಃ ನಿರ್ದೇಶಕರಾಗಿದ್ದರೂ ಮೇಕಿಂಗ್ ಬಗ್ಗೆ ಮಾತನಾಡುತ್ತಾ, ಭಾರತೀಯ ಸಿನಿಮಾ ರಂಗಕ್ಕೆ ಮತ್ತೊಬ್ಬ ಅದ್ಭುತ ನಿರ್ದೇಶಕ ಸಿಕ್ಕಿದ್ದಾರೆ ಎಂದು ಮಾಧ್ಯಮಗಳ ಮುಂದೆಯೇ ಆರ್.ಚಂದ್ರು ಅವರನ್ನು ಹೊಗಳಿದ್ದಾರೆ. ಬಾಲಿವುಡ್ ನಲ್ಲೂ ಕಬ್ಜ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸಿಲೆಬ್ರಿಟಿಗಳು ಕನ್ನಡ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಚಂದ್ರು ಅವರನ್ನು ಬಾಲಿವುಡ್ ಗೆ ಸ್ವಾಗತ ಎಂದು ಆಹ್ವಾನಿಸಿದ್ದಾರೆ.
ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಯಶ್ ನಟನೆಯ `ಕೆಜಿಎಫ್’ (KGF 1) ಸಿನಿಮಾಗೆ 4 ವರ್ಷಗಳ ಸಂಭ್ರಮವಾಗಿದ್ದು, ಈ ಸುದಿನದ ಬಗ್ಗೆ ಹೊಂಬಾಳೆ ಫಿಲ್ಮ್ಸ್(Homabale Films) ಮೆಲುಕು ಹಾಕಿದೆ. ಈ ಕುರಿತು ಹೊಂಬಾಳೆ ಸಂಸ್ಥೆ ವಿಶೇಷ ಪೋಸ್ಟ್‌ವೊಂದನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ
`ಉಗ್ರಂ’ ಚಿತ್ರದ ನಂತರ ಕೆಲ ವರ್ಷಗಳ ಸ್ಕ್ರಿಪ್ಸ್ ವರ್ಕ್ ಮಾಡಿ, ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಕಲ್ಪನೆಯಂತೆ ಕೆಜಿಎಫ್ ಚಾಪ್ಟರ್ 1 ತೆರೆಯ ಮೇಲೆ ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಡಿ. 21, 2018ರಂದು ತೆರೆಯ ಮೇಲೆ ಯಶ್ (Yash) ಸಿನಿಮಾ ಅಬ್ಬರಿಸಿತ್ತು. ಈ ವಿಶೇಷ ದಿನವನ್ನ ನೆನೆದು ಹೊಂಬಾಳೆ ಫಿಲ್ಮ್ಸ್ ಚಿತ್ರದ ಕುರಿತು ಪೋಸ್ಟ್ ಮಾಡಿದ್ದಾರೆ. ಸಿನಿಮಾ ಬೆಂಬಲಿಸಿದ, ಸಿನಿಮಾ ಕನಸಿಗೆ ಸಾಥ್ ಕೊಟ್ಟಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲೇ ಈ ಸಿನಿಮಾ ನೂರಾರು ಕೋಟಿ ಬಿಸ್ನೆಸ್ ಮಾಡಿತು. ಬಾಲಿವುಡ್‌ನಲ್ಲೂ ಈ ಸಿನಿಮಾ ರಿಲೀಸ್ ಮಾಡಲಾಯಿತು. ಹಿಂದಿಯಲ್ಲಿ ಈ ಚಿತ್ರ 44 ಕೋಟಿ ರೂಪಾಯಿ ಬಾಚಿತ್ತು. ಕನ್ನಡದ ಸಿನಿಮಾವೊಂದು ಬಾಲಿವುಡ್‌ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಅದೇ ಮೊದಲಾಗಿತ್ತು. ಹೀಗೆ ಈ ಚಿತ್ರದಿಂದ ದೊಡ್ಡ ಇತಿಹಾಸವೇ ಸೃಷ್ಟಿ ಆಯಿತು.
ʻಕೆಜಿಎಫ್ʼ (Kgf) ಚಿತ್ರದಲ್ಲಿ ಯಶ್ ಪಾತ್ರ ಸಖತ್ ಹೈಲೈಟ್ ಆಯಿತು. ರಾಕಿ ಆಗಿ ಅವರು ಮಿಂಚಿದರು. ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದರು. ಈ ವಿಶೇಷ ದಿನಕ್ಕೆ ಈಗ ನಾಲ್ಕು ವರ್ಷ ತುಂಬಿದೆ. ಈ ವಿಶೇಷ ದಿನವನ್ನು ಹೊಂಬಾಳೆ ಫಿಲ್ಮ್ಸ್ ನೆನಪಿಸಿಕೊಂಡಿದೆ.
Live Tv
[brid partner=56869869 player=32851 video=960834 autoplay=true]