Tag: `ಕೆಜಿಎಫ್ ೨’

  • ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್ 2′ ಚಿತ್ರದ ಹಾವಳಿ ಜೋರಾಗಿದೆ. ಚಿತ್ರದ ಟ್ರೇಲರ್ ಮೂಲಕನೇ ದಾಖಲೆ ಬರೆದಿರೋ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದೆಲ್ಲಡೆ ಚಿತ್ರ ರಿಲೀಸ್ ಆಗುತ್ತಿದೆ.

    ಈಗಾಗಲೇ `ಕೆಜಿಎಫ್ 2′ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಯುಎಸ್‌ಎನಲ್ಲಿ ಒಂದು ದಿನ ಮುಂಚೆನೇ ಪ್ರೀಮಿಯರ್ ಶೋ ಹಾಕಲಾಗಿದೆ. ಇದಕ್ಕಿನ್ನೂ 6 ದಿನಗಳಷ್ಟೇ ಬಾಕಿಯಿದೆ. ಫಸ್ಟ್ ಡೇ ಫಸ್ಟ್ ಶೋ `ಕೆಜಿಎಫ್ 2′ ಚಿತ್ರವನ್ನ ನೋಡಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.

    ವಿಶ್ವದೆಲ್ಲಡೆ ಕಾಯ್ತಿರೋ ರಾಕಿಭಾಯ್ ಸಿನಿಮಾಗಾಗಿ ಮುಂಬೈನ ಯಶ್ ಅಭಿಮಾನಿಯೊಬ್ಬ ಬರೋಬ್ಬರಿ 100 ಟಿಕೆಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮುನ್ನ ಈತ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗೆ 100 ಟಿಕೆಟ್ ಖರೀದಿಸಿದರಂತೆ. ಈಗ ಫಸ್ಟ್ ಟೈಮ್ ಸೌತ್ ಸಿನಿಮಾದ ಹೀರೋ ಯಶ್ ಸಿನಿಮಾಗೆ 100 ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಓದಿ: ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಕ್ಕೆ ಶ್ರೀನಿ ನಿರ್ದೇಶನ

    ಇನ್ನು ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಸಿನಿಮಾ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಕರಳು ಬೆಸೆಯುವ `ಕೆಜಿಎಫ್ 2′ ಸಿನಿಮಾದ ಗಗನ ಸಾಂಗ್

    ಕರಳು ಬೆಸೆಯುವ `ಕೆಜಿಎಫ್ 2′ ಸಿನಿಮಾದ ಗಗನ ಸಾಂಗ್

    ಕೊನೆಗೂ `ಕೆಜಿಎಫ್ 2′ ಸಿನಿಮಾದ ನಿರೀಕ್ಷಿತ ಅಮ್ಮ ಹಾಡು ‘ಗಗನ ನೀ, ಭುವನ ನೀ’ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ವೈರಲ್ ಆಗಿದ್ದು, ಅಮ್ಮನ ಗುಣಗಾನ ಮಾಡುವಂತಹ ಭಾವನಾತ್ಮಕ ಸಾಲುಗಳು ಕೇಳುಗರನ್ನು ಸೆಳೆದಿವೆ. ಕೆಜಿಎಫ್ ಒಂದರಲ್ಲಿ ತಾಯಿ ಮತ್ತು ಮಗನ ಭಾವನೆಗಳನ್ನು ದೃಶ್ಯ ರೂಪದಲ್ಲಿ ಸೆರೆ ಹಿಡಿಯಲಾಗಿತ್ತು. ಚಾಪ್ಟರ್ 2 ರಲ್ಲಿ ಹಾಡಿನ ಮೂಲಕವೂ ಆ ಭಾವನೆಗಳನ್ನು ದಾಟಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಹಾಡು ನೋಡಿದಾಗ ಅರಿವಾಗುತ್ತದೆ.

    ಇತ್ತೀಚೆಗಷ್ಟೇ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ `ಕೆಜಿಎಫ್ 2′ ಚಿತ್ರದ ಟ್ರೇಲರ್ ರಿಲೀಸ್ ಆಗಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಈಗ ಅದೇ ಹಾದಿಯಲ್ಲೇ `ಗಗನ ನೀ, ಭುವನ ನೀ’ ಅನ್ನೋ ಸಾಂಗ್ ಸಾಗಿದೆ.

    `ಕೆಜಿಎಫ್ 2′ ಆಕ್ಷನ್ ದೃಶ್ಯಗಳಿಗೆ ಅದೆಷ್ಟು ಪ್ರಾಮುಖ್ಯತೆ ಕೊಡಲಾಗಿದೆಯೋ ಹಾಗೆಯೇ ಹಾಡುಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ. ರವಿ ಬಸ್ರೂರ್ ಸಂಗೀತ ನಿರ್ದೇಶನದಲ್ಲಿ ಈ ಹಿಂದೆ ರಿಲೀಸ್ ಆಗಿದ್ದ `ತೂಫಾನ್’ ಸಾಂಗ್ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಈಗ ಚಿತ್ರದ ಸೆಕೆಂಡ್ ಸಾಂಗ್ ಕೂಡ ಜನರ ಮನಗೆದ್ದಿದೆ. ತಾಯಿ ಮಗನ ಬಾಂಧವ್ಯ ಸಾರುವ ಮತ್ತು ನೋಡುಗನ ಮುನಮುಟ್ಟವ ಈ ಸಾಂಗ್ ಮೂಲಕ `ಕೆಜಿಎಫ್ 2′ ಟೀಮ್ ಎಲ್ಲ ತಾಯಂದಿರಿಗೆ ಈ ಸಾಂಗ್ ಡೆಡಿಕೇಟ್‌ ಮಾಡಿದ್ದಾರೆ.

    `ಕೆಜಿಎಫ್ 2′ ಚಿತ್ರದಲ್ಲಿ ನಟಿ ಅರ್ಚನಾ ಜೋಯಿಸ್, ಕಥಾನಾಯಕ ರಾಕಿಭಾಯ್ ತಾಯಿಯ ಪಾತ್ರಕ್ಕೆ ಜೀವತುಂಬಿದ್ದು, ಸದ್ಯ ತಾಯಿ ಮಗನ ಸೆಂಟಿಮೆಂಟ್ `ಗಗನ ನೀ ಭುವನ ನೀ’ ಸಾಂಗ್ ನೋಡಿ ಫಿದಾ ಆಗಿದ್ದಾರೆ. ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಾಟಾಗಿದೆ. ಇದನ್ನು ಓದಿ: ನಾಗಚೈತನ್ಯಗೆ ಮತ್ತೆ ಜೊತೆಯಾದ ಬೊಟ್ಟಬೊಮ್ಮ ಬೆಡಗಿ ಪೂಜಾ

    ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ.

  • ಗ್ರೀಸ್‌ನಲ್ಲಿ `ಕೆಜಿಎಫ್ 2′: ಹೊಸ ದಾಖಲೆ ಬರೆದ ರಾಕಿಭಾಯ್ ಚಿತ್ರ

    ಗ್ರೀಸ್‌ನಲ್ಲಿ `ಕೆಜಿಎಫ್ 2′: ಹೊಸ ದಾಖಲೆ ಬರೆದ ರಾಕಿಭಾಯ್ ಚಿತ್ರ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ರಾಕಿಭಾಯ್ ಫೀವರ್ ಜೋರಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ ರಿಲೀಸ್ ಆಗುತ್ತಿರುವ `ಕೆಜಿಎಫ್ 2′ ರಿಲೀಸ್‌ಗೂ ಮುಂಚೆನೇ ಒಂದಲ್ಲಾ ಒಂದು ವಿಚಾರವಾಗಿ ಚಿತ್ರ ದಾಖಲೆ ಬರೆಯುತ್ತಿದೆ.

    ಹಲವು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಚಿತ್ರ, ಕನ್ನಡ ಸಿನಿಮಾಗಳು ತೆರೆ ಕಾಣದ ಪ್ರದೇಶಗಳಲ್ಲೂ ರಿಲೀಸ್ ಮಾಡಲು `ಕೆಜಿಎಫ್ 2′ ಪಣ ತೊಟ್ಟಿದೆ. ಕೆಜಿಎಫ್ 2 ದಾಖಲೆಗಳ ಸಾಲಲ್ಲಿ ಮತ್ತೊಂದು ದಾಖಲೆ ಸೇರಿಕೊಂಡಿದೆ. ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ಗ್ರೀಸ್ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಮಾಡದ ಈ ಸಾಧನೆಯನ್ನು ಕನ್ನಡದ `ಕೆಜಿಎಫ್ 2′ ಮಾಡಿದೆ.

    `ಕೆಜಿಎಫ್ 2′ ಅಮೆರಿಕಾ, ರಷ್ಯಾ, ಯುರೋಪ್, ವಿಶ್ವದೆಲ್ಲಡೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಇತ್ತೀಚಿಗೆ ಬ್ರಿಟನ್‌ನಲ್ಲಿ 12 ಗಂಟೆಗಳಲ್ಲಿ 5000 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ರೆಕಾರ್ಡ್ ಮಾಡಿತ್ತು. ಈಗ ಗ್ರೀಸ್‌ನಲ್ಲಿ ರಿಲೀಸ್ ಆಗಲಿರುವ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ದಾಖಲೆ ಮಾಡಿದೆ. ಸಿನಿರಸಿಕರಿಗೆ ತಮ್ಮ ಚಿತ್ರ ತಲುಪಬೇಕು ಅನ್ನೋ ದೃಷ್ಠಿಯಿಂದ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ಓದಿ:ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    ಡೈರೆಕ್ಟರ್‌ ಪ್ರಶಾಂತ್‌ ನೀಲ್ ಮತ್ತು ಯಶ್ ಕಾಂಬಿನೇಷನ್‌ನ `ಕೆಜಿಎಫ್ ೨’ ನಲ್ಲಿ  ತಾರಾಡಂಡೆ ಈ ಚಿತ್ರದಲ್ಲಿದೆ. ಯಶ್ ಮುಂದೆ ಅಬ್ಬರಿಸಲು ಅಧೀರನಾಗಿ ಸಂಜಯ್ ದತ್ ನಟಿಸಿದ್ದಾರೆ. ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸಾಥ್ ನೀಡಿದ್ದಾರೆ. ಇದೇ ಏಪ್ರಿಲ್ ೧೪ಕ್ಕೆ ತೆರೆಗೆ ಬರಲು ರೆಡಿಯಿದ್ದು, ರಾಕಿಭಾಯ್ ಅವತಾರ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್ ಕಾಯುತ್ತಿದ್ದಾರೆ.