Tag: `ಕೆಜಿಎಫ್ ೨’

  • ಬಂಗಾರದ ಬೆಳೆ ತೆಗೆದ `ಕೆಜಿಎಫ್ 2′: ಬಾಕ್ಸ್ಆಫೀಸ್‌ನಲ್ಲಿ 336 ಕೋಟಿ ಕಲೆಕ್ಷನ್

    ಬಂಗಾರದ ಬೆಳೆ ತೆಗೆದ `ಕೆಜಿಎಫ್ 2′: ಬಾಕ್ಸ್ಆಫೀಸ್‌ನಲ್ಲಿ 336 ಕೋಟಿ ಕಲೆಕ್ಷನ್

    ಭಾರತೀಯ ಚಿತ್ರರಂಗದಲ್ಲಿಗ ಸುದ್ದಿ, ಸದ್ದು ಎಲ್ಲಾ ಒಂದರದ್ದೇ ಅದು `ಕೆಜಿಎಫ್ 2′ ದಿನದಿಂದ ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್ ಮಾಡತ್ತಾ ಗಳಿಕೆಯಲ್ಲೂ ಹಿಂದೆ ಬೀಳದೆ. ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿರೋ ಎಕೈಕ ಚಿತ್ರ ಯಶ್ ನಟನೆಯ `ಕೆಜಿಎಫ್ 2′ ಅಂದ್ರೆ ತಪ್ಪಾಗಲಾರದು. ಇದೀಗ ಹಿಂದಿ ಬಾಕ್ಸಾಆಫೀಸ್‌ನಲ್ಲಿ 336 ಕೋಟಿ ಬಾಚಿದೆ.

    ಕನ್ನಡದ `ಕೆಜಿಎಫ್ 2′ ಸಿನಿಮಾವೊಂದು ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದ ಎಲ್ಲಾ ಕಡೆ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಜಾಸ್ತಿ ಆಗುತ್ತಿದೆ ವಿನಃ ಕಮ್ಮಿಯಾಗುತ್ತಿಲ್ಲ. ಇದೀಗ ಚಿತ್ರದ ಪ್ರಸ್ತುತ ಕಲೆಕ್ಷನ್ 336.88 ಕೋಟಿ ಬಾಚಿದೆ. ಕೋಟಿ ಕೋಟಿ ಲೂಟಿ ಮಾಡುತ್ತಾ ಬಾಕ್ಸ್ಆಫೀಸ್ ಸುಲ್ತಾನ್ ಆಗಿ ಯಶ್ ಮಿಂಚಿದ್ದಾರೆ.

    kgf 2

    `ಕೆಜಿಎಫ್ 2′ ಚಿತ್ರ ರಿಲೀಸ್ ಆಗಿ ಎರಡು ವಾರಗಳು ಕಳೆದರೂ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ಈ ಹಿಂದಿನ ಚಿತ್ರಗಳಾದ ‌ʻಸುಲ್ತಾನ್ʼ, ಟೈಗರ್ ಜಿಂದಾ ಹೈʼ, ʻಪಿಕೆʼ, ಹೀಗೆ ಎಲ್ಲಾ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿ, ಮಂಗಳವಾರದ ಎಕ್ಸಾಂನಲ್ಲಿ 336.88 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಪ್ರಗ್ನೆನ್ಸಿ ಸಮಯದಲ್ಲಿ ಶೂಟಿಂಗ್‌ಗೆ ಮರಳಿದ ಸೋನಮ್ ಕಪೂರ್

    ಯಶ್ ಅಭಿನಯದ ಸಕ್ಸಸ್‌ಫುಲ್ `ಕೆಜಿಎಫ್ 2′ ಚಿತ್ರದ ಮುಂದೆ ಬಾಲಿವುಡ್ ಚಿತ್ರಗಳನ್ನ ರಿಲೀಸ್ ಮಾಡೋದಕ್ಕೂ ಹಿಂದೆ ಮುಂದೆ ನೋಡುವ ಪರಿಸ್ಥಿತಿ  ಎದುರಾಗಿದೆ. ಒಟ್ನಲ್ಲಿ 1000 ಕೋಟಿ ಮೇಲೆ `ಕೆಜಿಎಫ್ 2′ ಕಲೆಕ್ಷನ್ ಮಾಡೋದು ಡೌಟೆಯಿಲ್ಲ ಅಂತಿದ್ದಾರೆ ಸಿನಿಪಂಡಿತರು.

  • ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

    ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

    ಚಂದನವನದ `ಮೊಗ್ಗಿನ ಮನಸ್ಸಿ’ನ ನಟಿ ರಾಧಿಕಾ ಪಂಡಿತ್ ಸಿನಿಮಾದಿಂದ ಸ್ವಲ್ವ ಬ್ರೇಕ್ ತಗೆದುಕೊಂಡು ಕುಟುಂಬ ಮತ್ತು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. `ಕೆಜಿಎಫ್ 2′ ಯಶಸ್ಸಿನ ಹಿನ್ನೆಲೆ ಪಾರ್ಟಿ ಮೂಡ್‌ನಲ್ಲಿರೋ ಯಶ್ ಮತ್ತು ರಾಧಿಕಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಯಶ್ ತಮ್ಮ ಪತ್ನಿ ರಾಧಿಕಾ ಕೆನ್ನೆಗೆ ಮುತ್ತು ಕೊಡ್ತಿರೋ ಇನ್ಸ್ಟಾಗ್ರಾಂ ವೈರಲ್ ಆಗಿದೆ.

    ನ್ಯಾಷನಲ್ ಸ್ಟಾರ್ ಯಶ್ ಇಷ್ಟು ದಿನ `ಕೆಜಿಎಫ್ 2′ ಪ್ರಚಾರದಲ್ಲಿ ಬ್ಯುಸಿಯಾಗಿದ್ರು. ರಿಲೀಸ್ ನಂತರ ಕೆಜಿಎಫ್ 2 ಚಿತ್ರ ಈಗ ಬಾಕ್ಸ್ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರದ ಕಲೆಕ್ಷನ್ 1000 ಕೋಟಿಯತ್ತ ಸಮೀಪಿಸುತ್ತಿದೆ. ಇಡೀ ಚಿತ್ರದ ಗೆಲುವನ್ನು ಸಂಭ್ರಮಿಸಿಸಲು ಚಿತ್ರತಂಡ ಕುಟುಂಬದ ವೆಕೇಷನ್‌ಗೆ ಹೋಗಿದ್ದಾರೆ. `ಕೆಜಿಎಫ್ 2′ ಸಕ್ಸಸ್ ಸಂತಸದ ಕ್ಷಣಗಳನ್ನು ಫಿಲ್ಮಂ ಟೀಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈಗ ಪತಿ ಯಶ್ ಜತೆಗಿನ ವಿಶೇಷ ಫೋಟೋವೊಂದನ್ನ ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಯಶ್ ಮತ್ತು ರಾಧಿಕಾ ಒಂದೇ ಕಲರ್ ಡ್ರೇಸ್ ಹಾಕಿಕೊಂಡಿದ್ದು, ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಮೂರು ವಿಭಿನ್ನ ಪೋಸ್‌ಗಳಲ್ಲಿ ಒಬ್ಬರಿಗೊಬ್ಬರು ಪೋಸ್ ಕೊಡತ್ತಿದ್ದರೆ, ಕಡೆಯ ಫೋಟೋದಲ್ಲಿ ಯಶ್ ರಾಧಿಕಾ ಕೆನ್ನೆಗೆ ಕಿಸ್ ಮಾಡಿದ್ದಾರೆ. ಈ ಪೋಸ್ಟ್ಗೆ ಕಲರ್ ಗ್ಲಾಸ್‌ನಲ್ಲಿ ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಫೋಟೋ ಕೈಚಲಕ ಭುವನ್ ಗೌಡ ಎಂದು ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: 

     

    View this post on Instagram

     

    A post shared by Radhika Pandit (@iamradhikapandit)

    ಯಶ್ ವೃತ್ತಿಜೀವನದ ಯಶಸ್ವಿ ಹಾದಿಯಲ್ಲಿ ಸಾಥ್ ಕೊಟ್ಟವರು ರಾಧಿಕಾ ಪಂಡಿತ್. ಮನೆ ಮತ್ತು ಮಕ್ಕಳ ಜವಬ್ದಾರಿ ಹೊತ್ತು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ನೆಚ್ಚಿನ ನಟಿ ರಾಧಿಕಾ ಮತ್ತೆ ಯಾವಾಗ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳತ್ತಾರೆ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಜತೆಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಾಷ್ಟು ಕುತೂಹಲ ಹುಟ್ಟು ಹಾಕಿದೆ.

  • ಬಿಟೌನ್‌ ಬಾಕ್ಸ್ಆಫೀಸ್‌ನಲ್ಲಿ 329 ಕೋಟಿ ಬಾಚಿದ `ಕೆಜಿಎಫ್ 2′ ಚಿತ್ರ

    ಬಿಟೌನ್‌ ಬಾಕ್ಸ್ಆಫೀಸ್‌ನಲ್ಲಿ 329 ಕೋಟಿ ಬಾಚಿದ `ಕೆಜಿಎಫ್ 2′ ಚಿತ್ರ

    ಬಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಏಕೈಕ ಚಿತ್ರ ಅಂದ್ರೆ `ಕೆಜಿಎಫ್ 2′ ಸಿನಿಮಾ. ಈ ಚಿತ್ರದದ ಯಶಸ್ಸಿನ ನಂತರ ಹಿಂದಿ ಚಿತ್ರಗಳನ್ನೇ ರಿಲೀಸ್ ಮಾಡಲು ಹಿಂದೆ ಮುಂದೆ ನೋಡ್ತಿದ್ದಾರೆ ಬಿಟೌನ್ ಮಂದಿ. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣ್ತಾ ಎರಡನೇ ವಾರದತ್ತ ಮುನ್ನುಗುತ್ತಿದೆ. ಇವರೆಗೂ ಎಲ್ಲೂ ಹಿಂದೆ ಬೀಳದೇ ಸೋಮವಾರದ ಕಲೆಕ್ಷನ್‌ನಲ್ಲಿ 8 ಕೋಟಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 329 ಕೋಟಿ ರೂಪಾಯಿ ಖಜಾನೆ ಭರ್ತಿ ಮಾಡಿದೆ.

    ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಗಳನ್ನ `ಕೆಜಿಎಫ್ 2′ ಮುರಿದಿದೆ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದ್ದ ಭಜರಂಗಿ ಭಾಯಿಜಾನ್ 320.34 ಕೋಟಿ, ಸುಲ್ತಾನ್ 300 ಕೋಟಿ, ಪದ್ಮಾವತ್ 302 ಕೋಟಿ ಬಾಚಿತ್ತು ಈಗ ಈ ಚಿತ್ರಗಳ ರೆಕಾರ್ಡ್‌ `ಕೆಜಿಎಫ್ 2′ ಬ್ರೇಕ್ ಮಾಡಿದೆ.

    ಬಿಟೌನ್‌ನ ʻಸಂಜುʼ, ʻಟೈಗರ್ ಜಿಂದಾ ಹೈʼ, ʻಪಿಕೆʼ ಚಿತ್ರಗಳನ್ನು ಓವರ್‌ಟೆಕ್ ಮಾಡಿದೆ `ಕೆಜಿಎಫ್ 2′ ಚಿತ್ರದ ಜೊತೆ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಅಮೀರ್ ಖಾನ್ ನಟನೆಯ `ದಂಗಲ್’ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 387 ಕೋಟಿ ಬಾಚಿತ್ತು ಇದೀಗ ಈ ಎಲ್ಲಾ ಚಿತ್ರಗಳನ್ನ ಮೀರಿ `ಕೆಜಿಎಫ್ 2′ ಮುನ್ನುಗುತ್ತಿದೆ ಎಂಬುದು ಸಿನಿಮಂದಿಯ ಲೆಕ್ಕಾಚಾರ.‌

    ಇನ್ನು ಇತ್ತೀಚೆಗೆ ರಿಲೀಸ್ ಆದ `ಜೆರ್ಸಿ’ ಚಿತ್ರಕ್ಕೂ ಸೈಡ್ ಹೊಡೆದು `ಕೆಜಿಎಫ್ 2′ ಉತ್ತಮ ಪ್ರದರ್ಶನ ಕಂಡಿತ್ತು. ಬಾಕ್ಸ್ಆಫೀಸ್‌ನಲ್ಲಿ ಒಟ್ಟು 329.40 ಕೋಟಿ ರೂಪಾಯಿ ಲಕೋಟೆ ಬಾಚಿದೆ ಯಶ್ ನಟನೆಯ ಸಿನಿಮಾ. `ಕೆಜಿಎಫ್ 2′ ಓಟಕ್ಕೆ ಎಲ್ಲಾ ವುಡ್‌ಗಳ ಸಿನಿಮಾನೂ ಬೆದರಿ ನಿಲ್ಲುತ್ತಿದೆ.

  • `ಕೆಜಿಎಫ್ 2′ ಚಿತ್ರ ಸಂಜಯ್‌ ದತ್‌ಗೆ ಯಾಕೆ ವಿಶೇಷ: ವೈರಲ್ ಆಯ್ತು ಅಧೀರನ ಪೋಸ್ಟ್

    `ಕೆಜಿಎಫ್ 2′ ಚಿತ್ರ ಸಂಜಯ್‌ ದತ್‌ಗೆ ಯಾಕೆ ವಿಶೇಷ: ವೈರಲ್ ಆಯ್ತು ಅಧೀರನ ಪೋಸ್ಟ್

    ಚಿತ್ರರಂಗದಲ್ಲಿ ಇದೀಗ ಒಂದೇ ಸುದ್ದಿ, ಸದ್ದು ಅದೇ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ. ದೇಶ್ಯಾದಂತ `ಕೆಜಿಎಫ್ 2′ ಚಿತ್ರ ಕೋಟಿ ಕೋಟಿ ಲೂಟಿ ಮಾಡ್ತಿದೆ. ಯಶ್ ಪಾತ್ರ ಮಾತ್ರವಲ್ಲದೇ ಪ್ರತಿಯೊಬ್ಬರ ಪಾತ್ರಗಳಿಗೂ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಂತೆಯೇ ಅಧೀರ ಪಾತ್ರ ಕೂಡ ಚಿತ್ರದ ಮತ್ತೊಂದು ಹೈಲೆಟ್ ಆಗಿದ್ದು, ಅಭಿಮಾನಿಗಳ ಪ್ರೀತಿಗೆ ಸಂಜಯ್ ದತ್ ಪೋಸ್ಟ್ ಮೂಲಕ ಥ್ಯಾಂಕ್ಯೂ ಹೇಳಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2’ನಲ್ಲಿ ಅಧೀರ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಜೀವ ತುಂಬಿದ್ದಾರೆ. ಚಿತ್ರದ ಪ್ರಮುಖ ಹೈಲೆಟ್‌ಗಳಲ್ಲಿ ಅಧೀರ ಪಾತ್ರ ಕೂಡ ಒಂದಾಗಿದೆ. ಅಭಿಮಾನಿಗಳು ಸಿನಿಮಾ ನೋಡಿ ಅಧೀರನಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಟ ಸಂಜಯ್ ದತ್ ಟ್ವಿಟರ್ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಕೆಲವು ಚಿತ್ರಗಳು ಬೇರೆ ಚಿತ್ರಗಳಿಗಿಂತ ವಿಶೇಷವಾಗಿರುತ್ತದೆ. ಪ್ರತಿ ಬಾರಿ ನನ್ನ ಕಂಫರ್ಟ್ ಜೋನ್‌ನಿಂದ ಹೊರ ತಳ್ಳುವ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ʻಕೆಜಿಎಫ್ 2ʼ ಚಿತ್ರ ಆ ಸಾಲಿಗೆ ಸೇರುತ್ತದೆ, ಜತೆಗೆ ನನ್ನ ಸಾಮರ್ಥ್ಯದ ಅರಿವು ಮೂಡಿಸಿತ್ತು. ಈ ಚಿತ್ರದ ಕೊನೆಯಲ್ಲಿ ಸಿನಿಮಾನೇ ಎಲ್ಲಾ ಅನ್ನೋದನ್ನ ಅರ್ಥ ಮಾಡಿಸಿತ್ತು. ನನ್ನ ನಿರ್ದೇಶಕ ಪ್ರಶಾಂತ್ ನೀಲ್ ನನ್ನಲ್ಲಿ ಅಧೀರ ಪಾತ್ರವನ್ನ ನೋಡಿದ್ದರು. ಈ ಪಾತ್ರದ ಯಶಸ್ಸು ಪ್ರಶಾಂತ್‌ನೀಲ್ ಅವರಿಗೆ ಸಲ್ಲುತ್ತದೆ. ಅವರ ಕನಸನ್ನ ಪಾತ್ರಗಳ ಮೂಲಕ ತೆರೆಯ ಮೇಲೆ ತೋರಿಸಿದ್ದಾರೆ. ಇದನ್ನೂ ಓದಿ:ಮೇ 27ಕ್ಕೆ ಓಟಿಟಿಯಲ್ಲಿ ಕೆಜಿಎಫ್ 2 ? : ಕಸ್ಟಮರ್ ಪ್ರತಿನಿಧಿಯಿಂದ ದಿನಾಂಕ ಬಯಲು

     

    ಕೆಲವೊಂದು ಪಾತ್ರಗಳು ವಿಶೇಷವಾಗಿರುತ್ತದೆ, ಕೆಲವೊಂದು ಚಿತ್ರಗಳು ಇನ್ನು ಉತ್ತಮವಾಗಿ ಮಾಡಬಹುದು ಎಂದು ತೋರಿಸುತ್ತದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನೀವೆಲ್ಲರೂ ನನ್ನ ಶಕ್ತಿ ಎಂದು ಭಾವನಾತ್ಮಕಾವಾಗಿ ಸಂಜಯ್ ದತ್ ಬರೆದುಕೊಂಡಿದ್ದಾರೆ. ಅಧೀರನ ಪೋಸ್ಟ್‌ಗೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

  • `ಕೆಜಿಎಫ್ 2′ ಚಿತ್ರ ನೋಡಿ ಶಭಾಷ್ ಅಂದ್ರು ಸ್ಟೈಲೀಶ್ ಸ್ಟಾರ್:ಯಶ್‌ ಆಕ್ಟಿಂಗ್‌ಗೆ ಅಲ್ಲು ಅರ್ಜುನ್‌ ಫಿದಾ

    `ಕೆಜಿಎಫ್ 2′ ಚಿತ್ರ ನೋಡಿ ಶಭಾಷ್ ಅಂದ್ರು ಸ್ಟೈಲೀಶ್ ಸ್ಟಾರ್:ಯಶ್‌ ಆಕ್ಟಿಂಗ್‌ಗೆ ಅಲ್ಲು ಅರ್ಜುನ್‌ ಫಿದಾ

    `ಕೆಜಿಎಫ್ 2′ ಸಿನಿಮಾ ನೋಡಿ ಇಡೀ ಪ್ರಪಂಚವೇ ಕೊಂಡಾಡುತ್ತಿದೆ. ಎಲ್ಲಿ ನೋಡಿದ್ರು ರಾಕಿಭಾಯ್ ಮೇನಿಯಾ ಜೋರಾಗಿದೆ. ಪ್ರಶಾಂತ್ ನೀಲ್ ಮತ್ತು ಯಶ್ ಮಾಡಿರೋ ಮೋಡಿ ಅಂತಹದ್ದು, ವಿಶ್ವಾದ್ಯಂತ ಕೋಟಿ ಕೋಟಿ ಗಳಿಕೆ ಮಾಡ್ತಿದೆ. ಚಿತ್ರದ ನೋಡಿ ಪರಭಾಷೆಯ ಸೂಪರ್ ಸ್ಟಾರ್‌ಗಳು ಸಿನಿಮಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಚಿತ್ರ ನೋಡಿ ಶಭಾಷ್ ಅಂತಾ ಹೊಗಳಿದ್ದಾರೆ. ಯಶ್‌  ಔಟ್‌ಸ್ಟ್ಯಾಂಡಿಂಗ್ ಆಕ್ಟಿಂಗ್‌ಗೆ ಬೋಲ್ಡ್‌ ಆಗಿದ್ದಾರೆ.

    ಸೌತ್‌ ಚಿತ್ರಗಳ ಜತೆ ಪರಭಾಷಾ ಸಿನಿಮಾಗಳನ್ನ ನೋಡ್ತಾರೆ. ಚಿತ್ರ ಇಷ್ಟವಾದ್ರೆ ಆ ಚಿತ್ರಕ್ಕೆ ಖುಷಿಯಿಂದಲೇ ಸಾಥ್ ನೀಡ್ತಾರೆ. ಈಗ ಅದೇ ತರಹ `ಕೆಜಿಎಫ್ 2′ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ಚಿತ್ರದ ಕುರಿತು ಅಲ್ಲು ಅರ್ಜುನ್ ಅಭಿಪ್ರಾಯ ತಿಳಿಸಿದ್ದಾರೆ.

    `ಕೆಜಿಎಫ್ 2′ ಟೀಮ್ ಶುಭಹಾರೈಕೆಗಳು. ಯಶ್ ಅವರ ನಟನೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಮತ್ತು ಶ್ರೀನಿಧಿ ಶೆಟ್ಟಿ ಜತೆ ಎಲ್ಲಾ ಕಲಾವಿದರ ನಟನೆ ಉತ್ತಮವಾಗಿದೆ. ರವಿ ಬಸ್ರೂರು ಅವರ ಸಂಗೀತ ಮತ್ತು ಭುವನ್ ಗೌಡ ಅವರ ಛಾಯಾಗ್ರಹಣ ಔಟ್‌ಸ್ಟ್ಯಾಂಡಿಂಗ್ ಆಗಿದೆ. ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವ ಅಂತಾ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

    ನಟ ಯಶ್ ಮತ್ತು ತಂಡಕ್ಕೆ ಅಷ್ಟೇ ಅಲ್ಲ. ವಿಶೇಷವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನವನ್ನು ಅಲ್ಲು ಅರ್ಜುನ್ ಹೊಗಳಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಚಿತ್ರದ ಮತ್ತೊಂದು ಹೈಲೆಟ್, ಅವರ ಆಲೋಚನೆಗೆ ನನ್ನದೊಂದು ಗೌರವ. ಭಾರತ ಸಿನಿಮಾರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ:`ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    ಅಭಿಮಾನಿಗಳಿಂದ ಅಷ್ಟೇ ಅಲ್ಲ. ಸ್ಟಾರ್ಸ್‌ಗಳಿಂದ ಕೂಡ ಮೆಚ್ಚುಗೆ ಪಡೆದುಕೊಳ್ಳತ್ತಿರೋ `ಕೆಜಿಎಫ್ 2′ ಅಬ್ಬರ ಜೋರಾಗಿದೆ. ರಿಲೀಸ್ ಆಗಿ ಒಂದು ವಾರ ಕಳೆದರು ಚಿತ್ರ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ.

  • Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸ್ತಿರುವ ವಸಿಷ್ಠ ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯಲ್ಲಿ ಮೋಡಿ ಮಾಡ್ತಿದ್ದಾರೆ. ಕೈತಂಬಾ ಚಿತ್ರಗಳಿರಬೇಕಾದ್ರೆ, ಈಗ ವಸಿಷ್ಠ ಸಿಂಹ ಮತ್ತೊಂದು ಸಿನಿಮಾದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ.

    `ಕೆಜಿಎಫ್ 2′ ಖ್ಯಾತಿಯ ವಸಿಷ್ಠ ಹೀರೋ ಆಗಿ ನಟಿಸ್ತಿರುವ ಮತ್ತೊಂದು ಹೊಸ ಚಿತ್ರ ಅನೌನ್ಸ್ ಆಗಿದೆ. ಈ ಸಿನಿಮಾಗೆ Love…ಲಿ ಎಂಬ ವಿಭಿನ್ನ ಟೈಟಲ್ ಇಡಲಾಗಿದ್ದು, ಸಿನಿಪ್ರಿಯರನ್ನ ಅಟ್ರಾಕ್ಟ್ ಮಾಡ್ತಿದೆ. ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಇಂದು ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್ ನಲ್ಲಿ ಚಿಟ್ಟೆ ಮಿಂಚಿದ್ದಾರೆ.

     

    View this post on Instagram

     

    A post shared by Vasishta N Simha (@imsimhaa)

    Love…ಲಿ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು,ರೋಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಭಿನ್ನ ಪಾತ್ರದ ಮೂಲಕ ಕಮಾಲ್ ವಸಿಷ್ಠ ರೆಡಿಯಾಗಿದ್ದಾರೆ. ಇದನ್ನೂ ಓದಿ:`ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

    ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯ Love…ಲಿ ಚಿತ್ರದ ಫಸ್ಟ್ ಲುಕ್‌ನಿಂದ ಗಮನ ಸೆಳೆಯುತ್ತಿರೋ ವಸಿಷ್ಠ ಕೈಯಲ್ಲಿ `ಹೆಡ್‌ಬುಷ್’, `ಸಿಂಬಾ’, `ತಲ್ವಾರ್‌ಪೇಟೇ’, `ಕಾಲಚಕ್ರ’ ಚಿತ್ರಗಳು ಅಕೌಂಟ್‌ನಲ್ಲಿದೆ.

  • ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್, ಕೆಜಿಎಫ್ 1 ಬಂದಿದ್ದೇ ಬಂದಿದ್ದು, ರಾಕಿಭಾಯ್‌ನ ಅಂದಿನಿಂದ ಇಂದಿನವರೆಗೂ ಆರಾಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ರಣಧೀರನ ಫೀವರ್ ಜೋರಾಗಿದೆ. `ಕೆಜಿಎಫ್ 2′ ಚಿತ್ರಕ್ಕಾಗಿ ಕಾಯ್ತಿದ್ದ ಅಮೆರಿಕಾ ಅಭಿಮಾನಿಗಳು ಚಿತ್ರ ನೋಡಿ ದಿಲ್ ಖುಷ್ ಆಗಿದ್ದಾರೆ. ಕೆಜಿಎಫ್ ಕಂಟೆಂಟ್ ನೋಡಿ ಸಂಭ್ರಮಿಸಿದ್ದಾರೆ.

    `ಕೆಜಿಎಫ್ 2′ ಕನ್ನಡ ಚಿತ್ರರಂಗದ ಪ್ರೈಡ್, ಕರ್ನಾಟಕದ ಗಡಿ ದಾಟಿ ದೇಶದ ಮೂಲೆ ಮೂಲೆನಲ್ಲೂ ಸೌಂಡ್ ಮಾಡ್ತಿರೋ ಸಿನಿಮಾಗೆ ಅಮೆರಿಕಾದ ಅಭಿಮಾನಿಗಳು ಫಿದಾ ಆಗಿದ್ದಾರೆ. `ಕೆಜಿಎಫ್ 2′ ಫಸ್ಟ್ ಡೇ ಫಸ್ಟ್ ಶೋ ನೋಡಿ, ಸಂಭ್ರಮಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಸಿನಿಮಾ ನೋಡಿ ಕೇಕ್‌ ಕಟ್‌ ಮಾಡಿ, ಕುಪ್ಪಳಿಸ್ತಿರೋ ಫೋಟೋ, ವಿಡಿಯೋ ಸದ್ಯ ಭಾರೀ ವೈರಲ್ ಆಗ್ತಿದೆ.‌

    ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಕೆಜಿಎಫ್ ಅಮೆರಿಕಾ ಪ್ರೇಕ್ಷಕರ ಮನಗೆದ್ದಿದೆ. ದೇಶದ ಎಲ್ಲಾ ಕಡೆ ರಾಕಿಭಾಯ್ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಬಾಕ್ಸ್ಆಫೀಸ್‌ನಲ್ಲಿ ತೂಫಾನ್ ಎಬ್ಬಿಸುತ್ತಿದೆ. ರಾಕಿಭಾಯ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ಹೀಗೆ ಪ್ರತಿಯೊಬ್ಬರ ಪಾತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

    ಸದ್ಯ ರಾಕಿಭಾಯ್ ಚಿತ್ರ ನೋಡಿ ಜೈಕಾರ ಹಾಕ್ತಿದ್ದಾರೆ. `ಕೆಜಿಎಫ್ 2′ ಚಿತ್ರ ತಮ್ಮದೇ ಸಿನಿಮಾ ಅನ್ನೋವಷ್ಟರ ಮಟ್ಟಿಗೆ ಸ್ವಾಗತಿಸುತ್ತಿದ್ದಾರೆ. `ಕೆಜಿಎಫ್ 2′ ನೋಡಿ ಥ್ರಿಲ್ ಆಗಿರೋ ಫ್ಯಾನ್ಸ್ ಪಾರ್ಟ್ 3 ಬರುತ್ತಾ ಅಂತಾ ಕಾಯ್ತಿದ್ದಾರೆ.

  • ಕೆಜಿಎಫ್ 3ನೇ ಪಾರ್ಟ್ ಬರಲಿದೆ ಅಂತಾ ಭವಿಷ್ಯ ನುಡಿದ ರಾಕಿಭಾಯ್ ಫ್ಯಾನ್ಸ್

    ಕೆಜಿಎಫ್ 3ನೇ ಪಾರ್ಟ್ ಬರಲಿದೆ ಅಂತಾ ಭವಿಷ್ಯ ನುಡಿದ ರಾಕಿಭಾಯ್ ಫ್ಯಾನ್ಸ್

    ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ಚಿತ್ರ `ಕೆಜಿಎಫ್ 2′, ರಿಲೀಸ್ ಆದ ಮೊದಲ ದಿನವೇ ಬಾಕ್ಸ್ಆಫೀಸ್ ಲೂಟಿ ಮಾಡ್ತಿದೆ. ಎಲ್ಲೆಲ್ಲೂ ರಾಕಿಭಾಯ್‌ಗೆ ಅಭಿಮಾನಿಗಳು ಸಲಾಮ್ ಹೊಡೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಣಧೀರನ ಆರ್ಭಟ ಜೋರಾಗಿದೆ. ಚಿತ್ರ ನೋಡಿ ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡಿದ್ದಾರೆ. ಸಿನಿಮಾ ನೋಡಿರೋ ಫ್ಯಾನ್ಸ್ `ಕೆಜಿಎಫ್ 3’ನೇ ಪಾರ್ಟ್ ಬರಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ.

    ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್ ತೂಫಾನ್ ಜೋರಾಗಿದೆ. ಕೆಜಿಎಫ್ 2ಗೆ ಫ್ಯಾನ್ಸ್ ಜೈಕಾರ ಹಾಕ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಥೆ, ಛಾಯಾಗ್ರಹಣ, ನಟನೆ ಪ್ರತಿಯೊಂದಕ್ಕೂ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    `ಕೆಜಿಎಫ್ 2′ ಚಿತ್ರಕ್ಕೆ ಕೊಟ್ಟ ಕಾಸಿಗೆ ಮೋಸವಿಲ್ಲ. ಮುಂದೆ ಕೆಜಿಎಫ್ 3 ಕೂಡ ಸಿನಿಮಾ ಬರಲಿದೆ. `ಕೆಜಿಎಫ್ 2′ ಸೀಕ್ವೆಲ್ ಬಗ್ಗೆ ಸಣ್ಣ ಹಿಂಟ್ ಕೊಡಲಾಗಿದೆ. ಹಾಗಾಗಿ ಕೆಜಿಎಫ್ ೩ನೇ ಪಾರ್ಟ್ ಬರಲಿದೆ ಅಂತಾ ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಇದನ್ನು ಓದಿ:ಸೊಸೆ ಬಗ್ಗೆ ಯಶ್ ತಂದೆ, ತಾಯಿ ಮನದಾಳದ ಮಾತು

    ಕೆಜಿಎಫ್ 3ನೇ ಪಾರ್ಟ್ ಬರಲಿದೆ ಅಂತಾ ಭವಿಷ್ಯ ನುಡಿದ ಅಭಿಮಾನಿಗಳು, ಈ ಕುರಿತು ಕೆಜಿಎಫ್ ಟೀಮ್ ಯಾವುದೇ ಅಧಿಕೃತ ಘೋಷಣೆ ನೀಡಿಲ್ಲ. ದೇಶಾದ್ಯಂತ ಸಿನಿಮಾನ ನೋಡಿ ಸಂಭ್ರಮಿಸುತ್ತಿದ್ದಾರೆ.

  • ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ರಾಕಿಭಾಯ್ ದರ್ಶನಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ದಿನದಿಂದ ದಿನಕ್ಕೆ ರಾಕಿಂಗ್ ಸ್ಟಾರ್ ಅಭಿಮಾನಿಗಳಲ್ಲಿ `ಕೆಜಿಎಫ್ 2′ ಫೀವರ್ ಹೆಚ್ಚಾಗ್ತಿದೆ. ಏಪ್ರಿಲ್ 14ಕ್ಕೆ ರಿಲೀಸ್ ಆಗ್ತಿರೋ `ಕೆಜಿಎಫ್ 2′ ಚಿತ್ರ ನೋಡಲು ಸ್ಪೆಷಲ್ ಶೋ ಡಿಮ್ಯಾಂಡ್ ಹೆಚ್ಚಾಗ್ತಿದೆ.

    ಹೊಂಬಾಳೆ ಬ್ಯಾನರ್‌ನ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ `ಕೆಜಿಎಫ್ 2′ ಸಿನಿಮಾ ನೋಡಲು ವಿಶ್ವದೆಲ್ಲೆಡೆ ಅಭಿಮಾನಿಗಳು ಕಾಯ್ತಿದ್ದಾರೆ. ಇನ್ನು ರಾಕಿಭಾಯ್‌ನ ಸ್ವಾಗತ ಕೋರಲು ಅಭಿಮಾನಿಗಳು ಈಗಾಗಲೇ ಯೋಜನೆ ಹಾಕಿಕೊಂಡಿದ್ದಾರೆ. ರಿಲೀಸ್ ದಿನ ಮಧ್ಯರಾತ್ರಿ 1 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಶುರುವಾಗಲಿದೆ. ಇದನ್ನು ಓದಿ:ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ

    `ಕೆಜಿಎಫ್ 2′ ನೋಡಲು ಯಶ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿನಿಅಭಿಮಾನಿಗಳಿಗಾಗಿ ಬೆಂಗಳೂರುಗೌಡನ ಪಾಳ್ಯದ ಶ್ರೀನಿವಾಸ ಮಂದಿರದಲ್ಲಿ `ಕೆಜಿಎಫ್ 2′ ಫ್ಯಾನ್ಸ್ ಶೋ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 14ರಂದು ಮಧ್ಯರಾತ್ರಿ 1 ಗಂಟೆಯಿಂದ ನಿರಂತರ 8 ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.

    ಇನ್ನು ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ ಮುರಿದು `ಕೆಜಿಎಫ್ 2′ ನಿರಂತರ 8 ಶೋ ಪ್ರದರ್ಶನವಾಗಲಿದೆ. `ಕೆಜಿಎಫ್ 2′ ಟೀಮ್ ಮಾತ್ರವಲ್ಲ, ಯಶ್ ಅಭಿಮಾನಿಗಳು ದಾಖಲೆಯ ಮೇಲೆ ದಾಖಲೆ ಮಾಡುತ್ತಿದ್ದಾರೆ. ರಾಕಿಭಾಯ್ ಚಿತ್ರ ಬಾಕ್ಸ್ಆಫೀಸ್‌ನಲ್ಲಿ ಲೂಟಿ ಮಾಡೋದು ಗ್ಯಾರೆಂಟಿ ಅಂತಿದೆ ಗಾಂಧಿನಗರ.

  • `ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್

    `ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್

    `ಕೆಜಿಎಫ್ 2′ ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ `ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ `ಮ್ಯೂಟ್’ ಟ್ರೇಲರ್ ರಿಲೀಸ್ ಆಗಿದ್ದು, ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರದ ಟ್ರೇಲರ್‌ನ್ನ ಅನಾವರಣ ಮಾಡಿದ್ದಾರೆ.

    `ಕೆಜಿಎಫ್’ 1 ಮತ್ತು ಚಾಪ್ಟರ್ 2ನಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ಜೀವ ತುಂಬಿರೋ ನಟಿ ಅರ್ಚನಾ ಜೋಯಿಸ್ ಈಗ ಪ್ರಶಾಂತ್ ಚಂದ್ರ ನಿರ್ದೇಶನದ `ಮ್ಯೂಟ್’ ಚಿತ್ರದಲ್ಲಿ ನಟಿಸಿದ್ದಾರೆ.ವಿಭಿನ್ನ ಪಾತ್ರದ ಮೂಲಕ ಕಮಾಲ್ ಮಾಡಲು ಅರ್ಚನಾ ರೆಡಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲು ಸಜ್ಜಾಗಿದೆ.

    ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆ ಹೇಳುವ ಹಲವು ಸಿನಿಮಾಗಳು ಈಗಾಗಲೇ ಬಂದಿದೆ. ಅದರ ನಡುವೆಯೂ `ಮ್ಯೂಟ್’ ಟ್ರೇಲರ್ ಭಿನ್ನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಡಿಫರೆಂಟ್ ರೋಲ್‌ನಲ್ಲಿ ಅರ್ಚನಾ ನಟಿಸಿರುವ `ಮ್ಯೂಟ್’ ಟ್ರೇಲರ್‌ನ್ನ `ಕೆಜಿಎಫ್ 2′ ನಟಿ ರವೀನಾ ಟಂಡನ್ ರಿಲೀಸ್ ಮಾಡಿದ್ದಾರೆ. `ಮ್ಯೂಟ್’ ಟ್ರೇಲರ್ ನೋಡಿ ಚಿತ್ರತಂಡಕ್ಕೆ ರವೀನಾ ಬೆನ್ನು ತಟ್ಟಿದ್ದಾರೆ. ಇದನ್ನು ಓದಿ:ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ರಾಕಿಭಾಯ್ ತಾಯಿಯಾಗಿ ಈಗಾಗಲೇ ಅಪಾರ ಅಭಿಮಾನಿ ಬಳಗ ಹೊಂದಿರೋ ನಟಿ ಅರ್ಚನಾ ಜೋಯಿಸ್ `ಮ್ಯೂಟ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಬರುತ್ತಿದ್ದಾರೆ. ಜಿ.ಗಂಗಾಧರ್ ನಿರ್ಮಾಣದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ `ಮ್ಯೂಟ್’ ಸಿನಿಮಾ ತೆರೆ ಕಾಣಲಿದೆ. `ಕೆಜಿಎಫ್’ ನಟಿಯ ನ್ಯೂ ವೆಂಚರ್ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.