Tag: ಕೆಜಿಎಫ್ ಚಾಪ್ಟರ್ 2

  • ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ- ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ- ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ದೇಶ, ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಬಳಿಕ ಯಾವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ಕುರಿತು ಇದೀಗ ಸುಳಿವು ಸಿಕ್ಕಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಬಿಗ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಮಾತ್ರವಲ್ಲ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಲಾಗಿದೆ.

    ಯಶ್ ಅಭಿನಯದ ಕೆಜಿಎಫ್ ಅಭೂತಪೂರ್ವ ಗೆಲುವಿನ ಬಳಿಕ ಪ್ರಶಾಂತ್ ನೀಲ್ ಅವರು ಮತ್ತೊಂದು ಸೀಕ್ವೆಲ್ ಮಾಡುತ್ತಿದ್ದು, ಕೆಜಿಎಫ್-2 ಸಹ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಇನ್ನೇನು ಬಿಡುಗಡೆಗೆ ತಯಾರಾಗುತ್ತಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಕುರಿತು ಇದೀಗ ಹೊಂಬಾಳೆ ಫಿಲಂಸ್ ಸುಳಿವು ನೀಡಿದೆ.

    ಕಳೆದ ಕೆಲವು ದಿನಗಳಿಂದ ಪ್ರಶಾಂತ್ ನೀಲ್ ಅವರು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದ್ದು, ಪ್ರಭಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇಂದು ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಹೀಗಾಗಿ ಅಭಿಮಾನಿಗಳು ಈ ಕುರಿತು ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

    ಆತ್ಮೀಯ ಕಲಾಭಿಮಾನಿಗಳೇ, ನೀವು ನಮ್ಮ ಸಿನಿಮಾಗಳನ್ನು ನಮಗಿಂತಲೂ ಹೆಚ್ಚು ಪ್ರೀತಿಸುತ್ತೀರಿ. ಈ ಪ್ರೀತಿ ಸದಾ ನಮ್ಮ ಮೇಲೆ ಇರಲಿ, ನಾವು ಮತ್ತೊಂದು ‘ಇಂಡಿಯನ್ ಸಿನಿಮಾ’ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಡಿಸೆಂಬರ್ 2ರಂದು ಮಧ್ಯಾಹ್ನ 2.09ಕ್ಕೆ ಹೊರ ಬೀಳಲಿರುವ ಘೋಷಣೆಗಾಗಿ ಹೃದಯವನ್ನು ತೆರೆದಿಟ್ಟುಕೊಂಡಿರಿ ಎಂದು ಹೊಂಬಾಳೆ ಫಿಲಂಸ್‍ನ ಟ್ವೀಟ್‍ನಲ್ಲಿ ಬರೆಯಲಾಗಿದೆ. ಈ ಕುರಿತು ಪೋಟೋವನ್ನು ಸಹ ಹಂಚಿಕೊಳ್ಳಲಾಗಿದೆ.

    ಹೊಂಬಾಳೆ ಫಿಲಂಸ್‍ನ ಪೋಸ್ಟರ್ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಪ್ರಶಾಂತ್ ನೀಲ್ ಅವರು ಕೆಜಿಎಫ್-2 ಬಳಿಕ ಪ್ರಭಾಸ್ ಹಾಗೂ ಜೂ.ಎನ್‍ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಟ್ವೀಟ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ಈ ಕುರಿತು ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಒಟ್ನಲ್ಲಿ ಈ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಕೆಜಿಎಫ್ ಚಾಪ್ಟರ್-2 ಚಿತ್ರೀಕರಣಕ್ಕಾಗಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರು ಹೈದಾರಾಬಾದ್‍ಗೆ ಲ್ಯಾಂಡ್ ಆಗಿದ್ದು, ಶೂಟಿಂಗ್ ಆರಂಭಿಸಿದ್ದಾರೆ. ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜು ಬಾಬಾ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದು ಮರಳಿದ ಬಳಿಕ ಉತ್ಸಾಹದಿಂದಲೇ ಶೂಟಿಂಗ್‍ಗೆ ಆಗಮಿಸಿದ್ದಾರೆ. ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೇ ಯಶ್ ಭಾಗದ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿತ್ತು. ಇದೆಲ್ಲದರ ನಡುವೆ ಇದೀಗ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

  • ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಬೆಂಗಳೂರು: ಕೆಜಿಎಫ್ ದುನಿಯಾದ ರಾಕಿಗೆ ಡೆತ್ ನೋಟ್ ನೀಡಲು ಬಂದ ರಾಜಕಾರಣಿ ರಮೀಕಾ ಸೇನ್ ಫಸ್ಟ್ ಲುಕ್ ಔಟ್ ಆಗಿದೆ. ರಮೀಕಾ ಸೇನ್ ಪಾತ್ರದಲ್ಲಿ ನಟಿಸುತ್ತಿರುವ ರವೀನಾ ಟಂಡನ್ ಹುಟ್ಟುಹಬ್ಬದ ಹಿನ್ನೆಲೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆಗೊಳಿಸುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದೆ.

    ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ರವೀನಾ ಟಂಡನ್ ಕೆಜಿಎಫ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ರಾಜಕಾರಣಿಯಾಗಿ ರವೀನಾ ನಟಿಸುತ್ತಿದ್ದಾರೆ. ಕೆಜಿಎಫ್ ಲೋಕದಲ್ಲಿಯ ನಾಯಕ ರಾಕಿಗೆ ರಮೀಕಾ ಸೇನ್ ಡೆತ್ ನೀಡಲಿರುವ ವಿಷಯವನ್ನ ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಅಧಿವೇಶನದಲ್ಲಿ ಕೆಂಪು ಸೀರೆ ತೊಟ್ಟ ಆದೇಶಕ್ಕಾಗಿ ಕಾಯುತ್ತಿರುವ ರವೀನಾರ ಗಾಂಭೀರ್ಯದ ನೇರ ನೋಟ ನೋಡುಗರನ್ನ ಸೆಳೆಯುತ್ತಿದೆ.

    ರವೀನಾ ಟಂಡನ್ ಚಿತ್ರೀಕರಣಕ್ಕೆ ಆಗಮಿಸಿದ ವೇಳೆ ಚಿತ್ರತಂಡ ವಿಶೇಷವಾಗಿ ಬರಮಾಡಿಕೊಂಡಿತ್ತು. ರವೀನಾ ಮತ್ತು ಯಶ್ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಕೆಲ ದಿನಗಳ ಹಿಂದೆ ಚಿತ್ರದ ರಾಕಿಯ ನಾಯಕಿ ರೀನಾ ಹುಟ್ಟುಹಬ್ಬದ ದಿನವೂ ಶ್ರೀನಿಧಿ ಶೆಟ್ಟಿಯವರ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು.

  • ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶ ನೀಡಿರುವ ಸಂಜಯ್ ದತ್ ನಟನೆಯ ಅಧೀರನ ಲುಕ್ ಇಂದು ಅನಾವರಣಗೊಂಡಿದೆ.

    ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸೋಶಿಯ್ ಮೀಡಿಯಾದಲ್ಲಿ ಧಗ ಧಗಿಸುತ್ತಿದೆ. ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಕೆಜಿಎಫ್ ಅಂಗಳದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

  • ಕೆಜಿಎಫ್ ಅಂಗಳದಲ್ಲಿ ಹೊಸ ಸಂಚಲನದ ಪಥ

    ಕೆಜಿಎಫ್ ಅಂಗಳದಲ್ಲಿ ಹೊಸ ಸಂಚಲನದ ಪಥ

    -ಕ್ರೂರ ದಾರಿಯಲ್ಲಿ ರಾಕಿ ಪಯಣ ಆರಂಭ

    ಬೆಂಗಳೂರು: ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನೊಂದಿಗೆ ತೆರೆಕಂಡ ಚಿತ್ರ ಕೆಜಿಎಫ್. ಈ ಸಿನಿಮಾ ಮಾಡಿದ್ದ ಸದ್ದು ಇಂದಿಗೂ ಮಾರ್ದನಿಸುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿ ನೋಡುಗರನ್ನು ಸೆರೆ ಹಿಡಿದಿರೋ ನಿರ್ದೇಶಕ ಪ್ರಶಾಂತ್ ನೀಲ್ ಇಂದಿಗೂ ಅವರನ್ನು ಉಳಿಸಿಕೊಳ್ಳುವದರ ಜೊತೆಗೆ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೊಸ ಹೊಸ ಅಪಡೇಟ್ ಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಪೋಸ್ಟರ್ ಹಂಚಿಕೊಂಡಿರುವ ಪ್ರಶಾಂತ್ ನೀಲ್, ಇರೋದು ಕ್ರೂರ ಮಾರ್ಗ ಒಂದೇ ಎಂದು ಹೇಳಿದ್ದಾರೆ.

    https://twitter.com/prashanth_neel/status/1287606283223183360

    ಸಿನಿಮಾದ ಪ್ರತಿಯೊಂದು ಮಾಹಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಹೊಸತನದೊಂದಿಗೆ ಪ್ರಶಾಂತ್ ನೀಲ್ ನೀಡುತ್ತಾ ಬಂದಿದ್ದಾರೆ. ಅಂಧಕಾರದಲ್ಲಿ ಧಗ ಧಗಿಸುತ್ತಿರೋ ಜ್ವಾಲೆ, ಮುಂದೊಂದು ಯುದ್ಧಕ್ಕೆ ಬಾ ಅನ್ನುವಂತೆ ಬಿಂಬಿಸುವ ಕತ್ತಿಯುಳ್ಳ ಕೆಜಿಎಫ್ ಹೊಸ ಲುಕ್ ಅನಾವರಣಗೊಂಡಿದೆ. ಪೋಸ್ಟರ್ ಮೇಲೆ ಕ್ರೂರ ಮಾರ್ಗದ ಅನಾವರಣ ಜುಲೈ 29 ಬೆಳಗ್ಗೆ 10 ಗಂಟೆಗೆ ಎಂಬ ಸಾಲುಗಳನ್ನು ಬರೆಯಲಾಗಿದೆ.

    ಈ ಪೋಸ್ಟರ್ ಮೂಲಕ ಬುಧವಾರ ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಸಿಗಲಿದೆ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ.

    ಕೆಜಿಎಫ್ ಮೊದಲ ಭಾಗದಲ್ಲಿ ಗರುಡನ ರುಂಡವನ್ನ ಚೆಂಡಾಡುವ ರಾಕಿ ಬಾಯ್ ಮುಂದಿನ ಜೀವನ ಹೇಗಿರುತ್ತೆ? ಬಂಗಾರದ ಗಣಿಯಲ್ಲಿ ರಾಕಿ ಹೇಗೆ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾನೆ? ರಾಕಿ ಸಾಗುವ ದಾರಿ ಹೇಗಿರುತ್ತೆ ಎಂಬಿತ್ಯಾದಿ ಪ್ರಶ್ನೆಗಳ ಉತ್ತರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಕೆಜಿಎಫ್ ಗಾಗಿ ಕಾಯ್ತಿರೋ ಬಾಲಿವುಡ್ ನಟನಿಗೆ ರಾಕಿ ಉತ್ತರ

    ಕೆಜಿಎಫ್ ಗಾಗಿ ಕಾಯ್ತಿರೋ ಬಾಲಿವುಡ್ ನಟನಿಗೆ ರಾಕಿ ಉತ್ತರ

    -ಕೆಜಿಎಫ್ ಬಿಡುಗಡೆಯ ಸುಳಿವು ನೀಡಿದ ಯಶ್

    ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕಾಯುತ್ತಿರುವ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಗೆ ರಾಕಿಬಾಯ್ ಯಶ್ ಉತ್ತರಿಸುವ ಮೂಲಕ ಚಿತ್ರದ ಬಿಡುಗಡೆಯ ಸುಳಿವು ನೀಡಿದ್ದಾರೆ.

    ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಇಡೀ ಭಾರತೀಯ ಸಿನಿ ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಬಿಡುಗಡೆ ಮುನ್ನವೇ ಕೆಜಿಎಫ್-ಚಾಪ್ಟರ್ 2 ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದು, ನಟ ಫರ್ಹಾನ್ ಅಖ್ತರ್, ರಾಕಿಗಾಗಿ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಫರ್ಹಾನ್ ಅಖ್ತರ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ರಾಮಾಚಾರಿ, ರಾಕಿಯ ಬಿರುಗಾಳಿ (ತೂಫಾನ್)ಶೀಘ್ರದಲ್ಲೇ ಬರಲಿದೆ ಎಂದು ಉತ್ತರಿಸಿದ್ದಾರೆ. ಫರ್ಹಾನ್ ಅಖ್ತರ್ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಫೋಟೋ ಹಂಚಿಕೊಂಡಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್-ಚಾಪ್ಟರ್ 2 ಇದೆ. ಉಳಿದಂತೆ ಗೋಲ್‍ಮಾಲ್-5, ಬ್ರಹ್ಮಾಸ್ತ್ರ, ಸೂರ್ಯವಂಶಿ ಮತ್ತು ’83’ ಸಿನಿಮಾಗಳು ಕ್ರಮವಾಗಿ 2,3,4 ಹಾಗೂ 5ನೇ ಸ್ಥಾನದಲ್ಲಿವೆ. ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿರುವ ಕೆಜಿಎಫ್ ಮೊದಲ ಸ್ಥಾನದಲ್ಲಿದೆ.

    ಸಿನಿಮಾದಲ್ಲಿ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿದ್ದು, ಚಿತ್ರ ಪ್ರತಿದಿನ ಕುತೂಹಲವನ್ನ ಹುಟ್ಟು ಹಾಕುತ್ತಿದೆ. ಅಭಿಮಾನಿಗಳು ಸಹ ಕೆಜಿಎಫ್ ಅಂಗಳದಿಂದ ಬರೋ ವಿಷಯಗಳಿಗಾಗಿ ಕಾಯುತ್ತಿರುತ್ತಾರೆ.

  • ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    ಬೆಂಗಳೂರು: ಕೆಜಿಎಫ್-ಚಾಪ್ಟರ್ 2 ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ರಾಕಿ ಬಾಯ್ ಸ್ಟೈಲ್‍ನಲ್ಲಿ ತಮ್ಮ ಊರಿಗೆ ‘ಪ್ರಧಾನ ಮಂತ್ರಿ’ಯನ್ನು ಬರಮಾಡಿಕೊಂಡಿದ್ದಾರೆ.

    ಹೌದು. ಚಿತ್ರರಂಗದಲ್ಲೇ ಧೂಳೆಬ್ಬಿಸಲು ಸಜ್ಜಾಗುತ್ತಿರುವ ಕೆಜಿಎಫ್-ಚಾಪ್ಟರ್ 2 ಸಿನಿಮಾದ ಮೇಲೆ ಎಲ್ಲರ ಕಣ್ಣಿದೆ. ಸದ್ಯ ಶೂಟಿಂಗ್‍ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಈ ನಡುವೆ ಕೆಜಿಎಫ್-ಚಾಪ್ಟರ್ 2ರಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಲಿರುವ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಯಶ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಜೊತೆಗೆ ರಾಕಿಭಾಯ್ ಸಾಮ್ರಾಜ್ಯಕ್ಕೆ ರಮಿಕಾ ಸೇನ್‍ರನ್ನ ಸ್ವಾಗತಿಸಲ್ಲ, ಆದ್ರೆ ರವೀನಾ ಅವರಿಗೆ ಯಶ್ ಊರಿಗೆ ಸ್ವಾಗತ ಎಂದು ರಾಕಿಂಗ್ ಸ್ಟಾರ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: “ಡೆತ್ ವಾರೆಂಟ್ ಜಾರಿ ಮಾಡಲು ಬಂದ್ರು ರವೀನಾ”

    https://www.instagram.com/p/B8cAOYanL72/

    ಪೋಸ್ಟ್‌ನಲ್ಲಿ ಏನಿದೆ?
    ರಮಿಕಾ ಸೇನ್‍ರನ್ನು ರಾಕಿಭಾಯ್ ಸಾಮ್ರಾಜ್ಯಕ್ಕೆ ಸ್ವಾಗತ ಮಾಡದೆ ಇರಬಹುದು. ಆದ್ರೆ ರವೀನಾ ಅವರನ್ನ ಖಂಡಿತವಾಗಿಯು ಯಶ್ ಊರಿಗೆ ಸ್ವಾಗತಿಸುತ್ತೇನೆ. ನೀವು ಬಂದಿರುವುದು ಸಂತೋಷವಾಗಿದೆ, ಸಂಭ್ರಮಿಸೋಣ ಎಂದು ಬರೆದು ರವೀನಾ ಅವರ ಜೊತೆ ತಾವು ಇರುವ ಫೋಟೋವನ್ನ ಯಶ್ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕೆಜಿಎಫ್ ಅಂಗಳಕ್ಕೆ ಬಾಲಿವುಡ್ ಚೆಲುವೆ ರವೀನಾ ಟಂಡನ್ ಎಂಟ್ರಿ ನೀಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ರವೀನಾ ಟಂಡನ್ ನಿಂತಿರುವ ಫೋಟೋವನ್ನು ಹಂಚಿಕೊಂಡು ಸ್ವಾಗತ ಕೋರಿದ್ದರು.

    ಮೊದಲು ಎಕ್ಸೆಲ್ ಎಂಟರ್ ಟೈನ್‍ಮೆಂಟ್ ಟ್ವಿಟ್ಟರ್ ನಲ್ಲಿ ರವೀನಾ ಮತ್ತು ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಹಂಚಿಕೊಂಡು, ಡೆತ್ ವಾರೆಂಟ್ ಜಾರಿ ಮಾಡಲು ಬಂದ ಶಕ್ತಿಶಾಲಿ ಮಹಿಳೆಗೆ ಕೆಜಿಎಫ್ -2 ಸಿನಿಮಾ ಅಂಗಳಕ್ಕೆ ಸ್ವಾಗತ ಎಂದು ಬರೆದು ಚಿತ್ರತಂಡದ ಇತರರಿಗೂ ಟ್ಯಾಗ್ ಮಾಡಿದ್ದರು. ಟ್ವೀಟಿಗೆ ಪ್ರತಿಕ್ರಿಯಿಸಿರುವ ನಟಿ ಶ್ರೀನಿಧಿ ಶೆಟ್ಟಿ, ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದು ವೆಲ್ ಕಮ್ ಮಾಡಿಕೊಂಡಿದ್ದರು. ನಿರ್ಮಾಪಕ ವಿಜಯ್ ಕಿರಗಂದೂರ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ರವೀನಾ ಟಂಡನ್ ಅವರಿಗೆ ಆತ್ಮೀಯ ಸ್ವಾಗತ ಎಂದು ಬರೆದುಕೊಂಡಿದ್ದರು.

    ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸಣ್ಣ ಸುಳಿವು ನೀಡಲಾಗಿತ್ತು. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.

    ತಮ್ಮ ಕಂಬ್ಯಾಕ್ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ನಿರ್ದೇಶಕ ಪ್ರಶಾಂತ್ ನೀಲ್ ಮೊದಲೇ ಕಥೆ ಒನ್‍ಲೈನ್ ಹೇಳಿದ್ದರು. ಬಳಿಕ ಚಿತ್ರಕಥೆ ಮತ್ತು ಪಾತ್ರವನ್ನು ವಿವರಿಸಿದ್ದರು. ಆಗಿನ್ನೂ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿರಲಿಲ್ಲ. ಚಿತ್ರ ನೋಡಿದ ಮೇಲೆ ಇದೊಂದು ಬೇರೆ ಲೆವೆಲ್ಲಿನ ಸಿನಿಮಾ ಎಂಬುದು ಗೊತ್ತಾಯಿತು. ಹಾಗೆಯೇ ಕಥೆ ಮತ್ತು ನಾನು ಮಾಡಬೇಕಾದ ಪಾತ್ರದ ಬಗ್ಗೆ ತಿಳಿಯಿತು. ಅಲ್ಲದೆ ಚಿತ್ರದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಹೀಗಾಗಿ ಕೆಜಿಎಫ್ 2ನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

    ಅಲ್ಲದೇ ರವೀನಾ ಅವರಿಗೆ ಮಾತ್ರವಲ್ಲ ಅವರ ಪತಿ ಅನಿಲ್ ತಡಾನಿ ಅವರಿಗೂ ಕೆಜಿಎಫ್‍ಗು ಕನೆಕ್ಷನ್ ಇದೆ. ಈ ಹಿಂದೆ ಹಿಂದಿ ಭಾಷೆಯಲ್ಲಿ ಮೂಡಿಬಂದಿದ್ದ ಕೆಜಿಎಫ್ ಚಿತ್ರವನ್ನು ಅನಿಲ್ ತಡಾನಿ ವಿತರಿಸಿದ್ದರು. ಹಾಗೆಯೇ ಹಿಂದಿಯ ಕೆಜಿಎಫ್-ಚಾಪ್ಟರ್ 2 ಸಿನಿಮಾದ ವಿತರಣೆಯನ್ನೂ ಅನಿಲ್ ತಡಾನಿ ಪ್ರೊಡಕ್ಷನ್ ಮೂಲಕವೇ ಮಾಡಲಾಗುತ್ತಿದೆ.

  • ಕೆಜಿಎಫ್-2 ಫಸ್ಟ್ ಲುಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಕೆಜಿಎಫ್-2 ಫಸ್ಟ್ ಲುಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರತಂಡದಿಂದ ಅಭಿಮಾನಿಗಳಿಗ ಸಿಹಿ ಸುದ್ದಿ ಲಭಿಸಿದ್ದು, ಚಿತ್ರದ ಫಸ್ಟ್ ಲುಕ್ ಇದೇ ತಿಂಗಳ 21 ರಂದು ರಿವೀಲ್ ಮಾಡುವುದಾಗಿ ಚಿತ್ರತಂಡ ಹೇಳಿದೆ.

    ಅಭಿಮಾನಿಗಳಿಗೆ ಮಾಹಿತಿ ನೀಡಿದಂತೆ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ, ಡಿ.21ರ ಸಂಜೆ 5.45ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಪೋಸ್ಟರನ್ನು ನಟ ಸಂಜಯ್ ದತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಅಧೀರ ಪಾತ್ರದ ಜರ್ನಿ ಆರಂಭವಾಗಿದೆ. ಕೆಜಿಎಫ್ ಚಿತ್ರದ ಭಾಗವಾಗಿದ್ದು ಅದ್ಭುತ ಅನುಭವ ಎಂದು ಹೇಳಿದ್ದಾರೆ.

    ಚಿತ್ರದಲ್ಲಿ ತಮ್ಮ ನೆಚ್ಚಿನ ನಟ ಯಶ್ ಯಾವ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಚಿತ್ರತಂಡದ ಘೋಷಣೆಯಿಂದ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೇ ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ತಿಳಿಸಿದೆ.

  • ಶುಭ ಶುಕ್ರವಾರ ಕೆಜಿಎಫ್ ಅಂಗಳದಿಂದ ಬಿಗ್ ನ್ಯೂಸ್

    ಶುಭ ಶುಕ್ರವಾರ ಕೆಜಿಎಫ್ ಅಂಗಳದಿಂದ ಬಿಗ್ ನ್ಯೂಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೊಂಡು ಎಂಟು ತಿಂಗಳು ಕಳೆದಿವೆ. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ಇಂದು ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬಿಗ್ ನ್ಯೂಸ್ ನೀಡಲಿದೆ ಬರಹವುಳ್ಳ ಪೋಸ್ಟರ್ ಹಾಕಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಸಿದ್ಧಗೊಂಡಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಚಾಪ್ಟರ್-2ರಲ್ಲಿಯೂ ಮುಂದುವರಿಯಲಿದ್ದಾರೆ. ಚಾಪ್ಟರ್-2ರಲ್ಲಿ ಬಾಲಿವುಡ್ ನ ರವೀನಾ ಟಂಡನ್ ಮತ್ತು ಸಂಜಯ್ ದತ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದರೂ, ಇದುವರೆಗೂ ಚಿತ್ರತಂಡ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಶುಕ್ರವಾರ ಮಾತ್ರ ಕೆಜಿಎಫ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಗೋದು ಬಹುತೇಕ ಖಾತ್ರಿಯಾದಂತಿದೆ. ಇದೇ ಪೋಸ್ಟರ್ ನ್ನು ನಟಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಮಾತ್ರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗುತ್ತೆ ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಕೆಜಿಎಫ್-2 ಸಿನಿಮಾದ ಕೆಲ ಶೂಟಿಂಗ್ ಸೆಟ್ ಮತ್ತು ಮುಹೂರ್ತದ ಫೋಟೋಗಳ ಹೊರತಾಗಿ ಯಾವ ವಿಡಿಯೋಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿಲ್ಲ.

  • ಕೆಜಿಎಫ್-2 ಚಿತ್ರೀಕರಣ ಶುರು!

    ಕೆಜಿಎಫ್-2 ಚಿತ್ರೀಕರಣ ಶುರು!

    ನ್ನಡ ಚಿತ್ರಗಳ ಬಗ್ಗೆ ಪರಭಾಷೆಗಳಲ್ಲಿ ಎಂಥಾ ಅಸಡ್ಡೆಯಿತ್ತೋ ಆ ಜಾಗದಲ್ಲಿ ಬೆರಗೊಂದನ್ನು ಪ್ರತಿಷ್ಠಾಪಿಸುವಂಥಾ ಗೆಲುವು ಕಂಡಿರೋ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ಸಮರ್ಥ ಸಾರಥ್ಯ, ಪ್ರತಿಭಾವಂತ ತಂಡದ ಪರಿಶ್ರಮ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಅಭಿನಯವೂ ಸೇರಿದಂದಂತೆ ಒಂದಕ್ಕೊಂದು ಪೂರಕವಾಗಿದ್ದ ಕೆಜಿಎಫ್ ಬರೆದಿರೋದು ಸಾರ್ವಕಾಲಿಕ ದಾಖಲೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟೋದು ಸಹಜವೇ.

    ಕೆಜಿಎಫ್ ಚಾಪ್ಟರ್ 2 ಬಗ್ಗೆಯೂ ಕೂಡಾ ಕನ್ನಡವೂ ಸೇರಿದಂತೆ ನಾನಾ ಭಾಷಾ ಪ್ರೇಕ್ಷಕರಲ್ಲಿ ಅಂಥಾದ್ದೇ ಕುತೂಹಲ ಹುಟ್ಟಿಕೊಂಡಿದೆ. ಕೆಜಿಎಫ್ ಸೃಷ್ಟಿಸಿದ್ದ ಹವಾದ ಬಿಸಿಯಲ್ಲಿಯೇ ಇಡೀ ಟೀಮು ಎರಡನೇ ಭಾಗಕ್ಕಾಗಿ ಸಜ್ಜುಗೊಂಡಿತ್ತು. ಆ ಹೊತ್ತಿಗಾಗಲೇ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ ಇತ್ತೀಚೆಗೆ ಆರಂಭವಾಗಲಿದ್ದ ಕ್ಷಣವೊಂದು ಕಾರಣಾಂತರಗಳಿಂದ ಮಿಸ್ ಆಗಿದ್ದರಿಂದ ಎಲ್ಲರಿಗೂ ನಿರಾಸೆಯಾಗಿದ್ದದ್ದು ನಿಜ. ಆದರೆ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.

    ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕವೇ ಒಂದಷ್ಟು ಸಮುಯದಿಂದ ಕೆಜಿಎಫ್ ಅಲೆಯಲ್ಲಿಯೇ ಮಿಂದೇಳುತ್ತಾ ಮಗಳು ಹುಟ್ಟಿದ ಸಂಭ್ರಮವನ್ನು ಆಸ್ವಾದಿಸಿದ್ದ ರಾಕಿ ಭಾಯ್ ಕೂಡಾ ಮತ್ತೆ ಚಿತ್ರೀಕರಣದ ಪೆವಿಲಿಯನ್ನಿಗೆ ಮರಳಿದ್ದಾರೆ. ಇಡೀ ತಂಡ ಕೆಲ ತಿಂಗಳಿಂದ ದೂರವಿದ್ದ ಸೆಟ್ಟಿನಲ್ಲಿ ಮತ್ತೆ ಮುಖಾಮುಖಿಯಾಗಿ ಸಂಭ್ರಮಿಸಿದೆ.

    ಕಳೆದ ಬಾರಿ ಕಥೆಯೆಂಬುದೇ ಸಮಯ ಕೇಳುವಂತಿದ್ದುದರಿಂದ ಚಿತ್ರೀಕರಣ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಕೆಜಿಎಫ್ ನೋಡಿದ ಪ್ರತಿಯೊಬ್ಬರಿಗೂ ಅಷ್ಟು ಸಮಯ ತೆಗೆದುಕೊಂಡಿದ್ದದ್ದೇಕೆ ಎಂಬುದೂ ತಿಳಿದಿತ್ತು. ಆದರೆ ಈ ಬಾರಿ ಮಾತ್ರ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ.

    ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆಯಾದರೂ ಸದ್ಯದಲ್ಲಿಯೇ ಚಿತ್ರತಂಡ ಕರಾವಳಿಯ ಸುಂದರ ತಾಣಗಳತ್ತ ಹೊರಳಿಕೊಳ್ಳಲಿದೆ. ಇದೆಲ್ಲ ಏನೇ ಇದ್ದರೂ ಕೆಜಿಎಫ್ ಚಾಪ್ಟರ್ 2 ಆರಂಭವಾಗಿರೋದೇ ಪ್ರೇಕ್ಷಕರ ಪಾಲಿಗೆ ಶುಭ ಸಮಾಚಾರ.