Tag: ಕೆಜಿಎಫ್ ಚಾಪ್ಟರ್ 2

  • ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ

    ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ

    ಮೈಸೂರು: ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಸಂತಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ದಂಪತಿ ಸಮೇತ ಸ್ನೇಹಿತನ ಮದುವೆಗೆ ಆಗಮಿಸಿದ್ದಾರೆ.

    ಬಾಲ್ಯದ ಗೆಳೆಯ ಚೇತನ್ ಮದುವೆಯಲ್ಲಿ ಯಶ್ ಭಾಗವಹಿಸಿದ್ದಾರೆ. ಮೈಸೂರಿನ ಸಾರಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆದಿದೆ.

    ಇತ್ತ ಸ್ನೇಹಿತನ ಮದುವೆಗೆ ಆಗಮಿಸಿದ್ದ ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ಕೂಡ ನಡೆದಿದೆ. ಅಲ್ಲದೆ ಈ ವೇಳೆ ಯಶ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪೈಪೋಟಿ ನಡೆಯಿತು.

     

  • ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

    ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

    ನ್ಯಾಷನಲ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್-2’ ಚಿತ್ರವು ವಿಶ್ವದಾದ್ಯಂತ ಭಾರೀ ಜನ ಮನ್ನಣೆ ಗಳಿಸಿದೆ. ಸಿನಿಮಾರಂಗದಲ್ಲಿಯೇ ಅಚ್ಚಳಿಯದ ಇತಿಹಾಸ ಸೃಷ್ಟಿಸುತ್ತಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲೂ ಸಖತ್ ಸದ್ದು ಮಾಡಿದೆ. ರೀಲಿಸ್ ಆದ 2 ವಾರದಲ್ಲಿ ಅಂದಾಜು 800 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಬಾಕ್ಸ್ ಆಫೀಸ್ ವಿಮರ್ಶಕರು ವರದಿ ಮಾಡಿದ್ದಾರೆ. ಬಾಕ್ಸ್ ಆಫಿಸ್ ಅಷ್ಟೇ ಅಲ್ಲದೇ ಚಿತ್ರದಲ್ಲಿರುವ ರಾಕಿಭಾಯ್ ಡೈಲಾಗ್‍ಗಳಿಗೆ ಹಲವು ಬಾಲಿವುಡ್ ತಾರೆಯರು ಕೂಡಾ ಫಿದಾ ಆಗಿದ್ದಾರೆ.

    ಚಿತ್ರದ ಡೈಲಾಗ್‍ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದೂ, ಅದರಲ್ಲೂ ರಾಕಿಭಾಯ್ ಯಶ್ ಅವರ ವೈಲೆನ್ಸ್ ವೈಲೆನ್ಸ್.. ಡೈಲಾಗಂತೂ ಇನ್‍ಸ್ಟಾಗ್ರಾಮ್‍ನ ರಿಲ್ಸ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಬಾಲಿವುಡ್‍ನ ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ ಕೂಡಾ ಕೆಜಿಎಫ್-2 ಚಿತ್ರವನ್ನು ನೋಡಿ ನಮ್ಮ ರಾಕಿಭಾಯ್ ವೈಲೆನ್ಸ್ ವೈಲೆನ್ಸ್.. ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

    ಮುಂಬೈನ ಚಿತ್ರಮಂದಿರವೊಂದರಲ್ಲಿ ಫ್ಯಾಮಿಲಿಯೊಂದಿಗೆ ಕುಳಿತುಕೊಂಡು ಚಿತ್ರವನ್ನು ವೀಕ್ಷಿಸಿ, ಚಿತ್ರಮಂದಿರದಿಂದ ಹೊರಬರುತ್ತಿದ್ದ ಶಿಲ್ಪಾಗೆ ಕೆಜಿಎಫ್-2ರಲ್ಲಿ ನಿಮಗೆ ಬಹಳ ಇಷ್ಟವಾದ ಡೈಲಾಗ್ ಯಾವುದು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಾಕಿಭಾಯ್‍ನ ಸ್ಟೈಲ್‍ನಲ್ಲಿಯೇ ವೈಲೆನ್ಸ್ ವೈಲೆನ್ಸ್ ಡೈಲಾಗ್ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸದ್ಯ ವೀಡಿಯೋ 60,000ಕ್ಕೂ ಹೆಚ್ಚು ವಿವ್ಸ್ ಪಡೆದುಕೊಂಡು ನೆಟ್ಟಿಗರ ಮನಗೆದ್ದಿದೆ. ಕನ್ನಡತಿಯ ಬಾಯಲ್ಲಿ ನಮ್ಮ ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್ 2ನ ಡೈಲಾಗ್ ಕೇಳಿ ಕರ್ನಾಟಕದ ಫ್ಯಾನ್ಸ್ ಖುಷ್ ಆಗಿದ್ದಾರೆ.

     

  • ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ `ಕೆಜಿಎಫ್ ಚಾಪ್ಟರ್ 2′ ಯಶಸ್ಸಿನಿಂದ ಸದ್ಯ ಭಾರೀ ಸುದ್ದಿ ಮಾಡ್ತಿದೆ. ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ ಹೊಂಬಾಳೆ ಬ್ಯಾನರ್‌ನಿಂದ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಚಿತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

    ಸಿನಿಮಾರಂಗದಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಈಗ ಚಿತ್ರ ಕೂಡ ಅನೌನ್ಸ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಬಾರಿ ʻಹೊಂಬಾಳೆ ಫಿಲ್ಮ್ಸ್‌ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ.

    ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ಗಳನ್ನ ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ:ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್‌ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್‌’ ಮೂಲಕ ವಿಜಯ್ ಕಿರಗಂದೂರು ಸಾಥ್‌ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

  • ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ 2022ರ ಆವೃತ್ತಿಯಲ್ಲಿ ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ.

    ಹಾಲಿ ಚಾಂಪಿಯನ್ ತಂಡವು ಈಗಾಗಲೇ ಸತತ ಆರು ಸೋಲುಗಳನ್ನು ಕಂಡು ಐಪಿಎಲ್ ಪಾಯಿಂಟ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೀಮ್ಸ್‌ಗಳು ಹರಿದಾಡುತ್ತಿದ್ದು, ರೋಹಿತ್ ಪಡೆಯು ಟ್ರೋಲ್‍ಗೆ ಗುರಿಯಾಗಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್-2 ಚಿತ್ರದ ಯಶ್ ಅವರ ವೈಲೆನ್ಸ್.. ವೈಲೆನ್ಸ್.. ಎಂಬ ಜನಪ್ರಿಯ ಡೈಲಾಗ್ ಬದಲು ನೆಟ್ಟಿಗರು ಸೋಲು ಸೋಲು ಸೋಲು ಎಂದು ಬರೆದು ಮುಂಬೈ ತಂಡಕ್ಕೆ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    ದಾಖಲೆಯ 5 ಬಾರಿಯ ಐಪಿಎಲ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಮುಂಬೈ ತಂಡವು ಈ ಬಾರಿ ಆವೃತ್ತಿಯಲ್ಲಿ ಆಡಿರುವ ಆರಕ್ಕೆ ಆರೂ ಪಂದ್ಯಗಳಲ್ಲಿ ಸೋಲುಂಡಿದೆ. ಹೀಗಾಗಿ ಕನಿಷ್ಠ ಪಕ್ಷ ಒಂದು ಪಂದ್ಯವನ್ನಾದರು ಮುಂಬೈ ತಂಡ ಗೆಲ್ಲಲಿ ಎಂದು ನೆಟ್ಟಿಗರೊಬ್ಬರು ಅಪಹಾಸ್ಯ ಮಾಡಿದ್ದಾರೆ.

    ನಾಯಕ ರೋಹಿತ್ ಶರ್ಮಾ ಅವರ ಯೋಜನೆಗಳೆಲ್ಲವೂ ವಿಫಲವಾಗಿವೆ. ಬ್ಯಾಟಿಂಗ್‍ನಲ್ಲಿ ಅತ್ಯಂತ ಕಳಪೆ ಆಟವನ್ನು ತೋರುತ್ತಿರುವ ಎಮ್‍ಐ ತಂಡವು ಬೌಲಿಂಗ್‍ನಲ್ಲೂ ಸಹ ಅಷ್ಟೇ ಕಳಪೆ ಆಟವನ್ನು ತೋರುತ್ತಿದೆ. ಇದರ ನಡುವೆಯೂ ಮುಂಬೈ ತಂಡದ ಅಭಿಮಾನಿಗಳು ತಂಡದ ಮೇಲಿನ ಅಭಿಮಾನವನ್ನು ಕಳೆದುಕೊಂಡಿಲ್ಲ.

  • ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಅಂಗಳದಲ್ಲಿ ಯಶ್ ಮೇನಿಯಾ ನಿಲ್ಲುವ ಸೂಚನೆ ಸಿಗ್ತಿಲ್ಲ. ಬಿಟೌನ್ ಗಲ್ಲಿಯಲ್ಲಿ ರಾಕಿಭಾಯ್ ಸಿನಿಮಾ ತೂಫಾನ್ ಎಬ್ಬಿಸಿದೆ. ರಿಲೀಸ್ ಆದ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಮಾಡಿತ್ತು. ಈಗ ಮೂರನೇ ದಿನದ ಕಲೆಕ್ಷನ್ 143 ಕೋಟಿ ಬಾಕ್ಸ್ಆಫೀಸ್‌ನಲ್ಲಿ ಲೂಟಿ ಮಾಡಿದೆ. ನಾಲ್ಕೇ ದಿನಕ್ಕೆ ಚಿತ್ರದ ಕಲೆಕ್ಷನ್ 200 ಕೋಟಿ ರೂಪಾಯಿ ಗಡಿ ದಾಟುವ ಸೂಚನೆ ಕೊಟ್ಟಿದೆ.

    kgf 2

    ರಿಲೀಸ್ ಆದ ಫಸ್ಟ್ ಡೇ `ಕೆಜಿಎಫ್ 2′ 53.95 ಕೋಟಿ ಬಾಚಿಕೊಂಡಿತ್ತು. ಹಿಂದಿಯ ʻವಾರ್ʼ ಮತ್ತು ʻಥಗ್ಸ್ ಆಫ್ ಹಿಂದೂಸ್ತಾನ್ʼ ಚಿತ್ರಗಳ ದಾಖಲೆ ಉಡೀಸ್ ಮಾಡಿತ್ತು. ಈಗ ಮೂರನೇ ದಿನವೂ 143 ಕೋಟಿ ಬಾಚುವ ಮೂಲಕ `ಕೆಜಿಎಫ್ 2′ ಅಬ್ಬರ ಜೋರಾಗಿದೆ.

    ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಕಿಭಾಯ್ ಚಿತ್ರವನ್ನ ಸಿನಿಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ರಾಕಿಭಾಯ್ ಆಕ್ಟಿಂಗ್‌ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹಿಂದಿ ಬಾಕ್ಸ್ಆಫೀಸ್‌ನಲ್ಲಿ 53.95 ಕೋಟಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ, ಒಟ್ಟು 143.64 ಕೋಟಿ ಬಾಚುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ:`ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಭಾರತದ ಎಲ್ಲಾ ರಾಜ್ಯಗಳಲ್ಲೂ `ಕೆಜಿಎಫ್ ಚಾಪ್ಟರ್ 2′ ಕಲೆಕ್ಷನ್ ನಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗೆಯೇ ವಿದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ಯ ಎಲ್ಲೆಲ್ಲೂ ಯಶ್ ಮೇನಿಯಾ ಜೋರಾಗಿದೆ.

  • ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ವಿಶ್ವದ ಮೂಲೆ ಮೂಲೆಯಲ್ಲೂ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಾಕ್ಸ್ ಆಫೀಸ್ ಮಾಡುತ್ತಿದೆ. ಅಷ್ಟರ ಮಟ್ಟಿಗೆ ರಾಕಿಭಾಯ್ ಚಿತ್ರ ನೋಡಿ ಅಭಿಮಾನಿಗಳು ಫ್ಲಾಟ್ ಆಗಿದ್ದಾರೆ. `ಕೆಜಿಎಫ್ 2′ ಬಂದಮೇಲೆ ರಾಕಿಭಾಯ್ ಡೈಲಾಗ್ ಅಷ್ಟೇ ಟ್ರೆಂಡ್ ಆಗಿಲ್ಲ. ರಣಧೀರನ ಸ್ಟೈಲ್‌ ಕೂಡ ಟ್ರೆಂಡ್ ಸೃಷ್ಟಿಸಿದೆ.

    ʻಕೆಜಿಎಫ್ʼ ಚಾಪ್ಟರ್ 1 ಮತ್ತು ಚಾಪ್ಟರ್ 2 ನೋಡಿರೋ ರಾಕಿಭಾಯ್ ಫ್ಯಾನ್ಸ್, ಸಿನಿಮಾ ನೋಡಿ ಮಾತ್ರ ಇಷ್ಟಪಟ್ಟಿಲ್ಲ. ರಾಕಿಭಾಯ್ ಸ್ಟೈಲ್ ಉಘೇ ಉಘೇ ಅಂದಿದ್ದಾರೆ. ಇಡೀ ಸಿನಿಮಾದಲ್ಲಿನ ಯಶ್ ಲುಕ್ ಹಿಂದೆಯಿರೋ ರೂವಾರಿ ಅಂದ್ರೆ ಸೆಲೆಬ್ರೆಟಿ ಡಿಸೈನರ್ ಸಾನಿಯಾ ಸರ್ದಾರಿಯಾ ಕಾರಣ. `ಕೆಜಿಎಫ್’ ಚಿತ್ರ ಗೆಲ್ಲೋದರ ಜೊತೆಗೆ ರಾಕಿಭಾಯ್ ಸ್ಟೈಲ್ ಕೂಡ ಗೆದ್ದಿದೆ ಅಂದ್ರೆ ಸಾನಿಯಾ ಸರ್ದಾರಿಯಾ ಅವರ ಕಾರ್ಯವೈಖರಿ ಕೂಡ ಗೆದ್ದಿದೆ.

    ಚಿತ್ರದಲ್ಲಿನ ಯಶ್ ಗಡ್ಡದಿಂದ ಹಿಡಿದು ಸೂಟ್, ವಾಚ್, ಬೂಟ್ಸ್ ಪ್ರತಿಯೊಂದನ್ನು ಪಾತ್ರದ ತಕ್ಕಂತೆ ಸಾನಿಯಾ ನಿಗಾ ವಹಿಸಿದ್ದಾರೆ. ರಾಕಿಭಾಯ್ ಪಾತ್ರಕ್ಕೆ ಸಾನಿಯಾ ಅವರ ಬಳಿಯೇ ಕಸ್ಟ್ಮೈಸ್ ಮಾಡಿಸಿದ್ದಾರೆ. ರಾಕಿಭಾಯ್ ಸ್ಟೈಲ್‌ಗೆ ರೆಟ್ರೋ ಲುಕ್ ಕೊಟ್ಟು ಡಿಫರೆಂಟ್ ಆಗಿ ಸಾನಿಯಾ ಆನ್‌ಸ್ಕ್ರೀನ್‌ನಲ್ಲಿ ಯಶ್‌ನ ತೋರಿಸಿದ್ರು. ಇದೀಗ ಯಶ್ ಲುಕ್, ಅಗ್ರಸ್ಥಾನದಲ್ಲಿದೆ. ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಯಶ್ ಲುಕ್ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಇದನ್ನೂ ಓದಿ:ಮನಾಲಿಗೆ ಹೊರಟ ರಣ್‌ಬೀರ್ ಕಪೂರ್ ಆದರೆ ಹನಿಮೂನ್‌ಗಾಗಿ ಅಲ್ಲ!

    `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸೌಂಡ್ ಮಾಡುವುದರ ಜತೆಗೆ ರಾಕಿಭಾಯ್ ಸ್ಟೈಲ್‌ಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಪ್ರಚಾರದ ವೇಳೆಯೂ ರಾಕಿಭಾಯ್ ಧರಿಸಿದ್ದ ಡ್ರೇಸ್ ಲುಕ್ ಗಮನ ಸೆಳೆದಿತ್ತು. ಹೀಗೆ ಸಾಕಷ್ಟು ಸಿನಿಮಾಗಳಿಗೆ ಸೆಲೆಬ್ರೆಟಿ ಡಿಸೈನರ್‌ ಆಗಿ ಸಾನಿಯಾ ಗುರುತಿಸಿಕೊಂಡಿದ್ದಾರೆ. ಇನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆಜಿಎಫ್ ತಂಡ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ರಾಕಿಭಾಯ್ ಮೇನಿಯಾ ಕೂಡ ಜೋರಾಗಿದೆ.

  • ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

    ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

    ಚೆನ್ನೈ: ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚ್ಯಾಪ್ಟರ್ 2 ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ ವೀಕ್ಷಿಸಿ ಕೊಂಡಾಡಿದ್ದಾರೆ.

    ಗುರುವಾರ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚೆನ್ನೈನ ಚಿತ್ರಮಂದಿರದಲ್ಲಿ ರಜನಿಕಾಂತ್ ಕೆಜಿಎಫ್ ಚಾಪ್ಟರ್ 2 ಅನ್ನು ವೀಕ್ಷಿಸಿದ್ದಾರೆ. ತಲೈವಾ ಕನ್ನಡ ವರ್ಷನ್‌ನಲ್ಲಿಯೇ ಸಿನಿಮಾವನ್ನು ವೀಕ್ಷಿಸಿ ಫಿದಾ ಆಗಿರುವುದು ಅದರಲ್ಲೂ ವಿಶೇಷ. ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ಸಿನಿಮಾ ವೀಕ್ಷಿಸಿದ ಬಳಿಕ ಶುಕ್ರವಾರ ಬೆಳಗ್ಗೆ ವಿಜಯ್ ಕಿರಂಗದೂರ್‌ಗೆ ಕರೆ ಮಾಡಿದ ಸೂಪರ್ ಸ್ಟಾರ್, ಒಳ್ಳೆಯ ಸಿನಿಮಾ ಮಾಡಿದ್ದೀರಾ ಎಂದು ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2’ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ಅಭಿಮಾನಿ!

    ಗುರುವಾರ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಸಿನಿಮಾ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ವಿಶ್ವಾದ್ಯಂತ ಒಟ್ಟು 145 ಕೋಟಿ ರೂ. ಗಳಿಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

  • ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ಬಾಲಿವುಡ್ ಓಟಿಟಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಉರ್ಫಿ ಜಾವೇದ್ ಭಿನ್ನವಾದ ಬೋಲ್ಡ್ ಉಡುಪುಗಳನ್ನು ತೊಟ್ಟು ಬಿ’ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿರುತ್ತಾರೆ. ದಿನಕ್ಕೊಂದು ಭಿನ್ನ ಡ್ರೆಸ್ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಕ್ರೇಜ್ ಮೂಡಿಸಿದ್ದಾರೆ. ಬಾಲಿವುಡ್ ಕ್ಯಾಮರಾಗಳು ಉರ್ಫಿ ಇಂದು ಯಾವ ರೀತಿಯ ಬಟ್ಟೆ ತೊಡುತ್ತಾರೆ ಎಂದು ಕಾಯುತ್ತ ಇರುತ್ತಾರೆ. ಈ ನಡುವೆ ಭಾರತದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್-2 ಸಿನಿಮಾ ಬಗ್ಗೆ ಕ್ಯಾಮರಾ ಮ್ಯಾನ್ ಪ್ರಶ್ನೆ ಕೇಳಿದ್ದಾರೆ. ಈ ನಟಿ ಉತ್ತರ ಕೇಳಿ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಉರ್ಫಿ ವಿರುದ್ಧ ಗರಂ ಆಗಿದ್ದಾರೆ.

    ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್-2 ಇಡೀ ಇಂಡಿಯಾದ ಕಣ್ಣನ್ನು ತನ್ನತ್ತ ಸೆಳೆದಿದೆ. ಈ ಹಿನ್ನೆಲೆ ಉರ್ಫಿಯನ್ನು ಮುಂಬೈ ಪಾಪರಾಜಿಗಳು ಕೆಜಿಎಫ್-2 ಸಿನಿಮಾ ಟ್ರೇಲರ್ ನೋಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಉರ್ಫಿ, ಇಲ್ಲ ನಾನು ನೋಡಿಲ್ಲ. ನಾನು ಕೆಜಿಎಫ್ ಚಾಪ್ಟರ್ ಒಂದನ್ನೇ ಇನ್ನೂ ನೋಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

     

    View this post on Instagram

     

    A post shared by Viral Bhayani (@viralbhayani)

    ಆದರೆ ಈ ಬಗ್ಗೆ ನನಗೆ ಬೇಸರವಿದೆ. ಅದಕ್ಕೆ ಈ ಸಿನಿಮಾವನ್ನು ಒಟ್ಟಿಗೆ ನೋಡುವ ಯೋಜನೆಯಿದೆ. ಎರಡೂ ಭಾಗವನ್ನು ನೋಡುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ ದಕ್ಷಿಣ ಸಿನಿಮಾವನ್ನು ನೀವು ನೋಡುವುದಿಲ್ವ ಎಂದು ಕೇಳಿದಾಗ, ಇಲ್ಲ. ನಾನು ನೋಡುತ್ತೇನೆ. ಸೌತ್ ಸಿನಿಮಾದಲ್ಲಿಯೂ ಒಳ್ಳೆ ಸಿನಿಮಾಗಳಿವೆ. ಅಲ್ಲಿಯೂ ಹೆಚ್ಚು ಹ್ಯಾಂಡ್‍ಸಮ್ ನಾಯಕರಿದ್ದಾರೆ ಎಂದು ಉತ್ತರಿದ್ದಾರೆ. ದಕ್ಷಿಣದ ನೆಚ್ಚಿನ ನಟರ್ಯಾರು ಎಂದು ಕೇಳಿದ್ದಕ್ಕೆ, ಆಕೆ, ರಾಮ್‍ಚರಣ್ ನನಗೆ ತುಂಬಾ ಇಷ್ಟ. ಅವರು ತುಂಬಾ ಹ್ಯಾಂಡ್‍ಸಮ್ ಆಗಿದ್ದಾರೆ ಎಂದು ಉತ್ತರಿಸಿದ್ದಾರೆ.

    ತಮ್ಮ ಡ್ರೆಸ್‍ಗೆ ಸಂಬಂಧಿಸಿದಂತೆ ಹೆಚ್ಚು ಟ್ರೋಲ್‍ಗೆ ಗುರಿಯಾಗುವ ಈ ನಟಿ ಯಾವುದಕ್ಕೂ ಕೇರ್ ಮಾಡುವುದಿಲ್ಲ. ಓಟಿಟಿ ಶೋ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಈ ನಟಿ ಹಾಟ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. ಅವರ ವೀಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

  • ಬೃಹತ್ ಎಲ್.ಇ.ಡಿ ಪರದೆಯ ಮೇಲೆ ನೋಡಿ ಕೆಜಿಎಫ್ 2 ಟ್ರೈಲರ್

    ಬೃಹತ್ ಎಲ್.ಇ.ಡಿ ಪರದೆಯ ಮೇಲೆ ನೋಡಿ ಕೆಜಿಎಫ್ 2 ಟ್ರೈಲರ್

    ದೊಡ್ಡಬಳ್ಳಾಪುರದಲ್ಲಿ ಕೆಜಿಎಫ್ ಚಾಪ್ಟರ್-2 ಚಿತ್ರದ ಟ್ರೈಲರ್ ಅನ್ನು ಬೃಹತ್ ಎಲ್‍ಇಡಿ ಪರದೆಯ ಮೂಲಕ ವಿಕ್ಷಣೆಗೆ ಯಶ್ ಅಭಿಮಾನಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ.

    ಕೆಜಿಎಫ್-2 ಸಿನಿಮಾಕ್ಕಾಗಿ ಇಡೀ ಭಾರತವೇ ಎದುರು ನೋಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಚಿತ್ರ ಕೆಜಿಎಫ್ ಚಾಪ್ಟರ್-1 ಸಲ್ಲುತ್ತದೆ. ಇದೀಗ ಕೆಜಿಎಫ್ ಚಾಪ್ಟರ್-2ರ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಮಧ್ಯೆ ‘ಕೆಜಿಎಫ್ 2’ ಟ್ರೈಲರ್ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಹಲವರಲ್ಲಿ ಇತ್ತು. ಅದಕ್ಕೂ ಉತ್ತರ ಸಿಕ್ಕಿದ್ದು, ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿದೆ. ಇದನ್ನೂ ಓದಿ: RRR ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

    ಯಶ್ ಅಭಿನಯದ ಈ ಚಿತ್ರದ ಟ್ರೈಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದ್ದು, ಯಾವಾಗಲೂ ಕೂಡ ಮಿಂಚು ಬರುವ ಮುನ್ನ ಗುಡುಗು ಬರುತ್ತದೆ ಎಂದು ಟ್ರೈಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಚಿತ್ರತಂಡ. ಅಭಿಮಾನಿಗಳು ಸಿನಿಮಾದ ಅಪ್‍ಡೇಟ್ ಏನೂ ಸಿಗುತ್ತಿಲ್ಲ ಎಂದು ಹಲವು ಸಮಯದಿಂದ ಬೇಸರ ಮಾಡಿಕೊಂಡಿದ್ದರು. ಟ್ವಿಟ್ಟರ್‍ನಲ್ಲೂ ಚಿತ್ರದ ಅಪ್‍ಡೇಟ್‍ಗಾಗಿ ಕೇಳುತ್ತಿದ್ದರು. ಇದೀಗ ಅವರೆಲ್ಲರಿಗೂ ಖುಷಿಯಾಗುವಂತಹ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ದೊಡ್ಡಬಳ್ಳಾಪುರ ತಾಲೂಕು ಘಟಕದಿಂದ ಬೃಹತ್ ಎಲ್‍ಇಡಿ ಪರದೆ ಮೂಲಕ ಟ್ರೈಲರ್ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

    ಈ ಕುರಿತಂತೆ ಪೋಸ್ಟರ್ ಬಿಡುಗಡೆ ಮಾಡಿರುವ ಅಭಿಮಾನಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಯಶವಂತ್ ಆರಾಧ್ಯ, ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಟ್ರೈಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬೃಹತ್ ಎಲ್‍ಇಡಿ ಪರದೆ ಮೂಲಕ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಟ್ರೈಲರ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಅಂತ ತಿಳಿಸಿದ್ದಾರೆ.

  • KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

    KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರತಂಡ ವಿಭಿನ್ನ ಮತ್ತು ವಿಶೇಷವಾಗಿ ವಿಶ್ ಮಾಡುತ್ತದೆ ಎಂದು ಕಾದು ಕುಳಿತಿದ್ದ, ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ. ಚಿತ್ರತಂಡ ಯಶ್ ಅವರ ಖಡಕ್‌ ಲುಕ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ.

     

    View this post on Instagram

     

    A post shared by Hombale Films (@hombalefilms)

    ಎಚ್ಚರಿಕೆ, ಮುಂದೆ ಅಪಾಯವಿದೆ. ನಮ್ಮ ರಾಕಿ ಭಾಯಿ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದು ಯಶ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಲುಕ್‍ನ ಫೋಟೋವನ್ನು ಕೆಜಿಎಫ್ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್

    ಕೆಜಿಎಫ್ ಚಾಪ್ಟರ್ 2 ಸಿನಿಮಾ, 2022ರ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ಈ ಮೊದಲೇ ಚಿತ್ರತಂಡ ಘೋಷಿಸಿತ್ತು. ಆದರೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ವಿಧಿಸಿದೆ. ಹೀಗಾಗಿ ಅನೇಕ ಬಿಗ್ ಬಜೆಟ್ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಮುಂದೂಡಿಕೊಂಡಿವೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಆಗಬಹುದಾ ಎಂಬ ಅನುಮಾನ ಮೂಡಿತ್ತು. ಆದರೆ ಯಶ್ ಅವರಿಗೆ ಜನ್ಮ ದಿನಾಚರಣೆ ವಿಶ್ ಮಾಡಿರುವ ಹೊಂಬಾಳೆ ಫಿಲ್ಮ್ಸ್  #KGF2onApr14 ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಿಲೀಸ್ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ. ಯಶ್ ಅಭಿಮಾನಿಗಳಿಗೆ ಈ ವಿಚಾರ ಸಖತ್ ಖುಷಿಯನ್ನು ತಂದಿದೆ.

    ನಿರ್ಮಾಪಕ ವಿಜಯ್ ಕಿರಗಂದೂರು ಕೂ ಮೂಲಕವಾಗಿ, ಹೃದಯ ಸ್ಪರ್ಶಿಯಾದ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು, ನಾವು ಒಟ್ಟಿಗೆ ಹೆಣೆಯುತ್ತಿರುವ ಬೆಳವಣಿಗೆ ಮತ್ತು ಕಥೆ, ನಿಮ್ಮೊಂದಿಗೆ ಹೊಸ ದಾಖಲೆಗಳನ್ನು ಸ್ಥಾಪಿಸಲು ಆಶಿಸುತ್ತೇವೆ ಎಂದು ಬರೆದು ಶುಭಕೋರಿದ್ದಾರೆ.

    ಓಮಿಕ್ರಾನ್‌, ಕೊರೊನಾ ಸೋಂಕಿನ ಭೀತಿ ಎಲ್ಲೆಡೆ ಇರುವುದರಿಂದ ಯಶ್‌ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಯಶ್ ಜನ್ಮದಿನವಾದ ಇಂದು ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ಇದೆ. ಈ ಕಾರಣಕ್ಕೆ ಯಶ್ ಮನೆ ಸಮೀಪ ತೆರಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ  ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭಕೋರುತ್ತಿದ್ದಾರೆ.  ಕೇವಲ ಕರ್ನಾಟಕದ ಫ್ಯಾನ್ಸ್ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಅಭಿಮಾನಿಗಳು ವಿಶ್‌ ಮಾಡುತ್ತಿದ್ದಾರೆ. ಯಶ್ ಹೆಸರು ಟ್ವಿಟರ್‌ನಲ್ಲಿ  ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

    2007ರಲ್ಲಿ ತೆರೆಗೆ ಬಂದ ಜಂಬದ ಹುಡುಗಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದರು. 2014ರಲ್ಲಿ ತೆರೆಗೆ ಬಂದ Mr & Mrs ರಾಮಾಚಾರಿ ಬಾಕ್ಸ್ ಆಫೀಸ್‍ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ನಂತರ ಯಶ್ ಅವರ ಲಕ್ ಬದಲಾಯಿತ್ತು. ಒಳ್ಳೆಯ ಪಾತ್ರಗಳು ಅವರ ಪಾಲಿಗೆ ಒಲಿದು ಬಂದವು. ಯಶ್ ನಟನೆಯ ಕೆಜಿಎಫ್ ಸಿನಿಮಾದಿಂದ ಕನ್ನಡ ಚಿತ್ರರಂಗದ ದಿಕ್ಕೆ ಬದಲಾಯಿತು. ರಾಕಿಂಗ್ ಸ್ಟಾರ್ ಯಶ್ ಅವರ ರೇಂಜ್ ಕೂಡ ಬದಲಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾವನ್ನು ಪರದೆ ಮೇಲೆ ನೋಡಲು ಅವರ ಅಭಿಮಾನಿಗಳ ಬಳಗ ಮತ್ತು ಸಿನಿಪ್ರಿಯರು ಕಾದು ಕುಳಿತಿದ್ದಾರೆ.