Tag: ಕೆಜಿಎಫ್

  • Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

    Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

    ಕೋಲಾರ: ಸೇತುವೆ (Bridge) ಮೇಲಿಂದ ಕಾರೊಂದು (Car) ಕೆಳಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ (Kolar) ಜಿಲ್ಲೆ ಕೆಜಿಎಫ್‌ನ (KGF) ಕೃಷ್ಣಾವರಂ ಬಳಿ ನಡೆದಿದೆ.

    ಕರ್ಣ (48) ಮೃತ ವ್ಯಕ್ತಿ. ಫೋರ್ಡ್ ಇಕೋಸ್ಪೋರ್ಟ್ ಕಾರು ಸೇತುವೆ ಮೇಲಿಂದ ಬಿದ್ದು ಘಟನೆ ಸಂಭವಿಸಿದೆ. ಘಟನೆಯಲ್ಲಿ ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: `ಶಕ್ತಿ’ ಚಂಡಮಾರುತ ಎಫೆಕ್ಟ್ – ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಅಬ್ಬರ ಜೋರು

    ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

  • ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಬೆಂಗಳೂರು: ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ ಕೊಟ್ಟು ಡೂಪ್ಲಿಕೇಟ್ `ಕೆಜಿಎಫ್’ (KGF) ಲೋಕವನ್ನು ಸೃಷ್ಟಿಸಿ ವೈರಲ್ ಮಾಡಿದ್ದ ರೀಲ್ಸ್ ಸ್ಟಾರ್ ಶ್ರೀನಿವಾಸ್‌ಗೆ ಸಿಸಿಬಿ (CCB) ಶಾಕ್ ನೀಡಿದೆ.

    ರೀಲ್ಸ್ ಸ್ಟಾರ್ ಶ್ರೀನಿವಾಸ್ ರಾಜ್ ಎಂಬಾತನಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಿಂದೆ ಮುಂದೆ ಜನರನ್ನು ಇಟ್ಟುಕೊಂಡು ಹೀರೋ ರೀತಿಯಲ್ಲೇ ಪೋಸ್ ಕೊಟ್ಟು ರೀಲ್ಸ್ ಮಾಡಿದ್ದ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್‌ನ್ನು ಕಾಪಿ ಮಾಡಿ, ಚಾಕು, ಚೂರಿ ಮತ್ತು ಗನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

    ಈ ವಿಡಿಯೋ ಪೊಲೀಸ್ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಕಣ್ಣಿಗೆ ಬಿದ್ದಿದ್ದು, ಸಿಸಿಬಿ ಪೊಲೀಸರು ಶ್ರೀನಿವಾಸ್‌ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇದೆಲ್ಲ ಡೂಪ್ಲಿಕೇಟ್ ವೆಪನ್ಸ್ ಎಂದು ಮಾಹಿತಿ ನೀಡಿದ್ದಾನೆ.

    ಸದ್ಯ ಪೊಲೀಸರು ವಿಡಿಯೋದಲ್ಲಿ ಬಳಸಿದ್ದ ಎಲ್ಲಾ ವಸ್ತುಗಳನ್ನು ತಂದೊಪ್ಪಿಸಲು ಸೂಚಿಸಿದ್ದಾರೆ. ಯಾವುದೇ ಒಂದು ಮಾರಕಾ‌ಸ್ತ್ರ ತಪ್ಪಿಸಿದರೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ:‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ  5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

  • ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

    ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

    ಕೆಜಿಎಫ್ (KGF) ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳ ನಟ ಹರೀಶ್ ರಾಯ್ (Harish Rai) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಅನ್ನೋ ಮಹಾಮಾರಿ ಅವರನ್ನ ಕಿತ್ತು ತಿನ್ನುತ್ತಿದೆ. ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಕಾಣಿಸಿಕೊಂಡ ಕ್ಯಾನ್ಸರ್ ಮಹಾಮಾರಿ ಹರೀಶ್ ರಾಯ್ ಕಲಾ ಬದುಕಿಗೆ ಕುತ್ತು ತಂದಿದೆ. ಒಂದುಕಡೆ ಸಿನಿಮಾಗಳಿಲ್ಲದೇ ಮನೆಯ ಜವಾಬ್ದಾರಿ ನಿಭಾಯಿಸಲಾಗುತ್ತಿಲ್ಲ. ಮತ್ತೊಂದೆಡೆ ದುಬಾರಿ ಚಿಕಿತ್ಸೆಗಾಗಿ ವೈದ್ಯರು ಹೈಟ್ರಿಟ್ಮೆಂಟ್‌ಗಾಗಿ ಸಲಹೆ ನೀಡಿದ್ದಾರೆ. ಮುಂದಿನ ಹಂತದ ಚಿಕಿತ್ಸೆಗಾಗಿ ಹರೀಶ್ ರಾಯ್‌ಗೆ 70-80 ಲಕ್ಷ ರೂಪಾಯಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಹರೀಶ್ ರಾಯ್ `ಪಬ್ಲಿಕ್ ಟಿವಿ’ ಮೂಲಕ ಕನ್ನಡ ಚಿತ್ರರಂಗದ ಕಲಾವಿದರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಹಾಗೂ ಸಮಸ್ತ ಕರುನಾಡಿನ ಜನರನ್ನ ಕೈಮುಗಿದು ಕೇಳಿಕೊಂಡಿದ್ದಾರೆ. ಹರೀಶ್ ರಾಯ್ ಅವರಿಗೆ ವೈದ್ಯರು ಸಲಹೆ ನೀಡಿರುವ ಪ್ರಕಾರ ಒಂದು ಇಂಜೆಕ್ಷನ್‌ಗೆ 3.55 ಲಕ್ಷ ರೂ. ವೆಚ್ಚ ತಗುಲಲಿದೆಯಂತೆ. ಈ ಚಿಕಿತ್ಸೆ ಶುರು ಮಾಡಿದ ಮೇಲೆ 21 ದಿನಗಳಿಗೊಂದರಂತೆ ಇಂಜೆಕ್ಷನ್ ನೀಡಬೇಕಾಗುತ್ತೆ. 63 ದಿನಗಳಲ್ಲಿ ಮೂರು ಇಂಜೆಕ್ಷನ್ ನೀಡಬೇಕು. ಅಲ್ಲಿಗೆ ಒಂದು ಸೈಕಲ್ ಕಂಪ್ಲೀಟ್ ಆಗುತ್ತಂತೆ. ಅಂದರೆ ಅಲ್ಲಿಗೆ 10.65,000 ರೂ. ಹಣ ಬೇಕಾಗುತ್ತೆ. ಹೀಗೆ 6 ರಿಂದ 7 ಸೈಕಲ್ ಕಂಪ್ಲೀಟ್ ಮಾಡ್ಬೇಕು. ಅಂದರೆ ಅಲ್ಲಿಗೆ 70-80 ಲಕ್ಷ ಹಣ ಕೇವಲ ಇಂಜೆಕ್ಷನ್‌ಗೆ ಬೇಕಾಗುತ್ತದೆಯಂತೆ. ಸಹಾಯ ಹಸ್ತ ಚಾಚುವರಿಗೆ ಇಲ್ಲಿ ಬ್ಯಾಂಕ್ ಡಿಟೇಲ್ಸ್ ನೀಡಲಾಗಿದೆ.ಇದನ್ನೂ ಓದಿ: ಕೊಪ್ಪಳದಲ್ಲಿ ಗಮನ ಸೆಳೆಯುತ್ತಿದೆ ಜೋಕಾಲಿ ಗಣೇಶ

    ಅಕೌಂಟ್ ಡಿಟೇಲ್ಸ್ :
    ನೇಮ್ : ಹರೀಶ್ ರಾಯ್
    ಅಕೌಂಟ್ ನಂಬರ್: 38510865963
    ಐಎಫ್‌ಎಸ್‌ಸಿ :  SBIN0004408

    ಫೋನ್ ಪೇ & ಗೂಗಲ್ ಪೇ
    7760035557
    9606960656

    ಈ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣಬೇಕು ಹೀಗಾಗಿ ಹರೀಶ್ ರಾಯ್ ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್‌ನ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಬಂದ ವೇಳೆ ಅವರಿಗೂ ಈ ಇಂಜೆಕ್ಷನ್ ಕೊಡಲಾಗಿತ್ತು, ಅವರು ಗುಣಮುಖರಾಗಿದ್ದಾರೆ. ಅದೇ ಹೋಪ್ ನನ್ನಲ್ಲೂ ಇದೆ. ಇದಕ್ಕೆ ನಮ್ಮ ಚಿತ್ರರಂಗ, ಕಲಾವಿದರು, ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್ ಚೇಂಬರ್ ಹಾಗೂ ಸಮಸ್ತ ಕರುನಾಡಿನ ಸಿನಿಮಾ ಅಭಿಮಾನಿಗಳು ಮನಸ್ಸು ಮಾಡಬೇಕು. ಈ ಕಾಯಿಲೆಯನ್ನ ಮೆಟ್ಟಿ ನಿಲ್ಲಲು ನನಗೆ ಧೈರ್ಯವಿದೆ ಆದ್ರೆ ಹಣವಿಲ್ಲ. ಹೀಗಾಗಿ ತಾವೆಲ್ಲರೂ ಸಹಾಯ ಮಾಡಿದ್ರೆ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಹರೀಶ್ ರಾಯ್ ಕೇಳಿಕೊಂಡಿದ್ದಾರೆ.

    ಮತ್ತೆ ಮೊದಲಿನಂತೆ ಆರೋಗ್ಯವಾಗಿ ಮರಳಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಬೇಕು. ನನಗೆ ಸಿನಿಮಾ ಇಂಡಸ್ಟ್ರಿನೇ ಎಲ್ಲಾ. ಅದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ನಾನಿನ್ನು ಕಲಾ ಸರಸ್ವತಿಯ ಸೇವೆ ಮಾಡಬೇಕು. ಅದಕ್ಕಾಗಿ ಗುಣಮುಖರಾಗಿ ಬಂದ ಬಳಿಕ ನಿರ್ದೇಶಕರುಗಳ ಮನೆ ಬಾಗಿಲಿಗೆ ಹೋಗಿ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಟರನ್ನ ಭೇಟಿ ಮಾಡಿ ಅವಕಾಶಗಳನ್ನ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಮೂರುಗಳ ಹಿಂದೆ ಕ್ಯಾನ್ಸರ್ ಟ್ರೀಟ್ಮೆಂಟ್‌ಗಾಗಿ ನಟ ಯಶ್, ದರ್ಶನ್ ಹಾಗು ದುನಿಯಾ ವಿಜಯ್ ಸಹಾಯ ಮಾಡಿರುವ ಬಗ್ಗೆ ನೆನೆದಿದ್ದಾರೆ.ಇದನ್ನೂ ಓದಿ: ರಾಹುಲ್‌ ರ‍್ಯಾಲಿಯಲ್ಲಿ ಮೋದಿಯನ್ನು ನಿಂದಿಸಿದವ ಅರೆಸ್ಟ್‌

  • ಶ್ರಾವಣ ಶನಿವಾರ – ಕೋಲಾರದ ಚಿಕ್ಕ ತಿರುಪತಿ, ಬಂಗಾರ ತಿರುಪತಿ ದೇವಾಲಯದಲ್ಲಿ ಭಕ್ತ ಸಾಗರ

    ಶ್ರಾವಣ ಶನಿವಾರ – ಕೋಲಾರದ ಚಿಕ್ಕ ತಿರುಪತಿ, ಬಂಗಾರ ತಿರುಪತಿ ದೇವಾಲಯದಲ್ಲಿ ಭಕ್ತ ಸಾಗರ

    ಕೋಲಾರ: ಇಂದು 4ನೇ ಶ್ರಾವಣ ಶನಿವಾರ (Shravan Saturday) ಹಿನ್ನೆಲೆ ಕೋಲಾರ (Kolar) ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಜನ ಸಾಗರವೇ ಹರಿದು ಬಂದಿತ್ತು.

    ಕೋಲಾರ ಜಿಲ್ಲೆ ಕೆಜಿಎಫ್ (KGF) ತಾಲೂಕು ಬಂಗಾರ ತಿರುಪತಿ ದೇವಾಲಯ (Bangaru Tirupati Temple), ಮಾಲೂರು ತಾಲೂಕು ಚಿಕ್ಕ ತಿರುಪತಿ ದೇವಾಲಯದಲ್ಲೂ (Chikka Tirupati Temple) ಜನರ ದಂಡು ಹೆಚ್ಚಾಗಿತ್ತು. ಇತಿಹಾಸ ಪ್ರಸಿದ್ಧ ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿ ಹಾಗೂ ಚಿಕ್ಕ ತಿರುಪತಿಯ ಪ್ರಸನ್ನ ವೆಂಕರಮಣ ಸ್ವಾಮಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಂದು ಮುಂಜಾನೆಯಿಂದ ಶ್ರದ್ಧಾ ಭಕ್ತಿಯಿಂದ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಲಾಯಿತು. ಇದನ್ನೂ ಓದಿ: ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ

    ಶ್ರಾವಣ ಮಾಸದ ಪ್ರಯುಕ್ತ ಭಕ್ತರಿಂದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ವಿಶೇಷ ಹರಕೆ ತೀರಿಸಿದರು. ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಿಂದ ಭಕ್ತರಿಗೆ ಪ್ರಸಾದ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಮಾಡಲಾಗಿತ್ತು. ಇನ್ನೂ ಕೋಲಾರ ನಗರದ ಪೇಟೆ ವೆಂಕಟರಮಸ್ವಾಮಿ ದೇವಾಲಯಕ್ಕೂ ಭಕ್ತ ಸಾಗರ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಭಕ್ತ ಗಣ ಆಗಮಿಸಿತ್ತು. ಇದನ್ನೂ ಓದಿ: ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ

    ಕೋಲಾರ ನಗರದ ಶಾರದ ಚಿತ್ರಮಂದಿರ ಬಳಿಯಿರುವ ಪೇಟೆ ವೆಂಕಟರಮಣಸ್ವಾಮಿ ದೇವಾಲಯ, 4ನೇ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಾಲಯದಲ್ಲಿ ಭಕ್ತರಿಂದ ಗೋವಿಂದ ನಾಮಸ್ಮರಣೆ ಮಾಡಲಾಯಿತು. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ದೇವರ ದರ್ಶನ ಪಡೆದರು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

  • Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

    Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

    ಕೋಲಾರ: ದೇಶ ವಿರೋಧಿ ಚಟುವಟಿಕೆಯಲ್ಲಿ (Anti-National Activity) ತೊಡಗಿದ ಹಾಗೂ ಕೆಲವೊಂದು ಉಗ್ರವಾದಿ ಸಂಘಟನೆಗಳ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಡಿಯಲ್ಲಿ ಓರ್ವ ಅಪ್ರಾಪ್ತ ಬಾಲಕನನ್ನು (Minor Boy) ಆಂತರಿಕ ಭದ್ರತಾ ಅಧಿಕಾರಿಗಳು (Internal Security Officers) ಮತ್ತು ಕೇಂದ್ರ ಗುಪ್ತಚರ ಇಲಾಖೆ (Central Intelligence Agency) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕೋಲಾರ (Kolar) ಜಿಲ್ಲೆ ಕೆಜಿಎಫ್ (KGF) ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 15 ವರ್ಷದ ಬಾಲಕನೊಬ್ಬ ಕೆಲವೊಂದು ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ. ಅಲ್ಲದೆ ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದು ಇಡೀ ದಿನ ಆತನನ್ನು ವಿಚಾರಣೆ ನಡೆಸಿ ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು

    ಇನ್ನು ಈ ಬಾಲಕ ಮೂಲತಃ ಆಂದ್ರದ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ. ಕಳೆದ ಹಲವು ವರ್ಷಗಳ ಹಿಂದೆಯೇ ಆಂದ್ರದ ರಾಮಕುಪ್ಪಂ ತೊರೆದು ಬೆಂಗಳೂರಿನ ಮೇಡಹಳ್ಳಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಇತ್ತೀಚೆಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕ ಕಳೆದ 20 ದಿನಗಳ ಹಿಂದಷ್ಟೇ ಬೇತಮಂಗಲ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಸದ್ಯ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆಂತರಿಕ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಸದ್ಯ ಈತನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಲಕನ್ನು ವಶಕ್ಕೆ ಪಡೆದು ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

  • ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ

    ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ

    ಟಾಲಿವುಡ್‌ನಿಂದ ಧಮಾಕೇದಾರ್ ಸುದ್ದಿಯೊಂದು ಬಂದಿದೆ. ಅದುವೇ ಅಲ್ಲು ಅರ್ಜುನ್ (Allu Arjun) ಹಾಗೂ ಪ್ರಶಾಂತ್ ನೀಲ್ (Prashanth Neel) ಸೂಪರ್ ಕಾಂಬೋ ಸುದ್ದಿ.

    ಹೌದು. ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಸುದ್ದಿ ವೈರಲ್ ಆಗಿದೆ. ಪ್ರಸ್ತುತ ಪ್ರಶಾಂತ್ ನೀಲ್ ಜೂ.ಎನ್‌ಟಿಆರ್ (Jr ntr) ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಅಟ್ಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಇಬ್ಬರ ವಿಭಿನ್ನ ಚಿತ್ರಗಳು ಮುಗಿದ ಬಳಿಕ ಪ್ರಶಾಂತ್‌ ನೀಲ್‌ ಜೊತೆಗೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದ್ದು ಈ ಚಿತ್ರಕ್ಕೆ `ರಾವಣಂ’ ಎಂಬ ಶೀರ್ಷಿಕೆ ಇಡಲಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಇದನ್ನೂ ಓದಿ: ಭದ್ರತೆಗೆ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್

    ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಪ್ರಶಾಂತ್ ನೀಲ್ ಹಾಗೂ ಪುಷ್ಪ-2 (Pushpa 2) ಮೂಲಕ ಇಂಟರ್‌ನ್ಯಾಶನಲ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾ ಮೇಕರ್ಸ್‌ ಎಂದು ಹೆಸರು ಮಾಡಿದವರು. ಇಬ್ಬರು ಒಂದೇ ಚಿತ್ರಕ್ಕಾಗಿ ಕೈಜೋಡಿಸದ್ರೆ ಆ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಿಸೋದ್ರಲ್ಲಿ ಅನುಮಾನವೇ ಇಲ್ಲ. ಅಂದಹಾಗೆ ಈ ಸಿನಿಮಾವನ್ನ ಬಿಗ್ ಬಜೆಟ್‌ನಲ್ಲಿ ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್‌ರಾಜು ನಿರ್ಮಿಸಲಿದ್ದಾರೆ. ಸಿನಿಮಾ ಶುರುವಾಗೋದು ಇನ್ನೂ ಎರಡು ವರ್ಷದ ಬಳಿಕ ಎನ್ನಲಾಗುತ್ತಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ಸಿನಿಮಾ ಆರಂಭಕ್ಕೂ ಮುನ್ನವೇ ಅಲ್ಲು ನೀಲ್ ಕಾಂಬಿನೇಶನ್ ಚಿತ್ರದ ಶೀರ್ಷಿಕೆ ರಿವೀಲ್ ಆಗಿರುವುದು ವಿಶೇಷ. ಸಾಮಾನ್ಯವಾಗಿ ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಆರಂಭದಲ್ಲೇ ಟೈಟಲ್ ರಿವೀಲ್ ಮಾಡೋದಿಲ್ಲ. ಕಾನ್ಸೆಪ್ಟ್ ಪ್ರಕಾರ ಮಾಡಲಾಗುತ್ತೆ. ಹೀಗಾಗಿ ಶೀರ್ಷಿಕೆ ವಿಚಾರಕ್ಕೆ ಗೊಂದಲ ಇದೆ. ಹಿಂದೆ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ತಾವು ಚಿತ್ರ ಮಾಡಬೇಕೆನ್ನುವ ಹೀರೋ ಜೊತೆ ಲವ್ ಆದ್ರೆ ಮಾತ್ರ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ರು. ಇದನ್ನೂ ಓದಿ: ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!

    ಹೀಗಾಗಿ ನಿರ್ದೇಶಕ ನೀಲ್ ಆಯ್ಕೆ ಮಾಡಿಕೊಳ್ಳುವ ಹೀರೋ ಇಂಟ್ರೆಸ್ಟಿಂಗ್ ಆಗಿರ್ತಾರೆ. ಇದೀಗ ಅಲ್ಲು ಜೊತೆ ಪ್ರಶಾಂತ್ ನೀಲ್ ಕೈ ಜೋಡಿಸಿರುವುದು ಆರಂಭಿಕ ಮಾತುಕತೆಯಲ್ಲಿ ರಿವೀಲ್ ಆಗಿದೆ. ಇದನ್ನೂ ಓದಿ: ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

  • Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಕೋಲಾರ: ಜಮೀನು ವಿವಾದ (Land Dispute) ಹಿನ್ನೆಲೆ ಅಣ್ಣ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಎನ್‌ಜಿ ಹುಲ್ಕರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಆಸ್ತಿಯಲ್ಲಿ ನಾಲ್ಕು ಗುಂಟೆ ಪಾಲು ಬೇಕೆಂದು ಮೂವರು ಅಣ್ಣ ತಮ್ಮಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಸದರಿ ಜಮೀನಿನಲ್ಲಿ ತಮ್ಮ ರಮೇಶ್ ಶೆಡ್ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

    ಈ ಬಗ್ಗೆ ವಿಚಾರ ತಿಳಿದ ಸೀನಪ್ಪ (ಶ್ರೀನಿವಾಸ್) ಮತ್ತು ಸಂಪಂಗಿ ಇಬ್ಬರೂ ರಮೇಶ್ ಬಳಿ ತಕರಾರು ತೆಗೆದಿದ್ದಾರೆ. ಸೀನಪ್ಪ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಕೋಪಾವೇಶದಲ್ಲಿ ಸೀನಪ್ಪ ಪಕ್ಕದಲ್ಲಿದ್ದ ದೊಣ್ಣೆಯನ್ನು ತೆಗೆದು ರಮೇಶ್‌ಗೆ ಬಲವಾಗಿ ಹೊಡೆದ ಪರಿಣಾಮ ರಮೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆ ನಡೆಯುವಾಗ ಅಕ್ಕಪಕ್ಕದ ಜನರೂ ಗುಂಪುಗೂಡಿದ್ದು, ತಮ್ಮ ಮೃತನಾದ ಎಂದು ತಿಳಿಯುತ್ತಿದ್ದಂತೆ ಭಯದಿಂದ ಸೀನಪ್ಪ ಮತ್ತು ಸಂಪಂಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಸೀನಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಪಂಗಿ ಪರಾರಿಯಾಗಿದ್ದು, ಬೇತಮಂಗಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

  • ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

    ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

    ನ್ನಡದ ‘ಕೆಜಿಎಫ್’ (KGF) ಚಿತ್ರದಲ್ಲಿ ಯಶ್ ಜೊತೆ ಸೊಂಟ ಬಳುಕಿಸಿದ್ದ ಮೌನಿ ರಾಯ್ (Mouni Roy) ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ಭಾಗಿಯಾಗಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮೌನಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ

    ಕನ್ನಡದ ನಟಿ ದಿಶಾ ಮದನ್ ಬಳಿಕ ಬಳಕುವ ಬಳ್ಳಿಯಂತಿರುವ ಮೌನಿ ರಾಯ್ ಕೂಡ ಕಾನ್ ಸಿನಿಮಾ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿ ಫ್ರಾನ್ಸ್‌ಗೆ ತೆರಳಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ಗೆ ನೀಲಿ ಬಣ್ಣದ ಕಸೂತಿ ಮಾಡಲಾಗಿದೆ. ಅದಕ್ಕೆ ದುಬಾರಿ ನೆಕ್ಲೆಸ್ ಅನ್ನು ನಟಿ ಧರಿಸಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:‘ಮುದ್ದು ರಾಕ್ಷಸಿ’ ಹಾಡಿಗೆ ಪತ್ನಿ ಕೈಹಿಡಿದು ದರ್ಶನ್ ರೊಮ್ಯಾಂಟಿಕ್ ಡ್ಯಾನ್ಸ್

    ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಆಯೋಜಕರು ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಅದರಂತೆ ನಟಿ ಮೌನಿ ರಾಯ್ ಅವರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಅವರು ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.

    ಫ್ರಾನ್ಸ್‌ನಲ್ಲಿ ಈ ಸಿನಿಮಾ ಹಬ್ಬಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ನಡೆಯಲಿದೆ.

    ಮೌನಿ ಅವರು ವರುಣ್ ಧವನ್ ನಟನೆಯ ಸಿನಿಮಾದಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಕೈತುಂಬಾ ಸಿನಿಮಾಗಳು ನಟಿಯ ಕೈಯಲ್ಲಿವೆ.

  • ವರುಣ್ ಧವನ್ ಸಿನಿಮಾಗೆ KGF ನಟಿ ಮೌನಿ ರಾಯ್ ಎಂಟ್ರಿ

    ವರುಣ್ ಧವನ್ ಸಿನಿಮಾಗೆ KGF ನಟಿ ಮೌನಿ ರಾಯ್ ಎಂಟ್ರಿ

    ‘ಬೇಬಿ ಜಾನ್’ ಸಿನಿಮಾ (Baby John) ಬಳಿಕ ವರುಣ್ ಧವನ್ ‘ಹೇ ಜವಾನಿ ತೋ ಇಶ್ಕ್ ಹೋನಾ ಹೇ’ ಚಿತ್ರದ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ವರುಣ್ ನಟನೆಯ ಹೊಸ ಚಿತ್ರಕ್ಕೆ ‘ಕೆಜಿಎಫ್’ (KGF) ನಟಿ ಮೌನಿ ರಾಯ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಶೌರ್ಯ ಶಶಾಂಕ್

    ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ನಟಿಸೋ ಮೌನಿ ರಾಯ್ (Mouni Roy) ಇದೀಗ ವರುಣ್ ಧವನ್ ಜೊತೆ ಸಿನಿಮಾ ಮಾಡ್ತಿದ್ದಾರೆ. ‘ಹೇ ಜವಾನಿ ತೋ ಇಶ್ಕ್ ಹೋನಾ ಹೇ’ ಚಿತ್ರದಲ್ಲಿ ಮೌನಿ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ.

     

    View this post on Instagram

     

    A post shared by VarunDhawan (@varundvn)

    ಇದೀಗ ಚಿತ್ರದ ಸೆಟ್‌ನಲ್ಲಿ ನಟ ವರುಣ್‌ ಮತ್ತು ಮೃಣಾಲ್‌ ಠಾಕೂರ್‌ (Mrunal Thakur) ಜೊತೆ ಪಾಲ್ಗೊಂಡಿರುವ ವಿಡಿಯೋವನ್ನು ಮೌನಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್‌ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್

    ಈ ಚಿತ್ರದಲ್ಲಿ ವರುಣ್ ಜೊತೆ ಪೂಜಾ ಹೆಗ್ಡೆ(Pooja Hegde), ಮೃಣಾಲ್ ಠಾಕೂರ್, ಚಂಕಿ ಪಾಂಡೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವರುಣ್ ತಂದೆ ಡೇವಿಡ್ ಧವನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.