Tag: ಕೆಎಸ್ ಭಗವಾನ್

  • ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಬೆಂಗಳೂರು: ಮಹಿಷಾಸುರ ರಾಕ್ಷಸನಲ್ಲ, ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು ಎಂದು ಹೇಳಿ ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾವನ್ನು ಆಚರಣೆ ಮಾಡುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆಯನ್ನು ಕೇಳಿದ್ದಾರೆ. ಸಂಪೂರ್ಣ ನಂಬಲರ್ಹ ಐತಿಹಾಸಿಕ ದಾಖಲೆಗಳೊಂದಿಗೆ ಸರಿಯುತ್ತರ ಕೊಟ್ಟವರಿಗೆ ಮಾತ್ರ ಘೋಷಿತ 501 ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

    ಬಿಜೆಪಿಯ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ 10 ಪ್ರಶ್ನೆಗಳಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ, ಚಾಮುಂಡಿ ದಸರಾಗೆ ಸೆಡ್ಡು ಹೊಡೆದು ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾ ಉತ್ಸವ ಆಚರಿಸುವ ಪಾಮರರು ಕೇಳಿದ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.

    ಪ್ರಶ್ನೆ 1. ಮಹಿಷಾಸುರನು ಹುಟ್ಟಿದ ವರ್ಷ ಯಾವುದು?
    ಪ್ರಶ್ನೆ 2. ಮಹಿಷಾಸುರ ಪಟ್ಟಾಭಿಷೇಕ ಯಾವ ವರ್ಷದಲ್ಲಿ ನಡೆಯಿತು? ಅಂದು ಆ ಸಮಾರಂಭದಲ್ಲಿ ಯಾವ ಯಾವ ರಾಜ್ಯದ ದೊರೆಗಳು/ಪ್ರತಿನಿಧಿಗಳು ಪಾಲ್ಗೊಂಡಿದ್ದರು?
    ಪ್ರಶ್ನೆ 3. ಮಹಿಷಾಸುರನ ರಾಜ್ಯ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು?

    ಪ್ರಶ್ನೆ 4. ಮಹಿಷಾಸುರನ ಪತ್ನಿಯ ಹೆಸರೇನು? ಆಕೆ ಯಾರ/ಯಾವ ರಾಜನ ಮಗಳಾಗಿದ್ದಳು?
    ಪ್ರಶ್ನೆ 5. ಮಹಿಷಾಸುರನಿಗೆ ಎಷ್ಟು ಮಕ್ಕಳು? ಆ ಮಕ್ಕಳ ಹೆಸರೇನು?
    ಪ್ರಶ್ನೆ 6. ಮಹಿಷಾಸುರನ ಅರಮನೆ ಈಗಿನ ಯಾವ ಸ್ಥಳದಲ್ಲಿತ್ತು?

    ಪ್ರಶ್ನೆ 7. ಮಹಿಷಾಸುರನು ಯಾವ ಯಾವ ಯುದ್ಧಗಳನ್ನು ಗೆದ್ದಿದ್ದನು ಮತ್ತು ಯಾವ ಯಾವ ಯುದ್ಧಗಳಲ್ಲಿ ಸೋತಿದ್ದನು?
    ಪ್ರಶ್ನೆ 8. ಮಹಿಷಾಸುರನ ಮೃತನಾಗಿದ್ದು ಯಾವ ವರ್ಷದಲ್ಲಿ? ಅವನ ನಂತರ ಆತನ ಉತ್ತರಾಧಿಕಾರಿಯಾಗಿ ಯಾರು ರಾಜ್ಯಭಾರವನ್ನು ವಹಿಸಿಕೊಂಡರು?
    ಪ್ರಶ್ನೆ 9. ಬೌದ್ಧ ರಾಜ ಮಹಿಷಾಸುರನನ್ನು ತಮ್ಮ ಪೂರ್ವಜರೆಂದು ಹೇಳಿಕೊಳ್ಳುವ ಇಂದಿನ ಮೂಲ ನಿವಾಸಿಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಯಾವ ಸಂದರ್ಭದಲ್ಲಿ ಮತ್ತು ಏಕೆ?
    ಪ್ರಶ್ನೆ 10. ಕರ್ನಾಟಕದಲ್ಲಿ ಮಹಿಷಾಸುರನು ಆಳಿದ ಕುರುಹಾಗಿ ಇರುವ ಕನಿಷ್ಠ ಹತ್ತು ಐತಿಹಾಸಿಕ ಸ್ಥಳಗಳನ್ನು ಹೆಸರಿಸಿ.

    ಕೆಲ ದಿನಗಳ ಹಿಂದೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದ್ದರು.

    ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯೊಬ್ಬನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆದರೆ ವಿಚಾರಣೆಯಲ್ಲಿ ಶಂಕಿತ ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಆರೋಪಿಯ ಮಂಪರು ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.

    ವಿಚಾರಣೆಯಲ್ಲಿ ಮತ್ತೊಂದು ಸ್ಫೋಟಕ ಸ್ಟೋರಿ ಹೊರಗೆ ಬರುತ್ತಿದ್ದು, ಸಾಹಿತಿ ಕೆ.ಎಸ್.ಭಗವಾನ್ ಬಚಾವಾಗಿದ್ದು ಹೇಗೆ ಎಂದು ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಆದ್ರೆ ಭಗವಾನ್ ಕೊಲೆ ಮಾಡಲು ಸಾಧ್ಯವಾಗಿಲ್ಲ ಅಂತಾ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

    ಭಗವಾನ್ ಅವರನ್ನು ಕೊಲೆ ಮಾಡಲು ಶ್ರೀರಂಗಪಟ್ಟಣದ ಅನಿಲ್ ಎಂಬುವನ ಮನೆಯಲ್ಲಿ ಟ್ರೈನಿಂಗ್ ಆಗಿತ್ತು. ಆದರೆ ಟ್ರೈನಿಂಗ್ ಮುಗಿಸಿಕೊಂಡಿದ್ದ ಆರೋಪಿಗಳು ಬೇರೊಂದು ವೆಪನ್ ಕೇಳಿದ್ದರು. ಭಗವಾನ್ ಕೊಲೆ ಮಾಡೋದಕ್ಕೆ ಈ ರಿವಾಲ್ವರ್ ಸೂಕ್ತ ಅಲ್ಲ ಎಂದು ಹೇಳಿ ಬೇರೆ ರಿವಾಲ್ವರ್ ಗಳನ್ನು ತರೋದಕ್ಕೆ ಸೂಚನೆ ನೀಡಿದ್ದರು. ಸರಿಯಾದ ಸಮಯದಲ್ಲಿ ರಿವಾಲ್ವರ್ ಅನ್ನು ಒದಗಿಸೋದಕ್ಕೆ ಆಗದೆ ಭಗವಾನ್ ಬಚಾವ್ ಆಗಿ ಹೋದ್ದರು. ಇನ್ನೂ ಗೋವಾದಲ್ಲಿ ಹಂತಕನನ್ನು ಸೆಲೆಕ್ಟ್ ಮಾಡಲಾಗಿತ್ತು ಎನ್ನಲಾಗಿದೆ.

  • ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ: ಭಗವಾನ್

    ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ: ಭಗವಾನ್

    ಮೈಸೂರು: ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರು ಎಂದಿಲ್ಲ. ನಮ್ಮ ದೇಶದಲ್ಲಿ ಈಗ ರಾಮನ ದೇವಸ್ಥಾನಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ದೇವಸ್ಥಾನ ಕಟ್ಟುವ ಮೊದಲು ರಾಮನ ಬಗ್ಗೆ ಗಮನಿಸಬೇಕು ಎಂದು ಸಾಹಿತಿ ಪ್ರೋ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹಕ ಅರಮನೆಯಲ್ಲಿ ಆಯೋಜಿಸಿದ್ದ ವಿಶಿಷ್ಟ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ. ಯಾರದ್ದೋ ಮಾತು ಕೇಳಿ ಸೀತೆಯನ್ನು ರಾಮ ಕಾಡಿಗೆ ಕಳುಹಿಸಿದ ಹಾಗೂ ಬ್ರಾಹ್ಮಣರ ಮಾತು ಕೇಳಿ ಶಂಭುಕ ತಲೆ ಕತ್ತರಿಸಿದ. ಇಂತವನನ್ನು ದೇವರು ಎಂದು ಹೇಗೆ ಕರೆಯಬೇಕು. ಈ ಅಂಶಗಳನ್ನು ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟಲು ಮುಂದಾಗುತ್ತಿರುವವರು ಗಮನದಲ್ಲಿಟ್ಟು ಕೊಳ್ಳಬೇಕು ಎಂದರು.

    ರಾಮಾಯಣದ ಪ್ರಮುಖ ಅಂಶಗಳು ಸಂಸ್ಕೃತದಲ್ಲಿ ಬಿಟ್ಟರೆ ಬೇರೆ ಎಲ್ಲೂ ಕೂಡ ಇಲ್ಲ. ಆದ್ದರಿಂದ ರಾಮನ ಬಗೆಗಿನ ಕೆಲ ಅಂಶಗಳು ಯಾರಿಗೂ ತಿಳಿದಿಲ್ಲ. ರಾಮ 11 ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ ಎಂದು ಎಲ್ಲರೂ ಹೇಳುತ್ತಾರೆ. ಮನುಷ್ಯನಿಗೆ ಇರುವುದು ಕೇವಲ 100 ವರ್ಷಗಳು, ಹೀಗಿರುವಾಗ ರಾಮ ಹೇಗೆ ಅಷ್ಟು ವರ್ಷಗಳ ಕಾಲ ರಾಜ್ಯಭಾರ ಮಾಡಲು ಸಾಧ್ಯ. ಸಂಸ್ಕೃತದಲ್ಲಿ ವರ್ಷ ಎಂದರೆ ದಿನ ಎಂದರ್ಥ ಹೀಗಾಗಿ ರಾಮ ಕೇವಲ 11 ವರ್ಷ ಮಾತ್ರ ರಾಜ್ಯಭಾರ ಮಾಡಿದ್ದಾನೆ ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.