Tag: ಕೆಎಸ್ ಆರ್ ಟಿಸಿ

  • ದೇವರ ಮೊರೆ ಹೋದ ಬಿಎಂಟಿಸಿ ನೌಕರರು

    ದೇವರ ಮೊರೆ ಹೋದ ಬಿಎಂಟಿಸಿ ನೌಕರರು

    ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ನೌಕರರು ದೇವರ ಮೊರೆ ಹೋಗಿದ್ದಾರೆ.

    ಯಶವಂತಪುರ ಸರ್ಕಲ್ ಬಳಿಯ ಗಾಯಿತ್ರಿ ದೇವಸ್ಥಾನದಲ್ಲಿ ಸಾರಿಗೆ ನೌಕರರು ಸೇರಿದ್ದಾರೆ. ಅಲ್ಲದೆ ದೇವಿಯ ಮುಂದೆ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದಾರೆ.

    ನಿನ್ನೆಯಿಂದ ಆರಂಭ ಆಗಿರುವ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ. ಹೀಗಾಗಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ಸುಗಳು ಇಂದು ರೋಡಿಗಿಳಿದಿಲ್ಲ.

    ಬಸ್ಸುಗಳನ್ನು ಡಿಪೋದಲ್ಲಿ ಹಾಕಿರುವ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ಮುಂದುವರಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರನ್ನಾಗಿ ಮಾಡಬೇಕು ಅನ್ನೋದ್ರಿಂದ ಹಿಡಿದು ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಸರ್ಕಾರ ಪ್ರತಿಭಟನಾನಿರತ ಸಿಬ್ಬಂದಿಯ ಪ್ರತಿನಿಧಿಗಳ ಜೊತೆಗೆ ಸಂಧಾನಕ್ಕೆ ಗಂಭೀರ ಪ್ರಯತ್ನ ಮಾಡಿದಂತಿಲ್ಲ.

    ಕೆಎಸ್‍ಆರ್‍ಟಿಸಿ ಸಿಬ್ಬಂದಿಯನ್ನು ಪ್ರತಿನಿಧಿಸುವ ಸಿಐಟಿಯು ಅಧ್ಯಕ್ಷ ಅನಂತ್ ಸುಬ್ಬರಾವ್ ಜೊತೆಗೆ ನಿನ್ನೆಯಷ್ಟೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಸಿಐಟಿಯು ಪಾಲ್ಗೊಂಡಿಲ್ಲ. ಅಷ್ಟೇ ಅಲ್ಲದೇ ಈ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಸಿಐಟಿಯು ಹೇಳಿದೆ. ಇತ್ತ ಬೆಂಗಳೂರಲ್ಲಿ ರೈತರು ನಡೆಸಿದ್ದ ಹೋರಾಟದಲ್ಲಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯೂ ಪಾಲ್ಗೊಂಡಿದ್ದರು. ಈ ವೇಳೆ ಸಿಬ್ಬಂದಿಯನ್ನ ಸರ್ಕಾರ, ಪೊಲೀಸರನ್ನು ಬಳಸಿ ವಶಕ್ಕೆ ಪಡೆದು ಎಳೆದೊಯ್ದಿತ್ತು. ಇದು ಸಾರಿಗೆ ಸಿಬ್ಬಂದಿ ಕೆಂಗಣ್ಣಿಗೆ ಕಾರಣವಾಗಿದೆ.

  • ಕ್ವಾರಂಟೈನ್‍ನಲ್ಲಿ ಇರ್ಬೇಕಾದ ದಂಪತಿ ಓಡಾಟ- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ

    ಕ್ವಾರಂಟೈನ್‍ನಲ್ಲಿ ಇರ್ಬೇಕಾದ ದಂಪತಿ ಓಡಾಟ- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ

    ಬೆಂಗಳೂರು: ಕೊರೊನಾ ಮಹಾಮಾರಿ ರಾಜ್ಯಕ್ಕೆ ಒಕ್ಕರಿಸಿ ತಾಂಡವವಾಡುತ್ತಿದ್ದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಕೈಗೆ ಸೀಲ್ ಹಾಕಿ ಕ್ವಾರಂಟೈನ್ ನಲ್ಲಿ ಇರಿ ಅಂದರೂ ಜನ ಮಾತ್ರ ಹೊರಗಡೆ ಓಡಾಡುತ್ತಾನೆ ಬಂದಿದ್ದಾರೆ. ಇಂದು ಕೂಡ ಇದೇ ರೀತಿಯಲ್ಲಿ ದಂಪತಿ ಮೆಜೆಸ್ಟಿಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.

    ಹೈದರಾಬಾದ್‍ನಿಂದ ಆಗಮಿಸಿರೋ ದಂಪತಿ ಕ್ವಾರಂಟೈನ್ ಸೀಲ್ ಇದ್ದರೂ ಮೆಜೆಸ್ಟಿಕ್‍ನಲ್ಲಿ ಓಡಾಡಿದ್ದಾರೆ. ಚಿತ್ರದುರ್ಗಕ್ಕೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾರೆ. ಈ ವೇಳೆ ದಂಪತಿ ಕೈಯಲ್ಲಿ ಸೀಲ್‍ನೋಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಾಬರಿಗೊಳಗಾಗಿದ್ದಾರೆ. ಕೊನೆಗೆ ಆಟೋ ಮೂಲಕ ಜಯನಗರ ಸೌತ್ ಅಂಡ್‍ಗೆ ದಂಪತಿ ತೆರಳಿದ್ದಾರೆ.

    ಇತ್ತ ಮತ್ತೊಬ್ಬ ಹೋಮ್ ಕ್ವಾರಟೈನ್ ಕೂಡ ಮೆಜೆಸ್ಟಿಕ್ ನಲ್ಲಿ ಇಂದು ಪತ್ತೆಯಾಗಿದ್ದಾನೆ. ಟ್ರೈನ್ ಇಳಿದು ತಮ್ಮ ತಮ್ಮ ಊರಿಗೆ ಹೋಗೋದಕ್ಕೆ ಹೊರ ರಾಜ್ಯದವರು ಮೆಜೆಸ್ಟಿಕ್ ಕಡೆ ಬರುತ್ತಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಿಂದ ಬಂದಿರುವ ವ್ಯಕ್ತಿಯೊಬ್ಬ ಬಾಗಲಕೋಟೆ ಬಸ್ ಹತ್ತಲು ಬಂದಿದ್ದಾನೆ.

    ಈ ವೇಳೆ ಆತನ ಕೈಯಲ್ಲಿ ಕ್ವಾರಂಟೈನ್ ಸೀಲ್ ನೋಡಿದ ಕೆಎಸ್ ಆರ್ ಟಿಸಿ ಸಿಬ್ಬಂದಿ ಖಾಸಗಿ ವಾಹನದಲ್ಲಿ ತೆರಳುವಂತೆ ಹೇಳಿದ್ದಾರೆ. ಅಲ್ಲದೆ ಮೆಜೆಸ್ಟಿಕ್ ನಿಂದ ಹೊರ ಭಾಗದಲ್ಲೇ ಪೊಲೀಸರು ಕೂಡ ಆತನನ್ನು ತಡೆದಿದ್ದಾರೆ.

  • 35ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪುತ್ತೂರು-ಬೆಂಗ್ಳೂರು KSRTC ಬಸ್ ಪಲ್ಟಿ

    35ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪುತ್ತೂರು-ಬೆಂಗ್ಳೂರು KSRTC ಬಸ್ ಪಲ್ಟಿ

    ಬೆಂಗಳೂರು: ನೆಲಮಂಗಲದ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‍ಆರ್ ಟಿಸಿ ಬಸ್, ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಸ್ಥಳೀಯರು, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

    ಅಪಘಾತಕ್ಕೀಡಾದ ಬಸ್, ಪುತ್ತೂರಿನಿಂದ ಬೆಂಗಳೂರಿಗೆ ಬರುತ್ತಿತ್ತು. ಅಪಘಾತದಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

  • ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ಧಾರವಾಡ: ಕೆಎಸ್ಆರ್‌ಟಿಸಿ ನಿರ್ವಾಹಕನೊಬ್ಬ ವೃದ್ಧನ ಮೇಲೆ ಗೂಂಡಾವರ್ತನೆ ತೋರಿದ ಘಟನೆ ಧಾರವಾಡದ ಅಳ್ನಾವರದಲ್ಲಿ ನಡೆದಿದೆ.

    ಹಳಿಯಾಳ-ಚುಂಚವಾಡ ಮಾರ್ಗದ ಬಸ್‍ನಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಬಸ್ ಪಾಸ್ ಸಂಬಂಧ ವೃದ್ಧ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಅಳ್ನಾವರ ಬಸ್ ನಿಲ್ದಾಣಕ್ಕೆ ಬರ್ತಿದ್ದಂತೆಯೇ ಸಿಟ್ಟಿಗೆದ್ದ ಕಂಡಕ್ಟರ್ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

    ವೃದ್ಧ ಓಡಿ ಹೋದರೂ ಬಿಡದೇ ಅಟ್ಟಿಸಿಕೊಂಡು ಬಂದು ಕಂಡಕ್ಟರ್ ಗೂಂಡಾಗಿರಿ ಮೆರೆದಿದ್ದಾನೆ. ಪೊಲೀಸ್ ಠಾಣೆ ಎದುರಿನಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಪೌರುಷ ಸಖತ್ ವೈರಲ್ ಆಗಿದೆ.

  • ಎರಡನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಮುಷ್ಕರ

    ಎರಡನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಮುಷ್ಕರ

    -ಇಂದು ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಎಂದಿನಂತೆ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿವೆ. ಎಂದಿನಂತೆ ಬಸ್ ಗಳ ಸಂಚಾರ ಅರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮಂಗಳವಾರ ಬಂದ್ ಹಿನ್ನೆಲೆಯಲ್ಲಿ ಕೆಲ ಬಸ್ ಗಳು ಸಂಚಾರ ಆರಂಭಿಸಿದ್ದರೂ., ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಹೊರ ಬಂದಿದ್ದಾರೆ.

    ಮಂಗಳವಾರದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನಿರ್ಧರಿಸಿದೆ. ಮೆಜೆಸ್ಟಿಕ್‍ನಿಂದ ಬಸ್‍ಗಳು ಆಟೋ, ಓಲಾ, ಊಬರ್ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ರಾಯಚೂರು, ಬಳ್ಳಾರಿ ಹೊರತುಪಡಿಸಿ ಶಾಲಾ-ಕಾಲೇಜುಗಳಿಗಿಲ್ಲ ರಜೆ. ಎಂದಿನಂತೆ ಎಲ್ಲ ಶಾಲಾ-ಕಾಲೇಜುಗಳು ತೆರೆಯಲಿದ್ದು, ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

    ಇಂದು ಏನಿರುತ್ತೆ?
    ಸರ್ಕಾರಿ ಶಾಲೆ ಕಾಲೇಜು, ಸರ್ಕಾರಿ ಕಚೇರಿಗಳು, ಚಿತ್ರಪ್ರದರ್ಶನ, ಶಾಪಿಂಗ್ ಮಾಲ್, ಕ್ಯಾಬ್ ಸೇವೆ, ಮೆಟ್ರೋ ಸೇವೆ, ಹೋಟೆಲ್, ಎಪಿಎಂಸಿ ಮಾರುಕಟ್ಟೆ, ಬೀದಿಬದಿ ವ್ಯಾಪಾರ, ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ಹಾಲು, ತರಕಾರಿ ಸಿಗಲಿದೆ.

    ಇಂದು ಏನಿರಲ್ಲ?
    ಬಿಎಂಟಿಸಿ-ಕೆಎಸ್‍ಆರ್ ಟಿಸಿ ವಿರಳ ಸಂಚಾರ, ಆಟೋ ಸಂಚಾರದಲ್ಲಿ ವ್ಯತ್ಯಯ ಸಾದ್ಯತೆ, ಕೆಲ ಖಾಸಗಿ ಶಾಲಾ ಕಾಲೇಜುಗಳು, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ, ಕೆಲ ಗಾರ್ಮೆಂಟ್ಸ್, ಫ್ಯಾಕ್ಟರಿಗಳು ಕ್ಲೋಸ್.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎರಡು ದಿನಗಳ ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಗದಗ, ವಿಜಯಪುರ, ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.ಸ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಹೋರಾಟಗಾರರು ಅಡುಗೆ ಮಾಡಿ ಪ್ರತಿಭಟನೆ ನಡೆಸಿದರು. ಇಂದು ಸಹ ಹೋರಾಟ ಮುಂದುವರೆಯಲ್ಲಿದ್ದು, ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ರೈಲು ನಿಲ್ದಾಣದವರಗೆ ಪಾದಯಾತ್ರೆ ನಡೆಯಲಿದೆ. ನಂತರ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಬಾಗಲಕೋಟೆಯ ಎಪಿಎಂಸಿ ಬಳಿ ಎರಡು ಬಸ್‍ಗಳಿಗೆ ಕಲ್ಲು ತೂರಿದರು. ಹುಬ್ಬಳ್ಳಿಯಲ್ಲಿ ಇವತ್ತು ಕೂಡ ಸಾರಿಗೆ ಸ್ತಬ್ಧವಾಗಲಿದೆ. ಬ್ಯಾಂಕ್ ಸೇವೆ ಕೂಡ ಸ್ಥಗಿತವಾಗಲಿದೆ. ಬ್ಯಾಂಕ್, ಅಂಚೆ, ವಾಯುವ್ಯ ಸಾರಿಗೆ ಸೇರಿದಂತೆ ಹಲವಾರು ಇಲಾಖೆಯ ಕಾರ್ಮಿಕರು ಇಂದು ಸಾಮೂಹಿಕ ಪ್ರತಿಭಟನೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೆತ್‌ನೋಟ್ ಬರೆದಿಟ್ಟು KSRTC ಬಸ್ ಚಾಲಕ ಆತ್ಮಹತ್ಯೆಗೆ ಯತ್ನ

    ಡೆತ್‌ನೋಟ್ ಬರೆದಿಟ್ಟು KSRTC ಬಸ್ ಚಾಲಕ ಆತ್ಮಹತ್ಯೆಗೆ ಯತ್ನ

    – 5 ತಿಂಗ್ಳ ಮಗು ಜೊತೆ ಪತ್ನಿಯೂ ಆತ್ಮಹತ್ಯೆಯ ಎಚ್ಚರಿಕೆ

    ಹಾಸನ: ತನ್ನ ತಪ್ಪಿಲ್ಲದಿದ್ದರೂ 7 ವರ್ಷ ಹಳೆಯ ಪ್ರಕರಣಲ್ಲಿ ಮೇಲಧಿಕಾರಿಗಳು ಕಿರುಕುಳ ನೀಡುತ್ತಾರೆಂದು ಆರೋಪಿಸಿರುವ ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

    ಎರಡು ಪುಟಗಳ ಡೆತ್‍ನೋಟ್ ಕೂಡ ಬರೆದಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸದೇ ಕಣ್ಣಾಮುಚ್ಚಾಲೆ ಆಡ್ತಿದ್ದಾರಂತೆ. ಇತ್ತ ತನ್ನ ಪತಿಗಾಗಿರುವ ಅನ್ಯಾಯ ಸರಿಪಡಿಸದೇ ಹೋದ್ರೆ, 5 ತಿಂಗಳ ಮಗುವಿನೊಂದಿಗೆ ವಿಷ ಕುಡಿದು ಸಾಯೋದಾಗಿ ಪತ್ನಿಯೂ ಎಚ್ಚರಿಕೆ ನೀಡಿದ್ದಾರೆ. 2010 ರಿಂದ ಕೆಎಸ್‍ಆರ್‍ಟಿಸಿ ರಾಮನಾಥಪುರ ವಿಭಾಗದಲ್ಲಿ ಬಸ್ ಚಾಲಕ ಕಮ್ ನಿರ್ವಾಹಕನಾಗಿ ಕೆಲಸ ಮಾಡಿದ್ದ ರಾಮು ಇಂದು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಏನಿದು ಪ್ರಕರಣ?:
    ರಾಮು 2011ರಲ್ಲಿ ಎಂದಿನಂತೆ ಕರ್ತವ್ಯದಲ್ಲಿದ್ದಾಗ ಮಧು ಎಂಬಾತ ಟಿಕೆಟ್ ಪಡೆಯದೇ ಕಿರಿಕಿರಿ ಉಂಟು ಮಾಡಿದ್ದ. ಸಣ್ಣ ವಿಷಯಕ್ಕೆ ಮಾತಿಗೆ ಮಾತು ಬೆಳೆದು ರಾಮು ಮತ್ತು ಮಧು ಕೈ ಕೈ ಮಿಲಾಯಿಸಿದ್ದರು. 7 ವರ್ಷಗಳ ಹಿಂದಿನ ಪ್ರಕರಣ, ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ರೆ ರಾಮು ಮೇಲೆ ಕೈ ಮಾಡಿದ್ದ ಮಧು ಅಣ್ಣ ಕಮಲ್ ಕುಮಾರ್ ಅದೇ ಕೆಎಸ್‍ಆರ್‍ಟಿಸಿ ಹಾಸನ ವಿಭಾಗದಲ್ಲಿ ಡಿಟಿಓ ಆಗಿದ್ದು, ತನ್ನ ತಮ್ಮನ ಮೇಲಿನ ಕೇಸ್ ವಾಪಸ್ ಪಡೆದುಕೋ ಎಂದು ಕಿರುಕುಳ ನೀಡ್ತಿದ್ರಂತೆ. ಅಷ್ಟೇ ಅಲ್ಲ ಕೇಸ್ ವಾಪಸ್ ಪಡೆಯದೇ, ಇಲಾಖೆಯಲ್ಲಿ ಹೇಗೆ ಕೆಲಸ ಮಾಡ್ತಿಯೋ ನೋಡ್ತೀನಿ ಅಂತ ಬೆದರಿಕೆ ಸಹ ಹಾಕ್ತಿದ್ದಾರೆ ಅಂತ ಆರೋಪಿಸಲಾಗಿದೆ.

    ಇದರಿಂದ ಬೇಸತ್ತ ರಾಮು, ತನಗಾಗುತ್ತಿರುವ ತೊಂದರೆ ಬಗ್ಗೆ 2 ಪುಟಗಳ ಡೆತ್‍ನೋಟ್ ಬರೆದಿಟ್ಟು 4 ದಿನಗಳ ಹಿಂದೆಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರಾಮು ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಇದುವರೆಗೂ ಎಫ್‍ಐಆರ್ ಕೂಡ ದಾಖಲು ಮಾಡಿಲ್ಲ ಅಂತ ಬಿಎಸ್‍ಪಿ ಜಿಲ್ಲಾಧ್ಯಕ್ಷ ಹರೀಶ್ ತಿಳಿಸಿದ್ದಾರೆ.

    ಇದರಿಂದ ಆತಂಕಗೊಂಡಿರೋ ರಾಮು ಪತ್ನಿ, ನನ್ನ ಪತಿಗೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ, ಪೊಲೀಸರು ನ್ಯಾಯ ಕೊಡಿಸದಿದ್ರೆ, ನನ್ನ 5 ತಿಂಗಳ ಮಗುವಿನೊಂದಿಗೆ ತಾನೂ ಹಾಸನ ಎಸ್ಪಿ ಕಚೇರಿ ಎದುರು ವಿಷ ಕುಡಿದು ಸಾಯುತ್ತೇನೆ ಅಂತ ಅಳಲು ತೋಡಿಕೊಂಡಿದ್ದಾರೆ.

    ಕಾನೂನು ಇರೋದೇ ತಪ್ಪು ಮಾಡಿದವರನ್ನು ಶಿಕ್ಷಿಸೋಕೆ. ಇಲ್ಲಿ ರಾಮು ತಪ್ಪು ಮಾಡಿದ್ರೆ, ಆತನ ಮೇಲೆ ಕ್ರಮ ಜರುಗಿಸಲಿ. ಅದು ಬಿಟ್ಟು ಹಳೇ ಕೇಸ್ ಕೆದಕಿ ಬೆದರಿಕೆಯೊಡ್ಡೋದು ಎಷ್ಟು ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ-ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ!

    ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ-ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ!

    ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕೆಎಸ್ ಆರ್ ಟಿಸಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಬಡೇಕೋಳ ಮಠ ಗ್ರಾಮದ ಬಳಿ ನಡೆದಿದೆ.

    ಮೃತರನ್ನು ಹುಬ್ಬಳ್ಳಿ ಮೂಲದ ಒರ್ವ ಹಾಗೂ ಚಾಲಕ ಅಶೋಕ ದುಂಡಿ ಎಂದು ಗುರುತಿಸಲಾಗಿದೆ. ಬಸ್ ಬೆಳಗಾವಿಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದು, ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಬಡೇಕೋಳ ಮಠ ಗ್ರಾಮದ ಸಮೀಪ ಪಲ್ಟಿ ಹೊಡೆದಿದೆ. ಬಸ್ ಬಿದ್ದ ರಭಸಕ್ಕೆ, ಬಸ್ ನಡಿ ಸಿಲುಕಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಬಸ್ ನಲ್ಲಿ ಒಟ್ಟು 18 ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದ್ದು, ಕೆಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಘಟನೆ ಸಂಬಂಧ ಹಿರೇಬಾಗೇವಾಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • KSRTC ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನ ಫೋಟೋ ತೆಗೆಯೋದ್ರಲ್ಲೇ ಬ್ಯುಸಿಯಾದ ಜನ!

    KSRTC ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನ ಫೋಟೋ ತೆಗೆಯೋದ್ರಲ್ಲೇ ಬ್ಯುಸಿಯಾದ ಜನ!

    ಬೀದರ್: ಕೆಸ್‍ಆರ್ ಟಿಸಿ ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ವೃದ್ಧನ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಆಘಾತಕಾರಿ ಘಟನೆಯೊಂದು ಬೀದರ್ ನ ಕೆಇಬಿ ರಸ್ತೆಯಲ್ಲಿ ನಡೆದಿದೆ.

    ನರಸಪ್ಪ ಎಂಬ ವೃದ್ಧ ನಿನ್ನೆ ರಾತ್ರಿ ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ವೃದ್ಧ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರ ಸಹಾಯಕ್ಕಾಗಿ ಅಗಲಾಚುತ್ತಿದ್ದರು. ಆದ್ರೆ ಯಾರೊಬ್ಬರು ಅವರಿಗೆ ಸಹಾಯ ಮಾಡಲಿಲ್ಲ. ಬದಲಾಗಿ ನರೆರೆದವರೆಲ್ಲರೂ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಬಳಿಕ 20 ನಿಮಿಷಗಳ ನಂತರ ಆಂಬುಲೆನ್ಸ್ ಗೆ ಕೆಲವರು ಫೋನ್ ಮಾಡಿದ್ರು.

    ಒಟ್ಟಿನಲ್ಲಿ ಅಪಘಾತವಾದಾಗ ಗಾಯಗೊಂಡವರಿಗೆ ಸಹಾಯ ಮಾಡುವುದನ್ನು ಮರೆತು ಮೊಬೈಲ್ ನಲ್ಲಿ ಚಿತ್ರೀಕರಿಸುವ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

  • ಲಗ್ನಪತ್ರಿಕೆ ಹಂಚಲು ಹೋದಾಗ ಸಿಕ್ಕಿದ್ಳು ಹಳೇ ಪ್ರಿಯತಮೆ- ವಿವಾಹದ ಮರುದಿನವೇ ಯುವಕ ಆತ್ಮಹತ್ಯೆ!

    ಲಗ್ನಪತ್ರಿಕೆ ಹಂಚಲು ಹೋದಾಗ ಸಿಕ್ಕಿದ್ಳು ಹಳೇ ಪ್ರಿಯತಮೆ- ವಿವಾಹದ ಮರುದಿನವೇ ಯುವಕ ಆತ್ಮಹತ್ಯೆ!

    ಮೈಸೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆ ಯುವಕ ಮೇ 8 ನೇ ತಾರೀಖು ತನ್ನ ಅತ್ತೆ ಮಗಳನ್ನು ಮದುವೆ ಆಗಬೇಕಿತ್ತು. ಆದರೆ, ವಿಧಿಯಾಟ ಬೇರೆ ಇತ್ತು. ಮದುವೆ ಕಾರ್ಡ್ ಹಂಚಲು ಮೈಸೂರಿಗೆ ಬಂದ ಅವನನ್ನು ಹಳೆ ಪ್ರಿಯತಮೆ ಪತ್ತೆ ಹಚ್ಚಿ ಮೇ 3 ರಂದು ದಿಢೀರನೆ ಅವನಿಂದ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಳು. ಇದರಿಂದ ಮನನೊಂದ ಯುವಕ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಹೀಗೆ ಸಾವಿಗೆ ಶರಣಾದ ಯುವಕನ ಹೆಸರು ಮಠಪತಿ. ಕೆಎಸ್‍ಆರ್‍ಟಿಸಿ ಕಂಡಕ್ಟರ್ ಆಗಿರೋ ಮಠಪತಿಗೆ ತನ್ನ ಅತ್ತೆ ಮಗಳ ಜೊತೆ ಮೇ 8 ರಂದು ರಾಣೆಬೆನ್ನೂರಿನಲ್ಲಿ ಮದುವೆ ನಿಶ್ಚಿಯವಾಗಿತ್ತು. ಇದಕ್ಕಾಗಿ ಸ್ನೇಹಿತರನ್ನು ಕರೆಯಲು ಮಠಪತಿ ಮೈಸೂರಿಗೆ ಬಂದಿದ್ದರು. ಆಗ, ಬೆಂಗಳೂರಿನಲ್ಲಿ ತಾನು ಡಿಎಡ್ ಓದುವಾಗ ಪ್ರೀತಿಸುತ್ತಿದ್ದ ಕಾವ್ಯಶ್ರೀ ಕಣ್ಣಿಗೆ ಬಿದ್ದಿದ್ದಾರೆ.

    ಕಾವ್ಯಶ್ರೀ ಈಗ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಕಾವ್ಯಶ್ರೀ ಅಪ್ಪ-ಅಮ್ಮ ಮೈಸೂರಲ್ಲೆ ಇದ್ದಾರೆ. ಹೀಗಾಗಿ, ಮೊನ್ನೆ ಮೈಸೂರಿಗೆ ಬಂದಿದ್ದ ಮಠಪತಿಯನ್ನು ಪತ್ತೆಹಚ್ಚಿದ ಕಾವ್ಯಶ್ರೀ, ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿ ಮೇ 3 ರಂದು ಮೈಸೂರಿನ ದೇವಸ್ಥಾನದಲ್ಲಿ ಮದುವೆ ಆಗಿದ್ದಾಳೆ. ಇದರಿಂದ ಬೇಸತ್ತ ಮಠಪತಿ ತಾನು ಉಳಿದಿದ್ದ ಮನೆಯಲ್ಲೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.