Tag: ಕೆಎಸ್‍ಆರ್‍ಟಿಸಿ ಬಸ್

  • KSRTC ಬಸ್ ಡಿಕ್ಕಿ- ಕಾರಿನಲ್ಲಿದ್ದ ಮೂವರ ದುರ್ಮರಣ

    KSRTC ಬಸ್ ಡಿಕ್ಕಿ- ಕಾರಿನಲ್ಲಿದ್ದ ಮೂವರ ದುರ್ಮರಣ

    ಯಾದಗಿರಿ: ಕೆಎಸ್‍ಆರ್‌ಟಿಸಿ ಬಸ್ (KSRTC Bus) ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಮೃತರನ್ನು ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಂಪೇಟೆಯ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45) ಎಂದು ಗುರುತಿಸಲಾಗಿದೆ. ಮೃತರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳು.

    ಈ ಘಟನೆ ಶಹಪುರ ತಾಲೂಕಿನ ಮದ್ದರಕಿ ಬಳಿಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಬಸ್ಸಿನಲ್ಲಿದ್ದ ಐದಾರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ

    ಮೃತರೆಲ್ಲರು ಇಂದು ಕಲಬುರಗಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಹಾಗೆಯೇ ಮದುವೆ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಭೀಕರ ಅಪಘಾತದಿಂದಾಗಿ ಕಾರು (Car) ರಸ್ತೆ ಮಧ್ಯದಲ್ಲಿ ನಿಂತಿದ್ದು, ಸಂಚಾರ ಅಸ್ತವ್ಯಸ್ಥವಾಗಿತ್ತು. ಇಬ್ಬರ ಮೃತದೇಹಗಳು ಕಾರಿನಲ್ಲೇ ಸಿಲುಕಿತ್ತು.

    ಸ್ಥಳಕ್ಕೆ ಬೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನ ಹೊರತೆಗೆದು ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

    ಭೀಮರಾಯನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.