Tag: ಕೆಎಟಿ

  • ರಾಯಚೂರು | RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ಕೆಎಟಿ ತಡೆ

    ರಾಯಚೂರು | RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ಕೆಎಟಿ ತಡೆ

    ಬೆಂಗಳೂರು/ರಾಯಚೂರು: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಲಿಂಗಸೂಗೂರು (Lingasuguru) ಪಿಡಿಒ ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ಕೆಎಟಿ (KAT)  ತಡೆ ನೀಡಿದೆ.

    ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಪಿಡಿಒ ಕೆಎಟಿ ಮೊರೆ ಹೋಗಿದ್ದರು. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ವಜಾಗೊಳಿಸಿ, ರಾಜಕೀಯ ಪ್ರೇರಿತರಾಗಿ ಅಮಾನತು ಮಾಡಲಾಗಿದೆ ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿ- ರಾಯಚೂರಿನ PDO ಅಮಾನತು

    ಇದೇ ಅ.12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಹಿನ್ನೆಲೆ ಪಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ಕೈಯಲ್ಲಿ ದಂಡ ಹಿಡಿದುಕೊಂಡು ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.

    ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದಕ್ಕೆ ಅಮಾನತು ಮಾಡಿ, ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಆದೇಶಿಸಿದ್ದರು. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ PDO ಅಮಾನತು – ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕ ಒತ್ತಾಯ

  • ಕೆಎಟಿ ಆದೇಶಕ್ಕೆ ಸಿಎಂ ಸೆಡ್ಡು- ಆಪ್ತ ಎಂಜಿನಿಯರ್‍ನನ್ನು ಉಳಿಸಿಕೊಳ್ಳಲು ಒಂದೇ ದಿನದಲ್ಲಿ ಟ್ರಾನ್ಸ್ ಫರ್ ಕ್ಯಾನ್ಸಲ್

    ಕೆಎಟಿ ಆದೇಶಕ್ಕೆ ಸಿಎಂ ಸೆಡ್ಡು- ಆಪ್ತ ಎಂಜಿನಿಯರ್‍ನನ್ನು ಉಳಿಸಿಕೊಳ್ಳಲು ಒಂದೇ ದಿನದಲ್ಲಿ ಟ್ರಾನ್ಸ್ ಫರ್ ಕ್ಯಾನ್ಸಲ್

    ಬೆಂಗಳೂರು: ಆಪ್ತ ಎಂಜಿನಿಯರ್‍ನನ್ನು ವಿಧಾನಸೌಧದಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ವರ್ಗಾವಣೆ ಆದೇಶವನ್ನೇ ಕ್ಯಾನ್ಸಲ್ ಮಾಡಿದ್ದಾರೆ.

    ವಿಧಾನಸೌಧದ ಸಹಾಯಕ ಕಾರ್ಯಪಾಲ ಅಭಿಯಂತರರಾಗಿ ಸುಮಾರು 3 ವರ್ಷದಿಂದ ಕೆಲಸ ಮಾಡುತ್ತಿದ್ದ ನಾಗೇಂದ್ರರನ್ನು ಆಗಸ್ಟ್ 13 ರಂದು ಸರ್ಕಾರ ಎಂಜಿನಿಯರ್‍ಗಳ ಸಾಮಾನ್ಯ ವರ್ಗಾವಣೆಯಲ್ಲಿ ಬಿಡಿಎಗೆ ವರ್ಗಾವಣೆ ಮಾಡಲಾಗಿತ್ತು. ನಾಗೇಂದ್ರ ಜಾಗಕ್ಕೆ ಶಿವಾಜಿ ಎ ಕವಳೆರವನ್ನ ನೇಮಿಸಲಾಗಿತ್ತು. ಆದ್ರೆ ಒಂದೇ ದಿನದಲ್ಲಿ ತಮ್ಮ ಪವರ್ ಬಳಿಸಿ ನಾಗೇಂದ್ರ ವರ್ಗಾವಣೆ ಆದೇಶವನ್ನ ಕ್ಯಾನ್ಸಲ್ ಮಾಡಿಸಿದ್ದಾರೆ.

    ನಾಗೇಂದ್ರರ ನಡೆಯನ್ನು ಪ್ರಶ್ನಿಸಿ ಶಿವಾಜಿ ಕೆಎಟಿ ಮೋರೆ ಹೋಗಿದ್ರು. ಕೆಎಟಿ ಕೂಡಾ ಶಿವಾಜಿ ಅವರ ವಾದವನ್ನ ಪುರಸ್ಕರಿಸಿ ಅಲ್ಲೇ ಮುಂದುವರೆಯುವಂತೆ ಆದೇಶ ನೀಡಿತ್ತು. ಆದ್ರೆ ತಮ್ಮ ಪ್ರಭಾವವನ್ನ ಬಳಸಿ ಸಿಎಂ ಸಿದ್ದರಾಮಯ್ಯರ ಮೂಲಕ ಕೆಎಟಿ ಆದೇಶಕ್ಕೆ ವಿರುದ್ಧವಾಗಿ ನಾಗೇಂದ್ರ ಶಿಫಾರಸ್ಸು ಪತ್ರ ತಂದಿದ್ದಾರೆ.

    ಸಿಎಂ ಕೂಡಾ ತಮ್ಮ ಪತ್ರದಲ್ಲಿ ವಿಧಾನಸೌಧಕ್ಕೆ ಇವರ ಕೆಲಸ ಅಗತ್ಯ ಇದೆ. ಇವರನ್ನೆ ಮುಂದುವರೆಸಿ ಅಂತ ಪತ್ರ ಬರೆದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • 2011ರ ಕೆಪಿಎಸ್‍ಸಿ ನೇಮಕಾತಿ: ಇಂದಿನ ಸಚಿವ ಸಂಪುಟದಲ್ಲಿ 362 ಮಂದಿ ಭವಿಷ್ಯ ನಿರ್ಧಾರ

    2011ರ ಕೆಪಿಎಸ್‍ಸಿ ನೇಮಕಾತಿ: ಇಂದಿನ ಸಚಿವ ಸಂಪುಟದಲ್ಲಿ 362 ಮಂದಿ ಭವಿಷ್ಯ ನಿರ್ಧಾರ

    ಬೆಂಗಳೂರು: 2011ನೇ ಸಾಲಿನ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಭವಿಷ್ಯ ಇವತ್ತು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಲಿದೆ.

    362 ಮಂದಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ರದ್ದತಿಗೆ ತಡೆಯಾಜ್ಞೆ ನೀಡಿದ್ದ ಕೆಎಟಿ(ಕರ್ನಾಟಕ ಅಡ್ಮಿನಿಸ್ಟ್ರೇಷನ್ ಟ್ರಿಬ್ಯುನಲ್), ಸಂಶಯ ಇರುವ 46 ಮಂದಿಯ ನೇಮಕಾತಿಯನ್ನು ಪರಾಮರ್ಶೆ ನಡೆಸಿ, ಉಳಿದವರನ್ನ ನೇಮಕಾತಿಗೊಳಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

    ಕೆಎಟಿ ಆದೇಶವನ್ನೇ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದು, ಸಂಶಯ ಇರುವ 46 ಮಂದಿ ಹೊರತುಪಡಿಸಿ ಉಳಿದವರನ್ನು ಷರತ್ತುಬದ್ಧವಾಗಿ ನೇಮಕಾತಿಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಕೆಎಟಿ ಆದೇಶವನ್ನು ಪ್ರಶ್ನಿಸಲು ಕೆಲ ಸಚಿವರ ವಿರೋಧವಿದ್ದು, 46 ಮಂದಿ ಹೊರತುಪಡಿಸಿ ಉಳಿದವರಿಗೆ ನೇಮಕಾತಿಗೊಳಿಸುವ ನಿರ್ಧಾರವನ್ನು ಕ್ಯಾಬಿಬೆಟ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸಂಶಯ ಇರುವ 46 ಮಂದಿ ನೇಮಕಾತಿ ಪರಾಮರ್ಶೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವ ಸಾಧ್ಯತೆಯಿದೆ.

    ಹೀಗಾಗಿ ಇವತ್ತಿನ ಕ್ಯಾಬಿನೆಟ್ ಕುತೂಹಲ ಮೂಡಿಸಿದ್ದು, 362 ಮಂದಿ ಭವಿಷ್ಯ ನಿರ್ಧಾರವಾಗಲಿದೆ.