Tag: ಕೆಇಆರ್ ಸಿ

  • ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

    ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

    ಬೆಂಗಳೂರು: ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ಎದುರಾಗಿದ್ದು, ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.

    ಪ್ರತಿ ಯೂನಿಟ್‌ಗೆ 1.50 ಪೈಸೆ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರತಿ ಯುನಿಟ್‌ಗೆ 1 ರೂ. 50 ಪೈಸೆ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ನಷ್ಟದ ನೆಪ ಹೇಳಿ ವಿದ್ಯುತ್ ದರ ಪ್ರತಿ ಯುನಿಟ್‌ಗೆ 1.50 ರೂ. ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಇದನ್ನೂ ಓದಿ: ಮಕ್ಕಳಿಗೂ ವಕ್ಕರಿಸಿತು ಹೊಸ ತಳಿ- ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಓಮಿಕ್ರಾನ್‌ ಪತ್ತೆ

    ಈಗಾಗಲೇ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಬೆಸ್ಕಾಂ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಶೀಘ್ರವೇ ವಿದ್ಯುತ್ ದರವೂ ಹೆಚ್ಚಳವಾಗುವ ಸಾಧ್ಯತೆ ಇದೆ.

  • ಹೊಸ ಮನೆ ಕಟ್ಟೋರಿಗೆ ಕೈ ಸರ್ಕಾರದಿಂದ ಬ್ಯಾಡ್ ನ್ಯೂಸ್!

    ಹೊಸ ಮನೆ ಕಟ್ಟೋರಿಗೆ ಕೈ ಸರ್ಕಾರದಿಂದ ಬ್ಯಾಡ್ ನ್ಯೂಸ್!

    ಬೆಂಗಳೂರು: ಚುನಾವಣೆಯ ಸಮೀಪಿಸುತ್ತಿದ್ದಂತೆ ಕೈ ಸರ್ಕಾರ ಹೊಸ ಮನೆ ಕಟ್ಟುತ್ತಿರುವವರಿಗೆ ಬ್ಯಾಡ್ ನ್ಯೂಸ್ ಬಂದಿದೆ. ಇನ್ನ್ಮುಂದೆ ಹೊಸ ಮನೆಗೆ ವಿದ್ಯುತ್ ಸಂಪರ್ಕ ಸಿಗಬೇಕಾದ್ರೆ ವಾಸಯೋಗ್ಯತೆ ಪ್ರಮಾಣ ಪತ್ರ OC (ಅಕ್ಯೂಪೆನ್ಸಿ ಸರ್ಟಿಫಿಕೇಟ್) ಕಡ್ಡಾಯವಾಗಿ ನೀಡಬೇಕಾಗಿದೆ. ಇಂಧನ ಇಲಾಖೆ KERC  (ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ) ಮೂಲಕ ಆದೇಶವನ್ನು ಹೊರಡಿಸಲಾಗಿದೆ.

    ಬೆಂಗಳೂರಿನಲ್ಲಿ ಬಹುತೇಕರು ಬಿ ಖಾತಾ ಹೊಂದಿರುವದರಿಂದ ಓಸಿ ಪಡೆಯುವುದು ತುಂಬಾ ಕಷ್ಟವಾಗಲಿದೆ. ಓಸಿ ಪಡೆಯಲು ಹಲವು ಕಟ್ಟುನಿಟ್ಟಿನ ನಿಯಮಗಳಿದ್ದು, ವಿದ್ಯುತ್ ಸಂಪರ್ಕ ಪಡೆಯಲು ಓಸಿ ಅಗತ್ಯವಿಲ್ಲ. ಚುನಾವಣೆಯ ಸಮಯದಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡ್ತಿದೆ ಅಂತಾ ಕರ್ನಾಟಕ ಕಾಂಟ್ರೆಕ್ಟರ್ ಗಳ ಹಾಗೂ ಬಿಲ್ಡರ್ಸ್ ಸಂಘ ಆರೋಪಿಸುತ್ತಿದೆ.

    2015ರಲ್ಲಿ ಇದೇ ಆದೇಶವನ್ನು ಹೊರಡಿಸಲಾಗಿತ್ತು. 2015ರಲ್ಲಿ ಈ ಕಾಯ್ದೆಗೆ ಜನರಿಂದ ವಿರೋಧ ವ್ಯಕ್ತವಾಗುತ್ತಲೇ ಸರ್ಕಾರ ತನ್ನ ಆದೇಶವನ್ನು ಹಿಂದೆ ಪಡೆದಿತ್ತು. ಆದೇಶದಲ್ಲಿ 5,300 ಚದರಡಿ ವಿಸ್ತೀರ್ಣ ಹೊಂದಿರುವ ಮನೆಗಳು ಕಡ್ಡಾಯವಾಗಿ 15 ರಿಂದ ಹತ್ತು ಅಡಿ ಜಾಗ ಟ್ರಾನ್ಸ್ ಫಾರ್ಮರ್ ಆಳವಡಿಸೋಕೆ ಬಿಡಬೇಕು. ಇಂಧನ ಇಲಾಖೆ ಸೂಚಿಸಿದ ಕಂಪೆನಿಯಿಂದಲೇ ಟ್ರಾನ್ಸ್ ಫಾರ್ಮರ್ ಪಡೆಯಬೇಕು ಅಂತಾ ಕಂಟ್ರಾಕ್ಟರ್‍ಗಳಿಗೆ ಒತ್ತಾಯ ಮಾಡಲಾಗ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

    ಸರ್ಕಾರದ ಈ ಕಾಯ್ದೆಗೆ ಕಂಟ್ರಾಕ್ಟರ್ಸ್ ಹಾಗೂ ಬಿಲ್ಡರ್ಸ್ ಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಹೊಸ ಆದೇಶವನ್ನು ರದ್ದುಗೊಳಿಸಬೇಕೆಂದು ಬಿಲ್ಡರ್ಸ್ ಆಸೋಸಿಯೇಷನ್ ಕೋರ್ಟ್ ಮೆಟ್ಟಿಲು ಏರಿದ್ದಾರೆ.