Tag: ಕೆಆರ್ ಪೇಟೆ

  • ಕಾಂಗ್ರೆಸ್‌ನತ್ತ ಮುಖ ಮಾಡಿದ ಕೆಆರ್‌ ಪೇಟೆ ಜೆಡಿಎಸ್‌ ಭಿನ್ನಮತೀಯರು

    ಕಾಂಗ್ರೆಸ್‌ನತ್ತ ಮುಖ ಮಾಡಿದ ಕೆಆರ್‌ ಪೇಟೆ ಜೆಡಿಎಸ್‌ ಭಿನ್ನಮತೀಯರು

    ಮಂಡ್ಯ: ಜಿಲ್ಲೆಯ ಕೆ.ಆರ್‌. ಪೇಟೆಯಲ್ಲಿ (KR Pete) ಜೆಡಿಎಸ್‌ನಲ್ಲಿ (JDS) ಭಿನ್ನಮತ ಸ್ಫೋಟಗೊಂಡಿದ್ದು, ಕಳೆದ ಉಪಚುನಾವಣೆಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು (B.L.Devaraj) ಅಂಡ್ ಟೀಮ್ ಇದೀಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಈ ಮೂಲಕ ಜೆಡಿಎಸ್‌‌ಗೆ ಟಕ್ಕರ್ ನೀಡಲು ಭಿನ್ನಮತೀಯರು ಮುಂದಾಗಿದ್ದಾರೆ.

    ಕೆಆರ್‌ಪೇಟೆಯಲ್ಲಿ‌ ಜೆಡಿಎಸ್‌ನಿಂದ ಹೆಚ್.ಡಿ.ಮಂಜುಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆ ಬಿ.ಎಲ್.ದೇವರಾಜು ಅಂಡ್ ಟೀಮ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಘೋಷಣೆ ಮಾಡಿದಾಗಿನಿಂದಲೂ ದೇವರಾಜು ಮತ್ತು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಮಾತ್ರ ಅಭ್ಯರ್ಥಿ ಬದಲಾವಣೆಯ ಮಾತು ಇಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಕೊನೆಯ ಸ್ಪರ್ಧೆ ತವರಲ್ಲೇ ಆಗಲಿ- ಸಿದ್ದು ಪರವಾಗಿ ದೆಹಲಿ ಅಂಗಳಕ್ಕೆ ಹೋಗಲು ಸಿದ್ಧವಾಯ್ತಾ ಟೀಂ ಮೈಸೂರು?

    ಈಗಾಗಲೇ ಮೊದಲು ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ಅಸಮಾಧಾನ ಹೊರಹಾಕಿದ್ದ ಬಿ.ಎಲ್.ದೇವರಾಜು ಅಂಡ್ ಟೀಮ್ ಇದೀಗ ಮತ್ತೊಂದು ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಇದ್ದು, ಜೆಡಿಎಸ್‌‌ನಲ್ಲಿ ಅಭ್ಯರ್ಥಿ ಬದಲಾವಣೆಯಾಗದೆ ಇದ್ರೆ ನಾನು ಪಕ್ಷ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದೇವರಾಜು ತಿಳಿಸಿದ್ದಾರೆ. ಅಲ್ಲದೇ ಒಂದು ವಾರ ಕಾದು ನೋಡುವುದಾಗಿ ಹೇಳಿರುವ ದೇವರಾಜು ಅಂಡ್ ಟೀಮ್ ಜೆಡಿಎಸ್ ನಾಯಕರಿಂದ ಸೂಕ್ತ ಸ್ಪಂದನೆ ದೊರಕದೆ ಇದ್ರೆ ಬಹುತೇಕ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಇದನ್ನೂ ಓದಿ: ನರೇಂದ್ರ ಮೋದಿ, ಅಮಿತ್ ಶಾ ಬಳಿಕ ಬೆಳಗಾವಿಗೆ ರಾಜನಾಥ್ ಸಿಂಗ್ ಪ್ರವಾಸ

  • ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ : ವಿಜಯೇಂದ್ರ

    ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ : ವಿಜಯೇಂದ್ರ

    ಮಂಡ್ಯ: ಚುನಾವಣೆ ಹತ್ತಿರ ಬಂದಿದೆ ಈಗ ಮಂಡ್ಯ ಉಸ್ತುವಾರಿ ಮಾತೇಕೆ ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ ಎಂದು ಬಿಜೆಪಿ (BJP) ಯುವ ಮೋರ್ಚಾದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದರು.

    ಮಂಡ್ಯದ ಹೊಳಲು ಗ್ರಾಮದಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಯಾವುದೇ ಜಿಲ್ಲೆಯ ಚುನಾವಣೆ ಉಸ್ತುವಾರಿ ಕೊಟ್ರು ನಿಭಾಯಿಸಲಿದ್ದೇನೆ. ಕಾಂಗ್ರೆಸ್ (Congress), ಜೆಡಿಎಸ್‌ (JDS) ಬಗ್ಗೆ ಮಂಡ್ಯ (Mandya) ಜಿಲ್ಲೆ ಜನ ಬೇಸತ್ತಿದ್ದಾರೆ. ಬಿಜೆಪಿ ಪರವಾದ ಭರವಸೆ ಜನರು ತೋರುತ್ತಿದ್ದಾರೆ. ಕೆ.ಆರ್ ಪೇಟೆ (KR Pete) ಗೆಲುವು ಮುಂದಿನ ವಿಧಾನಸಭೆ ಗೆಲ್ಲಲು ಪ್ರೇರಣೆ ಎಂದರು. ಇದನ್ನೂ ಓದಿ: ಗೋಕಾಕ್‍ನಲ್ಲಿ ಉದ್ಯಮಿ ಹತ್ಯೆ ಕೇಸ್ – ಮತ್ತಿಬ್ಬರ ಬಂಧನ

    ಕಾಂಗ್ರೆಸ್ ಕಿವಿ ಮೇಲೆ ಹೂ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮೂಡಿಸಲಿದ್ದಾರೆ. ಅವರ ನಡವಳಿಕೆಗೆ ಜನರು ಉತ್ತರ ನೀಡಲಿದ್ದಾರೆ. ಡಿಕೆಶಿ ಅವರ ಕಟ್ಟಡದಲ್ಲೇ 5 ಮಹಡಿ ಇದೆ. 3ನೇ ಮಹಡಿ ಯಾಕೆ ಅವರಿಗೆ? ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನ ಈಗಾಗಲೇ ಸಿಎಂ ಆಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಅವರಿಗೆಲ್ಲಾ ನಿರಾಸೆ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ 4ರ ಬಾಲಕ ಬಲಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು

    ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆಯಲ್ಲಿ (KR Pete) ಪಂಚರತ್ನ ಯಾತ್ರೆಯ (Pancharatna Yatra) ವೇಳೆ ಮುಖಂಡರು ಸ್ಟೀಲ್ ಬಿಂದಿಗೆಗಳನ್ನು (Pots) ಮಹಿಳೆಯರಿಗೆ ಉಡುಗೊರೆ (Gift) ನೀಡಿದ್ದಾರೆ. ಆದರೆ ಗೌರವಯುತವಾಗಿ ಬಿಂದಿಗೆಗಳನ್ನು ನೀಡದೇ ಕಾರ್ಯಕರ್ತರು ಬೇಕಾಬಿಟ್ಟಿ ಜನರತ್ತ ಎಸೆದಿದ್ದಾರೆ. ಜೆಡಿಎಸ್ (JDS) ಕಾರ್ಯಕರ್ತರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಭಾನುವಾರ ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ. ಇದಕ್ಕೂ ಮುನ್ನ ಹೆಚ್‌ಡಿಕೆಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಪೂರ್ಣ ಕುಂಭ ಸ್ವಾಗತಕ್ಕಾಗಿ ಅಭ್ಯರ್ಥಿ ಮಂಜು ಅವರು 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ ಪೂರ್ಣಕುಂಭ ಸಿದ್ಧತೆಗೆ ಕೇವಲ 1 ಸಾವಿರ ಬಿಂದಿಗೆಗಳನ್ನು ಬಳಸಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜೆಡಿಎಸ್ ಮುಖಂಡರು ಮಹಿಳೆಯರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.

    ಬಿಂದಿಗೆಗಳನ್ನು ಗೌರವಯುತವಾಗಿ ನೀಡದೇ ಕಾರ್ಯಕರ್ತರು ಜನರತ್ತ ಎಸೆದಿದ್ದಾರೆ. ಬಿಸ್ಕೆಟ್‌ನಂತೆ ಎಸೆಯುತ್ತಿದ್ದ ಬಿಂದಿಗೆಗಳನ್ನು ಕ್ಯಾಚ್ ಹಿಡಿಯಲು ಜನರು ಕ್ಯಾಂಟರ್ ಹಿಂದೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿಂದಿಗೆ ಎಸೆಯುತ್ತಿರುವ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಬಿಬಿಎಂಪಿ ಎಂಜಿನಿಯರ್‌ಗಳ ಸಂಬಳ ಕಟ್‌

    Live Tv
    [brid partner=56869869 player=32851 video=960834 autoplay=true]

  • ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು

    ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು

    – ಭೂಸ್ವಾಧೀನದ ಹೆಸರಲ್ಲಿ ಬಡವರ ಮನೆ ನೆಲಸಮ

    ಮಂಡ್ಯ: ಕೂಲಿ-ನಾಲಿ ಮಾಡಿ, ಒಂದಷ್ಟು ಸಾಲ ಮಾಡಿ ಖರೀದಿಸಿದ ಜಾಗದಲ್ಲಿ ಗೂಡೋಂದನ್ನ ಕಟ್ಟಿಕೊಂಡಿದ್ದರು. ಆದರೆ ಅವರು ಕಟ್ಟಿದ ಜಾಗ ಸರ್ಕಾರದ್ದು ಎಂದು ಭೂ-ಸ್ವಾಧೀನದ ಹೆಸರಿನಲ್ಲಿ ಮನೆಗಳನ್ನು ಏಕಾಏಕಿ ನೆಲಸಮ ಮಾಡಲಾಗಿದೆ. ಅಧಿಕಾರಿಗಳ ದರ್ಪಕ್ಕೆ ಅಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ಬೀದಿಗೆ ಬಿದ್ದಿದ್ದಾರೆ.

    ಮಂಡ್ಯದ ಕೆಆರ್ ಪೇಟೆ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಕೂಲಿ-ನಾಲಿ ಮಾಡಿದ ಹಣದಲ್ಲಿ ತಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳಬೇಕು ಎಂದು ಪಟ್ಟಣದ ಜಯನಗರ ಬಡಾವಣೆಯಲ್ಲಿ ಖಾಲಿ ನಿವೇಶನಗಳನ್ನು ಖರೀದಿಸಿದ್ದರು. ಅಷ್ಟೇ ಅಲ್ಲದೆ ಅಲ್ಲೊಂದು ಪುಟ್ಟ ಮನೆಗಳನ್ನು ಸಹ ಕಟ್ಟಿಕೊಂಡಿದ್ರು. ಆದರೆ ಈಗ ಅಧಿಕಾರಿಗಳು ಏಕಾಏಕಿ ಧಾವಿಸಿ ನೀವು ಮನೆ ಕಟ್ಟಿರುವ ಜಾಗ ಸರ್ಕಾರದ್ದು ಎಂದು ಸುಮಾರು 6 ಮನೆಗಳನ್ನು ಡೆಮಾಲಿಷ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ 

    ಈ ಜಾಗವನ್ನು 1975ರಲ್ಲಿ ವೆಂಕಟೇಶ್ ಎಂಬವರು ಖರೀದಿ ಮಾಡಿದ್ದಾರೆ. ಇದಾದ ಬಳಿಕ ಹಲವಾರು ಜನರಿಗೆ ಜಾಗ ಮಾರಾಟ ಮಾಡಲಾಗಿದೆ. ಅದರಿಂದ 1995 ರಲ್ಲಿ ನಿವೇಶನವನ್ನು ತಾಲೂಕಿನ ಒಂದಷ್ಟು ರೈತರು ಹಾಗೂ ಕೂಲಿ ಕೆಲಸ ಮಾಡ್ತಿದ್ದವರು ಖರೀದಿಸಿದ್ದರು. ಇದಾದ ಬಳಿಕ ಸ್ವತಃ ಅಧಿಕಾರಿಗಳೇ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿ ಅನ್ಯಾಕ್ರಾಂತವನ್ನು ಕೂಡ ನೀಡಿದ್ದಾರೆ.

    ಹಲವು ವರ್ಷಗಳಿಂದ ಕಂದಾಯ ಕಟ್ಟುವುದರ ಜೊತೆಗೆ ಅಧಿಕಾರಿಗಳು ನಮೂನೆ 3 ಅನ್ನು ಕೂಡ ಕೊಟ್ಟಿದ್ದಾರೆ. ಹೀಗೆ ಎಲ್ಲ ದಾಖಲಾತಿಗಳು ಇದ್ರೂ ಕೂಡ ಅಧಿಕಾರಿಗಳು ಹೊಸ ನಕಾಶೆಯನ್ನ ಸಿದ್ಧಪಡಿಸಿಕೊಂಡು ಈ ಜಾಗ ಸರ್ಕಾರದ್ದು, ಇಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟುತ್ತೇವೆ ಎಂದು ಮನೆ ಕೆಡವಿದ್ದಾರೆ ಎಂದು ಮನೆ ಕಳೆದುಕೊಂಡವರು ಆರೋಪ ಮಾಡ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇಲಿಜ್ವರ – 39 ಪ್ರಕರಣಗಳು ಪತ್ತೆ

    ಅಧಿಕಾರಿಗಳು ಮಾತ್ರ ಈ ಜಾಗದಲ್ಲಿ ಹಿಂದೆ ಕಟ್ಟೆಯೊಂದಿತ್ತು. ಹಾಸ್ಟೆಲ್ ನಿರ್ಮಾಣಕ್ಕಾಗಿ ಅಲ್ಲಿನ ಮನೆ ತೆರವುಗೊಳಿಸಿದ್ದೇವೆ ಎನ್ನುತ್ತಿದ್ದಾರೆ. ಮನೆ ಕಳೆದುಕೊಂಡವರು ಎಲ್ಲ ದಾಖಲೆ ಇದ್ದರೂ ಏಕಾಏಕಿ ತೆರವು ಮಾಡಿದ್ರು ಅಂತಿದ್ದಾರೆ. ಅದೇನೆ ಆಗ್ಲಿ ಇಲ್ಲಿ ಯಾರು ಯಾರಿಗೆ ಮೋಸ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಸಾಲ ಸೋಲ ಮಾಡಿ ಕಟ್ಟಿದ್ದ ಮನೆ ಕಳೆದುಕೊಂಡು ಜನರಂತು ಬೀದಿಗೆ ಬಿದ್ದಿದ್ದು ದುರಂತ.

  • ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು

    ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು

    ಮಂಡ್ಯ: ಕಳೆದ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಶಾಸಕ ನಾರಾಯಣಗೌಡ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟ ಸೇರಲು ಒಂದು ವಾರದಿಂದ ಸರ್ಕಸ್ ಮಾಡುತ್ತಿದ್ದಾರೆ.

    ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಾರಾಯಣಗೌಡ ಅವರು ಇದೀಗ ನೂತನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಒಂದು ವಾರದಿಂದ ಕ್ಷೇತ್ರದ ಕಡೆ ಬಾರದೆ ಬೆಂಗಳೂರಿನಲ್ಲೇ ಉಳಿದುಕೊಂಡು ತೆರೆಮರೆಯ ಕಸರತ್ತು ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡು ಕೆಆರ್‌ಪೇಟೆ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಮಲವನ್ನು ನಾರಾಯಣಗೌಡ ಅರಳಿಸಿದ್ದರು. ಈ ಮೂಲಕ ಯಡಿಯೂರಪ್ಪ ಅವರ ಸರ್ಕಾರ ರಾಜ್ಯದಲ್ಲಿ ಬರುವ ನಿಟ್ಟಿನಲ್ಲಿ ನಾರಾಯಣಗೌಡ ಅವರು ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಯಡಿಯೂರಪ್ಪ ಅವರು ನಾರಾಯಣಗೌಡ ಅವರ ಮೇಲಿನ ಪ್ರೀತಿ ಹಾಗೂ ಹುಟ್ಟುರಿನ ಒಲವಿಗಾಗಿ ಸಚಿವ ಸ್ಥಾನ ನೀಡಿ ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದ್ದರು. ಇದನ್ನೂ ಓದಿ: 2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್

    ಇದೀಗ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ದಿನದಿಂದಲೂ ಸಹ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ನಾರಾಯಣಗೌಡ, ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ನಾರಾಯಣಗೌಡರಿಗೆ ಇದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲೂ ಬಿಜೆಪಿ ಬಾವುಟ ಹಾರಿಸಬೇಕು ಎಂದರೆ ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಹೀಗಾಗಿ ಹೈಕಮಾಂಡ್ ನಾರಾಯಣಗೌಡ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎಂದು ನಾರಾಯಣಗೌಡ ಅವರ ಆಪ್ತರು ಹೇಳುತ್ತಿದ್ದಾರೆ.

  • ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಮಂಡ್ಯ: ಗ್ರಾಮ ವಾಸ್ತವ್ಯ ಮಾದರಿಯಲ್ಲಿ ರೈತರೊಂದಿಗೆ ವಾಸ್ತವ್ಯ ಮಾಡಲು ಕೃಷಿ ಸಚಿವ ಬಿಸಿ ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಮಂಡ್ಯದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆಗೆ ಚಾಲನೆ ನೀಡಿದರು. ತಮ್ಮ ಹುಟ್ಟಹಬ್ಬದ ದಿನದಂದೇ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

    ಕೆ.ಆರ್. ಪೇಟೆ ತಾಲೂಕಿನ ಮಡುವಿನಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ನಾನು ವಾಸ್ತವತೆಯನ್ನು ಅರಿಯುತ್ತಿದ್ದೇನೆ. ನಾನು ಅವರನ್ನು ಕಾಪಿ ಮಾಡುತ್ತಿಲ್ಲ. ಅವರು ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನಾನು ಬೆಳಗ್ಗಿಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸುತ್ತೇವೆ. ನಾವು ಮಾಡುವ ಕಾರ್ಯಕ್ರಮದಿಂದ ರೈತರ ಸಮಸ್ಯೆ ತಿಳಿಯುತ್ತದೆ. ತಿಂಗಳಿಗೆ ಮೂರು ದಿನ ಈ ಕಾರ್ಯಕ್ರಮ ಮಾಡುತ್ತೇನೆ. ಎಲ್ಲಾ ಜಿಲ್ಲೆ ಸುತ್ತಿದ ಬಳಿಕ ಸಿಎಂಗೆ ವರದಿ ನೀಡುತ್ತೇನೆ. ರೈತರ ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎಂದು ಯೋಚನೆ ಮಾಡುತ್ತೇವೆ. ನಾನು ರೈತನ ಮಗನಾಗಿದ್ದು, ಮೊದಲೆಲ್ಲಾ ನಾನು ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪೊಲೀಸ್ ಇಲಾಖೆಗೆ, ಸಿನಿಮಾಗೆ ಬಂದ ಮೇಲೆ ಅನುಭವ ಕಡಿಮೆಯಾಗಿದೆ. ಹೀಗಾಗಿ ಮೈ ಸ್ವಲ್ಪ ಬಗ್ಗುತ್ತಿಲ್ಲ. ಈಗ ಮತ್ತೆ ಮೈ ಬಗ್ಗಿಸಿದ್ರೆ ರೈತರ ರೀತಿ ಕೆಲಸ ಮಾಡುತ್ತೇವೆ ಎಂದರು.

    ಜಿಲ್ಲೆಯ ಮಡುವಿನಕೋಡಿ ಗ್ರಾಮದ ಹೊರಹೊಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಬಿಸಿ ಪಾಟೀಲ್ ಕಬ್ಬು ತರಗು ನಿವರ್ಹಣೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಚಾಲನೆ ನೀಡಿದರು. ಅಲ್ಲದೇ ಮಾಯಿಗೌಡ ಅವರ ಜಮೀನಿನಲ್ಲಿ ರೈತ ಮಹಿಳೆಯರೊಂದಿಗೆ ರಾಗಿ ನಾಟಿ ಮಾಡಿದರು. ಜೈ ಕಿಸಾನ್ ಘೋಷಣೆ ಕೂಗೂತ್ತ ಸಚಿವರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

    ಬಳಿಕ ಕೆಆರ್ ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿರುವ ಲಕ್ಷ್ಮೀ ದೇವಮ್ಮ ಅವರ ಸಮಗ್ರ ಕೃಷಿ ತೋಟಕ್ಕೆ ಭೇಟಿ ಕೊಟ್ಟ ಸಚಿವರು, ಭತ್ತದ ಗದ್ದೆ ವೀಕ್ಷಿಣೆ ಮಾಡಿ ಗೊಬ್ಬರವನ್ನು ಚೆಲ್ಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸು ಮತ್ತು ಕುರಿಗಳ ಮೇವಿಗಾಗಿ ಹಲ್ಲು ಕಟಾವು ಮಾಡಿದರು. ಬಿಸಿ ಪಾಟೀಲ್ ಅವರಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ತೋಟಗಾರಿಕಾ ಸಚಿವರಾದ ನಾರಾಯಣಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರಿಗೆ, ಕಾರ್ಯಕರ್ತರು ಶುಭಾಶಯ ಕೋರಿದರು.

    ರೈತರಿಗೆ ಆತ್ಮಸ್ಥೆರ್ಯ ತುಂಬುವ, ಸಮಗ್ರ ಕೃಷಿ ಮತ್ತು ಉತ್ಪಾದನಾ ವೆಚ್ಚ ಹಾಗೂ ರೈತರ ಆತ್ಮಹತ್ಯೆ ಕಾರಣ ಏನು ಎಂಬುದನ್ನು ತಿಳಿಯುವುದು. ಮಾದರಿ ರೈತರನ್ನು ಭೇಟಿ ಮಾಡಿ ಅವರ ಅನುಭವ ಬೇರೆ ರೈತರಿಗೆ ಮಾದರಿಯಾಗುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ತಿಂಗಳು 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7 ರಿಂದ ದಿನಪೂರ್ತಿ ರೈತರೊಂದಿಗೆ ಇದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲು ಸಚಿವರು ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

  • ಕೆ.ಆರ್.ಪೇಟೆ ಲೋಕಲ್ ವಾರ್‌ನಲ್ಲಿ ಬಿಜೆಪಿ ಮೇಲುಗೈ- 30 ವರ್ಷಗಳ ಇತಿಹಾಸ ಬದಲಾಯ್ತು ಎಂದ ನಾರಾಯಣ ಗೌಡ

    ಕೆ.ಆರ್.ಪೇಟೆ ಲೋಕಲ್ ವಾರ್‌ನಲ್ಲಿ ಬಿಜೆಪಿ ಮೇಲುಗೈ- 30 ವರ್ಷಗಳ ಇತಿಹಾಸ ಬದಲಾಯ್ತು ಎಂದ ನಾರಾಯಣ ಗೌಡ

    ಮಂಡ್ಯ: ಕಳೆದ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಭದ್ರ ಕೋಟೆಯನ್ನು ಛಿದ್ರ ಮಾಡಿದ್ದ ಸಚಿವ ನಾರಾಯಣ ಗೌಡ ಇದೀಗ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹೊಡೆದ ನೀಡಿದ್ದಾರೆ. ಈ ಮೂಲಕ ಮುಂದಿನ ಸಾರ್ವತ್ರೀಕ ಚುನಾವಣೆಗೆ ನಾರಾಯಣ ಗೌಡರು ಭದ್ರ ಬುನಾದಿ ಹಾಕಿಕೊಳ್ಳುತ್ತಿದ್ದಾರೆ.

    ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲಿವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪಾರುಪತ್ಯ ನಡೆದಿತ್ತು. ಆದರೆ ಕೆಆರ್‍ಪೇಟೆ ಉಪಚುನಾವಣೆಯಲ್ಲಿ ಮಂಡ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಮೂಲಕ ನಾರಾಯಣಗೌಡ ಕಮಲ್ ಮಾಡಿದ್ದರು. ಇದೀಗ ಅದೇ ರೀತಿ ತಮ್ಮ ಗೆಲುವಿನ ನಾಗಲೋಟ ಮುಂದುವರಿಸಲು ನಾರಾಯಣ ಗೌಡ ಇದೀಗ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.

     ಕೆಆರ್‌ಪೇಟೆ ಪುರಸಭೆಯಲ್ಲಿ ಬಿಜೆಪಿಯಿಂದ ಓರ್ವ ಅಭ್ಯರ್ಥಿ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ 14 ಮಂದಿಯನ್ನು ಸೆಳೆದುಕೊಂಡು ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಗೆಲ್ಲಿಸಕೊಳ್ಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್‍ಗೆ ಮರ್ಮಾಘಾತ ನೀಡಿದ್ದಾರೆ. ಸದ್ಯ ಪುರಸಭೆಯ ಅಧ್ಯಕ್ಷೆಯಾಗಿರುವ ಮಾದೇವಿ ಜೆಡಿಎಸ್ ಪಕ್ಷದಿಂದ 15ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇವರು ನಾರಾಯಣ ಗೌಡ ಬೆಂಬಲಿಗರು ಆಗಿರುವ ಕಾರಣ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

    ಚುನಾವಣೆಯಲ್ಲಿ ಪುರಸಭೆಯ ಅಧ್ಯಕ್ಷ ಮೀಸಲಾತಿ ಎಸ್‍ಟಿ ಜನಾಂಗಕ್ಕೆ ಲಭಿಸಿತ್ತು. ಹೀಗಾಗಿ ಅನಿವಾರ್ಯವಾಗಿ ಜೆಡಿಎಸ್ ಪಕ್ಷದವರು ನಾರಾಯಣಗೌಡ ಪರ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕೆಆರ್‌ಪೇಟೆ ಪುರಸಭೆ 23 ವಾರ್ಡ್ ಹೊಂದಿದ್ದು, ಈ ಪೈಕಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 1 ಹಾಗೂ ಪಕ್ಷೇತರ 1 ಇತ್ತು. ಹೀಗಿದ್ದರು ಸಹ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಪಡೆಯಲು ಸಾಧ್ಯವಾಗದೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾದೇವಿ ಅಧ್ಯಕ್ಷರಾಗಿದ್ದು, ಜೆಡಿಎಸ್ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನ ಹಿಡಿದಿದ್ದಾರೆ. ಸದ್ಯ ಮೀಸಲಾತಿ ವಿಚಾರ ನ್ಯಾಯಲಯದಲ್ಲಿ ಇರುವ ಕಾರಣ ಇನ್ನೂ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ. ಒಂದು ತಿಂಗಳ ಬಳಿಕ ಅಧಿಕೃತ ಆದೇಶ ಮಾಡಲಾಗುತ್ತದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುರಸಭೆ ಚುನಾವಣೆ ನಡೆದಿದ್ದು, 30 ವರ್ಷಗಳ ಇತಿಹಾಸ ಈಗ ಬದಲಾಗಿದೆ. ನಮ್ಮ ಅಭ್ಯರ್ಥಿಯೇ ಗೆಲುವು ಪಡೆದಿದ್ದು, ನಗರ ಅಭಿವೃದ್ಧಿ ಆಗಲಿದೆ. ಇಲ್ಲಿ ಉತ್ತಮ ತಂಡವನ್ನು ರಚಿಸಿದ್ದೆವು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎದುರಾಳಿಗಳೇ ಇಲ್ಲ ಕಾರಣ. ಚುನಾವಣೆ ಏಕಮುಖವಾಗಿ ನಡೆದಿದೆ. ನಾನು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಶುಭ ಕೋರುತ್ತೇನೆ ಎಂದರು.

  • ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆ ಗೆಲ್ಲುತ್ತೇವೆ: ವಿಜಯೇಂದ್ರ

    ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆ ಗೆಲ್ಲುತ್ತೇವೆ: ವಿಜಯೇಂದ್ರ

    ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆ ಉಪಸಮರ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

    ಶಿರಾ ನಗರದ ಕೋಟೆ ಬೀದಿ, ಸಂತೆಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚಾರ ಮಾಡಿ ಮತದಾರರನ್ನು ಭೇಟಿ ಮಾಡಿದರು. ಈ ವೇಳೆ ಟಿಕೆಟ್ ಅಕಾಂಕ್ಷಿಗಳಾದ ಎಸ್. ಆರ್.ಗೌಡ ಬಿ.ಕೆ.ಮಂಜುನಾಥ್ ವಿಜಯೇಂದ್ರ ಅವರಿಗೆ ಸಾಥ್ ನೀಡಿದರು.

    ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆಗೆ ಬಿಜೆಪಿ ಸಜ್ಜುಗೊಳ್ಳುತ್ತಿದೆ. ಶಿರಾ ಕ್ಷೇತ್ರದಲ್ಲಿ ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಇಲ್ಲಿಯೂ ಕಮಲವನ್ನು ಅರಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆಹೊಡೆದಿದ್ದರು. ನಮ್ಮನ್ನ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದ ಪರಿಣಾಮ, ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತದಿಂದ ಗೆಲುವು ಸಾಧಿಸಿದ್ದೇವು. ಅದೇ ರೀತಿ ಶಿರಾದಲ್ಲೂ ಗೆಲುವು ಸಾಧಿಸುತ್ತೇವೆ. ಬಿಜೆಪಿ ಪಕ್ಷದಲ್ಲು ಯಾರೇ ಅಭ್ಯರ್ಥಿ ಆದರೂ ಕಣಕ್ಕಿಳಿಸಿದವರನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಡುತ್ತೇವೆ.

  • ಪುರಸಭೆ ಅಧಿಕಾರಿಗಳಿಂದ ಮಾಂಸದಂಗಡಿಗಳ ಮೇಲೆ ದಾಳಿ – ಅಂಗಡಿ ಮಾಲೀಕರಿಗೆ ಎಚ್ಚರಿಕೆ

    ಪುರಸಭೆ ಅಧಿಕಾರಿಗಳಿಂದ ಮಾಂಸದಂಗಡಿಗಳ ಮೇಲೆ ದಾಳಿ – ಅಂಗಡಿ ಮಾಲೀಕರಿಗೆ ಎಚ್ಚರಿಕೆ

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿನ ಮಾಂಸದಂಗಡಿಗಳು, ಮದ್ಯದಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ಶುಚಿತ್ವಕ್ಕೆ ಗಮನ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೆಆರ್ ಪೇಟೆ ವ್ಯಾಪ್ತಿಯಲ್ಲಿ ಬರುವ ಹಲವು ಮಾಂಸದ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳಲ್ಲಿನ ತ್ಯಾಜ್ಯಗಳಗಳನ್ನು ಪಟ್ಟಣದ ಸಮೀಪವಿರುವ ದೇವೀರಮ್ಮಣ್ಣಿ ಕೆರೆಗೆ ಸುರಿಯುತ್ತಿದ್ದಾರೆ. ಇದರಿಂದ ಕೆರೆಯ ಸೌಂದರ್ಯ ಹಾಳು ಮಾಡುವುದರ ಜೊತೆಗೆ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪುರಸಭೆಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಅನ್ವಯ ಇಂದು ಪುರಸಭೆಯ ಅಧಿಕಾರಿಗಳು ಪಟ್ಟಣದ ಹಲವು ಅಂಗಡಿಗಳಿಗೆ ದಾಳಿ ಮಾಡಿದ್ದಾರೆ.

    ದಾಳಿ ಮಾಡಿ ಅಂಗಡಿಗಳಲ್ಲಿ ಇದ್ದ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬೀದಿಗಳಲ್ಲಿ ಸುರಿದಿರುವ ಕಸದ ರಾಶಿಗಳತ್ತ ಅಂಗಡಿ ಮಾಲೀಕರನ್ನು ಕರೆದುಕೊಂಡು ಹೋಗಿ ತರಾಟಗೆ ತೆಗೆದುಕೊಂಡಿದ್ದಾರೆ. ನಗರ ಸ್ವಚ್ಛವಾಗಿ ಇರಬೇಕು ಅಂದ್ರೆ, ಮೊದಲು ನೀವು ಶುಚಿತ್ವ ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಪಟ್ಟಣ ಗಲೀಜಾಗಿ ಇರುತ್ತದೆ. ಇನ್ನೂ ಮುಂದೆ ಕೆರೆಯ ಬಳಿ ಹಾಗೂ ರಸ್ತೆಗಳಲ್ಲಿ ಕಸ ಹಾಕಿದ್ದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

  • ಅಭಿವೃದ್ಧಿಯ ಮನವಿಯನ್ನು ಕ್ಷೇತ್ರದ ಮತದಾರರು ಪುರಸ್ಕರಿಸಿದ್ದಾರೆ: ವಿಜಯೇಂದ್ರ

    ಅಭಿವೃದ್ಧಿಯ ಮನವಿಯನ್ನು ಕ್ಷೇತ್ರದ ಮತದಾರರು ಪುರಸ್ಕರಿಸಿದ್ದಾರೆ: ವಿಜಯೇಂದ್ರ

    ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರದ ಜನ ತಮ್ಮ ಅಭಿವೃದ್ಧಿಯ ಮನವಿಯನ್ನು ಪುರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದ್ದಾರೆ.

    ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸುದಿನವಾಗಿದೆ ಎಂದರು.

    ಕೆಆರ್ ಪೇಟೆ ಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೆವು. ಅದೇನೆಂದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಹಾಗೆಯೇ ತಮ್ಮ ಊರಿನ ಮಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಅವರಲ್ಲಿ ತಮ್ಮ ತಾಲೂಕಿನ ಅಭಿವೃದ್ಧಿ ಮಾಡಬೇಕೆಂಬ ಕನಸು ಇತ್ತು. ಅವರ ಕನಸನ್ನು ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಮೂಲಕ ಪ್ರತಿಯೊಬ್ಬ ಮತದಾರರ ಮನೆ-ಮನೆಗೆ ಮತ್ತು ಮನ-ಮನಕ್ಕೆ ಮುಟ್ಟುವಂತಹ ರೀತಿಯಲ್ಲಿ ಯಶಸ್ವಿಯಾಗಿ ಪ್ರಚಾರ ಮಾಡಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಶಾಸಕ ಪ್ರೀತಂ ಗೌಡ, ಶಂಕರ್ ಗೌಡ ಪಾಟೀಲ್ ಮುಂತಾದ ನಮ್ಮ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಮನವಿ ಮಾಡಿದೆವು. ಇದೊಂದು ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಮನವಿಯನ್ನು ಮತದಾರರ ಮುಂದೆ ಇಟ್ಟಿದ್ದೆವು. ಹಾಗೆಯೇ ಇದೊಂದು ಬಾರಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಭಿವೃದ್ಧಿಗೆ ತಾವು ಬೆಂಬಲ ಕೊಡಬೇಕು ಎಂಬ ನಮ್ಮ ರಿಕ್ವೆಸ್ಟನ್ನು ಕ್ಷೇತ್ರದ ಮತದಾರರು ಪುರಸ್ಕರಿಸಿದ್ದು, ನಾರಾಯಣ ಗೌಡರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.  ಇದನ್ನೂ ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ