Tag: ಕೆಆರ್ ಪೇಟೆ ಶಾಸಕ

  • ನನ್ನ ಮುಟ್ಟೋ ಧೈರ್ಯ ಬಿಜೆಪಿಗಿಲ್ಲ- ಶಾಸಕ ನಾರಾಯಣಗೌಡ

    ನನ್ನ ಮುಟ್ಟೋ ಧೈರ್ಯ ಬಿಜೆಪಿಗಿಲ್ಲ- ಶಾಸಕ ನಾರಾಯಣಗೌಡ

    ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರುತ್ತಾರೆ ಎನ್ನಲಾಗಿದ್ದ ಕೆಆರ್‍ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಮಂಗಳವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದ್ರು.

    ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಗೌಡ, ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದೆ ಅಷ್ಟೆ. ಯಾವ ಅಸಮಾಧಾನವೂ ಇಲ್ಲ. ನನ್ನನ್ನು ಮುಟ್ಟುವ ಧೈರ್ಯ ಬಿಜೆಪಿಯವರಿಗೆ ಇಲ್ಲ. ಇವತ್ತಿನ ಅಧಿವೇಶನದಲ್ಲಿ ಹಾಜರಾಗುತ್ತೇನೆ ಅಂತ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಜೆಡಿಎಸ್ ಶಾಸಕ ಮುಂಬೈ ಆಸ್ಪತ್ರೆಗೆ ದಾಖಲು

    ವಿಮಾನ ನಿಲ್ದಾಣದಿಂದ ಶಾಸಕರನ್ನು ಕರೆದೊಯ್ಯಲು ಸಚಿವ ಸಾರಾ ಮಹೇಶ್, ವೆಂಕಟರಮಣಯ್ಯ ಕೂಡಾ ವಿಮಾನ ನಿಲ್ದಾಣಕ್ಕೆ ಬಂದಿದ್ರು. ನಾರಾಯಣಗೌಡ ಬೆಂಗಳೂರಿಗೆ ಬರುತ್ತಿದ್ದಂತೆಯೇ ನೇರವಾಗಿ ಎಚ್‍ಡಿ ಕುಮಾರಸ್ವಾಮಿ ಉಳಿದುಕೊಂಡಿದ್ದ ತಾಜ್‍ವೆಸ್ಟೆಂಡ್ ಹೋಟೆಲ್‍ಗೆ ತೆರಳಿದ್ರು. ಆದ್ರೆ ಕುಮಾರಸ್ವಾಮಿ ಅಷ್ಟೊತ್ತಿಗಾಗಲೇ ನಿದ್ದೆಗೆ ಜಾರಿದ್ದರಿಂದ ಅವರ ಭೇಟಿಗಾಗಿ ನಾರಾಯಣಗೌಡ ಅದೇ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv