Tag: ಕೆಆರ್ ಪೇಟೆ

  • Mandya | ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಕಚೇರಿಯಲ್ಲಿ ಯುವತಿ ಆತ್ಮಹತ್ಯೆ

    Mandya | ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಕಚೇರಿಯಲ್ಲಿ ಯುವತಿ ಆತ್ಮಹತ್ಯೆ

    ಮಂಡ್ಯ: ಮದುವೆ ಕ್ಯಾನ್ಸಲ್ (Marriage Cancel) ಆಗಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ (Mandya) ಜಿಲ್ಲೆ ಕೆಆರ್ ಪೇಟೆಯಲ್ಲಿ (KR Pete) ನಡೆದಿದೆ.

    ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಘಟನೆ ನಡೆದಿದೆ. ಕೆಆರ್ ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕಾವ್ಯ (26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಗೆ 15 ದಿನಗಳ ಹಿಂದೆ ಹಾಸನದ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು. ಆದರೆ ಹುಡುಗನ ಮನೆಯವರು ಇತ್ತೀಚೆಗೆ ಮದುವೆ ಬೇಡ ಎಂದು ಮದುವೆ ಕ್ಯಾನ್ಸಲ್ ಮಾಡಿದ್ದರು. ಇದರಿಂದ ಮನನೊಂದ ಯುವತಿ ಕಚೇರಿಯಲ್ಲಿ ಶುಕ್ರವಾರ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಇದನ್ನೂ ಓದಿ: Viral Video | ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶ ಕಳವು

    ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.  ಇದನ್ನೂ ಓದಿ: ಜೈಲಧಿಕಾರಿ ಮೇಲೆ ಹಲ್ಲೆ ನಡೆಸಿ ಇಬ್ಬರು ಕೈದಿಗಳು ಪರಾರಿ

  • ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿ – 20ಕ್ಕೂ ಹೆಚ್ಚು ಮಂದಿಗೆ ಗಾಯ

    ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿ – 20ಕ್ಕೂ ಹೆಚ್ಚು ಮಂದಿಗೆ ಗಾಯ

    – ಐವರ ಸ್ಥಿತಿ ಚಿಂತಾಜನಕ

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ (KSRTC) ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಐವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನಲ್ಲಿ ಜರುಗಿದೆ.

    ಕೆ.ಆರ್.ಪೇಟೆ ತಾಲೂಕಿನ ಕುಂದಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಬೆಳಗ್ಗೆ ಆಲೇನಹಳ್ಳಿ ಗ್ರಾಮದಿಂದ ಕೆ.ಆರ್.ಪೇಟೆಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಇದ್ದ ಬೃಹತ್ ಮರಕ್ಕೆ ಬಸ್ ಡಿಕ್ಕಿಯಾಗಿದೆ. ಪರಿಣಾಮ 20 ಜನರಿಗೆ ಗಂಭೀರ ಗಾಯವಾಗಿದ್ದು, ಈ ಪೈಕಿ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳೇ ಇದ್ದಾರೆ. ಹಲವು ಮಕ್ಕಳ ಕೈ ಕಾಲು ಮುರಿದು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ನಾಯಕನಾಗಿ ರಜತ್‌ ಪಾಟಿದಾರ್‌ ಆಯ್ಕೆ

    ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಲವರನ್ನು ಮೈಸೂರಿಗೆ ರವಾನೆ ಮಾಡಲಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು

  • ವಯನಾಡು ಭೂಕುಸಿತ ದುರಂತ; ಒಂದೇ ಚಿತೆಯಲ್ಲಿ ಅಜ್ಜಿ-ಮೊಮ್ಮಗನ ಅಂತ್ಯಕ್ರಿಯೆ

    ವಯನಾಡು ಭೂಕುಸಿತ ದುರಂತ; ಒಂದೇ ಚಿತೆಯಲ್ಲಿ ಅಜ್ಜಿ-ಮೊಮ್ಮಗನ ಅಂತ್ಯಕ್ರಿಯೆ

    ಮಂಡ್ಯ: ಕೇರಳದ (Kerala) ವಯನಾಡಿನ ಗುಡ್ಡ ಕುಸಿತದಲ್ಲಿ (Wayanad Landslides) ಸಾವನ್ನಪ್ಪಿದ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಮತ್ತು ಮೊಮ್ಮಗನ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯರಾತ್ರಿ ನೆರವೇರಿಸಲಾಯಿತು.

    ಸೋಮವಾರ ಮಧ್ಯರಾತ್ರಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಒಂದೇ ಕುಟುಂಬದ ಅನಿಲ್, ಝಾನ್ಸಿ, ನಿಹಾಲ್, ದೇವರಾಜು, ಲೀಲಾವತಿ ಕಾಣೆಯಾಗಿದ್ದರು. ಬಳಿಕ ಅನಿಲ್, ಝಾನ್ಸಿ, ದೇವರಾಜು ಗಾಯಾಳುಗಳ ಸ್ಥಿತಿಯಲ್ಲಿ ಸಿಕ್ಕರು. ಆದರೆ ನಿಹಾಲ್ ಮತ್ತು ಲೀಲಾವತಿ ಅವರ ಸುಳಿವು ದೊರೆತಿರಲಿಲ್ಲ. ಇದನ್ನೂ ಓದಿ: ಬೆಂಗಳೂರಿನಿಂದ ವಯನಾಡಿಗೆ ಬಸ್ಸು ಸಂಚಾರ ಆರಂಭ

    ಗುರುವಾರ ಮಧ್ಯಾಹ್ನ ಲೀಲಾವತಿ ಹಾಗೂ ನಿಹಾಲ್ ಶವಗಳು ಮಣ್ಣಿನ ಅಡಿಯಲ್ಲಿ ಪತ್ತೆಯಾದವು. ನಂತರ ವಯನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಗುರುವಾರ ಮಧ್ಯರಾತ್ರಿ ಇವರ ಶವಗಳನ್ನು ಕತ್ತರಿಘಟ್ಟ ಗ್ರಾಮಕ್ಕೆ ತರಲಾಯಿತು. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

    ಮೃತದೇಹಗಳು ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು, ನೆಂಟರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅವರ ಜಮೀನಿನಲ್ಲಿ ಅಜ್ಜಿ, ಮೊಮ್ಮಗನನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: Wayanad Landslides| ಅಣ್ಣನ ತಿಥಿ ಮಾಡಲು ಹೋಗಿದ್ವಿ, ಬದುಕಿ ಬಂದಿದ್ದೇ ನಮ್ಮ ಪುಣ್ಯ: ಭೂಕುಸಿತದ ಭೀಕರತೆ ಬಿಚ್ಚಿಟ್ಟ ಕನ್ನಡಿಗ

  • ಲವ್ ಜಿಹಾದ್ ಆರೋಪ – ಮಂಡ್ಯದ ಹಿಂದೂ ಬಾಲಕಿ ಜೊತೆ ಯುವಕ ಪರಾರಿ!

    ಲವ್ ಜಿಹಾದ್ ಆರೋಪ – ಮಂಡ್ಯದ ಹಿಂದೂ ಬಾಲಕಿ ಜೊತೆ ಯುವಕ ಪರಾರಿ!

    – ದೂರು ದಾಖಲಾದ ಬಳಿಕ ಜೋಡಿಯನ್ನು ಪತ್ತೆಹಚ್ಚಿದ ಪೊಲೀಸರು

    ಮಂಡ್ಯ: ಅಪ್ರಾಪ್ತ ಹಿಂದೂ ಬಾಲಕಿಯನ್ನು (Minor Girl) ಪ್ರೀತಿ (Love) ಹೆಸರಲ್ಲಿ ಪುಸಲಾಯಿಸಿ ಅನ್ಯಧರ್ಮೀಯ ಯುವಕ ಕರೆದೊಯ್ದ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ (KR Pete) ನಡೆದಿದೆ.

    15 ವರ್ಷದ ಅಪ್ರಾಪ್ತ ಬಾಲಕಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಲ್ಲಿ ಕರೆದೊಯ್ದಿದ್ದಾನೆ. ಪಟ್ಟಣದ 19 ವರ್ಷದ ಯುವಕ ಸೈಯದ್ ತಬ್ರೀಜ್ ವಿರುದ್ಧ ಲವ್ ಜಿಹಾದ್ ಆರೋಪಿಸಲಾಗಿದೆ. ಬಾಲಕಿ ಪೋಷಕರಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಲಾಗಿದೆ. ದೂರಿನ ಬಳಿಕ ಪಟ್ಟಣ ಪೊಲೀಸರು ಬಾಲಕಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ. ಇದನ್ನೂ ಓದಿ: ʻಸ್ವಚ್ಛತೀರ್ಥ ಅಭಿಯಾನʼಕ್ಕೆ ರಾಜ್ಯ ನಾಯಕರು ಸಾಥ್‌ – ಹುಬ್ಬಳ್ಳಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಹ್ಲಾದ್‌ ಜೋಶಿ

    ಪ್ರಕರಣದ ಬಳಿಕ ಹಿಂದೂ ಸಂಘಟನೆಗಳಿಂದ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದೆ. ಇದನ್ನೂ ಓದಿ: ಕೋಚಿಮುಲ್‌ ನೇಮಕಾತಿ ಅಕ್ರಮ – ಶಾಸಕರ ಶಿಫಾರಸು ಪತ್ರ ನೀಡಿದ ಅಭ್ಯರ್ಥಿಗಳಿಗೆ ಇಡಿ ಶಾಕ್‌

    ಬಾಲಕಿ ಕರೆದೊಯ್ದು ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಹಿಂದೆ ಅನ್ಯ ಕೋಮಿನವರು ಲವ್ ಜಿಹಾದ್‌ಗೆ ಪ್ರಚೋದನೆ ನೀಡುತ್ತಿರುವುದಾಗಿ ಆರೋಪಿಸಿ ತನಿಖೆಗೆ ಆಗ್ರಹಿಸಲಾಗಿದೆ. ಇದನ್ನೂ ಓದಿ: ಉತ್ತರಾಯಣಕ್ಕೆ ಸೂರ್ಯ ಪಥ ಬದಲಾವಣೆ – ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇಗುಲದಲ್ಲಿ ಸೂರ್ಯ ರಶ್ಮಿ ಸ್ಪರ್ಶ

  • ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್

    ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್

    ಮಂಡ್ಯ: ಕಾವೇರಿ (Cauvery) ಮತ್ತು ಹೇಮಾವತಿ (Hemavati) ನೀರಿಗಾಗಿ ಸೆಪ್ಟೆಂಬರ್ 26ರಂದು ಕೆಆರ್ ಪೇಟೆ (KR Pete) ಬಂದ್‌ಗೆ (Bandh) ಕರೆ ನೀಡಲಾಗಿದೆ.

    ಕಾವೇರಿ ನೀರಿನ ಜೊತೆಗೆ ಹೇಮಾವತಿ ನೀರು ಉಳಿವಿಗಾಗಿ ಬಂದ್‌ಗೆ ಕರೆ ನೀಡಲಾಗಿದೆ. ರೈತ, ಕನ್ನಡ, ದಲಿತ, ಪ್ರಗತಿಪರ ಸಂಘಟನೆಗಳು ಬದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಜೆಡಿಎಸ್ ಹಾಗೂ ಬಿಜೆಪಿಯೂ ಬೆಂಬಲ ಸೂಚಿಸಿವೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ

    ಕೆಆರ್ ಪೇಟೆ ಭಾಗದಲ್ಲಿ ಉಪಯೋಗಕ್ಕೆ ಸಿಗುವುದು ಹೇಮಾವತಿ ನೀರು. ಕೆಆರ್‌ಎಸ್ ಡ್ಯಾಂನಲ್ಲಿ ನೀರು ಖಾಲಿಯಾದರೆ ಹೇಮಾವತಿಯಿಂದ ನೀರು ಬಿಡುಗಡೆಯಾಗಲಿದೆ. ಆಗ ಎರಡೂ ಡ್ಯಾಂನ ನೀರು ಖಾಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಎರಡು ಡ್ಯಾಂ ನೀರು ರಕ್ಷಣೆಗೆ ಆಗ್ರಹಿಸಿ ಕೆಆರ್ ಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಷುಲ್ಲಕ ಕಾರಣಕ್ಕೆ ಜಗಳ – ಯುವಕನ ಕೊಲೆಯಲ್ಲಿ ಅಂತ್ಯ

    ಕ್ಷುಲ್ಲಕ ಕಾರಣಕ್ಕೆ ಜಗಳ – ಯುವಕನ ಕೊಲೆಯಲ್ಲಿ ಅಂತ್ಯ

    ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ (Fight) ಯುವಕನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಮಂಡ್ಯ (Mandya) ಜಿಲ್ಲೆ ಕೆಆರ್ ಪೇಟೆ (K.R.Pete) ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಯೋಗೇಶ್ (32) ಕೊಲೆಯಾದ ದುರ್ದೈವಿ. ಪ್ರದೀಪ್ (31) ಹತ್ಯೆಗೈದ ದುಷ್ಕರ್ಮಿ. ಕೊಲೆಯಾದ ಯೋಗೇಶ್ ಹಾಗೂ ಆತನ ತಾಯಿ ಭಾಗ್ಯಮ್ಮ ಜೊತೆ ಪ್ರದೀಪ್ ಪದೇ ಪದೇ ಜಗಳ ಮಾಡುತ್ತಿದ್ದ. ಮಂಗಳವಾರ ಸಂಜೆಯೂ ಇದೇ ರೀತಿ ಜಗಳ ಶುರುವಾಗಿದ್ದು, ಕೋಪ ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಯೋಗೇಶ್ ತನ್ನ ಮನೆಯಲ್ಲಿದ್ದ ಚಾಕು ತಂದು ಯೋಗೇಶ್‌ಗೆ ಇರಿದಿದ್ದಾನೆ. ಇದನ್ನೂ ಓದಿ: ಬೆಲೆ ಬಾಳುವ ವಾಚ್‍ಗಾಗಿ ಯುವಕನ ಬರ್ಬರ ಹತ್ಯೆ

    ಚಾಕು ಇರಿತಕ್ಕೊಳಗಾದ ಯೋಗೇಶ್‌ನನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ. ಸದ್ಯ ಕೊಲೆಗೈದ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 2ನೇ ಮದುವೆಗೆ ಅಡ್ಡಿಯಾಗುತ್ತೆ ಎಂದು 14 ತಿಂಗಳ ಮಗುವನ್ನೇ ಕೊಂದ ಪಾಪಿ ತಂದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ

    ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ

    ಮಂಡ್ಯ: ಚುನಾವಣೆ (Election) ವೇಳೆ ಜನರಿಗೆ ಹಂಚಲು ನೀಡಿದ್ದ ಹಣವನ್ನು ಮತದಾರರಿಗೆ ತಲುಪಿಸದೇ ಯಾರಾದರೂ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಬಿಜೆಪಿ (BJP) ಪರಾಜಿತ ಅಭ್ಯರ್ಥಿ ಕೆಸಿ ನಾರಾಯಣಗೌಡ (K C Narayana Gowda) ಮನವಿ ಮಾಡಿದ್ದಾರೆ.

    ಮಂಡ್ಯದಲ್ಲಿ (Mandya) ಸೋಮವಾರ ಕೃತಜ್ಞತಾ ಸಭೆಯಲ್ಲಿ ಮಾತಾಡಿದ ಅವರು, ಮತದಾರರಿಗೆ ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿದೆ ಎಂದು ಆರೋಪಿಸದ್ದಾರೆ. ಯಾರಾದರೂ ಹಣ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಅಂಗಾಲಾಚಿದ್ದಾರೆ. ಅಲ್ಲದೇ ಆ ಹಣದಿಂದ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಗೆ ವಿನಿಯೋಗಿಸೋಣ ಎಂದು ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮಳೆಗೆ ಎರಡನೇ ಬಲಿ – ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

    ನಾನು ಈ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದ ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ. ಹಣ ಹಂಚಿಕೆ ಮಾಡದೇ ಇಟ್ಟುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಉತ್ತಮ ಕೆಲಸಗಳಿಗೆ ಬಳಸಿಕೊಳ್ಳೋಣ ಎಂದು ಹಣ ಪಡೆದು ಹಂಚದ ಮುಖಂಡರಿಗೆ ಮನವಿಮಾಡಿದ್ದಾರೆ.

    ಕ್ಷೇತ್ರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ (Congress) ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತ ಪಡೆದಿದ್ದರೆ ಕೆಸಿ ನಾರಾಯಣಗೌಡ ಅವರು 37,793 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ

  • ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ಅಖಾಡ ಗರಿಗೆದರಿದೆ. ಅದರಲ್ಲೂ ಹಾಸನ (Hassan) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಟಿಕೆಟ್ ಹಂಚಿಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ಫುಲ್ ಸೌಂಡ್ ಮಾಡ್ತಾ ಇದೆ. ಇಲ್ಲಿ ಭವಾನಿ ರೇವಣ್ಣ (Bhavani Revanna) ಬದಲಿಗೆ ಸ್ವರೂಪ್‌ಗೆ ‌(Swaroop) ಟಿಕೆಟ್ ನೀಡಿದರೆ ಕೇವಲ ಹಾಸನದಲ್ಲಿ ಮಾತ್ರವಲ್ಲ ಕೆಆರ್ ಪೇಟೆ (KR Pete) ಕ್ಷೇತ್ರದಲ್ಲಿ ಜೆಡಿಎಸ್ ಮೇಲೆ ಪ್ರಭಾವ ಬೀರಲಿದೆ.

    ಕಳೆದ 1-2 ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ವಿಚಾರ. ಹಾಸನದಿಂದ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಇಬ್ಬರು ರಾಜಿಯಾಗದ ಕಾರಣ ಟಿಕೆಟ್ ಬಿಕ್ಕಟ್ಟಿನ ಫೈಟ್ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಇದೇ ಶುಕ್ರವಾರ ದೇವೇಗೌಡರ ಸಮ್ಮುಖದಲ್ಲಿ ಇತಿಶ್ರೀ ಹಾಡಿ, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಮಾಡಲಾಗುತ್ತೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

    ಒಂದು ವೇಳೆ ಹಾಸನದಿಂದ ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‌ಗೆ ನೀಡಿದ್ದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ನಲ್ಲಿ ಒಂದಷ್ಟು ಡ್ಯಾಮೇಜ್ ಆಗೋದು ಗ್ಯಾರಂಟಿ. ಈ ಡ್ಯಾಮೇಜ್ ಕೇವಲ ಹಾಸನ ಕ್ಷೇತ್ರದಲ್ಲಿ ಮಾತ್ರವಲ್ಲ ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಮಸ್ಯೆ ಎದುರಾಗೋದು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

    ಏಕೆಂದರೆ ಕೆಆರ್ ಪೇಟೆ ಕ್ಷೇತ್ರದ ಮೇಲೆ ರೇವಣ್ಣ ಅವರ ಹಿಡಿತವಿದೆ. ಈಗಾಗಲೇ ಕೆಆರ್ ಪೇಟೆ ಜೆಡಿಎಸ್ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ರೇವಣ್ಣ ಆಪ್ತರಿಗೆ ಟಿಕೆಟ್ ನೀಡದೇ ಹೆಚ್‌ಡಿಕೆ ತಮ್ಮ ಆಪ್ತರಾಗಿರುವ ಹೆಚ್‌ಡಿ ಮಂಜುಗೆ ಟಿಕೆಟ್ ನೀಡಿದ್ದಾರೆ. ಈ ವಿಚಾರದಲ್ಲಿ ಬೇಸರಗೊಂಡು ರೇವಣ್ಣ ಆಪ್ತರಾದ ಬಿಎಲ್ ದೇವರಾಜು, ಬಸ್ ಕೃಷ್ಣೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದ್ದಾರೆ.

    ಹೀಗಿರುವಾಗ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದ್ರೆ, ರೇವಣ್ಣ ಬಯಸಿದ ಹಾಗೆ ಕೆಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಹಾಗೂ ಹಾಸನ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಕೊಡಿಸದಂತೆ ಆಗುತ್ತದೆ. ಹೀಗಾಗಿ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ರೇವಣ್ಣ ಬೆಂಬಲಿಗರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡದೇ ಇರಬಹುದು. ಇದೇ ಕಾರಣಕ್ಕೋ ಏನೋ ಕುಮಾರಸ್ವಾಮಿ ಕಳೆದ 2 ದಿನಗಳ ಹಿಂದೆ ಕೆಆರ್ ಪೇಟೆ ಭಾಷಣದ ವೇಳೆ, ನಮ್ಮ ನೆಂಟರೇ ಈ ಕ್ಷೇತ್ರಕ್ಕೆ ಬರಬಹುದು. ಅವರು ಬಂದು ಜೆಡಿಎಸ್ ಅಭ್ಯರ್ಥಿ ಸೋಲಿಸಿ ಎಂದು ಹೇಳಬಹುದು. ಅವರ ಕುತಂತ್ರಗಳಿಗೆ ಯಾರು ಒಳಗಾಗಬೇಡಿ ಎಂದು ಹೇಳಿದ್ದರು.

    ಒಟ್ಟಾರೆ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದರೆ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಪೆಟ್ಟು ಬೀಳಬಹುದು. ಅದೇ ಕಾರಣಕ್ಕೆ ಕುಮಾರಸ್ವಾಮಿ ಮೊದಲೇ ನಿರೀಕ್ಷಣಾ ಜಾಮೀನು ಹಾಕಿಕೊಂಡಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

  • ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

    ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

    ಮಂಡ್ಯ: ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದು ತಿಳಿದುಕೊಂಡಿದ್ದೀರಾ? ಮನಸ್ಸಿನಲ್ಲಿರುವ ಈ ಯೋಚನೆ ತೆಗೆದು ಹಾಕಿ. ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಇದನ್ನು ನೀವು ನಿಮ್ಮ ಕಣ್ಣಾರೆ ನೋಡಬೇಕು. ನಿಮ್ಮ ಆಸೆಯನ್ನು ಮಕ್ಕಳಾಗಿ ಈಡೇರಿಸುವ ಸವಾಲು ಸ್ವೀಕರಿಸಿದ್ದೇನೆ. ಅಲ್ಲಿಯವರೆಗೂ ನೀವು ಬದುಕಿರುತ್ತೀರಿ. ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು ಎಂದು ದೇವೇಗೌಡರ (HD Deve Gowda) ಬಗ್ಗೆ ಕುಮಾರಸ್ವಾಮಿ (HD Kumaraswamy) ಭಾವುಕರಾಗಿ ಮಾತನಾಡಿದರು.

    ಕೆಆರ್ ಪೇಟೆಯಲ್ಲಿ (KR Pete) ಮಾತನಾಡಿದ ಹೆಚ್‌ಡಿಕೆ, ದೇವೇಗೌಡರು 60 ವರ್ಷ ರಾಜಕೀಯ ಮಾಡಿದ್ದಾರೆ. ಅದರಲ್ಲಿ ಅಧಿಕಾರ ಮಾಡಿದ್ದು 10 ತಿಂಗಳು ಪ್ರಧಾನ ಮಂತ್ರಿಯಾಗಿ, 15 ತಿಂಗಳು ಸಿಎಂ ಆಗಿ, 2-3 ವರ್ಷ ನೀರಾವರಿ ಮಂತ್ರಿಯಾಗಿ. ಉಳಿದ ವರ್ಷಗಳು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಬಡವರು, ರೈತರ ಪರ ಕಾರ್ಯಕ್ರಮ ತರುವುದು ದೇವೇಗೌಡರ ಕನಸು. ಅವರ ಕನಸು ನನಸು ಮಾಡಲಿಕ್ಕೆ ನಾನು ಶ್ರಮಪಡುತ್ತಿದ್ದೇನೆ ಎಂದು ನುಡಿದರು.

    ನನಗೆ 2 ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಈಗ 3ನೇ ಬಾರಿ ಮುಖ್ಯಮಂತ್ರಿಯಾಗಲು ನನ್ನ ಹೋರಾಟವಲ್ಲ. ನಾನು 3ನೇ ಬಾರಿ ಸಿಎಂ ಆದರೂ ಮಣ್ಣಿಗೆ ಹೋಗುವಾಗ ನಾನು ಮಾಜಿ ಮುಖ್ಯಮಂತ್ರಿಯೇ. ನನ್ನ ಹೋರಾಟ ಬಡವರ ಬದುಕು ಸರಿಪಡಿಸಲು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಅಳೆದುತೂಗಿ ಹೈಕಮಾಂಡ್‌ಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಶಿಫಾರಸು ಮಾಡ್ತೇವೆ: ಜೋಶಿ

    ನನ್ನ ಈ ಹೋರಾಟ ಸ್ವಾರ್ಥಕ್ಕಲ್ಲ, ನನಗೆ ಜಾತಿ ಇಲ್ಲ. ಜಾತಿಯ ವ್ಯಾಮೋಹ ಬೇಡ. ನನ್ನ ಮೇಲೆ ವಿಶ್ವಾಸ ಇಡಿ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ಸೋಲಿಸಲು ನಮ್ಮವರೇ ಪ್ರಯತ್ನ ಮಾಡುತ್ತಿದ್ದಾರೆ. ಕೆಆರ್ ಪೇಟೆಯಲ್ಲಿ 30 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಜೆಡಿಎಸ್ ಗೆಲ್ಲಲಿದೆ. ಅದಕ್ಕೆಲ್ಲಾ ಬಲಿಯಾಗಬೇಡಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಸಮೀಕ್ಷೆಗಳನ್ನು ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಗಿಂತ 10-15 ಸ್ಥಾನ ಹೆಚ್ಚು ಗೆಲ್ಲುತ್ತೇವೆ. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು ಸಹಕರಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಹುಕ್ಕೇರಿ ಕ್ಷೇತ್ರದಲ್ಲಿ ನಿರ್ಣಯವಾಗದ ಉಮೇಶ್ ಕತ್ತಿ ಉತ್ತರಾಧಿಕಾರಿ: ಕುಟುಂಬದಲ್ಲಿ ಬಿರುಕಿಲ್ಲ ಎಂದು ಕಣ್ಣೀರಿಟ್ಟ ಕತ್ತಿ ಪುತ್ರ

  • ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ (Dowry) ಕಿರುಕುಳದ ದೂರನ್ನು ಸಹ ನೀಡಿದ್ದಳು. ಅಲ್ಲದೇ ನನಗೆ ವಿಚ್ಛೇದನ (Divorce) ಬೇಕು ಎಂದು ಕಳೆದ ತಿಂಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಳು.

    ಒಂದು ಕಡೆ ಕೆ.ಬಿ.ಚಂದ್ರಶೇಖರ್ ರಾಜಕೀಯದಲ್ಲಿ ಬೆಳವಣಿಗೆ ಪಡೆಯಬೇಕೆಂದು ಸರ್ಕಸ್ ಮಾಡ್ತಾ ಇದ್ದಾರೆ. ಇತ್ತ ಸಹೋದರ ಮಹಿಳೆಯ ಜೊತೆ ಸಿಕ್ಕಿ ಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ಈ ಪ್ರಕರಣ ಯಾವ ಆಯಾಮ ಪಡೆದುಕೊಳ್ಳುತ್ತದೆ ಎಂದು ಜನ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ