Tag: ಕೆಆರ್ ನಗರ

  • ಪ್ರಜ್ವಲ್ ರೇವಣ್ಣಗೆ ಇಂದು ಬಿಗ್ ಡೇ – ಕೇಸ್ ಖುಲಾಸೆಯಾದ್ರೂ ಇಲ್ಲ ಬಿಡುಗಡೆ ಭಾಗ್ಯ

    ಪ್ರಜ್ವಲ್ ರೇವಣ್ಣಗೆ ಇಂದು ಬಿಗ್ ಡೇ – ಕೇಸ್ ಖುಲಾಸೆಯಾದ್ರೂ ಇಲ್ಲ ಬಿಡುಗಡೆ ಭಾಗ್ಯ

    ಬೆಂಗಳೂರು: ಕೆ.ಆರ್.ನಗರ (KR Nagar) ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಭವಿಷ್ಯ ಇಂದು (ಬುಧವಾರ) ನಿರ್ಧಾರವಾಗಲಿದೆ.

    26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court) ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯೋ ಅಥವಾ ಅಲ್ಲವೋ ಎಂದು ಇಂದು ತೀರ್ಪು ನೀಡಲಿದೆ. ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಬಹಳ ಮಹತ್ವದ್ದಾಗಿರಲಿದೆ.ಇದನ್ನೂ ಓದಿ: Shivamogga | ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ – ಇಬ್ಬರು ದುರ್ಮರಣ, 13ಕ್ಕೂ ಹೆಚ್ಚು ಮಂದಿಗೆ ಗಾಯ

    ಈಗಾಗಲೇ ಕೆಆರ್ ನಗರ ಸಂತ್ರಸ್ತೆಯ ಅತ್ಯಾಚಾರ ಕೇಸ್‌ಲ್ಲಿ ವಾದ-ಪ್ರತಿವಾದ ಮುಕ್ತಾಯವಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು.30ಕ್ಕೆ ಆದೇಶ ಕಾಯ್ದಿರಿಸಿತ್ತು. ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇಂದಿನ ಪ್ರಕರಣದ ಕೇಸ್ ಖುಲಾಸೆಯಾದ್ರೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಮೂರು ಪ್ರಕರಣಗಳು ಬಾಕಿ ಇರೋದ್ರಿಂದ ಕೇಸ್ ಖುಲಾಸೆಯಾದ್ರೂ ಬಿಡುಗಡೆ ಆಗೋದು ಅನುಮಾನವಾಗಿದೆ.

    ಏನಿದು ಪ್ರಕರಣ?
    ಕೆ.ಆರ್.ನಗರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನು ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿಕೊಂಡು ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಇದೇ ಅಪಹರಣ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.

    ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು. ಹೇಳಿಕೆಯ ಮೇಲೆ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಸ್‌ಎಸ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು.

    ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್‌ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಬಳಿಕ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.ಇದನ್ನೂ ಓದಿ: ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

  • KSRTC ಬಸ್, ಕಾರು ಮುಖಾಮುಖಿ ಡಿಕ್ಕಿ – ಚಾಲಕ ಸಾವು, ಓರ್ವ ಗಂಭೀರ

    KSRTC ಬಸ್, ಕಾರು ಮುಖಾಮುಖಿ ಡಿಕ್ಕಿ – ಚಾಲಕ ಸಾವು, ಓರ್ವ ಗಂಭೀರ

    ಮೈಸೂರು: ಕೆಎಸ್‌ಆರ್‌ಟಿಸಿ ಬಸ್ (KSRTC Bus) ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮೈಸೂರು (Mysuru) ಜಿಲ್ಲೆ ಕೆ.ಆರ್ ನಗರ (KR Nagar) ತಾಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ.

    ಅಪಘಾತದಲ್ಲಿ ಕಾರು ಚಾಲಕ ಮೈಸೂರಿನ ಕನಕದಾಸನಗರ ನಿವಾಸಿ ಸುನೀಲ್ (34) ಮೃತಪಟ್ಟಿದ್ದು, ರಮೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಯಾದ ಸುನೀಲ್ ತಮ್ಮ ಕಾರಿನಲ್ಲಿ ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದರು. ಬಸ್ ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷನಾಗಿ ರೌಡಿಶೀಟರ್ ನೇಮಕ – ನಾನು ಶಿಫಾರಸು ಪತ್ರ ಕೊಟ್ಟಿಲ್ಲ: ದಿನೇಶ್ ಗುಂಡೂರಾವ್

    ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ ಗಾಯಗಳಾಗಿವೆ. ಕಾರಿನಲ್ಲಿದ್ದ ಉಳಿದವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆ: ದಿನೇಶ್ ಗುಂಡೂರಾವ್

  • ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

    ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

    ಮೈಸೂರು: ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ. ಆಕೆಯ ಜೊತೆ ನಾನು ಮಾತನಾಡಿಲ್ಲ. ದೂರನ್ನೂ ಕೊಡಿಸಿಲ್ಲ ಎಂದು ಕೆಆರ್ ನಗರದ (KR Nagar) ಶಾಸಕ ರವಿಶಂಕರ್ (D Ravishankar) ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

    ರೇವಣ್ಣ (HD Revanna) ಬಂಧನದಲ್ಲಿ ಕೆಆರ್ ನಗರ ಶಾಸಕ ರವಿಶಂಕರ್ ಕೈವಾಡವಿದೆ ಎಂಬ ಲಿಂಗೇಶ್ ಆರೋಪದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕಂಪ್ಲೆಂಟ್ ಕೊಟ್ಟಿದ್ದು ನಾನು ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು. ಇದರಲ್ಲಿ ಯಾರೋ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ಕರೆದಿದ್ದೇನೆ. ನನ್ನ ಹೆಸರನ್ನು ತಂದಿದ್ದಕ್ಕೆ ನಾನು ಮಾನನಷ್ಟ ಮೊಕದ್ದಮೆಯನ್ನು ಹಾಕುತ್ತೇನೆ ಎಂದರು. ಇದನ್ನೂ ಓದಿ: ದೆಹಲಿ ಬಳಿಕ ಅಹಮದಾಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

    ಕೆಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಕಾರಣ ನನ್ನ ಹೆಸರನ್ನು ಎಳೆಯುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಮಗ ನನ್ನ ಸಂಪರ್ಕದಲ್ಲಿಲ್ಲ. ದೂರು ಕೊಡುವ ಸಂದರ್ಭದಲ್ಲಿ ನಾನು ಚಿಕ್ಕೋಡಿಯ ನಿಪ್ಪಾಣಿಯಲ್ಲಿದ್ದೆ. ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನ್ನ ಹೆಸರು ಹಾಳು ಮಾಡುವ ನಿಟ್ಟಿನಲ್ಲಿ ಈ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶಾಸಕ ರವಿಶಂಕರ್‌ ಷಡ್ಯಂತ್ರದಿಂದ ರೇವಣ್ಣ ಅರೆಸ್ಟ್‌: ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌

    ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ವತಿಯಿಂದ ನಮಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದರು. ನಾನು ಇಲ್ಲಿ ಚುನಾವಣೆ ಮುಗಿದ ಮೇಲೆ ಅಲ್ಲಿಗೆ ಹೋಗಿದ್ದೆ. ನಾನು ಅಲ್ಲಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆ. ಇದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಜೊತೆಗೆ ಆ ಹುಡುಗನ ವಿಚಾರ ಅಥವಾ ಅವರ ತಾಯಿಯ ವಿಚಾರ ಯಾವುದೂ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಸಂಪರ್ಕದಲ್ಲೂ ಅವರಿಲ್ಲ. ನನಗೆ ಅದರ ಬಗ್ಗೆ ಅರಿವೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್

  • ಪಾದಯಾತ್ರೆಯ ವೇಳೆ ಶಾಸಕ ರಾಮದಾಸ್‍ಗೆ ಮಹಿಳೆಯಿಂದ ತರಾಟೆ

    ಪಾದಯಾತ್ರೆಯ ವೇಳೆ ಶಾಸಕ ರಾಮದಾಸ್‍ಗೆ ಮಹಿಳೆಯಿಂದ ತರಾಟೆ

    ಮೈಸೂರು: ಕ್ಷೇತ್ರದ ಸಮಸ್ಯೆಗಳನ್ನು ತಿಳಿಯಲು ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಕೈಗೊಂಡಿದ್ದ ಪಾದಯಾತ್ರೆ ವೇಳೆ ಮಹಿಳೆಯೊಬ್ಬರು ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಸ್‍ಎ ರಾಮದಾಸ್ ಕೆಲ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಸಮಸ್ಯೆ ಆಲಿಸಿದರು. ಆದರೆ ಈ ವೇಳೆ ಕೆಆರ್ ಕ್ಷೇತ್ರದ ವಾರ್ಡ್ ನಂ.1 ರ ಮಹಿಳೆ ನಿವಾಸಿಯೊಬ್ಬರು ಶಾಸಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ತರಾಟೆ ತೆಗೆದುಕೊಂಡಿದ್ದಾರೆ.

    ಮಹಿಳೆ ಸಮಸ್ಯೆ ಏನು?
    ಕೃಷ್ಣರಾಜ ಕ್ಷೇತ್ರದ ವಾರ್ಡ್ ನಂ.1 ರಲ್ಲಿ ಈ ಘಟನೆ ನಡೆದಿದ್ದು, ವಾರ್ಡ್ ನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಇದರಿಂದ ಮಳೆ ಬಂದ ವೇಳೆ ಮಳೆ ನೀರಿ ಸೇರಿದಂತೆ ಚರಂಡಿ ಕೊಳಚೆ ನೀರು ಮನೆಗೆ ನುಗ್ಗುತ್ತದೆ ಎಂದು ಹೇಳಿದರು. ಅಲ್ಲದೇ ಈ ಕುರಿತು ಹಲವು ಬಾರಿ ವಾರ್ಡ್ ಸದಸ್ಯರಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಏರು ಧ್ವನಿಯಲ್ಲಿ ಆರೋಪಿಸಿದ್ದರು.

    ಅನಿರೀಕ್ಷಿತ ಘಟನೆಯಿಂದ ವಿಚಲಿತರಾದ ಶಾಸಕರು ಬಳಿಕ ಮಹಿಳೆಗೆ ಸಮಾಧಾನ ಪಡಿಸಲು ಯತ್ನಿಸಿದರು. ಈ ವೇಳೆಯೂ ಮಹಿಳೆ ಸಮಾಧಾನಗೊಳ್ಳದ ಕಾರಣ ವಾಗ್ವಾದ ನಡೆಯಿತು. ಬಳಿಕ ಶಾಸಕರು ಸ್ವತಃ ವಾರ್ಡ್ ಗೆ ತೆರಳಿ ಪರಿಶೀಲನೆ ನಡೆಸಿ ಬಳಿಕ ಸಮಸ್ಯೆ ಪರಿಹರಿಸುವ ಕುರಿತು ಆಶ್ವಾಸನೆ ನೀಡಿದ್ದಾರೆ.

  • ಗ್ರಾಮಸ್ಥರಿಂದ ಕೋತಿಯ ತಿಥಿ : ಊರಿನವರಿಗೆ ಅನ್ನಸಂತರ್ಪಣೆ

    ಗ್ರಾಮಸ್ಥರಿಂದ ಕೋತಿಯ ತಿಥಿ : ಊರಿನವರಿಗೆ ಅನ್ನಸಂತರ್ಪಣೆ

    ಮೈಸೂರು: ಮನುಷ್ಯ ಸಾವನ್ನಪ್ಪಿದರೆ ತಿಥಿ ಮಾಡುವುದು ಸಾಮಾನ್ಯ, ಆದರೆ ಜಿಲ್ಲೆಯ ಗ್ರಾಮಸ್ಥರು ಕೋತಿಯೊಂದರ ತಿಥಿ ಮಾಡಿ ಸುದ್ದಿಯಾಗಿದ್ದಾರೆ.

    ಇದೇನಪ್ಪಾ! ಕೋತಿಗೆ ತಿಥಿಯಾ ಎಂದು ಹುಬ್ಬೇರಿಸಬೇಡಿ. ಹೌದು ಇದು ಆಶ್ಚರ್ಯ ಅನಿಸಿದರೂ ಅಕ್ಷರಶಃ ಸತ್ಯ. ಕೆಆರ್ ನಗರದ ಚುಂಚನಕಟ್ಟೆ ಗ್ರಾಮದಲ್ಲಿ ಜೂನ್ 26 ರಂದು ಆದಿಚುಂಚನಗಿರಿ ಶಾಲೆ ಸಮೀಪದ ವಿದ್ಯುತ್ ಕಂಬದಲ್ಲಿ ಕೋತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತ್ತು.

    ಸಾವನ್ನಪ್ಪಿದ್ದ ಆ ಕೋತಿಗೆ ಗ್ರಾಮಸ್ಥರು ಸೇರಿಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಮನುಷ್ಯ ತೀರಿಹೋದಾಗ ನಡೆಸುವ ಅಂತ್ಯ ಸಂಸ್ಕಾರದಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು.

    ಇಂದು ಗ್ರಾಮಸ್ಥರೆಲ್ಲರೂ ಸೇರಿ ಕೋತಿಗೆ ತಿಥಿಯನ್ನೂ ಮಾಡಿದ್ದಾರೆ. ಕೋತಿಯ ಸಮಾಧಿಗೆ ಹಾಲು ತುಪ್ಪ ಬಿಟ್ಟ ಗ್ರಾಮಸ್ಥರು, ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಅನ್ನ ಸಂತರ್ಪಣೆ ಕೂಡ ಮಾಡಿದ್ದಾರೆ.

    https://www.youtube.com/watch?v=2UQoFXMa-H0

  • ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮೈಸೂರು: ಜಿಲ್ಲೆಯ ಕೆಆರ್ ನಗರದ ಜೆಡಿಎಸ್ ಶಾಸಕ ಸಾರಾ ಮಹೇಶ್ ಸಭೆಯೊಂದರಲ್ಲಿ ತಮ್ಮ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಮೈಸೂರಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸರ್ಕಾರಿ ಶಿಕ್ಷಕರ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಪುತ್ರ ಜಯಂತ್ ರನ್ನು ನೆನೆದ ಅವರು ಭಾವುಕರಾದರು. ನನ್ನ ಹೆಸರು ಕೆಡಿಸುವ ಹುನ್ನಾರ ಮಾಡಿ ನನ್ನ ಮಗನ ಹಳೆಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ್ದಾರೆ. ಇಂತಹ ರಾಜಕಾರಣ ಬೇಕಾ? ನನಗೆ ಸಾಕಾಗಿದೆ ಎಂದು ಕಣ್ಣೀರು ಹಾಕಿದರು. ಮಗನನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು, ಮನೆಯಿಂದ ಹೊರಡುವಾಗಲೂ ಮಾತನಾಡಿಸಲು ಆಗಲಿಲ್ಲ ಎಂದರು.

    ಕಳೆದ ಕೆಲ ತಿಂಗಳ ಸಾರಾ ಮಹೇಶ್ ಅವರ ಪುತ್ರ ಯುವಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

    ಶಾಸಕ ಮಹೇಶ್ ಅವರ ಪುತ್ರನ ಸ್ನೇಹಿತನ ಚಿನ್ನದ ಸರ ಕದ್ದ ಕಳ್ಳ ವಿಡಿಯೋದಲ್ಲಿ ಒದೆತಿಂದ ಯುವಕನಾಗಿದ್ದು, ಕಳ್ಳತನ ಮಾಡಿರುವ ಕುರಿತು ಆರೋಪಿಯನ್ನು ವಿಚಾರಣೆ ನಡೆಸುವ ವೇಳೆ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನೂ ಓದಿ:  ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್