Tag: ಕೆಆರ್‌ಪೇಟೆ

  • ಮಂಡ್ಯ| ಧಾರಾಕಾರ ಮಳೆ- ಕುಸಿದು ಬಿದ್ದ ಮನೆ

    ಮಂಡ್ಯ| ಧಾರಾಕಾರ ಮಳೆ- ಕುಸಿದು ಬಿದ್ದ ಮನೆ

    ಮಂಡ್ಯ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿನ್ನೇನಹಳ್ಳಿ ಗ್ರಾಮದ ಪಾರ್ವತಮ್ಮ ಎಂಬ ಮಹಿಳೆಗೆ ಸೇರಿದ್ದ ಮನೆ ಮಳೆಯಿಂದ ಕುಸಿದು ಬಿದ್ದಿದೆ. ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಪಾರ್ವತಮ್ಮ ಅವರ ಮನೆ ಶನಿವಾರ ರಾತ್ರಿ ಕುಸಿದು ಬಿದ್ದಿದೆ. ಇದರಿಂದ ಪಾರ್ವತಮ್ಮ ಪ್ರಾಣಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರೆಡ್ಡಿ-ರಾಮುಲು

    ಮನೆ ಕುಸಿದು ಬಿದ್ದ ಕಾರಣ ಮನೆಯಲ್ಲಿ ಇದ್ದ ವಸ್ತುಗಳೆಲ್ಲವೂ ನಾಶವಾಗಿವೆ. ಪಾರ್ವತಮ್ಮ ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಧಿಕಾರ ಕಳೆದುಕೊಳ್ಳುವ ಭಯದಿಂದ ಸಿಎಂ ಜಾತಿ ಗಣತಿ ವರದಿ ಬಿಡುಗಡೆ ಪ್ರಸ್ತಾಪಿಸುತ್ತಿದ್ದಾರೆ: ಬೊಮ್ಮಾಯಿ

  • ಕನಸಿನ ಯೋಜನೆ ಉದ್ಘಾಟಿಸಿ ಕಾಂಗ್ರೆಸ್ ಸೇರಲು ನಾರಾಯಣಗೌಡ ತಯಾರಿ

    ಕನಸಿನ ಯೋಜನೆ ಉದ್ಘಾಟಿಸಿ ಕಾಂಗ್ರೆಸ್ ಸೇರಲು ನಾರಾಯಣಗೌಡ ತಯಾರಿ

    ಮಂಡ್ಯ: ಜೆಡಿಎಸ್‌ನಿಂದ (JDS) ಬಿಜೆಪಿಗೆ ಬಂದು ಗೆಲುವು ಪಡೆದು ಸಚಿವರಾಗಿರುವ ನಾರಾಯಣಗೌಡ (Narayana Gowda) ಮತ್ತೆ ಪಕ್ಷಾಂತರ ಮಾಡುತ್ತಾರೆ ಎಂದು ಅವರ ಆಪ್ತ ಮೂಲಗಳು ಖಚಿತವಾಗಿ ಹೇಳುತ್ತಿವೆ. ಮಾರ್ಚ್ 16ರಂದು ಕೆಆರ್‌ಪೇಟೆಯಲ್ಲಿ (K.R.Pet) ಜರುಗುವ ನಾರಾಯಣಗೌಡರ ಕನಸಿನ ಎರಡು ಸರ್ಕಾರಿ ಕಾರ್ಯಕ್ರಮವನ್ನು ಮುಗಿಸಿ ಕೈ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.

    ಜೆಡಿಎಸ್‌ನಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಜೆಡಿಎಸ್‌ನಿಂದ ಬಿಜೆಪಿ (BJP) ಪಕ್ಷಾಂತರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡಿವಿದ ಶಾಸಕರ ಪೈಕಿ ಮಂಡ್ಯ (Mandya) ಜಿಲ್ಲೆಯ ಕೆಆರ್‌ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸಹ ಒಬ್ಬರು. ಜೆಡಿಎಸ್‌ನಿಂದ ಬಿಜೆಪಿಗೆ ಹೋದ ಕಾರಣ ನಾರಾಯಣಗೌಡರ ಶಾಸಕ ಸ್ಥಾನ ಅನರ್ಹಗೊಂಡಿತು. ಬಳಿಕ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಗೆಲುವು ಪಡೆಯುವ ಮೂಲಕ ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿಯ ಗೆಲುವಿಗೆ ಪಾತ್ರರಾದರು. ಬಳಿಕ ನಾರಾಯಣಗೌಡರಿಗೆ ಬಿಜೆಪಿ ಎರಡು ಖಾತೆಯನ್ನು ನೀಡುವ ಮೂಲಕ ಸಚಿವರನ್ನಾಗಿ ಮಾಡಿತು. ಇದೀಗ ನಾರಾಯಣಗೌಡರಿಗೆ ಪಕ್ಷದಲ್ಲಿ ಏನಾಯಿತು ಏನೋ ಗೊತ್ತಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್‌ (Congress) ಸೇರುತ್ತೇನೆ ಎನ್ನುತ್ತಿದ್ದಾರೆ ಎಂದು ಅವರ ಆಪ್ತರೇ ಹೇಳುತ್ತಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ 

    ಸಚಿವ ನಾರಾಯಣಗೌಡ ಗುರುವಾರ ಕೆಆರ್‌ಪೇಟೆಯಲ್ಲಿ ನಡೆಯುವ ಅವರ ಕನಸಿನ ಕೂಸಾದ 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣವನ್ನು (Indoor Stadium) ಉದ್ಘಾಟನೆಗೊಳಿಸಲಿದ್ದಾರೆ. ಬಳಿಕ ಎಂಜಿನಿಯರಿಂಗ್ ಕಾಲೇಜಿಗೆ ಮಾಜಿ ಸ್ಪೀಕರ್ ದಿ.ಕೃಷ್ಣ ಅವರ ಹೆಸರಿಟ್ಟು ನಾಮಕರಣ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ಸಚಿವ ಅಶ್ವಥ್ ನಾರಾಯಣ್ (Aahwath Narayan) ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ನಾರಾಯಣಗೌಡ ವಹಿಸಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮ ಮುಗಿದ ಬಳಿಕ ಅವರು ಕಾಂಗ್ರೆಸ್ ಕಡೆ ಒಲವು ತೋರಿಸುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೈಟೆಕ್ ಟಚ್: ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್ 

    ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಯುಗಾದಿ ಒಳಗೆ ಸೇರ್ಪಡೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಅವರ ಕನಸಿನ ಯೋಜನೆಗಳು ಉದ್ಘಾಟನೆಯಾಗಬೇಕೆಂದು ಇಷ್ಟು ದಿನ ಬಿಜೆಪಿಯಲ್ಲಿದ್ದಾರೆ, ಅವರ ಕನಸಿನ ಯೋಜನೆ ಲೋಕಾರ್ಪಣೆಗೊಂಡ ಬಳಿಕ ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್ 

    ಒಟ್ಟಾರೆ ನಾರಾಯಣಗೌಡರ ಕನಸಿನ ಯೋಜಗಳು ಲೋಕಾರ್ಪಣೆಗೊಳ್ಳುವುದರ ಜೊತೆಗೆ ಮತ್ತೆ ಅವರ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡುತ್ತಿವೆ. ನಾರಾಯಣಗೌಡ ತಮ್ಮ ಹೆಜ್ಜೆಯನ್ನು ಬದಲಿಸುತ್ತಾರಾ ಅಥವಾ ಬಿಜೆಪಿಯಿಂದ ಹೆಜ್ಜೆ ಕೀಳುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

  • ಕೆಆರ್‌ ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ

    ಕೆಆರ್‌ ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ

    ಮಂಡ್ಯ: ಕಳೆದ ಉಪಚುನಾವಣೆಯಲ್ಲಿ ಬಿಜೆಪಿ (BJP) ಗೆಲುವಿನ ಮೂಲಕ ಭದ್ರಕೋಟೆಯಾಗಿದ್ದ ಕೆ.ಆರ್‌. ಪೇಟೆಯನ್ನು (KR Pete) ಮರಳಿ ಪಡೆಯಲು ಜೆಡಿಎಸ್‌ (JDS) ಹಲವು ಸ್ಟ್ಯಾಟರ್ಜಿಯೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದರೆ ಇದೀಗ ಅಭ್ಯರ್ಥಿಯನ್ನು ಇಷ್ಟು ಬೇಗ ಘೋಷಣೆ ಮಾಡಿದ್ದೆ ತಪ್ಪಾಯಿತಾ ಎಂದು ಜೆಡಿಎಸ್ ನಾಯಕರಿಗೆ ತಲೆ ನೋವು ಉಂಟಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಹಾಗೂ ಬಂಡಾಯ ನಾಯಕರ ನಡುವೆ ವಾಗ್ಯುದ್ಧ ಸಹ ನಡೆದಿದೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್‌‌ನ ಪ್ರಬಲ ಭದ್ರಕೋಟೆಗಳು. ಈ 7 ಭದ್ರ ಕೋಟೆಗಳ ಪೈಕಿ ಕಳೆದ ಕೆ.ಆರ್‌.ಪೇಟೆ ಉಪಚುನಾಚಣೆಯನ್ನು ಬಿಜೆಪಿ ಗೆಲುವು ಪಡೆಯುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದೆ. ಇದೀಗ ಮರಳಿ ಈ ಕ್ಷೇತ್ರವನ್ನು ವಾಪಸ್ಸು ಪಡೆಯಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಚುನಾವಣೆಗೆ ಇನ್ನೂ 4 ತಿಂಗಳು ಬಾಕಿ ಇರುವಾಗಲೇ ಹೆಚ್.ಡಿ.ಮಂಜುರನ್ನು ಕೆ.ಆರ್‌.ಪೇಟೆ ಜೆಡಿಎಸ್ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೀಗ ಈ ಹೊತ್ತಿನಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌‌ನಲ್ಲಿ ದೊಡ್ಡ ಮಟ್ಟದ ಭಿನ್ನಮತದ ಹೊಗೆಯಾಡುತ್ತಿದೆ.

    ಕಳೆದ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಿ.ಎಲ್.ದೇವರಾಜು ಹಾಗೂ ತಂಡ ಇದೀಗ ಕೆ.ಆರ್‌.ಪೇಟೆ ಜೆಡಿಎಸ್‌ನ್ನು ಬಂಡಾಯದ ಬಾವುಟ ಹಾರಿಸಲು ಮುಂದಾಗಿದೆ. ಕುಮಾರಸ್ವಾಮಿ ಈ ಬಾರಿ ತಮ್ಮ ಬೆಂಬಲಿಗೆ ಮಂಜುಗೆ ಟಿಕೆಟ್ ಕೊಟ್ಟ ಕಾರಣ ರೇವಣ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ದೇವರಾಜು, ಬಸ್ ಕೃಷ್ಣೇಗೌಡ, ಬಸ್ ಸಂತೋಷ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಸಿ ಬಂಡಾಯ ಎದ್ದಿದ್ದಾರೆ.

    ಇದೀಗ ಈ ಎಲ್ಲಾ ಅತೃಪ್ತರು ಇದೇ ತಿಂಗಳ 18ರಂದು ಕೆ.ಆರ್‌.ಪೇಟೆಯಲ್ಲಿ‌ ದೊಡ್ಡ ಮಟ್ಟದ ಜೆಡಿಎಸ್ ಬಂಡಾಯ ಸಭೆ ನಡೆಸಲು ಮುಂದಾಗಿದ್ದಾರೆ‌. ಇದೇ ಕಾರಣಕ್ಕೆ ಹಳ್ಳಿ-ಹಳ್ಳಿಯನ್ನು ಬಿ.ಎಲ್.ದೇವರಾಜು ಮತ್ತು ತಂಡ ಸುತ್ತಿ ಅಂದಿನ ಸಭೆಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಇದೇ ವೇಳೆ ಶಿಳನೆರೆ ಗ್ರಾಮಕ್ಕೆ ಹೋದ ವೇಳೆ ಜೆಡಿಎಸ್‌ ಕಾರ್ಯಕರ್ತರು ದೇವರಾಜು ಅವರನ್ನು ತಡೆದು ನಿಮಗೆ ಪಾರ್ಟಿ ಎಲ್ಲಾ ಮಾಡಿದೆ ಹಾಗಿದ್ರೆ ಹೀಗೆ ಯಾಕೆ ಆಡುತ್ತಾ ಇದೀರಾ ಎಂದು ತರಾಟಗೆ ಮುಂದಾಗಿದ್ದಾರೆ. ಇದೇ ವೇಳೆ ಬಿ.ಎಲ್.ದೇವರಾಜು ಬೆಂಬಲಿಗರು ಸಹ ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿರುವುದಕ್ಕೆ ಬಂದಿರುವುದು ಎಂದು ಅವರು ಸಹ ಮಾತಿಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ಸಹ ನಡೆದಿದೆ. ಇದನ್ನೂ ಓದಿ: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    ಒಟ್ಟಾರೆ ಕೆ.ಆರ್‌.ಪೇಟೆಯನ್ನು ಮರಳಿ ಪಡೆಯಲು ಕುಮಾರಸ್ವಾಮಿ ಬೇರೆ ರೀತಿಯ ಗೇಮ್ ಪ್ಲ್ಯಾನ್ ಮಾಡಲು ಹೋಗಿ ಇದೀಗ ಆ‌ ಪ್ಲ್ಯಾನ್ ಉಲ್ಟಾ ಆಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ರೇವಣ್ಣ ಬೆಂಬಲಿಗರು ಬಂಡಾಯ ಎದ್ದಿರುವುದು ಜೆಡಿಎಸ್‌ಗೆ ಮತ್ತೆ ಮಾರಕ ಆಗುತ್ತಾ ಅಥವಾ ಬಂಡಾಯ ಎದ್ದವರನ್ನು ನಾಯಕರು ಸಮಾಧಾನ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k