Tag: ಕೆಆರ್‌ಪಿಪಿ

  • ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು – ರೆಡ್ಡಿ

    ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು – ರೆಡ್ಡಿ

    ತುಮಕೂರು: ನಾನು ಖಂಡಿತವಾಗಿಯೂ ರಾಜ್ಯ ಆಳ್ತೀನಿ ಎಂಬ ಭಯ ಕೆಲವರಿಗೆ ಇತ್ತು. ಹಾಗಾಗಿ ಎಲ್ಲರೂ ಸೇರಿ ನನ್ನನ್ನ ಮುಗಿಸಲು ಮುಂದಾಗಿದ್ದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.

    ಪಾವಗಡ ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮನೆಯಲ್ಲೇ ಕೂರಿಸಬೇಕು. ಇವನು ಹೊರಗಡೆ ಎಂದೂ ಬರಬಾರದು ಎಂದು ಕೆಲವರು ಪ್ರಯತ್ನಿಸಿದ್ದರು. ನನ್ನನ್ನ ಹೇಗಾದರೂ ಮಾಡಿ ಮುಗಿಸಬೇಕು ಎಂದು ಎಲ್ಲರೂ ಪ್ರಯತ್ನಪಟ್ಟರು. ಆದರೆ ದೇವರಿಚ್ಛೆ ಬೇರೆಯೇ ಇತ್ತು. ಹಾಗಾಗಿ ನಾನು 12 ವರ್ಷಗಳ ಬಳಿಕ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

    ಒಬ್ಬ ಮನುಷ್ಯನನ್ನ ಮುಗಿಸಬೇಕು, ಬೆಳೆಸಬೇಕು ಅಂದ್ರೆ ಆ ಪರಮಾತ್ಮನೇ ಬರಬೇಕು. ಹಾಗಾಗಿ ಇವತ್ತು 12 ವರ್ಷಗಳ ನಂತರ ನಾನು ನಿಮ್ಮ ಮುಂದೆ ಇದ್ದೇನೆ. ಜನರ ಪ್ರೀತಿ ಅಭಿಮಾನ ಭಗವಂತನ ಆಶೀರ್ವಾದದಿಂದ ಮತ್ತೇ ನಿಮ್ಮ ಮುಂದೆ ಇದ್ದೇನೆ ಎಂದು ತಾವು ಜೈಲಿಗೆ ಹೋಗಿದ್ದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

    ಪಾವಗಡದಲ್ಲಿ ನೇರಳೆಕೆರೆ ನಾಗೇಂದ್ರ ಕಳೆದ ನಾಲ್ಕೈದು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರು ಸಮಾಜ ಸೇವೆ ಮಾಡಬೇಕು ಎಂಬ ಉತ್ಸಾಹ ಹೊಂದಿದ್ದಾರೆ. ನಾಗೇಂದ್ರ ಅವರು ಕೆಆರ್‌ಪಿಪಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಈ ವೇಳೆ ಘೋಷಣೆ ಮಾಡಿದರು. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

  • ಬಸವ, ಬುದ್ಧ, ಅಂಬೇಡ್ಕರ್ ತತ್ವದಿಂದ ಕೆಆರ್‌ಪಿಪಿ ಹುಟ್ಟಿದೆ – ಸಿಟ್ಟು, ದ್ವೇಷದಿಂದಲ್ಲ: ಜನಾರ್ದನ ರೆಡ್ಡಿ

    ಬಸವ, ಬುದ್ಧ, ಅಂಬೇಡ್ಕರ್ ತತ್ವದಿಂದ ಕೆಆರ್‌ಪಿಪಿ ಹುಟ್ಟಿದೆ – ಸಿಟ್ಟು, ದ್ವೇಷದಿಂದಲ್ಲ: ಜನಾರ್ದನ ರೆಡ್ಡಿ

    ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದ ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ತತ್ವದ ಆಧಾರದ ಮೇಲೆ ಪಕ್ಷವನ್ನು ಕಟ್ಟಿರುವೆ. ಯಾರ ಮೇಲೂ ಸಿಟ್ಟು, ದ್ವೇಷದಿಂದ ಪಕ್ಷವನ್ನು ಕಟ್ಟಿಲ್ಲ ಎಂದು ಕೆಆರ್‌ಪಿಪಿ (KRPP) ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದರು.

    ಕೊಪ್ಪಳದ (Koppal) ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಕೆಆರ್‌ಪಿಪಿ ಪಕ್ಷದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಪಕ್ಷದ ಅಭ್ಯರ್ಥಿಗಳ ಘೋಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 12 ವರ್ಷಗಳ ಹಿಂದೆ ಜನಾರ್ದನ ರೆಡ್ಡಿಯವರು ಹಲವರನ್ನು ನಂಬಿಕೊಂಡು ಸಾಕಷ್ಟು ಜನರನ್ನು ಶಾಸಕರನ್ನಾಗಿ, ಸಂಸದರನ್ನಾಗಿ ಮಾಡಿದ್ದಾರೆ. ಆದರೆ ಅವರೆಲ್ಲರೂ ನನಗೆ ಮೋಸ ಮಾಡಿ, ಬೆನ್ನಿಗೆ ಚೂರಿ ಹಾಕಿದ್ದಾರೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಂಡು ಕೂರಲು ನಾನು ಸಿದ್ಧನಿಲ್ಲ ಎಂದರು.

    12 ವರ್ಷಗಳ ಕಾಲ ನಾನು ಜೈಲು ವಾಸವನ್ನು ಅನುಭವಿಸಿದ್ದೇನೆ. ಅದು ನನ್ನ ಫಸ್ಟ್ ಹಾಫ್ ಆದರೆ, ಸದ್ಯ ಸೆಕೆಂಡ್ ಹಾಫ್ ಪ್ರಾರಂಭವಾಗಿದೆ. ಇದು ಮುಂದಿನ 12 ವರ್ಷಗಳ ಕಾಲ ನಡೆಯಲಿದೆ. ಆಗ ಜನಾರ್ದನ ರೆಡ್ಡಿ ಏನು ಎನ್ನುವುದು ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಅವರು ಅಶ್ವಥ್ ನಾರಾಯಣ್ ಅಲ್ಲ.. ಮಾನಸಿಕ ಅಸ್ವಸ್ಥ: ಬಿ.ಕೆ.ಹರಿಪ್ರಸಾದ್

    ಅಭ್ಯರ್ಥಿಗಳ ಘೋಷಣೆ:
    ಕೆಆರ್‌ಪಿಪಿ ಪಕ್ಷದ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆಯನ್ನು ಮಾಡಲಿದ್ದಾರೆ. ಈಗಾಗಲೇ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಬಳ್ಳಾರಿಯಿಂದ ಅರುಣಾಲಕ್ಷ್ಮೀ ಜನಾರ್ದನ ರೆಡ್ಡಿ, ಸಿಂಧನೂರಿನಿಂದ ನೆಕ್ಕಂಟಿ ಮಲ್ಲಿಕಾರ್ಜುನ, ಸಿರುಗುಪ್ಪದಿಂದ ಧರಪ್ಪ ನಾಯಕ, ಹಿರಿಯೂರು ಕ್ಷೇತ್ರದಿಂದ ಮಹೇಶ, ನಾಗಠಾಣ ಕ್ಷೇತ್ರದಿಂದ ಶ್ರೀಕಾಂತ್ ಅವರನ್ನು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಬಾಕಿ ಉಳಿದುಕೊಂಡಿರುವ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಘೋಷಣೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಭ್ರಷ್ಟಾಚಾರ ಇಲ್ಲ ಅಂತ ಹೇಳಲ್ಲ.. ಅದು ವ್ಯವಸ್ಥೆಯಲ್ಲೇ ಇದೆ: ಸಿಟಿ ರವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಕ್ಷದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ – ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    ಪಕ್ಷದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ – ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಇಂದು (ಮಂಗಳವಾರ) ತಮ್ಮ ಪಕ್ಷದ ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಪಾದಯಾತ್ರೆ ಮೂಲಕ ತೆರಳಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕೆಆರ್‌ಪಿಪಿ (KRPP) ಅಧಿಕಾರಕ್ಕೆ ಬಂದರೇ ರೈತರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿ ಪಕ್ಷದ ರೈತ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ಪ್ರತಿ ರೈತನ ಅಕೌಂಟ್‌ಗೆ 15 ಸಾವಿರ ಹಣ ಜಮಾ ಮಾಡಲಾಗುವುದು. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು,‌ ನೀರಾವರಿ ಯೋಜನೆ ಸದೃಢಗೊಳಿಸಲಾಗುತ್ತದೆ. ಸಕಾಲಕ್ಕೆ ರಸ ಗೊಬ್ಬರಗಳನ್ನು ರೈತರಿಗೆ ನೀಡಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ರಾಜ್ಯದ ಶೈಕ್ಷಣಿಕ ಸಾಧನೆಗೆ ಮಠಗಳೇ ಕಾರಣ – ಸರ್ಕಾರದ ಕೆಲಸವನ್ನ ಮಠಗಳೇ ಮಾಡ್ತಿವೆ ಎಂದ ಸಿಎಂ

    ಇದೇ ಸಂದರ್ಭದಲ್ಲಿ ಜನಾರ್ದನರೆಡ್ಡಿ ಪಾದಯಾತ್ರೆಗೆ ಬಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ನೀಡಿದರು. ಅಂಬಾಮಠದ ಬಳಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರು ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ ಸುಮಾರು 20 ಸಾವಿರ ಜನರಿಗೆ ಭರ್ಜರಿ ಬಾಡೂಟ ಸಿದ್ಧ ಮಾಡಲಾಗಿತ್ತು. ಬಾಡೂಟಕ್ಕೆ ಒಂದು ಕ್ವಿಂಟಾಲ್ ಕೋಳಿ, 51 ಕುರಿಮರಿಗಳ ಬಳಕೆ ಮಾಡಲಾಗಿದ್ದು, ಚಿಕನ್, ಮಟನ್ ಬಿರಿಯಾನಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಕೊಪ್ಪಳ: ಚುನಾವಣೆ ಹೊಸ್ತಿಲಲ್ಲೇ ಕೆಆರ್‌ಪಿಪಿ (KRPP) ಸಂಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ದರ್ಗಾಗೆ ಭೇಟಿ ನೀಡಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಮುಸ್ಲಿಂ (Muslim) ಮತ ಭೇಟೆಗೆ ರೆಡ್ಡಿ ಮತ್ತೊಂದು ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಮೂಡಿದ್ದು, ರೆಡ್ಡಿ ನಡೆಯಿಂದ ಕಾಂಗ್ರೆಸ್ ಪಾಳಯದಲ್ಲೂ ಸಂಚಲನ ಮೂಡಿಸಿದೆ.

    ಜನಾರ್ದನ ರೆಡ್ಡಿ ಪತ್ನಿ ಸಮೇತ ರಾಜಸ್ಥಾನದ (Rajasthan) ಅಜ್ಮೀರ್ ದರ್ಗಾಗೆ (Ajmer Dargah) ಭೇಟಿ ನೀಡಿದ್ದಾರೆ. ಅಜಮೀರ್‌ನಲ್ಲಿನ ಖಾಜಾ ಗರೀಬ್ ನವಾಜ್ ದರ್ಗಾಗೆ ತೆರಳಿ ಚಾದರ ಮತ್ತು ಹೂ ಸಮರ್ಪಣೆ ಮಾಡಿ, ವಿವಿಧ ಧಾರ್ಮಿಕ ವಿಧಿ-ವಿಧಾನ ಪೂರೈಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿರುವ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ, ನಾಡಿನ ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿರುವ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾರನ್ನು ಬಳ್ಳಾರಿ ಅಥವಾ ಸಿಂಧನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ, ಕಾಂಗ್ರೆಸ್ ನಾಯಕರ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ: ಜನಾರ್ದನ ರೆಡ್ಡಿ

    ಬಿಜೆಪಿ, ಕಾಂಗ್ರೆಸ್ ನಾಯಕರ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ: ಜನಾರ್ದನ ರೆಡ್ಡಿ

    ಕೊಪ್ಪಳ: ನನ್ನ ಪಕ್ಷದ ಬಗ್ಗೆ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರು ಏನೇ ಮಾತನಾಡಿದರೂ, ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪಕ್ಷದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಏನೇ ಮಾತನಾಡಲಿ. ಕೆಆರ್‌ಪಿಪಿ ಪಕ್ಷ ದೇಶ, ರಾಜ್ಯದಲ್ಲಿ ಏನು ಎನ್ನುವುದನ್ನು ಮುಂದೆ ತೋರಿಸಿಕೊಡುತ್ತೇನೆ. ಅವರು ಏನಾದರೂ ಹೇಳಲಿ ನಾನು ತಲೆ ಕಡೆಸಿಕೊಳ್ಳಲ್ಲ ಎಂದು ಕಾಂಗ್ರೆಸ್‌, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಪಕ್ಷ ಘೋಷಣೆ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದೇನೆ. ನಿನ್ನೆಯೇ ಕ್ಷೇತ್ರಕ್ಕೆ ಬರಬೇಕಿತ್ತು, ಆದರೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿದ್ದೆ. ಇಲ್ಲಿನ ಜನ ಬಹಳ ಪ್ರೀತಿ ವಿಶ್ವಾಸದಿಂದ ಸ್ವೀಕರಿಸಿದ್ದಾರೆ. ರಾಜ್ಯದ ಜನ ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಅದು ಗೊತ್ತಾಗುತ್ತದೆ. ನಾನು ಯಾವುದೇ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲ್ಲ. ಅವರು ಬಂದರೆ ಪ್ರೀತಿ ವಿಶ್ವಾಸದಿಂದ ಸ್ವಿಕರಿಸುತ್ತೇನೆ. 16 ಬಳಿಕ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿ ಸುದ್ದಿ- ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿದೆ ಬಿಎಂಟಿಸಿ

    ಕೆಆರ್‌ಪಿಪಿ ಪಕ್ಷ ಬಿಜೆಪಿಯ ಬಿ ಟೀಂ ಎನ್ನೋ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಬಸವಣ್ಣನ ತತ್ವದ ಮೇಲೆ ನಡೆಯುವನು. ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ. ದೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಏನು ಎನ್ನೋದನ್ನು ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರ್ತಾರೆ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 150+ ಸ್ಥಾನ ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ ಜನಾರ್ದನ ರೆಡ್ಡಿ(Janardhan Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ(KRPP) ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ಪ್ರಶ್ನೆ ಏಳಲು ಕಾರಣ 2013ರ ಚುನಾವಣಾ ಫಲಿತಾಂಶ. 2013ರ ಚುನಾವಣೆಯಲ್ಲಿ ಬಿಎಸ್‌ ಯಡಿಯೂರಪ್ಪ(BS Yediyurappa) ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಮಾಡಿದ್ದರೆ ಶ್ರೀರಾಮುಲು(B Sriramulu) ಬಡವರ ರೈತರ ಶ್ರಮಿಕರ ಕಾಂಗ್ರೆಸ್‌(BSRC) ಪಕ್ಷವನ್ನು ಸ್ಥಾಪಿಸಿದ್ದರು. ಈ ಎರಡು ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೂ ಬಿಜೆಪಿಯ ಮತವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದವು.  ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ

    ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ 204 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 9.8% ಮತ ಪಡೆದು 6 ಸೀಟು ಗೆದ್ದು 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿತ್ತು. ರಾಮುಲು ನೇತೃತ್ವದ ಬಿಎಸ್‌ಆರ್‌ಸಿ ಪಕ್ಷ 176 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 2.7% ಮತ ಪಡೆದು 4 ಸೀಟು ಗೆದ್ದು, 5ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅಡ್ಡಿ ಆಗಿತ್ತು.

    2008ರ ಚುನಾವಣೆಯಲ್ಲಿ 33.9% ಮತ ಪಡೆದು 110 ಸ್ಥಾನ ಪಡೆದಿದ್ದ ಬಿಜೆಪಿ 2013ರ ಚುನಾವಣೆಯಲ್ಲಿ 19.9% ಮತ ಪಡೆದು ಕೇವಲ 40 ಸ್ಥಾನ ಮಾತ್ರ ಗೆದ್ದಿತ್ತು. ಮಧ್ಯ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಗೆ ಈ ಎರಡು ಪಕ್ಷಗಳು ಕಾರಣ ಎಂಬ ವಿಶ್ಲೇಷಣೆ ಬಂದಿತ್ತು.

     
    2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಮರಳಿ ಪಕ್ಷ ಸೇರಿದ್ದರಿಂದ ಬಿಜೆಪಿ 43.4% ಮತ ಪಡೆದು 17 ಸ್ಥಾನವನ್ನು ಗೆದ್ದುಕೊಂಡಿತ್ತು. ಯಡಿಯೂರಪ್ಪ ಶಿವಮೊಗ್ಗದಿಂದ ಆಯ್ಕೆ ಆಗಿದ್ದರೆ ಬಳ್ಳಾರಿಯಿಂದ ಶ್ರೀರಾಮುಲು ಗೆದ್ದಿದ್ದರು.  ಇದನ್ನೂ ಓದಿ: ನಾನು ಕಷ್ಟದಲ್ಲಿ ಇದ್ದಾಗ ಬಿಎಸ್‌ವೈ, ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ: ಜನಾರ್ದನ ರೆಡ್ಡಿ

    2018ರ ವಿಧಾನಸಭೆ ವೇಳೆ ಬಿಜೆಪಿ 36.2% ಮತ ಪಡೆದು 104 ಸ್ಥಾನ ಗೆದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 51% ಮತ ಪಡೆದು ಒಟ್ಟು 28 ಸ್ಥಾನಗಳ ಪೈಕಿ 25 ಸ್ಥಾನವನ್ನು ಗೆದ್ದುಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]