Tag: ಕೆಆರ್‌ಜಿ ಸಂಸ್ಥೆ

  • ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

    ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

    ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯಿತು ಎಂದ ಸೋನು ನಿಗಮ್ (Sonu Nigam) ಹೇಳಿಕೆಗೆ ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಕ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ನಿರ್ಮಾಪಕ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್

    ಭಯೋತ್ಪಾದಕ ಕೃತ್ಯವನ್ನು ಕನ್ನಡ ಹಾಡನ್ನು ಹಾಡಬೇಕೆಂಬ ವಿನಂತಿಗೆ ತಳುಕು ಹಾಕುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ, ಕನ್ನಡ ಹಾಡುಗಳನ್ನು ಹಾಡಿದ್ದಕ್ಕಾಗಿ ಕನ್ನಡಿಗರು ಇತರರಿಗಿಂತ ಹೆಚ್ಚಿನ ಪ್ರೀತಿಯನ್ನ ತೋರಿಸಿದ್ದಾರೆ. ಈಗ ಮೂರ್ಖ ಹೇಳಿಕೆಯನ್ನು ಅವರು ನೀಡಿದ್ದಾರೆ. ಇದಕ್ಕಾಗಿ ಅವರು ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಕೆಆರ್‌ಜಿ ನಿರ್ಮಾಣ ಸಂಸ್ಥೆಯ ರೂವಾರಿ ನಿರ್ಮಾಪಕ ಕಾರ್ತಿಕ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್

    ನಿನ್ನೆ (ಮೇ.1) ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದನು. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡರು.

    ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನೀವೆಲ್ಲ ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.

    ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ತಮಿಳಿನತ್ತ ‘ಬೆಂಗಳೂರು ಡೇಸ್’ ನಿರ್ದೇಶಕಿ- ಸಾಥ್ ನೀಡಿದ ‘ಕೆಆರ್‌ಜಿ’ ಸಂಸ್ಥೆ

    ತಮಿಳಿನತ್ತ ‘ಬೆಂಗಳೂರು ಡೇಸ್’ ನಿರ್ದೇಶಕಿ- ಸಾಥ್ ನೀಡಿದ ‘ಕೆಆರ್‌ಜಿ’ ಸಂಸ್ಥೆ

    ಚಿರಪರಿಚಿತ ಚಿತ್ರ ನಿರ್ಮಾಣ, ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ (Anjali Menon) ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. ಬೆಂಗಳೂರು ಡೇಸ್, ಉಸ್ತಾದ್ ಹೊಟೇಲ್, ಮಂಜಡಿಕುರು, ಕೂಡೆ, ವಂಡರ್ ವುಮನ್ ಅಂತಹ ಹೆಸರಾಂತ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ ಮೆನನ್ ಇದೀಗ ತಮಿಳು ಚಿತ್ರವನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ.

    ಕೆಆರ್‌ಜಿ ಸಂಸ್ಥೆ (KRG Studios) ಈ ಸಹಯೋಗದ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆಆರ್‌ಜಿ ಸಂಸ್ಥೆ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ ಆರಂಭಿಸಿ, ಇಲ್ಲಿಯವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ. 2020ರಲ್ಲಿ, `ರತ್ನನ್ ಪ್ರಪಂಚ’ ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ ಧನಂಜಯ್ ಅಭಿನಯದಲ್ಲಿ ಮೂಡಿಬಂದ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು. ಮಾರ್ಚ್ 2023ರಲ್ಲಿ ತೆರೆಕಂಡ ‘ಗುರುದೇವ್ ಹೊಯ್ಸಳ’ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು.

    ಕೆಆರ್‌ಜಿ ಸಂಸ್ಥೆ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ:ಹೃದಯ ಸ್ತಂಭನದಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

    ಈ ಕುರಿತು ನಿರ್ದೇಶಕಿ ಅಂಜಲಿ ಮೆನನ್ (Anjali Menon) ಮಾತನಾಡಿ, ಸಿನಿಮಾಗಳು ಭಾಷೆಯ ಬೇಲಿ ದಾಟಿ ಎಲ್ಲರನ್ನು ತಲುಪುತ್ತಿರುವ ಈ ಕಾಲದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸಮಂಜಸವೇ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆ ಎಂದರು.

    ಕೆಆರ್‌ಜಿ ಸಂಸ್ಥೆಯ ರೂವಾರಿ ಕಾರ್ತಿಕ್ ಗೌಡ (Karthik Gowda) ಮಾತನಾಡಿ, ಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್‌ಜಿ ಸ್ಟುಡಿಯೋಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಸಿನಿಮಾಗೆ ಇರುವ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರು ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆ. ಈ ಕುರಿತು ನಮ್ಮ ಪಯಣ ಶುರು ಆಗಲು ಕಾರಣ ನನ್ನ ಸ್ನೇಹಿತ ವಿಜಯ್ ಸುಬ್ರಹ್ಮಣ್ಯಂ. ಚಿತ್ರದ ಕಥಾವಸ್ತುವಿಗೆ, ಅದರ ನಿರೂಪಣೆಗೆ ಇರುವ ಶಕ್ತಿಯನ್ನು ಕುರಿತು ಹಾಗೂ ಉನ್ನತ ಮಟ್ಟದ ನಿರ್ಮಾಣವು ಪ್ರೇಕ್ಷಕರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದೆಲ್ಲಾ ನಾವು ಚರ್ಚಿಸಿದ್ದೇವೆ ಎಂದು ಮಾತನಾಡಿದ್ದಾರೆ.

    ನಮ್ಮಲ್ಲಿರುವ ಸಾಮರ್ಥ್ಯವನ್ನು ಆತ ಗಮನಿಸಿ,ನಮಗೆ ಮಾರ್ಗದರ್ಶಕನಾಗಿ ಹಾಗೂ ನಮ್ಮೊಡನೆ ಸಹ-ನಿರ್ಮಾಪಕನಾಗಿ ಕೈ ಜೋಡಿಸಿದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. ತುಲ್ಸಿಯಾ ಸಂಸ್ಥೆಯ ಸ್ಥಾಪಕರಾದ ಚೈತನ್ಯ ಹೆಗಡೆ ಅಂತಹ ಸಮಾನ ಮನಸ್ಕರ ಸಹಕಾರದಿಂದ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ನೀಡುವ ಭರವಸೆ ನಮ್ಮ ಸಂಸ್ಥೆ ನೀಡಲಿದೆ. ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ ಅವರೊಂದಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ.

  • ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ (Dali) ಮತ್ತು ಅಮೃತಾ ಅಯ್ಯಂಗಾರ್ `ಗುರುದೇವ ಹೊಯ್ಸಳ’ (Gurudeva Hoysala) ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಡಾಲಿ ಮತ್ತು ಅಮೃತಾಗೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಡಾಲಿ ಜೊತೆನೇ ನೀವ್ಯಾಕೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ತೆರೆಯ ಮೇಲೆ ಮೋಡಿ ಮಾಡಿರುವ ನಟರಾಕ್ಷಸ ಡಾಲಿ- ಅಮೃತಾ ಜೋಡಿ `ಪಾಪ್‌ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’, `ಗುರುದೇವ ಹೊಯ್ಸಳ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿದೆ. ಆದರೆ, ಇದನ್ನು ಇಬ್ಬರು ಒಪ್ಪಿಕೊಂಡಿಲ್ಲ. ಅವರ ಮಧ್ಯೆ ಪ್ರೀತಿ ಇದೆಯೋ ಇಲ್ಲವೋ ಒಳ್ಳೆಯ ಫ್ರೆಂಡ್‌ಶಿಪ್ ಅಂತೂ ಇದೆ. ಸುದೀಪ್ (Sudeep) ವೇದಿಕೆ ಏರಿದಾಗ ಇವರ ವಿಚಾರವನ್ನು ಇಟ್ಟುಕೊಂಡು ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

    ಮೊದಲು ವೇದಿಕೆ ಏರಿದ ಅಮೃತಾ ಅವರು ಡಾಲಿಯನ್ನು ನಾಲ್ಕೈದು ಬಾರಿ ಹೊಗಳಿದರು. ಅವರು ಸುಂದರವಾಗಿ ಕಾಣ್ತಿದಾರೆ ಎಂದು ಮೆಚ್ಚುಗೆ ಸೂಚಿಸಿದರು. ನಂತರ ಸುದೀಪ್ ಜೊತೆ ವೇದಿಕೆ ಏರಿದ ಡಾಲಿ ಅವರು ಒಂದೇ ಬಾರಿ ಅಮೃತಾ ಹೆಸರನ್ನು ಹೇಳಿದರು. ಇದನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು. ಧನಂಜಯ್ ಈ ರೀತಿ ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಹೇಳಿದ್ದು ನ್ಯಾಯ ಅಲ್ಲ ಎಂದರು ಕಿಚ್ಚ.

    ಆಗ ಡಾಲಿ ಅಮೃತಾ ಅವರನ್ನು ಹೊಗಳಲು ಮುಂದಾಗಿದ್ದಾರೆ. ನಟಿ ಬಗ್ಗೆ ಮಾತಾಡಿ ಎಂದು ಕಿಚ್ಚ ಕೂಡ ಕಾಲೆಳೆದಿದ್ದಾರೆ.  ಮೂರು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ವಿ. ಎಲ್ಲಾ ಸಿನಿಮಾಗಳಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಡಾಲಿ ಹೇಳುತ್ತಿದ್ದಂತೆ ಸುದೀಪ್ ಅವರು ಮತ್ತೆ ಕಾಲೆಳೆಯಲು ಮುಂದಾದರು. ಹೌದು ನೀವ್ಯಾಕೆ ಇವರೊಟ್ಟಿಗೆ ಕೆಲಸ ಮಾಡ್ತೀರಾ ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಅವರ ಜೊತೆಯೂ ಕೆಲಸ ಮಾಡಿ. ಇವರೊಟ್ಟಿಗೆ ಸಿನಿಮಾ ಮಾಡ್ತಾ ಇದ್ರೆ ಬೇರೆ ಹೀರೋಗಳಿಗೆ ನೀವು ಹೇಗೆ ಸಿಗ್ತೀರಾ ಇಷ್ಟೆಲ್ಲ ಮಾಡಿದ್ರೂ ನಿಮ್ಮನ್ನು ಹೊಗಳುತ್ತಿಲ್ಲ ಎಂದು ಅಮೃತಾಗೆ ಸುದೀಪ್ ಹೇಳಿದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೊನೆಯಲ್ಲಿ ಇವರ ಕೆಮಿಸ್ಟ್ರಿ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಾರ್ತಿಕ್ ಮತ್ತು ಯೋಗಿ ಜಿ ನಿರ್ಮಾಣದ `ಗುರುದೇವ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಡಾಲಿ – ಅಮೃತಾ ಜೋಡಿ ಈ ಬಾರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡನೋಡಬೇಕಿದೆ.

  • ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ನಂಜಯ ನಟನೆಯ ಬಹುನಿರೀಕ್ಷಿತ ಸಿನಿಮಾ `ಹೊಯ್ಸಳ’ (Hoysala) ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಚಿತ್ರ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ಸಿನಿಮಾದ ಟೈಟಲ್ ಬದಲಾವಣೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

    ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿ `ಹೊಯ್ಸಳ’ ಚಿತ್ರದ ಮೂಲಕ 3ನೇ ಬಾರಿ ಒಂದಾಗುತ್ತಿದ್ದಾರೆ. ಈ ಚಿತ್ರವನ್ನು ʻಕೆಆರ್‌ಜಿ ಸ್ಟುಡಿಯೋʼ (KRG Studios) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳ ಮೂಲಕ ಗಮನ ಸೆಳೆದಿರುವ `ಹೊಯ್ಸಳ’ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ಈ ಸಿನಿಮಾದಲ್ಲಿ ಧನಂಜಯ ಅವರು `ಗುರುದೇವ ಹೊಯ್ಸಳ’ (Gurudeva Hoysala) ಎಂಬ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯನ್ನು ರಾಮು ಫಿಲ್ಮ್ಸ್ ಜೊತೆ ಮಾತನಾಡಿ ಪಡೆದುಕೊಂಡಿದ್ದರು. `ಹೊಯ್ಸಳ’ ಶೀರ್ಷಿಕೆ ಅವರ ಬಳಿ ಇತ್ತು. ಆದರೆ ಈಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ, ಈ ಸಿನಿಮಾದಲ್ಲಿ ನಾಯಕ ಡಾಲಿ `ಗುರುದತ್ ಹೊಯ್ಸಳ’ ಪಾತ್ರದ ಹೆಸರನ್ನೇ ಶೀರ್ಷಿಕೆ ಮಾಡಿ, ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದ್ದಾರೆ.

    `ಗುಳ್ಟು’ ಹೀರೋ ನವೀನ್ ಶಂಕರ್ (Naveen Shankar) ಅವರು ಈ ಚಿತ್ರದಲ್ಲಿ ಡಾಲಿ (Dali) ಮುಂದೆ ಖಳನಾಯಕನಾಗಿ ನಟಿಸಿದ್ದಾರೆ. ರಗಡ್ ಲುಕ್‌ನಲ್ಲಿ ನವೀನ್ ಕಾಣಿಸಿಕೊಂಡಿದ್ದಾರೆ. `ಗುರುದತ್ ಹೊಯ್ಸಳ’ ಚಿತ್ರದ ಮೂಲಕ ಭಿನ್ನ ಕಥೆಯನ್ನೇ ತೆರೆಯ ಮೇಲೆ ತರಲು ಚಿತ್ರತಂಡ ಸಜ್ಜಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ತೆರೆಗೆ ಬರಲಿದ್ದಾರೆ.

  • ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಬಿಗ್ ಅಪ್‌ಡೇಟ್ ಇಲ್ಲಿದೆ

    ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಬಿಗ್ ಅಪ್‌ಡೇಟ್ ಇಲ್ಲಿದೆ

    ಸ್ಯಾಂಡಲ್‌ವುಡ್‌ನ (Sandalwood) ಬಹುನಿರೀಕ್ಷಿತ ಸಿನಿಮಾ `ಹೊಯ್ಸಳ’ (Hoysala) ಸಿನಿಮಾದ ಮೂಲಕ ನಟ ಧನಂಜಯ ಅಬ್ಬರಿಸಲು ರೆಡಿಯಾಗಿದ್ದಾರೆ. ಹೊಸ ಸಿನಿಮಾ ಅಪ್‌ಡೇಟ್ ಹೇಳುವ ಮೂಲಕ ಡಾಲಿ (Dali) ಅಭಿಮಾನಿಗಳಿಗೆ ಈಗ ಚಿತ್ರತಂಡ ಸಿಹಿಸುದ್ದಿ ಕೊಡಲು ಸಜ್ಜಾಗಿದ್ದಾರೆ.

     

    View this post on Instagram

     

    A post shared by Dhananjaya KA (@dhananjaya_ka)

    ಬಡವ ರಾಸ್ಕಲ್, ಹೆಡ್‌ಬುಷ್, ಪುಷ್ಪ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ನಟ ರಾಕ್ಷಸ ಡಾಲಿ (Dali) ಈಗ ಹೊಯ್ಸಳನಾಗಿ ಅಬ್ಬರಿಸಲು ಬರುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಡಾಲಿ ಬರುತ್ತಿದ್ದಾರೆ. ಇದನ್ನೂ ಓದಿ: ಆದಿಲ್ ಬೇರೆ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ : ಕಣ್ಣೀರಿಟ್ಟ ನಟಿ ರಾಖಿ ಸಾವಂತ್

     

    View this post on Instagram

     

    A post shared by KRG Studios (@krgstudios)

    ಇದೀಗ ಕೆಆರ್‌ಜಿ ಸಂಸ್ಥೆ (Krg)ನಿರ್ಮಾಣದ `ಹೊಯ್ಸಳ’ ಚಿತ್ರದ ನಿರ್ಮಾಪಕ ಕಾರ್ತಿಕ್‌ ಗೌಡ (Karthik Gowda) ಹೊಸ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ. ಚಿತ್ರದ ವಿಶೇಷ ತುಣುಕನ್ನ ಶೇರ್ ಮಾಡಿ, ಫೆ.5ರಂದು ಚಿತ್ರದ ಬಗ್ಗೆ ವಿಶೇಷ ವಿಚಾರವನ್ನ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ. ಬೆಳಿಗ್ಗೆ 9:27ಕ್ಕೆ ಚಿತ್ರದ ಬಗ್ಗೆ ಮೇಜರ್ ಅಪ್‌ಡೇಟ್‌ವೊಂದು ಸಿಗಲಿದೆ.

    ಇನ್ನೂ `ಹೊಯ್ಸಳ’ ಚಿತ್ರ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಯ ಕಥೆಯನ್ನ ತೆರೆ ಮೇಲೆ ತೋರಿಸಲಾಗುತ್ತಿದೆ. ಸಿನಿಮಾವನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಚಿತ್ರೀಕರಿಸಲಾಗಿದೆ.

    ಇನ್ನೂ `ಬಡವ ರಾಸ್ಕಲ್’ ಚಿತ್ರದಲ್ಲಿ ಡಾಲಿ – ಅಮೃತಾ ಅಯ್ಯಂಗಾರ್ ಜೋಡಿ ಮೋಡಿ ಮಾಡಿತ್ತು. ಇದೀಗ ಈ ಸಿನಿಮಾದಲ್ಲೂ ಡಾಲಿಗೆ ನಾಯಕಿಯಾಗಿ ಅಮೃತಾ ನಟಿಸಿದ್ದಾರೆ. ಈ ವರ್ಷ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿಚ್ಚ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಕಿಚ್ಚ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    `ವಿಕ್ರಾಂತ್‌ರೋಣ’ (Vikrantrona) ಸಿನಿಮಾದ ಸಕ್ಸಸ್ ನಂತರ ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada 9) ಕಿಚ್ಚ ಸುದೀಪ್ ಬ್ಯುಸಿಯಾಗಿದ್ದರು. ಈ ಶೋಗೆ ಬ್ರೇಕ್ ಬಿದ್ದಿದೆ. ಈ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗಳತ್ತ ಸುದೀಪ್ (Actor Sudeep)  ಗಮನ ಕೊಡ್ತಿದ್ದಾರೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಕಿಚ್ಚನ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.

    2022ರಲ್ಲಿ `ವಿಕ್ರಾಂತ್‌ರೋಣ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಬಳಿಕ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು. ಈ ಶೋ ಈಗ ಮುಗಿದಿದೆ. ಕಿಚ್ಚ ಮುಂದೇನು ಮಾಡ್ತಾರೆ ಅನ್ನೋ ಮಾಹಿತಿ ಕೂಡ ದಕ್ಕಿದೆ. ಕೆಆರ್‌ಜಿ ಸ್ಟುಡಿಯೋ (Krg Studio) ಸಂಸ್ಥೆ ಜೊತೆ ಸಿನಿಮಾ ಮಾಡಲು ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿನಿಮಾರಂಗಕ್ಕೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್: ನಟಿ ರಶ್ಮಿಕಾ ಮಂದಣ್ಣ

    ಈಗಾಗಲೇ ಕೆಜಿಎಫ್ 1 ಮತ್ತು ಚಾಪ್ಟರ್ 2ಗೆ ಕೆಆರ್‌ಜಿ ಹಂಚಿಕೆ ಮಾಡಿದ ಖ್ಯಾತಿಯಿದೆ. ಈಗ ಕಿಚ್ಚ ಸುದೀಪ್ ನಟನೆಯ ಮುಂಬರುವ ಸಿನಿಮಾಗೆ ʻಕೆಆರ್‌ಜಿ ಸಂಸ್ಥೆʼ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಸುದ್ದಿಗೆ ಪುಷ್ಟಿ ನೀಡುವಂತಹ ಫೋಟೋ ಸದ್ದು ಮಾಡ್ತಿದೆ. ಕಿಚ್ಚನ ಜೊತೆ ʻಕೆಆರ್‌ಜಿʼ ಸಂಸ್ಥೆಯ ಕಾರ್ತಿಕ್ ಗೌಡ ಮತ್ತು ನಿರ್ದೇಶಕ ನಂದಕಿಶೋರ್ ಜೊತೆಯಿರುವ ಫೋಟೋ ವೈರಲ್ ಆಗುತ್ತಿದೆ.

    ಕಿಚ್ಚನ ಚಿತ್ರಕ್ಕೆ ನಂದ ಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ. ಈ ಹಿಂದೆ `ರನ್ನ’ ಹಾಗೂ `ಮುಕುಂದ ಮುರಾರಿ’ ಸಿನಿಮಾದಲ್ಲಿ ಸುದೀಪ್ ಹಾಗೂ ನಂದಕಿಶೋರ್ ಒಟ್ಟಾಗಿ ಕೆಲಸ ಮಾಡಿದ್ದರು. ನಂದಕಿಶೋರ್ (Nandakishore) ಮತ್ತು ಸುದೀಪ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರಾಖಂಡ ಸಿಎಂ ಭೇಟಿಯಾದ `ಕಾಂತಾರ’ ಹೀರೋ ರಿಷಬ್

    ಉತ್ತರಾಖಂಡ ಸಿಎಂ ಭೇಟಿಯಾದ `ಕಾಂತಾರ’ ಹೀರೋ ರಿಷಬ್

    ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ `ಕಾಂತಾರ’ (Kantara)  ಚಿತ್ರದ ಹವಾ ಇನ್ನೂ ಮುಗಿದಿಲ್ಲ. ಕಾಂತಾರ ಪಾರ್ಟ್ 2ಗೆ ಪಂಜುರ್ಲಿ ದೈವದ ಕಡೆಯಿಂದ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರನ್ನ ರಿಷಬ್ ಶೆಟ್ಟಿ (Rishab Shetty) ಭೇಟಿಯಾಗಿದ್ದಾರೆ.

    ʻಕಾಂತಾರʼ ಸೂಪರ್ ಸಕ್ಸಸ್ ಕಂಡಿದೆ. ಚಿತ್ರಮಂದಿರದಲ್ಲಿ ಮೋಡಿ ಮಾಡಿದ ಬಳಿಕ ಒಟಿಟಿಯಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಇತ್ತೀಚೆಗೆ `ಕಾಂತಾರ 2′ ಮಾಡಲು ಪಂಜುರ್ಲಿ ದೈವ ಬಳಿ ಅನುಮತಿ ಕೇಳಿದ್ದಾರೆ. ದೈವ ಕೂಡ ಸಾಕಷ್ಟು ಸಲಹೆ ನೀಡಿ, ಶುಭಹಾರೈಸಿ ಕಾಂತಾರ ಭಾಗ 2 (Kantara 2) ಮಾಡಲು ಸಮ್ಮತಿ ಸೂಚಿಸಿದ್ದಾರೆ. ಇದಾದ ಬಳಿಕ ಉತ್ತರಾಖಂಡ ಸಿಎಂ ಅವರನ್ನು ರಿಷಬ್ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ

    ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರನ್ನ ರಿಷಬ್ ಭೇಟಿಯಾಗಿ ʻಕಾಂತಾರʼ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನ ಮಾತನಾಡಿದ್ದಾರೆ. ಈ ಕುರಿತ ಫೋಟೋವನ್ನ ಕೆಆರ್‌ಜಿ ಸಂಸ್ಥೆ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ `ಕಾಂತಾರ’ ಪಾರ್ಟ್ 2 ಬಗ್ಗೆ ಸಿಹಿಸುದ್ದಿ ಕೇಳಿರುವ ಫ್ಯಾನ್ಸ್, ಸಿನಿಮಾಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್

    ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್

    ಸ್ಯಾಂಡಲ್‌ವುಡ್‌ಗೆ(Sandalwood) ಕಮ್‌ಬ್ಯಾಕ್ ಆಗುತ್ತಿರುವ ರಮ್ಯಾ(Actress Ramya) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಂಬ್ಯಾಕ್ ಪ್ರಾಜೆಕ್ಟ್ `ಉತ್ತರಕಾಂಡ’ (Uttarakanda Film) ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಸಿನಿಮಾದ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ.‌

    ಮೋಹಕತಾರೆ ರಮ್ಯಾ 10 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಕಮ್‌ಬ್ಯಾಕ್‌ಗೆ ಗಟ್ಟಿ ಕಥೆಯನ್ನೇ ನಟಿ ಆಯ್ಕೆ ಮಾಡಿಕೊಂಡಿದ್ದಾರೆ. ಡಾಲಿಗೆ ನಾಯಕಿಯಾಗುತ್ತಿರುವ `ಉತ್ತರಕಾಂಡ’ ಚಿತ್ರದ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ

    ಹತ್ತು ವರ್ಷಗಳ ನಂತರ `ಉತ್ತರಕಾಂಡ’ (Uttarakanda Film) ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ರತ್ನನ್ ಪ್ರಪಂಚದಲ್ಲಿ ಮಾಡೋಕಾಗಿಲ್ಲ ಎಂಬ ಬೇಸರ ಇತ್ತು. ಆದರೆ ಈಗ ಅದೇ ಸಿನಿಮಾ ತಂಡ ಜೊತೆ ಸಿನಿಮಾ ಮಾಡ್ತಿರೋದು ತುಂಬಾ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದು ರಮ್ಯಾ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.‌ ಈಗಾಗಲೇ ಚಿತ್ರದ ಮುಹೂರ್ತ ಕೂಡ ನೆರವೇರಿದ್ದು, ರಮ್ಯಾ ವಾಯ್ಸ್‌ಯಿರುವ ಮುಹೂರ್ತದ ಝಲಕ್‌ ಅನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಉತ್ತರಕಾಂಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಟ ರಾಕ್ಷಸ ಧನಂಜಯ್ ಮತ್ತು ರಮ್ಯಾ ಮೊದಲ ಬಾರಿಗೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ `ಉತ್ತರಕಾಂಡ’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಒಟ್ನಲ್ಲಿ ರಮ್ಯಾ ಮತ್ತು ಈ ಹೊಸ ಜೋಡಿಯನ್ನ, ತೆರೆಯ ಮೇಲೆ ಮಿಂಚಲು ನೋಡುವುದನ್ನೇ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]