Tag: ಕೆಆರ್‌ಎಸ್‌ ಬೃಂದಾವನ

  • ಕೆಆರ್‌ಎಸ್‌ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ – ಐವರು ಪ್ರವಾಸಿಗರಿಗೆ ಗಾಯ

    ಕೆಆರ್‌ಎಸ್‌ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ – ಐವರು ಪ್ರವಾಸಿಗರಿಗೆ ಗಾಯ

    ಮಂಡ್ಯ: ಕೆಆರ್‌ಎಸ್‌ (KRS Brindavan) ಉತ್ತರ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ ನಡೆಸಿ ಐದು ಮಂದಿ ಪ್ರವಾಸಿಗರು ಗಾಯಗೊಂಡಿರುವ ಘಟನೆ ನಡೆದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್‌ಎಸ್‌ ಬೃಂದಾವನಕ್ಕೆ ಪ್ರವಾಸಿಗರು ಆಗಮಿಸಿದ್ದರು. ಉತ್ತರ ಬೃಂದಾವನದಲ್ಲಿ ಕಳೆದ ರಾತ್ರಿ ಹುಚ್ಚು ನಾಯಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ಪ್ರವಾಸಿಗರ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಸಾವಿನಲ್ಲೂ ಒಂದಾದ ಸ್ನೇಹಿತರು

    ನಾಯಿ ದಾಳಿಯಿಂದ ಐವರು ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಹುಚ್ಚು ನಾಯಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಘಟನೆಯಿಂದ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.

    ಮತ್ತೆ ಹುಚ್ಚು ನಾಯಿ ಬರಬಹುದೆಂಬ ಎಚ್ಚರಿಕೆಯಿಂದ ಉತ್ತರ ಬೃಂದಾವನವನ್ನು ಬಂದ್‌ ಮಾಡಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರಿಗೆ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ತುಂಗಭದ್ರಾ ಕಾಲುವೆಯಲ್ಲಿ ತೇಲಿಬಂತು ಮಹಿಳೆಯ ಶವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 25 ದಿನದ ಬಳಿಕ KRS ಬೃಂದಾವನ ಪ್ರವಾಸಿಗರಿಗೆ ಓಪನ್

    25 ದಿನದ ಬಳಿಕ KRS ಬೃಂದಾವನ ಪ್ರವಾಸಿಗರಿಗೆ ಓಪನ್

    ಮಂಡ್ಯ: ಚಿರತೆ ಆತಂಕದಿಂದ ಸಂಪೂರ್ಣ ಬಂದ್‌ ಆಗಿದ್ದ ಕೆಆರ್‌ಎಸ್‌ ಬೃಂದಾವನ (KRS Brindavan) 25 ದಿನದ ಬಳಿಕ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ.

    KRS ಡ್ಯಾಂ ಹಾಗೂ ಬೃಂದಾವನದ ಸುತ್ತಮುತ್ತ ಪದೇ ಪದೇ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ನಿರಂತರವಾಗಿ ಕಾರ್ಯಾಚರಣೆಯಿಂದಲೂ ಚಿರತೆ ಇನ್ನೂ ಸೆರೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು 8 ಬೋನ್ ಇಟ್ಟು ಬೀದಿ ನಾಯಿ ಕೊಟ್ಟಿದ್ದರು. ಬೋನ್‌ಗೆ ಸೆರೆಯಾಗದಿದ್ದಾಗ ಕೂಂಬಿಂಗ್ ಜೊತೆ ಡ್ರೋಣ್ ಕಾರ್ಯಾಚರಣೆ ನಡೆಸಿದ್ದರು. ಆದರೂ ಚಿರತೆ ಸೆರೆಯಾಗಿಲ್ಲ. ಚಿರತೆ ಸೆರೆ ಸಿಕ್ಕದಿದ್ದರೂ ಬೃಂದಾವನದ ಪ್ರಸಿದ್ಧಿ ಹಾಳಾಗಬಾರದೆಂದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಕೊಲೆಗೈದ ಪ್ರಿಯಕರ

    ಅರಣ್ಯ ಇಲಾಖೆ ಸೂಚನೆಯಂತೆ ಕಾವೇರಿ ನೀರಾವರಿ ನಿಗಮ ಬೃಂದಾವನ ಓಪನ್ ಮಾಡಿದೆ. 25 ದಿನಗಳಿಂದ ಬಣಗುಡುತ್ತಿದ್ದ ಬೃಂದಾವನದಲ್ಲಿ ಇಂದಿನಿಂದ ಮತ್ತೆ ಪ್ರವಾಸಿಗರ ಕಲರವ ಶುರುವಾಗಲಿದೆ.

    25 ದಿನದಲ್ಲಿ ಸರ್ಕಾರಕ್ಕೆ ಸುಮಾರು 80 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಟಿಕೆಟ್ ಹಾಗೂ ವಾಹನ ಪಾರ್ಕಿಂಗ್‌ನಿಂದ ಬರುತ್ತಿದ್ದ ಹಣ, ನಿರಂತರವಾಗಿ ಬೃಂದಾವನ ಬಂದ್ ಆಗಿದ್ದರಿಂದ ಸರ್ಕಾರಕ್ಕೆ ನಷ್ಟವಾಗಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೃಂದಾವನ 25 ದಿನ ಮುಚ್ಚಿತ್ತು. ಇದನ್ನೂ ಓದಿ: ಕಾಂಗ್ರೆಸ್‌ ರೌಡಿಗಳ ಪಕ್ಷ.. ಡಿಕೆಶಿ ತಿಹಾರ್‌ ಜೈಲಿಗೆ ಹೋಗಿ ಬಂದವರು – ಈಶ್ವರಪ್ಪ ತಿರುಗೇಟು

    ಚಿರತೆ ಕಾಣಿಸಿಕೊಂಡ ತಕ್ಷಣವೇ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಲಿಲ್ಲ. ಎರಡು ಬೋನ್ ಇಟ್ಟು ಚಿರತೆ ತಾನಾಗಿಯೇ ಸೆರೆಯಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದ್ದರು. ಪದೇ ಪದೇ ಚಿರತೆ ಕಾಣಿಸಿಕೊಳ್ಳಲು ಆರಂಭಿಸಿದ ಬಳಿಕ 8 ಬೋನ್ ಇಟ್ಟಿದ್ಥರು. ಆರಂಭದಲ್ಲಿ ಕಾಟಾಚಾರಕ್ಕೆ ಕೂಂಬಿಂಗ್ ನಡೆಸಿ ಕೈಚಲ್ಲಿದ್ದರು. ಆಕ್ರೋಶ ಹೆಚ್ಚಾದ ಬಳಿಕ ಮೂರ್ನಾಲ್ಕು ದಿನದಿಂದ ಕಾರ್ಯಾಚರಣೆ ಚುರುಕುಗೊಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]