Tag: ಕೆಂಭಾವಿ

  • ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಯಾದಗಿರಿ: ಹೃದಯಾಘಾತಕ್ಕೆ ಬಲಿಯಾಗಿದ್ದ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ (Surpur) ತಾಲೂಕಿನ ಕೆಂಭಾವಿಯಲ್ಲಿ (Kembhavi) ನಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ತಮ್ಮ ಇರ್ಫಾನ್ ಪೇಶಮಾಮ್ (38) ಹಾಗೂ ಅಣ್ಣ ಶಮಶುದ್ದೀನ್ ಪೇಶಮಾಮ್ (42) ಮೃತರು.

    ಮಂಗಳವಾರ (ಸೆ.2) ಬೆಳಿಗ್ಗೆ ತಮ್ಮ ಇರ್ಫಾನ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದ ಅಣ್ಣ ಶಮಶುದ್ದೀನ್ ಗಾಬರಿಯಲ್ಲಿಯೇ ತಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ಮಾರ್ಗಮಧ್ಯದಲ್ಲಿಯೇ ಅಣ್ಣನೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ನನ್ನಮ್ಮನಿಗೆ ಮಾತ್ರ ಅಲ್ಲ, ಭಾರತೀಯ ತಾಯಂದಿರಿಗೆ ಮಾಡಿದ ಅವಮಾನ – ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು

  • ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

    ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

    ಯಾದಗಿರಿ: ಕುಡಿದ ಅಮಲಿನಲ್ಲಿ ಸಾರಿಗೆ ಬಸ್ ಚಲಾಯಿಸಿದ ಚಾಲಕನಿಗೆ (Driver) ಪ್ರಯಾಣಿಕರು ತರಾಟೆ ತೆಗೆದುಕೊಂಡ ಘಟನೆ ಯಾದಗಿರಿಯ ಕೆಂಭಾವಿಯಲ್ಲಿ (Kembhavi) ನಡೆದಿದೆ.

    ಜೇವರ್ಗಿ ಡಿಪೋಗೆ ಸೇರಿದ್ದ ಬಸ್ ಯಾದಗಿರಿಯಿಂದ (Yadagiri) ಕಲಬುರಗಿ (Kalaburagi) ಕಡೆಗೆ ಹೊರಟಿತ್ತು. ಬಸ್ ಚಾಲಕ ಕಾಸಿಂ ಅಮಲಿನಲ್ಲಿ ತೇಲಾಡ್ತಾ ಬಸ್ ಚಾಲನೆ ಮಾಡುತ್ತಿದ್ದ. ಚಾಲಕನ ಎಡವಟ್ಟಿಗೆ ಗಾಬರಿಗೊಂಡಿದ್ದ ಪ್ರಯಾಣಿಕರು ಕೆಂಭಾವಿಯ ನಾರಾಯಣಪುರ ಎಡದಂಡೆ ಕಾಲುವೆ ಬಳಿ ಬಸ್ ನಿಲ್ಲಿಸಿ ತರಾಟೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಚಾಲಕನ ಎಡವಟ್ಟಿನಿಂದ ಬಸ್ ಕಾಲುವೆಗೆ ಉರುಳಿ ಬೀಳುವ ಅಪಾಯವಿತ್ತು. ಆದರೆ ಕೂಡಲೇ ಎಚ್ಚೆತ್ತ ಪ್ರಯಾಣಿಕರು ಚಾಲಕನ ಪರಿಸ್ಥಿತಿ ಕಂಡು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸರಿಯಾಗಿ ನಿಲ್ಲಲೂ ಆಗದಷ್ಟು ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿದ್ದ ಚಾಲಕನಿಂದಾಗಿ ನಿರ್ವಾಹಕ ಅಂಬರೀಶ್ ಬಸ್ ಚಾಲನೆ ಮಾಡಿಕೊಂಡು ಪ್ರಯಾಣಿಕರನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: 50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC

  • ಯಾದಗಿರಿ: ಕೆಂಭಾವಿ ಪಟ್ಟಣವನ್ನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡದ್ದನ್ನು ಖಂಡಿಸಿ ಬಂದ್

    ಯಾದಗಿರಿ: ಕೆಂಭಾವಿ ಪಟ್ಟಣವನ್ನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡದ್ದನ್ನು ಖಂಡಿಸಿ ಬಂದ್

    ಯಾದಗಿರಿ: ಸಿಎಂ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡದಿರುವದನ್ನು ಖಂಡಿಸಿ ಇಂದು ಕೆಂಭಾವಿ ಪುರಸಭೆ ಸದಸ್ಯರು ಹಾಗೂ ವಿವಿಧ ಸಂಘಟನೆ ಮುಖಂಡರು ಹಾಗೂ ಪಟ್ಟಣದ ನಿವಾಸಿಗಳು ಕೆಂಭಾವಿ ಪಟ್ಟಣದಲ್ಲಿ ಬಂದ್ ಆಚರಿಸಿದ್ದಾರೆ.

    ಬೆಳಗ್ಗೆಯಿಂದಲೇ ಕೆಂಭಾವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ನಿರತರು ಟೈರ್‍ಗೆ ಬೆಂಕಿ ಹಚ್ಚಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಂಭಾವಿ ಪಟ್ಟಣ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದ್ರು.

    ಸಾಮೂಹಿಕ ರಾಜೀನಾಮೆ: ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡದಿರುವುಕ್ಕೆ ಶುಕ್ರವಾರದಂದು ಪುರಸಭೆಯ 23 ಸದಸ್ಯರು ಪಕ್ಷಭೇದ ಮರೆತು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯರ ಸಾಮೂಹಿಕ ರಾಜೀನಾಮೆ ನಂತರ ಇಂದು ಕೆಂಭಾವಿ ಪಟ್ಟಣ ಬಂದ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಕೆಂಭಾವಿಯನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಸಿದ್ದರಾಮಯ್ಯನವರು ಬಜೆಟ್ ಮಂಡನೆ ವೇಳೆ ಕೆಂಭಾವಿ ಪಟ್ಟಣವನ್ನು ಹೊರತುಪಡಿಸಿ ಜಿಲ್ಲೆಯ ವಡಗೇರಾ, ಗುರುಮಠಕಲ್, ಹುಣಸಗಿ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಿದ್ದಾರೆ.