Tag: ಕೆಂಪೇ ಗೌಡ ವಿಮಾನ ನಿಲ್ದಾಣ

  • ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಬೆಂಗಳೂರು: ಗಗನಸಖಿಯೊಬ್ಬರಿಗೆ ಪ್ರಯಾಣಿಕನೋರ್ವ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

    ಕೊಲ್ಕತ್ತಾದ ಕ್ಷಿತಿಜ್ ಗುರುಂಗ್ ಎಂಬಾತ ಗಗನಸಖಿ ಫೌಜಿಯಾ ಎಂಬಾಕೆಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಕ್ಷಿತಿಜ್ ನಗರದ ಖಾಸಗಿ ಕಾಲೇಜಿನಲ್ಲಿ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.

    ಇಂಡಿಗೋ ವಿಮಾನದಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಆರೋಪಿ ಗಗನಸಖಿ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಮತ್ತೊರ್ವ ಗಗನಸಖಿ ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಕ್ಷಿತಿಜ್ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಗಲಾಟೆ ಬಿಡಿಸಿದ್ದಾರೆ.

    ಬಳಿಕ ಇಬ್ಬರು ಗಗನಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಗಗನಸಖಿಯರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಚೆನ್ನೈ ಮೂಲದ ಮಹಿಳೆಯೊಬ್ಬರು ಬ್ಯಾಂಕಾಂಕ್‍ನಿಂದ ಬೆಂಗಳೂರಿಗೆ ಬಂದಿಳಿದ್ದಳು. ಈ ವೇಳೆ ಕಸ್ಟಮ್ಸ್ ಹಾಗೂ ಏರ್ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮಹಿಳೆ 12.48 ಮೌಲ್ಯದ ಚಿನ್ನ ಸಾಗಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈಕೆ ತನ್ನ ಗುದದ್ವಾರದ ಮೂಲಕ ಚಿನ್ನ ಸಾಗಾಟ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಕಾರ್ ಸ್ವಚ್ಛಗೊಳಿಸುವ ಉಪಕರಣದಲ್ಲಿ ಚಿನ್ನ ತಂದಿದ್ದವನನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ. ಎಮಿರೇಟ್ಸ್ ಪ್ಲೈಟ್‍ನಲ್ಲಿ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಅಸಾಮಿ ಕಬ್ಬಿಣದ ಉಪಕರಣದಲ್ಲಿ 14 ಲಕ್ಷದ ಚಿನ್ನದ ಬಿಸ್ಕೆಟ್ಸ್ ಇಟ್ಟು ತಂದಿದ್ದ. ಒಟ್ಟು ನಾಲ್ಕು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 37.21 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ್ದಾರೆ.