Tag: ಕೆಂಪೇಗೌಡ

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • ಶಿವರಾತ್ರಿ ದಿನ  2 ಗುಡ್‌ನ್ಯೂಸ್‌ ಹಂಚಿಕೊಂಡ ರಾಗಿಣಿ

    ಶಿವರಾತ್ರಿ ದಿನ 2 ಗುಡ್‌ನ್ಯೂಸ್‌ ಹಂಚಿಕೊಂಡ ರಾಗಿಣಿ

    ಬೆಂಗಳೂರು: ಶಿವರಾತ್ರಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಸ್ಯಾಂಡಲ್‍ವುಡ್ ನಟಿಮಣಿ ರಾಗಿಣಿ ದ್ವಿವೇದಿ ಅಭಿಮಾನಿಗಳೊಂದಿಗೆ 2 ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಜೀವನದಲ್ಲಿ ಎಲ್ಲಾ ತರ ಸಮಯ ಮನೆಗ ಬರುತ್ತದೆ, ಒಳ್ಳೆಯ ಸಮಯ, ಕೆಟ್ಟ ಸಮಯ ಹಾಗೂ ನಮ್ಮನ್ನು ಪರೀಕ್ಷೆ ಮಾಡುವ ಎಷ್ಟೋ ಸಮಯವು ಬರುತ್ತದೆ. ಇಂದು ತುಂಬಾ ಸಂತೋಷದ ದಿನವಾಗಿದೆ. ನನ್ನನ್ನು ಕನ್ನಡದ ಅಭಿಮಾನಿಗಳು ಒಪ್ಪಿಕೊಂಡು ಹಾಗೂ ನನ್ನ ಸಿನಿ ಜರ್ನಿಯನ್ನು ಆರಂಭಿಸಿ 10 ವರ್ಷವಾಗಿದೆ. ಕೆಂಪೇಗೌಡ ಸಿನಿಮಾ ಸಿನಿಮಾ ತೆರೆ ಮೇಲೆ ಬಂದು 10 ವರ್ಷವಾಗಿದೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಸುದೀಪ್ ನೆನಪು:
    ಕೆಂಪೇಗೌಡ ಜರ್ನಿ ನನಗೆ ಮರೆಯಲಾಗದ ನೆನಪು. ಶೂಟಿಂಗ್ ನಲ್ಲಿ ಕಳೆದ ಒಂದೊಂದು ದಿನನವು ನನಗೆ ಇಂದು ನೆನಪಿದೆ. ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ. ಎಷ್ಟೊಂದು ಪ್ರೀತಿ, ಸಹಕಾರವನ್ನು ನನಗೆ ಕೊಟ್ಟಿದ್ದೀರಿ. ನನ್ನ ಸಿನಿಮಾ ಜರ್ನಿಯನ್ನು ನಿಮ್ಮೊಂದಿಗೆ ನಾನು ಪ್ರಾರಂಭಿಸಿದ್ದೇನೆ. ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದೀರಿ ಎಂದು ಹೇಳಿ ನೆನಪು ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನಾನು ನಿಮ್ಮನ್ನು ನೋಡಿ ನಟನೆಯನ್ನು ಕಲಿತಿದ್ದೇನೆ. ಕೆಂಪೇಗೌಡ ಸಿನಿನಿಮಾದಿಂದ ಎಷ್ಟೊಂದು ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ನನಗೆ ಮೊದಲು ಸಿನಿಮಾ ರಂಗಕ್ಕೆ ಬಂದಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ನನಗೆ ಎಷ್ಟೊಂದು ಒಳ್ಳೆಯ ಪಾತ್ರಕೊಟ್ಟು ನನ್ನ ಸಿನಿಮಾರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಿರಾ. ಸುದೀಪ್ ಅವರು ಪ್ರತಿಯೊಬ್ಬರಿಗೂ ಸಪೋರ್ಟ್ ಮಾಡುತ್ತಾರೆ. ನನ್ನ ಕಡೆಯಿಂದ ಕಿಚ್ಚಾ ಸುದೀಪ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಯೂಟ್ಯೂಬ್ ಚಾನೆಲ್ ಆರಂಭ
    ನಟಿ ಜೈಲಿನಿಂದ ಹೊರ ಬಂದ ನಂತರ ಸಖತ್ ಸಕ್ರಿಯವಾಗಿರುವ ನಟಿ ರಾಗಿಣಿ ಮಹಿಳಾ ದಿನದಂದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ಅಲ್ಲೇ ಪೋಸ್ಟ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ನಿನ್ನೆ ಶಿವರಾತ್ರಿ ಹಬ್ಬದಂದು ಮಾಡಿದ ವಿಶೇಷ ಪೂಜೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಮಂದಿನ ದಿನಗಳಲ್ಲಿ ರಾಗಿಣಿಯವರನ್ನು ನಾವು ಯೂಟ್ಯೂಬ್ ಚಾನಲ್‍ನಲ್ಲಿ ನೋಡಬಹುದಾಗಿದೆ. ಕುಟುಂಬದೊಂದಿಗೆ ಶಿವರಾತ್ರಿ ಹಬ್ಬವನ್ನು ರಾಗಿಣಿ ಸಂಭ್ರಮದಿಂದ ಆಚರಿಸಿದ್ದಾರೆ. ಕೆಲವು ಫೊಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಡುಗೆ ಮಾಡುವ ಹಾಗೂ ಇತರೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ನಟಿ ಈಗ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.

  • ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕೆಲಸ ವೀಕ್ಷಿಸಿದ ಆದಿಚುಂಚನಗಿರಿ ಶ್ರೀ, ಡಿಸಿಎಂ

    ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕೆಲಸ ವೀಕ್ಷಿಸಿದ ಆದಿಚುಂಚನಗಿರಿ ಶ್ರೀ, ಡಿಸಿಎಂ

    ನವದೆಹಲಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯ ದೆಹಲಿಯಲ್ಲಿ ನಡೆಯುತ್ತಿದೆ. ಈ ನಿರ್ಮಾಣ ಕಾರ್ಯವನ್ನು ರಾಜ್ಯದ ಡಿಸಿಎಂ ಅಶ್ವಥ್‍ನಾರಾಯಣ ಮತ್ತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ವೀಕ್ಷಿಸಿ ಪರೀಶಿಲನೆ ನಡೆಸಿದ್ದಾರೆ.

    ದೆಹಲಿ ಸಮೀಪದ ನೋಯ್ಡಾದಲ್ಲಿ ಪ್ರಸಿದ್ಧ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆಯನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದೆ. ಮೊದಲ ಹಂತದಲ್ಲಿ ಪ್ರತಿಮೆಯನ್ನು ಥರ್ಮಾಕೋಲ್‍ನಲ್ಲಿ ಮಾಡಿ ಏನಾದರೂ ಬದಲಾವಣೆಗಳು ಇದ್ದಲ್ಲಿ ಆ ಸಂದರ್ಭದಲ್ಲೇ ಅದನ್ನು ಸರಿಪಡಿಸಿ, ನಂತರ ಅಂತಿಮವಾಗಿ ಕಂಚಿನ ಪ್ರತಿಮೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಪ್ರತಿಮೆಯನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಪ್ರತಿಷ್ಠಿಸುವ ಗುರಿಯನ್ನು ಹೊಂದಲಾಗಿದೆ.

    ಪ್ರತಿಮೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಕೆಂಪೇಗೌಡರ ಪ್ರತಿಮೆಯು 90 ಅಡಿಯ ವಿಗ್ರಹವಾಗಿದ್ದು, 18 ಅಡಿ ತಳಪಾಯ ಸೇರಿ 108 ಅಡಿ ಎತ್ತರದ ಪ್ರತಿಮೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ಪ್ರತಿಮೆ ನಿರ್ಮಾಣದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಅಚ್ಚುಕಟ್ಟಾಗಿ, ಬಹಳ ವೇಗವಾಗಿ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು.

    ನಿರ್ಮಾಲಾನಂದನಾಥ ಸ್ವಾಮೀಜಿ ಮಾತನಾಡಿ ಕೊರೊನಾ ಬಂದಿದ್ದರಿಂದ ಪ್ರತಿಮೆ ನಿರ್ಮಾಣಕ್ಕೆ ತೊಡಕಾಗಿದೆ. ಮುಂದಿನ ವರ್ಷವೇ ಪ್ರತಿಮೆ ಅನಾವರಣ ಮಾಡುವ ಗುರಿ ಇಟ್ಟಿಕೊಂಡಿದ್ದೇವು. ಆದರೆ ಇದೀಗಪೂರ್ಣ ಪ್ರಮಾಣದಲ್ಲಿ ಪ್ರತಿಮೆ ಸಿದ್ಧಗೊಳ್ಳಲು ಇನ್ನು ಎಂಟೊಂಬತ್ತು ತಿಂಗಳು ಬೇಕು. ಪ್ರತಿಮೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸುವತ್ತ ಯೋಜನೆ ರೂಪಿಸಿದ್ದೇವೆ. ಪ್ರತಿಮೆಯ ಜೊತೆಗೆ ಕೆಂಪೇಗೌಡರ ಹೆರಿಟೇಜ್ ಪಾರ್ಕ್ ಕೂಡ ನಿರ್ಮಾಣ ಆಗಲಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಮಾಡಿದ್ದ ರಾಮ ಸುತಾರ್ ಅವರೇ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

  • ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ್ ಸ್ವಾಮಿ ಹೇಳಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ನಗರ ಜಿಲ್ಲಾ ಪಂಚಾಯತ್ ಶಿಕ್ಷಣ ಅಧ್ಯಕ್ಷ ನರಸಿಂಹಮೂರ್ತಿ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ತಿಳಿಸಿದರು. ಈ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆ, ಪಾಲಿಕೆ ಶಾಲೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಇದಕ್ಕೆ ಪಾಲಿಕೆ ಶಿಕ್ಷಣ ಸಮಿತಿಯಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಪಾಲಿಕೆ ಶಿಕ್ಷಣ ಸಮಿತಿ ಈ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ಕೊಡುವ ಭರವಸೆ ನೀಡಿದೆ ಎಂದರು.

    ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 529 ಸರ್ಕಾರಿ ಶಾಲೆಗಳಿವೆ. ನೀರು ಮತ್ತು ವಿದ್ಯುತ್ ಉಚಿತ ಹಾಗೂ ಮೂಲಸೌಕರ್ಯವೂ ಬಿಬಿಎಂಪಿ ಒದಗಿಸಲಿದೆ. 30 ಕೋಟಿ ರೂ. ವೆಚ್ಚದಲ್ಲಿ ಈ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾವನೆ ಇಡಲಾಗಿದೆ. 529 ಸರ್ಕಾರಿ ಶಾಲೆಗಳ ನಿರ್ವಹಣೆಗೆ ಬಿಬಿಎಂಪಿ ಹಾಗೂ ಜಿಲ್ಲಾ ಪಂಚಾಯತ್‍ಗೆ ಕೇವಲ 75 ಲಕ್ಷ ರೂ. ಅನುದಾನ ಇದೆ. 1,300 ಕ್ಕೂ ಹೆಚ್ಚು ಶಾಲೆಗಳಿವೆ. ಬರೀ ಸಂಬಳ ಕೊಡೋಕೆ ಹಣ ಸಾಕಾಗ್ತಿದೆ. ನಮಗೆ ಸಣ್ಣ ವಾಹನದ ವ್ಯವಸ್ಥೆಯೂ ಇಲ್ಲ. ಇಲಾಖೆ ಖರ್ಚು ವೆಚ್ಚಕ್ಕೆ 75 ಲಕ್ಷ ಸಾಲುತ್ತಿಲ್ಲ ಎಂದು ಮಂಜುಳಾ ನಾರಾಯಣಸ್ವಾಮಿ ಹೇಳಿದರು.

    ಕೆಂಪೇಗೌಡರು ಕಟ್ಟಿರುವ ನಾಡು ಇದು. ಹೀಗಾಗಿ ಪಾಲಿಕೆ ಶಾಲೆಗಳಿಗೂ ಕೆಂಪೇಗೌಡ ಹೆಸರಿಡಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್‍ನಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದರು. ಪಾಲಿಕೆ ಶಾಲೆಗಳ ಗುಣಮಟ್ಟವನ್ನೂ ಹೆಚ್ಚಳ ಮಾಡ್ತೇವೆ. ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ವಿದ್ಯುತ್ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

  • ಇಂದಿರಾ ಕ್ಯಾಂಟೀನ್‍ಗೆ ಕೆಂಪೇಗೌಡ ಹೆಸರಿಡಲು ಬಿಜೆಪಿ ಪ್ಲ್ಯಾನ್

    ಇಂದಿರಾ ಕ್ಯಾಂಟೀನ್‍ಗೆ ಕೆಂಪೇಗೌಡ ಹೆಸರಿಡಲು ಬಿಜೆಪಿ ಪ್ಲ್ಯಾನ್

    – ಉಪ ಚುನಾವಣೆಯಲ್ಲಿ ಒಕ್ಕಲಿಗರ ಮತಕ್ಕಾಗಿ ಗಿಮಿಕ್

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗೆ ಕೆಂಪೇಗೌಡ ಹೆಸರಿಡಲು ಮುಂದಾಗಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಒಕ್ಕಲಿಗರ ಮತ ಸೆಳೆಯಲು ಹೊಸ ಪ್ಲ್ಯಾನ್ ರೂಪಿಸಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು 2017ರಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‍ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬದಲಾಗಿ ನಾಡಪ್ರಭು ಕೆಂಪೇಗೌಡ ಹೆಸರಿಡಲು ಬಿಜೆಪಿ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಕ್ಯಾಂಟೀನ್ ನಿರ್ವಹಣೆಗೆ ಶೇ.25 ರಷ್ಟು ಅನುದಾನ ಮಾತ್ರ ಕೊಡಲು ಒಪ್ಪಿದೆ. ಹೀಗಾಗಿ ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದ ಉಪ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ಯಾಂಟೀನ್ ಹೆಸರು ಬದಲಾಯಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಚಿಂತನೆ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಅವರು ಈ ಹಿಂದೆ ಇಂದಿರಾ ಕ್ಯಾಂಟೀನ್‍ಗಳಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ನಿರ್ಧಾರದ ಸುಳಿವನ್ನು ಕೊಟ್ಟಿದ್ದರು. ಜುಲೈನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾತನಾಡಿದ್ದ ಸಚಿವರು, ಮೈತ್ರಿ ಅವಧಿಯಲ್ಲಿ ಕೆಲವು ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಕೂಡ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕ್ಯಾಬಿನೆಟ್ ಸಭೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಕೈಬಿಡಲು ಬರಲ್ಲ. ಹಾಗೇ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಸಂಬಂಧ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

    ಅನುದಾನ ನೀಡಲು ಬಿಜೆಪಿ ನಕಾರ:
    ಸೆಪ್ಟೆಂಬರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ನಕಾರ ಎಂದಿದೆ. ಕೇವಲ ಶೇ. 25ರಷ್ಟು ಅನುದಾನ ಕೊಡುವುದಕ್ಕೆ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೇ. 100ರ ಬದಲು ಐವತ್ತು ಪರ್ಸೆಂಟ್ ಆದರೂ ಅನುದಾನ ಕೊಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದರು.

    ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅವಧಿಯು ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಹೊಸ ಟೆಂಡರ್ ಕರೆಯುವವರೆಗೂ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್‍ನ ಅವ್ಯವಹಾರ ಆರೋಪದ ಹಿನ್ನಲೆ ಸರ್ಕಾರ ತನಿಖೆಗೂ ಆದೇಶ ನೀಡಿದೆ. ಆದರೆ 150 ಕೋಟಿ ರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ಬಿಬಿಎಂಪಿಗೆ ಹೊರೆಯಾಗಿದೆ ಎಂದು ಹೇಳಿದ್ದರು.

    ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು, ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದ್ದರು.

    ಆಗಸ್ಟ್ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ್ದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್‍ಗಳಿವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು ಎಂದು ಮಾಹಿತಿ ನೀಡಿದ್ದರು.

    2019-20ರ ಸಾಲಿನ ಬಜೆಟ್‍ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದ್ದರು.

  • ಕಸದ ರಾಶಿಯಲ್ಲಿ ಕೆಂಪೇಗೌಡ, ಕುವೆಂಪು, ವಿವೇಕಾನಂದರ ಭಾವಚಿತ್ರಗಳು

    ಕಸದ ರಾಶಿಯಲ್ಲಿ ಕೆಂಪೇಗೌಡ, ಕುವೆಂಪು, ವಿವೇಕಾನಂದರ ಭಾವಚಿತ್ರಗಳು

    -ಪುರಭವನ ಸಿಬ್ಬಂದಿಯಿಂದ ಎಡವಟ್ಟು

    ಬೆಂಗಳೂರು: ನಗರದ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಮಹನೀಯ ವ್ಯಕ್ತಿಗಳಿಗೆ ಅಪಮಾನವಾಗಿದೆ. ಕಸದ ರಾಶಿಯಲ್ಲಿ ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಕಂಡು ಬಂದಿದೆ.

    ಇತ್ತೀಚೆಗೆ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಕುವೆಂಪು, ವಿವೇಕಾನಂದ ಹಾಗೂ ಕೆಂಪೇಗೌಡರ ಭಾವಚಿತ್ರ ಫಲಕಗಳನ್ನು ತರಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಪುರಭವನ ಸ್ವಚ್ಛಗೊಳಿಸಿದ್ದರು. ಈ ವೇಳೆ ಸಿಬ್ಬಂದಿ ಮಹನೀಯರ ಭಾವಚಿತ್ರಗಳನ್ನು ಕಸದ ಜೊತೆ ಹಾಕಿದ್ದಾರೆ.

    ಕಾರ್ಯಕ್ರಮದ ಬಳಿಕ ಈ ಫಲಕಗಳನ್ನು ತೆಗೆದುಕೊಂಡು ಹೋಗದೇ ಆಯೋಜಕರು ಪುರಭವನದಲ್ಲೇ ಬಿಟ್ಟು ಹೋಗಿದ್ದರು. ಆಯೋಜಕರ ಎಡವಟ್ಟು ಹಾಗೂ ಪುರಭವನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಾಡು ನುಡಿಗೆ ಶ್ರವಿಸಿದವರಿಗೆ ಅಗೌರವವಾಗಿದೆ.

    ಇತ್ತೀಚೆಗಷ್ಟೇ ಸರ್ಕಾರದಿಂದ ಕೆಂಪೇಗೌಡ ಜಯಂತಿಯ ಅದ್ಧೂರಿ ಆಚರಣೆ ನಡೆದಿತ್ತು. ಬಿಬಿಎಂಪಿಯ ಕೂಗಳತೆ ದೂರದಲ್ಲಿಯೇ ನಾಡಪ್ರಭುಗೆ ಅವಮಾನ ನಡೆದಿದೆ. ಡಿಸೆಂಬರ್ 29ರಂದು ಕುವೆಂಪು ಜನ್ಮದಿನದ ಆಚರಣೆ ನಡೆಸಲಾಯಿತು. ಇದೇ ತಿಂಗಳ 12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿಲ್ಪಾ ಗಣೇಶ್ !

    ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿಲ್ಪಾ ಗಣೇಶ್ !

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಶಿಲ್ಪಾ ಗಣೇಶ್‍ರಿಂದ ಅವಮಾನವಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಪಟ್ಟಂತೆ ಕಿಡಿಗೇಡಿಗಳ ವಿರುದ್ಧ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗರಂ ಆಗಿದ್ದಾರೆ.

    ಶಿಲ್ಪಾ ಗಣೇಶ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭುವಿಗೆ ಅವಮಾನವಾಗಿದ್ದು, ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸಿಲ್ಕ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ. ಹೀಗೆಂದು ಫೋಟೋ ಸಮೇತೆ ಶಿಲ್ಪಾ ಗಣೇಶ್ ಹೆಸರಿನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಚಾರಕ್ಕೆ ಶಿಲ್ಪಾರಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಗಣೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ನನಗೆ ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ವಿಚಾರವಾಗಿ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಇದನ್ನು ಸೃಷ್ಠಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಎಂದು ಆರ್ ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನನ್ನ ಭಾವಚಿತ್ರವನ್ನು ಬಳಸಿಕೊಂಡು ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ.

    ಜುಲೈ 6ರಂದು ನಾನು ಎಂದಿನಂತೆ ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಗಿರಿಗೌಡ ಎಂಬವರ ನಂಬರ್ ನಿಂದ ನಾನು ಬರೆಯದೆ ಮತ್ತು ಹೇಳದೆ ಇರುವಂತಹ ಹೇಳಿಕೆಯನ್ನು ಭಾವಚಿತ್ರ ಸಮೇತ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ “ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸ್ಕಿಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ” ಎಂದು ಬರೆದು ಅದರ ಕೆಳಗೆ ಶಿಲ್ಪಾ ಗಣೇಶ್ ಎಂದು ನನ್ನ ಹೆಸರನ್ನು ಬರೆದಿದ್ದಾರೆ.

    ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತ್ತು. ಕೂಡಲೇ ನಾನು ನನ್ನ ನಿಜವಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ನಕಲಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೇನೆ. ನನ್ನ ಹೆಸರನ್ನು ಬಳಸಿಕೊಂಡು ವಿನಾಕಾರಣ ಹೆಸರಿಗೆ ಚ್ಯುತಿ ತರುವ ಕೆಲಸವನ್ನು ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಆರ್ ಆರ್ ನಗರ ಪೊಲೀಸರು ಕಿಡಿಗೆಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಬೆಂಗಳೂರನ್ನ ಕಟ್ಟಿದ್ದು ಕೆಂಪೇಗೌಡರಲ್ವಾ?- ಇತಿಹಾಸವನ್ನೇ ಬದಲಿಸೋ ಶಿಲಾಶಾಸನದ ಬೆನ್ನು ಬಿದ್ದಿದ್ದಾರೆ ಪುರಾತತ್ವ ತಜ್ಞರು

    ಬೆಂಗಳೂರನ್ನ ಕಟ್ಟಿದ್ದು ಕೆಂಪೇಗೌಡರಲ್ವಾ?- ಇತಿಹಾಸವನ್ನೇ ಬದಲಿಸೋ ಶಿಲಾಶಾಸನದ ಬೆನ್ನು ಬಿದ್ದಿದ್ದಾರೆ ಪುರಾತತ್ವ ತಜ್ಞರು

    ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ನಗರಿಯನ್ನು ಕಟ್ಟಿದ್ದು, ಹೆಸರು ಕೊಟ್ಟಿದ್ದು ನಿಜವಾಗಲೂ ಕೆಂಪೇಗೌಡರಲ್ವಾ? ಹಾಗಿದ್ರೆ ಬೆಂಗಳೂರನ್ನ ನಿಜವಾಗ್ಲೂ ನಿರ್ಮಿಸಿದ್ದು ಯಾರು? ಯಾವಾಗ? ಈ ಎಲ್ಲಾ ಪ್ರಶ್ನೆಗಳನ್ನಿಟ್ಟುಕೊಂಡು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ ಬೆಂಗಳೂರಲ್ಲಿ ಸಿಕ್ಕ ಮೊದಲ ಶಿಲಾಶಾಸನ.

    900ನೇ ಇಸವಿಯಲ್ಲೇ ಬೆಂಗಳೂರು ಪ್ರಾಂತ್ಯ ಇತ್ತು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆಯಂತೆ. ಹೌದು. ಇಂತಹದ್ದೊಂದು ಇತಿಹಾಸವನ್ನೇ ಬದಲಾಯಿಸುವಂತ, ಕೆಂಪೇಗೌಡರನ್ನೇ ಪ್ರಶ್ನೆ ಮಾಡುವಂತಹ ಶಿಲಾಸನ ಬೆಂಗಳೂರಿನ ಬೇಗೂರು ರಸ್ತೆಯಲ್ಲಿರೋ ನಗರೇಶ್ವರ ದೇಗುಲದಲ್ಲಿ ಈಗ ಇತಿಹಾಸ ತಜ್ಞರ ಕಣ್ಣಿಗೆ ಬಿದ್ದಿದೆ. ಇದರ ಜೊತೆಗೆ ಗಂಗರ ಕಾಲದ ಹಲವು ಕಲ್ಲಿನ ಕೆತ್ತನೆಗಳ ತುಂಡುಗಳು ಈ ದೇಗುಲದಲ್ಲಿದೆ.

    900 ಇಸವಿಯಲ್ಲಿ ಬೆಂಗಳೂರು ಪ್ರಾಂತ್ಯ ಇತ್ತು. ನಗಾತಾರ ರಾಜನ ಮಗ ಬೆಂಗಳೂರು ಕಾಳಗದಲ್ಲಿ ಸತ್ತ ಎನ್ನುವ ಪ್ರಸ್ತಾಪ ಈ ಕಲ್ಲಿನ ಶಾಸನದಲ್ಲಿ ಅಡಕವಾಗಿದೆ. ನಗಾತಾರ ರಾಜ ಇದ್ದಿದ್ದು ಗಂಗರ ಕಾಲದಲ್ಲಿ ಅಂದರೆ ಸುಮಾರು 900 ನೇ ಇಸವಿಯಲ್ಲಿ. ಆಗಲೇ ಬೆಂಗಳೂರು ಹೆಸರು ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಹಳೆಗನ್ನಡದ ಈ ಶಿಲಾಶಾಸನದಲ್ಲಿ ಪುರಾವೆಗಳಿವೆ. ಆದರೆ ಈ ಶಿಲಾ ಶಾಸನವನ್ನು ಇದುವರೆಗೂ ಇಲ್ಲಿನ ಜನ ಪುರಾತತ್ವ ಇಲಾಖೆಗೆ ನೀಡಿರಲಿಲ್ಲ.

    ಈಗ ದೇಗುಲದ ಅಂಗಳದಲ್ಲಿರುವ ಅಪರೂಪದ ಶಾಸನದ ಬೆನ್ನುಬಿದ್ದಿರುವ ಪುರಾತತ್ವ ತಜ್ಞರ ತಂಡ 900ನೇ ವರ್ಷದಲ್ಲೇ ಬೆಂಗಳೂರು ಹೆಸರು ಕೆತ್ತಿರುವ ಕೆತ್ತನೆಯನ್ನು ಪತ್ತೆ ಹಚ್ಚಿದೆ. ಆದರೆ ಇದು ನಿಜನಾ? ಕೆಂಪೇಗೌಡರು ಬೆಂಗಳೂರನ್ನು ಕಟ್ಟಲಿಲ್ವಾ ಎಂಬುದರ ಬಗ್ಗೆ ಆಳವಾದ ಅಧ್ಯಯನವೂ ಸದ್ದಿಲ್ಲದೇ ಶುರುವಾಗಿದೆ.