Tag: ಕೆಂಪೇಗೌಡ ಲೇ ಔಟ್

  • ಮಳೆಯಿಂದ ಕೆಂಪೇಗೌಡ ಲೇಔಟ್ ಸೈಟೇ ಮಾಯ!

    ಮಳೆಯಿಂದ ಕೆಂಪೇಗೌಡ ಲೇಔಟ್ ಸೈಟೇ ಮಾಯ!

    – ಅರ್ಧಂಬರ್ಧ ಕಾಮಗಾರಿಯಿಂದ ಕೆರೆಯಂತಾದ ನಿವೇಶನ

    ಬೆಂಗಳೂರು: ನಗರದ ಕೆಂಪೇಗೌಡ ಲೇಔಟ್‍ನ ಜಾಗದಲ್ಲಿ ಮನೆ ಕಟ್ಟಬೇಕಾ ಅಥವಾ ಈಜಾಡಬೇಕಾ ಅಂತ ಸೈಟ್ ಮಾಲೀಕರು ಇದೀಗ ಚಿಂತಾಕ್ರಾಂತಾರಾಗಿದ್ದಾರೆ. ಯಾಕಂದ್ರೆ ಸೈಟ್ ನೀಡಿರೋ ಬಿಡಿಎ, ಮೂಲಭೂತ ಸೌಕರ್ಯ ಕೊಟ್ಟಿಲ್ಲ. ಹಾಗಾಗಿ ಸೈಟ್‍ಗಳು ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕೆರೆಯಂತಾಗಿವೆ.

    ತಮ್ಮ ಸೈಟ್ ಹುಡುಕಿಕೊಂಡು ಬಂದ್ರೆ ಸೈಟ್‍ನಲ್ಲಿ ನೀರು ನಿಂತಿರೋದನ್ನ ನೋಡಿ ಇಲ್ಲಿಮನೆ ಕಟ್ಟೋದ ಅಥವ ಈಜಾಡೋದಾ ಅಂತ ಕನ್ಫ್ಯೂಸ್ ಆಗಿರೋದಾಗಿ ಸೈಟ್ ದಾರ ಸಂಜೀವ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    ಈ ಲೇಔಟ್‍ಗೆ ಬಿಡಿಎ ಇತ್ತೀಚೆಗೆ ಮೂಲಭೂತ ಅಭಿವೃದ್ಧಿಗೆ ಅಂತಾನೇ ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿತ್ತು. ಆದ್ರೆ ಅಷ್ಟೊಂದು ಮೊತ್ತ ಎಲ್ಲಿ ಹೋಯ್ತು ಅನ್ನೋದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಇಡೀ ಲೇಔಟ್ ತುಂಬಾ ಅರ್ಧಂಬರ್ಧ ರೋಡ್ ಕಾಮಗಾರಿ, ಅರ್ಧ ಚರಂಡಿ ಕಾಮಗಾರಿ ಮಾಡಿ, ಪೂರ್ತಿ ಲೇಔಟ್‍ನ್ನ ಹಾಳು ಮಾಡಿ ಸೈಟ್ ವಾರಸುದಾರರಿಗೆ ಮನೆ ಕಟ್ಟೋದಕ್ಕೆ ಸಾಧ್ಯವಾಗದ ರೀತಿ ಮಾಡಿಟ್ಟಿದ್ದಾರೆ ಅಂತ ಸ್ಥಳೀಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv