ಬೆಂಗಳೂರು: ಕಾವೇರಿ (Cauvery) ನೀರು ತಮಿಳುನಾಡಿಗೆ (Tamil Nadu) ಬಿಡುತ್ತಿರುವ ವಿಚಾರವಾಗಿ ಶುಕ್ರವಾರ ಕರ್ನಾಟಕ ಬಂದ್ (Karnataka Bandh) ಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಪ್ರತಿಭಟನೆಗೆ ಯತ್ನಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನಾಕಾರರು 09:50ರ ವೇಳೆಗೆ ಶಿವಮೊಗ್ಗಕ್ಕೆ ಹೊರಡಲಿದ್ದ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಏರ್‌ಪೋರ್ಟ್ ಒಳಗೆ ಪ್ರವೇಶಿಸುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: Karnataka Bandh: ಫಿಲ್ಮ್ ಚೇಂಬರ್ ಮುಂದೆ ಕಲಾವಿದರ ಪ್ರತಿಭಟನೆಗೆ ಸಿದ್ಧತೆ
ಬೆಂಗಳೂರು: ವಿಮಾನಗಳ ಹಾರಾಟದ ವೇಳೆ ನಿಷೇಧಿತ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಡ್ರೋನ್ (Drone) ಹಾರಾಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬುಧವಾರ ನಡೆದಿದೆ.
ನಿಲ್ದಾಣದ ರನ್‌ವೇ ಬಳಿ ವಿಮಾನಗಳ ಪಕ್ಕದಲ್ಲೇ ಡ್ರೋನ್ ಹಾರಾಡಿದೆ. ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್ ಮೈಲಿ ದೂರದಲ್ಲಿ ಡ್ರೋನ್ ಹಾರಾಡಿದ್ದು, ಆಂತಂಕಕ್ಕೆ ಕಾರಣವಾಗಿದೆ. ಡ್ರೋನ್ ಹಾರಾಟ ಕಂಡು ತಕ್ಷಣ ಪೈಲಟ್‌ಗಳು ಎಟಿಸಿ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು
ಮೂಲಗಳ ಪ್ರಕಾರ ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳ ಹಾರಾಟದ ಸ್ಥಳದಲ್ಲೇ ಕೇಸರಿ ಹಾಗೂ ಹಳದಿ ಬಣ್ಣದ ಡ್ರೋನ್ ಹಾರಿದೆ. ನಿಷೇಧದ ನಡುವೆಯೂ ಡ್ರೋನ್ ಹಾರಿದ್ದು ಹೇಗೆ ಎಂದು ಏರ್‌ಪೋರ್ಟ್ ಭದ್ರತಾ ಪಡೆ ಹಾಗೂ ಎಟಿಸಿ ಕಂಟ್ರೋಲ್ ಟೀಂ ತನಿಖೆ ನಡೆಸುತ್ತಿದೆ.
ಬೆಂಗಳೂರು: ಕಾವೇರಿ (Cauvery) ವಿಚಾರವಾಗಿ ಕರೆ ನೀಡಲಾಗಿರುವ ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಮುಂಜಾನೆಯಿಂದಲೂ ಸಹಜ ಸ್ಥಿತಿಯಿದೆ.
ಏರ್‌ಪೋರ್ಟ್‌ನಲ್ಲಿ ಯಾವುದೇ ಬಂದ್‌ನ ಪರಿಸ್ಥಿತಿ ಇಲ್ಲ. ನಿಲ್ದಾಣದಲ್ಲಿ ಎಂದಿನಂತೆ ಕ್ಯಾಬ್‌ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಬೆಂಗಳೂರು ಬಂದ್- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ
ಓಲಾ, ಊಬರ್, ಕೆಎಸ್‌ಟಿಡಿಸಿ ಪ್ರಯಾಣಿಕರಿಗೆ ಸೌಲಭ್ಯ ಸಿಗುತ್ತಿದೆ. ಎಂದಿನಂತೆ ಪ್ರಯಾಣಿಕರು ಯಾವುದೇ ಪರದಾಟವಿಲ್ಲದೇ ಪ್ರಯಾಣ ಮಾಡುತ್ತಿದ್ದು, ಏರ್‌ಪೋರ್ಟ್‌ನಲ್ಲಿ ಸಹಜ ಸ್ಥಿತಿಯಿದೆ. ಬಿಎಂಟಿಸಿ ವಾಯುವಜ್ರ ವಾಹನಗಳು ಸಹ ರಸ್ತೆಗಿಳಿದಿದ್ದು ಪ್ರಯಾಣಿಕರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್
ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ರಾಜ್ಯ ಸರ್ಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ (Airport) ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ (M.B.Patil) ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಮಾತನಾಡಿದ ಅವರು, ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯ ವಿಮಾನವು ಗುರುವಾರ ಬೆಳಗ್ಗೆ 9:50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ಹೊರಟು 11:05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ತಾವೂ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ ನಮ್ಮ ಪಕ್ಷ: ಸಂತೋಷ್ ಲಾಡ್
ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದಕ್ಕೆ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‌ಪೋರ್ಟ್ ಮೈದಾಳಿದ್ದು, ಇದರಲ್ಲಿ ಏರ್‌ಬಸ್ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಜನತೆಗೆ ಸಿಹಿ ಸುದ್ದಿ- ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂ. ಕಡಿತ
ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಟಿಂಗ್ ವಿಮಾನಗಳು ಲಭ್ಯ ಇರಲಿವೆ. ಜೊತೆಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೋದಿ ಹೆಸರು ಹೇಳಿಕೊಂಡು ಗೆಲ್ಲೋದಲ್ಲ – ಸ್ವಪಕ್ಷದ ವಿರುದ್ಧ ಮತ್ತೆ ಗುಡುಗಿದ ರೇಣುಕಾಚಾರ್ಯ
ಮೂಲ ಯೋಜನೆಯಲ್ಲಿ ಈ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಇರಲಿಲ್ಲ. ಈಗ ಅದನ್ನು ಪರಿಷ್ಕರಿಸಿ, ಆ ಅನುಕೂಲವನ್ನೂ ನೀಡಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್ ಮತ್ತು 3,050 ಮೀಟರ್ ಉದ್ದದ ರನ್‌ವೇಯನ್ನು ಇದು ಒಳಗೊಂಡಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್ ಮುಂಗಡವಾಗಿ ಬುಕಿಂಗ್ ಆಗಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶೋತ್ಸವದ ಲಾಟರಿ ಖರೀದಿಗೆ ಮುಗಿಬಿದ್ದ ಜನ- ಕಿ.ಮೀ ಉದ್ದದ ಸಾಲು
ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಸ್ ಒಂದು ಅಪಘಾತವಾಗಿ (Bus Accident) 10 ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಷಟಲ್ ಬಸ್ ಅಪಘಾತವಾಗಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಘಟನೆಯಿಂದ 10 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ರಶ್ ಅಂತ ಡ್ರೈವರ್ ಸೀಟ್‌ನಲ್ಲಿ ಮಕ್ಕಳ ಜೊತೆ ಬಸ್ ಹತ್ತಿದ ಮಹಿಳೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಬೆಂಗಳೂರಿಗೆ (Bengaluru) ಬಂದಿಳಿಯಬೇಕಿದ್ದ ವಿಮಾನಗಳನ್ನು (Flight) ಬೇರೆಡೆಗೆ ಕಳುಹಿಸಲಾಗಿದೆ.
ಬೇರೆಡೆಗೆ ಕಳುಹಿಸಲಾಗಿರುವ ವಿಮಾನಗಳಲ್ಲಿ ದೆಹಲಿ, ಮುಂಬೈ ಸೇರಿದಂತೆ ಇತರ ಭಾಗಗಳಿಂದ ಆಗಮಿಸುತ್ತಿದ್ದ ವಿಮಾನಗಳು ಸೇರಿವೆ. 10ಕ್ಕೂ ಹೆಚ್ಚು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.
ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4-6 ಸೆಂ.ಮೀ ತೀವ್ರ ಮಳೆಯಾಗಿದೆ. ಮಾತ್ರವಲ್ಲದೇ ಗಂಟೆಗೆ 20 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ವಿಮಾನಗ ಲ್ಯಾಂಡಿಂಗ್ ಮಾಡಲು ಅಡ್ಡಿಯಾಗಿದೆ. ಇದೀಗ ಮುಂಜಾಗೃತಾ ಕ್ರಮವಾಗಿ ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು Kempegowda International Airport Bengaluru (ಬಿಐಎಎಲ್) ಕಟ್ಟಡದ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಇಂಕ್ (ಜಿಬಿಸಿಐ) ನೀಡುವ ಪ್ರತಿಷ್ಠಿತ ಪೀರ್(ಪರ್ಫಾರ್ಮೆನ್ಸ್ ಎಕ್ಸೆಲೆನ್ಸ್ ಇನ್ ಎಲೆಕ್ಟ್ರಿಸಿಟಿ ರಿನಿವಲ್) ಪ್ಲಾಟಿನಂ ಸರ್ಟಿಫಿಕೇಷನ್ ಪಡೆದಿದೆ. ಈ ಮಾನ್ಯತೆಯಿಂದ ಬಿಐಎಎಲ್ ತನ್ನ ವಿಮಾನ ನಿಲ್ದಾಣದ ವಿದ್ಯುಚ್ಛಕ್ತಿ ಮೂಲಸೌಕರ್ಯಕ್ಕೆ ಅಸಾಧಾರಣವಾದ 92/100 ಅಂಕ ಪಡೆದ ವಿಶ್ವದಲ್ಲೇ ಮೊದಲ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿದೆ.
ಬೆಂಗಳೂರು ವಿಮಾನ ನಿಲ್ದಾಣದ ವಿದ್ಯುತ್ ವ್ಯವಸ್ಥೆಯು ಅದರ ಸುಸ್ಥಿರ ಅಭಿವೃದ್ಧಿ, ಗುರಿಗಳಿಗೆ ಪೂರಕವಾಗಿರುವುದನ್ನು ಮುಂದುವರಿಸುವ ಬಿಐಎಎಲ್ ವಿಮಾನ ನಿಲ್ದಾಣದ ವಿದ್ಯುಚ್ಛಕ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಪೀರ್ ಪ್ರಮಾಣೀಕರಣ ಪಡೆದಿದ್ದು, ಇದು ಜಿಬಿಸಿಐನ ಕಠಿಣ ಪ್ರಮಾಣೀಕರಣ ಮತ್ತು ಪರಿಶೀಲನೆಯ ಪ್ರಕ್ರಿಯೆಗೆ ಒಳಪಟ್ಟಿತ್ತು. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ
ಜಿಬಿಸಿಐ ವಿಶ್ವದ ಮುಂಚೂಣಿಯ ಸುಸ್ಥಿರತೆ ಮತ್ತು ಆರೋಗ್ಯ ಪ್ರಮಾಣೀಕರಣ ಹಾಗೂ ಅಧಿಕೃತತೆ ನೀಡುವ ಸಂಸ್ಥೆಯಾಗಿದೆ ಮತ್ತು ಲೀಡ್ ಹಸಿರು ಕಟ್ಟಡ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಬಿಐಎಎಲ್ ಸುಸ್ಥಿರವಾಗಿ ನಿರ್ಮಿಸಲು ತನ್ನ ಬದ್ಧತೆಯ ಮೂಲಕ ಅಸಾಧಾರಣ ಕಾರ್ಯಕ್ಷಮತೆ ನಿರೂಪಿಸಿದೆ. ಈ ಯೋಜನೆಯ ಶೇ. 98ರಷ್ಟು ವಿತರಣೆಯ ಪರಿಧಿಯು ವಿತರಣೆಯ ಪುನರುಕ್ತಿ ಮತ್ತು ಸ್ವಯಂ ಪುನಃ ಸ್ಥಾಪನೆಗೊಳ್ಳುವ ಸಾಮರ್ಥ್ಯ ಹೊಂದಿದೆ. ಇದು 6.8 ಮೆಗಾವ್ಯಾಟ್‌ನ ಸ್ಥಳದಲ್ಲಿ ಸೋಲಾರ್ ಪಿವಿ ವ್ಯವಸ್ಥೆಯನ್ನು ಹೊಂದಿದ್ದು, ಗ್ರಿಡ್ ವೈಫಲ್ಯ ಮತ್ತು ದೀರ್ಘಾವಧಿ ವಿದ್ಯುತ್ ಸ್ಥಗಿತಗೊಂಡಾಗ ನೆರವಾಗುತ್ತದೆ ಮತ್ತು ಇದರ ಶೇ.100ರಷ್ಟು ಶಕ್ತಿಯು ನವೀಕರಿಸಬಲ್ಲ ಶಕ್ತಿಯಾಗಿದೆ.
ತನ್ನ ಶಕ್ತಿಯ ಬೇಡಿಕೆ ಮತ್ತು ಬಳಕೆಯಲ್ಲಿ ಶಾಶ್ವತವಾಗಿ ಕಡಿತ ಮಾಡಲು ಬಿಐಎಎಲ್ ಎಲ್ಲ ಸಿಎಫ್‌ಎಲ್(ಕಾಂಪ್ಯಾಕ್ಟ್ ಫ್ಲೋರೊಸೆಂಟ್ ಲ್ಯಾಂಪ್) ಹ್ಯಾಲೊಜೆನ್ ದೀಪಗಳನ್ನು ಎಲ್‌ಇಡಿ, ಪಿಎಲ್‌ಸಿ (ಪ್ರೋಗ್ರಾಮಬಲ್ ಲಾಜಿಕ್ ಕಂಟ್ರೋಲರ್) ಆಧರಿತ ಟರ್ಮಿನಲ್ ಲೈಟ್ ಆಟೊಮೇಷನ್ ಸಿಸ್ಟಂ(ಟಿಎಲ್‌ಎ) ಮೂಲಕ ಟರ್ಮಿನಲ್ ದೀಪಗಳ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮತ್ತು ವಿವಿಧ ಲೋಡ್ ಸಂದರ್ಭಗಳಲ್ಲಿ ಶೀತಲ ಗೃಹದ ಕಾರ್ಯಕ್ಷಮತೆ ಉತ್ತಮಪಡಿಸಲು ಚಿಲ್ಲರ್ ಪ್ಲಾಂಟ್ ಆಪ್ಟಿಮೈಸರ್(ಸಿಪಿಒ) ಬಳಸುತ್ತದೆ. ಒಟ್ಟಾರೆಯಾಗಿ ನವೀಕರಿಸಬಲ್ಲ ಶಕ್ತಿ ಬಳಕೆ, ಶಕ್ತಿ ಸಂರಕ್ಷಣೆಯ ಕ್ರಮಗಳು ಮತ್ತು ಸುಸ್ಥಿರ, ದಕ್ಷ ವ್ಯವಸ್ಥೆಯನ್ನು ನೀಡುವ ಆಧುನಿಕ ವ್ಯವಸ್ಥೆಯು ವಿಮಾನ ನಿಲ್ದಾಣಕ್ಕೆ 14.7 ಮಿಲಿಯನ್ ಯೂನಿಟ್ ವಿದ್ಯುಚ್ಛಕ್ತಿ ಉಳಿತಾಯ ಮಾಡಲು ನೆರವಾಗಿದ್ದು 84 ಮಿಲಿಯನ್ ರೂ.ಗಳು(1.2 ಮಿಲಿಯನ್ ಡಾಲರ್) ವೆಚ್ಚ ಉಳಿಸಲು ನೆರವಾಗಿದೆ ಮತ್ತು ವಾರ್ಷಿಕ 46 ಕಿಲೋಟನ್ನುಗಳಷ್ಟು ಇಂಗಾಲದ ಡೈಆಕ್ಸೆಡ್ ಹೊರಹೊಮ್ಮುವಿಕೆ ನಿವಾರಿಸಿದೆ. ಇದನ್ನೂ ಓದಿ: ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ
ಬಿಐಎಎಲ್‌ನ ಎಂ.ಡಿ. ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ವಿದ್ಯುಚ್ಛಕ್ತಿ ಉಳಿಸುವಲ್ಲಿ ನಮ್ಮ ಸತತ ಪರಿಶ್ರಮಕ್ಕೆ ಜಿಬಿಸಿಐನಿಂದ ಈ ಪುರಸ್ಕಾರ ಪಡೆದಿರುವುದು ನಮಗೆ ಬಹಳ ಹೆಮ್ಮೆ ತಂದಿದೆ. ವಿಶ್ವಮಟ್ಟದ ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯಾಗಿ ಬಿಐಎಎಲ್ ಸ್ಥಳದಲ್ಲಿಯೇ ನವೀಕರಿಸಬಲ್ಲ ವಿದ್ಯುಚ್ಛಕ್ತಿ ಉತ್ಪಾದನಾ ವ್ಯವಸ್ಥೆಗಳನ್ನು ಸ್ಥಾಪಿಸಲು, ಹೊರಗಿನಿಂದ ನವೀಕರಿಸಬಲ್ಲ ವಿದ್ಯುತ್ ಪಡೆಯಲು ಮತ್ತು 2020-21ರ ವೇಳೆಗೆ ನೆಟ್ ಎನರ್ಜಿ ನ್ಯೂಟ್ರಲ್ ಆಗಿಸುವ ದೀರ್ಘಾವಧಿ ಗುರಿ ಸಾಧಿಸಲು ಹಲವಾರು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪೀರ್ ಪ್ಲಾಟಿನಂ ರೇಟಿಂಗ್ ಮಾನ್ಯತೆಯು ನಮಗೆ ನಮ್ಮ ಪ್ರಯಾಣಿಕರ ಹೆಚ್ಚಾಗುತ್ತಿರುವ ವಿಮಾನ ಸಾರಿಗೆ ಅಗತ್ಯಗಳನ್ನು ಪೂರೈಸುತ್ತಲೇ ಸುಸ್ಥಿರತೆಯ ಪ್ರಯಾಣಕ್ಕೆ ವೇಗ ತುಂಬಲು ಮತ್ತಷ್ಟು ಉತ್ತೇಜಿಸಿದೆ ಎಂದು ಹೇಳಿದ್ದಾರೆ.
ಜಿಬಿಸಿಐ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಯುಎಸ್‌ಜಿಬಿಸಿಯ ಹಿರಿಯ ಉಪಾಧ್ಯಕ್ಷೆ ಮಿಲಿ ಮಜುಂದಾರ್, ಸುಸ್ಥಿರತೆ ಸಾಧಿಸಲು ಕಟ್ಟಡಗಳು ಮತ್ತು ಸಂಸ್ಥೆಗಳು ಹೇಗೆ ಜೊತೆಗೂಡಿ ಕೆಲಸ ಮಾಡಬಹುದು ಎನ್ನುವುದಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅದ್ಭುತ ಉದಾಹರಣೆಯಾಗಿದೆ. ಜಿಬಿಸಿಐನಲ್ಲಿ ನಾವು ಅತ್ಯಂತ ಹಸಿರು ಕಟ್ಟಡವೆಂದರೆ ಅದು ನಾವು ನಿರ್ಮಿಸಿರುವುದೇ ಎಂದು ಹೇಳುತ್ತೇವೆ. ಕಟ್ಟಡವೊಂದು ಅತ್ಯಂತ ವಿದ್ಯುತ್ ಕ್ಷಮತೆ ಹೊಂದಿದ್ದರೂ ಪ್ರಸ್ತುತ ಇರುವ ಕಟ್ಟಡವನ್ನು ಕೆಡವಿ ಅದನ್ನು ಹೊಸ ಕಟ್ಟಡದೊಂದಿಗೆ ಬದಲಾಯಿಸುವುದು ೮೦ ವರ್ಷಗಳು ತೆಗೆದುಕೊಳ್ಳಬಹುದು. ಇಂಗಾಲ ನಿವಾರಣೆಯ ಪ್ರಯತ್ನಗಳಲ್ಲಿ ಪ್ರಸ್ತುತ ಇರುವ ಕಟ್ಟಡಗಳು ಪ್ರಮುಖ ಪಾತ್ರ ವಹಿಸುತ್ತವೆ, ಏಕೆಂದರೆ ಅವು ಕಟ್ಟಡಗಳು ಎಲ್ಲ ಇಂಗಾಲದ ಹೊರಹೊಮ್ಮುವಿಕೆಯ ಶೇ.೪೦ಕ್ಕೆ ಕಾರಣವಾಗುತ್ತವೆ ಮತ್ತು ಜಿಬಿಸಿಐ ಇಂಡಿಯಾ ಡೆವಲಪರ್‌ಗಳು, ಉತ್ಪಾದಕರು ಹಾಗೂ ಸಣ್ಣ ಮತ್ತು ಮಧ್ಯಮ ಹಂತದ ಉದ್ಯಮಗಳೊಂದಿಗೆ ಪ್ರಸ್ತುತ ಕಟ್ಟಡಗಳ ಹಸಿರೀಕರಣ ಸುಧಾರಿಸಲು ಶ್ರಮಿಸುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಸ್ಥಿರ ಅಭಿವೃದ್ಧಿಗೆ ತನ್ನ ಬದ್ಧತೆಯಲ್ಲಿ ಉನ್ನತ ಸಾಧನೆ ಮಾಡಿದೆ. ಪೀರ್ ಪ್ಲಾಟಿನಂ ಮಾನ್ಯತೆ ಪಡೆದಿರುವುದಕ್ಕೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಅನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಇತರೆ ವಿಮಾನ ನಿಲ್ದಾಣಗಳೂ ಹಸಿರು ವಿಧಾನದತ್ತ ಮುನ್ನಡೆಯಲು ಕೋರುತ್ತೇನೆ ಎಂದರು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಮತ್ತು ಸುಸ್ಥಿರವಾಗಿ ನಿರ್ಮಿಸುವಲ್ಲಿ ತನ್ನ ಬದ್ಧತೆಯನ್ನು ಅಸಾಧಾರಣ ಕಾರ್ಯಕ್ಷಮತೆಯೊಂದಿಗೆ ನಿರೂಪಿಸಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾದ, ಸಂಪರ್ಕರಹಿತ ಪ್ರಯಾಣಿಕರ ಪರಿಶೀಲನೆ, ಸೆಲ್ಫ್-ಬ್ಯಾಗೇಜ್ ಡ್ರಾಪ್ಸ್, ಬಯೋಮೆಟ್ರಿಕ್ ಆಧರಿಸಿದ ಸೆಲ್ಫ್-ಬೋರ್ಡಿಂಗ್ ವ್ಯವಸ್ಥೆ ಹಾಗೂ ಅತ್ಯುತ್ತಮವಾಗಿ ರೂಪಿಸಿದ ಮಾರ್ಗಗಳ ಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣವು 74 ಸ್ಥಳೀಯ ತಾಣಗಳು ಮತ್ತು ವಿಶ್ವದ ಅಂತಾರಾಷ್ಟಿçÃಯ ಮಾರುಕಟ್ಟೆಗಳನ್ನು ಸಂಪರ್ಕಿಸುತ್ತದೆ. ಕಳೆದ ಒಂದು ದಶಕಕ್ಕೂ ಮೇಲ್ಪಟ್ಟು ಬಿಐಎಎಲ್ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು ಅದರಲ್ಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ರಿವ್ಯೂ ಅವಾಡ್ಸ್( 2019), ಇಂಡಿಯಾ ಕಾರ್ಗೊ ಅವಾರ್ಡ್ಸ್(2020)ನಲ್ಲಿ ಬೆಸ್ಟ್ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಪುರಸ್ಕಾರ ಗೆದ್ದಿದೆ, ಎಫ್‌ಐಸಿಸಿಐ ಸ್ಮಾರ್ಟ್ ಅರ್ಬನ್ ಇನ್ನೊವೇಷನ್ ಅವಾರ್ಡ್ ಫಾರ್ ಸೋಲಾರ್ ಅಂಡ್ ರಿನೀವಬಲ್ ಎನರ್ಜಿ(2021) ಮತ್ತು ಎನ್ವಿರಾನ್‌ಮೆಂಟಲ್ ಬೆಸ್ಟ್ ಪ್ರಾಕ್ಟೀಸಸ್ 2021 ಪುರಸ್ಕಾರವನ್ನು ಇಂಪ್ಯಾಕ್ಟ್ ಮಿಟಿಗೇಷನ್ ಅಂಡ್ ಅಡಾಪ್ಷನ್ ವಿಭಾಗದಲ್ಲಿ ಪಡೆದಿದೆ.
ಬೆಂಗಳೂರು: ಲಾಕ್‍ಡೌನ್ ಮಧ್ಯೆಯೂ ಏರ್ಪೋರ್ಟ್ ಗಳಿಗೆ ಸಬಂಧಿಸಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕುರಿತು ಸಂತಸದ ಸುದ್ದಿ ಹೊರ ಬಿದ್ದಿದ್ದು, ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಪ್ರಮುಖ ನಗರಗಳ ಹೊಸ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೈ ಸ್ಟಾಂಡರ್ಡ್ ಮೆಂಟೇನ್ ಹೊಂದಿದ್ದು, ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳು ಪ್ರಯಾಣಿಕರು ವೇಗವಾಗಿ ಹಾಗೂ ಸರಳವಾಗಿ ಸಂಚರಿಸಲು ಅನುಕೂಲವಾಗಿದೆ. ಹೀಗಾಗಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಬಿರುದು ಪಡೆದಿದೆ. ಈ ಮೂಲಕ ಸತತ ಮೂರನೇ ಬಾರಿ ಕೇಂದ್ರ ಏಷ್ಯಾದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಖ್ಯಾತಿ ಪಡೆದಿದೆ.
ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ 2020ನಲ್ಲಿ ಪ್ರಯಾಣಿಕರು ಮತ ಹಾಕಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸತತ ಮೂರು ಬಾರಿ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿದ್ದಾರೆ. ಇದು ಕೇಂದ್ರ ಏಷ್ಯಾ ಭಾಗದಲ್ಲಿ ಹಾಗೂ ಭಾರತದಲ್ಲೇ ನಮ್ಮ ನೆಚ್ಚಿನ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಪ್ರಯಾಣಿಕರ ವಾರ್ಷಿಕ ಸರ್ವೇ ಆಧಾರದ ಮೇಲೆ ವಿಶ್ವಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಿಗೆ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ ನೀಡಲಾಗುತ್ತದೆ. ಒಟ್ಟು ಸುಮಾರು 100 ದೇಶಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳ ಸ್ಥಿತಿಗತಿ, ಚೆಕ್-ಇನ್, ವಿಮಾನಗಳ ಆಗಮನ, ಟ್ರಾನ್ಸಫರ್ಸ್, ಶಾಪಿಂಗ್, ಭದ್ರತೆ, ಇಮಿಗ್ರೇಷನ್ ಹಾಗೂ ಡಿಪಾರ್ಚರ್ಸ್ ಈ ಸೌಲಭ್ಯಗಳನ್ನು ಪರಿಗಣಿಸಿ ಮತ ಹಾಕುತ್ತಾರೆ.
ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ಮಂಡಳಿ, ಸಿಬ್ಬಂದಿ ಸಾಧನೆಯಾಗಿದೆ. ಇವರೆಲ್ಲರ ಅವಿರತ ಸೇವೆಯಿಂದಾಗಿ ಮತ್ತೊಮ್ಮೆ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಭಾರತವು ವಿಶ್ವ ಮಟ್ಟದಲ್ಲಿ ವಿಮಾನ ಪ್ರಯಾಣದಲ್ಲಿ ಭಾರೀ ಸ್ಪರ್ಧೆಯೊಡ್ಡುತ್ತಿದೆ. ಅಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಹಲವಾರು ಅಧುನಿಕ ಬದಲಾವಣೆಗಳ ಮೂಲಕ ಪ್ರಯಾಣಿಕರಿಗೆ ನೆಚ್ಚಿನ ತಾಣವಾಗಿದೆ. ಪ್ರಯಾಣಿಕರು ಇದನ್ನು ಸವಿಯುತ್ತಿದ್ದಾರೆ ಎಂದು ಸ್ಕೈಟ್ರ್ಯಾಕ್ಸ್ ಸಿಇಒ ಎಡ್ವರ್ಡ್ ಪ್ಲ್ಯಾಸ್ಟೆಡ್ ತಿಳಿಸಿದ್ದಾರೆ.
ಹೊಸ ಅತ್ಯಾಧುನಿಕ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದರ ಜೊತೆಗೆ ಮುಂಬರುವ ತಿಂಗಳುಗಳಲ್ಲಿ ಬಾರ್ ಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. 11 ವರ್ಷಗಳ ವಿಮಾನ ನಿಲ್ದಾಣ ಭಾರತ ಹಾಗೂ ಕೇಂದ್ರ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಸ್ಥಾನವನ್ನು ಸತತ 3ನೇ ಬಾರಿ ಉಳಿಸಿಕೊಂಡಿರುವುದು ದೊಡ್ಡ ಸಾಧನೆ. ಈ ಪ್ರಶಸ್ತಿಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ವರ್ಲ್ಡ್ ಕ್ಲಾಸ್ ಎಕ್ಸ್ ಪೀರಿಯನ್ಸ್ ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೆ ಅತ್ಯುತ್ತಮ ತಂತ್ರಜ್ಞಾನ ಹಾಗೂ ಸುಸ್ಥಿರತೆಯನ್ನು ಗುರುತಿಸಲಾಗಿದೆ.
ಏರ್ಪೋರ್ಟ್ ಸಿಬ್ಬಂದಿಯ ಅಸಾಧಾರಣ ಪ್ರಯತ್ನ ಹಾಗೂ ಬದ್ಧತೆಗೆ ಸಂದಿರುವ ಅತ್ಯದ್ಭುತ ಬಹುಮಾನ ಇದು. ವಿಮಾನ ನಿಲ್ದಾಣದ ಈ ಸಾಧನೆಗೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಕೆ.ಮರಾರ್ ತಿಳಿಸಿದ್ದಾರೆ.
ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪ್ರಶಸ್ತಿ ಲಭಿಸಿರುವುದು ಏರ್‍ಪೋರ್ಟ್ ಹಾಗೂ ಏರ್ ಲೈನ್ಸ್ ಇಂಡಸ್ಟ್ರಿಗೆ ನೈತಿಕ ಸ್ಥೈರ್ಯವನ್ನು ತುಂಬಿದಂತಾಗಿದೆ.
– ವಿಮಾನ ನಿಲ್ದಾಣದಲ್ಲಿ ಸಚಿವ ಸುಧಾಕರ್‌ಗೆ ಕೊರೊನಾ ತಪಾಸಣೆ
ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‍ಗೆ ಸಿಬ್ಬಂದಿ ಕೊರೊನಾ ತಪಾಸಣೆ ನಡೆಸಿದ್ದಾರೆ.
ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಸಿಬ್ಬಂದಿ ಸಚಿವರಿಗೂ ಉಷ್ಣದ ಮಾಪನ ಹಿಡಿದು ತಪಾಸಣೆ ನಡೆಸಿದರು. ಸುಧಾಕರ್ ಅವರು ಸಹ ತಪಾಸಣೆಗೆ ಸಹಕರಿಸಿ, ನಂತರ ಒಳಗೆ ಹೋದರು.
ಕೊರೊನಾ ತಪಾಸಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ವಿಮಾನ ನಿಲ್ದಾಣದ ಒಳಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, ಶಂಕಿತರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಇದಕ್ಕೆ ಸಹಕರಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ಕರೆ ನೀಡಿದರು.
#COVID19 ವಿರುದ್ಧದ ಈ ಸಮರದಲ್ಲಿ, ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು, PG ವಿದ್ಯಾರ್ಥಿಗಳು, ಶುಶ್ರೂಷಕಿಯರು, ಅರೆವೈದ್ಯಕೀಯ, ಸಿಬ್ಬಂದಿ – ಈ ಎಲ್ಲ ನಮ್ಮ #HealthWarriors – ಆರೋಗ್ಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾವು ನಿಶ್ಚಿತವಾಗಿ #Corona ವಿರುದ್ಧದ ಈ ಯುದ್ಧದಲ್ಲಿ ಗೆಲ್ಲಲ್ಲಿದ್ದೇವೆ.
ಇದೇ ವೇಳೆ ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಹೋಟೆಲುಗಳನ್ನು ಸೋಂಕಿತರಿಗಾಗಿ ಪ್ರತ್ಯೇಕಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹತ್ತಿರದ ಹೋಟೆಲುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಖಾಸಗಿ ಸ್ಥಳಗಳಲ್ಲಿ ಸರ್ಕಾರದ ವತಿಯಿಂದಲೇ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಕುರಿತು ಪರಾಮರ್ಶೆ ಮಾಡಲಾಗುತ್ತಿದೆ ಎಂದರು.
ಮತ್ತೊಂದೆಡೆ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಎದುರಾದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದರು. ನಂತರ ಶಂಕಿತರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗುವ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು: ವಿದ್ಯಾಭ್ಯಾಸದ ಹೆಸರಲ್ಲಿ 32 ಯುವತಿಯರನ್ನು ವಿದೇಶಕ್ಕೆ ಸಾಗಾಣೆ ಮಾಡುತ್ತಿದ್ದ ಖದೀಮನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.
ಟೊಮಿ ಟಾಮ್ (36) ಬಂಧಿತ ಆರೋಪಿ. 32 ಯುವತಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸುವುದಾಗಿ ನಂಬಿಸಿ ಟೊಮಿ ಟಾಮ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ತಂದಿದ್ದನು. ಏರ್ ಪೋರ್ಟ್‍ನಲ್ಲಿ ಇಮೀಗ್ರಿಶನ್ ಪ್ರಕಿಯೆಯ ಸಮಯದಲ್ಲಿ ಆರೋಪಿ ಯುವತಿಯರನ್ನು ವಿದೇಶಕ್ಕೆ ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಸಂಗತಿ ಸಿಬ್ಬಂದಿಗೆ ತಿಳಿದಿದೆ. ತಕ್ಷಣ ಸಿಬ್ಬಂದಿಏರ್ ಪೋರ್ಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಟೊಮಿ ಟಾಮ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು 32 ಅಮಾಯಕ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.