Tag: ಕೆಂಪು ದೀಪ

  • ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಬೆಂಗಳೂರು: ಕೆಂಪು ದೀಪ ಹೋದ್ರೂ ವಿವಿಐಪಿಗಳ ಸಂಸ್ಕೃತಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಸಿಎಂಗಾಗಿ ರೋಗಿಯಿದ್ದ  ಆಂಬುಲೆನ್ಸ್ ತಡೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಂಗಳವಾರ ಸಂಜೆ ಬೆಂಗಳೂರಿನ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದ ಎದುರು ಈ ಘಟನೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬರುವಿಕೆಗಾಗಿ ಪೊಲೀಸರು ವಾಹನಗಳನ್ನ ತಡೆ ಹಿಡಿದಿದ್ದರು. ಈ ವೇಳೆ ರೋಗಿ ಇದ್ದ ಆಂಬುಲೆನ್ಸ್ ಕೂಡ ವಾಹನಗಳ ಮಧ್ಯೆ ಸಿಲುಕಿತ್ತು. ಸುಮಾರು 10 ನಿಮಿಷ ಆಂಬುಲೆನ್ಸ್ ರಸ್ತೆಯಲ್ಲಿಯೇ ನಿಂತಿತ್ತು.

    ವಿವಿಐಪಿ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಗಣ್ಯ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆಂಬುಲೆನ್ಸ್ ಹಾಗೂ ಅಗ್ನಿಶಮಕ ವಾಹನಗಳಂತಹ ತುರ್ತು ಸೇವೆ ಒದಗಿಸುವಂತಹ ವಾಹನಗಳು ಮಾತ್ರ ಕೆಂಪು ದೀಪ ಬಳಸಬಹುದು ಎಂದು ಹೇಳಿದೆ.

  • ಮೋದಿಯವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಾಯ್ತಾ: ಖರ್ಗೆ ಪ್ರಶ್ನೆ

    ಮೋದಿಯವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಾಯ್ತಾ: ಖರ್ಗೆ ಪ್ರಶ್ನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಿತ್ತಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಅವರಿಗೆ ದೀಪ ಬೇಕಿತ್ತು. ಪ್ರಧಾನಿಯಾಗಿ ಮೂರು ವರ್ಷ ದೀಪ ಇಟ್ಟುಕೊಂಡೇ ಓಡಾಡಿದ್ದರು. ನಾನು ಕೆಂಪು ದೀಪ ಬೇಕು ಎಂದು ಸಮರ್ಥನೆ ಮಾಡುತ್ತಿಲ್ಲ. ದೀಪ ತಗೆದಿದ್ದು ಒಳ್ಳೆಯ ಕ್ರಮ. ಆದ್ರೆ ಕೇವಲ ಗಿಮಿಕ್‍ಗೋಸ್ಕರ ಮಾಡೋದು ಸರಿಯಲ್ಲ. ಮೋದಿ ಅವರು ತಮಗಿರುವ ಭದ್ರತೆಯನ್ನು ಕಡಿಮೆ ಮಾಡಲಿ ಎಂದು ಹೇಳಿದರು.

    ದಿಗ್ವಿಜಯ್ ಪರ ಬ್ಯಾಟಿಂಗ್: ಇಡಿ ದೇಶದಲ್ಲಿ ಎಐಸಿಸಿ ಹೊಸ ಟೀಂ ಕೊಡುತ್ತಿದೆ. ಹಾಗೆ ರಾಜ್ಯಕ್ಕೂ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ಟೀಂ ನೇಮಕ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಒಳ್ಳೆಯ ಕೆಲಸ ಮಾಡಿದ್ದುಮ  ಅವರಿಗೆ ಆಗದವರು ಟೀಕೆ ಮಾಡ್ತಾರೆ. ಹಾಗಾಗಿ ಕೆಲವರ ಆರೋಪದ ಕಾರಣದಿಂದಾಗಿ ಉಸ್ತುವಾರಿ ಬದಲಾವಣೆ ಆಗಿಲ್ಲ. ಚುನಾವಣೆಯ ದೃಷ್ಟಿಯಿಂದ ಹೊಸದಾಗಿ ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದಾರೆ ಎಂದು ತಿಳಿಸಿದರು.

    ದಿಗ್ವಿಜಯ್ ಸಿಂಗ್ ಉತ್ತಮ ಅನುಭವಿಯಾಗಿದ್ದು ಪಾರ್ಲಿಮೆಂಟ್‍ನಲ್ಲೂ ಉತ್ತಮ ಕೆಲಸ ನಿರ್ವಹಿಸಿದ್ದರು. ಮಧ್ಯಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಬೇರೆಯವರು ಆರೋಪ ಮಾಡುತ್ತಾರೆಂದು ನಾನು ಆ ರೀತಿ ಮಾತನಾಡಲು ಸಾಧ್ಯವಿಲ್ಲ. ನಾನು 38 ವರ್ಷದಿಂದ ಅವರನ್ನು ನೋಡಿದ್ದೇನೆ. ಯಾವುದೋ ಒಂದು ಕಾರಣಕ್ಕೆ ಅವರ ಸೇವೆಯನ್ನು ಅಲ್ಲಗಳೆಯುವುದು ಸರಿಯಲ್ಲ. ಸೆಕ್ಯುಲರಿಸಂ ಬಗ್ಗೆ ಹೆಚ್ಚು ಚಿಂತನೆ ನಡೆಸಿದ ದಿಗ್ವಿಜಯ್ ಸಿಂಗ್ ಮೇಲಿನ ದೂರುಗಳು ಸತ್ಯಕ್ಕೆ ದೂರವಾದುವು ಎಂದರು.

    ಪ್ರತಿಕ್ರಿಯಿಸಲ್ಲ: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಸದ್ಯಕ್ಕೆ ಊಹಾಪೋಹ. ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಹೈಕಮಾಂಡ್ ಇನ್ನೂ ಈ ಬಗ್ಗೆ ನನಗೆ ಕೇಳಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು ಆ ತೀರ್ಮಾನವನ್ನು ನಾನು ಪ್ರಶ್ನಿಸಲ್ಲ ಎಂದು ಪ್ರತಿಕ್ರಿಯಿಸಿದರು.

    ಬಿಜೆಪಿ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ಮುಖಂಡರಿಗೆ ಪೂರ್ಣ ಸ್ವತಂತ್ರವಿದ್ದು, ಪಕ್ಷ ಒಡೆಯಬೇಕೋ? ಉಳಿಸಬೇಕು ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದರು.

    ಇದನ್ನೂ ಓದಿ: ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ಇದನ್ನೂ ಓದಿ: ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

  • ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

    ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

    ಬೆಂಗಳೂರು: ಕೇಂದ್ರ ಸರ್ಕಾರ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಗಣ್ಯವ್ಯಕ್ತಿಗಳ ಕಾರಿನ ಮೇಲೆ ಕೆಂಪು ದೀಪ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಕಾರಿನ ಮೇಲೆ ಕೆಂಪು ದೀಪ ತೆರವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆಗಿ ಉತ್ತರಿಸಿದ್ದಾರೆ.

    ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು? ಕೇಂದ್ರ ಸಚಿವ ಸಂಪುಟ ನಿರ್ಧಾರ ಯಾವಾಗಿನಿಂದ ಜಾರಿಗೆ ಬರುತ್ತೆ? ಮೇ ಒಂದರಿಂದ ಜಾರಿಗೆ ಬರುತ್ತೆ. ಈಗ ತೆಗೆಯಬೇಕಾದ ಅವಶ್ಯಕತೆ ಇಲ್ಲ ಎಂದು ಕೆಂಪು ದೀಪ ತೆರವು ಬಗ್ಗೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ನಿನ್ನೆಯೂ ಸಿಎಂ ಗರಂ: ಸೋಮವಾರ ಸ್ವಾತಂತ್ರ್ಯ ಉದ್ಯಾನವನದ ಖಾದಿ ಉತ್ಸವ ಕಾರ್ಯಕ್ರಮಕ್ಕೆ ಸಿಎಂ ಕೆಂಪು ದೀಪ ಇಲ್ಲದ ಕಾರಿನಲ್ಲಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳು ಕೆಂಪು ದೀಪ ತೆಗೆದ ಬಗ್ಗೆ ಪ್ರಶ್ನೆ ಕೇಳಿದಾಗ ಸಿಎಂ ಕಾರನ್ನು ನೋಡಿ ಆಶ್ಚರ್ಯಗೊಂಡು, “ರೆಡ್ ಲೈಟ್ ತೆಗೆದಿದ್ದು ಯಾಕೆ” ಎಂದು ಚಾಲಕನನ್ನು ಪ್ರಶ್ನಿಸಿದ್ದರು. ಈ ವೇಳೆ “ಆರ್ಡರ್ ಆಗಿದೆ ಸಾರ್, ಅದಕ್ಕೆ ತೆಗೆಯಲಾಗಿದೆ” ಎಂದು ಉತ್ತರಿಸಿದ್ರು. ಇದಕ್ಕೆ ಗರಂ ಆದ ಸಿಎಂ, ಯಾವ ಆರ್ಡರ್? ನನ್ನ ಅನುಮತಿ ಇಲ್ಲದೇ ಕೆಂಪು ದೀಪ ತೆಗೆದದ್ದು ಯಾಕೆ ಎಂದು ಸಿಟ್ಟಿನಿಂದ ಪ್ರಶ್ನಿಸಿದ್ದರು.

    ಮೇ 1 ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ, ಪ್ರಧಾನಿಯೂ ಸೇರಿದಂತೆ ಗಣ್ಯವ್ಯಕ್ತಿಗಳ ಹಾಗೂ ಸರ್ಕಾರಿ ಅಧಿಕಾರಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ತುರ್ತು ಸೇವೆ ಒದಗಿಸುವ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಮಾತ್ರ ಕೆಂಪು/ನೀಲಿ ದೀಪವನ್ನ ಬಳಸಬಹುದಾಗಿದೆ.

  • ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ: ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ

    ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ: ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ

    ಕೊಪ್ಪಳ: ಪ್ರಧಾನಿ ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯಿಂದ ಹೇಳಿಕೆ ನೀಡಿದ್ದಾರೆ.

    ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾರುಗಳ ಮೇಲೆ ಕೆಂಪು ದೀಪ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಇಂದು ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಈ ಹೇಳಿಕೆ ನೀಡಿದ್ದಾರೆ.

    ಈ ಹೊಸ ನಿಯಮದಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಏನು ಬದಲಾವಣೆಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉಡಾಫೆಯಾಗಿ ಉತ್ತರ ನೀಡಿದ ಅವರು, ಯಾವ ಬದಲಾವಣೆಯೂ ಇಲ್ಲ. ಬೇಕಾದ್ರೆ ಭದ್ರತೆಯನ್ನೂ ತೆಗೆದುಹಾಕಲಿ. ಮೋದಿ ಅವರಿಗೆ ಹೇಳಿಬಿಡ್ತೀನಿ. ಮೋದಿ ಅವರು ನಿಜಾಗಲೂ ಮಾಡಬೇಕಾಗಿದ್ದು ಭದ್ರತೆ ತೆಗೆಯಬೇಕು. ತಮ್ಮದು ಮೊದಲು ಮೋದಿ ತೆಗೆದುಹಾಕಲಿ. ನಾನು ರೆಡಿ ಅಂದ್ರು.

    ಮೋದಿಯವರಿಗೆ ಸಾಕಷ್ಟು ಜೀವ ಬೆದರಿಕೆ ಇರುತ್ತದೆ. ಅವರ ಭದ್ರತೆ ತೆಗೆಯಲು ಹೇಗೆ ಸಾಧ್ಯ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವ ಬೆದರಿಕೆ ಇದ್ದರೆ ಸಾಯಲಿ ಬಿಡಿ. ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡ್ಬೇಕು ಅದಕ್ಕೆ? ಅಧಿಕಾರ ಬೇಡ ಅಂದ್ರೆ ಮನೆಯಲ್ಲಿ ಕೂರಲಿ ಅಂದ್ರು.

    ಮೋದಿಯನ್ನು ಮಾತ್ರ ಹೇಗೆ ಸಾಯಿಸ್ತಾರೆ? ನನಗೆ ಹೊಡೆದರೆ ನಾನು ಸಾಯ್ತೀನಿ. ಏನು ಮಾಡೋಕಾಗುತ್ತೆ. ಇವೆಲ್ಲಾ ಶೋ ಆಫ್ ರೀ ಇವು… ಎಂದು ಪ್ರಧಾನಿ ಬಗ್ಗೆ ಉಡಾಫೆಯಾಗಿ ಮಾತನಾಡಿದ್ರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದು ನೇಮಕ ಮಾಡುವುದು ಹೈ ಕಮಾಂಡಗೆ ಬಿಟ್ಟ ವಿಚಾರ, ಬೇರೆ ಯಾರಿಗಾದ್ರೂ ಕೊಟ್ಟರೂ ನನಗೆ ಅಭ್ಯಂತರವಿಲ್ಲ. ನನಗೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಹೇಳಿದ್ರು.

    https://www.youtube.com/watch?v=ncnWx77c_bQ

  • ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಇನ್ಮುಂದೆ ದೇಶದ ರಾಷ್ಟ್ರಪತಿ, ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ತಮ್ಮ ಕಾರಿನ ಮೇಲೆ ಕೆಂಪು ಹಾಗೂ ನೀಲಿ ದೀಪಗಳನ್ನ ಬಳಸುವಂತಿಲ್ಲ.

    ಹೌದು. ವಿಐಪಿ ಸಂಪ್ರದಾಯಕ್ಕೆ ಕೊನೆಹಾಡುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರದಂದು ಈ ತೀರ್ಮಾನ ಕೈಗೊಂಡಿದ್ದು, ಗಣ್ಯ ವ್ಯಕ್ತಿಗಳ ಕಾರಿನಲ್ಲಿ ನೀಲಿ ಹಾಗೂ ಕೆಂಪು ದೀಪಗಳ ಬಳಕೆಯನ್ನ ನಿಷೇಧಿಸಿದೆ. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ.

    ಆದ್ರೂ ಆಂಬುಲೆನ್ಸ್ ಗಳಂತಹ ತುರ್ತು ಸೇವೆ ಒದಗಿಸುವ ವಾಹನಗಳಲ್ಲಿ ಕೆಂಪು ದೀಪಗಳನ್ನ ಬಳಸಬಹುದಾಗಿದೆ.

    ಈಗಾಗಲೇ ಹೊಸದಾಗಿ ರಚನೆಯಾಗಿರೋ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ನಿಷೇಧಿಸಿವೆ.