Tag: ಕೆಂಪು ಗೂಟ

  • ಕೆಂಪು ದೀಪದ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಖಾದರ್ ಓಡಾಟ!

    ಕೆಂಪು ದೀಪದ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಖಾದರ್ ಓಡಾಟ!

    ಬೆಂಗಳೂರು: ರಾಜ್ಯ ಸರ್ಕಾರದ ಆದೇಶವಿಲ್ಲದೇ ಕೆಂಪು ದೀಪ ತೆಗೆಯಲ್ಲ ಅಂತಾ ಹೇಳಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯು ಟಿ ಖಾದರ್ ಇಂದು ಆ ಕೆಂಪು ದೀಪ ಇರೋ ಕಾರು ಬಳಸೋದನ್ನೇ ನಿಲ್ಲಿಸಿದ್ದಾರೆ.

    ಈ ಬಗ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬೇಕು ಕೆಂಪು ದೀಪ ಬೇಕು ಅಂತೇನಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಗೊಂದಲಗಳು ಬಗೆಹರಿಯುವ ತನಕ ನಾನು ಸಚಿವರಿಗೆ ಕೊಟ್ಟಿರುವ ಸರ್ಕಾರಿ ಕಾರನ್ನ ಬಳಸುವುದಿಲ್ಲ. ಕೆಂಪು ದೀಪ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಮಾಡುವ ತನಕ ಆ ಕಾರನ್ನ ಬಳಸುವುದಿಲ್ಲ. ನಾವು ಕೂಡ ನೆಮ್ಮದಿಯಿಂದ ಇರಬೇಕಲ್ಲ. ಹಾಗಾಗಿ ಸಚಿವರ ಕಾರನ್ನ ಬಳಸ್ತಿಲ್ಲ ಅಂತಾ ಹೇಳಿದ್ದಾರೆ.

    ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ತಾನೇ ರಾಜ್ಯ ಸರ್ಕಾರದ ಆದೇಶವಿಲ್ಲದೇ ನಾನು ಕೆಂಪು ಗೂಟ ತೆಗೆಯಲ್ಲ. ಅಷ್ಟಕ್ಕೂ ಕೆಂಪು ಗೂಟವನ್ನು ನನ್ನ ತಲೆ ಮೇಲೆ ಇಟ್ಕೊಂಡು ಓಡಾಡ್ತಿಲ್ಲ. ಅದು ನನಗೆ ಸರ್ಕಾರ ಕೊಟ್ಟಿರೋ ಕಾರಿನ ಮೇಲೆ ಇದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದರು.

    ಇದನ್ನೂ ಓದಿ: ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ಇಂದು ಸಚಿವರಿಗೆ ಅಧಿಕೃತವಾಗಿ ನೀಡಿರುವ ಕಾರಿನಲ್ಲೇ ಓಡಾಡೋದನ್ನೆ ನಿಲ್ಲಿಸಿ ಸರ್ಕಾರ ನೀಡಿದ ಕೆಂಪು ಗೂಟವಿಲ್ಲದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಓಡಾಟ ಆರಂಭಿಸಿದ್ದಾರೆ.

    ಇದನ್ನೂ ಓದಿ: ಮೋದಿಯವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಾಯ್ತಾ: ಖರ್ಗೆ ಪ್ರಶ್ನೆ

    ಸೋಮವರ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಖಾದರ್ ಸರ್ಕಾರ ಆದೇಶ ಬಂದಿಲ್ಲ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೇ ಆದೇಶದ ಬಂದ ಬಳಿಕ ತೆಗೆಯುತ್ತೇನೆ ಎಂದು ಹೇಳಿದ್ದರು.

    https://www.youtube.com/watch?v=FihlioyUvKg

  • ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ಮಂಗಳೂರು: ಕೆಂಪು ದೀಪ ಸರ್ಕಾರಿ ಕಾರು ಮೇಲೆ ಇದೆ. ಕೆಂಪು ದೀಪ ನನ್ನ ತಲೆ ಮೇಲೆ ಇಲ್ಲ ಅಂತಾ ಆಹಾರ ಸಚಿವ ಯುಟಿ ಖಾದರ್ ಖಡಕ್ ಉತ್ತರ ನೀಡಿದ್ದಾರೆ.

    ವಿಐಪಿ ಸಂಸ್ಕೃತಿ ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರಿಗೆ ಕೆಂಪು ಗೂಟವನ್ನು ಇಂದಿನಿಂದ ಅಧಿಕೃತವಾಗಿ ನಿಷೇದಿಸಿದ್ದು, ಆದ್ರೆ ಯು ಟಿ ಖಾದರ್ ಮಾತ್ರ ಇಂದು ಕೆಂಪುಗೂಟ ಇದ್ದ ಕಾರಿನಲ್ಲೇ ತಿರುಗಾಡಿದ್ದಾರೆ.

    ಕಾರಿನಿಂದ ಕೆಂಪು ದೀಪ ತೆಗೆಯೋಕೆ ಕೆಂಪು ದೀಪ ನನ್ನ ತಲೆ ಮೇಲಿಲ್ಲ. ತಲೆ ಮೇಲೆ ಇರ್ತಿದ್ರೆ ಕೆಳಗಿಡ್ತಾ ಇದೆ. ಆದ್ರೆ ಇದು ಸರ್ಕಾರಿ ಕಾರಿನ ಮೇಲೆ ಇದೆ. ಕೆಂಪು ದೀಪ ತೆಗೆಯೋದ್ರಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ನನಗೆ ರಾಜ್ಯ ಸರ್ಕಾರ ಕಾರು ಕೊಟ್ಟಿರೋದು. ಕೇಂದ್ರ ಸರ್ಕಾರ ಕೊಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆದೇಶ ಕೊಟ್ರೆ ಕಾರಿನಿಂದ ಕೆಂಪು ದೀಪ ತೆಗೆಯೋದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಇಂದಿನಿಂದ ವಿಐಪಿ ಸಂಸ್ಕೃತಿಗೆ ಅಧಿಕೃತ ಬ್ರೇಕ್ – ಕೆಂಪೂಗೂಟದ ಕಾರು ಬಳಸಿದ್ರೆ ಬೀಳುತ್ತೆ ದಂಡ

    ಸರ್ಕಾರ ಕೊಟ್ಟ ಕಾರಿನಲ್ಲಿ ನಾನು ಕುತ್ಕೊಂಡು ಓಡಾಡೋದಷ್ಟೇ ನಮ್ಮ ಕೆಲಸ ಹೊರತು ಅದನ್ನು ಆಲ್ಟರ್ ಮಾಡೋ ಅವಕಾಶ ನಮಗಿಲ್ಲ. ಅಂತಹ ಸಂದರ್ಭಗಳು ಬಂದ್ರೆ ಇಲಾಖೆಯೇ ಕಾರನ್ನು ಆಲ್ಟರ್ ಮಾಡ್ತಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಆದೇಶಕ್ಕೆ ನಾವು ಬದ್ಧರಾಗುತ್ತೇವೆ ಅಂತಾ ಖಡಕ್ಕಾಗಿಯೇ ನುಡಿದಿದ್ದಾರೆ.

    ಇದನ್ನೂ ಓದಿ: ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

    https://www.youtube.com/watch?v=XRZCCsr64A8