Tag: ಕೆಂಗೇರಿ ಪೊಲೀಸ್‌

  • Bengaluru | ಪ್ರೀತಿಸಿ ಮದ್ವೆಯಾದ ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿ ಪತಿ!

    Bengaluru | ಪ್ರೀತಿಸಿ ಮದ್ವೆಯಾದ ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿ ಪತಿ!

    ಬೆಂಗಳೂರು: ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ಕೆಂಗೇರಿಯ (Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.

    ನವ್ಯಾ (25) ಕೊಲೆಯಾದ ಮಹಿಳೆ, ಕಿರಣ್ ಕೊಲೆ ಮಾಡಿದ ಪಾಪಿ ಪತಿ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ. ಬುಧವಾರ (ಆ.28) ಮಧ್ಯಾಹ್ನ 1:30 ರಿಂದ 3 ಗಂಟೆ ಸಮಯದಲ್ಲಿ ಕೊಲೆ ನಡೆದಿರುವುದಾಗಿ ಪೊಲೀಸರು (Kengeri Police) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್

    ಭದ್ರಾವತಿ ಮೂಲದ ನವ್ಯಾ, ಚಿಕ್ಕಬಳ್ಳಾಪುರ ಮೂಲದ ಕಿರಣ್‌ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಿಮಾ ರಂಗದಲ್ಲಿ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದರು. ಪತಿ ಕಿರಣ್‌ ಕ್ಯಾಬ್ ಚಾಲಕನಾಗಿದ್ದ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ

    ಇತ್ತೀಚೆಗೆ ಪತಿ ಕಿರಣ್‌, ನವ್ಯಾ ಜೊತೆಗೆ ಆಗಾಗ್ಗೆ ಜಗಳ ತೆಗೆಯುತ್ತಿದ್ದ, ಶೀಲ ಶಂಕಿಸಿ ಗಲಾಟೆ ಮಾಡ್ತಿದ್ದ. ಬುಧವಾರ ಮಧ್ಯಾಹ್ನದ ವೇಳೆ ಇದೇ ವಿಚಾರಕ್ಕೆ ಗಲಾಟೆ ಮಾಡಿರುವ ಕಿರಣ್‌, ನಂತರ ನವ್ಯಾಳನ್ನ ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಂಗೇರಿ ಪೊಲೀಸರು ಕೊಲೆ ಮಾಡಿ ಎಸ್ಕೇಪಾಗಿದ್ದ ಕಿರಣ್‌ನನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    – 2 ಮಕ್ಕಳ ತಾಯಿಯೊಂದಿಗೆ ಯುವಕನ ಪ್ರೇಮ್‌ ಕಹಾನಿ

    ಬೆಂಗಳೂರು: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದರೀಗ ಅದೆಲ್ಲದಕ್ಕೂ ಆನ್‌ಲೈನ್ ತಂತ್ರಜ್ಞಾನ ದಾರಿಮಾಡಿಕೊಟ್ಟಿದೆ. ಆದ್ರೆ ಇದರಿಂದ ಅನುಕೂಲ ಆಗುವುದಕ್ಕಿಂತ ಅನಾನುಕೂಲಕ್ಕೆ ದಾರಿ ಮಾಡಿಕೊಳ್ಳುತ್ತಿರುವುದೇ ಹೆಚ್ಚು ಅನ್ನೋದಕ್ಕೆ ಬೆಂಗಳೂರಿನಲ್ಲಿ (Bengaluru) ನಡೆದಿರುವ ಆಂಟಿ ಲವ್‌ ಪ್ರಕರಣವೊಂದು ಸಾಕ್ಷಿಯಾಗಿದೆ.

    ಈ ಆಷಾಢ ಕಳೆದು ಶ್ರಾವಣ ಬಂದ್ರೆ ಮದುವೆ ಆಗೇ ಆಗ್ತೀನಿ, ಶ್ರಾವಣ ಬರಲಿ ನಿನಗೆ ಬಾಳು ಕೊಡ್ತಿನಿ ಎಂದು ರೀಲ್ಸ್ ರಾಣಿಯನ್ನ ನಂಬಿಸಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ 2 ಮಕ್ಕಳ ತಾಯಿಯನ್ನ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದ್ದು, ಆರೋಪಿ ಪ್ರಜ್ವಲ್‌ ಎಂಬಾತನ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ (Kengeri Police Station) ದೂರು ದಾಖಲಾಗಿದೆ. ಇದನ್ನೂ ಓದಿ: ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ: ವಿಜಯೇಂದ್ರ

    ಆಂಟಿಯೊಂದಿಗೆ ಪ್ರೇಮ್‌ ಕಹಾನಿಯೇ ಥ್ರಿಲ್ಲಿಂಗ್‌!
    ತನ್ನ ಗಂಡ ಹಲ್ಲೆ ಮಾಡುತ್ತಿದ್ದ ಅಂತ 13 ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದ ಮಹಿಳೆ ತವರು ಮನೆಯಿಂದಲೂ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. 8 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು, ಜೀವನೋಪಾಯಕ್ಕಾಗಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಹೇಗೋ ಜೀವನ ನಡೆಯುತ್ತಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ಬೇಸರ ಕಳೆಯಲು ರೀಲ್ಸ್‌ ಮಾಡುತ್ತಿದ್ದಳು. ಈ ವೇಳೆ ವಂಚಕ ಪ್ರಜ್ವಲ್‌ನ ಪರಿಚಯವಾಗಿದೆ. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಮಧ್ಯಸ್ಥ ಮಂಡಳಿ ರಿಲೀಫ್ ನೀಡುತ್ತಾ? – ಒಲಿಂಪಿಕ್ಸ್ ಮುಗಿಯೋ ಮುನ್ನ ಸಿಎಎಸ್‌ನಿಂದ ತೀರ್ಪು

    ಮಹಿಳೆ ಮಾಡ್ತಿದ್ದ ಪ್ರತಿ ರೀಲ್ಸ್‌ಗೂ ಪ್ರಜ್ವಲ್‌ ಹಾರ್ಟ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡ್ತಿದ್ದ. ಇದೇ ವೇಳೆ ಇಬ್ಬರಿಗೂ ಪರಿಚಯವಾಗಿ ಕೊನೆಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಆಕೆಗೆ ಮದ್ವೆ ಆಗಿರುವುದು ಗೊತ್ತಿದ್ದರೂ ತಾನು ಬಾಳು ಕೊಡ್ತೀನಿ ಎಂದಿದ್ದ ಯುವಕ, ತನ್ನ ತಾಯಿ ಬಳಿಯೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದನಂತೆ. ಮಹಿಳೆಗೆ ನಾನು ನೋಡಲು ಚೆನ್ನಾಗಿಲ್ಲ ನಿಂಗೆ ಮದ್ವೆಯಾಗಿದ್ದರೂ ಪರ್ವಾಗಿಲ್ಲ ನಾನು ಬಾಳು ಕೊಡ್ತಿನಿ ಎಂದು ಸಹ ಹೇಳಿದ್ದಾನೆ. ಶ್ರಾವಣ ಮಾಸದ ಬಳಿಕ ಮದ್ವೆಯಾಗ್ತೀನಿ ಅಂತ ಹೇಳಿದ್ದಾನೆ. ಅಲ್ಲದೇ ಆಕೆಯೊಂದಿಗೆ 3 ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾದಿದ್ದಾನೆ. ಮಕ್ಕಳನ್ನೂ ಚೆನ್ನಾಗಿ ನೋಡಿಕೊಂಡಿದ್ದಾನೆ. ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ ಪ್ರಜ್ವಲ್‌ ಆಕೆಯಿಂದ ದೂರವಾಗಲು ಬಯಸಿದ್ದಾನೆ.

    ನೀನು ನನಗೆ ಬೇಡ, ಹೋಗಿ ನಿನ್ನ ಹಳೇ ಗಂಡನ್ನ ಕರ್ಕೊಂಡು ಬಾ, ನಿನ್ನ ಮೇಲೆ ಅನುಮಾನ ಇದೆ ಅಂತ ಹೇಳಿದ್ದಾನೆ. ಸದ್ಯ ಪ್ರಜ್ವಲ್‌ ಬೇಕೇ ಬೇಕು ಅಂತ ಪಟ್ಟು ಹಿಡಿರುವ ಮಹಿಳೆ ಆತ ಮದುವೆಯಾಗಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಡ್ರೆಸ್ ಕೋಡ್ ತನ್ನಿ- ಜಿಲ್ಲಾಡಳಿತಕ್ಕೆ ಶಾಖಾದ್ರಿ ಕುಟುಂಬ ಮನವಿ