Tag: ಕೃಷ್ಣ ಭೈರೇಗೌಡ

  • ಕೃಷ್ಣ ಭೈರೇಗೌಡರ ಆರೋಪ ತನಿಖೆಯಾಗುವ ತನಕ ಸದನಕ್ಕೆ ಹೋಗಲ್ಲ: ಬಿ.ಆರ್ ಪಾಟೀಲ್

    ಕೃಷ್ಣ ಭೈರೇಗೌಡರ ಆರೋಪ ತನಿಖೆಯಾಗುವ ತನಕ ಸದನಕ್ಕೆ ಹೋಗಲ್ಲ: ಬಿ.ಆರ್ ಪಾಟೀಲ್

    ಕಲಬುರಗಿ: ಸದನದಲ್ಲಿ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಅವರು ನಾನು ಹಣ ಪಡೆದು ಕೆಲಸ ಕೊಟ್ಟಿರುವುದಾಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆ ಆಗಬೇಕು. ಈ ತನಿಖೆ ಮುಗಿಯುವವರೆಗೂ ನಾನು ಸದನಕ್ಕೆ ಹೋಗುವುದಿಲ್ಲ ಎಂದು ಶಾಸಕ ಬಿ.ಆರ್ ಪಾಟೀಲ್ (BR Patil) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಯಾರೊಬ್ಬ ಶಾಸಕರೂ ನನ್ನ ಬೆಂಬಲಕ್ಕೆ ಬರಲಿಲ್ಲ. ನಮ್ಮ ಜಿಲ್ಲೆಯ ಶಾಸಕರು ಸಹ ನನ್ನ ಬೆಂಬಲಕ್ಕೆ ಬರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಯಶವಂತರಾಯ ಪಾಟೀಲ್ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಆರ್ ಪಾಟೀಲ್ ಎಮೋಷನಲ್ ಆಗಿ ಪತ್ರ ಬರೆದಿರಬಹುದು: ಎಂ.ಬಿ ಪಾಟೀಲ್

    ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಷಯ ನಾನು ಪ್ರಸ್ತಾವನೆ ಮಾಡಿರಲಿಲ್ಲ. ಇದೀಗ ಈ ವಿಚಾರದ ಬಗ್ಗೆ ನಾನು ಮತ್ತೆ ಪತ್ರ ಬರೆದಿದ್ದೇನೆ. ನನ್ನ ಜೀವಮಾನದಲ್ಲಿ ಸ್ವಾಭಿಮಾನದಿಂದ ಬದುಕಿದವನು, ಇಲ್ಲದಿದ್ದರೆ ನಾನು ಸತ್ತಂತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ನನ್ನ ಮೇಲೆ ಸಚಿವ ಕೃಷ್ಣ ಭೈರೇಗೌಡ ಅವರು ಮಾಡಿರುವ ಆರೋಪದ ತನಿಖೆಯಾಗಬೇಕು. ತನಿಖೆ ಮುಗಿಯುವವರೆಗೆ ನಾನು ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ಈ ಬಾರಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಕೃಷ್ಣ ಭೈರೇಗೌಡರನ್ನು ಮತ್ತು ಅಧಿಕಾರಿಗಳನ್ನು ಕರೆಸಿ, ಈ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ನಾನು ಇಷ್ಟು ದಿನ ಎಲ್ಲಾ ರೀತಿಯ ಅವಮಾನಗಳನ್ನು ಸಹಿಸಿಕೊಂಡು ಬಂದಿದ್ದೇನೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಧಾನ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಾನು ಸಹ ಹಾಜರಾಗುತ್ತೇನೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಗಸ್ತು ವೇಳೆ ಹಫ್ತಾ ಪಡೆಯೋದು ಬಿಟ್ಟಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು: ಯತ್ನಾಳ್ ಕಿಡಿ

  • ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಬೆಂಗಳೂರು: ಪವರ್ ಶೇರಿಂಗ್ (Power Sharing) ವಿಚಾರದ ಬಗ್ಗೆ ಏನೇ ಇದ್ದರೂ ಅದು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಮಯ ಬಂದಾಗ ಪಕ್ಷದಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಮ್ಮ ಹಾಗೂ ನಿಮ್ಮ ಗಮನ ಜನರ ಕಲ್ಯಾಣದ ಕಡೆ, ಅಭಿವೃದ್ಧಿ ಕಡೆ ಇರಬೇಕು. ಜನರಿಗೆ ಒಳ್ಳೆದು ಆಗೋದನ್ನು ನೋಡಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ಜನರಿಗೆ ಒಳ್ಳೆದು ಆಗೋದನ್ನ ನೋಡಿಕೊಳ್ಳಬೇಕು. ನೀವು ನಾವು ಸೇರಿ ಒಳ್ಳೆದನ್ನು ಮಾಡೋಣ. ಜನರಿಗೆ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋದು ಮುಖ್ಯ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

    ಶಾಸಕರ ಹೇಳಿಕೆಗಳು ಒಬ್ಬೊಬ್ಬರದ್ದು ಒಂದೊಂದು ರೀತಿ ಇದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಪಕ್ಷ ಎಲ್ಲಾ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲಾ ರೀತಿಯ ಆಗು ಹೋಗುಗಳನ್ನ ಗಮನಿಸಿಸುತ್ತಾರೆ. ಯಾವುದು ಒಳ್ಳೆಯದೋ ಅದನ್ನು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಆಪರೇಷನ್ ಕಮಲ (Operation Kamala) ಅನ್ನೋದು ಬಿಜೆಪಿಯವರ (BJP) ಡಿಎನ್‌ಎಯಲ್ಲೇ ಇದೆ. ಬಿಜೆಪಿ ಒಂದು ಬಾರಿ ಅಲ್ಲ, ಅನೇಕ ಬಾರಿ ಬೇರೆ ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಿದೆ. 2008ರಲ್ಲಿ, 2018ರಲ್ಲಿ ಮಾಡಿತ್ತು. ಅವರ ಜಾಯಮಾನದಲ್ಲೇ ಇದು ನಡೆದಿದೆ. ಮಹಾರಾಷ್ಟ್ರ, ಗೋವಾ, ರಾಜಸ್ಥಾನ ಎಲ್ಲಾ ಕಡೆ ಆಪರೇಷನ್ ಆಗಿದೆ. ಎಲ್ಲಿ ಅಧಿಕಾರದಲ್ಲಿದ್ದಾರೆ ಅಲ್ಲಿ ಆಪರೇಷನ್ ಆಗಿದೆ ಎಂದು ಅವರ ಮುಖ್ಯಸ್ಥರೇ ಹೇಳಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡೋದು ಅವರ ಚಾಳಿ. ಬಿಜೆಪಿ ಅವರು ಸಂವಿಧಾನಕ್ಕೂ ಗೌರವ ಕೊಡಲ್ಲ. ವಾಮಮಾರ್ಗ ಅವರ ರಾಜಮಾರ್ಗ. ಅವರು ಅಸಾಧ್ಯವಾದದ್ದನ್ನು ಮಾಡುತ್ತಾರೆ. ಆಪರೇಷನ್ ಮಾಡುವುದು ಅವರ ಡಿಎನ್‌ಎಯಲ್ಲೇ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಶಾಸಕರನ್ನು ಖರೀದಿಸಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಕೆಲಸ: ಆರ್‌ಬಿ ತಿಮ್ಮಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರು ತಾಲೂಕು ಕಚೇರಿಗೆ ಕೃಷ್ಣ ಭೈರೇಗೌಡ ದಿಢೀರ್ ಭೇಟಿ

    ಮಂಗಳೂರು ತಾಲೂಕು ಕಚೇರಿಗೆ ಕೃಷ್ಣ ಭೈರೇಗೌಡ ದಿಢೀರ್ ಭೇಟಿ

    ಮಂಗಳೂರು: ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

    ರೆಕಾರ್ಡ್ ರೂಂ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೇ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ರೆಕಾರ್ಡ್ ರೂಂನಲ್ಲಿ ದಾಖಲೆ ಡಿಜಿಟಲೀಕರಣದ ಬಗ್ಗೆ ಮಾಹಿತಿ ಪಡೆದು, ಡಿಜಿಟಲೀಕರಣ ಆಗದ ದಾಖಲೆಗಳ ಶೀಘ್ರ ಡಿಜಿಟಲೀಕರಣಕ್ಕೆ ಸೂಚನೆ ನೀಡಿದರು. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರಿಗೆ ಪ್ರತೀ ದಿನ ಸರ್ವರ್ ಡೌನ್ ಸಮಸ್ಯೆ ಎನ್ನುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದರು.

    ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇಲ್ಲ.ಆದ್ರೆ ಇಲ್ಲಿ ಯಾಕೆ ಸಮಸ್ಯೆ,ತಾಂತ್ರಿಕ ಸಮಸ್ಯೆಯ ಬಗ್ಗೆ ಗಮನಹರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ರು. ಸಾರ್ವಜನಿಕರಿಂದಲೂ ತಾಲೂಕು ಕಚೇರಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ತೆರವು: ಬೊಮ್ಮಾಯಿ‌

    ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ತೆರವು: ಬೊಮ್ಮಾಯಿ‌

    ಬೆಂಗಳೂರು: ಯಾವುದೇ ಮುಲಾಜಿಲ್ಲದೆ ಬೆಂಗಳೂರಿನ ರಾಜಕಾಲುವೆ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.

    ವಿಧಾನಸಭೆಯಲ್ಲಿ(Session) ಪ್ರಶ್ನೋತ್ತರ ವೇಳೆಯಲ್ಲಿ ಕೃಷ್ಣ ಭೈರೇಗೌಡ(Krishna Byre Gowda) ಪ್ರಸ್ತಾಪಕ್ಕೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ‌ ಮಳೆಯಿಂದ ಬೆಂಗಳೂರಿಗೆ(Benagaluru) ಆಗುವ ಅನಾಹುತ ತಪ್ಪಿಸಲು ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಕೆರೆಗಳಿಗೆ ಸ್ಟ್ಲೂಯೀಸ್ ಗೇಟ್‌ಗಳನ್ನು ಅಳವಡಿಸಲು ಆದೇಶಿಸಿದ್ದೇವೆ ಎಂದು ಹೇಳಿದರು. ರಾಜಕಾಲುವೆಗಳ ಮಾಸ್ಟರ್ ಪ್ಲಾನ್‌ನ್ನು ಮತ್ತೆ ಪರಿಷ್ಕರಿಸುತ್ತೇವೆ. ಕಾಲಮಿತಿಯೊಳಗೆ 1,800 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ಅಭಿವೃದ್ಧಿಪಡಿಸುತ್ತೇವೆ ಎಂದರು.

    ಬೆಂಗಳೂರು ನಗರದಲ್ಲಿ 859 ಕಿ.ಮೀ ರಾಜಕಾಲುವೆ ಇದೆ. ಈ ಪೈಕಿ 450 ಕಿ.ಮೀ ಅಭಿವೃದ್ಧಿಗೆ ಬಾಕಿಯಿದ್ದು, ಕಳೆದ ಬಾರಿ 1,500 ಕೋಟಿ ನೀಡಿದ್ದು, ಈ ಬಾರಿ ಮತ್ತೆ ಹೆಚ್ಚುವರಿಯಾಗಿ 300 ಕೋಟಿ ರೂ. ನೀಡುತ್ತೇವೆ. ಎರಡು ವರ್ಷದಲ್ಲಿ ನಾವು ಈ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಎಂದು ವಿಧಾನಸಭೆಗೆ ತಿಳಿಸಿದರು.

    ಬೆಂಗಳೂರಿನ 8 ವಿಭಾಗಗಳ ಪೈಕಿ ಎರಡು ಕಡೆ ಮಾತ್ರ ರಾಜಕಾಲುವೆ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಿದೆ. ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಅತಿಕ್ರಮಣ ಮಾಡಿರುವುದು ಅಡ್ಡಿಯಾಗಿವೆ. ಮೊದಲು ಕಟ್ಟಡ ಅತಿಕ್ರಮಣಗಳನ್ನು ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಸಮಯ ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾಮಗಾರಿಗಳು ಈಗ ನಡೆಯುತ್ತಿವೆ. ಸಂಪೂರ್ಣ ರಾಜಕಾಲುವೆಗಳ ಅಭಿವೃದ್ಧಿಗೆ ಒಂದೂವರೆ ವರ್ಷವಾದರೂ ಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಸಿಳಿದರು. ಇದನ್ನೂ ಓದಿ: ಗಾಯಾಳನ್ನು ಆಸ್ಪತ್ರೆಗೆ ಹೊತ್ತು ತಂದ ಬುಲ್ಡೋಜರ್

    ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಶಾಸಕ ಕೃಷ್ಣ ಭೈರೇಗೌಡ ಅವರು, ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗಿದೆ. ಸರ್ಕಾರ ಬೇರೆಯವರನ್ನು ದೂಷಿಸದೆ, ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಹದೇವಪುರ ಶಾಸಕ‌ ಅರವಿಂದ ಲಿಂಬಾವಳಿ ಮಾತನಾಡಿ, ರಾಜಕಾಲುವೆ ಒತ್ತುವರಿ ತೆರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ಮನವಿ ಮಾಡಿಕೊಂಡರು. ಅಲ್ಲದೆ ಒತ್ತುವರಿ ತೆರವಿಗೆ ವಿರೋಧ ಪಕ್ಷದವರು ಸಹಕಾರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾನೇನು ಸ್ವಂತ ಬೋಟ್‌ನಲ್ಲಿ ಹೋಗಿದ್ನಾ; ಬೇಕಿದ್ರೆ ಲಿಂಬಾವಳಿ ಕೇಳಿ?: ಸಿದ್ದು ಬೋಟ್‌ ಪ್ರಸಂಗ

    Live Tv
    [brid partner=56869869 player=32851 video=960834 autoplay=true]

  • ಶೋಭಾ ಕರಂದ್ಲಾಜೆ ನಿಜವಾದ ಸಂಸ್ಕೃತಿ ತೋರಿಸಿಕೊಟ್ಟಿದ್ದಾರೆ: ಕೃಷ್ಣ ಭೈರೇಗೌಡ ಟಾಂಗ್

    ಶೋಭಾ ಕರಂದ್ಲಾಜೆ ನಿಜವಾದ ಸಂಸ್ಕೃತಿ ತೋರಿಸಿಕೊಟ್ಟಿದ್ದಾರೆ: ಕೃಷ್ಣ ಭೈರೇಗೌಡ ಟಾಂಗ್

    ಕೋಲಾರ: ಮೈತ್ರಿ ಸರ್ಕಾರದ ಕುರಿತು ಅಸಭ್ಯವಾಗಿ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಕೋಲಾರ ತಾಲೂಕಿನ ಹನುಮನಹಳ್ಳಿ, ಹುತ್ತೂರು ಸೇರಿದಂತೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಪ್ರತಿಪಕ್ಷ ಬಿಜೆಪಿಗೆ ಅಧಿಕಾರದ ಮದ ತಲೆಗೇರಿದೆ. ಸಾರ್ವಜನಿಕ ಜೀವನಕ್ಕೆ ಲಾಯಕಿಲ್ಲ ಎನ್ನುವ ರೀತಿ ನಡೆದುಕೊಂಡು ಬರುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುತ್ತಿದ್ದೇವೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಜನ ಇದನ್ನು ಮನ್ನಿಸುವುದಿಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದು.

    ಕೈ ಮುರಿಯುತ್ತೇವೆ, ಕಾಲು ಮುರಿಯುತ್ತೇವೆ, ನಾಲಿಗೆ ಸೀಳುತ್ತೇವೆ ಎಂದು ಈ ಹಿಂದೆಯೂ ಬಿಜೆಪಿ ಮುಖಂಡರು ಹೇಳಿದ್ದರು. ಈ ರೀತಿಯ ಹೇಳಿಕೆ ಇದೇ ಮೊದಲೇನಲ್ಲ. ಬಿಜೆಪಿಯ ನಿಜವಾದ ಸಂಸ್ಕೃತಿ ಅದರಿಂದಲೇ ಗೊತ್ತಾಗುತ್ತೆ. ಕುಮಾರಿ ಶೋಭಾ ಕರಂದ್ಲಾಜೆ ಅವರು ಕೂಡ ಅದೇ ರೀತಿ ಎನ್ನುವುದು ಅವರ ಮಾತಿನಿಂದ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಗೌರವದಿಂದ ಕಾಣಬೇಕಾಗಿರುವುದು ನಮ್ಮ ಧರ್ಮ. ಸಂಸದೆ ಶೋಭಾ ಕರಂದ್ಲಾಜೆ ಅವರು ಒಂದು ಸಮುದಾಯಕ್ಕೆ ಅವಮಾನ ಆಗುವ ರೀತಿ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಮೇಲು ಕೀಳು ಎನ್ನುವ ಭಾವನೆಯಿಂದ ಬಿಜೆಪಿಯವರು ಹೊರ ಬಂದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಸೌಜನ್ಯ ಅವರಿಗೆ ಇಲ್ಲದಿರುವುದು ದುರದೃಷ್ಟ ಸಂಗತಿ. ಇದನ್ನು ಬಿಜೆಪಿಯವರು ತಿಳಿದುಕೊಳ್ಳುತ್ತಾರೆ ಎನ್ನುವ ನಂಬಿಕೆಯೂ ನನಗಿಲ್ಲ. ಮುಂದೆ ಜನರೇ ಅವರ ಮದ ಇಳಿಸುತ್ತಾರೆ. ಬಿಜೆಪಿಯವರು ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಪರಿತಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸರಣಿ ಸಭೆಗಳನ್ನು ನಡೆಸಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಕುರಿತು ವರಿಷ್ಠರಲ್ಲಿ ಯಾವುದೇ ಭಿನ್ನಮತವಿಲ್ಲ. ಇದು ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಿರಬಹುದು. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗುತ್ತದೆ. ಸರ್ಕಾರ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

  • ಹೊಸ ಶೈಲಿಯಲ್ಲಿ ಮತಯಾಚಿಸಿದ ಕೃಷ್ಣ ಭೈರೇಗೌಡ

    ಹೊಸ ಶೈಲಿಯಲ್ಲಿ ಮತಯಾಚಿಸಿದ ಕೃಷ್ಣ ಭೈರೇಗೌಡ

    ಬೆಂಗಳೂರು: ಸಚಿವ ಕೃಷ್ಣ ಭೈರೇಗೌಡ ಅವರು ಮಾಲ್ ಪ್ಲಾಷ್ ಮಾಬ್ ಮೂಲಕ ವಿಶೇಷ ರೀತಿಯಲ್ಲಿ ಮತಯಾಚನೆ ಮಾಡಿದ್ದಾರೆ.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೃಷ್ಣ ಭೈರೈಗೌಡ ಅವರು, 25 ಕಲಾವಿದರ ತಂಡದಿಂದ ಡ್ಯಾನ್ಸ್ ಮೂಲಕ ಮತದಾನ ಜಾಗೃತಿ ಮಾಡಿಸುವ ಮೂಲಕ ತಮಗೇ ಮತ ನೀಡುವಂತೆ ಮನವಿ ಮಾಡಿದರು. ನಗರದ ಓರಿಯಾನ್ ಮಾಲ್‍ನಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.

    ಕಳೆದ 15 ವರ್ಷಗಳಿಂದ ರಾಜ್ಯದ ಜನತೆ ನಮ್ಮನ್ನು ನಂಬಿ ಧೈರ್ಯ ತುಂಬಿದ್ದಾರೆ. ಅದ್ದರಿಂದ ನಿಮಗೇ ಧನ್ಯವಾದ ತಿಳಿಸುತ್ತೇನೆ. ಈಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದರಿಂದ ನಿಮ್ಮ ಬೆಂಬಲ ಮತ ನನಗೆ ಬೇಕಿದೆ ಎಂದು ಕೋರಿದರು.

  • ಬೆಂಗ್ಳೂರು ಉತ್ತರ ಕ್ಷೇತ್ರ – ದೋಸ್ತಿಗಳಿಗೆ ಸಿಕ್ತು ‘ಉತ್ತರ’..!

    ಬೆಂಗ್ಳೂರು ಉತ್ತರ ಕ್ಷೇತ್ರ – ದೋಸ್ತಿಗಳಿಗೆ ಸಿಕ್ತು ‘ಉತ್ತರ’..!

    ಬೆಂಗಳೂರು: ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೇ ದಿನ ಆಗಿದ್ದು, ಅಂತಿಮವಾಗಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

    ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದ್ದ ಈ ಕ್ಷೇತ್ರದಲ್ಲಿ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಸಚಿವ ಕೃಷ್ಣ ಭೈರೇಗೌಡ ಅವರು ಅಭ್ಯರ್ಥಿಯಾಗಿದ್ದು, ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಜಾತಿ ಲೆಕ್ಕಾಚಾರಲ್ಲೂ ಮುಂದಾಗಿರುವ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ.

    ಹೆಚ್ಚುವರಿ ಕ್ಷೇತ್ರ ಲಭ್ಯವಾದ ಪರಿಣಾಮ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕ್ಷೇತ್ರ ಎಲ್ಲಾ ಜೆಡಿಎಸ್, ಕಾಂಗ್ರೆಸ್ ಶಾಸಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಒಮ್ಮತವಾಗಿ ಕೃಷ್ಣಭೈರೇಗೌಡ ಅವರ ಹೆಸರನ್ನು ಅಂತಿಮ ಮಾಡಲಾಗಿದೆ. ಸ್ಪರ್ಧಿಸುವ ಮನಸ್ಸು ಇಲ್ಲದಿದ್ದರು ಕೂಡ ಶಾಸಕರ ಒತ್ತಾಯ ಹಾಗೂ ಸೂಕ್ತ ಅಭ್ಯರ್ಥಿ ಲಭ್ಯವಾದ ಕಾರಣ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಸದಾನಂದಗೌಡ ನಾಮಿನೇಷನ್ ಮಾಡಿದ್ರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಜನ ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಇತರೆ ಪಕ್ಷದ ಸಾಕಷ್ಟು ಕಾರ್ಯಕರ್ತರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.

    ಇತ್ತ ಗೆಲ್ಲುವ ಅವಕಾಶ ಇರುವ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿಲ್ಲ. ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸ್ಸು ಮಾಡಿತ್ತು. ಆದರೆ ಹೈಕಮಾಂಡ್ ಮಾತ್ರ ಹೆಚ್ಚಿನ ಒಲವು ತೋರಿಲ್ಲ ಎನ್ನಲಾಗಿದೆ. ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಹೆಸರು ಸದ್ಯ ಮುನ್ನಲೆಗೆ ಬಂದಿದೆ. ಇನ್ನಷ್ಟೇ ಅಧಿಕೃತ ಅಭ್ಯರ್ಥಿಯ ಘೋಷಣೆ ಆಗುವ ಸಂಭಾವವಿದೆ.