Tag: ಕೃಷ್ಣ ಬೈರೇಗೌಡ

  • ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ: ಕೃಷ್ಣ ಬೈರೇಗೌಡ

    ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ: ಕೃಷ್ಣ ಬೈರೇಗೌಡ

    – ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ

    ಬೆಂಗಳೂರು: ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ರೆಡಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶ ಸಿಕ್ಕಿದೆ. ಪಕ್ಷ ನನ್ನನ್ನ ಗುರುತಿಸಿ ಸಾಕಷ್ಟು ಅವಕಾಶ ನೀಡಿದೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಹೊಸ ಕ್ಷೇತ್ರದ ಅವಕಾಶ ನೀಡುವುದರಿಂದ ಇಲ್ಲಿಯವರೆಗೂ ಅವಕಾಶ ನೀಡಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶದ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ, ಆದ್ರೆ ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ, ಅವಕಾಶದ ವಿಚಾರದಲ್ಲಿ ನಾನು ಸಂತೃಪ್ತನಾಗಿದ್ದೇನೆ ಎಂದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಶೀಘ್ರವೇ SIR- ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

    ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚನೆಯ ಸಂದರ್ಭದಲ್ಲೇ ಬೇರೆಯವರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆಯಾಗಿತ್ತು. ಸಚಿವ ಸ್ಥಾನ ಸ್ವೀಕರಿಸುವುದಕ್ಕೂ ಮೊದಲೇ ಗಮನಕ್ಕೆ ತಂದು ಸಂಪುಟ ರಚಿಸಲಾಗಿತ್ತು. ಈ ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು. ಹೊರಗಡೆ ಇದ್ದವರಿಗೆ ಅವಕಾಶ ಕೊಡಬೇಕು ಎಂಬ ನಿರ್ಧಾರ ಆಗಿತ್ತು. ಸಂಪುಟಕ್ಕೆ ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ಸಂಪುಟ ಪುನರ್ ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಅವ್ರೇ ನಿಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಪ್ರತಿ ಇಲಾಖೆಯೂ ರೇಡ್‌ ಕಾರ್ಡ್‌ ಫಿಕ್ಸ್‌ ಮಾಡಿದೆ: ಮೋಹನ್ ದಾಸ್ ಪೈ

    ಬಿಜೆಪಿಯವರಿಗೆ (BJP) ದ್ರಾಕ್ಷಿ ಗೊಂಚಲು ಹುಳಿ ಅನ್ನುವ ರೀತಿ ಆಗಿದೆ. ರಾಜಕೀಯ ಮಾತನಾಡಿ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಿಜೆಪಿಯವರಿಗೆ ಅಧಿಕಾರ ಇಲ್ಲ, ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ. ಅವರು ಇರೋದೆ ಸರ್ಕಾರದ ವಿರುದ್ಧ ಮಾತನಾಡಲು. ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಇದೆ. ಅಧಿಕಾರ ಬಿಟ್ರೆ ಬೇರೆ ಏನು ಜ್ಞಾನ ಇಲ್ಲ, ಅಧಿಕಾರ ಇಲ್ಲದೆ ಚಡಿಪಡಿಸುತ್ತಿದ್ದಾರೆ. ನಾವು ಜವಾಬ್ದಾರಿ ಸ್ಥಾನದಲ್ಲಿದ್ದೇವೆ, ಕೆಲಸ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: FATF ಹೊಸ ಪಟ್ಟಿ ಬಿಡುಗಡೆ – ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ಕಪ್ಪುಪಟ್ಟಿಗೆ

    ಕಾಂಗ್ರೆಸ್‌ನ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವ, ಯಾರು ಯಾವ ಅಭಿಪ್ರಾಯವನ್ನ ಬೇಕಾದರೂ ವ್ಯಕ್ತಪಡಿಸಬಹುದು. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ ಇರುತ್ತದೆ. ಐದು ಬೆರಳು ಸಮನಾಗಿರಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತೆ, ಅವರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಇಂತಹ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ. ಸಿಎಂ ಜವಾಬ್ದಾರಿ ಹಾಗೂ ಕೆಲಸ ಕೊಟ್ಟಿದ್ದಾರೆ. ರಾಜಕೀಯ ಅಭಿಪ್ರಾಯ ಮಾತನಾಡಲು ಪಕ್ಷದ ಚೌಕಟ್ಟು ಇದೆ. ಹೈಕಮಾಂಡ್ ಇದೆ, ಅಲ್ಲಿ ಏನು ಹೇಳಬೇಕು ಹೇಳುತ್ತೇನೆ. ಹೈಕಮಾಂಡ್ ಕಾಲಕಾಲಕ್ಕೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಆರೋಪ; ಭಗವಂತ್ ಖೂಬಾಗೆ 25 ಕೋಟಿ ದಂಡ ವಿಧಿಸಿ ನೋಟಿಸ್

    ನಾವು ವೋಟ್ ಚೋರಿ ಅಭಿಯಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ಜೀವಾಳವೇ ಚುನಾವಣೆ. ಇದನ್ನ ಹಾಳು ಮಾಡುವ ಪ್ರಯತ್ನ ನಡೆದಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳು ರಾಜಕೀಯವಾಗಿ ಬಳಕೆಯಾಗುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಳು ನಾಯಿಗಳ ರೀತಿಯಲ್ಲಿ ಸಂವಿಧಾನದ ಸಂಸ್ಥೆಗಳ ಬಳಕೆಯಾಗಿದೆ. ಚುನಾವಣಾ ಆಯೋಗವೇ ಪಕ್ಷಪಾತವಾಗಿ ಚುನಾವಣೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ವ್ಯತ್ಯಾಸ ಆಗಿದೆ. ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಬೆಳಕಿಗೆ ಬಂದಿದೆ. ಮಹದೇವಪುರ, ಆಳಂದದಲ್ಲಿ ಮತಗಳವು ಆಗಿದೆ, ಇದು ಕೂಡಲೇ ನಿಲ್ಲಬೇಕು. ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡಬೇಕು. ಈ ಬಗ್ಗೆ ನಾವು ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ಉಳಿಸಬೇಕು ಅಂದ್ರೆ ಚುನಾವಣೆ ಪಾವಿತ್ರ‍್ಯತೆ ಕಾಪಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

  • ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ – ಯಾವ ಜಿಲ್ಲೆಗೆ ಎಷ್ಟು ಲಾಸ್?

    ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ – ಯಾವ ಜಿಲ್ಲೆಗೆ ಎಷ್ಟು ಲಾಸ್?

    ಬೆಂಗಳೂರು: ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ (Flood) ಹಿನ್ನೆಲೆಯಲ್ಲಿ ಸರ್ಕಾರ ಮಾಡಿದ ಬೆಳೆಹಾನಿ (Crop Loss) ಜಂಟಿ ಸಮೀಕ್ಷೆ ಹಾಗೂ ಪರಿಹಾರ ವಿವರಗಳ ಕಂದಾಯ ಇಲಾಖೆ ಮಾಹಿತಿ ನೀಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda ) ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಈವರೆಗೂ ಬಿಡುಗಡೆಯಾದ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

    2025ರ ನೈಋತ್ಯ ಮುಂಗಾರು (Southwest Mansoon) ಅವಧಿಯಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪ್ರದೇಶಗಳು ಜಲಾವೃತಗೊಂಡು ಸುಮಾರು 5.29 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟವಾಯಿತು. ಬೆಳೆ ಹಾನಿಗೊಂಡ ಜಿಲ್ಲೆಗಳು ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧವಾಗಿದ್ದವು. ತದನಂತರ ಸೆಪ್ಟೆಂಬರ್ ಮಾಹೆಯ ಅಂತ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರ ಭಾಗದ ಜಲಾಶಯಗಳಿಂದ ಹೊರ ಹರಿಸಲಾದ ನೀರಿನಿಂದಾಗಿ ಉತ್ತರ ಒಳನಾಡಿನ ಭೀಮಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ನದಿ ಪ್ರವಾಹ ಉಂಟಾಗಿ ಈ ಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ 4 ಜಿಲ್ಲೆಗಳಲ್ಲಿ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ನಷ್ಟಕ್ಕೆ ಕಾರಣವಾಯಿತು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇದನ್ನೂ ಓದಿ: ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

    ಈ 4 ಜಿಲ್ಲೆಗಳು ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಪುನಃ ಮಾಡಬೇಕಾದ ಅಗತ್ಯವಿದ್ದು, ಬೆಳೆ ಹಾನಿ ಪ್ರದೇಶವು ಪರಿಷ್ಕರಣೆಗೊಳ್ಳಲಿದ್ದು, ಜಂಟಿ ಸಮೀಕ್ಷೆಯು ಸುಮಾರು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ, 2025 ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ ಎಂದರು. ಇದನ್ನೂ ಓದಿ: ಬೆಂಗ್ಳೂರು ಗುಂಡಿಗಳನ್ನ ಯಾವಾಗ ಬಂದ್ ಮಾಡಿಸ್ತೀರಾ? – ಬಿಗ್‌ಬಾಸ್‌ಗೆ ಬೀಗ ಹಾಕಿದ ಸರ್ಕಾರಕ್ಕೆ JDS ಲೇವಡಿ

    ಈಗಾಗಲೇ ಬೆಳೆ ಹಾನಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಲಾದ 9 ಜಿಲ್ಲೆಗಳಲ್ಲಿನ ಸುಮಾರು 5.29 ಲಕ್ಷ ಹೆಕ್ಟೇರ್ ಬೆಳೆಹಾನಿಗೆ ಮೊದಲ ಸುತ್ತಿನ ಬೆಳೆ ಹಾನಿ ಪರಿಹಾರ ಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚುವರಿ ಪಾವತಿಯೊಂದಿಗೆ ಮಳೆಯಾಶ್ರಿತ ಬೆಳೆ ಹಾನಿಗೆ 17000 ರೂ., ನೀರಾವರಿ ಬೆಳೆ ಹಾನಿಗೆ 25500 ರೂ. ಮತ್ತು ದೀರ್ಘಕಾಲಿಕ ಬೆಳೆ ಹಾನಿಗೆ 31,000 ರೂ. ಬೆಳೆ ಹಾನಿ ಪರಿಹಾರ ಪಾವತಿಯನ್ನು ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬೀಗ| 2 ಸಾವಿರ ಉದ್ಯೋಗಿಗಳಿಗೆ ಸಮಸ್ಯೆ – ಇಂದು ಮಧ್ಯಾಹ್ನ ತುರ್ತು ಅರ್ಜಿ ವಿಚಾರಣೆ

    ಇತ್ತೀಚೆಗೆ ಹಾನಿಗೊಳಗಾದ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ಹಾನಿ ಜಂಟಿ ಸಮೀಕ್ಷೆಯು ಪ್ರಗತಿಯಲ್ಲಿದ್ದು, ಸುಮಾರು 10 ದಿನಗಳಲ್ಲಿ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗುವುದು. ದೇಶದಲ್ಲೇ ರಾಜ್ಯ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಆಧಾರ್ ಜೋಡಣೆ ಹೊಂದಿದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಅತ್ಯಂತ ತ್ವರಿತ ಪಾವತಿ ವ್ಯವಸ್ಥೆಯೊಂದಿಗೆ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅತಿವೃಷ್ಠಿ ಮತ್ತು ಪ್ರವಾಹ ಪೀಡಿತ ಪ್ರದೇಶದ ರೈತರ ಬೆಳೆ ಹಾನಿ ಪರಿಹಾರ ಪಾವತಿಗಾಗಿ ಸುಮಾರು 2000 ಕೋಟಿ ರೂ. ಪಾವತಿ ಪ್ರಕ್ರಿಯೆಯು ಪ್ರಾರಂಭಿಸಲಾಗಿದ್ದು, ಇನ್ನು 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: Kolar | ಮದುವೆ ಮುಗಿಸಿ ವಾಪಸ್ ಹೋಗುತ್ತಿದ್ದ ಬಸ್ ಪಲ್ಟಿ – 30ಕ್ಕೂ ಹೆಚ್ಚು ಮಂದಿಗೆ ಗಾಯ

  • ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳ ಆದಾಯ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ: ಸಚಿವ ಕೃಷ್ಣ ಬೈರೇಗೌಡ ಕಳವಳ

    ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳ ಆದಾಯ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ: ಸಚಿವ ಕೃಷ್ಣ ಬೈರೇಗೌಡ ಕಳವಳ

    – ಸಮಾನ ಮನಸ್ಕ 8 ರಾಜ್ಯಗಳ ಸಚಿವರ ಜೊತೆ ಸಭೆ
    – ಜಿಎಸ್ಟಿ ಸರಳೀಕರಣದ ಲಾಭ ಜನರ ಪಾಲಾಗಲಿ
    – ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಪರಿಹಾರ ನೀಡಲಿ
    – ಆದಾಯ ನಷ್ಟವಾದರೆ ರಾಜ್ಯದ ಸ್ವಾಯತ್ತತೆಗೆ ಧಕ್ಕೆ

    ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್ಟಿ ಸರಳೀಕರಣ (GST Simplification) ವ್ಯವಸ್ಥೆಯಿಂದ ರಾಜ್ಯಗಳ ಆದಾಯ 85,000 ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗಲಿದ್ದು, ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಒತ್ತಾಯಿಸಿದರು.

    ಜಿಎಸ್ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಮಾನ ಮನಸ್ಕ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಹಣಕಾಸು ಸಚಿವ ತಂಗಮ್ ತೆನ್ನರಸು, ಹಿಮಾಚಲ ಪ್ರದೇಶದ ಹಣಕಾಸು ಸಚಿವ ರಾಜೇಶ್ ಧರ್ಮನಿ, ಜಾರ್ಖಂಡ್ ಹಣಕಾಸು ಸಚಿವ ರಾಧಾ ಕೃಷ್ಣ ಕಿಶೋರ್, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಕೇರಳ ಹಣಕಾಸು ಸಚಿವ ಬಾಲಗೋಪಾಲ್, ತೆಲಂಗಾಣ ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ, ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಲಯ ಅಧಿಕಾರಿ ಉಜ್ಜೈನಿ ದತ್ತ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

    ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೇ ಹೊರತು ಕೆಲವು ಕಂಪನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು ಎಂದು ಅಭಿಪ್ರಾಯಪಟ್ಟರು.

    ಪ್ರಸ್ತಾವಿತ ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಾಜ್ಯಗಳಿಗೆ ಭಾಗಶಃ 85 ಸಾವಿರ ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ. ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ, ಜಿಎಸ್ಟಿ ಸ್ಥಿರಗೊಳ್ಳುವ ವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

    ಕೇಂದ್ರದ ಆದಾಯದಲ್ಲಿ ಜಿಎಸ್ಟಿ ಪಾಲು ಕೇವಲ ಶೇ. 28ರಷ್ಟು ಮಾತ್ರ. ಉಳಿದ ಶೇ.72ರಷ್ಟು ಆದಾಯವನ್ನು ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್‌ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ.17 ರಿಂದ ಶೇ.20 ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ.50 ರಷ್ಟು. ಹೀಗಾಗಿ, ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇ.20ರಷ್ಟು ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

    ಜಿಎಸ್ಟಿಯನ್ನು ಪರಿಚಯಿಸುವಾಗ ಈ ನೂತನ ತೆರಿಗೆ ವ್ಯವಸ್ಥೆ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿತ್ತು. ಇದು ನಿಜವಾಗಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಆದರೆ, ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲಾ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್ಟಿ ಗೆ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1 ರಷ್ಟು ಇತ್ತು. ಆದರೆ, ಈಗ ಜಿಎಸ್ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ ಶೇ. 6.1 ಕ್ಕೆ ತಲುಪಲಾಗಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್ಟಿ ಕೊಡುಗೆ ಕೇವಲ ಶೇ. 5.9 ರಷ್ಟು ಮಾತ್ರ. ಒಟ್ಟರೆ ಜಿಎಸ್ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.

    ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು 2017ರಲ್ಲಿ ಪರಿಚಯಿಸುವಾಗ ಕೇಂದ್ರ ಸರ್ಕಾರ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಪರಿಹಾರ ವ್ಯವಸ್ಥೆಯನ್ನು 2022ಕ್ಕೆ ತೆಗೆದುಹಾಕಲಾಗಿತ್ತು. ಪರಿಣಾಮ ಬಹುಪಾಲು ರಾಜ್ಯಗಳು ಶೇ.25 ರಷ್ಟು ಆದಾಯ ನಷ್ಟ ಎದುರಿಸಿದ್ದವು. ರಾಜ್ಯಗಳ ಆದಾಯ ಶೇ.25 ರಷ್ಟು ಕುಸಿಯುತ್ತಿದ್ದ ಸಂದರ್ಭದಲ್ಲಿ ಜಿಎಸ್ಟಿ ಸ್ಥಿರಗೊಂಡಿದೆ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಜಿಎಸ್ಟಿ ಸರಳೀಕರಣ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

    ನಾವು ತೆರಿಗೆ ಸರಳೀಕರಣದ ಪರ ಇದ್ದೇವೆ. ಆದರೆ, ರಾಜ್ಯದ ಆದಾಯವನ್ನೂ ಕಾಪಾಡಬೇಕು. ಸಂವಿಧಾನ 2/3 ಜನರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಕರ್ತವ್ಯವನ್ನು ರಾಜ್ಯಕ್ಕೆ ನೀಡಿದೆ. ಆದರೆ, 2/3 ರಷ್ಟು ಆದಾಯವನ್ನು ಕೇಂದ್ರಕ್ಕೆ ನೀಡಿದೆ. ಈ ನಿಯಮ ರಾಜ್ಯಗಳ ಸುಸ್ಥಿರ ಅಭಿವೃದ್ಧಿಗೆ ಮಾರಕ. ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ರಾಜ್ಯಗಳೇ ಮಾಡಬೇಕು. ಆದರೆ, ಆದಾಯ ಮಾತ್ರ ಕೇಂದ್ರದ ಪಾಲಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರೂ ಸಹ ಅವರ ಯೋಗಕ್ಷೇಮದ ಬೇಡಿಕೆ ಹಾಗೂ ಅಭಿವೃದ್ಧಿ ಅಗತ್ಯತೆಗಳಿಗೆ ರಾಜ್ಯ ಸರ್ಕಾರಗಳನ್ನೇ ಅವಲಂಭಿಸಿದ್ದಾರೆ. ಕೇಂದ್ರಗಳ ಕೊಡುಗೆಯೂ ಇದೆ. ಆದರೆ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳೇ ಅಧಿಕ.

    ರಾಜ್ಯಗಳಿಗೆ ಅಧಿಕ ನಷ್ಟವಾದರೆ ಅಂತಿಮವಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ತುಂಬಾ ಮುಖ್ಯವಾದ ವಿಚಾರ. ಪ್ರತಿಯೊಂದು ರಾಜ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸುಸ್ಥಿರ ಆದಾಯ ಅತ್ಯಂತ ಮುಖ್ಯ. ಆದರೆ, ಆದಾಯ ಕೊರತೆ ಉಂಟಾಗಿ ಸ್ವಂತ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತೆ ಎಂಬ ಪದವೇ ಅರ್ಥ ಕಳೆದುಕೊಳ್ಳುತ್ತದೆ. ಸಹಕಾರಿ ಒಕ್ಕೂಟವಾದ ಪದಗಳಲ್ಲಿ ಮಾತ್ರವಲ್ಲದೆ ಕೆಲಸದಲ್ಲೂ ಚಾಲ್ತಿ ಇದ್ದರೆ ಮಾತ್ರ ಸ್ವಾಯತ್ತತೆ ಉಳಿಯಲು ಸಾಧ್ಯ ಎಂದು ವ್ಯಾಖ್ಯಾನಿಸಿದರು.

  • ಎಸಿಗಳು, ತಹಶೀಲ್ದಾರರು ಕಡ್ಡಾಯವಾಗಿ ಜನರಿಗೆ ಸಿಗಬೇಕು – ಕೃಷ್ಣ ಬೈರೇಗೌಡ ಫುಲ್ ಕ್ಲಾಸ್

    ಎಸಿಗಳು, ತಹಶೀಲ್ದಾರರು ಕಡ್ಡಾಯವಾಗಿ ಜನರಿಗೆ ಸಿಗಬೇಕು – ಕೃಷ್ಣ ಬೈರೇಗೌಡ ಫುಲ್ ಕ್ಲಾಸ್

    – ದಪ್ಪ ಚರ್ಮದವರನ್ನ ಹೇಗೆ ದಾರಿಗೆ ತರೋದು ಗೊತ್ತಿದೆ; ಬಿಸಿ ಮುಟ್ಟಿಸಿದ ಸಚಿವ

    ಬೆಂಗಳೂರು: ಎಸಿಗಳು, ತಹಶೀಲ್ದಾರರು (Tahsildar) ಕಡ್ಡಾಯವಾಗಿ ಇನ್ನು ಮುಂದೆ ಜನರಿಗೆ ಸಿಗಬೇಕು. ಜನರ ಆಶಯಗಳ ವಿರುದ್ಧ ಅಧಿಕಾರಿಗಳು ನಡೆದುಕೊಂಡ್ರೆ ಅಂತಹ ಅಧಿಕಾರಿಗಳ ಮೇಲೆ ಕೇಸ್ ದಾಖಲು ಮಾಡೋದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಎಚ್ಚರಿಕೆ ನೀಡಿದ್ದಾರೆ.

    ಭೂ ಸುರಕ್ಷಾ ಯೋಜನೆಯಲ್ಲಿ ಹಿಂದೆ ಬಿದ್ದಿದ್ದ ಬೆಂಗಳೂರು ನಗರ (Bengaluru City) ಮತ್ತು ಬೆಂಗಳೂರು ಗ್ರಾಮಾಂತರ (Bengaluru Rural)  ಜಿಲ್ಲೆಯ ಎಸಿಗಳು, ತಹಶೀಲ್ದಾರರು, ಶಿರಸ್ತೇದಾರರ ಸಭೆಯನ್ನು ಶುಕ್ರವಾರ ಸಚಿವರು ನಡೆಸಿದರು. ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ಜನರ ಆಶಯದಂತೆ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗ್ರಾಮೀಣ ಕುಡಿಯುವ ನೀರು ಯೋಜನೆ ನಿಗದಿತ ಸಮಯಕ್ಕೆ ಪೂರ್ಣಗೊಳಿಸದ ಗುತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಿ – ಪ್ರಿಯಾಂಕ್‌ ಖರ್ಗೆ ಸೂಚನೆ

    ಆನ್‌ಲೈನ್ ಸರ್ಟಿಫಿಕೇಶನ್ ವಿತರಣೆ ವಿಚಾರವನ್ನು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿದ್ದಾರೆ. ರಾಜ್ಯದಾದ್ಯಂತ 21 ಲಕ್ಷ ಪುಟ ವಿತರಣೆ ಆಗಿದ್ದರೆ, ಬೆಂಗಳೂರು ನಗರ-ಗ್ರಾಮಾಂತರದಲ್ಲಿ ಕೇವಲ 27 ಪುಟ ವಿತರಣೆ ಆಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

    ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ. ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

    ತಮ್ಮ ಆಫೀಸಲ್ಲಿ ಏನ್ ನಡೀತಾ ಇದೆ ಅಂತ ತಹಶೀಲ್ದಾರ್‌ಗಳಿಗೇ ಗೊತ್ತಿಲ್ಲ ಅಂದ್ರೆ ಏನರ್ಥ? ಕೆಲಸ ಮಾಡ್ರಿ ಅಂದ್ರೆ ನೆಪ ಹೇಳ್ತೀರಲ್ರಿ, ನಿಮಗೆ ನಾಚಿಕೆ ಆಗಲ್ವ? ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ

    ಎಸಿಗಳು, ತಹಶೀಲ್ದಾರರು ಕಡ್ಡಾಯವಾಗಿ ಜನರ ಕೈಗೆ ಸಿಗಬೇಕು. ಅವರ ಸಮಸ್ಯೆ ಪರಿಹಾರ ಮಾಡಬೇಕು. ಇದನ್ನ ಕಡ್ಡಾಯವಾಗಿ ಮಾಡಬೇಕು. ಆಗೋ ಕೆಲಸ ಮಾಡಬೇಕು. ಆಗದೇ ಇರೋದಕ್ಕೆ ಪತ್ರ ಕೊಡಬೇಕು. ಕಚೇರಿಯಲ್ಲಿ ಎಂಟ್ರಿ ಇಲ್ಲದೆ ಹೊರಗೆ ಹೋದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡಲಾಗಿದೆ ಎಂದಿದ್ದಾರೆ

    ಇದಕ್ಕೂ ಬಗ್ಗಿಲ್ಲ ಅಂದರೆ ಬೇರೆ ಮಾರ್ಗದಲ್ಲಿ ನಾವು ಸುಧಾರಣೆ ಮಾಡ್ತೀವಿ. ದಪ್ಪ ಚರ್ಮದವರನ್ನು ಹೇಗೆ ದಾರಿಗೆ ತರೋದು ಗೊತ್ತಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಸಾರ್ವಜನಿಕರ ವಿರುದ್ಧ ಕೆಲಸ ಮಾಡಿದ್ರೆ ಅಂತ ಅಧಿಕಾರಿಗಳ ಮೇಲೆ ಕೇಸ್ ಹಾಕಲಾಗುವುದು. ಅಲ್ಲದೇ ಭೂಸುರಕ್ಷಾ ಯೋಜನೆಗೆ ವೇಗ ಕೊಡುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

    ಇನ್ನು ಬಿಬಿಎಂಪಿ ವ್ಯಾಪ್ತಿಯ ನಿವೇಶನಗಳಿಗೆ ಬಿ ಖಾತೆಯಿಂದ ಎ ಖಾತೆಗೆ ದಾಖಲಾತಿ ಕೊಡೋ ವಿಚಾರಕ್ಕೆ ಪ್ರತಿಕ್ರಿಯಿಸಿದಅವರು, ರೂಲ್ಸ್ ಡ್ರಾಫ್ಸ್ ಆಗಿದೆ. ಕೂಡಲೇ ಜಾರಿ ಮಾಡಬೇಕು ಅನ್ನೋ ಉದ್ದೇಶ ಇದೆ. ಇದರಿಂದ ಎಷ್ಟೋ ಜನರಿಗೆ ಅನುಕೂಲ ಆಗಲಿದೆ. ಕೆಲವು ಕಾನೂನು ತಿದ್ದುಪಡಿ ಆಗಬೇಕು. ಆದಷ್ಟು ಬೇಗ ಕಾನೂನು ತಿದ್ದುಪಡಿ ಮಾಡಿ ಜಾರಿ ಮಾಡ್ತೀವಿ ಎಂದು ತಿಳಿಸಿದ್ದಾರೆ.

  • ಬರೀ ಭಾಷಣ ಮಾಡಿದ್ರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಮೋದಿ ಉತ್ತರಿಸಬೇಕು – ಕೃಷ್ಣಬೈರೇಗೌಡ

    ಬರೀ ಭಾಷಣ ಮಾಡಿದ್ರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಮೋದಿ ಉತ್ತರಿಸಬೇಕು – ಕೃಷ್ಣಬೈರೇಗೌಡ

    ವಿಜಯಪುರ: ಮೋದಿಯವರು ಬರೀ ಭಾಷಣ ಮಾಡಿದರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಉತ್ತರ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಒತ್ತಾಯಿಸಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಪಾಕಿಸ್ತಾನಕ್ಕೆ (Pakistan) ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಬೆಂಬಲ ಕೊಟ್ಟಿದ್ದೆವು. ಆದರೆ ಕದನ ವಿರಾಮ ಘೋಷಣೆ ಮಾಡುವಾಗ ಯಾವ ಉದ್ದೇಶದಿಂದ, ಯಾವ ಗುರಿ ಇಟ್ಟುಕೊಂಡು ಕದನ ಮಾಡಿದ್ದೇವೆ ಆ ಗುರಿ ಈಡೇರಿದೆಯಾ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಪಾಕಿಸ್ತಾನಕ್ಕೆ ಯಾವ ಪಾಠ ಕಲಿಸಲು ಹೊರಟಿದ್ದೇವೆ. ಅದನ್ನು ಕಲಿಸಿದ್ವಾ? ನಾಲ್ಕೈದು ದಿನ ಯುದ್ಧ ಮಾಡಿ ಬಿಟ್ಟರೆ, ಇದು ಸರಿಯಾ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಅಮೆರಿಕ ಹೇಳಿದೆ ಎಂದು ಕದನ ವಿರಾಮ ಘೋಷಣೆ ಮಾಡಿದ್ರಾ? ಅಮೆರಿಕ ನಮ್ಮ ಆಂತರಿಕ ವಿಷಯಗಳ ಬಗ್ಗೆ ತೀರ್ಮಾನ ಮಾಡುವುದಾದರೆ ನಮ್ಮ ಸಾರ್ವಭೌಮತ್ವದ ಬಗ್ಗೆ ಏನು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಶ್ಮೀರ ವಿಷಯವನ್ನು ನಾವು ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ ಅಂದರೆ ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನಡೆ ಮತ್ತೊಂದಿಲ್ಲ. ಕಾಶ್ಮೀರ ವಿಷಯ ಸೆಟಲ್ ಆಗಿದಿಯಾ ಅಥವಾ ರೀ ಓಪನ್ ಆಗಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಇವತ್ತು ಉತ್ತರ ಇಲ್ಲದಂತಾಗಿದೆ. ಬರೀ ಭಾಷಣ ಮಾಡಿದರೆ ಉತ್ತರ ಸಿಗಲ್ಲ. ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

  • ಭಾರತ-ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ?: ಕೃಷ್ಣ ಬೈರೇಗೌಡ

    ಭಾರತ-ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ?: ಕೃಷ್ಣ ಬೈರೇಗೌಡ

    ಚಿತ್ರದುರ್ಗ: ಪಾಕ್ ಮತ್ತು ಭಾರತದ ನಡುವಿನ ಕದನ ವಿರಾಮಕ್ಕೆ (Ceasefire) ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ಹಾಗೂ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲೊಂದು ಪ್ರಶ್ನೆ ತಲೆಯೆತ್ತಿದ್ದು, ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿದ ಬಳಿಕ ಸಂಘರ್ಷ ಮಾಡಬೇಕಿತ್ತು. ಆದರೆ ಸಂಘರ್ಷ ಆರಂಭವಾದ ಮೇಲೆ ಅವರಿಗೆ ಪಾಠ ಕಲಿಸಬೇಕಾದ್ದು ನಮ್ಮ ಗುರಿಯಾಗಬೇಕಿತ್ತು. ದಿಢೀರ್ ಅಂತ ಅಮೆರಿಕ ಹೇಳಿದಾಕ್ಷಣ ಕದನ ವಿರಾಮ ಘೋಷಣೆ ಕಂಡಾಗ, ಪಾಕ್‌ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವಾ ಎಂಬ ಪ್ರಶ್ನೆ ನನಗೆ ಮೂಡುತ್ತಿದೆ ಎಂದರು. ಇದನ್ನೂ ಓದಿ: ಧಾರಾಕಾರ ಮಳೆಗೆ ತತ್ತರಿಸಿದ ಕೀನ್ಯಾ – ರಸ್ತೆಗಳು ಸಂಪೂರ್ಣ ಜಲಾವೃತ

    ಈ ಕದನ ವಿರಾಮದ ಬಳಿಕ ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಪಾಕ್‌ಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಒಮ್ಮೆ ಸಂಘರ್ಷ ಆರಂಭವಾದ ಮೇಲೆ ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬೆರಳು ತೋರಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಪಾಠ ಕಲಿಸಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ

    ಈ ಹಿಂದೆ 1971ರಲ್ಲಿ ಕೂಡ ಈ ಪಾಕಿಸ್ತಾನ ಇದೇ ರೀತಿ ಭಾರತಕ್ಕೆ ತೊಂದರೆ ನೀಡಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದರು. ಪಾಕಿಸ್ತಾನವನ್ನೇ ಇಬ್ಭಾಗ ಮಾಡಿದ್ದು, ಸಾವಿರಾರು ಜನ ಸೈನಿಕರು ನಮಗೆ ಶರಣಾಗಿದ್ದರು. ಆಗ ಪಾಕಿಸ್ತಾನವೇ ನಾವು ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಅವರ ವಿರುದ್ಧ ಇಂದಿರಾ ಗಾಂಧಿ ಯುದ್ಧ ಮಾಡಿದ್ದರು ಎಂದು ಅಂದಿನ ಪರಿಸ್ಥಿತಿಯನ್ನು ಸ್ಮರಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ

    ಹಾಗೆಯೇ ನಾವು ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ನೀಡಬೇಕಿದ್ದು, ಮುಂದಿನ ಆಗುಹೋಗುಗಳ ಬಗ್ಗೆ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕಿತ್ತು. ಅದರ ಬದಲಾಗಿ ಅಮೆರಿಕ ಹೇಳಿದಾಕ್ಷಣ ನಾವು ಸಂಘರ್ಷವನ್ನು ನಿಲ್ಲಿಸಿದರೆ ಹೇಗೆ? ಈ ಕದನ ವಿರಾಮದಿಂದಾಗಿ ನಮ್ಮ ಎಲ್ಲಾ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ. ಇಂತಹ ಪ್ರಶ್ನೆಗಳು ಭಾರತದ ಎಲ್ಲಾ ನಾಗರಿಕರ ಮನಸ್ಸಿನಲ್ಲಿಯೂ ಉದ್ಭವವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು. ಜೊತೆಗೆ ಕಾಶ್ಮೀರ ನಮ್ಮ ಆಂತರಿಕ ವಿಷಯವೆಂದು ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಈ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್

    ಹಾಗಾದರೆ ನಾವು ಇಷ್ಟು ದಿನ ತೆಗೆದುಕೊಂಡ ನಿಲುವು ಏನಾಯ್ತು? ನಮ್ಮ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯವೋ ಅಥವಾ ಅಂತಾರಾಷ್ಟ್ರೀಯ ವಿಷಯವೋ ಎಂಬ ಅನುಮಾನ ನಮಗೆ ಮೂಡಿದೆ. ಅಷ್ಟೇ ಅಲ್ಲದೇ ನಾವೇ ಎಲ್ಲೋ ಒಂದು ಕಡೆ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುತ್ತಿದ್ದು, ಆಂತರಿಕ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ ಅವಕಾಶ ಮಾಡಿಕೊಟ್ಟಂತಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ – ಸಿದ್ದರಾಮಯ್ಯ

    ನಮ್ಮ ಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತನಾಡುತ್ತಾ ಉಪದೇಶ ಕೊಡುವ ಅವಕಾಶ ನೀಡಿರುವುದರಿಂದಾಗಿ ನಮಗೆ ತೀವ್ರ ನಷ್ಟವೇ ಆಗಲಿದೆ. ಹೀಗಾಗಿ ಈ ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕೆಂಬ ಸಂಕಲ್ಪದಿಂದ ಆರಂಭವಾದ ಕದನಕ್ಕೆ ವಿರಾಮ ಮಾಡುವಾಗ ನಮ್ಮ ಉದ್ದೇಶ ಈಡೇರಿದ್ಯಾ ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್‌ ಸೂರ್ಯ

    ನಾವು ಹಾಗೂ ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗವಾದರೆ ಟ್ರಂಪ್ ಹೇಳಿದಾಕ್ಷಣ ನಾವು ಮಂಡಿ ಊರಿದಾಗ ನಮ್ಮ ಸಾರ್ವಭೌಮ ಏನಾಯ್ತು? ಒಂದು ವೇಳೆ ಅವರು ಹೇಳಿದ ಕೂಡಲೇ ನಾವು ಎಸ್ ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಕದನ ವಿರಾಮವನ್ನು ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು. ಬದಲಾಗಿ ಪಾಕಿಸ್ತಾನ ಇನ್ನೊಮ್ಮೆ ನಮ್ಮ ವಿಚಾರದಲ್ಲಿ ಕೈ ಹಾಕದ ರೀತಿ ಬುದ್ಧಿ ಕಲಿಸದೇ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಹೇಳಿದ ಕೂಡಲೇ ಒಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಗುಡುಗಿದರು. ಈ ವೇಳೆ ಅವರೊಂದಿಗೆ ಸಾಂಖ್ಯಿಕ ಹಾಗು ಯೋಜನಾ ಖಾತೆ ಸಚಿವ ಡಿ.ಸುಧಾಕರ್ ಉಪಸ್ಥಿತರಿದ್ದರು. ಇದನ್ನೂ ಓದಿ:  ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮೋದಿ

  • ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ

    ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ಕರ್ನಾಟಕ ಸರ್ಕಾರದ (Congress) ಬಗ್ಗೆ ಮಾತಾಡೋ ಬದಲು ರಾಜ್ಯಕ್ಕೆ ಅನ್ಯಾಯ ಆಗಿರೋ ಬಗ್ಗೆ ಸಂಸತ್‌ನಲ್ಲಿ ಮಾತನಾಡಲಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ದೇವೇಗೌಡರಿಗೆ ತಿರುಗೇಟು ಕೊಟ್ಟಿದ್ದಾರೆ.

    ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಮಾತಾಡಿದ್ದ ದೇವೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಸಂಸತ್‌ನಲ್ಲಿ ಮಾತನಾಡಬೇಕಿರೋದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡಿರೋ ಅನ್ಯಾಯದ ಬಗ್ಗೆ. ಹೆಜ್ಜೆ ಹೆಜ್ಜೆಗೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ (Union Budget) ಕರ್ನಾಟಕಕ್ಕೆ ಕರಾಳ ಅಧ್ಯಾಯ ಆಗಿದೆ. ತೆರಿಗೆ ಕಟ್ಟುವ, ಕಷ್ಟಪಟ್ಟು ದುಡಿಯೋ ಕರ್ನಾಟಕ ಜನರ ತೆರಿಗೆ ದುಡ್ಡು ಲೂಟಿ ಆಗುತ್ತಿದೆ. ಕರ್ನಾಟಕದ ಬಗ್ಗೆ ಇವರಿಗೆ ಬದ್ಧತೆ ಇದ್ದರೆ ಕರ್ನಾಟಕಕ್ಕೆ ಮೊದಲು ಕೇಂದ್ರದಿಂದ ನ್ಯಾಯ ಕೊಡಿಸಲಿ. ಅದನ್ನ ಬಿಟ್ಟು ಅವರು ಮಾಡೋ ಅನ್ಯಾಯವನ್ನ ಮುಚ್ಚಿಹಾಕಿ ಇವರು ಕೂಡಾ ಅನ್ಯಾಯದಲ್ಲಿ ಪಾಲಾಗೋದು ಬಿಡಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ದುರಂತ| ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ, ಇಬ್ಬರು ಬಲಿ

    ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಚುನಾವಣೆ ಸಮಯದಲ್ಲಿ ಹೇಳಿದ್ದರು. ಅದನ್ನ ಮೊದಲು ಕೊಡಿಸಲಿ. ಮೇಕೆದಾಟಿಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ಕೂಡ ಮೇಕೆದಾಟಿಗೆ ವಿರೋಧ ಇಲ್ಲ ಎಂದು ಹೇಳಿದೆ. ದೇವೇಗೌಡರೇ ಆಗಲಿ ಯಾರೇ ಆಗಲಿ ಮೊದಲು ಅನುಮತಿ ಕೊಡಿಸಿ. ಚನ್ನಪಟ್ಟಣ ಎಲೆಕ್ಷನ್‌ನಲ್ಲಿ ಕೈಹಿಡಿದು ಸಹಿ ಹಾಕಿಸುತ್ತೇವೆ ಎಂದುಭಾಷಣ ಮಾಡಿದರು. ಅದಕ್ಕೆ ಮೊದಲು ಅನುಮತಿ ಕೊಡಿಸಲಿ. ನಮ್ಮ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ. ಅದನ್ನ ಸರಿ ಮಾಡಲಿ. ಆಮೇಲೆ ಉಳಿದಿದ್ದ ವಿಷಯ ಮಾತನಾಡಲು ಅವರಿಗೂ ನೈತಿಕತೆ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್

  • ಶಿವಣ್ಣ ನಮ್ಮ ರಾಜ್ಯದ ಆಸ್ತಿ: ಕೃಷ್ಣ ಬೈರೇಗೌಡ

    ಶಿವಣ್ಣ ನಮ್ಮ ರಾಜ್ಯದ ಆಸ್ತಿ: ಕೃಷ್ಣ ಬೈರೇಗೌಡ

    ಉಡುಪಿ: ಅಮೆರಿಕದಲ್ಲಿ (America) ಚಿಕಿತ್ಸೆ ಪಡೆದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತವರಿಗೆ ವಾಪಸ್ಸಾಗಿದ್ದಾರೆ. ಉಡುಪಿಯಲ್ಲಿ (Udupi) ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ನಟ ಶಿವರಾಜ್ ಕುಮಾರ್ ನಮ್ಮ ರಾಜ್ಯದ ಆಸ್ತಿ ಎಂದಿದ್ದಾರೆ.

    ಶಿವಣ್ಣ ಓರ್ವ ಅಪರೂಪದ ಸರಳ ವ್ಯಕ್ತಿ, ಅಷ್ಟೊಂದು ದೊಡ್ಡ ಕುಟುಂಬದಿಂದ ಬಂದರೂ ಅವರ ಶರೀರದಲ್ಲಿ ಒಂದು ಕಣದಷ್ಟು ಅಹಂ ಇಲ್ಲ. ಜನಪ್ರಿಯತೆ ಶಿವರಾಜ್ ಕುಮಾರ್ ಅವರ ತಲೆಗೆ ಹೋಗಿಲ್ಲ. ಸರಳ ಸ್ನೇಹಜೀವಿ ಮತ್ತು ಒಳ್ಳೆಯ ವ್ಯಕ್ತಿತ್ವದ ನಟ. ಹೊರದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

    ಬಹಳ ಗಂಭೀರವಾದ ಕಾಯಿಲೆಯಿಂದ ಅವರು ಬಳಲಿದ್ದರು. ಅವರಿಗೆ ನೀಡಿದ ಚಿಕಿತ್ಸೆ ಫಲಪ್ರದವಾಗಿದೆ. ಸಂಪೂರ್ಣ ಗುಣಮುಖರಾಗುತ್ತಾರೆ. ನಾಡಿನ ಜನತೆಯ ಪರವಾಗಿ ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಕೋರುತ್ತೇನೆ. ಸಿನಿಮಾ ನಟರು ಅನ್ನುವುದಕ್ಕಿಂತಲೂ ಒಳ್ಳೆ ವ್ಯಕ್ತಿತ್ವದ ಮನುಷ್ಯ. ಶಿವರಾಜ್ ಕುಮಾರ್‌ರಂತಹ ಜನ ನಮ್ಮ ಜೊತೆಗೆ ಬಹಳ ಸಮಯ ಉಳಿಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಡಿಸ್ಚಾರ್ಜ್‌ – ಸಚಿವೆ ಭಾವುಕ

  • ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು

    ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು

    ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಚಿವ ಕೃಷ್ಣ ಬೈರೇಗೌಡರ (Krishna Byregowda) ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?

    ಭ್ರಷ್ಟಾಚಾರ ಆರೋಪದಡಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುತ್ತಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಗರಣಗಳ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಉಲ್ಲೇಖಿಸಿದ್ದಾರೆ.

    ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ವೇ ನಂಬರ್ 150ರಲ್ಲಿರುವ ಜಮೀನನ್ನು ಪೋಡಿ, ನಕ್ಷೆ ಆಗದೇ ಸಾಗುವಳಿದಾರರು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ. ಪಲ್ಟಿತ್ ಡೆವಲಪರ್ಸ್ ಎಲ್‌ಎಲ್‌ಪಿ ಕಂಪನಿಗೆ ಮಾರಾಟ ಮಾಡಲಾಗಿದ್ದು, ತಹಶೀಲ್ದಾರ, ಉಪವಿಭಾಗಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ದಕ್ಷಿಣದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ – ರಥೋತ್ಸವಕ್ಕೆ ಭಕ್ತರ ದಂಡು

  • ವಂಚಕ ಕಂಪನಿಗಳ ಕಡಿವಾಣಕ್ಕಾಗಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕಕ್ಕೆ ತಿದ್ದುಪಡಿ – ಕೃಷ್ಣ ಬೈರೇಗೌಡ

    ವಂಚಕ ಕಂಪನಿಗಳ ಕಡಿವಾಣಕ್ಕಾಗಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕಕ್ಕೆ ತಿದ್ದುಪಡಿ – ಕೃಷ್ಣ ಬೈರೇಗೌಡ

    -ಠೇವಣಿದಾರರ ಹಣ ಹಿಂಪಡೆಯಲು ಕಾನೂನಿನಲ್ಲಿ ಸರಳೀಕರಣ

    ಬೆಳಗಾವಿ: ಬಡವರ ಹಣ ವಂಚಿಸುವ ಮೋಸದ ಕಂಪನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕಕ್ಕೆ ಹಲವು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.

    ಸೋಮವಾರ ವಿಧಾನಸಭೆಯಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ 2024 ಮಂಡಿಸಿ ಮಾತನಾಡಿದ ಅವರು, 2003-04ರಲ್ಲಿ ವಿನಿವಿಂಕ್ ಶಾಸ್ತ್ರಿ ಚಿಟ್‌ಫಂಡ್ ಸ್ಕೀಂನಿಂದ ಸಾವಿರಾರು ಜನ ಬಡ ಠೇವಣಿದಾರರು ಹಣ ಕಳೆದುಕೊಂಡಿದ್ದರು. ಅಪಾರ ಸಂಖ್ಯೆಯ ಅಮಾಯಕರು ಹಣ ಕಳೆದುಕೊಂಡಿದ್ದರು. ಆ ಪ್ರಕರಣ ಅಂದಿನ ದಿನಗಳಲ್ಲೇ ಸದನದಲ್ಲಿ ಭಾರೀ ಸದ್ದು ಮಾಡಿತ್ತು. ಪರಿಣಾಮ 2004ರಲ್ಲಿ ದೀರ್ಘ ಚರ್ಚೆಯ ನಂತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕವನ್ನು ಜಾರಿಗೆ ತರಲಾಯಿತು ಎಂದರು.

    ಚೈನ್‌ಲಿಂಕ್, ಚಿಟ್‌ಫಂಡ್, ಪಿರಮಿಡ್ ಮಾದರಿ ಹಾಗೂ ಹಣ ಡಬ್ಲಿಂಗ್ ಮಾಡುವ ಆಮಿಷ ಒಡ್ಡಿ ಜನರಿಂದ ಹಣ ಠೇವಣಿ ಪಡೆದು ವಂಚಿಸುವ ಕಂಪೆನಿಗಳಿಗೆ ಕಡಿವಾಣ ಹಾಕುವುದು ಈ ಕಾನೂನಿನ ಮುಖ್ಯ ಉದ್ದೇಶ. ಈ ಕಾನೂನು ಜಾರಿಗೆ ಬಂದು 20 ವರ್ಷ ಆಯ್ತು. ಆದರೆ, ಈಗಲೂ ಈ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಲೇ ಇದೆ. ಸೆಟಲ್ಮೆಂಟ್‌ಗಳೂ ಆಗುತ್ತಲೇ ಇವೆ. ಹೀಗಾಗಿ ಈ ಕಾನೂನನ್ನು ಅನುಷ್ಠಾನಗೊಳಿಸುವಾಗ ಒಂದಷ್ಟು ಬದಲಾವಣೆ ತಂದರೆ ಮತ್ತಷ್ಟು ಪ್ರಬಲವಾಗಿ ಅನುಷ್ಠಾನಗೊಳಿಸಬಹುದು ಹಾಗೂ ಬಾಧಿತರಿಗೆ ಮತ್ತಷ್ಟು ಪರಿಹಾರ ಒದಗಿಸಬಹುದು ಎಂಬ ಮಹತ್ವಾಕಾಂಕ್ಷೆಯಿಂದ ಈ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: UI: ಮಣಿರತ್ನಂರನ್ನು ಉಪೇಂದ್ರ ಮೀರಿಸುತ್ತಾರೆ: ಶಿವಣ್ಣ

    ಈ ಕಾನೂನಿಗೆ ಏನೆಲ್ಲಾ ತಿದ್ದುಪಡಿ ತರಬೇಕು ಎಂದು ಅನುಭವದ ಆಧಾರದ ಮೇಲೆ ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿ ತಿದ್ದುಪಡಿ ತರಲಾಗಿದೆ. ಕಾನೂನಿನ ಸಮರ್ಪಕ ಅನುಷ್ಠಾನ ಹಾಗೂ ಠೇವಣಿದಾರರಿಗೆ ಸಹಾಯ ಮಾಡಿಕೊಡುವ, ಅವರ ಹಣವನ್ನು ಸುಲಭಕ್ಕೆ ಹಿಂತಿರುಗಿ ಪಡೆಯುವ ನಿಟ್ಟಿನಲ್ಲಿ ಸರಳೀಕರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ತಿದ್ದುಪಡಿಯಲ್ಲಿ ತರಲಾಗಿದೆ ಎಂದು ತಿಳಿಸಿದರು.

    ಕೆಲವರು ಕಂಪನಿ ತೆರೆದು ಹಗರಣ ಮಾಡಿ, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗುವ ಮೊದಲೇ ಆ ಕಂಪನಿಯ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿರುತ್ತಾರೆ. ನಿರ್ಗಮಿತ ನಿರ್ದೇಶಕರನ್ನು ವಿಚಾರಿಸುವ ಅವಕಾಶ ಹಳೆಯ ಕಾನೂನಿನಲ್ಲಿ ಇರಲಿಲ್ಲ. ಆದರೆ, ಇದೀಗ ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಅಂತಹ ವಂಚಕ ಕಂಪನಿಗಳು ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ಚಟುವಟಿಕೆ ಆರಂಭಿಸಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಉಪ-ವಿಭಾಗಾಧಿಕಾರಿಗಳು ಆ ಬಗ್ಗೆ ಕ್ರಮವಹಿಸಬೇಕು. ಅಂತಹ ಕಂಪನಿಗಳ ಪ್ರಚಾರ-ಜಾಹೀರಾತುಗಳಿಗೂ ತಡೆಯೊಡ್ಡುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

    ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧವೂ ಕ್ರಮದ ಭರವಸೆ:
    ತಿದ್ದುಪಡಿ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ವಿವರಿಸುತ್ತಿದ್ದಂತೆ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕರಾದ ಸುನೀಲ್ ಕುಮಾರ್ ಹಾಗೂ ಅರಗ ಜ್ಞಾನೇಂದ್ರ ಅವರು ಗ್ರಾಮೀಣ ಭಾಗದ ಮಹಿಳೆಯರನ್ನು ಶೋಷಿಸುತ್ತಿರುವ ಮೈಕ್ರೋ ಫನಾನ್ಸ್, ಹೌಸಿಂಗ್ ಸ್ಕೀಂ ಹಾಗೂ ಗೋಲ್ಡ್ ಲೋನ್ ಕಂಪನಿಗಳ ವಂಚನೆಗಳ ಬಗ್ಗೆ ಗಮನ ಸೆಳೆದರು. ಅಲ್ಲದೆ, ಈ ಅಕ್ರಮಗಳಿಗೂ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.

    ವಿಪಕ್ಷ ನಾಯಕರ ಸಲಹೆ ಸೂಚನೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಹೌಸಿಂಗ್ ಸ್ಕೀಂ, ಮೈಕ್ರೋ ಲೆಂಡಿಂಗ್, ಗೋಲ್ಡ್‌ ಲೋನ್‌ ನಂತರ ಅಕ್ರಮಗಳನ್ನು ತಡೆಯಲು ಪ್ರತ್ಯೇಕ ಕಾನೂನು ಇದೆ. ಆ ಚಟುವಟಿಕೆಗಳು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕದ ಅಡಿ ಬರುವುದಿಲ್ಲ. ಆದರೆ, ಆ ಕಾನೂನುಗಳನ್ನೂ ಸಹ ಬಲಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಇಂತಹ ಮೋಸದ ಕಂಪನಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಕುರಿತೂ ಚಿಂತಿಸಲಾಗುತ್ತಿದೆ. ಕೆಲವು ಮೈಕ್ರೋ ಫೈನಾನ್ಸ್ ಹೆಸರಿನ ಕಂಪನಿಗಳು ಮಹಿಳೆಯರನ್ನು ಶೋಷಿಸುತ್ತಿದ್ದು, ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು, ತದ್ಸಂಬದ್ದ ಕಾನೂನಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ತಪ್ಪಾ?- ಕರ್ನಾಟಕ ಪೊಲೀಸರ ನಡೆ ಪ್ರಶ್ನಿಸಿದ ಸುಪ್ರೀಂ