Tag: ಕೃಷ್ಣ ಜಿ ರಾವ್

  • ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಪಾತ್ರವಾದರೂ, ಜನರು ಗುರುತಿಸುವಂತಹ ನಟನೆ ಮಾಡಿದ್ದ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    ತೀವ್ರ ಉಸಿರಾಟದ ತೊಂದರೆಯಿಂದಾಗಿ ಐದು ದಿನಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳಿಂದ ವೈದ್ಯರು ಕೂಡ ಸತತ ಪ್ರಯತ್ನದಲ್ಲಿದ್ದರು. ಇಂದು (ಡಿ.7) ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ಕೃಷ್ಣ ಜಿ ರಾವ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ, ಕೆಜಿಎಫ್ ತಾತಾ ಎಂದೇ ಫೇಮಸ್ ಆಗಿದ್ದರು. ಶಂಕರ್ ನಾಗ್ ಕಾಲದಿಂದಲೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದರೂ, ಜನರು ಗುರುತಿಸುವಂತೆ ಮಾಡಿದ್ದು ಕೆಜಿಎಫ್ ಎನ್ನುವುದು ವಿಶೇಷ. ಈ ಸಿನಿಮಾದ ನಂತರ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇವರ ಮುಖ್ಯ ಭೂಮಿಕೆಯ ಸಿನಿಮಾವೊಂದು ಬಿಡುಗಡೆಗೂ ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ ತಾತ ಕೃಷ್ಣ ಜಿ ರಾವ್ ಇದೀಗ ‘ನ್ಯಾನೋ ನಾರಾಯಣಪ್ಪ’

    ಕೆಜಿಎಫ್ ತಾತ ಕೃಷ್ಣ ಜಿ ರಾವ್ ಇದೀಗ ‘ನ್ಯಾನೋ ನಾರಾಯಣಪ್ಪ’

    ಕೆ.ಜಿ.ಎಫ್ ಸರಣಿ ಸಿನಿಮಾದಲ್ಲಿ ದೃಷ್ಟಿಹೀನಾ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

    ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೇಟ್ ಆಗಿದ್ದು, ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ

    ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದೀಗ ನ್ಯಾನೋ ನಾರಾಯಣಪ್ಪ ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರಪ್ರೇಮಿಗಳನ್ನು ಎಂಟರ್ ಟೈನ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಇದೊಂದು  ಕಾಮಿಡಿ ಎಮೋಷನಲ್ ಡ್ರಾಮ್ ಸಿನಿಮಾವಾಗಿದ್ದು, ತುಂಬ ಕಾಡುವ ಕಥೆ, ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಅಂತಾರೇ ಕುಮಾರ್.

    ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಆಗಸ್ಟ್ ನಲ್ಲಿ ಸಿನಿಮಾವನ್ನು ತೆರೆಗೆ ಯೋಜನೆ ಹಾಕಿಕೊಂಡಿದೆ. ಕುಮಾರ್ ನಿರ್ಮಾಣದ ನ್ಯಾನೋ‌ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

    Live Tv