Tag: ಕೃಷ್ಣ ಕುಮಾರ್

  • ಕ್ಯಾನ್ಸರ್‌ನಿಂದ 20ನೇ ವಯಸ್ಸಿಗೆ ‘ಅನಿಮಲ್’ ನಿರ್ಮಾಪಕನ ಪುತ್ರಿ ನಿಧನ

    ಕ್ಯಾನ್ಸರ್‌ನಿಂದ 20ನೇ ವಯಸ್ಸಿಗೆ ‘ಅನಿಮಲ್’ ನಿರ್ಮಾಪಕನ ಪುತ್ರಿ ನಿಧನ

    ನಿಮಲ್ (Animal), ಭೂಲ್ ಭುಲಯ್ಯ 2 ಸಿನಿಮಾ ನಿರ್ಮಾಪಕ ಕೃಷ್ಣ ಕುಮಾರ್ (Krishna Kumar) ಅವರ ಏಕೈಕ ಪುತ್ರಿ ತಿಶಾ ಕುಮಾರ್ (Tishaa Kumar) 20ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ತಿಶಾ ಜು.18ರಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ: ಡಿವೋರ್ಸ್‌ ಖಚಿತಪಡಿಸಿದ ನತಾಶಾ

    ಕ್ಯಾನ್ಸರ್‌ನಿಂದ ಬಳುತ್ತಿದ್ದ ತಿಶಾಗೆ ಕುಟುಂಬಸ್ಥರು ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಗುರುವಾರದಂದು (ಜು.18) ಚಿಕಿತ್ಸೆ ಫಲಕಾರಿಯಾಗದೇ ತಿಶಾ ನಿಧನರಾಗಿದ್ದಾರೆ. ಈಗ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪುತ್ರಿಯ ನಿಧನ ಕೃಷ್ಣ ಕುಮಾರ್ ದಂಪತಿಗೆ ಆಪ್ತರಿಗೆ ಆಘಾತವುಂಟು ಮಾಡಿದೆ.

    ಟಿ- ಸೀರಿಸ್‌ನ ನಿರ್ಮಾಣ ಸಂಸ್ಥೆಯ ಭಾಗವಾಗಿರುವ ಕೃಷ್ಣ ಕುಮಾರ್ ಅವರ ತಂಡದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ನಿಧನರಾಗಿದ್ದಾರೆ. ಅನಾರೋಗ್ಯದ ವಿರುದ್ಧ ತಿಶಾ ಹೋರಾಡುತ್ತಿದ್ದರು. ಸಂಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

  • ಮಹಿಳೆ ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಳು – ಜಾಮೀನು ನೀಡಿದ್ದ ಜಡ್ಜ್‌ ವರ್ಗಾವಣೆ

    ಮಹಿಳೆ ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಳು – ಜಾಮೀನು ನೀಡಿದ್ದ ಜಡ್ಜ್‌ ವರ್ಗಾವಣೆ

    ತಿರುವನಂತಪುರಂ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವಾಗ ವಿವಾದಾತ್ಮಕ ಅಭಿಪ್ರಾಯಪಟ್ಟಿದ್ದ ಕೊಯಿಕ್ಕೋಡ್‌ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ನ್ಯಾಯಾಧೀಶ ಎಸ್‌.ಕೃಷ್ಣ ಕುಮಾರ್‌ ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ವರ್ಗಾವಣೆ ಪಟ್ಟಿಯಲ್ಲಿ ಮೂವರು ಜಿಲ್ಲಾ ಮಟ್ಟದ ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆ ಕೂಡ ಸೇರಿದೆ. ಇದನ್ನೂ ಓದಿ: ಪರಿಶಿಷ್ಟ ಜಾತಿಗೆ ಸೇರಿದವಳೆಂದು ತಿಳಿದು ಆಕೆ ದೇಹ ಮುಟ್ಟುತ್ತಾನೆಂಬುದು ನಂಬಲಸಾಧ್ಯ: ಕೋರ್ಟ್‌

    CRIME COURT

    ಬರಹಗಾರ ಹಾಗೂ ಸಾಹಿತಿ ಸಿವಿಕ್‌ ಚಂದ್ರನ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದ ತೀರ್ಪನ್ನು ನ್ಯಾಯಾಧೀಶ ಎಸ್.ಕೃಷ್ಣ ಕುಮಾರ್‌ ಅವರು ನೀಡಿದ್ದರು.

    ʼಮಹಿಳೆಯು ಲೈಂಗಿಕ ಪ್ರಚೋದನೆಯ ಬಟ್ಟೆ ತೊಟ್ಟಿದ್ದರು ಎಂದು ಹೇಳಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದರು. ಈ ತೀರ್ಪು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಇದನ್ನೂ ಓದಿ: ಆಕೆಯ ಸಹಚರರೇ ಕೊಲೆ ಮಾಡಿದ್ದಾರೆ- ಸೋನಾಲಿ ಪೋಗಟ್ ಸಹೋದರ ದೂರು

    ಆರೋಪಿಯು ಜಾತಿ ವ್ಯವಸ್ಥೆಗೆ ವಿರುದ್ಧವಾಗಿದ್ದಾರೆ. ಹೀಗಿರುವಾಗ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದ್ದಾಳೆಂಬುದನ್ನು ತಿಳಿದು ಆಕೆ ಮೈ ಮುಟ್ಟಿದ್ದಾರೆಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಸಮಾಜದಲ್ಲಿ ಒಳ್ಳೆಯ ಹೆಸರು ಹೊಂದಿರುವ ವ್ಯಕ್ತಿ ವಿರುದ್ಧ ಇಂತಹ ಆರೋಪ ಹೊರಿಸುವುದು ಸರಿಯಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದರು.

    ಚಂದ್ರನ್‌ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಆದೇಶಕ್ಕೆ ಬುಧವಾರ ಕೇರಳ ಹೈಕೋರ್ಟ್‌ ತಡೆ ನೀಡಿದೆ. ಆದರೂ ಚಂದ್ರನ್‌ ಅವರನ್ನು ಬಂಧಿಸಬಾರದು ಎಂದು ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಜಯಂತಿ ನನಗೆ ತಾಯಿ ಸ್ವರೂಪಿ: ನಟಿ ತಾರಾ

    ನಟಿ ಜಯಂತಿ ನನಗೆ ತಾಯಿ ಸ್ವರೂಪಿ: ನಟಿ ತಾರಾ

     – ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

    ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ನನಗೆ ತಾಯಿಯ ಸ್ವರೂಪವೆಂದು ನಟಿ ತಾರಾ ಕಣ್ಣೀರಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇನ್ನೂ ಹೆಚ್ಚು ಆರೋಗ್ಯವನ್ನು ಕೊಟ್ಟಿದ್ದಾರೆ ಚೆನ್ನಾಗಿರುತ್ತಿತ್ತು. ಅವರನ್ನು ಕಳೆದುಕೊಂಡು ನಾವು ನಿಜವಾಗಲು ಬಡವರಾಗಿದ್ದೇವೆ. ಅವರು ನನಗೆ ತಾಯಿ ಸ್ವರೂಪಿ. ಅವರು ಸಿಕ್ಕಗೆಲ್ಲ ನನಗೆ ನೇಲ್ ಪಾಲಿಶ್, ಲಿಪ್ಸ್ಟಿಕ್ ಹಾಕು ಎಂದು ಕೇಳುತ್ತಿದ್ದರು. ಆಗ ನನಗೆ ನಗು ಬರುತ್ತಿತ್ತು. ಅಷ್ಟು ಖುಷಿಯಿಂದ ಇದ್ದವರನ್ನು ಈ ಪರಿಸ್ಥಿತಿಯಲ್ಲಿ ನೋಡಲು ತುಂಬಾ ಕಷ್ಟವಾಗುತ್ತೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    ಜಯಂತಿ ಅವರನ್ನು ಅಂತಿಮವಾಗಿ ನಮ್ಮ ಮನೆಯಲ್ಲಿ ನೋಡಿದ್ದೆ. ಏಕೆಂದರೆ ನಮ್ಮ ಮನೆಯಲ್ಲಿ ಒಂದು ಪೂಜೆಯನ್ನು ಏರ್ಪಡಿಸಿದ್ದೆವು. ಈ ಕಾರಣಕ್ಕೆ ಅಮ್ಮ ಅಲ್ಲಿಗೆ ಬಂದಿದ್ದರು. ಕೊರೊನಾ ಇದ್ದ ಕಾರಣ ನಾವು ಹೆಚ್ಚು ಜನರನ್ನು ಕರೆದಿಲ್ಲ. ಅವರಿಗೆ ನಮ್ಮ ಮನೆಯ ಪೂಜೆಗೆ ಬರುವುದು ತುಂಬಾ ಇಷ್ಟ. ಅವರಿಗೆ ನಮ್ಮ ಮನೆಯ ಅಡುಗೆ, ಊಟ ಎಂದರೆ ತುಂಬಾ ಇಷ್ಟ. ಒಂದು ವೇಳೆ ನಾನು ಅವರನ್ನು ಪೂಜೆಗೆ ಕರೆದಿಲ್ಲವೆಂದರೆ ಅವರು ನನಗೆ ಕರೆ ಮಾಡಿ ಬೈಯುತ್ತಿದ್ದರು ಎಂದು ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನ ಏರ್ಪಡಿಸಬೇಕು ಎಂದು ಕುಟುಂಬದವರು ಮತ್ತು ಕಲಾ ಕುಟುಂಬದವರು ತೀರ್ಮಾನಿಸಿ ಸರ್ಕಾರಕ್ಕೆ ಅನುಮತಿ ಕೊಡಿ ಎಂದು ಕೇಳಿದ ತಕ್ಷಣ ಸರ್ಕಾರ ಅನುಮತಿಯನ್ನು ನೀಡಿದೆ. ಇಲ್ಲಿನ ಪುರೋಹಿತರು ಬಂದು ಪೂಜಾ ಕೈಂಕರ್ಯಗಳನ್ನು ಮುಗಿಸಿದ ಕೊಡಲೇ ನಾವು ಕಲಾಕ್ಷೇತ್ರಕ್ಕೆ ಜಯಂತಿ ಅಮ್ಮನವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತೆ ಎಂದು ತಿಳಿಸಿದರು.

    ಅವರ ಸಂಸ್ಕಾರ ಎಲ್ಲಿ, ಯಾವಾಗ ನಡೆಯುತ್ತೆ ಎಂದು ಅವರ ಪುತ್ರ ಕೃಷ್ಣ ಕುಮಾರ್ ಅವರು ನಿರ್ಧರಿಸಿ ಹೇಳುತ್ತಾರೆ. ಅವರನ್ನು ನಾನು ಮಾತ್ರವಲ್ಲ ಇಡೀ ಕನ್ನಡ ಚಲನಚಿತ್ರ ತಂಡ ಮತ್ತು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ ಎಂದರು.

  • ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    – ಅಭಿಮಾನಿಗಳೇ ನಮ್ಮ ಕುಟುಂಬ
    – ತಾಯಿಯ ಕೊನೆ ದಿನಗಳನ್ನು ಹೇಳಿಕೊಂಡ ಪುತ್ರ

    ಬೆಂಗಳೂರು: ಕನ್ನಡದ ಹಿರಿಯ ನಟಿ ಜಯಂತಿ ಅವರು ಇಂದು ನಿಧನರಾಗಿದ್ದು, ಈ ಕುರಿತು ಅವರ ಮಗ ಕೃಷ್ಣ ಕುಮಾರ್ ತಾಯಿಯ ಕೊನೆ ದಿನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಪುತ್ರ ಹೇಳಿದ್ದು ಏನು?
    ಬೆಳಗಿನ ಜಾವ ಸುಮಾರು 3-4 ಗಂಟೆಗೆ ಅವರು ನಿಧನರಾಗಿದ್ದಾರೆ. ನಾವು ಅವರನ್ನು 1 ಗಂಟೆಗೊಮ್ಮೆ ನೋಡಿಕೊಂಡು ಬರುತ್ತಿದ್ದೆವು. ಏಕೆಂದರೆ ಅವರಿಗೆ ರಾತ್ರಿ ಕಾಫಿ ಕುಡಿಯುವ ಅಭ್ಯಾಸ ಕೂಡ ಇತ್ತು. ಅದಕ್ಕೆ ಇವತ್ತು ಅದೇ ರೀತಿ ಅವರನ್ನು ನೋಡಲು ಹೋದಾಗ ಅವರು ಮಲಗಿದ್ದಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಇದನ್ನೂ ಓದಿ: ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    ಈ ಸಮಯದಲ್ಲಿ ನಾನು ಊರಿನಲ್ಲಿ ಇರಲಿಲ್ಲ. ಸುದ್ದಿ ತಿಳಿದ ಕೂಡಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ಕಾಯಿಲೆಯಿಂದ ಏನು ಬಳಲುತ್ತಿರಲಿಲ್ಲ. ಕಳೆದ ವರ್ಷ ನಿಮಗೆಲ್ಲ ತಿಳಿದಿರುವಂತೆ 40 ದಿನ ಆಸ್ಪತ್ರೆಯಲ್ಲಿದ್ದರು. ಅದು ಅವರಿಗೆ ತುಂಬಾ ಕಷ್ಟದ ದಿನಗಳು. ಡಾಕ್ಟರ್‍ಗಳು ಕೂಡ ಅವರು ಬದುಕುವುದು ಕಷ್ಟ ಎಂದಿದ್ದರು. ಅದರೂ ಸಹ ಅವರ ಸುಧಾರಿಸಿಕೊಂಡು ಮನೆಗೆ ಬಂದಿದ್ದರು.

    ಡಾಕ್ಟರ್‍ಗಳು ಅವರು ಜೀವನಪೂರ್ತಿ ಆಕ್ಸಿಜನ್ ನೇರವಿನಿಂದಲೇ ಉಸಿರಾಡಬೇಕು ಎಂದಿದ್ದರು. ಆದರೆ ಅವರು 1 ತಿಂಗಳಲ್ಲೇ ಸಹಜವಾಗಿಯೇ ಉಸಿರು ತೆಗೆದುಕೊಳ್ಳುತ್ತಿದ್ದರು. ಅವರು 3-4 ವರ್ಷದಿಂದ ಆರೋಗ್ಯ ವಿಚಾರವಾಗಿ ತುಂಬಾ ಕಷ್ಟಪಡುತ್ತಿದ್ದರು. ಆದರೆ ಕೊನೆಗೆ ಇಂದು ಕೊನೆಯುಸಿರೆಳೆದಿದ್ದಾರೆ.

    ಒಂದು ಖುಷಿ ವಿಚಾರವೆಂದರೆ ಅವರು ಹೆಚ್ಚು ಕಷ್ಟ ಪಡಲಿಲ್ಲ. ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಅವರು ನರಳಾಡಿ ಸಾವನ್ನಪ್ಪಿಲ್ಲವೆಂಬುವುದೇ ಒಂದು ಸಮಾಧಾನದ ವಿಚಾರ. ಪ್ರತಿಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಬರೀ ರಕ್ತ ಸಂಬಂಧಿಗಳಿಂದ ಮಾತ್ರವಲ್ಲ ಅಭಿಮಾನಿಗಳ ಮತ್ತು ಚಿತ್ರರಂಗದವರ ಹಾರೈಕೆಯಿಂದಲೇ ಅವರು ಚೇತರಿಸಿಕೊಂಡು ಮತ್ತೆ ಮನೆಗೆ ಬರುತ್ತಿದ್ದರು. ಆ ನಮ್ಮ ಕುಟುಂಬಕ್ಕೆ ನಾನು ಧನ್ಯವಾದವನ್ನು ತಿಳಿಸುತ್ತೇನೆ.

    ಅಭಿಮಾನಿಗಳಿಗೆ ಅವರ ಅಂತಿಮ ದರ್ಶನ ಪಡೆಯಲು ಅವಕಾಶವಿದೆಯಾ ಎಂಬುದಕ್ಕೆ ಉತ್ತರಿಸಿದ ಅವರು, ಅಂತಿಮ ಸಂಸ್ಕಾರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅದನ್ನು ತಾರಾ ಮತ್ತೆ ಗಿರಿಜಮ್ಮ ಅವರು ನೋಡುತ್ತಾರೆ. ದರ್ಶನಕ್ಕೆ ಏರ್ಪಡು ಮಾಡಬೇಕು ಎಂದುಕೊಂಡಿದ್ದೇವೆ. ಆದರೆ ಈ ಕೊರೊನಾ ಸಮಯದಲ್ಲಿ ಅದು ಎಷ್ಟು ಸೂಕ್ತ ಎಂಬುದು ನಮಗೆ ತಿಳಿಯುತ್ತಿಲ್ಲ. ಇನ್ನೂ ಅದನ್ನು ಚರ್ಚೆ ಮಾಡಿ ತಿಳಿಸುತ್ತೇವೆ. ಏಕೆಂದರೆ ಯಾರಿಗೂ ಯಾವ ರೀತಿಯ ತೊಂದರೆಯಾಗಬಾರದು ಎಂದರು.