Tag: ಕೃಷ್ಣಾನದಿ

  • ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

    ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

    ರಾಯಚೂರು: ಜಿಲ್ಲೆಯ ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ (Krishna River) ಪತ್ತೆಯಾಗಿದ್ದ 3 ವಿಗ್ರಹಗಳಲ್ಲಿ ಅಯೋಧ್ಯೆ ಬಾಲಕರಾಮನ ವಿನ್ಯಾಸ ಹೋಲುವ ದಶಾವತಾರಿ ವಿಷ್ಣು ವಿಗ್ರಹ (Vishnu Idol) ಈಗ ಪುರಾತತ್ವ ಇಲಾಖೆ ವಸ್ತುಸಂಗ್ರಹಾಲಯ ಸೇರಿದೆ. ಒಂದು ವಿಗ್ರಹ ರಾಜ್ಯಕ್ಕೆ ಸೇರಿದರೆ ಇನ್ನೂ ಎರಡು ವಿಗ್ರಹಗಳು ತೆಲಂಗಾಣದ ಪಾಲಾಗಿವೆ.

    ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇರಿಸಿದ್ದ ವಿಷ್ಣು ಮೂರ್ತಿಯನ್ನ ಪುರಾತತ್ವ ಇಲಾಖೆ (Department of Archaeology) ಅಧಿಕಾರಿಗಳು ಪರಿಶೀಲನೆ ನಡೆಸಿ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಿದ್ದಾರೆ. ರಾಯಚೂರಿನ (Raichur) ನವರಂಗ್ ದರ್ಗಾದಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಆದ್ರೆ ವಿಗ್ರಹದ ಕಾಲಾವಧಿ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. 400 ವರ್ಷಗಳಷ್ಟು ಹಳೆಯ ವಿಗ್ರಹ ಎಂದು ನಿರೀಕ್ಷಿಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ಮತ್ತೊಂದು ವಿಷ್ಣು ವಿಗ್ರಹ ಹಾಗೂ ಶಿವಲಿಂಗ ತೆಲಂಗಾಣ ಪಾಲಾಗಿವೆ. ಎರಡು ರಾಜ್ಯಗಳ ಗಡಿಯಲ್ಲಿ ಮೂರ್ತಿಗಳು ದೊರೆತ ಹಿನ್ನೆಲೆ ಪೈಪೋಟಿ ನಡೆದಿತ್ತು. ತೆಲಂಗಾಣದ ಭಕ್ತರು ತೆಗೆದುಕೊಂಡು ಹೋದ ವಿಷ್ಣು ವಿಗ್ರಹ ಹಾಗೂ ಶಿವಲಿಂಗ ಕುರಿತು ತೆಲಂಗಾಣದ ಅಧಿಕಾರಿಗಳು ಅಧ್ಯಯನ ನಡೆಸಿದ್ದಾರೆ. ವಿಗ್ರಹಗಳ ಸಂಪೂರ್ಣ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ

    ರಾಯಚೂರು ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ಕಳೆದ ಐದು ದಿನಗಳ ಹಿಂದೆ ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಮೂರ್ತಿ ಪತ್ತೆಯಾಗಿತ್ತು. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯೆ ಬಾಲಕರಾಮನ ವಿನ್ಯಾಸವನ್ನೇ ಹೋಲುವಂತಿತ್ತು. ನದಿಯಲ್ಲಿ ನೀರು ಬತ್ತಿದ್ದು, ಇದ್ದಷ್ಟೇ ನೀರಿನಲ್ಲಿ ಮೀನುಗಾರರು ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿದ್ದವು. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

  • ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

    ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

    ರಾಯಚೂರು: ಜಿಲ್ಲೆಯ ದೇವಸುಗೂರು (Devarsugur) ಬಳಿಯ ಕೃಷ್ಣಾ ನದಿಯಲ್ಲಿ (Krishna River) ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು (Idols) ಹಾಗೂ ಶಿವಲಿಂಗ ಪತ್ತೆಯಾಗಿದೆ. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ.

    ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

    ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ. ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಎಂದು ಊಹಿಸುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ – ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸಲಾಗದು ಎಂದ ಕೋರ್ಟ್

    ಸಾಮಾನ್ಯವಾಗಿ ಮುಕ್ಕಾದ ದೇವರ ಮೂರ್ತಿಗಳು, ದೇವಾಲಯಗಳಲ್ಲಿನ ಹಳೆ ಮೂರ್ತಿಗಳನ್ನು ಬದಲಾಯಿಸಿದಾಗ ಮೂಲ ಮೂರ್ತಿಗಳನ್ನ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಅಂತಹ ಮೂರ್ತಿಗಳನ್ನು ಪೂಜೆಗೆ ಬಳಸುವುದಿಲ್ಲ. ಅದೇ ರೀತಿ ಈ ಮೂರ್ತಿಗಳನ್ನೂ ನೂರಾರು ವರ್ಷಗಳ ಹಿಂದೆ ಕೃಷ್ಣಾ ನದಿಯಲ್ಲಿ ವಿಸರ್ಜಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಸುತ್ತಮುತ್ತ ಎಲ್ಲೂ ವಿಷ್ಣು ದೇವಾಲಯವಾಗಲಿ ಅಥವಾ ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಲ್ಲ. ಹೀಗಾಗಿ ಈ ಮೂರ್ತಿಗಳು ಇಲ್ಲಿಗೆ ಹೇಗೆ ಬಂದವು. ಇಲ್ಲೇ ದೇವಾಲಯವೇನಾದರೂ ಇತ್ತಾ ಎನ್ನುವ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಮೂರುವರೆ ಅಡಿಯ ಪುರಾತನ ಶಿಲ್ಪಕಲಾ ಶೈಲಿಯ ವಿಷ್ಣು ಮೂರ್ತಿಯನ್ನು ಸದ್ಯ ನದಿ ಪಕ್ಕದ ಕನಕಾದುರ್ಗ ದೇವಾಲಯ ಕಟ್ಟೆ ಮೇಲೆ ಇಡಲಾಗಿದ್ದು, ಪೂಜೆ ಸಲ್ಲಿಸಲಾಗುತ್ತಿದೆ. ಉಳಿದ ಎರಡು ನದಿ ದಂಡೆಯಲ್ಲೇ ಇವೆ. ಕನಕದುರ್ಗಾ ಮೂರ್ತಿಯೂ ಸಹ ಈ ಹಿಂದೆ ನದಿಯಲ್ಲಿ ಸಿಕ್ಕಿದ್ದು ಇಲ್ಲಿನ ಇನ್ನೊಂದು ವಿಶೇಷ. ಆದರೆ ನದಿಯಲ್ಲಿ ಈ ಮೂರ್ತಿಗಳು ಬಂದದ್ದಾದರೂ ಹೇಗೆ ಎನ್ನುವುದು ಸದ್ಯದ ಕುತೂಹಲ. ಪುರಾತತ್ವ ಇಲಾಖೆ ಈ ಮೂರ್ತಿಗಳನ್ನ ಪರಿಶೀಲನೆಗೆ ಒಳಪಡಿಸಿ ಸಂರಕ್ಷಿಸಬೇಕಿದೆ. ಇದನ್ನೂ ಓದಿ: ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!

  • ಕೃಷ್ಣಾನದಿಯಲ್ಲಿ ಬಾಲಕಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ನಾಪತ್ತೆ

    ಕೃಷ್ಣಾನದಿಯಲ್ಲಿ ಬಾಲಕಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ನಾಪತ್ತೆ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬಳಿ ಕೃಷ್ಣಾ ನದಿಯಲ್ಲಿ (Krishna River) ಸ್ನಾನಕ್ಕೆ ತೆರಳಿದ್ದ ಸಹೋದರರಿಬ್ಬರು (Brothers) ನೀರುಪಾಲಾಗಿದ್ದಾರೆ. ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್(35), ಮೌಲಾಲಿ ಉಸ್ಮಾನ್ (32) ನಾಪತ್ತೆಯಾದ ಸಹೋದರರು.

    ನದಿಯಲ್ಲಿ ಸ್ನಾನ ಮಾಡುವ ವೇಳೆ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ಸ್ನಾನ ಘಟ್ಟದಲ್ಲಿ ಮೆಟ್ಟಿಲುಗಳು ಇರುವ ಬಗ್ಗೆ ಮಾಹಿತಿಯಿಲ್ಲದೇ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಈಜು ಬಾರದ ಹಿನ್ನೆಲೆ ನೀರಿನ ಸೆಳೆತಕ್ಕೆ ಸಹೋದರರು ಕೊಚ್ಚಿಹೋಗಿದ್ದಾರೆ. ಸ್ಥಳೀಯರಿಗೆ ಬಾಲಕಿಯನ್ನು ಮಾತ್ರವೇ ರಕ್ಷಿಸಲು ಸಾಧ್ಯವಾಗಿದೆ.

    ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆದಿದ್ದು, ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿಸಲು ತಾಲೂಕು ಆಡಳಿತ ಚಿಂತನೆ ನಡೆಸಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳ ದರೋಡೆ

    ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಸಹೋದರರು ಗ್ರಾಮದಲ್ಲಿ ನಡೆದ ಜಿಂದಾವಲಿ ಉರುಸ್‌ಗೆ ಬಂದಿದ್ದರು. 2 ದಿನಗಳಿಂದ ನದಿಯಲ್ಲೇ ಸ್ನಾನ ಮಾಡಿ ಉರುಸ್‌ನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದು ಸ್ನಾನಕ್ಕೆ ತೆರಳಿದ್ದಾಗ ಅವಘಡ ನಡೆದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

    Live Tv
    [brid partner=56869869 player=32851 video=960834 autoplay=true]

  • ಸಂಬಂಧಿಕರ ಮನೆಗೆ ಬಂದು ಕೃಷ್ಣಾನದಿ ಪಾಲಾದ ಯುವಕರು

    ಸಂಬಂಧಿಕರ ಮನೆಗೆ ಬಂದು ಕೃಷ್ಣಾನದಿ ಪಾಲಾದ ಯುವಕರು

    ರಾಯಚೂರು: ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ರಾಜ್ಯದ ರಾಯಚೂರು ಗಡಿಭಾಗದಲ್ಲಿನ ತೆಲಂಗಾಣದ ವಾಸವಿನಗರದಲ್ಲಿ ನಡೆದಿದೆ.

    ಹೈದರಾಬಾದಿನಲ್ಲಿ ಓದುತ್ತಿದ್ದ 25 ವರ್ಷದ ವಿದ್ಯಾರ್ಥಿ ಶ್ರೀಹರಿರಾಜು ಹಾಗೂ ಹೋಟೆಲ್ ಉದ್ಯಮದಲ್ಲಿದ್ದ 28 ವರ್ಷದ ರಾಮಕೃಷ್ಣ ರಾಜು ಮೃತ ದುರ್ದೈವಿಗಳು. ವಾಸವಿನಗರದ ಕೃಷ್ಣಾ ನದಿಯ ಸ್ನಾನ ಘಟ್ಟದ ಬಳಿ ಈ ಘಟನೆ ನಡೆದಿದೆ.

    ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯುವಕರು ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನ ಮಾತನಾಡಿಸಲು ವಾಸವಿನಗರಕ್ಕೆ ಬಂದಿದ್ದರು. ಈ ವೇಳೆ ಸ್ನಾನಕ್ಕೆ ಕೃಷ್ಣಾನದಿಯಲ್ಲಿ ನೀರಿಗೆ ಇಳಿದ ಐವರಲ್ಲಿ ಇಬ್ಬರು ನೀರುಪಾಲಾಗಿದ್ದಾರೆ.

    ತೆಲಂಗಾಣದ ಕೃಷ್ಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃಷ್ಣಾ ಠಾಣೆ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ.

  • ಮಹಾರಾಷ್ಟ್ರ ಗಡಿಭಾಗದಲ್ಲಿ ಧಾರಾಕಾರ ಮಳೆ – ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ಮಹಾರಾಷ್ಟ್ರ ಗಡಿಭಾಗದಲ್ಲಿ ಧಾರಾಕಾರ ಮಳೆ – ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಮೂಲಕ ನಾರಾಯಣಪುರ ಡ್ಯಾಂಗೆ 1 ಲಕ್ಷ 73 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆಯಾದ್ರೆ ರಾಯಚೂರು-ಕಲಬುರಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.

    ಜಿಲ್ಲೆಯ ನಾರಾಯಣಪೂರ ಬಸವ ಸಾಗರ ಆಣೆಕಟ್ಟು ಭರ್ತಿಯಾಗಿದ್ದು 16 ಕ್ರಸ್ಟ್ ಗೇಟುಗಳ ಮೂಲಕ 1 ಲಕ್ಷ 70 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಕೃಷ್ಣೆ ಮೈದುಂಬಿ ಹರಿಯುತ್ತಿರುವುದರಿಂದ ಈಗಾಗಲೇ ನದಿಯ ನಡುವೇ ಇರುವ ನೀಲಕಂಠರಾಯನ ಗಡ್ಡಿ ಸಂಪರ್ಕ ಕಳೆದುಕೊಂಡಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೇವದುರ್ಗ-ಶಹಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಕೋಳುರು ಬ್ರಿಜ್ ಮುಳುಗಡೆಯಾಗುವದಕ್ಕೆ ಕೇವಲ 2 ಅಡಿ ಅಂತರ ಉಳಿದಿದೆ.

    ಇನ್ನು ನದಿಗೆ ನೀರು ಹೆಚ್ಚಾಗುವ ಸಂಭವ ಇರುವುದರಿಂದ ನದಿ ತೀರದ ಹೊಲ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆವಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

  • ಗಮನಿಸಿ, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ: ಪ್ರವಾಹದ ಭೀತಿ ಬೇಡ

    ಗಮನಿಸಿ, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ: ಪ್ರವಾಹದ ಭೀತಿ ಬೇಡ

    ಬೆಳಗಾವಿ: ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ ಮಳೆರಾಯನ ಅಬ್ಬರ ಕಡಿಮೆಯಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‍ನಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ.

    ಗುರುವಾರವಷ್ಟೇ 45 ಸಾವಿರ ಕ್ಯೂಸೆಕ್‍ನಷ್ಟು ಒಳ ಹರಿವಿದ್ದ ನೀರು ಇಂದು 39 ಸಾವಿರ ಕ್ಯೂಸೆಕ್‍ನಷ್ಟಿದ್ದು 45 ಸಾವಿರ ಕ್ಯೂಸೆಕ್ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇನ್ನೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾಗಿದ್ದು ಭರ್ತಿಗೆ ಇನ್ನೂ 5 ಅಡಿಗಳು ಅಷ್ಟೇ ಬಾಕಿ ಇದೆ.

    ಕೊಯ್ನಾ ಜಲಾಶಯ ಭರ್ತಿಯಾದರೆ 15 ಟಿಎಂಸಿ ನೀರನ್ನು ಹೊರಬಿಡಬಹದು ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಪ್ರವಾಹದ ಯಾವುದೇ ಭೀತಿ ಇಲ್ಲ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಗೀತಾ ಕೌಲಗಿ ಅವರು ನದಿ ಪಾತ್ರದ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    ಕೊಯ್ನಾ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿಂದ ಎಷ್ಟು ನೀರು ಬಿಟ್ಟರೂ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುವದು. 2 ಲಕ್ಷದ 50 ಸಾವಿರ ಕ್ಯೂಸೆಕ್ ನೀರು ಬಂದರೇ ಮಾತ್ರ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗುತ್ತದೆ. ಹಾಗಾಗಿ ಪ್ರವಾಹದ ಯಾವುದೇ ಆತಂಕ ಇಲ್ಲ ಎಂದು ಗೀತಾ ಕೌಲಗಿ ಅವರು ಹೇಳಿದ್ದಾರೆ.

  • ಬೆಳಗಾವಿ: ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದವು 22 ಮೊಸಳೆ ಮರಿಗಳು!

    ಬೆಳಗಾವಿ: ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದವು 22 ಮೊಸಳೆ ಮರಿಗಳು!

    ಬೆಳಗಾವಿ: ಕೃಷ್ಣಾ ನದಿ ದಡದಲ್ಲಿ 22 ಮೊಸಳೆ ಮರಿಗಳು ಸೇರಿದಂತೆ 6 ಮೊಟ್ಟೆಗಳು ಪತ್ತೆಯಾಗಿ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಎಂದಿನಂತೆ ಮೀನುಗಾರರು ಮೀನು ಹಿಡಿಯಲು ಕೃಷ್ಣಾ ನದಿ ತೀರದಲ್ಲಿ ಬಲೆಯನ್ನು ಹಾಕಿದ್ದರು. ಆದರೆ ಆ ಬಲೆಗೆ ಮೀನುಗಳ ಬದಲಾಗಿ ಮೊಸಳೆ ಮರಿಗಳು ಬಿದ್ದಿವೆ. ಇದರಿಂದ ಆತಂಕಗೊಂಡ ಮೀನುಗಾರರು ಕೆಲ ಹೊತ್ತು ಆ ಮರಿಗಳನ್ನು ಏನು ಮಾಡಬೇಕು ಎಂದು ತೊಚದಂತಾಗಿದ್ದರು.

    ನಂತರ ಹಿರಿಯರ ಸಲಹೆ ಮೇರೆಗೆ ಅವುಗಳನ್ನ ಸುರಕ್ಷಿತವಾಗಿ ಹೊರಗಡೆ ತಂದು ಅರಣ್ಯ ಇಲಾಖೆಯವರಿಗೆ ಕರೆ ಮಾಡಿ, ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

  • ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    – ನಾಲ್ಕು ಗ್ರಾಮಗಳಲ್ಲಿ ವೈದ್ಯರ ತಂಡದಿಂದ ನಿರಂತರ ತಪಾಸಣೆ

    ರಾಯಚೂರು: ಜಿಲ್ಲೆಯ ಕೃಷ್ಣಾನದಿ ತೀರದ ಗ್ರಾಮಗಳ ಜನ ಕಲುಷಿತ ನೀರನ್ನ ಬಳಸಿ ವಿವಿಧ ಚರ್ಮರೋಗಗಳಿಗೆ ತುತ್ತಾಗುತ್ತಿರುವ ಕುರಿತ ಪಬ್ಲಿಕ್ ಟಿವಿ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕಳೆದ ಮೂರು ದಿನಗಳಿಂದ ರಾಯಚೂರು ತಾಲೂಕಿನ ಆತ್ಕೂರು, ಡಿ.ರಾಂಪೂರ್, ಬೂರ್ದಿಪಾಡ್, ಸರ್ಜಾಪುರ ಗ್ರಾಮಗಳಲ್ಲಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ.

    ನದಿ ತೀರದ ಗ್ರಾಮಗಳ ಜನರ ಚರ್ಮರೋಗಕ್ಕೆ ಕೃಷ್ಣನದಿ ನೀರು ಹಾಗೂ ಬಿಸಿಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ನದಿಯಲ್ಲಿನ ನಿಂತ ನೀರಲ್ಲಿ ಹೆಚ್ಚಾಗಿರುವ ಫಂಗಸ್‍ನಿಂದಾಗಿ ಚರ್ಮರೋಗಗಳು ಕಾಣಿಸಿಕೊಂಡಿವೆ.  ಹೀಗಾಗಿ ವೈದ್ಯರು ಆಂಟಿ ಫಂಗಲ್, ಆಂಟಿ ಸ್ಟೆಮಿ ಮಾತ್ರೆ ಹಾಗು ಮುಲಾಮುಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ನೀರನ್ನ ಶುದ್ಧೀಕರಿಸಿ ಬಳಸುವಂತೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ.

    ಹೆಚ್ಚು ಕಾಲ ನಿಂತ ನೀರನ್ನ ಬಳಸುವುದಿರಿಂದ ವಾಂತಿ, ಬೇಧಿ, ಅತೀಸಾರದಂತಹ ಕಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಮಾದರಿಗಳನ್ನ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಯಲಕ್ಕೆ ಕಳುಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ನದಿ ನೀರನ್ನ ಶುದ್ಧಿಕರಿಸುವಂತೆ ಜಿಲ್ಲಾ ಆರೋಗ್ಯ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಗೆ ನೀರನ್ನ ಶುದ್ದಿಕರಿಸಿ ಕೊಳಾಯಿಗೆ ಬಿಡುವಂತೆ ಸೂಚಿಸಿದ್ದು, ನೀರಿನ ಕ್ಲೋರಿನೇಷನ್ ನಡೆದಿದೆ.

    ಪಬ್ಲಿಕ್ ಟಿವಿ ವರದಿಗೆ ಕೂಡಲೇ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಿದೆ. ಗ್ರಾಮಗಳಿಗೆ ಶುದ್ಧ ನೀರಿನ ಸರಬರಾಜು ಮಾಡುವ ಅಗತ್ಯವಿದೆ.