Tag: ಕೃಷ್ಣಮೃಗ ಬೇಟೆ ಪ್ರಕರಣ

  • ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

    ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

    ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಕೊನೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ.

    ನ್ಯಾಯಾಧೀಶ ರವೀಂಧರ್ ಜೋಶಿ ಅವರು ಸಲ್ಮಾನ್ ಗೆ ಜಾಮೀನು ತೀರ್ಪು ನೀಡಿದ್ದಾರೆ. 50 ಸಾವಿರ ರೂ. ಎರಡು ಬಾಂಡ್ ಗಳನ್ನು ಸಲ್ಲಿಸಬೇಕು. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣ ವೇಳೆ ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ್ದರು. ಈ ಸಂಬಂಧ ಜೋಧಪುರ ಸಿಜೆಎಂ ಕೋರ್ಟ್ ಸಲ್ಮಾನ್ ದೋಷಿ ಅಂತಾ ಪರಿಗಣಿಸಿ, 10 ಸಾವಿರ ರೂ. ದಂಡ ಮತ್ತು 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು.

    ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿ ಆದೇಶವನ್ನು ಹೊರಡಿಸಿತ್ತು. ಇಂದು ಸಂಜೆಯೊಳಗೆ ಎಲ್ಲ ಕಾನೂನು ನಿಯಮಗಳು ಪೂರ್ಣವಾದ್ರೆ ಸಲ್ಮಾನ್ ಇಂದೇ ಜೈಲಿನಿಂದ ಹೊರಬರಲಿದ್ದಾರೆ. ಇಲ್ಲವಾದಲ್ಲಿ ಸೋಮವಾರ ಸಲ್ಮಾನ್ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ.

  • ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಮುಂಬೈ: ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಜೋದ್‍ಪುರ ಕೋರ್ಟ್ ಪ್ರಕಟಿಸುತ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಾಳದಲ್ಲಿ ನಡುಕ ಆರಂಭವಾಗಿದೆ.

    ಸಲ್ಮಾನ್ ಗಾಗಿ ಈಗಾಗಲೇ ಹಲವು ನಿರ್ಮಾಪಕರು 500 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದಾರೆ. ಒಂದು ವೇಳೆ ಸಲ್ಮಾನ್ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದ್ರೆ ನಿರ್ಮಾಪಕರು ಕೋಟ್ಯಾಂತರ ರೂ. ನಷ್ಟ ಅನುಭವಿಸಲಿದ್ದಾರೆ ಅಂತಾ ಸಿನಿಮಾ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ.

    ಟೈಗರ್ ಜಿಂದಾ ಹೈ ಸಿನಿಮಾದ ಬಳಿಕ ಸಲ್ಮಾನ್ ರೇಸ್-3 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ರೇಸ್-3, ಭಾರತ್, ದಬಾಂಗ್-3, ವಾಂಟೆಡ್-2, ಶೇರ್‍ಖಾನ್, ಪಾರ್ಟ್ ನರ್-2, ಕಿಕ್-2, ದಸ್ ಕಾ ದಮ್ ಸಿನಿಮಾಗಳು ತೆರೆಕಾಣಬೇಕಿದೆ.

    1.ರೇಸ್ 3:
    ಭಾರತೀಯ ಸಿನಿ ಅಂಗಳದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ರೇಸ್-3 ಚಿತ್ರ ಜೂನ್ 15ರಂದು ರಿಲೀಸ್ ಆಗಲಿದೆ ಅಂತಾ ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ. ಈ ವರ್ಷದ ಈದ್ ಪ್ರಯುಕ್ತ ರಿಲೀಸ್ ಆಗುವ ಸಿನಿಮಾ ರೇಸ್ ಆಗಿದೆ. ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಸಲ್ಮಾನ್‍ಗೆ ಜೊತೆಯಾಗಿ ರಮೇಶ್ ಎಸ್. ತೌರಾಣಿ ಬಂಡವಾಳವನ್ನು ಹೂಡಿದ್ದಾರೆ. ಈ ಸಿನಿಮಾ 100 ಕೋಟಿ ಬಜೆಟ್ ನ್ನು ಹೊಂದಿದೆ ಅಂತಾ ಹೇಳಲಾಗಿದ್ದು, ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ.

    2. ಭಾರತ್:
    ರೇಸ್-3 ಬಳಿಕ ಭಾಯಿಜಾನ್ ‘ಭಾರತ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತಾ ಸಲ್ಮಾನ್ ಮಾವ ಅತುಲ್ ಅಗ್ನಿಹೋತ್ರಿ ಘೋಷಣೆ ಮಾಡಿದ್ದಾರೆ. ಕೋರಿಯನ್ ಸೂಪರ್ ಹಿಟ್ ಸಿನಿಮಾ ‘ಓಡೆ ಟು ಮೈ ಫಾದರ್’ ಚಿತ್ರದ ರಿಮೇಕ್ ಭಾರತ್ ಆಗಲಿದೆ. ಭಾರತ್ ಚಿತ್ರಕ್ಕೆ ಟೈಗರ್ ಜಿಂದಾ ಹೈ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಲಿದ್ದು, 2019ರ ಈದ್ ಗೆ ಫಿಲ್ಮ್ ರಿಲೀಸ್ ಆಗಲಿದೆ.

    3. ಕಿಕ್-2:
    ಸಲ್ಮಾನ್ ಅಭಿನಯದ ಕಿಕ್ ಸಿನಿಮಾದ ಮುಂದುವರೆದ ಭಾಗವೇ ಕಿಕ್-2. ಈ ಸಿನಿಮಾ ಸಾಜಿದ್ ನಾದಿಯದ್ ವಾಲಾ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾದಿಯದ್ ವಾಲಾ ಗ್ರ್ಯಾಂಡ್ ಸನ್ ಎಂಟರ್ ಟೈನಮೆಂಟ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಕಿಕ್-2 2019ರ ಕ್ರಿಸ್‍ಮಸ್ ಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ ಅಂತಾ ಚಿತ್ರತಂಡ ಹೇಳಿದೆ.

    4. ದಬಾಂಗ್-3:
    ಬಾಲಿವುಡ್ ನಲ್ಲಿ ಸಂಚಲನ ಹುಟ್ಟಿಸಿದ ಸಿನಿಮಾ ದಬಾಂಗ್. ಈಗಾಗಲೇ ಎರಡು ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಪ್ರಭುದೇವಾ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಚಿತ್ರದಲ್ಲಿ ಮೂರನೇ ಬಾರಿಗೆ ಸಲ್ಮಾನ್‍ಗೆ ಜೊತೆಯಾಗಿ ಸೋನಾಕ್ಷಿ ಸಿನ್ಹಾ ನಟಿಸಲಿದ್ದಾರೆ. ದಬಾಂಗ್-3 ಸಹ ಇದೇ ವರ್ಷ ಕ್ರಿಸ್‍ಮಸ್ ರಂದು ರಿಲೀಸ್ ಆಗಬೇಕಿತ್ತು.

    5. ದಸ್ ಕಾ ದಮ್:
    ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಸಲ್ಮಾನ್ ಖಾಸಗಿ ವಾಹಿನಿಯ ‘ದಸ್ ಕಾ ದಮ್’ ಕಾರ್ಯಕ್ರಮದ ನಿರೂಪಣೆ ಮಾಡಬೇಕಿತ್ತು. ಈಗಾಗಲೇ ಚಾನೆಲ್ ಕಾರ್ಯಕ್ರಮದ ಪ್ರೋಮೋ ರಿಲೀಸ್ ಮಾಡಿತ್ತು. ರೇಸ್-3 ಸಿನಿಮಾದ ಚಿತ್ರೀಕರಣದ ಬಳಿಕ ಸಲ್ಮಾನ್ ಈ ಶೋನಲ್ಲಿ ಭಾಗವಹಿಸ್ತಾರೆ ಅಂತಾ ಹೇಳಲಾಗಿತ್ತು. ಈ ಹಿಂದಿನ ದಸ್ ಕಾ ದಮ್ ಶೋನ ಕಾರ್ಯಕ್ರಮದ ನಿರೂಪಣೆಯನ್ನು ಸಲ್ಮಾನ್ ಮಾಡಿದ್ದರು.

    ಕೃಷ್ಣ ಮೃಗ ಬೇಟೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ್ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಇನ್ನು ತಮಿಳಿನ ಪುಲಿ ಮುರಗನ್ ರಿಮೇಕ್ ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಒಪ್ಪಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಮಾಹಿತಿಗಳು ಲಭ್ಯವಾಗಿಲ್ಲ. ಇತ್ತೀಚೆಗೆ ಸಲ್ಮಾನ್ ಸೋದರಿ ಅರ್ಪಿತಾ ಖಾನ್ ಪತಿ ಆಯುಶ್ ಶರ್ಮಾಗಾಗಿ ‘ಲವ್‍ರಾತ್ರಿ’ ಎಂಬ ಸಿನಿಮಾ ಮಾಡಲು ಸಹ ಮುಂದಾಗಿದ್ದರು.

  • ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ಗೆ ಐದು ವರ್ಷ ಜೈಲು

    ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ಗೆ ಐದು ವರ್ಷ ಜೈಲು

    ನವದೆಹಲಿ: ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆ ತೀರ್ಪು ನೀಡಿದೆ.

    ಸರ್ಕಾರಿ ವಕೀಲರು ಕನಿಷ್ಠ ಆರು ವರ್ಷಗಳ ಶಿಕ್ಷೆ ನೀಡಬೇಕೆಂದು ಅಂತಾ ತಮ್ಮ ವಾದವನ್ನು ಮಂಡಿಸಿದ್ದರು. ಆದ್ರೆ ಸಲ್ಮಾನ್ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ನ್ಯಾಯಾಲಯದ ಶಿಕ್ಷೆಯನ್ನು ಕೆಲವು ದಿನಗಳವರೆಗೆ ಅಮಾನತಿನಲ್ಲಿಡಿ ಸಲ್ಮಾನ್ ಪರ ವಕೀಲರು ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಅದೇಶಿಸಿದೆ.

     

    ಬೇಟೆಯಾಡುವ ವೇಳೆ ಪ್ರವಾಸಿ ಗೈಡ್ ಗಳಾದ ದುಶ್ಯಂತ್ ಸಿಂಗ್ ಮತ್ತು ಸಲ್ಮಾನ್ ಸಹಾಯಕ ದಿನೇಶ್ ಗೌರೆ ಸಹ ಸಲ್ಮಾನ್ ಜೊತೆಯಲ್ಲಿದ್ದರು. ಅಂದು ಸಲ್ಮಾನ್ ಜೊತೆಯಲ್ಲಿದ್ದ ಸಹಾಯಕ ಇಲ್ಲಿಯವರೆಗೆ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ.

    ಕೃಷ್ಣಮೃಗ ಬೇಟೆ ಪ್ರಕರಣ ನಡೆದು ಬಂದ ದಾರಿ:
    * ಸೆಪ್ಟೆಂಬರ್ 26, 1998 – ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್
    * ಅಕ್ಟೋಬರ್ 2, 1998 – ಕೇಸ್ ದಾಖಲಿಸಿದ್ದ ಅರಣ್ಯಾಧಿಕಾರಿಗಳು
    * 7 ಜನ ಆರೋಪಿಗಳು – ಸಲ್ಮಾನ್ ಖಾನ್, ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ ಕೋಠಾರಿ, ದುಶ್ಯಂತ್ ಸಿಂಗ್, ದಿನೇಶ್ ಗಾವ್ರೆ
    * 4 ಜನ ಪ್ರತ್ಯಕ್ಷದರ್ಶಿಗಳು – ಛೋಗರಾಮ್, ಮೂನಂ ಚಂದ್, ಶಿರಾರಾಮ್, ಮಂಗಿಲಾಲ್
    * ನವೆಂಬರ್ 9,2000 – ಸಿಜೆಎಂ ಕೋರ್ಟ್‍ನಿಂದ ಕೇಸ್
    * ಫೆಬ್ರವರಿ 19, 2016 – ಆರೋಪಿಗಳ ಮೇಲೆ ಚಾರ್ಜ್‍ಶೀಟ್
    * 7 ವರ್ಷಗಳ ಕಾಲ ಸುದೀರ್ಘವಾಗಿ ನಡೆದ ವಿಚಾರಣೆ
    * ಮಾರ್ಚ್ 23, 2013 – ಎಲ್ಲಾ ಆರೋಪಿಗಳ ಮೇಲೆ ಮತ್ತೆ ಹೊಸದಾಗಿ ಚಾರ್ಚ್‍ಶೀಟ್
    * ಮೇ, 23, 2013 – ವಿಚಾರಣೆ ಆರಂಭಿಸಿದ ಸಿಜೆಎಂ ಕೋರ್ಟ್, 28 ಸಾಕ್ಷಿಗಳ ಹೇಳಿಕೆ ದಾಖಲು
    * ಜನವರಿ 13, 2017 – ಪ್ರಕರಣದ ಮಾಹಿತಿ ಪೂರ್ಣ
    * ಜನವರಿ 17,2017 – ಕೋರ್ಟ್ ಮುಂದೆ ಎಲ್ಲಾ ಆರೋಪಿಗಳು ಹಾಜರು
    * ಸೆಪ್ಟೆಂಬರ್ 13, 2017 – ಪ್ರಾಸಿಕ್ಯೂಷನ್‍ನಿಂದ ಅಂತಿಮ ವಾದ
    * ಅಕ್ಟೋಬರ್ 28, 2017 – ಡಿಫೆನ್ಸ್ ಲಾಯರ್ ಅಂತಿಮ ವಾದ
    * ಮಾರ್ಚ್, 24, 2018 – ವಾದ-ಪ್ರತಿವಾದ ಪೂರ್ಣ
    * ಮಾರ್ಚ್ 28, 2018 – ಅಂತಿಮ ತೀರ್ಪು ಕಾಯ್ದಿಟ್ಟ ಸಿಜೆಎಂ ಕೋರ್ಟ್
    * ಏಪ್ರಿಲ್ 5, 2018 – ತೀರ್ಪು ಪ್ರಕಟಿಸಿದ ಕೋರ್ಟ್, ಸಲ್ಮಾನ್ ದೋಷಿ, ಇತರರ ಖುಲಾಸೆ