Tag: ಕೃಷಿ ಮೂಲಸೌಕರ್ಯ

  • ಕೃಷಿ-ಮೂಲಸೌಕರ್ಯಕ್ಕಾಗಿ ಒಂದು ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ

    ಕೃಷಿ-ಮೂಲಸೌಕರ್ಯಕ್ಕಾಗಿ ಒಂದು ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ

    ನವದೆಹಲಿ: ಕೊರೊನಾನಿಂದ ಬಿಕ್ಕಟ್ಟು ಎದುರಿಸುತ್ತಿರುವ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಇಂದು ಒಂದು ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದೆ.

    ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಮೂಲಸೌಕರ್ಯ ಯೋಜನೆಗಳಿಗೆ ಮತ್ತು ರೈತ ಉತ್ಪಾದಕ ಸಂಸ್ಥೆ, ಕೃಷಿ ಉದ್ಯಮಗಳು, ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ಮುಂತಾದವುಗಳಿಗೆ ಹಣ ಒದಗಿಸಲು 1 ಲಕ್ಷ ಕೋಟಿ ರೂ.ಗಳ ನೀಡುವುದಾಗಿ ತಿಳಿಸಿದ್ದಾರೆ. ಕೋಲ್ಡ್ ಚೈನ್ ಮತ್ತು ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯಗಳನ್ನು ಹೊಂದಲು ಈ ನಿಧಿಯನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ಸ್ಯ ಸಂಪದ ಯೋಜನೆ ಪ್ರಕಟ – ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್

    ಮೈಕ್ರೊ ಫುಡ್ ಎಂಟರ್‍ಪ್ರೈಸಸ್‍ಗಾಗಿ 10,000 ಕೋಟಿ ರೂ.ಗಳ ನಿಧಿಯನ್ನು ನಿಗದಿಪಡಿಸಲಾಗಿದೆ. ರಾಜ್ಯವಾರು ಉತ್ಪನ್ನಗಳನ್ನು ಉತ್ತೇಜಿಸುವ ಕ್ಲಸ್ಟರ್ ಆಧಾರಿತ ವಿಧಾನ ಅನುಸರಿಸಲಾಗುತ್ತದೆ. ಉದಾಹರಣೆಗೆ, ಬಿಹಾರದ ಮಖಾನಾ, ಜಮ್ಮು ಮತ್ತು ಕಾಶ್ಮೀರದ ಕೇಸರಿ, ಉತ್ತರ ಪ್ರದೇಶದ ಮಾವು, ಆಂಧ್ರಪ್ರದೇಶದಲ್ಲಿ ಮೆಣಸಿನಕಾಯಿ, ಆಂಧ್ರಪ್ರದೇಶದಿಂದ ಅರಿಶಿನ ಬೆಳೆ ಸೇರಿದಂತೆ ಇತರ ರಾಜ್ಯಗಳ ಪೂರಕ ಕೃಷಿ ನಿರ್ವಹಣಾ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಒಟ್ಟು 18,700 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯ ಅಡಿ ಒಟ್ಟು 6,400 ರೂ. ಹಣವನ್ನು ಪಾವತಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಮುಖ್ಯಾಂಶಗಳು:
    * ಅಲ್ಪಾವಧಿಯ ಬೆಳೆ ಸಾಲಗಳತ್ತ ಗಮನ ಹರಿಸಲಾಗಿದೆ. ಆದರೆ ದೀರ್ಘಾವಧಿಯ ಕೃಷಿ ಮೂಲಸೌಕರ್ಯದಲ್ಲಿ ಹೂಡಿಕೆ ಈ ಮೊತ್ತ ಸಾಕಾಗುವುದಿಲ್ಲ.

    * ಕೃಷಿ ಮೂಲಸೌಕರ್ಯ ಯೋಜನೆಗಳಿಗೆ ಕೃಷಿ-ಗೇಟ್ ಸ್ಥಳಗಳಲ್ಲಿ (ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿಗಳು, ಸ್ಟಾರ್ಟ್ ಅಪ್‍ಗಳು ಇತ್ಯಾದಿಗಳಿಗೆ) ಧನಸಹಾಯಕ್ಕಾಗಿ 1,00,000 ಕೋಟಿ ರೂ. ನೀಡಲಾಗುತ್ತದೆ.

    * ಫಾರ್ಮ್-ಗೇಟ್‍ಗೆ ಕೈಗೆಟುಕುವ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಪೋಸ್ಟ್ ಹಾರ್ವೆಸ್ಟ್ ಮ್ಯಾನೇಜ್ಮೆಂಟ್ ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವು