Tag: ಕೃಷಿ ತಾಪಂಡ

  • ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿ ನಟಿ ಕೃಷಿ ತಾಪಂಡ

    ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿ ನಟಿ ಕೃಷಿ ತಾಪಂಡ

    ‘ಅಕಿರ’ (Akira) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ನಟಿ ಕೃಷಿ ತಾಪಂಡ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇದೀಗ ಗೃಹಪ್ರವೇಶದ (House Warming) ಸಂಭ್ರಮದ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Krishi Thapanda (@krishithapanda)

    ಅಕಿರ, ಎರಡು ಕನಸು, ಲಂಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಕೃಷಿ ಅವರು ಬಿಗ್ ಬಾಸ್ ಸೀಸನ್ 5ರಲ್ಲೂ (Bigg Boss Kannada) ಗುರುತಿಸಿಕೊಂಡಿದ್ದರು. ತಮ್ಮದೇ ಬಟ್ಟೆ ಬ್ರ್ಯಾಂಡ್ ಕೂಡ ನಟಿ ಹೊಂದಿದ್ದಾರೆ.

     

    View this post on Instagram

     

    A post shared by Krishi Thapanda (@krishithapanda)

    ಸದ್ಯ ಮೈಸೂರಿನಲ್ಲಿ (Mysore) ಹೊಸ ಮನೆ ಗೃಹಪ್ರವೇಶ (House Warming) ಮಾಡಿದ್ದಾರೆ. ಕುಟುಂಬದ ಜೊತೆ ಕೊಡವ ಶೈಲಿಯಲ್ಲಿ ನಟಿ ಸೀರೆಯುಟ್ಟು ಪೂಜೆ ಕಾರ್ಯದಲ್ಲಿ  ಭಾಗಿಯಾಗಿದ್ದಾರೆ. ಹೊಸ ಮನೆಯ ಸಂಭ್ರಮದ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಹೊಸ ಮನೆಗೆ ಕಾಲಿಟ್ಟಿರುವ ನಟಿ ಕೃಷಿ ಕುಟುಂಬಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಸದ್ಯ ನಟಿಯ ಗೃಹಪ್ರವೇಶದ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

  • ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರಕ್ಕೆ 365 ದಿನಗಳ ಹರ್ಷ: ಈ ಗೆಲುವನ್ನು ಸಂಚಾರಿ ವಿಜಯ್ ಗೆ ಅರ್ಪಿಸಿದ ನಿರ್ದೇಶಕ

    ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರಕ್ಕೆ 365 ದಿನಗಳ ಹರ್ಷ: ಈ ಗೆಲುವನ್ನು ಸಂಚಾರಿ ವಿಜಯ್ ಗೆ ಅರ್ಪಿಸಿದ ನಿರ್ದೇಶಕ

    ಲೂಸ್ ಮಾದ ಯೋಗಿ ಅಭಿನಯದ “ಲಂಕೆ” (Lanke). ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳಾಗಿದೆ. ಇತ್ತೀಚೆಗೆ ನೂರುದಿನಗಳು ಚಿತ್ರ ಓಡುತ್ತಿರುವುದೆ ಕಡಿಮೆ‌‌. ಅಂತಹುದರಲ್ಲಿ ಕನ್ನಡ ಚಿತ್ರವೊಂದು 365 ದಿನಗಳು ಪೂರೈಸಿರುವುದು ಖುಷಿಯ ವಿಚಾರ. ಈ ಖುಷಿಯನ್ನು ಹಂಚಿಕೊಳ್ಳಲು ಸಂತಸದ ಸಮಾರಂಭ ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

    ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು  ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು ನಾಯಕ (Loose Mada Yogi) ಲೂಸ್ ಮಾದ ಯೋಗಿ. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನೂ ನಿರ್ಮಾಪಕರಾದ ಸುರೇಖ ರಾಮ್‌ ಪ್ರಸಾದ್ ಹಾಗೂ‌ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು. ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ . ನಿಮ್ಮ ಹಾರೈಕೆಯಿರಲಿ ಎಂದ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ (Ram Prasad) ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ (Sanchari Vijay) ಅವರಿಗೆ ಅರ್ಪಿಸುವುದಾಗಿ ಹೇಳಿದರು.

    ನಾಯಕಿ ಕೃಷಿ ತಾಪಂಡ, (Krishi Tapanda) ಚಿತ್ರದಲ್ಲಿ ನಟಿಸಿರುವ ಎಸ್ತರ್ ನರೋನ (Esther Narona),  ಡ್ಯಾನಿಯಲ್ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಲಂಕೆ” ಯ ಗೆಲುವನ್ನು ಹಂಚಿಕೊಂಡರು. ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ. ಇದಕ್ಕೆ ಕಾರಣ ರಾಮ್ ಪ್ರಸಾದ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ‘ಲಂಕೆ’ ಕೈ ಹಿಡಿದ ಸಿನಿರಸಿಕರು – ಯಶಸ್ವಿ ಪ್ರದರ್ಶನ ಕಾಣುತ್ತಿದೆ ಯೋಗಿ ಸಿನಿಮಾ

    ‘ಲಂಕೆ’ ಕೈ ಹಿಡಿದ ಸಿನಿರಸಿಕರು – ಯಶಸ್ವಿ ಪ್ರದರ್ಶನ ಕಾಣುತ್ತಿದೆ ಯೋಗಿ ಸಿನಿಮಾ

    ಲೂಸ್ ಮಾದ ಯೋಗಿ ಅಭಿನಯದ ಅದ್ದೂರಿ ಹಾಗೂ ಮಾಸ್ ಸಬ್ಜೆಕ್ಟ್ ಚಿತ್ರ ‘ಲಂಕೆ’ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣೇಶ ಹಬ್ಬಕ್ಕೆ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಂಡು ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು ಚಿತ್ರತಂಡದ ಸಂತಸವನ್ನು ದುಪ್ಪಟ್ಟು ಮಾಡಿದೆ.

    ಔಟ್ ಅಂಡ್ ಔಟ್ ಕಮರ್ಶಿಯಲ್ ಚಿತ್ರ ‘ಲಂಕೆ’. ನೈಜ ಘಟನೆ ಆಧಾರಿತ ಲಂಕೆ ಚಿತ್ರದ ಮೂಲಕ ಯೋಗಿ ಕೂಡ ಗ್ರ್ಯಾಂಡ್ ಕಂ ಬ್ಯಾಕ್ ಮಾಡಿದ್ದಾರೆ. ಬಿಡುಗಡೆಯ ಮುನ್ನ ಯಾವ ನಿರೀಕ್ಷೆ ಹುಟ್ಟು ಹಾಕಿತ್ತೋ ಬಿಡುಗಡೆಯಾದ ಮೇಲೂ ಸಿನಿಮಾ ಚಿತ್ರಪ್ರೇಮಿಗಳನ್ನು ರಂಜಿಸುವಲ್ಲಿ ಅಷ್ಟೇ ಯಶಸ್ವಿಯಾಗಿದೆ. ಚಿತ್ರದ ಕಥೆ, ಯೋಗಿ ಮಾಸ್ ಅವತಾರ, ಖದರ್, ಕಮರ್ಶಿಯಲ್ ಎಳೆ ಎಲ್ಲವೂ ಚಿತ್ರರಸಿಕರನ್ನು ರಂಜಿಸಿದ್ದು ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.

    ಕೊರೋನಾ ಕಾಲದಲ್ಲೂ ಪ್ರೇಕ್ಷಕರು ಸಿನಿಮಾ ಮೇಲೆ ತೋರಿಸುತ್ತಿರುವ ಪ್ರೀತಿ ಚಿತ್ರತಂಡದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಚಿತ್ರಮಂದಿರದಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದರೂ ಕೂಡ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಿತ್ತು. ಆದ್ರೀಗ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

    ಹೀಗೆ ಚಿತ್ರಕ್ಕೆ ಎಲ್ಲಾ ಭಾಗದಲ್ಲೂ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಚಿತ್ರತಂಡದ ಸಂತಸ ಹೆಚ್ಚಿಸಿದೆ. ಈ ಬಗ್ಗೆ ಹರುಷ ವ್ಯಕ್ತಪಡಿಸಿರುವ ನಿರ್ದೇಶಕ ರಾಮ್ ಪ್ರಸಾದ್ ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊರೋನಾ ಕಾಲದಲ್ಲಿ ಜನ ಇದೇ ಮೊದಲು ಇಷ್ಟು ಪ್ರಮಾಣದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿತ್ರದ ಮೇಲೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ವಿತರಕರು, ಪ್ರದರ್ಶಕರ ಸಂತಸವನ್ನೂ ಹೆಚ್ಚು ಮಾಡಿದೆ ಎಂದಿದ್ದಾರೆ.

    ಇದೇ ಖುಷಿಯಲ್ಲಿ ಲಂಕೆ ಚಿತ್ರತಂಡ ಚಿತ್ರಮಂದಿರಗಳಿಗೂ ಭೇಟಿ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಅನುಪಮ ಹಾಗೂ ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಜನರ ರೆಸ್ಪಾನ್ಸ್ ಕಂಡು ಚಿತ್ರತಂಡ ಸದ್ಯದಲ್ಲೇ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದೆ.

    ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ ನಾಯಕಿಯರಾಗಿ ನಟಿಸಿದ್ದು, ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಒಳಗೊಂಡಂತೆ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಸಂಗೀತದಲ್ಲಿ ಹಾಡುಗಳು ಗಮನ ಸೆಳೆದಿದ್ದು, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಬಾಲಿಯಲ್ಲಿ ಬಿಗ್‍ಬಾಸ್ ಹುಡುಗಿಯರು ಬಿಂದಾಸ್- ಫೋಟೋ ವೈರಲ್

    ಬಾಲಿಯಲ್ಲಿ ಬಿಗ್‍ಬಾಸ್ ಹುಡುಗಿಯರು ಬಿಂದಾಸ್- ಫೋಟೋ ವೈರಲ್

    ಬೆಂಗಳೂರು: ಬಿಗ್ ಬಾಸ್-5 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶೃತಿ ಪ್ರಕಾಶ್, ಕೃಷಿ ತಾಪಂಡ ಹಾಗೂ ಅನುಪಮಾ ಗೌಡ ಬಿಂದಾಸ್ ಆಗಿ ಬಾಲಿಯಲ್ಲಿ ತಮ್ಮ ರಜೆಯನ್ನು ಕಳೆದಿದ್ದಾರೆ.

    ಇತ್ತೀಚೆಗೆ ನಟಿ ಕೃಷಿ ತಾಪಂಡ, ಅನುಪಮಾ ಗೌಡ ಹಾಗೂ ಶೃತಿ ಪ್ರಕಾಶ್ ಇಂಡೋನೇಷಿಯಾದ ಬಾಲಿಗೆ ತೆರೆಳಿದ್ದರು. ಅಲ್ಲಿ ಈ ಮೂವರು ಸಾಕಷ್ಟು ಮಜಾ ಮಾಡಿದ್ದಾರೆ. ಸದ್ಯ ಬಾಲಿಯಲ್ಲಿ ಇವರು ತೆಗೆದ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಗ್ ಬಾಸ್ ಮುಗಿದ ಮೇಲೆ ರಜೆ ಕಳೆಯಲು ಹೊರಗೆ ಹೋಗಲು ಎಲ್ಲರೂ ಪ್ಲಾನ್ ಮಾಡುತ್ತಿದ್ದರು. ಆದರೆ ಕಾರಣಾಂತರದಿಂದ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಮೂವರು ನಟಿಯರು ಬಾಲಿಗೆ ಹೋಗಿ ಅಲಲಿನ ರೆಸಾರ್ಟ್‍ವೊಂದರಲ್ಲಿ ಸುಂದರ್ ಕ್ಷಣಗಳನ್ನು ಕಳೆದಿದ್ದಾರೆ.

     

    ನಟಿ ಅನುಪಮಾ ಗೌಡ ಅವರಿಗೆ ಇದು ಮೊದಲ ಫಾರೀನ್ ಟ್ರಿಪ್. ಹಾಗಾಗಿ ಅವರು ತಮ್ಮ ಫ್ಲೈಟ್ ಟಿಕೆಟ್ ಅನ್ನು ಹಿಡಿದು ಅದರ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಮೊದಲ ಇಂಟರ್ ನ್ಯಾಷನಲ್ ಟ್ರಿಪ್‍ಗೆ ತುಂಬಾ ಸಂತೋಷದಿಂದ ಇದ್ದರು.

    ಅನುಪಮಾ ಗೌಡ, ಶೃತಿ ಪ್ರಕಾಶ್ ಹಾಗೂ ಕೃಷಿ ತಾಪಂಡ ಮೂವರು ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ಅಲ್ಲದೇ ಹೀಗಿರುವ ಹಾಗೇ ರೀತಿಯಲ್ಲೇ ಮುಂದೆಯೂ ಇರುತ್ತೇವೆ ಎಂದು ಕೃಷಿ ತಾಂಪಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡಕ್ಕಾಗಿ ಒಂದನ್ನು ಒತ್ತಿ – ಅಕ್ಷರಗಳನ್ನು ಅಪ್ಪಿಕೊಂಡವನ ಪ್ರೇಮ ವಿಯೋಗ!

    ಕನ್ನಡಕ್ಕಾಗಿ ಒಂದನ್ನು ಒತ್ತಿ – ಅಕ್ಷರಗಳನ್ನು ಅಪ್ಪಿಕೊಂಡವನ ಪ್ರೇಮ ವಿಯೋಗ!

    ಬೆಂಗಳೂರು : ಪ್ರೀತಿಯೆಂಬೋ ಕಥಾ ವಸ್ತುವನ್ನು ಅದೆಷ್ಟು ಆಂಗಲ್ಲಿಂದ ಬಳಸಿಕೊಂಡರೂ ಅದರ ವ್ಯಾಲಿಡಿಟಿ ಮುಗಿಯುವಂಥಾದ್ದಲ್ಲ. ಒಂದೇ ಥರದ ಪ್ರೀತಿ… ವೆರೈಟಿ ವೆರೈಟಿ ವಿರಹ… ಇದರ ಮತ್ತೊಂದು ತೀವ್ರವಾದ ರೂಪದಲ್ಲಿ ತೆರೆ ಕಂಡಿರೋ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ಕೆಲವೊಂದಷ್ಟು ಕೊರತೆ ಮತ್ತು ಖಂಡುಗ ಖಂಡುಗ ಭಾವತೀವ್ರತೆಯೊಂದಿಗೆ ತೆರೆ ಕಂಡಿರುವ ಈ ಚಿತ್ರ ಹಳೇ ಪ್ರೇಮಕಾವ್ಯವ ಹೊಸತೊಂದು ಪುಟದಂತೆ ಪ್ರೇಕ್ಷಕರ ಎದೆಗಿಳಿದಿದೆ.

    ಎಂಎ ಮಾಡಿಕೊಂಡಿದ್ದರೂ ಹೊಟೇಲೊಂದರಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ನಾಯಕ. ಇಲ್ಲಿಯೇ ಈತನ ಕನ್ನಡ ಜ್ಞಾನ ಮತ್ತು ಸಾಹಿತ್ಯಾಸಕ್ತಿಯನ್ನು ಮನಗಂಡು ಹಳೇ ಪತ್ರಿಕೆಯ ಸಂಪಾದಕರೋರ್ವರು ತಮ್ಮ ಪತ್ರಿಕೆಯಲ್ಲಿ ಬರೆಯೋ ಅವಕಾಶ ಕೊಡುತ್ತಾರೆ. ಅಲ್ಲಿಂದ ಪತ್ರಿಕೋದ್ಯಮಕ್ಕೆ ಅಡಿಯಿರಿಸಿದವನೊಳಗೆ ಅದಾಗಲೇ ಹುಟ್ಟಿಕೊಂಡಿದ್ದ ಪ್ರೀತಿ ತೀವ್ರವಾಗಿ ಹೋಗುತ್ತದೆ. ಆದರೆ ಇನ್ನೇನು ಪಳಗಿಕೊಂಡ ಪ್ರೀತಿ ಕೈಗೆಟುಕುತ್ತದೆ ಎಂಬಷ್ಟರಲ್ಲಿ ಮೊಬೈಲ್ ಆಫ್ ಆಗೋದರೊಂದಿಗೆ ಎಲ್ಲವೂ ಅದಲು ಬದಲಾಗುತ್ತೆ.

    ಈ ಪ್ರೀತಿಯನ್ನು ತೀವ್ರವಾಗಿ ಹಚ್ಚಿಕೊಂಡು ಅದು ಕೈ ತಪ್ಪಿದಾಗ ಮಾಮೂಲಿ ಪ್ರೇಮಿಗಳಂತೆಯೇ ನಖಶಿಖಾಂತ ಕಂಗಾಲಾಗಿ ಕೂತಿದ್ದ ಆತನಿಗೆ ಬಾಲ್ಯ ಸ್ನೇಹಿತರಿಬ್ಬರು ಜೊತೆಯಾಗುತ್ತಾರೆ. ಅಲ್ಲಿ ಅವರವರ ವಿಫಲ ಪ್ರೇಮ ಕಥಾನಕಗಳೂ ಬಿಚ್ಚಿಕೊಳ್ಳುತ್ತವೆ. ಈ ಮೂವರದ್ದೂ ಕಥೆ ಬೇರೆ, ವ್ಯಥೆ ಒಂದೇ.

    ಇಂಥಾ ಕಥಾ ವಸ್ತುವನ್ನು ನಿರ್ದೇಶಕ ಕುಶಾಲ್ ಇನ್ನೂ ಒಂದಷ್ಟು ಶ್ರಮ ವಹಿಸಿ ಹ್ಯಾಂಡಲ್ ಮಾಡಿದ್ದರೆ ಅದರ ರುಚಿಯೇ ಬೇರೆಯದ್ದಿರುತ್ತಿತ್ತು. ಆದರೂ ಅವರು ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ಅಲ್ಲಲ್ಲಿ ಕೊಂಚ ಪೇಲವ ಅನ್ನಿಸಿದರೂ ಪ್ರೇಕ್ಷಕರಿಗೆ ಹೊಸಾದೊಂದು ಭಾವ ಹುಟ್ಟಿಸುವಲ್ಲಿಯೂ ಅವರು ಸಫಲರಾಗಿದ್ದಾರೆ.

    ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರದಲ್ಲಿ ನಟಿಸಿದ್ದ ಅವಿನಾಶ್ ಗೆ ಇಲ್ಲಿಯೂ ಬೇರೆಯದ್ದೇ ಪಾತ್ರ ಸಿಕ್ಕಿದೆ. ನಾಯಕನಗಿ ಅವರದ್ದು ಪ್ರಾಮಾಣಿಕ ಪ್ರಯತ್ನ. ನಾಯಕನ ಸ್ನೇಹಿತರಾಗಿ ನಟಿಸಿರುವ ಚಿಕ್ಕಣ್ಣ ಮತ್ತು ಶಠಮರ್ಷಣ ಅವಿನಾಶ್ ಗಮನ ಸೆಳೆಯುತ್ತಾರೆ. ನಾಯಕಿ ಕೃಷಿ ತಾಪಂಡ ಗ್ಲಾಮರಸ್ ಆಗಿಯೂ ನಟನೆಯಲ್ಲಿಯೂ ಆವರಿಸಿಕೊಳ್ಳುತ್ತಾಳೆ.

    ಇಂಥಾದ್ದೊಂದು ಕಮರ್ಷಿಯಲ್ ವೆರೈಟಿಯ ಪ್ರೇಮ ಕಥೆಯಲ್ಲಿಯೂ ನಾಯಕನನ್ನು ಪುಸ್ತಕ ಪ್ರೇಮಿಯಾಗಿ ತೋರಿಸುತ್ತಲೇ ಕೆಲವಾರು ಸೆನ್ಸಿಟಿವ್ ಅಂಶಗಳತ್ತ ಫೋಕಸ್ ಮಾಡಿರೋದು ನಿರ್ದೇಶಕರ ಸೂಕ್ಷ್ಮವಂತಿಕೆಗೆ ಸಾಕ್ಷಿ. ಛಾಯಾಗ್ರಹಣ ಸೇರಿದಂತೆ ಎಲ್ಲವೂ ಕಥೆಗೆ ಸಾಥ್ ನೀಡಿವೆ.