Tag: ಕೃಷಿ ಇಲಾಖೆ ಅಧಿಕಾರಿಗಳು

  • 462 ಚೀಲ ನಕಲಿ ಸಾವಯವ ಗೊಬ್ಬರ ಜಪ್ತಿ

    462 ಚೀಲ ನಕಲಿ ಸಾವಯವ ಗೊಬ್ಬರ ಜಪ್ತಿ

    ರಾಯಚೂರು: ಲಿಂಗಸುಗೂರು ತಾಲೂಕಿನ ನಾಗಲಾಪೂರ ಬಳಿ ಮಿಂಚಿನ ದಾಳಿ ನಡೆಸಿದ ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಸಾವಯವ ಗೊಬ್ಬರವನ್ನ ಜಪ್ತಿ ಮಾಡಿದೆ.

    ಕಲಬುರ್ಗಿಯ ಅಫಜಲಪುರದ ರೇಣುಕಾ ಶುಗರ್ ಫ್ಯಾಕ್ಟರಿಯಿಂದ ಕನಕಗಿರಿಗೆ ಸಾಗಿಸುತ್ತಿದ್ದ ನಕಲಿ ಗೊಬ್ಬರದ ಚೀಲಗಳನ್ನು ಜಪ್ತಿಮಾಡಲಾಗಿದೆ. 40 ಕೆ.ಜಿ.ತೂಕದ 462 ಚೀಲ ಗೊಬ್ಬರ ಹಾಗೂ ಸಾಗಾಟ ಮಾಡುತಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಮುಂಗಾರು ಹಂಗಾಮು ಉತ್ತಮವಾಗಿರುವುದರಿಂದ ಎಲ್ಲೆಡೆ ಬಿತ್ತನೆ ಕಾರ್ಯ ಜೋರಾಗಿದೆ. ಹೀಗಾಗಿ ರೈತರು ಬೀಜ ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ದಂದೆಕೋರರು ನಕಲಿ ಗೊಬ್ಬರ ಮಾರಾಟ ನಡೆಸಿದ್ದಾರೆ. ನಕಲಿ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ ನಕಲಿ ಡಿಎಪಿ ಗೊಬ್ಬರ ಜಪ್ತಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ ನಕಲಿ ಡಿಎಪಿ ಗೊಬ್ಬರ ಜಪ್ತಿ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಕುಣೆಕೆಲ್ಲೂರು ಹಾಗೂ ಮಟ್ಟೂರು ಗ್ರಾಮಗಳಲ್ಲಿ ದಾಳಿ ನಡೆಸಿದ ಲಿಂಗಸುಗೂರು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ತಂಡ 6 ಲಕ್ಷ ಮೌಲ್ಯದ 514 ಚೀಲ ನಕಲಿ ಡಿಎಪಿ ಗೊಬ್ಬರ ವಶಪಡಿಸಿಕೊಂಡಿದೆ.

    ದಾಳಿ ವೇಳೆ ಕುಣೆಕೆಲ್ಲೂರು, ಮಟ್ಟೂರು ಗ್ರಾಮದ ವಿವಿಧೆಡೆ ಸಂಗ್ರಹಿಸಿಟ್ಟಿದ್ದ ನಕಲಿ ಗೊಬ್ಬರ ಜಪ್ತಿಮಾಡಲಾಗಿದೆ. ಗಂಗಾವತಿ ಮೂಲದ ಪ್ರಶಾಂತ, ರಾಮಚಂದ್ರ ಎಂಬುವರಿಂದ ನಕಲಿ ಗೊಬ್ಬರ ಮಾರಾಟ ದಂಧೆ ನಡೆದಿದ್ದು, ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರ್ನಾಲ್ಕು ವರ್ಷದಿಂದ ನಕಲಿ ಗೊಬ್ಬರ ಮಾರಾಟದಲ್ಲಿ ತೊಡಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

    ತಾಲೂಕು ಕೃಷಿ ಅಧಿಕಾರಿಗಳಾದ ಮಂಜುಳಾ ಬಸರೆಡ್ಡಿ, ಮಹಾಂತೇಶ್ ಹವಾಲ್ದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಮುಂಗಾರು ಹಂಗಾಮು ಚೆನ್ನಾಗಿರುವುದರಿಂದ ರೈತರು ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗಳಿಗೆ ಅಲೆಯುತ್ತಿರುವುದನ್ನು ನಕಲಿ ದಂಧೆಕೋರರು ಬಂಡವಾಳ ಮಾಡಿಕೊಂಡು ವಂಚನೆ ನಡೆಸಿದ್ದಾರೆ. ಗಂಗಾವತಿ ಠಾಣೆ ಪೊಲೀಸರ ಮಾಹಿತಿ ಮೇರೆಗೆ ದಾಳಿ ನಡೆಸಿ, ನಕಲಿ ಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, ಗೊಬ್ಬರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

  • ಕೋಲಾರಕ್ಕೂ ಒಕ್ಕರಿಸಿತಾ ಆಫ್ರಿಕನ್ ಮಿಡತೆ? ಜಿಲ್ಲೆಯ ರೈತರಲ್ಲಿ ಆತಂಕ

    ಕೋಲಾರಕ್ಕೂ ಒಕ್ಕರಿಸಿತಾ ಆಫ್ರಿಕನ್ ಮಿಡತೆ? ಜಿಲ್ಲೆಯ ರೈತರಲ್ಲಿ ಆತಂಕ

    – ಸ್ಥಳಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ಪರಿಶೀಲನೆ

    ಕೋಲಾರ: ಜಿಲ್ಲೆಗೂ ಮಿಡತೆಗಳು ವಕ್ಕರಿಸಿವೆಯಾ ಎಂಬ ಅನುಮಾನ ಇದೀಗ ಕಾಡುತ್ತಿದ್ದು, ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ಬಳಿ ಮಿಡತೆಗಳ ಗುಂಪು ಕಾಣಿಸಿಕೊಳ್ಳುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿವೆ. ಗ್ರಾಮದ ತೋಟಗಳು, ರಸ್ತೆ ಬದಿಯ ಗಿಡಗಳು ಸೇರಿದಂತೆ ವಿದ್ಯುತ್ ಕಂಬಗಳ ಮೇಲೆ ಗುಂಪು ಗುಂಪಾಗಿ ಮಿಡತೆಗಳು ಕಾಣಿಸಿಕೊಂಡಿವೆ.

    ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಸ್ತೆ ಬದಿಯ ಗಿಡಗಳ ಮೇಲೆ ಗುಂಪಾಗಿದ್ದ ಮಿಡತೆಗಳನ್ನು ಸ್ಥಳೀಯರು ಸುಟ್ಟಿದ್ದಾರೆ. ಈಗಾಗಲೇ ದೇಶದ ಹಲವೆಡೆ ಕಾಣಿಸಿಕೊಂಡಿರುವ ಆಫ್ರಿಕನ್ ಮಿಡತೆಗಳನ್ನು ಹೋಲುತ್ತಿವೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.