Tag: ಕೃಷಿಹೊಂಡ

  • ಬಳ್ಳಾರಿ | ಕೃಷಿಹೊಂಡದಲ್ಲಿ ಬಿದ್ದು ಬಾಲಕ ಸಾವು

    ಬಳ್ಳಾರಿ | ಕೃಷಿಹೊಂಡದಲ್ಲಿ ಬಿದ್ದು ಬಾಲಕ ಸಾವು

    ಬಳ್ಳಾರಿ: ಕೃಷಿಹೊಂಡದಲ್ಲಿ (Agricultural Pit) ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ (Siruguppa) ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಡೆದಿದೆ.

    ವೀರೇಶ್ (13) ಮೃತ ಬಾಲಕ. ಕುರಿ ಮೇಯಿಸಿಲು ಹೋಗಿದ್ದ ವೀರೇಶ್ ನೀರು ಕುಡಿಯಲು ಹೋಗಿ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುಣೆಯ ಐಸಿಸ್‌ ಮಾಡ್ಯೂಲ್‌ ಕೇಸ್‌ – ಇಬ್ಬರು ಉಗ್ರರ ಬಂಧನ

    ಸದ್ಯ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕ ವೀರೇಶ್ ಮೃತದೇಹವನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಖಂಡಾಂತರ ಕ್ಷಿಪಣಿ ದಾಳಿಗೆ ನೂರ್‌ ಖಾನ್‌ ವಾಯುನೆಲೆ ಧ್ವಂಸ – ʻಆಪರೇಷನ್ ಸಿಂಧೂರʼದ ಯಶಸ್ಸು ಒಪ್ಪಿಕೊಂಡ ಪಾಕ್ ಪ್ರಧಾನಿ

     

     

  • ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿಯ ಹಳೆ ಊರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಿಖಿತ್(14) ಹಾಗೂ ಹರಿ ಚರಣ್(13) ಮೃತರು. ಮೃತ ಬಾಲಕರು ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆ ಈಜಾಡಲು ಗ್ರಾಮದ ಹೊರವಲಯದ ಜಯಣ್ಣ ಎಂಬುವವರಿಗೆ ಸೇರಿದ ಕೃಷಿಹೊಂಡದ ಬಳಿ ತೆರಳಿದ್ದಾರೆ. ಆದರೆ ಇಬ್ಬರು ಬಾಲಕರಿಗೂ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಸಂಜೆಯಾದರೂ ಬಾಲಕರು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಡಿದಾಗ ಕೃಷಿಹೊಂಡದಲ್ಲಿ ಬಾಲಕರ ಮೃತ ದೇಹಗಳು ಪತ್ತೆಯಾಗಿದೆ. ಇನ್ನೂ ಗ್ರಾಮಸ್ಥರೇ ಮೃತದೇಹಗಳನ್ನು ಹೊರತೆಗೆದು ಮೃತರ ಮನೆ ಬಳಿ ತೆಗೆದುಕೊಂಡು ಹೋಗಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ:  ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    ವಿಷಯ ತಿಳಿದ ಗೌರಿಬಿದನೂರು ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ವಿಜಯ್ ಮೃತ ಕುಟುಂಬಸ್ಥರ ಮನವೊಲಿಸಿ ಮೃತದೇಹಗಳನ್ನು ತಡರಾತ್ರಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಇಬ್ಬರು ಬಾಲಕರು ಅಕ್ಕಪಕ್ಕದ ಮನೆಯವರಾಗಿದ್ದು, ಸ್ನೇಹಿತರಾಗಿದ್ದರು. ಸಾವಿನಲ್ಲೂ ಸಹ ಇಬ್ಬರು ಒಂದಾಗಿ ಜೀವ ಬಿಟ್ಟಿದ್ದಾರೆ. ಸದ್ಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು

    ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು

    ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ತಾಯಿಯನ್ನ ರಕ್ಷಿಸಲು ಹೋಗಿ, ತಾಯಿ ಹಾಗೂ ಮಗ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿಯಲ್ಲಿ ನಡೆದಿದೆ.

    42 ವರ್ಷದ ತಾಯಿ ತೇಜೋವತಿ ಹಾಗೂ 24 ವರ್ಷದ ಮಗ 24 ಚಂದ್ರೇಗೌಡ ಮೃತ ದುರ್ದೈವಿಗಳು. ಗ್ರಾಮದ ಗೋವಿಂದಪ್ಪನವರ ಕೃಷಿಹೊಂಡದಲ್ಲಿ ಘಟನೆ ನಡೆದಿದೆ. ಗೋವಿಂದಪ್ಪನವರ ಕೃಷಿ ಹೊಂಡಕ್ಕೆ ಹೊಂದಿಕೊಂಡಂತೆ ಮೃತರ ಜಮೀನು ಇದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತೇಜೋವತಿ ಕೃಷಿಹೊಂಡದಲ್ಲಿ ನೀರು ಕುಡಿಯಲು ಹೋಗಿ ಈ ವೇಳೆ ಕಾಲು ಜಾರಿ ಆಕಸ್ಮಿಕ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    agriculture pond

    ಈ ವೇಳೆ ತಾಯಿಯ ರಕ್ಷಣೆಗೆ ಧಾವಿಸಿದ ಮಗ ಚಂದ್ರೇಗೌಡ ಸಹ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ 30 ರಂದು ಸಿಎಂ ನೇತೃತ್ವದಲ್ಲಿ ಸಭೆ

  • ಪತ್ನಿ ಸಾವಿನ ಬಳಿಕ 2ನೇ ಮದ್ವೆ – ಕೃಷಿ ಹೊಂಡದಲ್ಲಿ ತಂದೆ, ಮಗು ಶವ ಪತ್ತೆ

    ಪತ್ನಿ ಸಾವಿನ ಬಳಿಕ 2ನೇ ಮದ್ವೆ – ಕೃಷಿ ಹೊಂಡದಲ್ಲಿ ತಂದೆ, ಮಗು ಶವ ಪತ್ತೆ

    – 15 ದಿನದ ಹಿಂದೆ ಮದುವೆ, ಆತ್ಮಹತ್ಯೆ ಶಂಕೆ
    – 3 ತಿಂಗಳ ಹಿಂದೆ ಪತ್ನಿಯ ಸಾವು

    ಚಿಕ್ಕಬಳ್ಳಾಪುರ: ನಾಪತ್ತೆಯಾಗಿದ್ದ ತಂದೆ-ಮಗು ಶವವಾಗಿ ಕೃಷಿಹೊಂಡದಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣರಹಳ್ಳಿ ಬಳಿ ನಡೆದಿದೆ.

     

    ರವಿ(35) ಹಾಗೂ 09 ತಿಂಗಳ ಮಗುವಿನ ಶವ ಕೃಷಿಹೊಂಡದಲ್ಲಿ ಪತ್ತೆಯಾಗಿದೆ. ತಂದೆ ಮತ್ತು ಮಗುವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಲವು ದಿನಗಳ ಹಿಂದೆ ರವಿ ಪತ್ನಿ ಸಾವನ್ನಪ್ಪಿದ್ದರು.

    ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರವಿ ಪತ್ನಿ 3 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಳೆದ 15 ದಿನಗಳ ಹಿಂದೆ ಸಹ ರವಿ ಮತ್ತೊಂದು ಮದುವೆಯಾಗಿದ್ದನು. ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ರವಿ ಹಾಗೂ ಮಗು ಇಂದು ಬೆಳಗ್ಗೆ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.

  • ಆಟವಾಡುತ್ತಿದ್ದ ಬಾಲಕರು ಕೃಷಿ ಹೊಂಡಕ್ಕೆ ಬಿದ್ದು ಸಾವು

    ಆಟವಾಡುತ್ತಿದ್ದ ಬಾಲಕರು ಕೃಷಿ ಹೊಂಡಕ್ಕೆ ಬಿದ್ದು ಸಾವು

    ವಿಜಯಪುರ: ಆಟವಾಡುತ್ತಿದ್ದ ಬಾಲಕರಿಬ್ಬರು ಆಯತಪ್ಪಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಕ್ಕಳನ್ನು ಚಿಕ್ಕ ಆಸಂಗಿ ಗ್ರಾಮದ ಆಕಾಶ ಬೆನ್ನೂರು (4) ಹಾಗೂ ಬೊರಮ್ಮ ಬೆನ್ನೂರು (4) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಆಟವಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

    ಮನೆಯ ಹತ್ತಿರ ಇರುವ ಚಿಕ್ಕಪ್ಪನ ತೋಟದ ಕೃಷಿ ಹೊಂಡದ ಬಳಿ ಇಬ್ಬರು ಆಟವಾಡುತ್ತಿದ್ದರು. ಈ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವೀಗಿಡಾಗಿದ್ದಾರೆ ಎನ್ನಲಾಗಿದೆ. ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮಾಹಿತಿ ಬಂದ ತಕ್ಷಣ ಕೊಲ್ಹಾರ ಪೊಲೀಸರು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಕೃಷಿಹೊಂಡದಿಂದ ಹೊರತೆಗೆದಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿ ಸಾವು

    ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿ ಸಾವು

    ಚಿಕ್ಕಬಳ್ಳಾಪುರ: ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ತಮ್ಮನ ಜೊತೆ ತೋಟದ ಬಳಿ ಹೋಗಿದ್ದ ಬಾಲಕಿ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೌಟತಿಮ್ಮನಹಳ್ಳಿಯಲ್ಲಿ ನಡೆದಿದೆ.

    ಬೃಂದಾ (7) ಮೃತಪಟ್ಟ ಬಾಲಕಿ. ಮ್ಮನಹಳ್ಳಿ ಗ್ರಾಮದ ರಾಜಾರೆಡ್ಡಿ ಹಾಗೂ ಚಂದ್ರಕಲಾ ದಂಪತಿಯ ಪುತ್ರಿಯಾದ ಬೃಂದಾ, ಗುಡಿಬಂಡೆ ಪಟ್ಟಣದ ಸಹ ವಿದ್ಯಾನೀಕೇತನ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು.

    ಇಂದು ಕ್ರಿಸ್ಮಸ್ ರಜೆ ಇರುವ ಹಿನ್ನೆಲೆಯಲ್ಲಿ ಬೃಂದಾ ತನ್ನ ತಂದೆ ಹಾಗೂ ತಮ್ಮ ಅಭಿನವ್ ಜೊತೆ ತೋಟದ ಬಳಿ ತೆರಳಿದ್ದಳು. ಈ ವೇಳೆ ಕೃಷಿ ಕಾಯಕದಲ್ಲಿ ತಂದೆ ನಿರತರಾಗಿದ್ದರೆ ಇತ್ತ ತಮ್ಮ ಅಭಿನವ್ ಹಾಗೂ ಮೃತ ಬಾಲಕಿ ಬೃಂದಾ ಕೃಷಿ ಹೊಂಡದ ಬಳಿ ಆಟವಾಡಲು ಹೋಗಿದ್ದರು.

    ಆಟವಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೃಂದಾ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಅಭಿನವ್ ಕೂಡಲೇ ಕಿರುಚಿಕೊಂಡು ತಂದೆಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ತಕ್ಷಣ ತಂದೆ ಬಾಲಕಿಯನ್ನು ರಕ್ಷಣೆ ಮಾಡಿ ಮೇಲೆ ತಂದರು. ಬಳಿಕ ಚಿಕ್ಕಬಳ್ಳಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ಮಹಿಳೆ ಹಾಗೂ ಬಾಲಕಿಯ ಶವಪತ್ತೆಯಾಗಿದೆ.

    ಖಾಸಗಿ ಬೀಜ ಕಂಪನಿ ಮಾನ್ಸೆಂಟೊ ಸೇರಿದ ಕೃಷಿಹೊಂಡದಲ್ಲಿ 25 ವರ್ಷದ ಮಹಿಳೆ ಹಾಗೂ 8 ವರ್ಷದ ಬಾಲಕಿಯ ಅಪರಿಚಿತ ಮೃತದೇಹಗಳ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಯಾರಾದರೂ ಕೊಲೆ ತಂದೆ ಕೃಷಿಹೊಂಡಕ್ಕೆ ಹಾಕಿದ್ದಾರ ಎನ್ನುವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಇದುವರೆಗೂ ಮಹಿಳೆ ಮತ್ತು ಬಾಲಕಿಯ ಹೆಸರು, ವಿವರಗಳು ಪತ್ತೆಯಾಗಿಲ್ಲ. ಆದರೆ ಬೆಂಗಳೂರಿನ ಸ್ಯಾಟ್‍ಲೈಟ್ ನಿಂದ ಮೆಜೆಸ್ಟಿಕ್‍ಗೆ ಬಂದಿರುವ ಮಹಿಳೆ ಬಳಿಕ ಮೆಜೆಸ್ಟಿಕ್‍ನಿಂದ ಹಿಂದೂಪುರಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆ ಟಿಕೆಟ್ ಹಾಗೂ ಜೊತೆಗೆ ಒಂದು ಫೋಟೋ ಕೃಷಿಹೊಂಡದ ಬಳಿ ಪತ್ತೆಯಾಗಿದೆ.

    ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv