Tag: ಕೃನಾಲ್ ಪಾಂಡ್ಯ

  • IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ: ಬಿಗಿ ಹಿಡಿತದ ಬೌಲಿಂಗ್‌ ಹಾಗೂ ಕೆ.ಎಲ್‌.ರಾಹುಲ್‌ (KL Rahul), ಕೃನಾಲ್‌ ಪಾಂಡ್ಯ (Krunal Pandya) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. 122 ರನ್‌ ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ (Lacknow Super Gaints) ತಂಡವು 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ:  ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ 13 ರನ್‌ ಗಳಿಸಿ ಔಟಾಗುತ್ತಿದ್ದಂತೆ ದೀಪಕ್‌ 7 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. 3ನೇ ವಿಕೆಟ್‌ಗೆ ಜೊತೆಯಾದ ಕೃನಾಲ್‌ ಪಾಂಡ್ಯ ಹಾಗೂ ಆರಂಭಿಕ ಕೆ.ಎಲ್‌. ರಾಹುಲ್‌ ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದರು. 38 ಎಸೆತಗಳಲ್ಲಿ ಈ ಜೋಡಿ 55 ರನ್‌ ಕಲೆಹಾಕಿತು. ಈ ವೇಳೆ ಕೃನಾಲ್‌ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್)‌ ಗಳಿಸಿದರು. ಇನ್ನೂ 36 ಎಸೆತಗಳಲ್ಲಿ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದಾಗಲೇ ರಾಹುಲ್‌ 35 ರನ್‌ (30 ಎಸೆತ, 4 ಬೌಂಡರಿ) ಗಳಿಸಿ ಹೊರನಡೆದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ 10 ರನ್‌, ನಿಕೊಲಸ್‌ ಪೂರನ್‌ ಅಜೇಯ 11 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹೈದರಾಬಾದ್‌ ತಂಡದ ಪರ ಆದಿಲ್‌ ರಶೀದ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಫಜಲ್ಹಕ್ ಫಾರೂಕಿ, ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಪರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಅನ್ಮೋಲ್‌ಪ್ರಿತ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 2.5 ಓವರ್‌ಗಳಲ್ಲಿ ತಂಡದ ಮೊತ್ತ 21 ರನ್‌ಗಳಾಗಿದ್ದಾಗಲೇ 8 ರನ್ ಗಳಿಸಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಸುಲಭ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ (Rahul Tripathi) ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 41 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 35 ರನ್ ಗಳಿಸಿದರು. ಈ ವೇಳೆ ಅನ್ಮೋಲ್‌ಪ್ರಿತ್ ಸಿಂಗ್ 26 ಎಸೆತಗಳಲ್ಲಿ 31 ರನ್ (3 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾದರು.

    4ನೇ ವಿಕೆಟ್‌ಗೆ ಕ್ರೀಸ್‌ಗಿಳಿದ ನಾಯಕ ಏಡೆನ್ ಮಾರ್ಕ್ರಮ್ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಪಿನ್‌ ದಾಳಿಗೆ ತುತ್ತಾದರು. ನಂತರ ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 16 ರನ್, ಅಬ್ದುಲ್ ಸಮದ್ 10 ಎಸೆತಗಳಲ್ಲಿ 21 ರನ್, ಆದಿಲ್ ರಶೀದ್ 4 ರನ್ ಗಳಿಸಿದರು.

    ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ಅಮಿತ್ ಶಾರನ್ನು ಭೇಟಿಯಾದ ಪಾಂಡ್ಯ ಬ್ರದರ್ಸ್

    ಅಮಿತ್ ಶಾರನ್ನು ಭೇಟಿಯಾದ ಪಾಂಡ್ಯ ಬ್ರದರ್ಸ್

    ಮುಂಬೈ: ಟೀಂ ಇಂಡಿಯಾದ (Team India) ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋ ಹಂಚಿಕೊಂಡಿದ್ದಾರೆ.

    ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಹಾರ್ದಿಕ್ ಪಾಂಡ್ಯ ಭೇಟಿಯಾಗಿ ಮಾತುಕತೆ ನಡೆಸಿದರು. ಪಾಂಡ್ಯ ಜೊತೆ ಸಹೋದರ ಕೃನಾಲ್ ಪಾಂಡ್ಯ ಇದ್ದರು. ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಗೃಹಸಚಿವರಿಗೆ ಧನ್ಯವಾದ. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಗೌರವ, ಸಂತೋಷ ನೀಡಿದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಅಮಿತ್‌ ಶಾ ಬೆಂಗಳೂರಿನಲ್ಲಿದ್ದು, ಕೆಲದಿನಗಳ ಹಿಂದೆ ತೆಗೆದಿರುವ ಫೋಟೋ ಆಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್

    ಅಮಿತ್ ಶಾ ಭೇಟಿಯ ಉದ್ದೇಶ ಪಾಂಡ್ಯ ತಿಳಿಸಿಲ್ಲ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ. ಟಿ20 ತಂಡದ ನೂತನ ನಾಯಕನಾಗಿ ಈಗಾಗಲೇ ಪಾಂಡ್ಯ ಆಯ್ಕೆ ಆಗಿದ್ದು, ಏಕದಿನ ತಂಡದ ಉಪನಾಯಕನ ಸ್ಥಾನ ಕೂಡ ಪಾಂಡ್ಯ ಹೆಗಲೇರಿದೆ. ಇದನ್ನೂ ಓದಿ: ರಿಷಭ್ ಪಂತ್ ತಾಯಿಗೆ ಕರೆ ಮಾಡಿ ಅಭಯ ನೀಡಿದ ಮೋದಿ

    ಅಮಿತ್‌ ಶಾ ಕಳೆದೆರಡು ದಿನಗಳಿಂದ ಕರ್ನಾಟಕ ಚುನಾವಣೆ ತಯಾರಿ ಹಿನ್ನೆಲೆ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದು, ಇಂದು ರಾತ್ರಿ ದೆಹಲಿಗೆ ತೆರಳಲಿದ್ದಾರೆ. ಈ ನಡುವೆ ಪಾಂಡ್ಯ ಇಂದು ಅಮಿತ್‌ ಶಾ ಜೊತೆಗಿರುವ ಫೋಟೋ ಹಾಕಿರುವುದು ಕುತೂಹಲ ಮೂಡಿಸಿದ್ದು, ಈ ಹಿಂದೆ ತೆಗೆದಿರುವ ಫೋಟೋ ಪೋಸ್ಟ್‌ ಮಾಡಿರುವ ಸಾಧ್ಯತೆ ಕಂಡು ಬಂದಿದೆ.

    hardik

    ಕೆಲದಿನಗಳ ಹಿಂದೆ ಪಾಂಡ್ಯ ಬ್ರದರ್ಸ್ ಕೆಜಿಎಫ್‍ನ (KGF) ರಾಕಿಭಾಯ್ ಖ್ಯಾತಿಯ ಯಶ್ (Yash) ಅವರನ್ನು ಭೇಟಿಯಾಗಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದರು.

    ತವರಿನಲ್ಲಿ ಭಾರತ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಜ.10 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್

    ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್

    ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಿರುವ ಕೃನಾಲ್ ಪಾಂಡ್ಯ ಈಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೃನಾಲ್ ಪಾಂಡ್ಯ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೃನಾಲ್ ಪತ್ನಿ ಪಂಖೂರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೃನಾಲ್ ಪಾಂಡ್ಯ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಡಿಸೆಂಬರ್ 2007ರಲ್ಲಿ ಪಂಖೂರಿ ಶರ್ಮಾ ಅವರ ಜತೆ ದಾಂಪತ್ಯ ಜೀವನಕ್ಕೆ ಕೃನಾಲ್ ಪಾಂಡ್ಯ ಕಾಲಿಟ್ಟಿದ್ದರು. ಕೃನಾಲ್ ಪತ್ನಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜತೆಗೆ ಮಗುವಿನ ಹೆಸರನ್ನ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಕೃನಾಲ್ ಪಾಂಡ್ಯ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಗಂಡು ಮಗುವಿನ ಆಗಮನದ ಖುಷಿಯಲ್ಲಿ, ಮಗನ ಹೆಸರನ್ನ ಕೂಡ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕವೀರ್ ಕೃನಾಲ್ ಪಾಂಡ್ಯ ಎಂದು ಹೆಸರಿಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಮುಂಬೈ: ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್ ಕೃನಾಲ್ ಪಾಂಡ್ಯ ಬೌಲಿಂಗ್‍ನಲ್ಲಿ ವಿಕೆಟ್ ಕಳೆದುಕೊಂಡ ಮುಂಬೈ ಬ್ಯಾಟ್ಸ್‌ಮ್ಯಾನ್‌ ಕೀರನ್ ಪೋಲಾರ್ಡ್ ಪೆವಿಲಿಯನ್‍ಗೆ ಹೆಜ್ಜೆಹಾಕುತ್ತಿದ್ದಂತೆ ಪಾಂಡ್ಯ ಮುತ್ತುಕೊಟ್ಟು ಸಂಭ್ರಮಿಸಿದ ಫೋಟೋ ವೈರಲ್ ಆಗುತ್ತಿದೆ.

    ಈ ಹಿಂದೆ ಕೃನಾಲ್ ಪಾಂಡ್ಯ ಮತ್ತು ಪೋಲಾರ್ಡ್ ಮುಂಬೈ ತಂಡದಲ್ಲಿ ಜೊತೆಯಾಗಿ ಆಡುತ್ತಿದ್ದರು. ಆದರೆ 15ನೇ ಅವೃತ್ತಿ ಐಪಿಎಲ್‍ನಲ್ಲಿ ಪೋಲಾರ್ಡ್ ಮುಂಬೈ ತಂಡದ ಪರ ಆಡುತ್ತಿದ್ದರೆ, ಪಾಂಡ್ಯ ಲಕ್ನೋ ಪರ ಆಡುತ್ತಿದ್ದಾರೆ. ಆದರೂ ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ರೋಚಕ ಹಣಾಹಣಿ ನಡೆದಿತ್ತು. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಕೃನಾಲ್ ಪಾಂಡ್ಯ ವಿಕೆಟ್‍ನ್ನು ಪೋಲಾರ್ಡ್ ಕಿತ್ತಿದ್ದರು. ಆ ಬಳಿಕ ಮುಂಬೈ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಪೋಲಾರ್ಡ್ 19 ರನ್ (20 ಎಸೆತ, 1 ಸಿಕ್ಸ್) ಸಿಡಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದಾಗ ದಾಳಿಗಿಳಿದ ಕೃನಾಲ್ ಪಾಂಡ್ಯ, ಪೋಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಕೆಟ್ ಪಡೆದ ಬಳಿಕ ಪೆವಿಲಿಯನ್‍ಗೆ ಹೊರಟ ಪೋಲಾರ್ಡ್ ಬಳಿ ತೆರಳಿದ ಪಾಂಡ್ಯ ಮುತ್ತು ಕೊಟ್ಟು ಸಂಭ್ರಮಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಪೋಲಾರ್ಡ್ ವಿಕೆಟ್ ಸಿಗದೇ ಇದ್ದಿದ್ದರೆ ನನಗೆ ಜೀವನಪೂರ್ತಿ ಕಾಡುತ್ತಿತ್ತು. ಇದೀಗ 1-1 ಸಮಬಲಗೊಂಡಿದೆ. ಪೋಲಾರ್ಡ್ ಮಾತನಾಡದಂತಾಗಿದೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

    ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕದಾಟ ಮತ್ತು ಲಕ್ನೋ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯ ಫಲವಾಗಿ 36 ರನ್‍ಗಳಿಂದ ಗೆದ್ದಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ 8ನೇ ಸೋಲು ಕಂಡು ಮತ್ತೆ ನಿರಾಸೆ ಅನುಭವಿಸಿತು.

  • ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು

    ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶ್ರೀಲಂಕಾ ಜೊತೆಗಿನ ಟಿ20 ಪಂದ್ಯವನ್ನು ಸಹ ಆಡಿದ್ದಾರೆ. ಕೃನಾಲ್ ಸೋಂಕಿಗೆ ತುತ್ತಾಗಿರುವ ಹಿನ್ನೆಲೆ ಕೋಲಂಬೋದಲ್ಲಿ ನಡೆಯಬೇಕಿದ್ದ ಟಿ20 ಪಂದ್ಯವನ್ನು ಒಂದು ಮಟ್ಟಿಗೆ ಮುಂದೂಡಲಾಗಿದೆ.

    ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಬೇಕಿತ್ತು. ಕೃನಾಲ್ ಸೋಂಕಿತರಾಗಿರೋದು ಇನ್ನುಳಿದ ಆಟಗಾರರು ಐಸೋಲೇಟ್ ಆಗಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿದ್ದು, ಕೃನಾಲ್ ವರದಿ ಪಾಸಿಟಿವ್ ಬರುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದಾರೆ. ಇಂದು ಸಂಜೆ ಎಲ್ಲರ ಕೊರೊನಾ ವರದಿ ಬರಲಿದ್ದು, ನೆಗೆಟಿವ್ ರಿಪೋರ್ಟ್ ಬಂದ್ರೆ ಬುಧವಾರ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೂರು ಪಂದ್ಯಗಳಲ್ಲಿ 1-0ಯಲ್ಲಿ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 38 ರನ್ ಗಳ ಅಂತರದಲ್ಲಿ ಗೆದ್ದುಕೊಂಡು ಜಯದ ನಗೆ ಬೀರಿತ್ತು. ಈ ಪಂದ್ಯದಲ್ಲಿ ಕೃನಾಲ್ ಎರಡು ಓವರ್ ಬಾಲ್ ಮಾಡಿ 16 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡಿದ್ದರು. ಜೊತೆಗೆ ಬ್ಯಾಟ್ ಹಿಡಿದು 3 ರನ್ ಸಹ ಕಲೆ ಹಾಕಿದ್ದರು.

    ಇದಕ್ಕೂ ಮೊದಲು ಭಾರತ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.

  • ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

    ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

    ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರು ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಈ ಇಬ್ಬರು ಸಹೋದರು ಜಿಮ್‍ನಲ್ಲಿ ಜಿದ್ದಿಗೆ ಬಿದ್ದು ಯಾರು ಬೆಸ್ಟ್ ಎನ್ನುವುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.

    ಪಾಂಡ್ಯ ಸಹೋದರರು ಜಿಮ್‍ನಲ್ಲಿ ಮೂರು ಸವಾಲುಗಳನ್ನು ಪರಸ್ಪರ ಎದುರಾಳಿಗಳಾಗಿ ಎದುರಿಸಿದ್ದಾರೆ. ಈ ವೀಡಿಯೋವನ್ನು ಬಿಸಿಸಿಐ ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

    ಲಂಕಾ ನೆಲದಲ್ಲಿ ಬೀಡುಬಿಟ್ಟಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಲ್‍ರೌಂಡರ್ಸ್‍ಗಳಾಗಿ ಗುರುತಿಸಿಕೊಂಡಿರುವ ಪಾಂಡ್ಯ ಸಹೋದರು ಜಿಮ್‍ನಲ್ಲಿ ಕಾದಾಟ ನಡೆಸಿದ್ದಾರೆ. ಇಬ್ಬರೂ ಕೂಡ 3 ಚಾಲೆಂಜ್‍ಗಳನ್ನು ಸ್ವೀಕರಿಸಿದ್ದಾರೆ ಮೊದಲು ‘ವಾಲ್ ಸ್ಕ್ವಾಟ್ ಹೋಲ್ಡ್’ ಚಾಲೆಂಚ್ ಸ್ವೀಕರಿಸಿದ್ದಾರೆ ಈ ಸವಾಲಿನಲ್ಲಿ ಕೃನಾಲ್ ಪಾಂಡ್ಯ ಗೆದ್ದಿದ್ದಾರೆ. ಬಳಿಕ ಎರಡನೇ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ಬಳಿಕ ಅಂತಿಮ ಸುತ್ತಿನ ‘ಸ್ಪ್ಲಿಟ್ ಸ್ಕ್ವಾಟ್ ಹೋಲ್ಡ್’ ಸ್ಪರ್ಧೆಯಲ್ಲಿ ಇಬ್ಬರೂ ಕೂಡ ಸಮಾನವಾಗಿ ಸ್ಪರ್ಧಿಸುವ ಮೂಲಕ ಇಬ್ಬರೂ ಕೂಡ ಸ್ಟ್ರಾಂಗ್ ಎಂಬ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

    ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿಯಲ್ಲಿ ಈ ಇಬ್ಬರೂ ಕೂಡ ಪ್ರಮುಖ ಆಟಗಾರರಾಗಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಅನುಭವಿ ಅಲ್‍ರೌಂಡರ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ನಿಗದಿತ ಓವರ್‍ ಗಳ ಸರಣಿ ಜುಲೈ 18 ರಿಂದ ಆರಂಭವಾಗಲಿದೆ. ಭಾರತ ಹಾಗೂ ಶ್ರೀಲಂಕಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪುಣೆ: ತಾನು ಆಡಿದ ಮೊದಲ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ವಿಶ್ವದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಈ ಸಾಧನೆ ನಿರ್ಮಿಸಿದ್ದಾರೆ.

    ಇಂದು ಕೃನಾಲ್‌ ಪಾಂಡ್ಯ 26 ಎಸೆತದಲ್ಲಿ 50 ರನ್‌ ಹೊಡೆದರು. ಟಾಮ್‌ ಕರ್ರನ್‌ ಎಸೆದ ಎಸೆತದಲ್ಲಿ ಒಂದು ಸಿಂಗಲ್‌ ರನ್‌ ಓಡಿ ವಿಶ್ವದಾಖಲೆ ನಿರ್ಮಿಸಿದರು.

    ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್‌ ಆಟಗಾರ ಜಾನ್‌ ಮೋರಿಸ್‌ ಹೆಸರಿನಲ್ಲಿತ್ತು. 1990ರಲ್ಲಿ ಮೋರಿಸ್‌ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 36 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು.

    ವೇಗದ ಅರ್ಧಶತಕವನ್ನು ಜನವರಿಯಲ್ಲಿ ಮೃತರಾದ ತಂದೆಗೆ ಅರ್ಪಿಸುವುದಾಗಿ ಕೃನಾಲ್‌ ಹೇಳಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ಭಾರತದ ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೊನೆಯಲ್ಲಿ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್‌ಗಳ ಗುರಿಯನ್ನು ನೀಡಿದೆ.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

     

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮಾರ್ಕ್‌ ವುಡ್‌ ಎಸೆದ 48ನೇ ಓವರಿನಲ್ಲಿ 28 ರನ್‌ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್‌, 13 ರನ್‌ ಬಂದಿತ್ತು.

    ಭಾರತದ ಪರ ರೋಹಿತ್‌ ಶರ್ಮಾ 28 ರನ್‌, ಶಿಖರ್‌ ಧವನ್‌ 98 ರನ್(106‌ ಎಸೆತ, 11 ಬೌಂಡರಿ, 2 ಸಿಕ್ಸರ್‌) ನಾಯಕ ಕೊಹ್ಲಿ 56 ರನ್‌( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್‌, ರೋಹಿತ್‌ 64 ರನ್‌, ಎರಡನೇ ವಿಕೆಟಿಗೆ ಶಿಖರ್‌ ಧವನ್‌, ಕೊಹ್ಲಿ 105 ರನ್‌ಗಳ ಜೊತೆಯಾಟವಾಡಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ದುಬೈನಿಂದ ದಾಖಲೆ ಇಲ್ಲದ ಚಿನ್ನ ತಂದ್ರಾ ಕೃನಾಲ್ ಪಾಂಡ್ಯ?

    ದುಬೈನಿಂದ ದಾಖಲೆ ಇಲ್ಲದ ಚಿನ್ನ ತಂದ್ರಾ ಕೃನಾಲ್ ಪಾಂಡ್ಯ?

    – ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಾರಣೆ

    ಮುಂಬೈ: ಯುಎಇಯಿಂದ ವಾಪಸ್ ಆಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.

    ಯುಎಇಯಿಂದ ವಾಪಸ್ ಬರುವಾಗ ಕ್ರುನಾಲ್ ಪಾಂಡ್ಯ ಅವರು ದಾಖಲೆ ಇಲ್ಲದ ಚಿನ್ನ ಮತ್ತು ಬೆಲೆಬಾಳು ವಸ್ತುಗಳನ್ನು ತಂದಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಅಧಿಕಾರಿಗಳು ತಡೆಹಿಡಿದ್ದಾರೆ. ಕ್ರುನಾಲ್ ಪಾಂಡೆ ತಂದಿರುವ ಚಿನ್ನಕ್ಕೆ ದಾಖಲೆ ಕೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರಕಿದೆ.

    ಡಿಡಿಆರ್ ಮೂಲಗಳ ಪ್ರಕಾರ ಕೃನಾಲ್ ತಮ್ಮ ಜೊತೆ ಅಘೋಷಿತ ಚಿನ್ನ ತಂದಿದ್ದು, ಇದರಲ್ಲಿ 2 ಬಳೆ, ಕೆಲವು ದುಬಾರಿ ಬೆಲೆಯ ಗಡಿಯಾರ ಮತ್ತು ಕೆಲ ಅಮೂಲ್ಯ ವಸ್ತುಗಳಿವೆ ಎನ್ನಲಾಗಿದೆ. ಈ ಸಾಮಾನುಗಳ ಬಗ್ಗೆ ಕೃನಾಲ್ ಡಿಕ್ಲೇರೇಷನ್ ಮಾಡದ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿದೆ. ವಿದೇಶದಿಂದ ಬರುವ ಪುರುಷ 50 ಸಾವಿರ ರೂ. ಬೆಲೆಯವರೆಗಿನ ಚಿನ್ನಕ್ಕೆ ಡ್ಯೂಟಿ ಫ್ರೀ ಸಿಗಲಿದೆ. ಮಹಿಳೆಯರಿಗೆ 1 ಲಕ್ಷದವರೆಗಿನ ಚಿನ್ನಾಭರಣಗಳಿಗೆ ಮಾತ್ರ ವಿನಾಯ್ತಿ ಇದೆ.

    ಕೃನಾಲ್ ಪಾಂಡ್ಯ ಅವರು 2016ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಅವರು ಪ್ರತಿನಿಧಿಸುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ.