Tag: ಕೃನಾಲ್ ಪಾಂಡ್ಯ

  • ಪಂದ್ಯಶ್ರೇಷ್ಠ ಗೆದ್ದು ಐಪಿಎಲ್‌ನಲ್ಲಿ ದಾಖಲೆ ಬರೆದ ಕೃನಾಲ್‌!

    ಪಂದ್ಯಶ್ರೇಷ್ಠ ಗೆದ್ದು ಐಪಿಎಲ್‌ನಲ್ಲಿ ದಾಖಲೆ ಬರೆದ ಕೃನಾಲ್‌!

    ಅಹಮದಾಬಾದ್‌: ಆರ್‌ಸಿಬಿ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ (Krunal Pandya) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್‌ನಲ್ಲಿ (IPL) ವಿಶೇಷ ದಾಖಲೆ (Record) ಬರೆದಿದ್ದಾರೆ.

    ಎರಡು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್‌ ಪಾತ್ರವಾಗಿದ್ದಾರೆ. 2017ರಲ್ಲಿ ಪುಣೆ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ತಂಡ ಫೈನಲ್‌ನಲ್ಲಿ ಗೆದ್ದಾಗಲೂ ಕೃನಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

    ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ 8 ವಿಕೆಟ್‌ ನಷ್ಟಕ್ಕೆ 129 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕೃನಾಲ್‌ 47 ರನ್‌(38 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದಿದ್ದರು. ಈ ಪಂದ್ಯವನ್ನು ಮುಂಬೈ ರೋಚಕ 1 ರನ್‌ಗಳಿಂದ ಗೆದ್ದುಕೊಂಡಿತ್ತು.

    ಪಂದ್ಯವನ್ನು ತಿರುಗಿಸಿದ್ದ ಕೃನಾಲ್‌:
    ಫೈನಲ್‌ ಪಂದ್ಯ ಪಂಜಾಬ್‌ ಕಡೆ ವಾಲಿತ್ತು. ಆದರೆ 7ನೇ ಓವರ್‌ನಿಂದ ಕೃನಾಲ್‌ ಪಾಂಡ್ಯ ಕೈಚಳಕದಿಂದಾಗಿ ಪಂದ್ಯ ಆರ್‌ಸಿಬಿ (RCB) ಕಡೆ ವಾಲಿತ್ತು. ಅಂತಿಮವಾಗಿ 4 ಓವರ್‌ನಲ್ಲಿ ಕೇವಲ 17 ರನ್‌, 2 ವಿಕೆಟ್‌ ಪಡೆಯುವ ಮೂಲಕ ಪಂಜಾಬ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದರು.

    ಪಂಜಾಬ್‌ 6 ಓವರ್‌ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.  ಈ ಹಂತದಲ್ಲಿ ರಜತ್‌ ಪಾಟಿದಾರ್‌ ಕೃನಾಲ್‌ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್‌ ತಮ್ಮ ಮೊದಲ ಓವರ್‌ನಲ್ಲಿ 3 ರನ್‌ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್‌ ಸಿಂಗ್‌ ಅವರನ್ನು ಔಟ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

    ತಮ್ಮ ಮೂರನೇ ಓವರ್‌ನಲ್ಲಿ 11 ರನ್‌ ನೀಡಿದ ಕೃನಾಲ್‌ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ಸಿಕ್ಸ್‌ ಹೊಡೆಯಲು ಹೋದ ಇಂಗ್ಲಿಸ್‌ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.

    4 ಓವರ್‌ನಲ್ಲಿ ರನ್‌ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್‌ ತೆಗೆಯುವ ಮೂಲಕ ಕೃನಾಲ್‌ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್‌ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.

    ಹಾಗೆ ನೋಡಿದ್ರೆ 4 ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 38 ರನ್‌ ನೀಡಿದ್ರೆ ಹೆಜಲ್‌ವುಡ್‌ 54 ರನ್‌ ನೀಡಿ ದುಬಾರಿಯಾಗಿದ್ದರು. ಸುಯಾಶ್‌ ಶರ್ಮಾ 2 ಓವರ್‌ ಎಸೆದಿದ್ದರೂ 19 ರನ್‌ ನೀಡಿದ್ದರು. ರೋಮಾರಿಯೋ ಶೆಪರ್ಡ್‌ 3 ಓವರ್‌ ಎಸೆದು 30 ರನ್‌ ಕೊಟ್ಟಿದ್ದರು.

  • ಪಂಜಾಬ್‌ ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ ಕಡೆ ತಿರುಗಿಸಿದ್ದು ಕೃನಾಲ್‌!

    ಪಂಜಾಬ್‌ ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ ಕಡೆ ತಿರುಗಿಸಿದ್ದು ಕೃನಾಲ್‌!

    ಅಹಮದಾಬಾದ್‌: 4 ಓವರ್‌ 17 ರನ್‌ 2 ವಿಕೆಟ್‌. ಪಂಜಾಬ್‌ (PBKS) ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ (RCB) ಕಡೆ ತಿರುಗಿಸಿದ್ದು ಕೃನಾಲ್‌ ಪಾಂಡ್ಯ.

    ಪಂಜಾಬ್‌ 6 ಓವರ್‌ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿತ್ತು. ಈ ಹಂತದಲ್ಲಿ ರಜತ್‌ ಪಾಟಿದಾರ್‌ ಕೃನಾಲ್‌ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್‌ ತಮ್ಮ ಮೊದಲ ಓವರ್‌ನಲ್ಲಿ 3 ರನ್‌ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್‌ ಸಿಂಗ್‌ ಅವರನ್ನು ಔಟ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

     

     

    ತಮ್ಮ ಮೂರನೇ ಓವರ್‌ನಲ್ಲಿ 11 ರನ್‌ ನೀಡಿದ ಕೃನಾಲ್‌ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ಸಿಕ್ಸ್‌ ಹೊಡೆಯಲು ಹೋದ ಇಂಗ್ಲಿಸ್‌ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.

    4 ಓವರ್‌ನಲ್ಲಿ ರನ್‌ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್‌ ತೆಗೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್‌ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.

    ಹಾಗೆ ನೋಡಿದ್ರೆ 4 ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 38 ರನ್‌ ನೀಡಿದ್ರೆ ಹೆಜಲ್‌ವುಡ್‌ 54 ರನ್‌ ನೀಡಿ ದುಬಾರಿಯಾಗಿದ್ದರು. ಸುಯಾಶ್‌ ಶರ್ಮಾ 2 ಓವರ್‌ ಎಸೆದಿದ್ದರೂ 19 ರನ್‌ ನೀಡಿದ್ದರು. ರೋಮಾರಿಯೋ ಶೆಪರ್ಡ್‌ 3 ಓವರ್‌ ಎಸೆದು 30 ರನ್‌ ಕೊಟ್ಟಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಅರ್ಹವಾಗಿಯೇ ಕೃನಾಲ್‌ ಪಾಂಡ್ಯ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

  • ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್‌ ಪಾಂಡ್ಯ (Krunal Pandya) ಅವರ ಪತ್ನಿ ಪಂಖುರಿ ಶರ್ಮಾ ಅವರಿಂದು ತಮ್ಮ 2ನೇ ಮಗುವಿಗೆ ಜನ್ಮನೀಡಿದ್ದಾರೆ. ಶುಭ ಶುಕ್ರವಾರವೇ ಗಂಡು ಮಗುವಿನ ಜನನವಾಗಿದ್ದು ದಂಪತಿಗಳಿಬ್ಬರು ಸಂಭ್ರಮದಲ್ಲಿದ್ದಾರೆ.

    ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ವಾಯು ಎಂದು ಸಹ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ. 2022ರ ಜುಲೈನಲ್ಲಿ ಕೃನಾಲ್‌ ಮತ್ತು ಪಂಖುರಿ (Pankuri Sharma) ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ಕವಿರ್‌. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್‌ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್‌!

    2017ರಲ್ಲಿ ಕೃನಾಲ್‌ ಪಾಂಡ್ಯ ಅವರು ತಮ್ಮ ಬಹುಕಾಲದ ಗೆಳತಿ ಪಂಖುರಿ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಮಾಡೆಲ್‌ ಆಗಿದ್ದ ಪಂಖುರಿ, ತನಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಕೃನಾಲ್‌ ಆಗಾಗ್ಗೆ ಹೇಳಿಕೊಂಡಿದ್ದಾರೆ.

    ಸದ್ಯ ಐಪಿಎಲ್‌ ಕಣದಲ್ಲಿರುವ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

  • ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    – ಮತ್ತೆ ಕಣಕ್ಕಿಳಿಯುತ್ತಾರಾ ತಾರಾ ವೇಗಿ?

    ಲಕ್ನೋ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದಲೇ ಭಾರೀ ಸದ್ದು ಮಾಡುತ್ತಿದ್ದ ಲಕ್ನೂ ಸೂಪರ್‌ ಜೈಂಟ್ಸ್‌ (LSG) ತಂಡದ ಮಯಾಂಕ್‌ ಯಾದವ್‌ (Mayank Yadav) ಪಕ್ಕೆಲುಬು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

    ಸೂಪರ್‌ ಸಂಡೇ (ಏ.7) ಲಕ್ನೋ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಓವರ್‌ ಬೌಲಿಂಗ್‌ ಮಾಡಿದ ಮಯಾಂಕ್‌, ಯಾವುದೇ ವಿಕೆಟ್‌ ಪಡೆಯದೇ 13 ರನ್‌ ಬಿಟ್ಟುಕೊಟ್ಟರು. ಈ ಓವರ್‌ನ ಮೊದಲ ಎರಡು ಎಸೆತಗಳು ಗಂಟೆಗೆ 140 ಕಿಮೀ ವೇಗದಲ್ಲಿತ್ತು. ಒಂದು ಓವರ್‌ ಬೌಲಿಂಗ್‌ ಬಳಿಕ ತಕ್ಷಣವೇ ಪಕ್ಕೆಲುಬು ಸಮಸ್ಯೆಗೆ ತುತ್ತಾಗಿ ಮೈದಾನ ತೊರೆದರು. ಇದರ ಹೊರತಾಗಿಯೂ ಯಶ್‌ ಠಾಕೂರ್‌‌ ಅವರ ಮಾರಕ ದಾಳಿ, ಕೃನಾಲ್‌ ಪಾಂಡ್ಯ ಅವರ ಸ್ಪಿನ್‌ ಮೋಡಿಯಿಂದ ಕೆ.ಎಲ್‌ ರಾಹುಲ್‌ (KL Rahul) ಬಳಗ 33 ರನ್‌ಗಳ ಗೆಲುವು ಸಾಧಿಸಿತು. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ:
    ಮಯಾಂಕ್‌ ಯಾದವ್‌ ಅವರ ಗಾಯದ ಸಮಸ್ಯೆ ಕುರಿತು ಮಾತನಾಡಿದ ಕೃನಾಲ್‌ ಪಾಂಡ್ಯ (Krunal Pandya), ಇದು ಗಂಭೀರವಾದ ಗಾಯವಲ್ಲ. ಆದ್ದರಿಂದ ಮಯಾಂಕ್‌ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮಯಾಂಕ್‌ಗೆ ಏನಾಗಿದೆ ಎಂಬುದು ನಿಖರವಾಗಿ ನನಗೂ ತಿಳಿದಿಲ್ಲ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನ ನೆಟ್ಸ್‌ನಲ್ಲಿ ಚೆನ್ನಾಗಿ ಬೌಲಿಂಗ್‌ ಅಭ್ಯಾಸ ಮಾಡುತ್ತಿದ್ದರು. ನನ್ನೊಂದಿಗೂ ಸಕಾರಾತ್ಮಕವಾಗಿ ಸಂಭಾಷಣೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
    21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಇತ್ತೀಚೆಗಷ್ಟೇ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಅಂತಲೂ ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಐಪಿಎಲ್‌ನಲ್ಲಿ ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
    * ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
    * ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
    * ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
    * ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
    * ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ

  • IPL 2023 Eliminator: 5 ರನ್‌ಗೆ 5 ವಿಕೆಟ್‌ ಉಡೀಸ್‌ – ಲಕ್ನೋ ಮನೆಗೆ, ಮುಂಬೈಗೆ 81ರನ್‌ಗಳ ಭರ್ಜರಿ ಜಯ

    IPL 2023 Eliminator: 5 ರನ್‌ಗೆ 5 ವಿಕೆಟ್‌ ಉಡೀಸ್‌ – ಲಕ್ನೋ ಮನೆಗೆ, ಮುಂಬೈಗೆ 81ರನ್‌ಗಳ ಭರ್ಜರಿ ಜಯ

    ಚೆನ್ನೈ: ಆಕಾಶ್‌ ಮಧ್ವಾಲ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ ತಂಡವು, ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ‌ 81 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಎಲಿಮಿನೇಟರ್‌ 2ನೇ ಹಂತಕ್ಕೆ ತಲುಪಿದೆ. ಮೇ 26 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲಿದೆ. ಇನ್ನೂ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಸೋತು ನಿರಾಸೆ ಅನುಭವಿಸಿದೆ.

    ಕಳೆದ ವರ್ಷವಷ್ಟೇ ಐಪಿಎಲ್‌ ಪ್ರವೇಶಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 2ನೇ ಬಾರಿಯೂ ಮೊದಲ ಎಲಿಮಿನೇಟರ್‌ ಪಂದ್ಯದಲ್ಲೇ ಸೋತು ಹೊರನಡೆದಿದೆ. 2022ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸೋತಿತ್ತು.

    ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 16.3 ಓವರ್‌ಗಳಲ್ಲೇ 101 ರನ್‌ಗಳಿಗೆ ಸರ್ವಪತನಕಂಡಿತು.

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಮುಂಬೈ ಬೌಲರ್‌ಗಳ ದಾಳಿಗೆ ತರಗೆಲೆಗಳಂತೆ ವಿಕೆಟ್‌ ಉದುರಿತು. ಪವರ್‌ ಪ್ಲೇ ನಲ್ಲಿ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಉತ್ತಮ ರನ್‌ ಕಲೆಹಾಕಿತ್ತು. ಬಳಿಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದ ಮುಂಬೈ ಎದುರು ಮಂಡಿಯೂರಬೇಕಾಯಿತು.

    ಲಕ್ನೋ ತಂಡದ ಪರ ಮಾರ್ಕಸ್‌ ಸಗ್ಟೋಯ್ನಿಸ್‌ 40 ರನ್‌ (27 ಎಸೆತ, 5 ಬೌಂಡರಿ, 1 ಸಿಕ್ಸರ್‌), ಕೈಲ್‌ ಮೇಯರ್ಸ್‌ 18 ರನ್‌, ದೀಪಕ್‌ ಹೂಡಾ 15 ರನ್‌ ಗಲಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ದೃಢವಾಗಿ ನಿಲ್ಲದ ಕಾರಣ ಲಕ್ನೋ ಹೀನಾಯ ಸೋಲನುಭವಿಸಿತು.

    ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದ ಮಧ್ವಾಲ್‌:
    ಮುಂಬೈ ಇಂಡಿಯನ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಕಾಶ್‌ ಮಧ್ವಾಲ್‌ 3.3 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಉಡೀಸ್‌ ಮಾಡಿದರು. ಈ ಮೂಲಕ ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದರು. ಕೇಪ್‌ಟೌನ್‌ನಲ್ಲಿ ನಡೆದ 2009ರ ಐಪಿಎಲ್‌ ಆವೃತ್ತಿಯಲ್ಲಿ ಕುಂಬ್ಳೆ 3.1 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಪಡೆದಿದ್ದರು. ಇದೀಗ ಆಕಾಶ್‌ ಮಧ್ವಾಲ್‌ 3.3 ಓವರ್‌ಗಳಲ್ಲಿ 5 ರನ್‌ ನೀಡಿ 5 ವಿಕೆಟ್‌ ಪಡೆದಿದ್ದಾರೆ. ಚಿರ್ಸ್‌ ಜೋರ್ಡನ್‌ ಹಾಗೂ ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರು ಹೆಚ್ಚಿನ ರನ್‌ ಕಲೆಹಾಕುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಜೋಡಿ 38 ಎಸೆತಗಳಲ್ಲಿ 66 ರನ್‌ ಬಾರಿಸಿತ್ತು. ಇವರಿಬ್ಬರ ಆಟದಿಂದ ಮುಂಬೈ ಮೊದಲ 10 ಓವರ್‌ಗಳಲ್ಲಿ 98 ರನ್‌ ಗಳಿಸಿತ್ತು. ಬಳಿಕ ಸೂರ್ಯ ಹಾಗೂ ಗ್ರೀನ್‌ ಔಟಾಗುತ್ತಿದ್ದಂತೆ ರನ್‌ ವೇಗ ಕಳೆದುಕೊಂಡ ಮುಂಬೈ ತಂಡ ಮುಂದಿನ 10 ಓವರ್‌ಗಳಲ್ಲಿ ಕೇವಲ 84 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

    ಮುಂಬೈ ಪರ ಕ್ಯಾಮರೂನ್‌ ಗ್ರೀನ್‌ 41 ರನ್‌ (23 ಎಸತೆ, 6 ಬೌಂಡರಿ, 1 ಸಿಕ್ಸರ್), ಸೂರ್ಯಕುಮಾರ್‌ ಯಾದವ್‌ 33 ರನ್‌ (20 ಎಸೆತ, 2 ಬೌಂಡರಿ, 2 ಸಿಕ್ಸ್‌ರ್‌), ತಿಲಕ್‌ ವರ್ಮಾ 26 ರನ್‌, ನೇಹಾಲ್‌ ವಧೇರಾ 23 ರನ್‌, ರೋಹಿತ್‌ ಶರ್ಮಾ 11 ರನ್‌, ಇಶಾನ್‌ ಕಿಶನ್‌ 15 ರನ್‌ ಗಳಿಸಿದರು.

  • ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ

    ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ

    ಲಕ್ನೋ: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ ಸಿಕ್ಸರ್‌, ಬೌಂಡರಿ ಆಟದ ಹೊರತಾಗಿಯೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಕೆಕೆಆರ್‌ ವಿರುದ್ಧ 1 ರನ್‌ ರೋಚಕ ಜಯ ಸಾಧಿಸಿದೆ. ಈ ಮೂಲಕ ಲಕ್ನೋ ತಂಡ ಪ್ಲೆ ಆಫ್‌ಗೆ ಹಾರಿದೆ. ಕೆಕೆಆರ್‌ ಸೋಲಿನೊಂದಿಗೆ 2023ರ ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ.

    14ರ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು +0284 ರನ್‌ ರೇಟ್‌ನೊಂದಿಗೆ 17 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದೆ.

    ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 176 ರನ್‌ ಕಲೆಹಾಕಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿ 1 ರನ್‌ ನಿಂದ ವಿರೋಚಿತ ಸೋಲನುಭವಿಸಿತು.

    ಚೇಸಿಂಗ್‌ ಆರಂಭಿಸಿದ ಕೆಕೆಆರ್‌ ಉತ್ತಮ ಆರಂಭ ಪಡೆದರೂ ಬಳಿಕ ಕೆಕೆಆರ್‌ ಬೌಲಿಂಗ್‌ ದಾಳಿಗೆ ತತ್ತರಿಸಿತು. ಮೊದಲ ವಿಕೆಟ್‌ ಪತನಕ್ಕೆ ಜೇಸನ್‌ ರಾಯ್‌, ವೆಂಕಟೇಶ್‌ ಅಯ್ಯರ್‌ ಜೋಡಿ 5.5 ಓವರ್‌ಗಳಲ್ಲಿ 61 ರನ್‌ ಕಲೆಹಾಕಿತ್ತು. ಅಯ್ಯರ್‌ 24 ರನ್‌, ಜೇಸನ್‌ ರಾಯ್‌ 28 ಎಸೆತಗಳಲ್ಲಿ 45 ರನ್‌ ಗಳಿಸಿದರು. ಬಳಿಕ ನಿತೀಶ್‌ ರಾಣಾ, ರಹ್ಮದ್ದುಲ್ಲಾ ಗುರ್ಭಜ್‌ 10 ರನ್‌, ರಸ್ಸೆಲ್‌ 7 ರನ್‌ ಗಳಿಸಿ ಕೈಚೆಲ್ಲಿದರು. ಕೊನೆಯಲ್ಲಿ ರಿಂಕು ಸಿಂಗ್‌ ಹೋರಾಟ ಅರ್ಧ ಶತಕದ ಹೋರಾಟ ನಡೆಸಿದರೂ ತಂಡ ವಿರೋಚಿತ ಸೋಲಿಗೆ ಗುರಿಯಾಯಿತು. ರಿಂಕು ಸಿಂಗ್‌ 33 ಎಸೆತಗಳಲ್ಲಿ ಭರ್ಜರಿ 67 ರನ್‌ (6 ಬೌಂಡರಿ, 4 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಕ್ವಿಂಟನ್‌ ಡಿ ಕಾಕ್‌ 28 ರನ್‌ (27 ಎಸೆತ, 2 ಸಿಕ್ಸರ್‌), ಪ್ರೇರಕ್‌ ಮಂಕದ್‌ 26 ರನ್‌ (20 ಎಸೆತ, 5 ಬೌಂಡರಿ) ಗಳಿದರೂ, ನಿಧಾನಗತಿಯ ಬ್ಯಾಟಿಂಗ್‌ನಿಂದ ತಂಡ ಕಡಿಮೆ ರನ್‌ ದಾಖಲಿಸಿತ್ತು. ಮೊದಲ 10 ಓವರ್‌ಗಳಲ್ಲಿ 73 ರನ್‌ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಿಕೋಲಸ್‌ ಪೂರನ್‌ ಭರ್ಜರಿ ಅರ್ಧಶತಕದ ಬ್ಯಾಟಿಂಗ್‌ನಿಂದ ತಂಡ 170ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ತಂಡದ ಪರ ಡಿಕಾಕ್‌ 28 ರನ್‌, ಮಂಕದ್‌ 26 ರನ್‌, ಆಯುಷ್‌ ಬದೋನಿ 25 ರನ್‌ ಗಳಿಸಿದರೆ ನಿಕೋಲಸ್‌ ಪೂರನ್‌ 58 ರನ್‌ (30 ಎಸೆತ, 5 ಸಿಕ್ಸರ್‌, 4 ಬೌಂಡರಿ) ಚಚ್ಚಿದರು.

    ಕೆಕೆಆರ್‌ ವೈಭವ್‌ ಅರೋರಾ, ಶಾರ್ದೂಲ್‌ ಠಾಕೂರ್‌, ಸುನೀಲ್‌ ನರೇನ್‌ ತಲಾ 2 ವಿಕೆಟ್‌ ಕಿತ್ತರೆ, ಪರ ಹರ್ಷಿತ್‌ ರಾಣಾ ಹಾಗೂ ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ: ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants), ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿ, ಪ್ಲೆ ಆಫ್‌ ಹಾದಿಯನ್ನ ಸುಗಮವಾಗಿಸಿಕೊಂಡಿದೆ. ಆದರೆ ಪ್ಲೆ ಆಫ್‌ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.

    ಕೊನೆಯ 2‌ ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 30 ರನ್‌ಗಳ ಅಗತ್ಯವಿದ್ದಾಗ 19ನೇ ಓವರ್‌ನಲ್ಲೇ 19ರನ್‌ ದಾಖಲಾಯಿತು. ಕೊನೆಯ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದಾಗ ಟಿಮ್‌ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದಾಗಿ 5 ರನ್‌ ಗಳಷ್ಟೇ ಸೇರ್ಪಡೆಯಾಯಿತು. ಕೊನೆಗೆ ಮುಂಬೈ 5 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು. 5ನೇ ಸ್ಥಾನದಲ್ಲಿದ್ದ ಆರ್‌ಸಿಬಿ (RCB) ತಂಡಕ್ಕೂ ಲಕ್ನೋ ಗೆಲವು ಸಂಕಷ್ಟ ತಂದಂತಾಗಿದೆ. ಒಂದು ವೇಳೆ ಆರ್‌ಸಿಬಿ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುಂಬೈ ಮುಂದಿನ ಪಂದ್ಯದಲ್ಲೂ ಸೋತರಷ್ಟೇ ಆರ್‌ಸಿಬಿಗೆ ಪ್ಲೆ ಆಫ್‌ ಪ್ರವೇಶಿಸುವ ಅವಕಾಶ ಸಿಗಲಿದೆ.

    ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 3 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತ್ತು. 178 ರನ್‌ ಗುರಿ ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ಗೆದ್ದು ಬೀಗಿತು. ಈ ಮೂಲಕ ಪ್ಲೆ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಂಡಿತು.

    ಬೌಲಿಂಗ್‌ ಪಿಚ್‌ನಲ್ಲಿ ಇದೇ ಮೊದಲಬಾರಿಗೆ ಇತ್ತಂಡಗಳಿಂದಲೂ ರನ್‌ ಹೊಳೆ ಹರಿಯಿತು. ಲಕ್ನೋ ಪರ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ (Rohit Sharma), ಇಶಾನ್‌ ಕಿಶನ್‌ (Ishan Kishan) ಭರ್ಜರಿ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ ನಡೆಸಿದರು.

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ರು. ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 9.4 ಓವರ್‌ಗಳಲ್ಲಿ 90 ರನ್‌ ಸಿಡಿಸಿತ್ತು. ರೋಹಿತ್‌ ಶರ್ಮಾ 25 ಎಸೆತಗಳಲ್ಲಿ 37 ರನ್‌ (1 ಬೌಂಡರಿ, 3 ಸಿಕ್ಸರ್‌) ಗಳಿಸಿದರೆ, ಇಶಾನ್‌ ಕಿಶನ್‌ 39 ಎಸೆತಗಳಲ್ಲಿ 59 ರನ್‌ (1 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ 7 ರನ್‌ ಹಾಗೂ ನಿಹಾಲ್‌ ವಧೇರಾ 16 ರನ್‌ ಗಳಿಸಿ ನಿರಾಸೆ ಮೂಡಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಬ್ಯಾಟಿಂಗ್‌ ನೆರವಿನಿಂದ ರನ್‌ ಗಳಿಸಿದ್ದ ಮುಂಬೈ ಗೆಲುವಿನ ಕನಸು ಕಂಡಿತ್ತು. ಕೊನೆಯ ಓವರ್‌ನಲ್ಲಿ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದ ಮುಂಬೈ ವಿರೋಚಿತ ಸೋಲನುಭವಿಸಿತು. ಟಿಮ್‌ ಡೇವಿಡ್‌ 19 ಎಸೆತಗಳಲ್ಲಿ 32 ರನ್‌ ಗಳಿಸಿದರು.

    ಲಕ್ನೋ ಪರ ಬೌಲಿಂಗ್‌ ದಾಳಿ ನಡೆಸಿದ ರವಿ ಬಿಷ್ಣೋಯಿ, ಯಶ್‌ ಠಾಕೂರ್‌ ತಲಾ 2 ವಿಕೆಟ್‌ ಉರುಳಿಸಿದರೆ, ಮೊಹ್ಸಿನ್‌ ಖಾನ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ದೀಪಕ್‌ ಹೂಡ 5 ರನ್‌, ಕ್ವಿಂಟನ್‌ ಡಿ ಕಾಕ್‌ 16 ರನ್‌ ಹಾಗೂ ಪ್ರೇರಕ್‌ ಮಂಕಡ್‌ ಶೂನ್ಯಕ್ಕೆ ಔಟಾಗಿದ್ದರು. ಬಳಿಕ ಒಂದಾದ ನಾಯಕ ಕೃನಾಲ್‌ ಪಾಂಡ್ಯ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಜೋಡಿ 59 ಎಸೆತಗಳಲ್ಲಿ 82 ರನ್‌ ಸಿಡಿಸಿತ್ತು. ನಂತರದಲ್ಲಿ ನಿಕೋಲಸ್‌ ಪೂರನ್‌‌ ಹಾಗೂ ಸ್ಟೋಯ್ನಿಸ್‌ ಜೋಡಿ 24 ಎಸೆತಗಳಲ್ಲಿ 60 ರನ್‌ ಬಾರಿಸಿತು. ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಸ್ಟೋಯ್ನಿಸ್‌ 47 ಎಸೆತಗಳಲ್ಲಿ 89 ರನ್‌ (8 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಕೃನಾಲ್‌ ಪಾಂಡ್ಯ 42 ಎಸೆತಗಳಲ್ಲಿ 49 ರನ್‌ ಗಳಿಸಿದರು. ಅರ್ಧ ಶತಕ ಗಳಿಸದೆಯೇ ಕಾಲು ನೋವು ಸಮಸ್ಯೆಯಿಂದ ಕ್ರೀಸ್‌ ಬಿಟ್ಟು ಹೊರನಡೆದರು. ನಿಕೋಲಸ್‌ ಪೂರನ್‌ 8 ರನ್‌ ಗಳಿಸಿ ಅಜೇಯರಾಗುಳಿದರು.

    ಮುಂಬೈ ಪರ ಜೇಸನ್‌ ಬೆಹ್ರೆನ್‌ಡ್ರೋಫ್‌ 4 ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಪಿಯೂಷ್‌ ಚಾವ್ಲಾ 3 ಓವರ್‌ಗಳಲ್ಲಿ 1 ವಿಕೆಟ್‌ 26 ರನ್‌ ನೀಡಿ 1 ವಿಕೆಟ್‌ ಪಡೆದರು.

  • ಲಕ್ನೋ ನಾಯಕ ಕೆಎಲ್ ರಾಹುಲ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಲಕ್ನೋ ನಾಯಕ ಕೆಎಲ್ ರಾಹುಲ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ (KL Rahul) ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಈ ಮೂಲಕ ಮುಂಬರುವ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಆಡುವ ನಿರೀಕ್ಷೆ ಇದೆ.

    ಈ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಬರೆದುಕೊಂಡಿರುವ ಅವರು, ನಾನು ಆರೋಗ್ಯವಾಗಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

    ಕಳೆದ ತಿಂಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೇಳೆ ಲಕ್ನೋ ಪರ ಫೀಲ್ಡಿಂಗ್ ವೇಳೆ ರಾಹುಲ್ ಕಾಲಿನ ಗಾಯಕ್ಕೊಳಗಾಗಿದ್ದರು. ಇದರಿಂದಾಗಿ ನಂತರದ ಐಪಿಎಲ್ ಪಂದ್ಯಗಳಿಂದ ಅವರು ಹೊರಗುಳಿಯ ಬೇಕಾಯಿತು. ಅಲ್ಲದೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಿಂದಲೂ ಅವರು ದೂರ ಉಳಿಯುವ ಸಾಧ್ಯತೆಗಳಿವೆ.

     

    ಅವರ ಅನುಪಸ್ಥಿತಿಯಲ್ಲಿ ಭಾನುವಾರದ ಐಪಿಎಲ್ ಪಂದ್ಯದಲ್ಲಿ ತಂಡವನ್ನು ಕೃನಾಲ್ ಪಾಂಡ್ಯ (Krunal Pandya) ಮುನ್ನಡೆಸಿದ್ದರು. ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅವರ ಜಾಗವನ್ನು ಇಶಾನ್ ಕಿಶನ್ (Ishan Kishan) ತುಂಬಲಿದ್ದಾರೆ.

    ಎಲ್ಲಾ ಬಗೆಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಾವೀಣ್ಯತೆಯಿಂದ ಖ್ಯಾತಿ ಪಡೆದಿರುವ ಕೆಎಲ್ ರಾಹುಲ್ ಏಷ್ಯಾ ಕಪ್ (Asia Cup) ಹಾಗೂ ಏಕದಿನ ವಿಶ್ವಕಪ್ (ODI World Cup) ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ. ಇದನ್ನೂ ಓದಿ: ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

  • ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ಅಹಮದಾಬಾದ್‌: ಶುಭಮನ್‌ ಗಿಲ್‌ (Shubman Gill), ವೃದ್ಧಿಮಾನ್‌ ಸಾಹಾ (Wriddhiman Saha) ಶತಕದ ಜೊತೆಯಾಟ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ (Gujarat Titans) 227 ರನ್‌ ಪೇರಿಸಿತು. 228 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

    ಗೆಲುವಿಗೆ 228 ರನ್‌ಗಳ ಗುರಿ ಪಡೆದ ಲಕ್ನೋ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೈಲ್‌ ಮೇಯರ್ಸ್‌ ಹಾಗೂ ಕ್ವಿಂಟನ್‌ ಡಿಕಾಕ್‌ 8.2 ಓವರ್‌ಗಳಲ್ಲಿ 88 ರನ್‌ಗಳ ಜೊತೆಯಾಟವಾಡಿದ್ದರು. ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಅಂತಿಮವಾಗಿ ಲಕ್ನೋ 171 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಲಕ್ನೋ ಪರ ಕ್ವಿಂಟನ್‌ ಡಿಕಾಕ್‌ 70 ರನ್‌ (41 ಎಸೆತ, 7 ಬೌಂಡರಿ, 3 ಸಿಕ್ಸರ್‌), ಕೈಲ್‌ ಮೇಯರ್ಸ್‌ 48 ರನ್‌ (32 ಎಸೆತ, 7 ಬೌಂಡರಿ, 2 ಸಿಕ್ಸರ್‌), ದೀಪಕ್‌ ಹೂಡಾ 11 ರನ್‌, ಆಯುಷ್‌ ಬದೋನಿ 21 ರನ್‌ ಗಳಿಸಿದರು. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿ ಗುಜರಾತ್‌ ಟೈಟಾನ್ಸ್‌ ತಂಡ ಸ್ಫೋಟಕ ಪ್ರದರ್ಶನ ನೀಡಿತು. ಆರಂಭಿಕ ಆಟಗಾರರಾದ ಶುಭಮನ್‌ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ, ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 12.1 ಓವರ್‌ಗಳಲ್ಲಿ ಬರೋಬ್ಬರಿ 142 ರನ್‌ಗಳಿಸಿತು. ಸಾಹಾ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 81 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಶುಭಮನ್‌ ಗಿಲ್‌ ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೆ ತಂಡದ ಮೊತ್ತವನ್ನು ಹೆಚ್ಚಿಸಿದರು.

    ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 25 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ನಂತರ ಡೇವಿಡ್ ಮಿಲ್ಲರ್ ಕೂಡ ಸ್ಫೋಟಕ ಪ್ರದರ್ಶನ ನೀಡಿದರು. ಮಿಲ್ಲರ್ 12 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಿ ಅಜೇಯರಾಗುಳಿದರು. ಇನ್ನೂ ಆರಂಭದಿಂದ ಕೊನೆಯವರೆಗೂ ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳನ್ನು ಚೆಂಡಾಡಿದ ಗಿಲ್ ಅಜೇಯ 94 ರನ್‌ (2 ಬೌಂಡರಿ, 7 ಸಿಕ್ಸರ್‌) ಗಳಿಸಿದರು.

    ಗುಜರಾತ್‌ ಟೈಟಾನ್ಸ್‌ ಪರ ಮೋಹಿತ್‌ ಶರ್ಮಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಶಮಿ, ರಶೀದ್‌ ಖಾನ್‌, ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಗಾಂಧಿನಗರ: ಇದೇ ಮೊದಲ ಬಾರಿಗೆ ಐಪಿಎಲ್ (IPL) ಇತಿಹಾಸದಲ್ಲಿ ಅಣ್ಣ ತಮ್ಮ ಇಬ್ಬರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲಿ ಭಾನುವಾರ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಪಂದ್ಯವೂ ಸಹೋದರರ ಸವಾಲ್‍ಗೆ ವೇದಿಕೆಯಾಗಿದೆ.

    ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಲಕ್ನೋ ತಂಡದ ನಾಯಕನಾಗಿ ಕೃನಾಲ್ ಪಾಂಡ್ಯ (Krunal Pandya) ಕಣಕ್ಕಿಳಿದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಗಳನ್ನು ಹೊಂದಿರುವ ಇತ್ತಂಡದ ನಾಯಕರು ಕಣದಲ್ಲಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ಐಪಿಎಲ್ ಫ್ರಾಂಚೈಸಿಯಲ್ಲಿ ಈ ಹಿಂದೆ ಅನೇಕ ಸಹೋದರರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ನಾಯಕರಾಗಿ ಅಣ್ಣ ತಮ್ಮ ಕಣದಲ್ಲಿ ಅಬ್ಬರಿಸುತ್ತಿರುವುದು ರೋಚಕವಾಗಿದೆ. ಕಳೆದ ವಾರ ಆರ್‌ಸಿಬಿ (RCB) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೆ.ಎಲ್ ರಾಹುಲ್ (KL Rahul) ಗಾಯಕ್ಕೆ ತುತ್ತಾಗಿದ್ದರಿಂದ ಕೃನಾಲ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ.

    ಇನ್ನೂ 2022ರಲ್ಲಿ ಮೊದಲಬಾರಿಗೆ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವ ಮೂಲಕ ಪಾಂಡ್ಯ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇತ್ತಂಡಗಳಿಗೂ ಇದು ಸವಾಲಿನ ಪಂದ್ಯವಾಗಿದೆ.

    2023ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ತಂಡ 14 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ. ಆದ್ರೆ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ 11 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಲಕ್ನೋ ಗೆದ್ದರೆ ಟಾಪ್ 2ನೇ ಸ್ಥಾನಕ್ಕೆ ಬರಲಿದೆ.

    ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಅವೇಶ್ ಖಾನ್.

    ಇಂಪ್ಯಾಕ್ಟ್ ಪ್ಲೇಯರ್ಸ್: ಆಯುಷ್ ಬಡೋನಿ, ಅಮಿತ್ ಮಿಶ್ರಾ, ಡೇನಿಯಲ್ ಸಾಮ್ಸ್, ಯದ್ವೀರ್ ಸಿಂಗ್ ಮತ್ತು ಪ್ರೇರಕ್ ಮಂಕಡ್.

    ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಮತ್ತು ಮೊಹಮ್ಮದ್ ಶಮಿ.

    ಇಂಪ್ಯಾಕ್ಟ್ ಪ್ಲೇಯರ್ಸ್: ಅಲ್ಜಾರಿ ಜೋಸೆಫ್, ದಸುನ್ ಶನಕ, ಕೆಎಸ್ ಭರತ್, ಶಿವಂ ಮಾವಿ ಮತ್ತು ಜಯಂತ್ ಯಾದವ್. ಇದನ್ನೂ ಓದಿ: RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ