Tag: ಕೃತಿ ಸನೂನ್‌

  • ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ನಿನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ಆದಿಪುರುಷ ಚಿತ್ರಕ್ಕೆ ಕಂಟಕ : ರಿಲೀಸ್ ಗೂ ಮುನ್ನ ದೂರು ದಾಖಲು

    ಆದಿಪುರುಷ ಚಿತ್ರಕ್ಕೆ ಕಂಟಕ : ರಿಲೀಸ್ ಗೂ ಮುನ್ನ ದೂರು ದಾಖಲು

    ಪ್ರಭಾಸ್ ಮತ್ತು ಕೃತಿ ಸನೂನ್ (Kriti Sanoon) ಕಾಂಬಿನೇಷನ್ ನ ‘ಆದಿಪುರುಷ’ (Adipurusha) ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ವಿವಾದಕ್ಕೀಡಾಗುತ್ತಲೇ ಇದೆ. ಟ್ರೈಲರ್ ರಿಲೀಸ್ ಆದಾಗ ಹಾಗೂ ಪೋಸ್ಟರ್ ಬಿಡುಗಡೆ ಆದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಿತ್ರದ ಮೇಲಿತ್ತು. ಸಿನಿಮಾದ ಪೋಸ್ಟರ್ ನಲ್ಲೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡದಂತೆ ದೂರು ದಾಖಲಾಗಿದೆ.

    ಸಂಜಯ್ ತಿವಾರಿ ಎನ್ನುವವರು ಬಾಂಬೆ (Mumbai) ಹೈಕೋರ್ಟ್ (High Court) ಮೆಟ್ಟಿಲು ಏರಿದ್ದು, ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ನಿರ್ಮಾಪಕರು ಮತ್ತು ಕಲಾವಿದರು ಗಂಭೀರ ತಪ್ಪುಗಳನ್ನು ಮಾಡಿದ್ಧಾರೆ. ಈ ತಪ್ಪುಗಳು ನಾಳೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಅಲ್ಲದೇ, ಒಂದು ವರ್ಗದ ಜನರ ಧಾರ್ಮಿಕ ಭಾವನೆಗೂ ನೋವನ್ನುಂಟು ಮಾಡಬಹುದು. ಹಾಗಾಗಿ ಸಿನಿಮಾದಲ್ಲಿ ಅಂತಹ ತಪ್ಪುಗಳು ನುಸುಳದಂತೆ ನಿರ್ದೇಶನ ನೀಡಬೇಕು ಎಂದು ಅವರು ದೂರಿನಲ್ಲಿ (Complaint) ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:The Kerala Story ಚಿತ್ರದ ಸಕ್ಸಸ್ ಬಳಿಕ ‘ರಣವಿಕ್ರಮ’ ನಟಿಗೆ ಬಿಗ್‌ ಆಫರ್

    ದೂರು ಒಂದು ಕಡೆಯಾದರೆ, ನಟ ಪ್ರಭಾಸ್‌ಗೆ (Prabhas) ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಬಹುದೊಡ್ಡ ವರ್ಗವೇ ಇದೆ. `ಆದಿಪುರುಷ್’ (Adipurush) ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಕಳಪೆ ಎಂದು ನೆಟ್ಟಿಗರಿಂದ ಉತ್ತರ ಬಂದ್ಮೇಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಈಗ ರಿಲೀಸ್‌ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ.

    `ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಜ.17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು ಕೆಲ ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಅಪ್‌ಡೇಟ್‌ ಕೇಳಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

  • ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸೆನನ್

    ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸೆನನ್

    ಬಣ್ಣದ ಲೋಕದ ಅಂದಮೇಲೆ ಇಲ್ಲಿ ಡೇಟಿಂಗ್, ಗಾಸಿಪ್ ಎಲ್ಲವೂ ಕಾಮನ್. ಒಂದು ಸಿನಿಮಾ ಒಟ್ಟಿಗೆ ಮಾಡಿದ್ರೆ ಸಾಕು. ಆ ಬೆನ್ನಲ್ಲೇ ಗಾಸಿಪ್ ಕೂಡ ಹಬ್ಬಿರುತ್ತದೆ. ಇತ್ತೀಚಿಗೆ ಪ್ರಭಾಸ್- ಕೃತಿ ಸೆನನ್ (Kriti Sanon) ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇಬ್ಬರು ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ ಎಂದೇ ಹೇಳಲಾಗಿತ್ತು. ಇಷ್ಟೇಲ್ಲಾ ಸಮಸ್ಯೆಯಾಗುವುದಕ್ಕೆ ಕಾರಣ ವರುಣ್ ಧವನ್ (Varun Dhawan) ಆಡಿದ ಆ ಒಂದು ಮಾತು. ಇದೀಗ ಈ ಬಗ್ಗೆ ನಟಿ ಕೃತಿ ಬೇಸರ ಹೊರಹಾಕಿದ್ದಾರೆ.

    `ಆದಿಪುರುಷ್’ (Adipurush) ಚಿತ್ರದದಲ್ಲಿ ಪ್ರಭಾಸ್‌ಗೆ ಸೀತೆಯಾಗಿ ಕೃತಿ ಸೆನನ್ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚಿಗೆ ನಟಿ ನೀಡಿದ ಸಂದರ್ಶನವೊಂದರಲ್ಲಿ ಪ್ರಭಾಸ್ (Prabhas) ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ‌ ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ವರುಣ್ ಧವನ್ ಮೇಲಿನ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

    ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ, ಸಿನಿಮಾ ಪ್ರಚಾರವೊಂದಕ್ಕಾಗಿ ವರುಣ್ ಧವನ್ ಹಾಗೂ ಕೃತಿ ಸೆನನ್ ಭಾಗಿ ಆಗಿದ್ದರು. ಇದನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದರು. ನಾಯಕಿಯರ ಪಟ್ಟಿ ಮಾಡುವ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ವರುಣ್ ಧವನ್ ಅವರು ಹಲವು ಹೀರೋಯಿನ್‌ಗಳ ಹೆಸರು ತೆಗೆದುಕೊಂಡರು. ಆದರೆ, ಕೃತಿ ಸೆನನ್ ಹೆಸರನ್ನು ಅವರು ಕೈ ಬಿಟ್ಟಿದ್ದರು. ಈ ಬಗ್ಗೆ ಮಾತನಾಡುವಾಗ, ಈ ಪಟ್ಟಿಯಲ್ಲಿ ಕೃತಿ ಸೆನನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ (Deepika Padukone) ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ವರುಣ್ ಹೇಳಿದ್ದರು. `ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಧವನ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸಿದ್ದರು. ಇದರಿಂದಲೇ ಇವರಿಬ್ಬರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಇದೀಗ ಸಾಕಷ್ಟು ಸಮಯದ ನಂತರ ನಟಿ ಕೃತಿ ಮೌನ ಮುರಿದಿದ್ದಾರೆ. ವರುಣ್ ಧವನ್ ಅಂದು ಹಾಗೇ ಹೇಳಿದಾಗ ನನಗೆ ತುಂಬಾನೇ ಬೇಸರ ಆಯಿತು. ಈ ವಿಚಾರದ ಬಗ್ಗೆ ಪ್ರಭಾಸ್‌ಗೆ ಹೇಳಬೇಕು ಎನಿಸಿತು. ನಾನು ಪ್ರಭಾಸ್‌ಗೆ ಕಾಲ್ ಮಾಡಿ ವರುಣ್ ಧವನ್ ಈ ರೀತಿ ಹೇಳಿದ್ದಾರೆ ಎಂಬುದನ್ನು ಹೇಳಿದೆ. ಅವರು ಆದರೆ ಯಾಕೆ ಎಂದು ಪ್ರಶ್ನೆ ಮಾಡಿದರು. ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟೆ. ವರುಣ್‌ಗೆ ಹುಚ್ಚು ಹಿಡಿದಿದೆ ಎಂದು ನಾನು ಪ್ರಭಾಸ್ ಬಳಿ ಹೇಳಿದ್ದೆ ಎಂಬುದಾಗಿ ಕೃತಿ ಹೇಳಿಕೊಂಡಿದ್ದಾರೆ. ವರುಣ್ ಧವನ್ ಹೇಳಿಕೆಯಿಂದ ಕೃತಿಗೆ ಸಾಕಷ್ಟು ಬೇಸರ ಆಗಿದೆ. ಇಬ್ಬರ ಮಧ್ಯೆ ಇರುವ ಫ್ರೆಂಡ್‌ಶಿಪ್ ಮುರಿದು ಹೋಯ್ತಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ.

  • WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭವಾಗುತ್ತಿದ್ದು, ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಟೂರ್ನಿಯ ಮೊದಲ ಪಂದ್ಯ ಮುಂಬೈನ (Mumbai) ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಂಜೆ 5:30ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ `ಪರಮ್ ಸುಂದರಿ’ ಹಾಡಿನ ಖ್ಯಾತಿಯ ಕೃತಿ ಸನೋನ್ (Kriti Sanon) ಭರ್ಜರಿ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ಕೌರ್​ ನಾಯಕಿ

    WPL

    ಇದರೊಂದಿಗೆ ಜನಪ್ರಿಯ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಡಬ್ಲ್ಯೂಪಿಎಲ್ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    FotoJet 7

    ಚೊಚ್ಚಲ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಮಾರ್ಚ್ 4 ರಿಂದ 21ರ ವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24 ರಂದು ಪ್ಲೆ ಆಫ್ ಹಾಗೂ ಮಾರ್ಚ್ 26ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    `ಬಾಹುಬಲಿ’ ಸೂಪರ್ ಸ್ಟಾರ್ ಪ್ರಭಾಸ್ (Prabhas), ಕೃತಿ ಸನೂನ್‌  (Kriti Sanon) ನಟನೆಯ `ಆದಿಪುರುಷ್’ ಸಿನಿಮಾದ ರಿಲೀಸ್‌ ಡೇಟ್ ಫಿಕ್ಸ್‌ ಆಗಿದೆ. ಈ ಕುರಿತು ಅಧಿಕೃತವಾಗಿ ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಈ ಮೂಲಕ ಪ್ರಭಾಸ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ನಟ ಪ್ರಭಾಸ್‌ಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಬಹುದೊಡ್ಡ ವರ್ಗವೇ ಇದೆ. `ಆದಿಪುರುಷ್’ (Adipurush) ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಕಳಪೆ ಎಂದು ನೆಟ್ಟಿಗರಿಂದ ಉತ್ತರ ಬಂದ್ಮೇಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಈಗ ರಿಲೀಸ್‌ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ.

    `ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಜ.17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು 150 ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಅಪ್‌ಡೇಟ್‌ ಕೇಳಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಯ್ಯ ಮುಂದೆ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟ ಪ್ರಭಾಸ್

    ಬಾಲಯ್ಯ ಮುಂದೆ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟ ಪ್ರಭಾಸ್

    ಟಾಲಿವುಡ್ (Tollywood) ನಟ ಬಾಲಯ್ಯ (Balayya) ಸಿನಿಮಾ ಜೊತೆಗೆ ʻಅನ್‌ಸ್ಟಾಪಬಲ್ʼ ಎಂಬ ಶೋ ಕೂಡ ನಡೆಸಿಕೊಡುತ್ತಾರೆ. ಸ್ಟಾರ್ ತಾರೆಯರ ಸಂದರ್ಶನ ಮಾಡಿ, ಅವರ ಕುರಿತು ಅಚ್ಚರಿಯ ಮಾಹಿತಿಯನ್ನ ರಿವೀಲ್ ಮಾಡುತ್ತಾರೆ. ಈ ಶೋಗೆ (Actor Prabhas) ಪ್ರಭಾಸ್‌ ಕೂಡ ಸಾಥ್‌ ನೀಡಿದ್ದು, ತಮ್ಮ ಮದುವೆಯ ಬಗ್ಗೆ ನಟ ಬಾಯ್ಬಿಟ್ಟಿದ್ದಾರೆ.

    ತೆಲುಗು ಚಿತ್ರರಂಗದ ಲೆಜೆಂಡ್ ಬಾಲಕೃಷ್ಣ ‌ʻಅಖಂಡʼ ಸಕ್ಸಸ್ ನಂತರ ಸಿನಿಮಾ ಶೂಟಿಂಗ್‌,  ತಾರೆಯರ ಸಂದರ್ಶನ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಪ್ರಭಾಸ್ ಜೊತೆಗಿನ ಸಂದರ್ಶನದ ತುಣುಕು ಸಖತ್ ಸದ್ದು ಮಾಡುತ್ತಿದೆ. ಬಾಲಯ್ಯ ನಿರೂಪಣೆಯ ಅನ್‌ಸ್ಟಾಪಬಲ್ ಶೋಗೆ ಅತಿಥಿಯಾಗಿ ಬಾಹುಬಲಿ ನಟ ಪ್ರಭಾಸ್ ಭಾಗವಹಿಸಿದ್ದಾರೆ. ಅವರ ವಯಸ್ಸು 43 ಆದ್ರೂ ಎಲ್ಲರೂ ಕೇಳೋ ಪ್ರಶ್ನೆ ಮದುವೆ ಯಾವಾಗ ಅಂತಾ? ಹಾಗಾಗಿ ಈ ಬಗ್ಗೆ ಬಾಲಯ್ಯ, ಪ್ರಭಾಸ್‌ ಅವರನ್ನ ನೇರವಾಗಿ ಮದುವೆ ಯಾವಾಗ ಎಂದಿದ್ದಾರೆ.

    ಈ ಹಿಂದಿನ ಶೋನಲ್ಲಿ ನಟ ಶರ್ವಾನಂದ್‌ಗೆ ಮದುವೆ ಯಾವಾಗ ಅಂತಾ ಕೇಳಲಾಗಿತ್ತು. ಆಗ ಪ್ರಭಾಸ್ ಮದುವೆ ಆದ ಮೇಲೆ ಎಂಬ ಉತ್ತರ ನೀಡಿದ್ದರು. ಇದೀಗ ಇದೇ ಪ್ರಶ್ನೆಯನ್ನು ನಿಮಗೆ ಕೇಳುತ್ತೇನೆ. ನಿಮ್ಮ ಮದುವೆ ಯಾವಾಗ ಎಂದು, ಅದಕ್ಕೆ ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನನ್ನ ಮದುವೆ ಎಂದು ಪ್ರಭಾಸ್ ಉತ್ತರ ನೀಡಿದ್ದಾರೆ. ಈ ಮಾತು ಕೇಳಿ ಅಲ್ಲಿರುವ ಅಭಿಮಾನಿಗಳು ನಕ್ಕಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಸದ್ಯ ಪ್ರಭಾಸ್ (Prabhas) ಹೆಸರು ನಟಿ ಕೃತಿ ಸನೂನ್ (Kriti Sanon) ಜೊತೆ ಕೇಳಿ ಬರುತ್ತಿದೆ. ಇಬ್ಬರು ಡೇಟಿಂಗ್ (Dating) ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಮದುವೆಯ ಗುಡ್ ನ್ಯೂಸ್ ಸಿಗಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಚಿತ್ರರಂಗ ಅಂದ ಮೇಲೆ ಇಲ್ಲಿ ಲವ್ ಸ್ಟೋರಿ ಎಲ್ಲಾ ಕಾಮನ್, ಒಂದಲ್ಲಾ ಒಂದು ಗಾಸಿಪ್ ವಿಷ್ಯವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಪ್ರಭಾಸ್ (Darling Prabhas) ಜೊತೆಗಿನ ಡೇಟಿಂಗ್ ವದಂತಿಗೆ ಕೃತಿ ಸನೂನ್ (Kriti Sanon) ಇದೀಗ ಬ್ರೇಕ್ ಹಾಕಿದ್ದಾರೆ.

    ಟಿಟೌನ್ ಅಡ್ಡಾದಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ವಿಷ್ಯಾ ಅಂದ್ರೆ ಪ್ರಭಾಸ್, ಕೃತಿ ಸನೂನ್ ಡೇಟಿಂಗ್ ವಿಚಾರ. ಇದೀಗ ಅದಕ್ಕೆಲ್ಲಾ ನಟಿ ಕೃತಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ (Varun Dhawan) ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಬೇರೆ ಯಾವುದೋ ಮಾಧ್ಯಮದವರು ನನ್ನ ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ನಾನೇ ಆ ಭ್ರಮೆಯನ್ನು ಹೊಡೆದುಹಾಕುತ್ತೇನೆ. ಎಲ್ಲ ವದಂತಿಗಳು ಆಧಾರರಹಿತವಾಗಿವೆ ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೋನ್ ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಕಾರ್ಯವೊಂದರಲ್ಲಿ ಬಾಲಿವುಡ್ ನಟ ವರುಣ್ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೂನ್ ಕೂಡ ಇದ್ದರು. ಕರಣ್ ಜೋಹರ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್ ಧವನ್ ಅವರು ಕೃತಿ ಹೆಸರನ್ನು ಕೈ ಬಿಟ್ಟಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ ವರುಣ್ ಧವನ್ ಹೊಸ ವಿಷಯ ಬಾಯ್ಬಿಟ್ಟಿದ್ದರು. ಇದನ್ನೂ ಓದಿ: ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

    ಈ ಲಿಸ್ಟ್‌ನಲ್ಲಿ ಕೃತಿ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ವರುಣ್ ಧವನ್ ಹೇಳಿದ್ದ ವಿಡಿಯೋ ವೈರಲ್ ಆಗಿದೆ. `ಪ್ರಾಜೆಕ್ಟ್ ಕೆ’ ಚಿತ್ರಕ್ಕಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ವದಂತಿ ಹೆಚ್ಚಾಗುವುದಕ್ಕೂ ಮುನ್ನವೇ ಕೃತಿ ಸನೂನ್ ಅವರು ಸ್ಪಷ್ಟನೆ ನೀಡಿ, ಎಲ್ಲಾ ವದಂತಿಗೂ ನಟಿ ಬ್ರೇಕ್ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಡಾರ್ಲಿಂಗ್ ಪ್ರಭಾಸ್ (Darling Prabhas) ಮದುವೆ ಯಾವಾಗ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. 45ರ ಆಸುಪಾಸಿನಲ್ಲಿ ಪ್ರಭಾಸ್ ಮದುವೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಪ್ರಭಾಸ್ ಲವ್ ಲೈಫ್ ಬಗ್ಗೆ ವರುಣ್ ಧವನ್ (Varun Dhawan) ಸುಳಿವು ನೀಡಿದ್ದಾರೆ.

    ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್, ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಬ್ಯುಸಿ ಶೆಡ್ಯೂಲ್ ನಡುವೆ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂಬುದು ಅಭಿಮಾನಿಗಳಲ್ಲಿ ಅನುಮಾನ ಉಂಟಾಗಿದೆ. ಇದರ ಮಧ್ಯೆ ಬಾಲಿವುಡ್ ನಟ ವರುಣ್ ಡಾರ್ಲಿಂಗ್ ಪ್ರಭಾಸ್ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    ಇತ್ತೀಚೆಗೆ ಪ್ರಭಾಸ್ ಲವ್‌ನಲ್ಲಿ ಬಿದ್ದಿರೋ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿತ್ತು. ಆದಿಪುರುಷ್ ಸಿನಿಮಾದ ನಟಿ ಕೃತಿ (Kriti Sanon) ಮೇಲೆ ಪ್ರಭಾಸ್‌ಗೆ ಲೈಟ್ ಆಗಿ ಲವ್ ಆಗಿದೆ ಅನ್ನೋ ಸುದ್ದಿ ಹರಿದಾಡಿತ್ತು. ಇದೇ ವೇಳೆ ನಟ ವರುಣ್ ಧವನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

    ಪ್ರಭಾಸ್ ಲವ್ ಲೈಫ್ ಮೇಲೆ ಎಲ್ಲರಿಗೂ ಕಣ್ಣು. ಈ ಮಧ್ಯೆ ಪ್ರಭಾಸ್ ಜೊತೆ ಬಾಲಿವುಡ್ ನಟಿ ಕೃತಿ ಸನೂನ್ ಹೆಸರು ಕೂಡ ತಳುಕು ಹಾಕೊಂಡಿದೆ. ಈಗ ಬಾಲಿವುಡ್ ಸ್ಟಾರ್ ವರುಣ್ ಧವನ್ ಕೂಡ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್ ಇದ್ದಾಳೆ. ಅವಳು ಇದಕ್ಕಿಂತ ಖುಷಿಯಾಗಿರಲು ಸಾಧ್ಯವೇ ಇಲ್ಲ ಎಂದು ನಟ ವರುಣ್ ಧವನ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಪ್ರಭಾಸ್‌, ಕೃತಿ ಲವ್‌ ಮ್ಯಾಟರ್‌ ನಿಜಾನಾ, ಪ್ರಭಾಸ್‌ಗೆ ಮದುವೆ ಆಲೋಚನೆ ಇದ್ಯಾ ಈ ಎಲ್ಲಾ ಉತ್ತರಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್‌ ಧವನ್‌

    ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್‌ ಧವನ್‌

    ಬಾಲಿವುಡ್‌ನಲ್ಲಿ(Bollywood) ಸದ್ಯ ಆಲಿಯಾ ಭಟ್, ಬಿಪಾಶಾ ಬಸು ದಂಪತಿಯ ನಂತರ ವರುಣ್ ಧವನ್ (Varun Dhawan) ಕೂಡ ಗುಡ್ ನ್ಯೂಸ್ ಕೊಡಲಿದ್ದಾರಾ ಎಂಬ ಸುದ್ದಿ ಸಖತ್ ಟಾಕ್ ಆಗುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ವರುಣ್ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಸಲ್ಮಾನ್ ಖಾನ್(Salman Khan) ಹಿಂಟ್ ಕೊಟ್ಟಿದ್ದಾರೆ.

    ಬಿಟೌನ್ ಸ್ಟಾರ್ ವರುಣ್ ಧವನ್, ಕೃತಿ ಸನೂನ್ ನಟನೆಯ `ಭೇದಿಯ’ (Bhediya) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್‌ಗಾಗಿ ಹಿಂದಿ ಬಿಗ್ ಬಾಸ್‌ಗೆ ಈ ಜೋಡಿ ಕಾಲಿಟ್ಟಿದೆ. ಸಲ್ಮಾನ್ ಖಾನ್ ಜೊತೆ ಮಸ್ತ್ ಆಗಿ, ಚಿತ್ರದ ಪ್ರಚಾರ ಮಾಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ವರುಣ್ ಧವನ್ ತಂದೆಯಾಗುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ:80ರ ದಶಕದ ನಟ-ನಟಿಯರ ಪುನರ್ಮಿಲನ

    ವೇದಿಕೆಯಲ್ಲಿ ಆಟಿಕೆ ಹಿಡಿದು ಆಡುವಾಗ ವರುಣ್‌ಗೆ ನೀಡಿ, ನಿಮ್ಮ ಮಗುವಿಗಾಗಿ ಎಂದು ಸಲ್ಲು ವರುಣ್ ಕಾಲೆಳೆದಿದ್ದಾರೆ. ಮಗು ಇನ್ನೂ ಮಗು ಆಗಿಲ್ಲ ಎಂದು ವರುಣ್ ಉತ್ತರಿಸಿದ್ದಾರೆ. ಆಟಿಕೆ ತೋರಿಸಿ, ಇದು ಬಂದಿದೆ ಅಂದ್ರೆ, ಮಗು ಕೂಡ ಬರುತ್ತೆ ಎಂದು ತಮಾಷೆ ಮಾಡಿದ್ದಾರೆ. ವರುಣ್ ಕೂಡ ನಕ್ಕಿದ್ದಾರೆ. ಈ ಸಂಭಾಷನೆ ನೋಡಿರುವ ಫ್ಯಾನ್ಸ್ ಜ್ಯೂನಿಯರ್ ವರುಣ್ ಬರಲಿದ್ದಾರೆ ಎಂದು ಖುಷಿಪಟ್ಟಿದ್ದಾರೆ.

    ಅಷ್ಟಕ್ಕೂ ವರುಣ್ ದಂಪತಿ ಪೋಷಕರಾಗುತ್ತಿರುವ ವಿಚಾರ ನಿಜಾನಾ, ಸೂಕ್ತ ಸಮಯದಲ್ಲಿ ಅನೌನ್ಸ್ ಮಾಡಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರತಂಡದ ಎಡವಟ್ಟು: `ಆದಿಪುರುಷ್’ ರಿಲೀಸ್ ಡೇಟ್ ಮುಂದಕ್ಕೆ

    ಚಿತ್ರತಂಡದ ಎಡವಟ್ಟು: `ಆದಿಪುರುಷ್’ ರಿಲೀಸ್ ಡೇಟ್ ಮುಂದಕ್ಕೆ

    `ಬಾಹುಬಲಿ’ (Bahubali)  ಖ್ಯಾತಿಯ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಆದಿಪುರುಷ್'(Adipurush) ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್. ಆದಿಪುರುಷ್ ಚಿತ್ರತಂಡ ಎಡವಟ್ಟಿನಿಂದ ಸದ್ಯ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ರಾಮಾಯಣದ ಕಥೆಯನ್ನಿಟ್ಟುಕೊಂಡು `ಆದಿಪುರುಷ್’ ಸಿನಿಮಾ ಮಾಡಲಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ರೆ, ನಾಯಕಿಯಾಗಿ ಕೃತಿ ಸನೂನ್ ನಟಿಸಿದ್ದಾರೆ. ಇನ್ನೂ ಪ್ರಭಾಸ್ ಮುಂದೆ ರಾವಣನಾಗಿ ಸೈಫ್ ಆಲಿ ಖಾನ್ ಅಬ್ಬರಿಸಿದ್ದಾರೆ. ಸದ್ಯ ಈ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಈ ಚಿತ್ರದ ಟೀಸರ್ ನೋಡಿ ಕಳಪೆ ಗ್ರಾಫಿಕ್ಸ್ ಎಂದು ನೆಟ್ಟಿಗರು ಟೀಕೆ ಮಾಡಿದ್ದರು. ಹಾಗಾಗಿ ಚಿತ್ರತಂಡ ಮುಂಬರುವ ಜೂನ್‌ 16ಕ್ಕೆ ರಿಲೀಸ್‌ ಮಾಡಲು ನಿರ್ಧರಿಸಿದೆ. ಪ್ರಭಾಸ್‌ ಮತ್ತು ಕೃತಿ ಸನೂನ್‌ ಸಿನಿಮಾ ಮುಂದಿನ ವರ್ಷ 2023ಕ್ಕೆ ತೆರೆಗೆ ಅಪ್ಪಳಿಸಲಿದೆ.

    `ಆದಿಪುರುಷ್’ ಚಿತ್ರದ ಟೀಸರ್ ಅ. 2ರಂದು ಅಯೋಧ್ಯೆಯಲ್ಲಿ ರಿಲೀಸ್ ಆಗಿತ್ತು. ಟೀಸರ್ ನೋಡಿದ ಫ್ಯಾನ್ಸ್, ಕಳಪೆ ಗ್ರಾಫಿಕ್ಸ್ ಎಂದು ಟ್ರೋಲ್ ಮಾಡಿದ್ದರು. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್‌ಗೆ ಆದಿಪುರುಷ್ ಟೀಸರ್ ನೋಡಿ ನಿರಾಸೆ ಆಗಿತ್ತು. ಇದೀಗ ಈ ಎಲ್ಲಾ ವಿಚಾರಗಳನ್ನ ಯೋಚಿಸಿ, ಒಂದೊಳ್ಳೆ ಬದಲಾವಣೆಯ ಮೂಲಕ ಬರಲು ತಂಡ ನಿರ್ಧರಿಸಿದೆ. ಇದನ್ನೂ ಓದಿ:ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್

    ಇನ್ನೂ ಪ್ರಭಾಸ್ ನಟನೆ ಆದಿಪುರುಷ್ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಈ ಕುರಿತು ನಿರ್ದೇಶಕ ಓಂ ರಾವತ್ ಸೋಷಿಯಲ್ ಮೀಡಿಯಾ ಮೂಲಕ ಅಪ್‌ಡೇಟ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]